Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೆಲದನಿ
  5. ಮಮತಾ ಜೊತೆ ಕೈ ಜೋಡಿಸಲು ಕಾಂಗ್ರೆಸ್...

ಮಮತಾ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಹಿಂದೇಟು!

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ24 Sept 2026 10:09 AM IST
share
ಮಮತಾ ಜೊತೆ ಕೈ ಜೋಡಿಸಲು ಕಾಂಗ್ರೆಸ್ ಹಿಂದೇಟು!

ಮಮತಾ ಎಲ್ಲಿಂದ ಹೊರಟಿದ್ದರೋ ಅಲ್ಲಿಗೇ ಬಂದು ನಿಂತಿದ್ದಾರೆ. ಆದರೆ, ಒಂದೇ ವ್ಯತ್ಯಾಸ. ಆಗ ಪೂರ್ಣ ಜೋಶ್‌ನಿಂದ ಕಾಂಗ್ರೆಸ್ ತೊರೆದಿದ್ದರು. ಈಗ ಅಸಹಾಯಕ ಸ್ಥಿತಿಯಲ್ಲಿ ತಮ್ಮ ಹಳೇ ಪಕ್ಷದತ್ತ ನೋಡುತ್ತಿದ್ದಾರೆ. ಅವರ ಅಸಹಾಯಕತೆಯನ್ನು ಬೇರೆ ಬೇರೆ ರೀತಿ ವ್ಯಾಖ್ಯಾನಿಸಲಾಗುತ್ತಿದೆ. ‘ಕಾಂಗ್ರೆಸ್‌ನೊಳಗೆ ಟಿಎಂಸಿ ವಿಲೀನಗೊಳಿಸುವ ಮೊದಲ ಹೆಜ್ಜೆ’ ಎಂದು ಅನೇಕರು ಭಾವಿಸಿದ್ದಾರೆ. ರಾಜಕೀಯ ವಲಯದಲ್ಲಿ ಅದೇ ಮಾತುಗಳಿವೆ. ಆದರೆ, ‘ಗ್ರೌಂಡ್ ರಿಯಾಲಿಟಿ’ ಬೇರೆಯೇ ಇದೆ.

ಮಮತಾ ಬ್ಯಾನರ್ಜಿ 2001ರ ಆಗಸ್ಟ್ 24ರಂದು ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ್ದ ಸಂದರ್ಶನದಲ್ಲಿ, ‘ಟಿಎಂಸಿಗೆ ಸಹಜವಾಗಿ ಬಿಜೆಪಿ ಮಿತ್ರ ಪಕ್ಷ’ ಎಂದಿದ್ದರು. ವಾಜಪೇಯಿ ಅವರ ನಾಯಕತ್ವದ ಕಾರಣಕ್ಕೆ ಬಿಜೆಪಿ ಬೆಂಬಲಿಸುವುದಾಗಿ ಪ್ರತಿಪಾದಿಸಿದ್ದರು. ರಾಜಕೀಯವಾಗಿ ತಮಗೆ ಕಡು ವೈರಿಯಾಗಿರುವ ಎಡ ಪಕ್ಷಗಳೊಂದಿಗೆ ಸ್ನೇಹದಿಂದಿರುವ ಕಾಂಗ್ರೆಸ್ ಜತೆ ಮೈತ್ರಿ ಸಾಧ್ಯವಿಲ್ಲ ಎಂದು ಖಡಕ್ ಆಗಿ ಮಾತಾಡಿದ್ದರು. ಇದಕ್ಕೆ ನಾಲ್ಕು ವರ್ಷಗಳ ಮೊದಲು ಕಾಂಗ್ರೆಸ್ ವಿರುದ್ಧ ಬಂಡೆದ್ದು, 1998ರ ಜನವರಿಯಲ್ಲಿ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ (ಎಐಟಿಸಿ)ಪಕ್ಷ ಕಟ್ಟಿದ ಮಾಜಿ ಮುಖ್ಯಮಂತ್ರಿ, 28 ವರ್ಷಗಳ ಬಳಿಕ ಪಕ್ಷ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ.

ಯಾವ ಪಕ್ಷದ ವಿರುದ್ಧ ತಿರುಗಿಬಿದ್ದು ಮಮತಾ ಬ್ಯಾನರ್ಜಿ ಹೊರ ಬಂದಿದ್ದಾರೋ ಅದೇ ಪಕ್ಷದ ನಾಯಕರ ಮನೆ ಕದ ತಟ್ಟುತ್ತಿದ್ದಾರೆ. ಈಗವರಿಗೆ ಕಾಂಗ್ರೆಸ್ ಮಿತ್ರ ಪಕ್ಷವಾಗಿ ಕಾಣುತ್ತಿದೆ. ರಾಜಕೀಯವೇ ಹೀಗೆ. ಯಾವಾಗ ಯಾರು ಮಿತ್ರರಾಗುವರೋ, ಯಾವಾಗ ಯಾರು ಶತ್ರುಗಳಾಗುವರೋ ಎಂದು ಹೇಳುವುದು ಕಷ್ಟ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟುತ್ತಿರುವುದು ಇದೇ ಮೊದಲಲ್ಲ. 2001 ಮತ್ತು 2009ರಲ್ಲೂ ತಟ್ಟಿದ್ದರು. 2009ರ ಲೋಕಸಭೆ ಚುನಾವಣೆ ಬಳಿಕ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವನ್ನು ಬೆಂಬಲಿಸಿದ್ದರು. ಮೂರೇ ವರ್ಷದಲ್ಲಿ ‘ಹನಿಮೂನ್ ಪಿರಿಯಡ್’ ಮುಗಿಸಿ, ಮೈತ್ರಿ ತೊರೆದಿದ್ದರು.

ಮಮತಾ ಎಲ್ಲಿಂದ ಹೊರಟಿದ್ದರೋ ಅಲ್ಲಿಗೇ ಬಂದು ನಿಂತಿದ್ದಾರೆ. ಆದರೆ, ಒಂದೇ ವ್ಯತ್ಯಾಸ. ಆಗ ಪೂರ್ಣ ಜೋಶ್‌ನಿಂದ ಕಾಂಗ್ರೆಸ್ ತೊರೆದಿದ್ದರು. ಈಗ ಅಸಹಾಯಕ ಸ್ಥಿತಿಯಲ್ಲಿ ತಮ್ಮ ಹಳೇ ಪಕ್ಷದತ್ತ ನೋಡುತ್ತಿದ್ದಾರೆ. ಅವರ ಅಸಹಾಯಕತೆಯನ್ನು ಬೇರೆ ಬೇರೆ ರೀತಿ ವ್ಯಾಖ್ಯಾನಿಸಲಾಗುತ್ತಿದೆ. ‘ಕಾಂಗ್ರೆಸ್‌ನೊಳಗೆ ಟಿಎಂಸಿ ವಿಲೀನಗೊಳಿಸುವ ಮೊದಲ ಹೆಜ್ಜೆ’ ಎಂದು ಅನೇಕರು ಭಾವಿಸಿದ್ದಾರೆ. ರಾಜಕೀಯ ವಲಯದಲ್ಲಿ ಅದೇ ಮಾತುಗಳಿವೆ. ಆದರೆ, ‘ಗ್ರೌಂಡ್ ರಿಯಾಲಿಟಿ’ ಬೇರೆಯೇ ಇದೆ.

ಟಿಎಂಸಿ ನಾಯಕಿ ಸುಲಭವಾಗಿ ಸೋಲೋಪ್ಪಿಕೊಳ್ಳುವವರಲ್ಲ. ಅವರ ರಾಜಕೀಯ ಹೋರಾಟ ಗಮನಿಸಿದವರು ದಿಢೀರನೆ ಇಂಥ ತೀರ್ಮಾನಕ್ಕೆ ಬರಲಾರರು. ಪಶ್ಚಿಮ ಬಂಗಾಳದಲ್ಲಿ ಮೂರೂವರೆ ದಶಕ ಆಡಳಿತ ನಡೆಸಿದ್ದ ಸಿಪಿಎಂ ನೇತೃತ್ವದ ಎಡರಂಗದ ಕೋಟೆ ಛಿದ್ರ ಮಾಡಲು 23 ವರ್ಷ ಏಕಾಂಗಿ ಹೋರಾಟ ನಡೆಸಿದ ‘ಸ್ಟ್ರೀಟ್ ಫೈಟರ್’ ಕಥೆ ವಿಧಾನಸಭೆ ಚುನಾವಣೆ ಸೋತ ಬಳಿಕ ಮುಗಿದೇ ಹೋಯಿತು ಎಂದು ಬಂಬಡ ಬಾರಿಸುವುದರಲ್ಲಿ ಅರ್ಥವಿಲ್ಲ. ಚುನಾವಣೆ ಸೋತಿದ್ದಾರೆ ನಿಜ. ಅದು ಹೀನಾಯ ಸೋಲಲ್ಲ. ಬಿಜೆಪಿ ಮತ್ತು ಟಿಎಂಸಿ ನಡುವಿನ ಮತಗಳ ಅಂತರ ಬಹಳ ಕಡಿಮೆ. ಬಿದ್ದ ಮತಗಳೂ ಸೀಟುಗಳಾಗಿ ಪರಿವರ್ತನೆ ಆಗಿಲ್ಲ. ವಿಧಾನಸಭೆ ಒಟ್ಟು ಸದಸ್ಯ ಬಲ 294. ಬಿಜೆಪಿ ಗೆದ್ದಿದ್ದು 207, ಟಿಎಂಸಿಗೆ ಸಿಕ್ಕಿದ್ದು 80. ಮತಗಳ ಅಂತರ ಶೇ. 5.04. ಸಂಖ್ಯೆಯಲ್ಲಿ ಹೇಳುವುದಾದರೆ, ಬಿಜೆಪಿಗೆ 2.92 ಕೋಟಿ. ಟಿಎಂಸಿಗೆ 2.60 ಕೋಟಿ ಮತಗಳು ಬಿದ್ದಿವೆ. 32 ಲಕ್ಷ ಮತಗಳ ವ್ಯತ್ಯಾಸದಲ್ಲಿ ಮಮತಾಗೆ ನಷ್ಟ ಆಗಿದ್ದು 127 ಸ್ಥಾನ. ಪ್ರತ್ಯೇಕವಾಗಿ ಕಣದಲ್ಲಿದ್ದ ಸಿಪಿಎಂ ಮತ್ತು ಕಾಂಗ್ರೆಸ್ ಪಡೆದ ಮತಗಳು 47ಲಕ್ಷಕ್ಕೂ ಹೆಚ್ಚು. ಎಸ್‌ಐಆರ್ ನೆಪದಲ್ಲಿ ಚುನಾವಣಾ ಆಯೋಗ ಕೈಬಿಟ್ಟಿದ್ದು ಹೆಚ್ಚುಕಡಿಮೆ ಒಂದು ಕೋಟಿ ಮತಗಳು. ಈ ಕಾರಣಕ್ಕೆ ಮಮತಾ ಅವರದ್ದು ಹೀನಾಯ ಸೋಲು ಎಂದು ಹೇಳಲಾಗದು.

ಚುನಾವಣೆ ಬಳಿಕ ಮಮತಾ ಹೆದರಿದ್ದಾರೆ. ಅವರು ಹೆದರಿರುವುದು ಚುನಾವಣೆ ಸೋಲಿಗಲ್ಲ. ಪಕ್ಷ ಒಡೆದಿದ್ದರಿಂದ. ಮಮತಾರ ನಾಮಬಲದ ಮೇಲೆ ಗೆದ್ದಿರುವ 60 ಶಾಸಕರು ಪಕ್ಷ ಬಿಟ್ಟು, ಸಡ್ಡು ಹೊಡೆದಿದ್ದಾರೆ. ಸಾಲದಕ್ಕೆ, ಅಕ್ಟೋಬರ್ 6ರಂದು ನಡೆಯುವ ಉಪ ಚುನಾವಣೆಯಲ್ಲಿ ನಂದಿಗ್ರಾಮದ ಟಿಎಂಸಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿದ್ದಾರೆ. ರೇಜಿನಗರದ ಟಿಎಂಸಿ ಅಭ್ಯರ್ಥಿ ಮನವೊಲಿಕೆ ಬಳಿಕ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಈ ಚುನಾವಣೆ ಸಮಯದಲ್ಲೇ ಆಯೋಗ ಪಕ್ಷದ ಹೆಸರು ಮತ್ತು ಚಿಹ್ನೆ ಜಪ್ತಿ ಮಾಡಿದೆ. ನ್ಯಾಯಕ್ಕಾಗಿ ಮಾಜಿ ಮುಖ್ಯಮಂತ್ರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗೆ ಒಂದರ ಹಿಂದೆ ಒಂದರಂತೆ ಏಟು ಬಿದ್ದರೆ ಎದೆ ಎಷ್ಟೇ ಗಟ್ಟಿಯಿದ್ದರೂ ಭಯ ಬೀಳುವುದು ಸ್ವಾಭಾವಿಕ. ಇಂಥ ಅಸಹಾಯಕ ಸ್ಥಿತಿಯಲ್ಲಿ ಸಹಾಯಕ್ಕಾಗಿ ಕಾಂಗ್ರೆಸ್ ಪಕ್ಷದ ಕಡೆ ನೋಡುತ್ತಿದ್ದಾರೆ.

ಮಮತಾ ಅಧಿಕಾರಕ್ಕೆ ಬಂದಿದ್ದು 2011ರಲ್ಲಿ. ಸಿಪಿಎಂ ನೇತೃತ್ವದ ಎಡರಂಗ ಸರಕಾರದ 34 ವರ್ಷದ ಆಳ್ವಿಕೆಗೆ ಅವರು ಕೊನೆ ಹಾಡಿದ್ದರು. ಅಲ್ಲಿಂದ ವಿಧಾನಸಭೆಯ 4 ಚುನಾವಣೆ ಎದುರಿಸಿದ್ದಾರೆ. ಮೊದಲೆರಡು ಚುನಾವಣೆಯಲ್ಲಿ ಗುದ್ದಾಡಿದ್ದು ಎಡರಂಗದ ವಿರುದ್ಧ. ಬಳಿಕದ ಎರಡು ಚುನಾವಣೆಯಲ್ಲಿ ಸೆಣೆಸಿದ್ದು ಬಿಜೆಪಿ ವಿರುದ್ಧ. 15 ವರ್ಷದಲ್ಲಿ ಎಡರಂಗ, ಕಾಂಗ್ರೆಸ್ ಜಾಗವನ್ನು ಬಿಜೆಪಿ ಅತಿಕ್ರಮಿಸಿದೆ. ಅದರ ಬಲ ಶೂನ್ಯದಿಂದ 207ಕ್ಕೆ ಏರಿದೆ. ಸಿಪಿಎಂ ಶಕ್ತಿ 62ರಿಂದ ಬರೀ ಒಂದು ಸ್ಥಾನಕ್ಕೆ ಕುಸಿದಿದೆ. ಕಾಂಗ್ರೆಸ್ ಪಕ್ಷದ ಸಾಮರ್ಥ್ಯವೂ ಅಷ್ಟೇ 42 ಸ್ಥಾನದಿಂದ 2ಕ್ಕೆ ಇಳಿದಿದೆ. ಈ ಪಕ್ಷಗಳ ಮತಗಳು ಎಲ್ಲಿವೆ ಎಂದು ಹುಡುಕುವ ಅಗತ್ಯವಿಲ್ಲ. ಅಂಕಿಅಂಶ ನೋಡಿದರೆ ಬಿಜೆಪಿಗೆ ವರ್ಗಾವಣೆ ಆಗಿರುವುದು ಗೊತ್ತಾಗುತ್ತದೆ. ಸಿಪಿಎಂ ಹಿರಿಯ ಮುಖಂಡ ಜ್ಯೋತಿ ಬಸು ಅವರ 23 ವರ್ಷದ ಆಡಳಿತ, ಬುದ್ಧದೇವ್ ಭಟ್ಟಾಚಾರ್ಯ ಅವರ 11 ವರ್ಷದ ಆಡಳಿತದಲ್ಲಿ ಕಟ್ಟಿದ್ದ ಎಡರಂಗ ‘ಸಾಮ್ಯಾಜ್ಯ’ ಸುಲಭವಾಗಿ ಬಿಜೆಪಿ ವಶವಾಗಿದೆ. ಎಡ ಪಕ್ಷಗಳ ತತ್ವ-ಸಿದ್ಧಾಂತಕ್ಕೆ ವಿರುದ್ಧವಾಗಿ ಕಾರ್ಯಕರ್ತರು ಮುನ್ನಡೆದಿದ್ದಾರೆ. ಪಕ್ಷ ನಿಷ್ಠೆ, ಬದ್ಧತೆ, ಸೈದ್ಧಾಂತಿಕ ಸ್ಪಷ್ಟತೆಗೆ ತಿಲಾಂಜಲಿ ಕೊಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವ ಏಕೈಕ ಕಾರಣಕ್ಕೆ ತತ್ವ-ಸಿದ್ಧಾಂತ ಬಲಿ ಕೊಟ್ಟಿದ್ದಾರೆ. ಎಡ ಪಕ್ಷಗಳ ನಾಯಕರ ಇಷ್ಟು ವರ್ಷಗಳ ಶ್ರಮ ವ್ಯರ್ಥವಾಗಿದೆ.

ಹಾಗೆ ನೋಡಿದರೆ, ಮಮತಾ ಅವರ ಪಕ್ಷದ ರಾಜಕೀಯ ಬಲ ಇನ್ನೂ ಕುಗ್ಗಿಲ್ಲ. ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಬಡವರ ಮತಗಳು ಚದುರಿದ್ದರೂ ಪೂರ್ಣ ಕೈಬಿಟ್ಟಿಲ್ಲ. ಆದರೆ, ಮುಂದಿನ ಚುನಾವಣೆಗೆ ಸದೃಢವಾಗಿ ಪಕ್ಷ ಕಟ್ಟುವ ಶಕ್ತಿ ಅವರಿಗಿದ್ದಂತಿಲ್ಲ. ಏಕೆಂದರೆ, ಅವರಿಗೆ 71 ವರ್ಷ. 2029ರ ಲೋಕಸಭೆ ಚುನಾವಣೆ ಹೊತ್ತಿಗೆ 75ರ ಸಮೀಪ ಇರುತ್ತಾರೆ. 2031ರ ವಿಧಾನಸಭೆ ಚುನಾವಣೆಗೆ 77 ಆಗಲಿದೆ. ಇಷ್ಟು ವರ್ಷ ಓಡಾಡುವ ಶಕ್ತಿ ಇತ್ತು. ಇನ್ಮುಂದೆ ಕಷ್ಟ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದತ್ತ ಮಮತಾ ಚಿತ್ತ ಹೊರಳಿದಂತಿದೆ. ಅಷ್ಟೇ ಅಲ್ಲದೆ, ‘ಇಂಡಿಯಾ ಬ್ಲಾಕ್’ ಬಲಪಡಿಸುವ ಮಾತೂ ಆಡಿದ್ದಾರೆ.

ಮಮತಾ ಸ್ನೇಹ ಹಸ್ತ ಚಾಚಿದರೂ ಅವರ ಕೈ ಹಿಡಿಯಲು ಕಾಂಗ್ರೆಸ್ ನಾಯಕರು ಸಿದ್ಧವಿಲ್ಲ. ಹಳೇ ರಾಜಕೀಯ ದ್ವೇಷ ಮರೆತಿಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕರು ಮಮತಾ ಅವರ ಜತೆ ಹೋಗಲು ಮನಸ್ಸು ಮಾಡಿದಂತಿಲ್ಲ. ಹೈಕಮಾಂಡ್ ನಾಯಕರು ತಮ್ಮ ನಾಯಕರ ಅಭಿಪ್ರಾಯವನ್ನೇ ನೆಚ್ಚಿಕೊಳ್ಳುವುದು. ಚುನಾವಣೆಯಲ್ಲಿ ಮಣ್ಣು ಮುಕ್ಕಿದರೂ ವಿರೋಧ ಪಕ್ಷಗಳು ಪಾಠ ಕಲಿತಿಲ್ಲ. ಸ್ವಪ್ರತಿಷ್ಠೆ-ಅಹಂಕಾರ, ಸ್ವಾರ್ಥದಿಂದ ಈ ಪಕ್ಷಗಳ ನಾಯಕರ ಕಣ್ಣುಗಳಿಗೆ ಪೊರೆ ಬಂದಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೂ ತಮ್ಮ ಸುತ್ತಮುತ್ತಲಿರುವ ನಾಯಕರ ಮಾತನ್ನೇ ಕೇಳುವುದು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇರುವ ವ್ಯತ್ಯಾಸ ಇದೇ. ಬಿಜೆಪಿ ನಂಬರ್ 1 ಮತ್ತು ನಂಬರ್ 2 ನಾಯಕರ ಬೆರಳ ತುದಿಯಲ್ಲಿ ಎಲ್ಲ ಮಾಹಿತಿ ಇರುತ್ತದೆ. ಕಾಂಗ್ರೆಸ್ ಅದಕ್ಕೆ ತದ್ವಿರುದ್ಧ. ಆ ಪಕ್ಷ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಲು ಸಲಹೆಗಾರರು ಕೊಟ್ಟ ವರದಿಗಳೇ ಕಾರಣ. ಹೈಕಮಾಂಡ್ ಮುಂದೆ ಅವರು ವಾಸ್ತವ ಬಿಚ್ಚಿಡುವುದಿಲ್ಲ. ತಮಗೆ ಬೇಕಾದ ಮಾಹಿತಿಯನ್ನಷ್ಟೇ ಕೊಡುವುದು. ಎಲ್ಲಿವರೆಗೆ ಗಾಂಧಿ ಕುಟುಂಬ ರಾಜ್ಯಗಳ ಮೇಲೆ ನೇರ ನಿಗಾ ಇಡುವುದಿಲ್ಲವೋ ಅಲ್ಲಿವರೆಗೂ ಇದೇ ಸ್ಥಿತಿ.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಎಲ್ಲ ರಾಜ್ಯಗಳಲ್ಲೂ ನೆಲೆ ಇದ್ದರೂ 2014ರ ಬಳಿಕ ಹಿನ್ನಡೆ ಅನುಭವಿಸಿದ್ದೇ ಹೆಚ್ಚು. ಅಧಿಕಾರದಲ್ಲಿ ಇರುವುದು ಕರ್ನಾಟಕ, ಕೇರಳಂ, ತೆಲಂಗಾಣ, ಹಿಮಾಚಲದಲ್ಲಿ ಮಾತ್ರ. ಅಸ್ಸಾಂ, ಮಣಿಪುರ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ, ಹರ್ಯಾಣ, ಮಹಾರಾಷ್ಟ್ರ, ದಿಲ್ಲಿ, ಪಂಜಾಬ್, ಬಿಹಾರ ಮತ್ತಿತರ ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದೆ. ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಜಾರ್ಖಂಡ್‌ನಲ್ಲಿ ಜೆಎಂಎಂ, ತಮಿಳುನಾಡಲ್ಲಿ ಟಿವಿಕೆ ಜತೆಗೂಡಿ ಅಧಿಕಾರ ಹಂಚಿಕೊಂಡಿದ್ದರೂ, ಹಿರಿಯಣ್ಣನ ಚಾಳಿ ಬಿಟ್ಟಿಲ್ಲ. ಪ್ರಾದೇಶಿಕ ಪಕ್ಷಗಳನ್ನು ಜತೆಗೆ ಕರೆದುಕೊಂಡು ಹೋಗುವ ಹೃದಯವಂತಿಕೆ ಇಲ್ಲ. ‘ಸ್ವಂತ ಬಲದ ಮೇಲೆ ಗೆಲ್ಲುತ್ತೇವೆ’ ಎನ್ನುವ ಭ್ರಮೆಯಲ್ಲಿ ಪಕ್ಷದ ನಾಯಕರಿದ್ದಾರೆ. ಇದಕ್ಕೆ ಉದಾಹರಣೆ ಪಶ್ಚಿಮ ಬಂಗಾಳ. ಟಿಎಂಸಿ ಜತೆ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ಕೈಜೋಡಿಸಿದ್ದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದಿತ್ತೇನೊ. ಒಂದು ಚಾನ್ಸ್ ತೆಗೆದುಕೊಳ್ಳಬಹುದಿತ್ತು. ವಿಪರ್ಯಾಸವೆಂದರೆ, ‘ಇಂಡಿಯಾ’ ಮೈತ್ರಿ ಕೂಟದ ಮಿತ್ರರೇ ಪರಸ್ಪರ ಎದುರಾಳಿಗಳಾದರು. ಎಲ್ಲರೂ ನೆಲ ಕಚ್ಚಿದರು. ಇನ್ನು ಮುಂದಾದರೂ ವಿರೋಧ ಪಕ್ಷಗಳು ಈ ನಿಟ್ಟಿನಲ್ಲಿ ಆಲೋಚಿಸುವ ಅಗತ್ಯವಿದೆ.

ಕಡೆಯದಾಗಿ, ಟಿಎಂಸಿ ಬಂಗಾಳದ ಉಪ ಚುನಾವಣೆಯಿಂದ ದೂರ ಉಳಿಯಬಹುದಿತ್ತು. ಸಾಮಾನ್ಯವಾಗಿ ಉಪ ಚುನಾವಣೆಗಳಲ್ಲಿ ಅಧಿಕಾರ ಹಿಡಿದಿರುವ ಪಕ್ಷವೇ ಗೆಲ್ಲುವುದು. ಅದಕ್ಕೆ ಸಂಪನ್ಮೂಲ ಸೇರಿದಂತೆ ಎಲ್ಲ ಅನುಕೂಲವಿರುತ್ತದೆ. ಎದುರಾಳಿಗಳು ಆಡಳಿತ ಪಕ್ಷಕ್ಕೆ ಸಮಾನ ಪೈಪೋಟಿ ಕೊಡುವುದು ಕಷ್ಟ. ಹೀಗಾಗಿ, ರೇಜಿನಗರ ಕ್ಷೇತ್ರದ ಗೆಲುವು ಮಮತಾಗೆ ಸವಾಲು.

(ಅಂಕಣಕಾರರು ಹಿರಿಯ ಪತ್ರಕರ್ತರು)

Tags

Mamata BanerjeCongress
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X