ನಾಗರಿಕರ ಗೌಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸಲು ಅವಕಾಶ ನೀಡುವುದಿಲ್ಲ: ವಾಟ್ಸ್ಆ್ಯಪ್ ಗೆ ಸುಪ್ರೀಂ ಕೋರ್ಟ್ ತರಾಟೆ

Photo credit: PTI
ಹೊಸದಿಲ್ಲಿ: ಬಳಕೆದಾರರ ದತ್ತಾಂಶ ಹಂಚಿಕೆಯ ಕಳವಳಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾವನ್ನು ತರಾಟೆಗೆ ತೆಗೆದುಕೊಂಡಿದೆ. ತಂತ್ರಜ್ಞಾನ ಅಥವಾ ವ್ಯವಹಾರದ ಹೆಸರಿನಲ್ಲಿ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ದತ್ತಾಂಶ ಹಂಚಿಕೆಯ ಹೆಸರಿನಲ್ಲಿ ದೇಶದ ನಾಗರಿಕರ ಗೌಪ್ಯತೆಯ ಹಕ್ಕಿನೊಂದಿಗೆ ನೀವು ಆಟವಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಂತ್ರಜ್ಞಾನ ದೈತ್ಯ ಸಂಸ್ಥೆ ವಾಟ್ಸ್ಆ್ಯಪ್ ಮತ್ತು ಅದರ ಪೋಷಕ ಕಂಪೆನಿ ಮೆಟಾಗೆ ತಿಳಿಸಿದೆ.
ಪ್ರಕರಣದಲ್ಲಿ ನ್ಯಾಯಾಲಯವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವನ್ನು ವಿಚಾರಣೆಯಲ್ಲಿ ಒಂದು ಪಕ್ಷವನ್ನಾಗಿ ಮಾಡಿದೆ. ಫೆಬ್ರವರಿ 9ರಂದು ಈ ಕುರಿತು ಮಧ್ಯಂತರ ಆದೇಶಗಳನ್ನು ಹೊರಡಿಸುವುದಾಗಿ ಹೇಳಿದೆ.
Next Story





