CJP ಗೆ 12 ಸದಸ್ಯರ ಹೊಸ ತಂಡ; ಬೆಂಗಳೂರಿನ ಅಫ್ರೀನ್ ನವಾಝ್ ರಾಷ್ಟ್ರೀಯ ಕಾರ್ಯದರ್ಶಿ

ಅಫ್ರೀನ್ ನವಾಝ್ | Photo Credit : indianexpress
ಹೊಸದಿಲ್ಲಿ, ಆ. 9: ಪತ್ರಕರ್ತರು, ಇಂಜಿನಿಯರ್ ಗಳು, ವಕೀಲರು, ಇಬ್ಬರು ಚಾರ್ಟರ್ಡ್ ಅಕೌಂಟೆಂಟ್ಗಳು (CA), ಉದ್ಯಮಿ ಮತ್ತು ಹೋಟೆಲ್ ನಿರ್ವಹಣಾ ಪದವೀಧರರನ್ನು ಒಳಗೊಂಡ 12 ಸದಸ್ಯರ ತಂಡವನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರಕಟಿಸಿದೆ.
ಯುವಕೇಂದ್ರಿತ ರಾಜಕೀಯ ಅಭಿಯಾನವನ್ನು ದೇಶದಾದ್ಯಂತ ವಿಸ್ತರಿಸುವ ಉದ್ದೇಶದಿಂದ ಈ ತಂಡವನ್ನು ರಚಿಸಲಾಗಿದೆ. ಪತ್ರಿಕೋದ್ಯಮ, ತಂತ್ರಜ್ಞಾನ, ಕಾನೂನು, ಸಾರ್ವಜನಿಕ ನೀತಿ, ಹಣಕಾಸು ಮತ್ತು ಉದ್ಯಮ ಕ್ಷೇತ್ರದ ವೃತ್ತಿಪರರನ್ನು ತಂಡ ಒಳಗೊಂಡಿದೆ. ಯುವ ಹಾಗೂ ವೃತ್ತಿಪರವಾಗಿ ವೈವಿಧ್ಯಮಯ ನಾಯಕತ್ವವನ್ನು ರೂಪಿಸುವ CJPಯ ಆಶಯವನ್ನು ಈ ತಂಡ ಪ್ರತಿಬಿಂಬಿಸುತ್ತದೆ.
CJP ತನ್ನ ಪ್ರಮುಖ ಬೇಡಿಕೆಗಳನ್ನು ಅಂಗೀಕರಿಸಿದ ಬಳಿಕ, ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ 36 ದಿನಗಳ ಕಾಲ ನಡೆಸಿದ್ದ ಪ್ರತಿಭಟನೆಯನ್ನು ಕೊನೆಗೊಳಿಸಿದ ಕೆಲವೇ ದಿನಗಳ ಬಳಿಕ ಈ ಪ್ರಕಟನೆ ಹೊರಬಿದ್ದಿದೆ.
ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿ ನಡೆದ ಎರಡು ದಿನಗಳ ಸಭೆಯಲ್ಲಿ, ಮುಂದಿನ ಆರು ತಿಂಗಳ ಅವಧಿಗೆ ತನ್ನ ಸಾಂಸ್ಥಿಕ ರಚನೆಯನ್ನು CJP ಪ್ರಕಟಿಸಿತು. ರಾಜಕೀಯ ಪಕ್ಷ ರಚಿಸುವ ಯಾವುದೇ ಯೋಜನೆ ಇಲ್ಲ ಎಂದೂ ಮತ್ತೊಮ್ಮೆ ಸ್ಪಷ್ಟಪಡಿಸಿತು.
►ತಂಡದ 12 ಸದಸ್ಯರು
ಅಭಿಜೀತ್ ದಿಪ್ಕೆ (30): ಮಹಾರಾಷ್ಟ್ರದ ಸಂಭಾಜಿ ನಗರದ ನಿವಾಸಿ. ಪುಣೆಯಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ. ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ಸ್ಥಾಪಕ ಹಾಗೂ ರಾಷ್ಟ್ರೀಯ ಸಂಚಾಲಕ.
ಅಶುತೋಷ್ ರಂಕಾ (30): ರಾಜಸ್ಥಾನದ ಜೈಪುರ ನಿವಾಸಿ. IIT ಕಾನ್ಪುರದಿಂದ ಬಿ.ಟೆಕ್ ಪದವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ಸಹ–ಸಂಚಾಲಕ.
ಸೌರವ್ ದಾಸ್ (27): ದಿಲ್ಲಿ ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ.
ಅಜಿಂಕ್ಯ ಶಿಂಧೆ (35): ಮಹಾರಾಷ್ಟ್ರದ ಲಾತೂರ್ ನಿವಾಸಿ. ರಾಯಗಡದ ಲೋನೆರೆಯಲ್ಲಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯದಿಂದ (DBATU) ಬಿ.ಟೆಕ್ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ.
ದೀಪಕ್ ಬಲಿಯಾನ್ (26): ರಾಜಸ್ಥಾನದ ಅಲ್ವಾರ್ ನಿವಾಸಿ. ಭರತ್ ಪುರದಿಂದ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರೈತ ಕುಟುಂಬದಿಂದ ಬಂದಿರುವ ಅವರು ಕೃಷಿ ಚಳುವಳಿಗಳೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದಾರೆ.
ಜವಾಬ್ದಾರಿ: ಸಂಘಟನೆ ಸಹ–ಪ್ರಭಾರಿ ಹಾಗೂ ಉತ್ತರ ವಲಯದ ಮುಖ್ಯಸ್ಥ.
ಅಫ್ರೀನ್ ನವಾಝ್ (34): ಕರ್ನಾಟಕದ ಬೆಂಗಳೂರಿನ ನಿವಾಸಿ. MBA ಪದವಿ ಪಡೆದಿದ್ದು, ಪ್ರಸ್ತುತ ಉದ್ಯಮಿಯಾಗಿದ್ದಾರೆ.
ಜವಾಬ್ದಾರಿ: ರಾಷ್ಟ್ರೀಯ ಕಾರ್ಯದರ್ಶಿ.
ವಿಜಯ್ ರೆಡ್ಡಿ ಮಲ್ಲಂಗಿ (30): ತೆಲಂಗಾಣದ ಹೈದರಾಬಾದ್ ನಿವಾಸಿ. ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪದವಿ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದಿಂದ Applied Scienceನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ಮಾಧ್ಯಮ ಹಾಗೂ ದಕ್ಷಿಣ ವಲಯದ ಮುಖ್ಯಸ್ಥ.
ರತ್ನ ಸಿಂಗ್ (31): ಉತ್ತರ ಪ್ರದೇಶದ ಲಕ್ನೋ ನಿವಾಸಿ. ದಿಲ್ಲಿಯ ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದಿಂದ LLB ಪದವಿ ಪಡೆದಿದ್ದಾರೆ.
ಜವಾಬ್ದಾರಿ: ಕಾನೂನು ವ್ಯವಹಾರಗಳ ಮುಖ್ಯಸ್ಥ.
ವೈಷ್ಣವಿ ಗೌರ್ (29): ಉತ್ತರಾಖಂಡದ ಡೆಹ್ರಾಡೂನ್ ನಿವಾಸಿ. ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಿಂದ BA LLB ಆನರ್ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ಸಂಶೋಧನೆ ಮತ್ತು ನೀತಿ ವಿಭಾಗದ ಮುಖ್ಯಸ್ಥೆ
ರೋಹನ್ ದೇಶಪಾಂಡೆ (31): ಮುಂಬೈ ನಿವಾಸಿ. ಮುಂಬೈನ IHMನಿಂದ ಹೋಟೆಲ್ ನಿರ್ವಹಣೆಯಲ್ಲಿ ಪದವಿ ಪಡೆದಿದ್ದಾರೆ.
ಜವಾಬ್ದಾರಿ: ತಂತ್ರಜ್ಞಾನ ವಿಭಾಗದ ಮುಖ್ಯಸ್ಥ
ಯೋಗೇಶ್ ಇಂಗಳೆ (33): ಮಹಾರಾಷ್ಟ್ರದ ಪುಣೆ ನಿವಾಸಿ. ಚಾರ್ಟರ್ಡ್ ಅಕೌಂಟೆಂಟ್ (CA).
ಜವಾಬ್ದಾರಿ: ಹಣಕಾಸು ನಾಯಕ ಹಾಗೂ ಪಶ್ಚಿಮ ವಲಯದ ಮುಖ್ಯಸ್ಥ.
ಅಂಕಿತ್ ಭಾರದ್ವಾಜ್ (35): ಉತ್ತರ ಪ್ರದೇಶದ ಗಾಝಿಯಾಬಾದ್ ನಿವಾಸಿ. ಚಾರ್ಟರ್ಡ್ ಅಕೌಂಟೆಂಟ್ (CA).
ಜವಾಬ್ದಾರಿ: ಪೂರ್ವ ಹಾಗೂ ಈಶಾನ್ಯ ವಲಯಗಳ ಉಸ್ತುವಾರಿ






