Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿವೇಕವೇ...

ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿವೇಕವೇ ಭಾರತದ ಸಹಿಷ್ಣುತೆ

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್15 Dec 2025 12:27 PM IST
share
ಡಾ. ಬಾಬಾಸಾಹೇಬ್ ಅಂಬೇಡ್ಕರ್ ವಿವೇಕವೇ ಭಾರತದ ಸಹಿಷ್ಣುತೆ

ಡಿಸೆಂಬರ್ 6, ವಿಶ್ವಜ್ಞಾನಿ, ಮಹಾ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪರಿನಿಬ್ಬಾಣ ದಿನ. 1956 ಡಿಸೆಂಬರ್ 5ನೇ ತಾರೀಕು ಮಧ್ಯರಾತ್ರಿ 2 ಗಂಟೆಯವರೆಗೂ, ಭಾರತೀಯರ ಬಗ್ಗೆ ಚಿಂತಿಸಿದ ವಿಶೇಷವಾಗಿ ಶೋಷಿತರು ಮತ್ತು ಮಹಿಳೆಯರ ಬಿಡುಗಡೆಗಾಗಿ ತನ್ನ ಬದುಕಿನ ದೇಹದ ಬೆವರು, ರಕ್ತವನ್ನು ಬಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನಮ್ಮನ್ನು ಅಗಲುತ್ತಾರೆ. ಇದು ಬರೀ ಭಾರತಕ್ಕಲ್ಲ; ಇಡೀ ವಿಶ್ವಕ್ಕೇ ಕಣ್ಗತ್ತಲು ಆವರಿಸಿದ ಕ್ಷಣ. ಲಕ್ಷಾಂತರ ಜನರಿಗೆ ಇದು ನಂಬಲಾಗಿರದ ಸುದ್ದಿ. ಆದರೆ ಕಾಲದ ಆಗು-ಹೋಗುಗಳನ್ನು, ವಾಸ್ತವವನ್ನು ಒಪ್ಪಲೇಬೇಕು. ಇವತ್ತಿಗೂ ಆ ಕ್ಷಣವನ್ನು ನೆನಪಿಸಿಕೊಂಡರೆ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಆದರೆ ಅವರು ಕೊಟ್ಟ ಅಪಾರ ವಿಚಾರಧಾರೆ/ವೈಚಾರಿಕ ಚಿಂತನೆ, ವಿವೇಕ, ಬರವಣಿಗೆ, ವಿದ್ವತ್ತು ಮತ್ತು ಈ ದೇಶಕ್ಕೆ ಕೊಟ್ಟ ಸಂವಿಧಾನದ ಮಹಾ ಕಾಣ್ಕೆ, ಅವರು ನೀಡಿದ ಪ್ರಜಾಪ್ರಭುತ್ವ ಈ ದೇಶದ ಮಹಾಸೌಂದರ್ಯವೇ ಆಗಿಬಿಟ್ಟಿದೆ. ಭೀಮಾ ಸಾಹೇಬರು ಈ ನೆಲದಲ್ಲಿ ಹುಟ್ಟಿದ್ದರಿಂದ ಇಡೀ ಭಾರತೀಯರಿಗೆ ಇನ್ನೊಂದು ರೀತಿಯ ಮುರುಹುಟ್ಟು. ಆದರೆ, ಆ ಮರುಹುಟ್ಟುವಿನಲ್ಲೇ ಒಂದು ರೀತಿಯ ಮಾನಸಿಕ ಬಿಡುಗಡೆಯೂ ಕೂಡ ಇದೆ. ಅಸ್ಪಶ್ಯರ ಮತ್ತು ಮಹಿಳೆಯರ ಶತಮಾನಗಳ ಸಂಕೋಲೆಗಳು ಕಳಚಿಕೊಂಡವು. ಭೀಮಾ ಸಾಹೇಬರು ಸೂಚಿಸಿದ ಮಾರ್ಗದಂತೆ ತಳಸಮುದಾಯಗಳು ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ಅರಿವನ್ನು ಪಡೆದು ಬದುಕನ್ನು ಕಟ್ಟಿಕೊಳ್ಳುತ್ತಿವೆೆ. ಆದರೆ ಇಂದು ಬೇರೆ ಬೇರೆ ಕಾರಣಗಳಿಗಾಗಿ ಬಾಬಾಸಾಹೇಬರನ್ನು ವೈಭವೀಕರಿಸುವ ಮೂಲಕ ನಾವು ಪಡೆದ ಸ್ವಾಭಿಮಾನದ ಬದುಕಿನ ಅರಿವು ಈಗ ಮಸುಕಾದಂತಿದೆ ಎನ್ನುವುದು ಅನಿಸತೊಡಗಿದೆ.

ಡಾ॥ ಅಂಬೇಡ್ಕರ್ ಅವರ ವಿವೇಕ ಮತ್ತು ವಿದ್ವತ್ತು ಕರಗಿಸಲಾಗದ ಸಂಪತ್ತು. ಅವರು ಕೊಟ್ಟ ಅರಿವು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸಿ ಅಲುಗಾಡಿಸಲಾಗದ ಬಂಡೆಯಂತಿರಬೇಕಿತ್ತು. ಆದರೆ ಬದಲಾದ ಸನ್ನಿವೇಶಗಳಿಂದ ವಿಶೇಷವಾಗಿ ದಲಿತರು ಪಡೆದ ಅರಿವನ್ನು ರಾಜಕೀಯ ಹಿತಾಸಕ್ತಿಗಳು ದುರ್ಬಲ ಮಾಡುತ್ತಿದ್ದಾರೆ ಎನ್ನುವುದು ರಾಜ್ಯ ಮತ್ತು ಕೇಂದ್ರದಲ್ಲಿಯೂ ಗೋಚರಿಸುತ್ತಿದೆ. ಅಂಬೇಡ್ಕರ್‌ರವರು ಒಂದು ತೊಟ್ಟು ರಕ್ತ ಚೆಲ್ಲದೆ ಒಂದು ಸಹನೆಯ ದೇಶವನ್ನು ಕಟ್ಟಲು ಕನಸು ಕಂಡಿದ್ದರು. ಆ ಕನಸೇ ನಮ್ಮ ಶ್ರೇಷ್ಠ ಸಂವಿಧಾನ. ಈ ಶ್ರೇಷ್ಠ ಸಂವಿಧಾನದ ಆಶಯಗಳು ಸಾರ್ವಕಾಲಿಕ ಚಿಂತನೆಯನ್ನು ಒಳಗೊಂಡಿದ್ದು, ಎಲ್ಲರನ್ನು ಸಮಾನತೆಯ ನದಿಯಲ್ಲಿ ಹರಿಯುವಂತೆ ಮಾಡಿದ್ದಾರೆ. ಆದರೆ ಪ್ರಬಲ ಸಮುದಾಯ ಎನ್ನಿಸಿಕೊಂಡವರು, ಭೂಮಾಲಕರು ಮತ್ತು ಬಂಡವಾಳಶಾಹಿಗಳು ಈ ಮಹಾ ಚಿಂತನೆಯ ಸಂವಿಧಾನದ ಸಿಂಹಪಾಲು ಪಡೆಯುತ್ತಲೇ ಮನುಪ್ರಣೀತ ಆಚರಣೆಗಳನ್ನು ಇವತ್ತಿಗೂ ಜೀವಂತವಾಗಿಟ್ಟಿದ್ದಾರೆ. ಹಿಂದೂ ಧರ್ಮದಲ್ಲಿ ಕಡೆಗಣಿಸಲ್ಪಟ್ಟ ಅಥವಾ ಅಂಚಿನಲ್ಲಿರುವ ಸಮುದಾಯಗಳು ತಮ್ಮ ಸಂವಿಧಾನಾತ್ಮಕ ಪಾಲನ್ನು ಪಡೆಯುವುದಕ್ಕೆ ಇವತ್ತಿಗೂ ಹೆಣಗಾಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಹಿಂದೂ ಧರ್ಮದ ಆಚರಣೆಗಳು, ಮೌಢ್ಯಗಳು ಆ ನಂತರದ ದಿನಗಳಲ್ಲೂ ಸಂವಿಧಾನಾತ್ಮಕ ಕಾನೂನುಗಳಿಂದಲೇ ಹೆಚ್ಚು ಬಲಾಢ್ಯವಾಗಿರುವುದು. ಇವತ್ತಿಗೂ ಅಸ್ಪಶ್ಯರು ತಮ್ಮ ಬದುಕನ್ನು, ಕನಸನ್ನು ವಿಸ್ತರಿಸಿಕೊಳ್ಳುವುದೂ ದುಸ್ತರವಾಗುತ್ತಿದೆ. ಭೀಮ ಸಾಹೇಬರು ಎಂತಹ ಪ್ರತಿಭಾವಂತರಾಗಿದ್ದರೂ, ಮೇಧಾವಿಗಳಾಗಿದ್ದರೂ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿದ್ದರೂ ಅವತ್ತಿನ ಜಾತಿವಾದಿ ಮನಸ್ಥಿತಿಗಳು ಬಾಬಾ ಸಾಹೇಬರನ್ನು ಇನ್ನಿಲ್ಲದೆ ಕಾಡಿಸಿದ್ದವು. ಇಂತಹ ಮೇರು ವ್ಯಕ್ತಿತ್ವವುಳ್ಳವರನ್ನೇ ಈ ಸಮಾಜ ಅಲುಗಾಡಿಸುವ, ಅವಮಾನ ಮಾಡುವ ಪ್ರಯತ್ನದಲ್ಲಿತ್ತು ಎಂದ ಮೇಲೆ ಅಸ್ಪಶ್ಯ ಸಮುದಾಯಗಳು ಹೇಗೆ ಬದುಕಿರಬಹುದೆಂದು ಊಹಿಸಿ. ಇದೊಂದು ರೀತಿಯ ಪುರಾಣದಲ್ಲಿ ಬರುವ ವಿಷವನ್ನುಂಡ ಶಿವ ಉಗುಳಲೂ ಆಗದೆ, ನುಂಗಲೂ ಆಗದೆ ಪರಿತಪಿಸುವ ಸ್ಥಿತಿಯಂತೆ ಇವತ್ತಿಗೂ ಅಸಮಾನತೆಯೇ ನಮ್ಮ ಬದುಕು ಎಂದು ನಮ್ಮ ಜನ ಬದುಕುತ್ತಿದ್ದಾರೆ.

ದಲಿತರ ಮೇಲೆ ನಡೆದ ಅನ್ಯಾಯ, ದೌರ್ಜನ್ಯಗಳಿಗೆ ಇಂದಿಗೂ ಒಂದಿನಿತೂ ಪಾಪ ಪ್ರಜ್ಞೆ, ಪಶ್ಚಾತ್ತಾಪವೂ ಇಲ್ಲದಂತೆ ಉಳಿದ ಸಮುದಾಯವು ದಬ್ಬಾಳಿಕೆಯಿಂದ ತಾನು ಮಾಡಿದ್ದೇ ಸರಿ ಎಂದು ಜೀವಿಸುತ್ತಿದ್ದಾದೆ. ಇಷ್ಟೆಲ್ಲವೂ ಮತ್ತೆ ಮತ್ತೆ ಹೇಳಲು ಕಾರಣ ಬಾಬಾ ಸಾಹೇಬರು ಯಾರ ಪರವಾಗಿ ಅಪಾರ ಕಾಳಜಿ ವಹಿಸಿದ್ದರೋ, ಆ ಸಮುದಾಯವನ್ನು ಇವತ್ತು ಒಂದಿಷ್ಟಾದರೂ ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಬಾಬಾ ಸಾಹೇಬರ ಸಂವಿಧಾನದಿಂದಾಗಿ ಅಧಿಕಾರ, ಅಂತಸ್ತು ಪಡೆದುಕೊಂಡರೂ, ಬಾಬಾ ಸಾಹೇಬರನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಲು ಸಿದ್ಧವಿಲ್ಲ ಕಾರಣ ಅಸ್ಪಶ್ಯತೆ. ಅಸ್ಪಶ್ಯತೆ ಎನ್ನುವುದು ಹಿಂದೂ ಧರ್ಮದ ಯಾವ ಮನಸ್ಥಿತಿ? ಧರ್ಮವೊಂದರಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಿ ಅಸ್ಪಶ್ಯತೆಯನ್ನು ಜೀವಂತವಾಗಿರಿಸುವುದು ಜಾಣ ಮನಸ್ಥಿತಿಯೋ? ಅಥವಾ ಅಸ್ಪೃಶ್ಯತೆಯನ್ನು ಉಳಿಸಿಕೊಂಡರೆ ಹಿಂದೂ ಧರ್ಮದ ಉಳಿವು ಎನ್ನುವ ವಜ್ರಕವಚವೋ? ಎನ್ನುವುದು ಇವತ್ತಿನ ಭಾರತದ ನಾಗರಿಕರೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.

ಈ ದೇಶದಲ್ಲಿ ಮಹಾನ್ ಚಿಂತಕರು ಸಾಧು-ಸಂತರು, ಸೂಫಿಗಳು ಹುಟ್ಟಿ ಅನೇಕ ಜೀವಪರವಾದ ಸಂದೇಶಗಳನ್ನು ಹೇಳಿ ಹೋಗಿದ್ದಾರೆ. ಇಷ್ಟಾದರೂ ಈ ನೆಲ ಅಸ್ಪಶ್ಯತೆಯಿಂದ ಬಿಡುಗಡೆಯಾಗಿಲ್ಲ. ಇದಕ್ಕೆಲ್ಲ ದೊಡ್ಡ ಮದ್ದು ಎಂಬಂತೆ ‘ಸಂವಿಧಾನವೆಂಬ ದಿವ್ಯ ಔಷಧಿ’ ಇದ್ದರೂ ಅದನ್ನು ಅರ್ಥಮಾಡಿಕೊಳ್ಳದೆ, ಆಕಸ್ಮಾತ್ ಅರ್ಥಮಾಡಿಕೊಂಡಿದ್ದರೂ ಅದನ್ನು ಬರೆದವರು ಒಬ್ಬ ತಳಸಮುದಾಯದವರು ಎನ್ನುವ ಅಂಶ ಅವರ ಮೆದುಳನ್ನು ತಿನ್ನುತ್ತಿರುವುದರಿಂದ ಅವರೆಲ್ಲರೂ ಮನುಷ್ಯರಾಗಿ ಬದಲಾಗಬೇಕಿದೆ. ಈ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ,

‘ಮಹಾತ್ಮಾ ಗಾಂಧೀಜಿ’ಯವರ ಮಾತು ಹೀಗಿದೆ. ‘‘ಈ ದೇಶದಲ್ಲಿ ಒಬ್ಬ ಮಹಿಳೆ ಮಧ್ಯರಾತ್ರಿಯಲ್ಲಿ ಏಕಾಂಗಿಯಾಗಿ ನಿರ್ಭೀತಿಯಿಂದ ಓಡಾಡುವ ಸಂದರ್ಭ ಯಾವಾಗ ಬರುತ್ತದೋ, ಆಗ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೇ’’. ಹಾಗೆಯೇ ‘‘ಈ ದೇಶದಲ್ಲಿರುವ ಎಲ್ಲಾ ಅಸ್ಪಶ್ಯ ಕೇರಿಗಳು, ಅಸ್ಪಶ್ಯತೆಯಿಲ್ಲದ ಊರುಗಳಾದಾಗ ನಿಜವಾದ ಸ್ವಾತಂತ್ರ್ಯ ಲಭಿಸಿದೆ ಎಂದು ನಾವು ತಿಳಿಯಬಹುದು’’. ಆದರೆ ಈ ಹೊತ್ತಿಗೂ ನಮ್ಮ ದೇಶದ ಶೇಕಡಾ ಒಂದರಷ್ಟಾದರು ಅಸ್ಪಶ್ಯತೆಯಿಲ್ಲದ ಊರುಗಳನ್ನು ನೋಡಲು ಸಾಧ್ಯವೇ ಇಲ್ಲ. ಈ ಕಾರಣಕ್ಕಾಗಿಯೇ ಬಾಬಾ ಸಾಹೇಬರು ಹೇಳಿದ್ದು ಅಸ್ಪಶ್ಯತೆಯನ್ನು, ಅಸ್ಪಶ್ಯತೆ ಆಚರಿಸುವವರ ತಲೆಯಿಂದ ಹೋಗಲಾಡಿಸಲು ಕಷ್ಟಸಾಧ್ಯ.

ಈ ಮೇಲ್ಕಂಡ ಎಲ್ಲಾ ಘಟನೆಗಳನ್ನು ನೆನೆಯುತ್ತಾ ಇತ್ತೀಚೆಗೆ ಈ ನಾಡಿನ ಸಾಕ್ಷಿ ಪ್ರಜ್ಞೆಯಾದ ‘ದೇವನೂರ ಮಹಾದೇವ’ರವರು ಆರೆಸ್ಸೆಸ್‌ಗೆ 100 ವರ್ಷ ತುಂಬಿದಂತೆ ಲೇಖನ ಬರೆದಿರುವುದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಗಣ್ಯರೊಬ್ಬರು ಪ್ರತಿಕ್ರಿಯಿಸಿದ್ದರು. ಆ ಪ್ರತಿಕ್ರಿಯೆಯಲ್ಲಿ ದಾಳಿಂಬೆ ಕುರಿತು ಮಾತನಾಡಿದ್ದರು. ಕೊನೆಯಲ್ಲಿ ಹಿಂದೂ... ಹಿಂದೂ... ಎಂದಿದ್ದರು. ಅವರು ಹಾಗೇ ಹೇಳುವುದಾದರೆ ಈ ದೇಶದ ಕೋಟ್ಯಾಂತರ ಜನ ಅಸ್ಪಶ್ಯತೆ... ಅಸ್ಪಶ್ಯತೆ... ಎನ್ನಬಹುದು. ಇವತ್ತು ಈ ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಬೂಟು ಎಸೆದವರ ಮನಸ್ಥಿತಿ ಎಂತಹದ್ದು ಎಂದು ಕೇಳಿದರೆ ಎಲ್ಲರೂ ಹೇಳುವುದೂ ಒಂದೇ ಶಬ್ದ ಅದು ಅಸ್ಪಶ್ಯತೆ. ಇದಕ್ಕೂ ದೊಡ್ಡ ಉದಾಹರಣೆಯಾಗಿ ಹೇಳುವುದಾದರೆ ಈ ದೇಶದ ಬಹುಪಾಲು ಜನ ಬಾಬಾ ಸಾಹೇಬರನ್ನು ಇದೇ ದೃಷ್ಟಿಕೋನದಲ್ಲಿ ನೋಡುತ್ತಿದ್ದಾರೆ. ಇಲ್ಲದಿದ್ದರೆ ಅವರ ಭಾವಚಿತ್ರಗಳಿಗೆ, ಪ್ರತಿಮೆಗಳಿಗೆ ಮತ್ತು ಅವರ ವಿಚಾರಗಳಿಗೆ ಏಕೆ ಅವಮಾನಿಸುತ್ತಿದ್ದರು ಎನ್ನುವುದನ್ನು ಹಿಂದೂ ವಾರಸುದಾರರು ಹೇಳಬೇಕು. ಅದಕ್ಕೆ ನಾವೆಲ್ಲ ಅಸ್ಪಶ್ಯತೆ ಹಿಂದೂ ಧರ್ಮದ ವಜ್ರ ಕವಚವೇ? ಎಂದು ಕೇಳುವುದಕ್ಕೆ ಸಾವಿರ ಲಕ್ಷ ಕೋಟಿ ಘಟನೆಗಳನ್ನು ನಿಮ್ಮ ಮುಂದೆ ಇಡಬಹುದು.

‘‘ದಲಿತರು ಎಂದಿಗೂ ಏಟಿಗೆ ಏಟು, ಹಿಂಸೆಗೆ ಹಿಂಸೆ ಮಾಡಿದವರಲ್ಲ. ಅವರಿಗೆ ಸಹನೆ, ಕರುಣೆ, ಭ್ರಾತೃತ್ವ ಬಂದಿದ್ದು ಡಾ. ಬಾಬಾ ಸಾಹೇಬರ ಪ್ರೇರಣೆಯಿಂದ’’. ಈ ದೇಶದ ದೊಡ್ಡ ವಿವೇಕ ಅಂತ ಇದ್ದರೆ ಅದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಈ ದೇಶದ ನೊಂದವರ, ಶೋಷಿತರ, ಪ್ರತಿರೋಧದ ಮೊಟ್ಟ ಮೊದಲ ಹೋರಾಟ ‘ಮಹಾಡ್ ನಗರದ ಚೌದರ್ ಕೆರೆ ನೀರು ಮುಟ್ಟುವುದರಿಂದ’ ಪ್ರಾರಂಭವಾಯಿತು. ಇದನ್ನು ಸಹಿಸದ ಹಿಂದೂ ಧರ್ಮದ ವಾರಸುದಾರರು ದೊಡ್ಡ ಗಲಭೆಗೆ ಕಾರಣಕರ್ತರಾಗುತ್ತಾರೆ. ಅವತ್ತು ಬಾಬಾ ಸಾಹೇಬರು ಸಮ್ಮತಿಸಿದ್ದರೆ ಎರಡು ಸಮುದಾಯಗಳ ನಡುವೆ ದೊಡ್ಡ ಘರ್ಷಣೆಯಾಗಿ, ನೂರಾರು ಜನರ ಸಾವು-ನೋವಿಗೆ ಕಾರಣವಾಗುತ್ತಿತ್ತು. ಆ ಹೊತ್ತಿನ ಬಾಬಾ ಸಾಹೇಬರ ವಿವೇಕ ಇವತ್ತಿಗೂ ನಮ್ಮಂತಹವರ ಎದೆಗಳಲ್ಲಿ ನಿರಂತರವಾಗಿ ಹರಿಯುತ್ತಿದೆ. ಶತಶತಮಾನಗಳಿಂದಲೂ ಈ ಹಿಂದೂ ಧರ್ಮ ಅಸ್ಪಶ್ಯತೆಯ ಮಹಾಪಾಪವನ್ನು ನಡೆಸಿಕೊಂಡು ಬಂದಿದ್ದರೂ, ಇವತ್ತಿಗೂ ಸಾಸಿವೆ ಕಾಳಿನಷ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಯಾವ ಯಾವ ಧರ್ಮಗಳು ಹೇಗೆ ನಡೆದುಕೊಳ್ಳಬೇಕೆಂಬುದನ್ನು ಆ ಧರ್ಮದ ಅನುಯಾಯಿಗಳು ಪಾಲಿಸಬೇಕೇ ಹೊರತು; ಧರ್ಮ ಹೇಳಿದ್ದು, ದೇವರು ಹೇಳಿದ್ದು ಅಂತ ಅಲ್ಲ. ಧರ್ಮ ದೇವರುಗಳಿರುವುದು ಮನುಷ್ಯನ ಸಮಾಧಾನಕ್ಕೆ. ಆದರೆ ಒಂದು ಧರ್ಮ ತನ್ನಂತೆ ಇರುವ ಇನ್ನೊಬ್ಬನನ್ನು ಮುಟ್ಟಿಸಿಕೊಳ್ಳಬೇಡ, ಪ್ರಕೃತಿದತ್ತ ನೀರು ಮುಟ್ಟಬೇಡ ಹೀಗೆ ನೂರಾರು ಸಂಕೋಲೆಗಳನ್ನು ಹೇರಿ ತಾನು ಆನಂದಿಸುವುದು ಧರ್ಮವಲ್ಲ. ಶತ ಶತಮಾನಗಳಿಂದಲೂ ಒಂದು ಧರ್ಮದಲ್ಲಿ ಇನ್ನೊಬ್ಬ ಮನುಷ್ಯ ಅರ್ಥ ಆಗಲಿಲ್ಲ ಅಂದರೆ ಅದು ಧರ್ಮವೇ ಅಲ್ಲ. ಹಾಗೇ ಹೇಳುವವನು ಮನುಷ್ಯನೇ ಅಲ್ಲ. ಈ ಎಲ್ಲಾ ವಿಷಯಗಳನ್ನು ಹೇಳುವುದಕ್ಕೆ ಕಾರಣವಿದೆ. ಈ ದೇಶದಲ್ಲಿ ಯಾವ ಧರ್ಮವೂ, ಯಾವ ಸಮುದಾಯವೂ, ಯಾವ ಮನುಷ್ಯನೂ ಸಣ್ಣವನಲ್ಲ. ವ್ಯಕ್ತಿ ಗೌರವ, ಧರ್ಮ ಸಮುದಾಯಗಳ ಗೌರವ ಎಲ್ಲರಿಗೂ ಇರುತ್ತದೆ. ಎಲ್ಲದಕ್ಕೂ ಶ್ರೇಷ್ಠವಾದದ್ದು ಈ ದೇಶದ ಸಂವಿಧಾನ. ಅದು ಯಾವತ್ತು ಸಮಾನತೆಯ ಆಶಯಗಳನ್ನೇ ಹೇಳುತ್ತದೆ. ಯಾವ ದೇಶವು ಧರ್ಮದ ದೇಶವಾಗಿರುವುದಿಲ್ಲ; ಅದು ಜನಸಮುದಾಯಗಳ ದೇಶವಾಗಿರುತ್ತದೆ: ಧರ್ಮಕ್ಕೆ ಅರ್ಥ ಬರುವುದು ಆ ಧರ್ಮದ ನಡೆನುಡಿಗಳು ಮಾನವೀಕರಣಗೊಂಡಾಗ ಮಾತ್ರ ಮತ್ತು ಮಾನವತೆಯಿಂದಲೇ ಅದು ನಿರಂತರವಾಗಿ ಚಲಿಸುತ್ತಿರುತ್ತದೆ. ಜಡಗೊಂಡ ಧರ್ಮಗಳು ಸುಧಾರಣೆ ಆಗುವುದಿಲ್ಲ.

ಇದನ್ನೆಲ್ಲಾ ಹೇಳುವಾಗ 1956 ಡಿಸೆಂಬರ್ 5, ಬಾಬಾ ಸಾಹೇಬರ ಒಂದು ಕೊನೆಯ ಸಂದರ್ಶನ ನೆನಪಾಗುತ್ತದೆ. ಡಿಸೆಂಬರ್ 5ರ ಸಂಜೆ ಇಬ್ಬರು ಜೈನ ಮುಖಂಡರು ಬಾಬಾ ಸಾಹೇಬರನ್ನು ನೋಡಲು ಬಂದಿರುತ್ತಾರೆ. ಆದರೆ ಅವರ ಆರೋಗ್ಯ ಸ್ಥಿತಿ ಅಷ್ಟು ಸಮಾಧಾನಕರವಾಗಿರಲಿಲ್ಲ. ಆದರೂ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅವರಿಬ್ಬರನ್ನು ಸಹಜವಾಗಿ ಭೇಟಿ ಮಾಡಿ ಮಾತನಾಡುತ್ತಾರೆ. ಅವರಿಬ್ಬರು ಬಾಬಾ ಸಾಹೇಬರ ಆರೋಗ್ಯ ವಿಚಾರಿಸುತ್ತಾರೆ. ಜೈನಮುಖಂಡರು ಬಾಬಾ ಸಾಹೇಬರಿಗೆ ಶ್ರೀ ನತಾಲ್ಜೀ ಹಿಂದಿಯಲ್ಲಿ ಬರೆದಿರುವ ಶ್ರಮ್ಮಾನ್ ಸಂಸ್ಕೃತಿ ಕೀ ದೋ ಧಾಯೇ- ಜೈನ್/ಬೋಧ್ ಕೃತಿಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಆ ಸಂದರ್ಭದಲ್ಲಿ ಬಾಬಾ ಸಾಹೇಬರು ಚುರುಕಾಗಿ ಕಣ್ಣಾಡಿಸಿ ಅದನ್ನು ಇನ್ನಷ್ಟು ಗಂಭೀರವಾಗಿ ಓದುವುದಕ್ಕೆ ಹಾಸಿಗೆ ಪಕ್ಕದಲ್ಲೇ ಇಟ್ಟುಕೊಳ್ಳುತ್ತಾರೆ. ಹೊರಡುವಾಗ ಜೈನ ಮುಖಂಡರು ಬಾಬಾ ಸಾಹೇಬರಿಗೆ ತಮ್ಮ ಮನದಾಳದ ಮಾತನ್ನು ಹೇಳುತ್ತಾ ನಾವು ನಿಮ್ಮ ಹಾದಿಯಲ್ಲಿ ನಡೆಯುವುದಕ್ಕೆ ತೀರ್ಮಾನಿಸಿದ್ದೇವೆ. ನಾವು ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇವೆ ಎಂದು ಹೇಳಿ ತೆರಳುತ್ತಾರೆ.

ಆ ರಾತ್ರಿ ಬಾಬಾ ಸಾಹೇಬರು ದೈಹಿಕವಾಗಿ ನಮ್ಮನ್ನು ಅಗಲುತ್ತಾರೆ. ಆದರೆ ಅವರು ರೂಪಿಸಿದ ಸಂವಿಧಾನದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬಲದಿಂದ ಇಡೀ ಜಗತ್ತು ಸರ್ವಜನಾಂಗದ ಪ್ರೀತಿಯ ತೋಟದಂತೆ ಕಾಣಿಸಿಕೊಳ್ಳುತ್ತಿದೆ. ಇದರ ಶಕ್ತಿ ಇರುವುದೇ ಡಾ. ಬಿ. ಆರ್. ಅಂಬೇಡ್ಕರ್ ವಿವೇಕದಲ್ಲಿ ಎನ್ನುವುದು ಎಲ್ಲರೂ ಮರೆತಂತೆ ಕಾಣಿಸುತ್ತದೆ. ಮರೆಯಲಾರದ ಎದೆಗಳಲ್ಲಿ ಭೀಮ ಸಾಹೇಬರು ಮುಂದೆ ನೂರಾರು ವರ್ಷಗಳ ಕಾಲ ಹಸಿರಾಗಿರುತ್ತಾರೆ,

ಉಸಿರಾಗಿರುತ್ತಾರೆ. ಭೀಮ ಸಾಹೇಬರು ತೀರಿಕೊಂಡ ದಿನ ಪತ್ರಕರ್ತರಾದ ಶ್ರೀ ಆಚಾರ್ಯ ಅತ್ರಿ ರವರು ಬಾಬಾಸಾಹೇಬರ ಪಾದಗಳಿಗೆ ನಮಸ್ಕರಿಸಿ

ಬಾಬಾಸಾಹೇಬರೇ ನಿಮ್ಮ

ಜನನದಿಂದ ಭಾರತಾಂಬೆ ಪವಿತ್ರಳಾದಳು

ಎಂದು ಹೇಳುತ್ತಾ ಕಣ್ಣೀರು ಸುರಿಸುತ್ತಾರೆ.

ಅಂಬೇಡ್ಕರ್ ರವರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ ಅತ್ರಿಯವರು ಅವರ ಪಾರ್ಥಿವ ಶರೀರದ ಪಕ್ಕದಲ್ಲಿ ನಿಂತು ಮೇಲೆ ನೋಡುತ್ತಾ ಈ ರೀತಿ ಹೇಳುತ್ತಾರೆ.

ಹೇ ದೇವಾನುದೇವತೆಗಳೇ ಕೆಳಗೆ ನೋಡಿ,

ಇಲ್ಲಿ ಒಬ್ಬ ಪವಿತ್ರ ಮಹಾಮಾನವನ

ಅಂತ್ಯಸಂಸ್ಕಾರ ನಡೆಯುತ್ತಿದೆ.

ಈ ಪವಿತ್ರ ಮಹಾಮಾನವನಿಗೆ

ಅಲ್ಲಿಂದಲೇ ಶ್ರದ್ಧಾಂಜಲಿ ಸಲ್ಲಿಸಿ ನಿಮಗೆ ಪುಣ್ಯಪ್ರಾಪ್ತಿ ಯಾಗುತ್ತದೆ.

ಅದನ್ನೇ ಮುಂದುವರಿಸಿ ನಾವು ಈ ಹೊತ್ತಿಗೆ ಹೀಗೆ ಹೇಳಬಹುದು, ಹೇ ಹಿಂದೂ ಧರ್ಮದ ಮಹಾನುಭಾವರೇ ನೀವೆಲ್ಲರು ಆನಂದವಾಗಿರಲೆಂದು ಜಗತ್ತಿನ ಶ್ರೇಷ್ಠ ಸಂವಿಧಾನ ಕಾಣ್ಕೆಯಾಗಿ ಕೊಟ್ಟಿದ್ದಾರೆ. ಆದರೂ ಕೆಲವರ ಹೀನ ಮನಸ್ಥಿತಿಯಿಂದ ಅವರನ್ನು ಅವಹೇಳನ ಮಾಡುವುದು, ಪ್ರತಿಮೆ, ಭಾವಚಿತ್ರಗಳನ್ನು ಭಗ್ನಗೊಳಿಸುವುದು ಸರಿಯೇ? ಇನ್ನಾದರೂ ಮನುಷ್ಯರಾಗಿ.

ಜೈ ಭೀಮ್!

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X