Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ಬುದ್ಧ ಪ್ರಜ್ಞೆ ಮತ್ತು ಆನ್‌ಲೈನ್ ಅಭಿಯಾನ

ಬುದ್ಧ ಪ್ರಜ್ಞೆ ಮತ್ತು ಆನ್‌ಲೈನ್ ಅಭಿಯಾನ

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್9 May 2026 11:00 AM IST
share
ಬುದ್ಧ ಪ್ರಜ್ಞೆ ಮತ್ತು ಆನ್‌ಲೈನ್ ಅಭಿಯಾನ

ಬುದ್ಧ ಪ್ರಜ್ಞೆಯ ಈ ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ಮತ್ತು ಭಗವಾನ್ ಬುದ್ಧರನ್ನು ಒಟ್ಟೊಟ್ಟಿಗೆ ಅರ್ಥ ಮಾಡಿಕೊಂಡಿರುವ ಮಕ್ಕಳು ಬಾಬಾಸಾಹೇಬ್ ಅಂಬೇಡ್ಕರ್‌ರವರ ಬದುಕು, ಬರಹ, ಚಿಂತನೆ, ಸಂವಿಧಾನ ಇವೆಲ್ಲವನ್ನು ತುಂಬ ಪುಟ್ಟ ಪುಟ್ಟದಾಗಿ ಹೇಳುತ್ತಲೇ, ನಾವು ದೊಡ್ಡವರೆನಿಸಿಕೊಂಡವರು ತಿಳಿದುಕೊಳ್ಳಲಾರದ ಅನೇಕ ವಿಷಯಗಳನ್ನು ತಿಳಿದುಕೊಂಡು ಹೇಳುವಾಗ ನಮ್ಮ ದೇಶದ ಸಂವಿಧಾನ ಉಳಿಯುವುದರ ಬಗ್ಗೆ ಆತಂಕಪಡುವವರಿಗೆ ದೊಡ್ಡ ಉತ್ತರವಾಗಿ ಈ ಮಕ್ಕಳು ಗಟ್ಟಿಯಾಗಿ ನಿಲ್ಲುತ್ತಾರೆ ಎನ್ನುವ ಭರವಸೆ ಇದೆ.

ಕರ್ನಾಟಕದಲ್ಲಿ ತಡವಾದರೂ ಬಾಬಾ ಸಾಹೇಬರ ಕನಸಿನ ಬೌದ್ಧ ದಮ್ಮದ ಪ್ರಚಾರ, ಅನುಸರಣೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ 70ರ ದಶಕದಲ್ಲಿ ಚಳವಳಿಗಳ ತೀವ್ರತೆ ಹೆಚ್ಚಿದ್ದರೂ ಬುದ್ಧನ ಕುರಿತಾಗಲಿ, ಬೌದ್ಧ ದಮ್ಮದ ವಿಷಯವಾಗಲಿ ನಮ್ಮ ಹಿರಿಯರು ಮಾತನಾಡಿದ್ದು ಕಡಿಮೆ. ಆಗಿನ ತುರ್ತುಗಳು ಬೇರೆಯೇ ಆಗಿದ್ದವು. ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳದೆ ಈ ಹೊತ್ತಿನಲ್ಲಿ ಬುದ್ಧನ ಪ್ರವೇಶಿಕೆ ತುಸು ಕಷ್ಟವೇ. ಕನ್ನಡ ಸಾಹಿತ್ಯದಲ್ಲಿ ಅಲ್ಲಲ್ಲಿ ಒಂದಿಷ್ಟು ಪುಸ್ತಕಗಳು, ಪದ್ಯಗಳು ಬಂದಿವೆಯಾದರೂ ದೊಡ್ಡ ಪ್ರಮಾಣದಲ್ಲಿ ಬುದ್ಧನ ಅರಿವು ತುಂಬಾ ಕಡಿಮೆಯೇ ಇತ್ತು. ಯಾವಾಗ ಅಂಬೇಡ್ಕರ್ ಪುಸ್ತಕಗಳು ಕನ್ನಡಕ್ಕೆ ಅನುವಾದವಾಗಲು ತೊಡಗಿದವೋ, ಬುದ್ಧ ಗುರುಗಳು ಕೂಡ ನಮ್ಮ ಎದೆಗೆ ಇಳಿಯುವಂತಾಯಿತು. ಇದಾದ ನಂತರ ಹಿರಿಯ ರಾಜಕಾರಣಿ ಬಸವಲಿಂಗಪ್ಪರ ಹಾದಿಯಲ್ಲಿ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ಉತ್ತರ ಕರ್ನಾಟಕ ಭಾಗದ, ವಿಶೇಷವಾಗಿ ಕಲಬುರಗಿಯಲ್ಲಿ ದೊಡ್ಡ ಪ್ರಮಾಣದ ಬೌದ್ಧ ವಿಹಾರ ನಿರ್ಮಾಣ ಮಾಡಿ ಇಡೀ ಕರ್ನಾಟಕವನ್ನು ಏಶ್ಯ ಖಂಡವೇ ತಿರುಗಿ ನೋಡುವಂತಾಯಿತು. ಕರ್ನಾಟಕ ದಲಿತರು ಬೌದ್ಧ ನೆಲೆಯನ್ನು ಹಂಬಲಿಸುತ್ತಿದ್ದವರಿಗೆ ಖರ್ಗೆಯವರು ನಿರ್ಮಾಣ ಮಾಡಿದ ಬೌದ್ಧ ವಿಹಾರ ಕರ್ನಾಟಕದ ಎಲ್ಲಾ ದಲಿತರಿಗೆ ಜೀವತಾಣವಾಯಿತು. ಅಲ್ಲಿಂದೀಚೆಗೆ ಇಡೀ ಕರ್ನಾಟಕದಲ್ಲಿ ಅಲ್ಲಲ್ಲಿ ಬೌದ್ಧ ವಿಹಾರಗಳು ನಿರ್ಮಾಣವಾದವು. ಬೌದ್ಧ ಬಿಕ್ಕು ಬಂತೇಜಿಯವರು ಬುದ್ಧನ ಪಂಚಶೀಲಗಳು, ದಮ್ಮದ ವಿಚಾರಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಇವೆಲ್ಲದಕ್ಕಿಂತ ಮುಖ್ಯವಾಗಿ ಬಾಬಾ ಸಾಹೇಬರು ಹೇಳಿದ ‘ಬೌದ್ಧರಾಗದ ಹೊರತು ಅಸ್ಪಶ್ಯರಿಗೆ ಬಿಡುಗಡೆಯಿಲ್ಲ’ ಎನ್ನುವ ಮಾತು ದಲಿತ ಚಳವಳಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರಿಗೆ ತುಂಬಾ ಪ್ರಭಾವ ಬೀರಿತು.

90ರ ದಶಕದಲ್ಲಿ ಬೌದ್ಧ ಧರ್ಮದ ಕುರಿತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಾಡಿದ ಭಾಷಣ ಇಡೀ ಕನ್ನಡ ನಾಡಿನ ಎಲ್ಲರ ಕೈಗೂ ಸಿಗುವಂತಾಯಿತು. ಇದರಿಂದ ಚಳವಳಿಗಾರರು ಸಾಹಿತಿಗಳು, ಕವಿಗಳು, ಹೋರಾಟಗಾರರು, ಮತ್ತೆ ಮತ್ತೆ ಬುದ್ಧನ ಬಗ್ಗೆ, ಬುದ್ಧ ದಮ್ಮದ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿದ್ದರಿಂದ ಕರ್ನಾಟಕದ ಕೆಲವು ಕಡೆಗಳಲ್ಲಿ ಬುದ್ಧ ವಿಹಾರಗಳಲ್ಲಿ ತ್ರಿಸರಣ ಪಂಚಶೀಲ ಪ್ರಾರ್ಥನೆಗಳು ಮೊಳಗಲಾರಂಭಿಸಿದವು. ಆನಂತರದ ದಿನಗಳಲ್ಲಿ ಶ್ರೀನಿವಾಸ್ ಪ್ರಸಾದ್ ಆದಿಯಾಗಿ ಚಳವಳಿಗಾರರು, ಸಾಹಿತಿಗಳೆಲ್ಲರೂ ಸೇರಿ ಮೈಸೂರಿನಲ್ಲಿ ‘ಬುದ್ಧ ಬರಲಿ ನಮ್ಮೂರಿಗೂ’ ಕಾರ್ಯಕ್ರಮ ಮಾಡಿ ಒಂದು ಮಟ್ಟಿಗೆ ಯಶಸ್ವಿಯಾಯಿತಾದರೂ ಇಡೀ ನಾಡಿನಲ್ಲಿ ಅದರ ಪ್ರಭಾವ ಅಷ್ಟೇನು ಪರಿಣಾಮಕಾರಿಯಾಗಲಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಜನ್ಮ ದಿನಾಚರಣೆಗಳು, ಜನವರಿ 1ರಂದು ಭೀಮಾ ಕೋರೆಂಗಾಂವ್ ಯುದ್ಧದ ನೆನಪು ಮತ್ತು ಬುದ್ಧನ ಕುರಿತ ಉಪನ್ಯಾಸಗಳು, ಪುಸ್ತಕಗಳು ಹೆಚ್ಚು ಹೆಚ್ಚಾಗಿ ಚಾಲ್ತಿಯಲ್ಲಿವೆ. ಇತ್ತೀಚೆಗೆ ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಜನಗಣತಿಯನ್ನು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಒಳಮೀಸಲಾತಿಗಾಗಿ ನಡೆಸಿದ ಜನಗಣತಿಯಲ್ಲಿ ಒಂದಿಷ್ಟು ಪ್ರಗತಿಪರ ದಲಿತ ಸಂಘಟನೆ ನಾಯಕರು ಧರ್ಮದ ಕಾಲಂನಲ್ಲಿ ಬೌದ್ಧರೆಂದು ಬರೆಸಿ ಎಂದು ಇಡೀ ಕರ್ನಾಟಕದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆ ಹೇಳಿಕೆಗಳ ಮೂಲಕ ಹೇಳಿದ್ದು, ಒಂದಿಷ್ಟು ಜನಕ್ಕೆ ಇದು ಸರಿ ಎನ್ನಿಸಿ ಬೌದ್ಧರೆಂದು ಬರೆಸಿದರು. ಇದಾದ ನಂತರ ಬೌದ್ಧ ಬಿಕ್ಕು ಮತ್ತು ಬಂತೇಜಿಯವರು ಬೌದ್ಧ ಅಭಿವೃದ್ಧಿ ನಿಗಮಕ್ಕೆ ಒತ್ತಾಯಿಸಿ 900ಕಿ.ಮೀ.ಗೂ ಹೆಚ್ಚು ಪಾದಯಾತ್ರೆ ಮಾಡಿ ಬಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದಾಗ ಸರಕಾರ ಅದಕ್ಕೆ ಸ್ಪಂದಿಸಿತ್ತಾದರೂ ಬೌದ್ಧ ಅಭಿವೃದ್ಧಿ ನಿಗಮ ಘೋಷಣೆಯಾಗಲಿಲ್ಲ. ಇದಾದ ನಂತರ ಮತ್ತೆ ಬಂತೇಜಿಯವರು ಮತ್ತು ಬೌದ್ಧ ಬಿಕ್ಕುಗಳು ಹಾಗೂ ದಲಿತ ಸಂಘಟನೆಗಳು, ಪ್ರಮುಖ ನಾಯಕರು ಸೇರಿ ಸಮಾಜ ಇಲಾಖೆ ಮಂತ್ರಿ ಎಚ್.ಸಿ. ಮಹದೇವಪ್ಪರವರ ಮುಖಾಂತರ ಮುಖ್ಯಮಂತ್ರಿಗಳವರೆಗೆ ಒತ್ತಡ ತಂದು ಕಳೆದ ಬಜೆಟ್‌ನಲ್ಲಿ ಬೌದ್ಧ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಹೇಳಬೇಕಾಗಿರುವ ಬಹಳ ಮುಖ್ಯ ವಿಷಯವೇನೆಂದರೆ ಬೌದ್ಧ ದಮ್ಮದ ನಡೆ-ನುಡಿಗಳನ್ನು ಪಾಲಿಸದೆ, ನಾನೂ ಬೌದ್ಧ ಎನ್ನುವುದು ಹುಸಿ ಮಾತಾದೀತು. ಇದನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಬೇಕು, ಅಭ್ಯಾಸ ಮಾಡಬೇಕು. ಆಗ ಮಾತ್ರ ಬುದ್ಧ ಗುರು ಗಳು ಹೇಳಿದ ಪಂಚಶೀಲದ ಅನುಸರಣೆ ಮತ್ತು ಮಾನಸಿಕ ಉನ್ನತ ಭಾವನೆ ಬರಲು ಸಾಧ್ಯ.

ಕರ್ನಾಟಕದಲ್ಲಿ ಬೌದ್ಧ ಮತ ಮುಂದಿನ ಎಷ್ಟೋ ತಲೆಮಾರಿಗೆ ಮುಂದುವರಿಯಬೇಕಾದರೆ ಅದನ್ನು ಉಳಿಸಿ, ಅನುಸರಿಸಬೇಕಾದವರು ಈ ಹೊತ್ತಿನ ಎಳೆಯರು. ಇದನ್ನು ಮನಗಂಡ ಮೈಸೂರಿನ ಗೆಳೆಯರಾದ ಮಹಾದೇವ ಸ್ವಾಮಿ ಮೇಲ್ಕುಂಡಿ ಮತ್ತು ಸಿ. ಚಿಕ್ಕಣ್ಣರಂತಹ ಯುವ ಮಿತ್ರರು ಎಪ್ರಿಲ್ ತಿಂಗಳ ಕೊನೆವಾರದ 23ನೇ ತಾರೀಕಿನಿಂದ ‘ಬುದ್ಧ ಪ್ರಜ್ಞೆ ಆನ್ ಲೈನ್ ಅಭಿಯಾನ’ ಎನ್ನುವ ಮಹತ್ವದ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ 15 ವರ್ಷದೊಳಗಿರುವ ಮಕ್ಕಳು ಭಾಗವಹಿಸುವ ಮೂಲಕ ಅವರಿಗೆ ಬುದ್ಧನ ಕುರಿತ ಚಿಂತನೆ, ಪಂಚಶೀಲ ಪ್ರಾರ್ಥನೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬದುಕು ಮತ್ತು ಬರವಣಿಗೆ, ಈ ದೇಶಕ್ಕಾಗಿ, ಈ ಜನರಿಗಾಗಿ ಅಂಬೇಡ್ಕರ್ ಏನೆಲ್ಲಾ ಮಾಡಿ ಹೋಗಿದ್ದಾರೆ ಎನ್ನುವುದನ್ನು ತಿಳಿಸಲೋಸುಗ ಬರುವ ಬುದ್ಧನ ಕಥೆಗಳು, ಕವಿತೆಗಳು, ಚಿತ್ರಕಲೆ, ಭೀಮಾ ಸಾಹೇಬರ ಕುರಿತ ಭಾಷಣಗಳು ಹೀಗೆ ಹತ್ತು ಹಲವಾರು ಚಿಂತನಾ ಕಾರ್ಯಕ್ರಮಗಳನ್ನು ಅಲ್ಲಿ ಅಭಿವ್ಯಕ್ತಿಗೊಳಿಸಲಾಗುತ್ತಿವೆ.

ಈಗಾಗಲೇ ನಾಡಿನೆಲ್ಲೆಡೆ ಸಾವಿರಾರು ಮಕ್ಕಳು ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದ್ದಾರೆ. ಇದನ್ನು ನೋಡುತ್ತಿದ್ದರೆ ಸಾಮಾಜಿಕ ಜಾಲತಾಣವನ್ನು ಹೀಗೂ ಸದುಪಯೋಗ ಪಡಿಸಿಕೊಳ್ಳಬಹುದು ಎನ್ನುವುದು ಅರಿವಾಗುತ್ತದೆ. ಬುದ್ಧ ಪ್ರಜ್ಞೆಯ ಈ ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ಮತ್ತು ಭಗವಾನ್ ಬುದ್ಧರನ್ನು ಒಟ್ಟೊಟ್ಟಿಗೆ ಅರ್ಥ ಮಾಡಿಕೊಂಡಿರುವ ಮಕ್ಕಳು ಬಾಬಾಸಾಹೇಬ್ ಅಂಬೇಡ್ಕರ್‌ರವರ ಬದುಕು, ಬರಹ, ಚಿಂತನೆ, ಸಂವಿಧಾನ ಇವೆಲ್ಲವನ್ನು ತುಂಬ ಪುಟ್ಟ ಪುಟ್ಟದಾಗಿ ಹೇಳುತ್ತಲೇ, ನಾವು ದೊಡ್ಡವರೆನಿಸಿಕೊಂಡವರು ತಿಳಿದುಕೊಳ್ಳಲಾರದ ಅನೇಕ ವಿಷಯಗಳನ್ನು ತಿಳಿದುಕೊಂಡು ಹೇಳುವಾಗ ನಮ್ಮ ದೇಶದ ಸಂವಿಧಾನ ಉಳಿಯುವುದರ ಬಗ್ಗೆ ಆತಂಕಪಡುವವರಿಗೆ ದೊಡ್ಡ ಉತ್ತರವಾಗಿ ಈ ಮಕ್ಕಳು ಗಟ್ಟಿಯಾಗಿ ನಿಲ್ಲುತ್ತಾರೆ ಎನ್ನುವ ಭರವಸೆ ಇದೆ.

ಅವತ್ತು ಬಾಬಾ ಸಾಹೇಬರು 5 ಲಕ್ಷಕ್ಕೂ ಹೆಚ್ಚು ಶೋಷಿತರಿಗೆ, ನೊಂದವರಿಗೆ, ಅಸ್ಪಶ್ಯರಿಗೆ ಬೌದ್ಧ ದೀಕ್ಷೆಯನ್ನು ಕೊಟ್ಟಿದ್ದರು. ಇಂದಿನ ಮಕ್ಕಳೇ ಇಡೀ ಸಮಾಜಕ್ಕೆ ಬುದ್ಧನನ್ನು, ಬಾಬಾಸಾಹೇಬರನ್ನು ಇನ್ನಷ್ಟು ವಿಸ್ತಾರವಾಗಿ ಆಳವಾಗಿ ಪರಿಚಯಿಸುತ್ತಾರೆಂದು ಅವರ ತಿಳುವಳಿಕೆಯಿಂದ ನನಗೆ ಮತ್ತಷ್ಟು ಮನದಟ್ಟಾಯಿತು. ತುಂಬಾ ವೈವಿಧ್ಯಮಯವಾದ ವಿಚಾರಗಳು ಒಬ್ಬೊಬ್ಬರಿಂದಲೂ ಪರಿಚಯವಾಗ ತೊಡಗಿತು. ಒಬ್ಬರು ಸಂವಿಧಾನದ ಕಾಯ್ದೆ, ಕಾನೂನುಗಳ ಬಗ್ಗೆ ಹೇಳಿದರೆ, ಇನ್ನೊಬ್ಬರು ಬುದ್ಧನ ಕುರಿತು ಕಥೆ ಹೇಳುತ್ತಾರೆ. ಮತ್ತೊಬ್ಬರು ಅಂಬೇಡ್ಕರ್ ಚಿತ್ರ ಬರೆದು ತೋರಿಸುತ್ತಾರೆ, ಇನ್ನು ಕೆಲವರು ಗುಂಪು ಗುಂಪಾಗಿ ತ್ರಿಸರಣ ಪಂಚಶೀಲ ಪ್ರಾರ್ಥನೆ ಮಾಡುತ್ತಾರೆ. ಇವೆಲ್ಲವನ್ನು ನಾನು ಮಕ್ಕಳಲ್ಲಿ ಮಕ್ಕಳಾಗಿ ಕೇಳುತ್ತಾ ಹೋದೆ.

ಬುದ್ಧ ಗುರುಗಳ ಇಂತಹ ಅರಿವಿನ ಯಾತ್ರೆ ಈ ಸಮಾಜಕ್ಕೆ ನಿರಂತರವಾಗಿ ಬೇಕಾಗಿದೆ. ಇದು ಮಕ್ಕಳ ಮನಸ್ಸಿಗೆ ಇಳಿಸುವುದರಿಂದ ಮಕ್ಕಳಿಗೆ ವಿವೇಕವೂ ಬರುತ್ತದೆ. ಅವರ ಬುದ್ಧಿಯ ವಿಕಸನವೂ ಆಗುತ್ತದೆ. ಹಾಗೆಯೇ ಕಥೆಗಳನ್ನು, ಕಥೆಗಳಲ್ಲಿ ಬರುವ ಘಟನೆಗಳನ್ನು ಸ್ವತಃ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳಬಹುದು. ಇಂತಹ ಆನ್‌ಲೈನ್ ಬುದ್ಧ ಅಭಿಯಾನ ಮೇ ತಿಂಗಳ 8ನೇ ತಾರೀಕಿನವರೆಗೂ ಪ್ರತೀ ದಿನ ಸಂಜೆ 7:30 ರಿಂದ ರಾತ್ರಿ 10 ಗಂಟೆಯವರೆಗೆ ನಡೆದಿರುತ್ತದೆ. ಇದನ್ನು ಮನೆಯಲ್ಲಿಯೇ ಕುಳಿತು ಹಲವರು ಕೇಳಿದ್ದಾರೆ, ನೋಡಿದ್ದಾರೆ. ಇದೊಂದು ಅಪರೂಪದ ಕಾರ್ಯಕ್ರಮ. ಬೌದ್ಧ ದಮ್ಮ ಎನ್ನುವುದು ಒಂದು ವೈಜ್ಞಾನಿಕ ಅನುಸರಣೆಯ ದಮ್ಮವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಒತ್ತಾಯ ಒತ್ತಡದಿಂದ ಮಾಡುವಂತಹದಲ್ಲ. ಮಕ್ಕಳ ಮೈತ್ರಿಭಾವವನ್ನು ಹೆಚ್ಚಿಸುವುದಕ್ಕೆ ಮತ್ತು ಅವರ ಮನಸ್ಸಿನ ವಿಕಸನಕ್ಕೂ ಕೂಡ ಇದು ಒಂದು ಒಳ್ಳೆಯ ಮಾರ್ಗವಾಗಿರುತ್ತದೆ. ಮೇ ತಿಂಗಳು 9 ಮತ್ತು 10ರಂದು ಸಾವಿರಾರು ಮಕ್ಕಳು ಮೈಸೂರಿನಲ್ಲಿ ಒಂದೆಡೆ ಸೇರಿ ಬಾಬಾಸಾಹೇಬರ ಕುರಿತ ಭಾಷಣಗಳು, ಹಾಡು, ನೃತ್ಯ, ಚಿತ್ರಕಲೆ ಇತ್ಯಾದಿಗಳಿಂದ ಅವರ ಅಭಿವ್ಯಕ್ತಿಗನುಸಾರವಾಗಿ ಕಾರ್ಯಕ್ರಮವನ್ನು ನಿರೂಪಿಸಲಾಗಿದೆ. ಹೀಗೆ ಈ ರೀತಿಯ ಕಾರ್ಯಕ್ರಮಗಳು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಬೌದ್ಧ ದಮ್ಮ ಸ್ವೀಕರಿಸಿ 2030ಕ್ಕೆ 75 ವರ್ಷ ತುಂಬುವ ಸುಸಂದರ್ಭಕ್ಕೆ ಲಕ್ಷಾಂತರ ಮಕ್ಕಳೊಟ್ಟಿಗೆ ಸೇರಿ ತ್ರಿಸರಣ ಪಂಚಶೀಲ ಪ್ರಸ್ತುತ ಪಡಿಸಲು ಸಿದ್ಧತೆಯಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಸಂವಿಧಾನ ಶಿಲ್ಪಿ, ವಿಶ್ವಜ್ಞಾನಿ, ಮಹಾಮಾನವತಾವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರವರ ಪ್ರಬುದ್ಧ ಭಾರತ ಕನಸನ್ನು ನನಸು ಮಾಡುವ ಅಭೂತಪೂರ್ವ ಕಾರ್ಯಕ್ರಮಕ್ಕೆ ನಮ್ಮ ಮುದ್ದು ಮಕ್ಕಳ ಮನಸ್ಸುಗಳನ್ನು ಅಣಿಗೊಳಿಸೋಣ. ಎಲ್ಲರೂ ಜೊತೆಯಾಗೋಣ.

ಪ್ರಿಯ ತಥಾಗತರೇ

ಈ ನೆಲ ನೋಡಿದಾಗಲೆಲ್ಲ

ಧ್ಯಾನಸ್ಥ ನಿಮ್ಮ ಮುಖ ನೆನಪಾಗುತ್ತದೆ

ಕಾಲಿಡಲಿ ಹೇಗೆ? ಅಲ್ಲಿ

ಆಗ, ನನ್ನ ಪಾದಗಳು ಕೈಗಳೆಂದು ತಿಳಿಯುತ್ತೇನೆ.

Tags

Buddha
share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X