ಚಿನ್ನದ ಬೆಲೆ ಇಳಿಕೆಯ ಟ್ರೆಂಡ್ ಮುಂದುವರಿಯುವುದೆ ? ಮಂಗಳೂರಿನಲ್ಲಿ ಇಂದಿನ ದರವೆಷ್ಟು?

ಸಾಂದರ್ಭಿಕ ಚಿತ್ರ (AI)
ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನ-ಬೆಳ್ಳಿ ಬೆಲೆಗಳು ಸದ್ಯ ಇಳಿಕೆಯ ಹಾದಿಯಲ್ಲಿವೆ. ಮಾರಾಟಗಾರರ ಹಿಡಿತ ಹೆಚ್ಚಾಗಿರುವುದರಿಂದ ಮಾರುಕಟ್ಟೆಯು ಸದ್ಯದಲ್ಲಿ ಏರಿಳಿತದ ಹಂತದಲ್ಲಿದೆ.
ಜನವರಿಯಲ್ಲಿ ಅತ್ಯುನ್ನತ ಬೆಲೆಗೆ ಏರಿದ ನಂತರ ಚಿನ್ನ-ಬೆಳ್ಳಿಯ ದರ ಜೂನ್ನಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು. ನಂತರ ಜುಲೈನಲ್ಲಿ ಸ್ವಲ್ಪ ಏರಿಳಿತ ಕಂಡಿತ್ತು. ಆಗಸ್ಟ್ ಮೊದಲ ವಾರದಿಂದ ಚಿನ್ನ-ಬೆಳ್ಳಿಯ ದರ ಏರಿಕೆಯಾಗಿ ಇಡೀ ತಿಂಗಳು ಟ್ರೆಂಡ್ ಮುಂದುವರಿದಿತ್ತು. ನಂತರ ಆಗಸ್ಟ್ ಕೊನೆ ವಾರ ಮತ್ತು ಸೆಪ್ಟೆಂಬರ್ 1ರಿಂದ ಚಿನ್ನದ ದರ ತೀವ್ರ ಕುಸಿತದ ಹಾದಿಯಲ್ಲಿತ್ತು. ನಂತರ ಏರಿಳಿತದ ಹಾದಿಯಲ್ಲಿದ ಬೆಲೆ ಕಳೆದ ಮೂರು ದಿನಗಳಿಂದ ಕುಸಿತದ ಹಾದಿಯಲ್ಲಿದೆ. ಮಂಗಳವಾರವೂ ದರ ಏರಿಕೆ ಮೂಲಕ ಮಾರುಕಟ್ಟೆ ಆರಂಭವಾದರೂ ಸಂಜೆ ಹೊತ್ತಿಗೆ ಬೆಲೆಗಳು ಕುಸಿದಿದ್ದವು. ಬುಧವಾರವೂ ದರ ಏರಿಕೆ ಮೂಲಕ ಮಾರುಕಟ್ಟೆ ಆರಂಭವಾಗಿ ನಂತರ ಬೆಲೆ ಕುಸಿದಿತ್ತು. ಗುರುವಾರ ಬೆಲೆ ಇಳಿಕೆಯ ಮೂಲಕ ಮಾರುಕಟ್ಟೆ ಆರಂಭವಾಗಿತ್ತು. ಇದೀಗ ಶುಕ್ರವಾರ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ.
ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನ-ಬೆಳ್ಳಿ ಬೆಲೆಗಳು ಸದ್ಯ ಇಳಿಕೆಯ ಹಾದಿಯಲ್ಲಿವೆ. ಮಾರಾಟಗಾರರ ಹಿಡಿತ ಹೆಚ್ಚಾಗಿರುವುದರಿಂದ ಮಾರುಕಟ್ಟೆಯು ಸದ್ಯದಲ್ಲಿ ಏರಿಳಿತದ ಹಂತದಲ್ಲಿದೆ.
ಚಿನ್ನದ ದರದಲ್ಲಿ ಸ್ವಲ್ಪ ಏರಿಕೆ
ಸೆಪ್ಟೆಂಬರ್ 25ರಂದು ಶುಕ್ರವಾರ 11 ಗಂಟೆಯ ವಹಿವಾಟಿನಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 16 ರೂ. ಏರಿಕೆಯಾಗಿದ್ದು, ಹತ್ತು ಗ್ರಾಂ ಬೆಲೆ 1,52,840 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಪ್ರತಿ ಗ್ರಾಂಗೆ 15 ರೂ. ಏರಿದ್ದು, ಹತ್ತು ಗ್ರಾಂಗೆ 1,40,100 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 12 ರೂ. ಹೆಚ್ಚಾಗಿ, ಹತ್ತು ಗ್ರಾಂಗೆ 1,14,630 ರೂ. ಗೆ ತಲುಪಿದೆ.
ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?
ಸೆಪ್ಟೆಂಬರ್ 25ರಂದು ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಸ್ವಲ್ಪ ಏರಿಕೆ ದಾಖಲಿಸಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 15,284 (+16) ರೂ. ರಷ್ಟಕ್ಕೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 14,010 (+15) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,463 (+12) ರೂ. ಬೆಲೆಗೆ ಬಂದು ನಿಂತಿದೆ.
ಸ್ಥಿರವಾದ ಬೆಳ್ಳಿಯ ದರ
ಮಂಗಳೂರಿನಲ್ಲಿ ಜುಲೈ 11ರಿಂದ ಬೆಳ್ಳಿಯ ದರ ಬಹುತೇಕ ಪ್ರತಿ ಕೆಜಿಗೆ 2,35,000 ರೂ.ಗೆ ಸ್ಥಿರವಾಗಿತ್ತು. ಆದರೆ ಆಗಸ್ಟ್ ಆರಂಭದ ವಾರಗಳಲ್ಲಿ ಮತ್ತೆ ಏರಿಕೆಯಾಗಿ ಪ್ರತಿ ಕೆಜಿಗೆ 2,60,000ರೂ.ವರೆಗೆ ಏರಿತ್ತು. ಆಗಸ್ಟ್ ಕೊನೆ ವಾರದಲ್ಲಿ ಮತ್ತು ಸೆಪ್ಟೆಂಬರ್ ಆರಂಭದಲ್ಲಿ ಬೆಳ್ಳಿಯ ದರ ಕುಸಿದು ಪ್ರತಿ ಕೆಜಿಗೆ 2,45,000ರೂ.ಗೆ ಬಂದು ನಿಂತಿತ್ತು.
ಸೆಪ್ಟೆಂಬರ್ ಎರಡನೇ ವಾರದಲ್ಲಿ ಪ್ರತಿ ಕೆಜಿ ಬೆಳ್ಳಿದರ 2,50,000ರೂ.ಗೆ ಬಂದು, ಅದೇ ಬೆಲೆಯಲ್ಲಿ ಸ್ಥಿರವಾಗಿತ್ತು. ನಂತರ ಸೆಪ್ಟೆಂಬರ್ 11ರಿಂದ 2,45,000ರೂ.ಗೆ ಬಂದು ಸ್ಥಿರವಾಗಿತ್ತು. ಕಳೆದ ವಾರಾಂತ್ಯದಲ್ಲಿ ಬೆಳ್ಳಿಯ ದರದಲ್ಲಿ ಏರಿಕೆಯಾಗಿ ಪ್ರತಿ ಕೆಜಿಗೆ 2,55,000 ರೂ.ಗೆ ಬಂದು ನಿಂತಿತ್ತು. ಈ ವಾರದಲ್ಲಿ ಮತ್ತೆ ದರ ಕುಸಿದು ಪ್ರತಿ ಕೆಜಿಗೆ 2,45,000 ರೂ.ಗೆ ಬಂದು ನಿಂತಿದೆ. ಇಂದು ಅದೇ ಬೆಲೆಗೆ ಸ್ಥಿರವಾಗಿ ನಿಂತಿದೆ.
ವಿವಿಧ ನಗರಗಳಲ್ಲಿ 1 ಗ್ರಾಂ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?
ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 15,299 (+16) ರೂ., 22 ಕ್ಯಾರೆಟ್ ಚಿನ್ನದ ದರ 14,025 (+15) ರೂ.
ಮುಂಬೈ: 24 ಕ್ಯಾರೆಟ್ ಚಿನ್ನದ ದರ 15,284 (+16) ರೂ., 22 ಕ್ಯಾರೆಟ್ ಚಿನ್ನದ ದರ 14,010 (+15) ರೂ.
ಅಹ್ಮದಾಬಾದ್: 24 ಕ್ಯಾರೆಟ್ ಚಿನ್ನದ ದರ 15,289 (+16) ರೂ., 22 ಕ್ಯಾರೆಟ್ ಚಿನ್ನದ ದರ 14,015 (+15) ರೂ.
ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 15,284 (+11) ರೂ., 22 ಕ್ಯಾರೆಟ್ ಚಿನ್ನದ ದರ 14,010 (+10) ರೂ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 15,284 (+16) ರೂ., 22 ಕ್ಯಾರೆಟ್ ಚಿನ್ನದ ದರ 14,010 (+15) ರೂ.
ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 15,284 (+16) ರೂ., 22 ಕ್ಯಾರೆಟ್ ಚಿನ್ನದ ದರ 14,010 (+15) ರೂ.
ಜೈಪುರ: 24 ಕ್ಯಾರೆಟ್ ಚಿನ್ನದ ದರ 15,299 (+16) ರೂ., 22 ಕ್ಯಾರೆಟ್ ಚಿನ್ನದ ದರ 14,025 (+15) ರೂ.
ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 15,299 (+16) ರೂ., 22 ಕ್ಯಾರೆಟ್ ಚಿನ್ನದ ದರ 14,025 (+15) ರೂ.
ಲಕ್ನೋ: 24 ಕ್ಯಾರೆಟ್ ಚಿನ್ನದ ದರ 15,299 (+16) ರೂ., 22 ಕ್ಯಾರೆಟ್ ಚಿನ್ನದ ದರ 14,025 (+15) ರೂ.
ಕೊಚ್ಚಿ: 24 ಕ್ಯಾರೆಟ್ ಚಿನ್ನದ ದರ 15,284 (+16) ರೂ., 22 ಕ್ಯಾರೆಟ್ ಚಿನ್ನದ ದರ 14,010 (+15) ರೂ.






