ತೋಳಗಳು ಗುಂಪಾಗಿ ಬೇಟೆಯಾಡುತ್ತವೆ: ಪ್ರತಿಪಕ್ಷಗಳನ್ನು ಟೀಕಿಸಿದ ಸ್ಮೃತಿ ಇರಾನಿ

ಇಂದೋರ (ಮಧ್ಯಪ್ರದೇಶ): ಪಾಟ್ನಾದಲ್ಲಿ ನಡೆದಿದ್ದ ಪ್ರತಿಪಕ್ಷಗಳ ಸಭೆಯ ಕುರಿತಂತೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು, ‘ತೋಳಗಳು ಹಿಂಡುಹಿಂಡಾಗಿ ಬೇಟೆಯಾಡುತ್ತವೆ ’ಎಂದು ವ್ಯಂಗ್ಯವಾಡಿದ್ದಾರೆ.
ಶನಿವಾರ ಇಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಇರಾನಿ, ಶುಕ್ರವಾರದ ಪ್ರತಿಪಕ್ಷಗಳ ಸಭೆಯ ಗುರಿ ಪ್ರಧಾನಿ ನರೇಂದ್ರ ಮೋದಿಯವರಾಗಿರಲಿಲ್ಲ, ಅದರ ಗುರಿ ದೇಶದ ಜನರು ಮತ್ತು ಬೊಕ್ಕಸ ಎಂದೂ ಆರೋಪಿಸಿದರು.
‘ಒಬ್ಬ ವ್ಯಕ್ತಿ ಖಜಾನೆಯ ಮೇಲೆ ಕೆಟ್ಟ ದೃಷ್ಟಿ ಬೀರಿದಾಗ ಮನೆಯ ಯಜಮಾನಿಗೆ ಎಚ್ಚರಿಕೆ ನೀಡಿದರೆ ಸಾಕು, ಶತ್ರುವು ತಾನಾಗಿಯೇ ವಿಫಲಗೊಳ್ಳುತ್ತಾನೆ ಎನ್ನುವುದು ನನಗೆ ತಿಳಿದಿದೆ’ ಎಂದು ಅವರು ಹೇಳಿದರು.
Next Story





