Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ಅಸ್ಪಶ್ಯತೆ ಹಿಂದೂ ಧರ್ಮದ ವಜ್ರ ಕವಚವೇ?

ಅಸ್ಪಶ್ಯತೆ ಹಿಂದೂ ಧರ್ಮದ ವಜ್ರ ಕವಚವೇ?

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್30 Dec 2025 11:31 AM IST
share
ಅಸ್ಪಶ್ಯತೆ ಹಿಂದೂ ಧರ್ಮದ ವಜ್ರ ಕವಚವೇ?

ಮುಂದಿನ ದಿನಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನಲಾಗುತ್ತಿದೆ. ಆಗ ಅಸ್ಪಶ್ಯರ ಕತೆ ಏನಾಗುತ್ತದೆ? ಮಹಿಳೆಯರು, ನೊಂದವರು, ಶೋಷಿತ ವರ್ಗದವರು, ತುಳಿತಕ್ಕೊಳಪಟ್ಟವರ ಬದುಕು ಏನಾಗುತ್ತದೆ? ಇದು ಅಸ್ಪಶ್ಯತೆಯನ್ನು ಒಡಲಲ್ಲಿಟ್ಟುಕೊಂಡೇ ಹಿಂದೂ ರಾಷ್ಟ್ರ ಮಾಡುವ ಹುನ್ನಾರವೇ? ಅಸ್ಪಶ್ಯತೆ ಹಿಂದೂ ಧರ್ಮದ ವಜ್ರಕವಚವೇ?

ಹಿಂದೂ ಧರ್ಮ ಒಂದಿಷ್ಟಾದರೂ ಮಾನಸಿಕವಾಗಿ, ಬಹಿರಂಗವಾಗಿ ಸುಧಾರಣೆ ಆಗುವುದಾಗಿದ್ದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಬೌದ್ಧ ದಮ್ಮವನ್ನು ಸ್ವೀಕರಿಸುತ್ತಿರಲಿಲ್ಲ ಅನ್ನಿಸುತ್ತದೆ. ಕಾರಣ ಕಳೆದ 2 ಸಾವಿರ ವರ್ಷಗಳಿಂದ ಹಿಂದೂ ಸನಾತನ ಧರ್ಮ ಅಸ್ಪಶ್ಯರನ್ನು ನಡೆಸಿಕೊಂಡ ರೀತಿ ಎಷ್ಟು ಘೋರವಾಗಿತ್ತೆನ್ನುವುದು ಸ್ವತಃ ಅವರೇ ಅನುಭವಿಸಿದ್ದಾರೆ. ಅಸ್ಪಶ್ಯತೆಯ ಕರಾಳವನ್ನು ಅರಿಯಲು ಆಳವಾದ ಅಧ್ಯಯನ ನಡೆಸಿದ್ದಾರೆ ಮತ್ತು ಸ್ವತಃ ಆ ನೋವನ್ನು ಮನಹಿಂಡುವಂತೆ ಅನುಭವಿಸಿದ್ದಾರೆ. ಅದಕ್ಕಾಗಿಯೇ ಬಾಬಾ ಸಾಹೇಬರು ಇದನ್ನು ತಪ್ಪಿಸಲು ತನ್ನ ಜೀವಮಾನವಿಡೀ ಅವಿರತ ಶ್ರಮಿಸಿದ್ದಾರೆ. ಭಾರತ ಪ್ರಕಾಶಮಾನವಾಗುತ್ತಿದೆ ಎಂದು ಹೇಳುತ್ತೇವೆ. ಆದರೆ ಈ ಅಸ್ಪಶ್ಯತೆಯ ಕೊಳಕು ಇನ್ನಷ್ಟು ಕೊಳೆಯುತ್ತಾ, ಕರಗುತ್ತಾ ಹಿಂದೂ ಧರ್ಮದ ಉಳಿವಿಗಾಗಿ ವಜ್ರ ಕವಚವಾಗುತ್ತಿದೆ. ಈಗಾಗಲೇ ಸಂವಿಧಾನದಲ್ಲಿ ಅಸ್ಪಶ್ಯತೆ ನಿಷೇಧವಾಗಿದೆ. ಆದರೆ ಅಸ್ಪಶ್ಯತೆಯ ಆಚರಣೆ ಮಾಡುವವರು ಮಾತ್ರ ಯಾವುದಕ್ಕೂ ಬಗ್ಗದೆ ತಮ್ಮ ದುರಹಂಕಾರ ಮತ್ತು ಮೌಢ್ಯವನ್ನು ಇವತ್ತಿಗೂ ರಾಜಾರೋಷವಾಗಿ ಆಚರಿಸುತ್ತಿದ್ದಾರೆ. ಇದನ್ನು ಮತ್ತೆ ಮತ್ತೆ ಹೇಳುವುದಕ್ಕೆ ಕಾರಣವಿದೆ. ಅಸ್ಪಶ್ಯತೆಯನ್ನು ತಡೆಯಲು ಎಷ್ಟೇ ಕಠಿಣವಾದ ಕಾನೂನುಗಳಿದ್ದರೂ ಸರಕಾರ ನಡೆಸುವವರಿಗೆ ರಕ್ಷಣೆ ಮಾಡಲಾಗುತ್ತಿಲ್ಲ.

ಸ್ವಾತಂತ್ರ್ಯ ಬಂದು 8 ದಶಕಗಳು ಕಳೆಯುತ್ತಿದ್ದರೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿಗಳು ಇವತ್ತಿಗೂ ಜಾರಿಯಲ್ಲಿವೆ. ನನ್ನಂತಹ ಸಾಮಾಜಿಕ ಕಾರ್ಯಕರ್ತರು ಏಕೆ ಮತ್ತೆ ಮತ್ತೆ ಮಾತನಾಡಬೇಕಾಗಿದೆ ಎಂದರೆ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಹೆಚ್ಚಿನ ಪಾಲು ಶೂದ್ರ ಸಮುದಾಯದವರಿಂದಲೇ ಆಗುತ್ತಿದೆ. ಮೇಲ್ವರ್ಗ ಬಿಲ್ಲಾದರೆ ಶೂದ್ರವರ್ಗ ಬಾಣವಾಗಿ ದಲಿತರನ್ನು ಇರಿಯುತ್ತಿರುವುದು ಇವತ್ತಿನ ಮಹಾಭಾರತ. ಬಿಲ್ಲಿನ ಬಿರುಸು ಹೆಚ್ಚಾಗಿ ಬಾಣದ ರಭಸ ಇನ್ನಷ್ಟು ಆಕ್ರಮಣಕಾರಿಯಾಗಿ ದಲಿತರ ಮೇಲೆ ಬಂದು ಎರಗುತ್ತಿದೆ. ಈ ವಿಚಾರಗಳನ್ನು ಅರಿತಿರುವ ಪ್ರಸ್ತುತ ಕರ್ನಾಟಕ ಸರಕಾರವು ಸಮಾಜದಲ್ಲಿ ಪ್ರತೀ ಸಮುದಾಯವೂ ಒಬ್ಬರನ್ನೊಬ್ಬರು ಗೌರವಿಸುತ್ತಾ ಸೌಹಾರ್ದವಾಗಿ ಇರಬೇಕೆನ್ನುವ ಆಶಯದಿಂದ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿ ಎಚ್.ಸಿ. ಮಹದೇವಪ್ಪನವರ ಮೂಲಕ ರಾಜ್ಯದಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕವನ್ನು ಮಂಡಿಸಿದೆ.

ಶತಮಾನಗಳಿಂದಲೂ ದಲಿತರು ಶೋಷಣೆಗೆ ಒಳಪಟ್ಟಿರುವುದನ್ನೇ ಸಹಜ ಬದುಕು ಎಂದುಕೊಂಡಿದ್ದರು. ಯಾವಾಗ ಸಾಮಾಜಿಕ ಪರಿವರ್ತನೆಕಾರರು ಈ ಸಮಾಜದಲ್ಲಿ ಹುಟ್ಟಿದರೋ, ಇವರಿಗೂ ಒಂದಿಷ್ಟು ಅರಿವು ಬಂದು ನಮ್ಮ ಬದುಕು ಇದರಾಚೆಗಿದೆ ಎಂದು ತಿಳಿಯುವಂತಾಯಿತು. ಯಾವಾಗ ಇವರಿಗೆಲ್ಲ ತಿಳುವಳಿಕೆ ಪ್ರಾರಂಭವಾಯಿತೋ ಆಗ ಶೋಷಕರ ಹಿಂಸೆ ದೌರ್ಜನ್ಯ ಹೆಚ್ಚಾಯಿತು. ತನ್ನಂತೆಯೇ ದಲಿತರು ಬದುಕಲು ಪ್ರಯತ್ನಿಸುತ್ತಿರುವುದನ್ನು ಶೋಷಕರು ಸಹಿಸುತ್ತಿಲ್ಲ. ಆದರೆ ಇಷ್ಟು ಶತಮಾನಗಳಲ್ಲಿ ಎಷ್ಟೋ ಶೋಷಣೆಯನ್ನು ಅನುಭವಿಸಿದರೂ ಇಡೀ ದೇಶಾದ್ಯಂತ ಒಟ್ಟಾಗಿ ಶೋಷಕರ ವಿರುದ್ಧ ಪ್ರತಿರೋಧಿಸಲು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಹಿಂದೂ ಧರ್ಮದ ಒಡೆದಾಳುವ ನೀತಿಯಿಂದಾಗಿ ದಲಿತರು ಇಂದಿಗೂ ಅರೆ ಎಚ್ಚರದಲ್ಲೇ ಬದುಕುತ್ತಿದ್ದಾರೆ. ನಾನು ನೀನಾಸಂನಲ್ಲಿ ನಾಟಕ ಪದವಿ ಮಾಡುವಾಗ ಜಗತ್ತಿನ ಅಪರೂಪದ ಸಿನೆಮಾಗಳನ್ನು ನೋಡಿದ್ದೆ. ನಾನು ಮೇಲ್ಕಂಡ ವಿಷಯಗಳಿಗೆ ಸಂಬಂಧಪಟ್ಟಂತೆ ಅರ್ಥಾತ್ ಮನುಷ್ಯ ಸ್ವತಂತ್ರವಾಗಿ ಬದುಕುವ ಬದುಕಿಗಾಗಿ ಹೋರಾಟ ಮಾಡುವ ಅನೇಕ ಸಿನೆಮಾಗಳನ್ನು ನೋಡಿದ್ದೆ. ಅಂತಹ ಒಂದು ಸಿನೆಮಾ ನನಗೆ ಮತ್ತೆ ಮತ್ತೆ ಕಾಡುತ್ತದೆ. ಅದರ ಸಂಕ್ಷಿಪ್ತ ವಿವರಣೆ ಹೀಗಿದೆ. ಅಲ್ಲಿ ಎರಡೇ ವರ್ಗಗಳು. ಒಂದು ಆಳುವ ವರ್ಗವಾದರೆ, ಮತ್ತೊಂದು ಆಳಿಸಿಕೊಳ್ಳುವ ವರ್ಗ. ಅಲ್ಲೂ ಕೂಡ ಮನುಷ್ಯನ ಶೋಷಣೆ, ಹಸಿವು, ಅಸಮಾನತೆ ಎಲ್ಲವೂ ಇತ್ತು. ಅಲ್ಲೂ ಕೂಡ ತಮ್ಮ ಬದುಕು ಹೀಗೇ ಎಂದು ಬಹುಪಾಲು ಶೋಷಕ ಜನರು ಸುಮ್ಮನಿದ್ದರು. ಆದರೆ ಅಲ್ಲಲ್ಲೇ ಒಬ್ಬೊಬ್ಬರು ಇದನ್ನು ಪ್ರಶ್ನೆ ಮಾಡಲು ಶುರು ಮಾಡಿದರು. ಯಾವಾಗ ಪ್ರಶ್ನೆ ಮಾಡಲು ಶುರು ಮಾಡಿದರೋ, ಕೆಲವರನ್ನು ಜೈಲಿಗಟ್ಟಲಾಗುತ್ತದೆ. ಇನ್ನು ಕೆಲವರು ಬಲವಾಗಿ ಪ್ರತಿಭಟಿಸಿದರೆ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಇಂತಹ ಹಿಂಸೆಯಿಂದಾಗಿ ಸಣ್ಣದಾಗಿ ಅಸಮಾಧಾನ ಶುರುವಾಗುತ್ತದೆ. ಮುಂದೆ ಏನೂ ಮಾಡದೆ ತಮ್ಮ ಪಾಡಿಗೆ ತಾವಿದ್ದವರನ್ನೂ ಅನುಮಾನಿಸಿ ಜೈಲಿಗಟ್ಟಲಾಗುತ್ತದೆ. ಆಗ ಅಸಮಾಧಾನ ಇನ್ನಷ್ಟು ಹೆಚ್ಚಾಗುತ್ತದೆ. ಇದನ್ನು ಅರ್ಥಮಾಡಿಕೊಂಡು ಆಳುವವರು ಪ್ರಾರಂಭದಲ್ಲೇ ಚಿವುಟಿ ಹಾಕಬೇಕೆಂದು ಕಠಿಣವಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅಲ್ಲಲ್ಲೇ ನಡೆಯುತ್ತಿದ್ದ ಪ್ರತಿಭಟನೆಗಳು ಹೆಚ್ಚಾಗುತ್ತವೆ. ಹಾಗೆಯೇ ಗುಂಡಿನ ದಾಳಿಯೂ ಹೆಚ್ಚಾಗುತ್ತದೆ. ಸಾವಿನ ಸಂಖ್ಯೆ ಹೆಚ್ಚಾದಂತೆಲ್ಲ ಹೋರಾಟದ ಕಿಚ್ಚು ಹೆಚ್ಚಾಗುತ್ತದೆ. ಆಗ ಆಳುವವರು ಆಳಿಸಿಕೊಳ್ಳುವವರೂ ಪ್ರತಿಸ್ಪರ್ಧಿಗಳಾಗಿ ಘರ್ಷಣೆ ಹೆಚ್ಚಾಗುತ್ತದೆ. ಪ್ರತಿಭಟನೆ ಸಾಗರದಷ್ಟು ದೊಡ್ಡದಾದಾಗ ಸರಕಾರ ಮಣಿಯಲೇಬೇಕಾಗುತ್ತದೆ. ಇಷ್ಟೆಲ್ಲಾ ಅನಾಹುತಗಳಾದ ಮೇಲೆ ಆಳುವವರಿಗೆ ಬುದ್ಧಿ ಬರುತ್ತದೆ. ಆದರೆ, ನಮ್ಮಲ್ಲಿ ಮನುಷ್ಯರ ಜೀವ ಹಾನಿಯಾಗದೆ ಬದಲಾವಣೆ ಸಾಧ್ಯವೇ ಇಲ್ಲವೇ? ಖಂಡಿತಾ ಸಾಧ್ಯವಿದೆ. ಇದನ್ನು ಈ ದೇಶದ ಶ್ರೇಷ್ಠ ಸಂವಿಧಾನ ತೋರಿಸಿಕೊಟ್ಟಿದೆ. ಆದರೆ ಅಸ್ಪಶ್ಯತೆಯನ್ನು ಆಚರಣೆ ಮಾಡುವವರ ಮೆದುಳಿನಲ್ಲೇ ಭಯೋತ್ಪಾದನೆಯ ಬೀಜವಿದೆ. ಬೀದಿಯ ಕಸವನ್ನಾದರೂ ಸ್ವಚ್ಛಗೊಳಿಸಬಹುದು, ಆದರೆ ಮೆದುಳ ಕಸವನ್ನು ಹೇಗೆ ಗುಡಿಸುವುದು? ಇದು ಶತಮಾನಗಳ ಮಿಲಿಯನ್ ಪ್ರಶ್ನೆ. ಬದಲಾಗಬೇಕಾದವರು ಬದಲಾಗದಿದ್ದರೆ ಇಂತಹ ಎಲ್ಲಾ ಅನಾಗರಿಕ ವರ್ತನೆಗಳು ಮುಂದುವರಿಯುತ್ತಲೇ ಇರುತ್ತವೆ. ನಾವು ಬದುಕುತ್ತಿರುವ ಸಮಾಜ ಮತ್ತು ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲದಿದ್ದರೆ ಎಂತಹ ಕಠಿಣ ಕಾನೂನುಗಳಿದ್ದರೂ ನೊಂದವರಿಗೆ ಸಾಂತ್ವನ ತರಲಾಗುವುದಿಲ್ಲ. ಅನಾಹುತಗಳು ತಡೆಯದಂತೆ ಸರಕಾರ ತನ್ನ ಕಾನೂನುಗಳಿಂದ ಎಚ್ಚರದಲ್ಲಿರಬೇಕು. ಆದರೆ ನಮ್ಮ ಪೊಲೀಸ್ ವ್ಯವಸ್ಥೆ ಎಲ್ಲಾ ಮುಗಿದು ಹೋದಮೇಲೆ ಕ್ರಮ ಜರುಗಿಸಲು ಪ್ರಯತ್ನಿಸುತ್ತದೆ. ಒಂದು ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ಆ ಜೀವದ ಹರಣ ಮಾಡುತ್ತಾರೆ ಎನ್ನುವ ಸೂಚನೆ ಗೊತ್ತಿದ್ದರೂ, ಆ ಜೀವ ಉಳಿಸುವ ಪ್ರಯತ್ನ ಮಾಡದಿದ್ದರೆ ಅದೊಂದು ಅನಾಗರಿಕ ಸಮಾಜವಾಗುತ್ತದೆ. ಮೊನ್ನೆ ಮೊನ್ನೆಯಷ್ಟೇ ಬೆಳಗಾವಿ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮತ್ತು ದ್ವೇಷ ಭಾಷಣ ವಿಷಯ ಈ ಎರಡು ವಿಧೇಯಕಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು. ಈ ಎರಡೂ ಕಾನೂನುಗಳು ಮೇಲ್ನೋಟಕ್ಕೆ ಅಸಮಾನತೆಯನ್ನು ನಿವಾರಿಸುವ ಮುಖ್ಯವಾಗಿ ಜೀವಪರವಾದ ಹೂರಣವನ್ನು ಹೊಂದಿರುವ ಕಾನೂನುಗಳಂತೆ ಕಾಣುತ್ತದೆ.

ಸಾಮಾಜಿಕ ಬಹಿಷ್ಕಾರದ ನಿಯಮ ಹೀಗಿದೆ. ಕೆಟ್ಟ ಮತ್ತು ಅಸಾಂವಿಧಾನಿಕ ಆಚರಣೆಗಳೊಂದಿಗೆ ವ್ಯವಹರಿಸಲು ಪ್ರಸ್ತುತ ಇರುವ ಕಾನೂನುಗಳು ಸಾಕಾಗುತ್ತಿಲ್ಲ. ಆದ್ದರಿಂದ ಸದರಿ ಉದ್ದೇಶಕ್ಕಾಗಿ ಶಾಸನವನ್ನು ಅಧಿನಿಯಮಗೊಳಿಸುವುದು ಅಗತ್ಯ ಎಂದು ಪರಿಗಣಿಸಿದೆ. ಹೀಗಾಗಿ ಜಾತಿ ಅಥವಾ ಸಮುದಾಯ, ಪಂಚಾಯತ್‌ಗಳು ಅಥವಾ ಇದರ ಸದಸ್ಯರ ಮೂಲಕ ವಿವಿಧ ಹಂತಗಳಲ್ಲಿ ಸಾಮಾಜಿಕ ಬಹಿಷ್ಕಾರ, ಸಾಮಾಜಿಕ ಅಸಮಾನತೆಯನ್ನು ವಿಧಿಸುವ ಕೆಟ್ಟ ಆಚರಣೆಗಳನ್ನು ತಡೆಯಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ. ಮೇಲ್ಕಂಡ ಆಶಯ ಅಥವಾ ಕಾನೂನು ಬಹುತೇಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಸಮಾಜದಲ್ಲಿ ನೊಂದವರು, ಮಹಿಳೆಯರಿಗಾಗಿಯೇ ಈ ಮಸೂದೆ ಜಾರಿಯಾದಂತೆ ಕಾಣಿಸುತ್ತಿದೆ. ಅದು ನಿಜ ಕೂಡ. ಉದಾಹರಣೆಗೆ ಮೊನ್ನೆ ಮೊನ್ನೆ ನಡೆದ ಮರ್ಯಾದೆಗೇಡು ಹತ್ಯೆ ನಿದರ್ಶನವಾಗಿದೆ. ಬಸವಣ್ಣ ಹೇಳಿದ ಮಾತು ‘‘ನಾನು ಮದುವೆ ಮಾಡಿದ್ದು ಹೆಣ್ಣು-ಗಂಡಿಗೆ ಹೊರತು, ಜಾತಿಗಲ್ಲ’’ ಎನ್ನುವುದು ನೆನಪಿಗೆ ಬರುತ್ತದೆ. ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸವಿದೆ. ಮನುಷ್ಯನನ್ನು ಮನುಷ್ಯನೆಂದೇ ಪರಿಗಣಿಸುತ್ತೇವೆಯೇ ಹೊರತು; ಮೃಗವೆಂದಲ್ಲ: ಆದರೆ ಮೃಗ ಕೂಡ ಹೊಟ್ಟೆ ತುಂಬಿದ ಮೇಲೆ ಆಹಾರಕ್ಕಾಗಿ ಯಾವ ಜೀವಿಯನ್ನೂ ಸಾಯಿಸುವುದಿಲ್ಲ. ಮನುಷ್ಯನ ಮನಸ್ಸು ಎಷ್ಟು ಕ್ರೂರ ಮತ್ತು ಘೋರ!. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಗಳನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆಂದರೆ ಅಸ್ಪಶ್ಯ ಸಮುದಾಯಗಳ ಬಗ್ಗೆ ಇವರ ಮೆದುಳು ಮತ್ತು ಹೃದಯ ಎಷ್ಟು ಕ್ರೂರವಾಗಿ ಯೋಚನೆ ಮಾಡುತ್ತಿದೆ? ಇಂತಹ ಘಟನೆಗಳು ಇದು ಕೊನೆ ಎಂದು ಯೋಚಿಸುವಷ್ಟರಲ್ಲೇ ಇನ್ನೊಂದು ಘಟನೆ ನಡೆದಿರುತ್ತದೆ. ಇದಕ್ಕೆ ಕೊನೆಯಿಲ್ಲ. ಧರ್ಮ, ದೇವರು ಬಗ್ಗೆ ಮಾತನಾಡುವವರು ಕನಿಷ್ಠ ಪಕ್ಷ ಒಂದು ಸಾಸಿವೆ ಕಾಳಿನಷ್ಟು ಅಯ್ಯೋ ಹೀಗಾಯಿತಲ್ಲ ಎನ್ನುವ ಸಣ್ಣ ಸ್ಪಂದನೆಯೂ ಕೂಡ ಅವರ ಹೃದಯದಲ್ಲಿರುವುದಿಲ್ಲ. ಹಾಗಾದರೆ ಇವರ ಧರ್ಮ ಮತ್ತು ಇನ್ನೆಷ್ಟು ಕ್ರೂರವಾಗಿರಬೇಡ. ಇವರೆಲ್ಲಾ ಅಲ್ಲಿಂದಲೇ ಪ್ರೇರಣೆ ಪಡೆದವರಲ್ಲವೇ?

ಮತ್ತೊಂದು ಘಟನೆ ಹೀಗಿದೆ; ಕೆಲವು ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಆಸುಪಾಸಿನಲ್ಲಿ ನಡೆದ ಘಟನೆ. ಸರಕಾರ ಸಾರ್ವಜನಿಕರ ಕುಡಿಯುವ ನೀರಿನ ಯೋಜನೆಗಾಗಿ ಬೋರ್‌ವೆಲ್ ತೆಗೆಸಿರುವುದು ಸರಿಯಷ್ಟೇ. ಆ ಹಳ್ಳಿಯ ಮಧ್ಯಭಾಗದಲ್ಲಿ ಒಂದು ಬೋರ್‌ವೆಲ್ ತೆಗೆಸಿದ್ದಾರೆ. ಆ ಬೋರ್‌ವೆಲ್‌ನ ನೀರನ್ನು ಎಲ್ಲ ಸಮುದಾಯದವರು ಬಳಸುತ್ತಾರೆ. ಆದರೆ ಉಳಿದ ಸಮುದಾಯದವರು ನೀರು ತೆಗೆದುಕೊಂಡು ಹೋಗುವವರೆಗೂ ದಲಿತ ಮಹಿಳೆಯರು ಅದರ ಹತ್ತಿರ ಸುಳಿಯುವಂತಿಲ್ಲ. ಉಳಿದ ಸಮುದಾಯದವರ ಕೊಡದ ನೀರು ತುಂಬಿ ಹರಿಯುತ್ತಿದ್ದರೂ ದಲಿತ ಮಹಿಳೆಯರಿಗೆ ನೀರನ್ನು ಹಿಡಿಯಲು ಅವಕಾಶವೇ ಕೊಡುವುದಿಲ್ಲ. ಕೂಲಿಗೆ ಹೋಗಬೇಕಾಗಿದ್ದ ಕಾರಣ ದಲಿತ ಮಹಿಳೆ ಒಬ್ಬರ ಬಳಿ ಬೇಡಿಕೊಳ್ಳುತ್ತಾಳೆ. ಆಗ ಇತರ ಸಮುದಾಯದ ಹೆಂಗಸೊಬ್ಬಳು ‘‘ಸುಮ್ನೆ ನಿಂತ್ಕೊ ಈ ಬೋರ್‌ವೆಲ್ ಏನು ನಿಮ್ಮಪ್ಪಂದಾ? ನಮಗೆ ಸಾಕಾಗುವವರೆಗೂ ನಿಮಗೆ ಬಿಟ್ಟುಕೊಡುವುದಿಲ್ಲ’’ ಎಂದು ನಿಂದಿಸುತ್ತಾಳೆ. ಆದರೂ ಸಹನೆಯಿಂದ ತುಂಬಾ ಹೊತ್ತು ಕಾದ ಮೇಲೆ ದಲಿತ ಮಹಿಳೆ ನೀರು ತೆಗೆದುಕೊಳ್ಳಲು ಮುಂದಾದಾಗ ಇತರ ಸಮುದಾಯದ ಹೆಂಗಸು ಆಕೆಯ ಮೇಲೆ ಹಲ್ಲೆ ಮಾಡುತ್ತಾಳೆ. ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಇದರಿಂದ ನೊಂದ ಮಹಿಳೆ ಖಾಲಿ ಕೊಡದಲ್ಲಿ ಮನೆಗೆ ವಾಪಸಾಗುತ್ತಾಳೆ. ಆದರೆ ಯಾರು ಹಲ್ಲೆ ಮಾಡುತ್ತಾರೋ ಅವರೇ ಪಂಚಾಯತ್ ಮೆಟ್ಟಿಲೇರುತ್ತಾರೆ. ಇದರಿಂದ ಸಾರ್ವಜನಿಕ ಪಂಚಾಯಿತಿ ನಡೆಯುತ್ತದೆ. ಯಾರು ಅವಮಾನಕ್ಕೊಳಪಟ್ಟಿರುತ್ತಾರೋ ಆಕೆಯ ಗಂಡನನ್ನು ಕರೆಸಿ ನೂರು ರೂಪಾಯಿ ದಂಡವನ್ನು ಹಾಕುತ್ತಾರೆ. ದಂಡ ಮತ್ತು ಅವಮಾನದಿಂದ ತತ್ತರಿಸಿದ ದಲಿತ ಮನೆಗೆ ಬಂದು ಹೆಂಡತಿ ಮೇಲೆ ಜಗಳ ಮಾಡುತ್ತಾನೆ. ‘‘ನನ್ನ ಹತ್ತಿರ ನೂರು ರೂಪಾಯಿ ಇಲ್ಲ. ನೀನೇ ಹೇಗಾದರೂ ಹೊಂದಿಸಿ ಕೊಡು. ಇದು ನನ್ನಿಂದಾಗದು’’ ಎಂದು ಕೈ ಚೆಲ್ಲುತ್ತಾನೆ. ಅಂದು ತಂದು ಅಂದೇ ತಿನ್ನುವ ದಲಿತರಿಗೆ ಕತ್ತಲೆ ಆವರಿಸುತ್ತದೆ. ದಲಿತ ಹೆಣ್ಣು ಮಗಳು ಕಣ್ಣೀರಿಡುತ್ತಾಳೆ. ಪರಿಹಾರ ತಿಳಿಯದಾಗುತ್ತದೆ. ಆಕೆ ಎಲ್ಲದರಿಂದ ಮನನೊಂದು ಏನು ತಪ್ಪು ಎಸಗದಿದ್ದರೂ ಈ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕಾಗಿಯೇ ಇಷ್ಟು ನೋವು, ಅವಮಾನ ಅನುಭವಿಸಬೇಕಾಯಿತಲ್ಲ ಎಂದು ಪರಿತಪಿಸಿ ಬೇರೆ ಯಾವ ದಾರಿಯೂ ಕಾಣದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸಂಬಂಧಪಟ್ಟವರು ಅಯ್ಯೋ ಹೀಗಾಯಿತಲ್ಲ ಎಂದು ನೊಂದುಕೊಳ್ಳುತ್ತಾರೆ. ಪತ್ರಿಕೆಗಳಲ್ಲಿ ಸುದ್ದಿಯಾಗುತ್ತದೆ. ಇದಕ್ಕೆ ಕಾರಣರಾದವರು ತಮಗೇನು ಸಂಬಂಧವೇ ಇಲ್ಲದಂತೆ, ಮನುಷ್ಯತ್ವವೇ ಇಲ್ಲದಂತೆ ವರ್ತಿಸುತ್ತಾರೆ. ಬೆಂಗಳೂರಿನ ಗಾಂಧಿ ಪ್ರತಿಮೆ ಮುಂದೆ ದಲಿತ ಸಂಘಟನೆಗಳು ಪ್ರತಿಭಟಿಸುತ್ತವೆ. ಈ ಸಾವಿಗೆ ಕಾರಣರಾದವರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಿ ಎಂದು ಭಾಷಣ ಮಾಡುತ್ತಾರೆ. ಆ ಸಭೆಯಲ್ಲಿ ‘‘ಎಲ್ಲಿಗೆ ಬಂತು? ಯಾರಿಗೆ ಬಂತು? 47ರ ಸ್ವಾತಂತ್ರ್ಯ’’ ಎಂದು ಕವಿತೆ ಬರೆದ ಕವಿ ಸಿದ್ಧಲಿಂಗಯ್ಯನವರು ಇದ್ದರು. ನಾನು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ ಆ ಪ್ರಕರಣ ಏನಾಯಿತು? ಯಾರಿಗೆ ಶಿಕ್ಷೆಯಾಯಿತು? ಯಾರಿಗೂ ಗೊತ್ತಾಗುವುದೇ ಇಲ್ಲ. ಬಹುಶಃ ಇವತ್ತು ಸರಕಾರದ ಅಂಕಿ ಅಂಶಗಳ ಪ್ರಕಾರ 1 ಲಕ್ಷದ 10 ಸಾವಿರ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇದೂ ಒಂದು ಇರಬಹುದು. ಇಲ್ಲದೇ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತ ಹೆಣ್ಣುಮಗಳೊಟ್ಟಿಗೆ ಮಣ್ಣಲ್ಲಿ ಮಣ್ಣಾಗಿರಬಹುದು.

ಇದನ್ನೆಲ್ಲಾ ನಿತ್ಯ ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ, ಓದುತ್ತಿದ್ದೇವೆ, ಬರೆಯುತ್ತಿದ್ದೇವೆ, ಮಾತನಾಡುತ್ತಿದ್ದೇವೆ. ಆದರೆ ಇಂದಿಗೂ ಸಮಾಜ ಎಳ್ಳಷ್ಟೂ ಬದಲಾಗಿಲ್ಲ. ಮುಂದಿನ ದಿನಗಳಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನಲಾಗುತ್ತಿದೆ. ಆಗ ಅಸ್ಪಶ್ಯರ ಕತೆ ಏನಾಗುತ್ತದೆ? ಮಹಿಳೆಯರು, ನೊಂದವರು, ಶೋಷಿತ ವರ್ಗದವರು, ತುಳಿತಕ್ಕೊಳಪಟ್ಟವರ ಬದುಕು ಏನಾಗುತ್ತದೆ? ಇದು ಅಸ್ಪಶ್ಯತೆಯನ್ನು ಒಡಲಲ್ಲಿಟ್ಟುಕೊಂಡೇ ಹಿಂದೂ ರಾಷ್ಟ್ರ ಮಾಡುವ ಹುನ್ನಾರವೇ? ಅಸ್ಪಶ್ಯತೆ ಹಿಂದೂ ಧರ್ಮದ ವಜ್ರಕವಚವೇ? ಈ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಅಸ್ಪಶ್ಯತೆ ಜೀವಂತವಾಗಿರುವುದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಹೋರಾಡಿ ಹುತಾತ್ಮರಾದ ಹೋರಾಟಗಾರರ ಹಾಗೂ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷ ಬಾಬಾ ಸಾಹೇಬರ ಕನಸು ಭಾರತ ಸಮಾನತೆಯ ಭ್ರಾತೃತ್ವದ ದೇಶವಾಗಬೇಕೆಂದಿತ್ತು. ಮಹನೀಯರೆಲ್ಲರ ಹೋರಾಟ ದಾಸ್ಯದಿಂದ ಮುಕ್ತವಾಗುವುದೇ ಅಲ್ಲದೆ ಸಂವಿಧಾನದ ಆಶಯ ಸಾರ್ವಭೌಮ ಸ್ವತಂತ್ರ ಭಾರತದಲ್ಲಿ ಸಮಾನತೆಯೇ ಮೂಲ ಮಂತ್ರವಾಗುವ ಆಶಯವನ್ನಿಟ್ಟುಕೊಂಡಿದ್ದರು. ಅದು ಈಗಲೂ ಕ್ರಿಯಾಶೀಲವಾಗಿ ಚಲನೆಯಲ್ಲಿದೆ. ಅದು ಜಡವಾಗುವ ಮತ್ತು ಧರ್ಮದ ದೇಶವಾಗುವ ಆಶಯವನ್ನು ಹೊಂದಿರಲಿಲ್ಲ ಎನ್ನುವುದನ್ನು ಎಲ್ಲರೂ ಅರಿಯುವುದು ಒಳ್ಳೆಯದು.

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X