Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೆಲದನಿ
  5. ಮರೆಯಲಾಗದ ‘ಜಂತರ್ ಮಂತರ್’

ಮರೆಯಲಾಗದ ‘ಜಂತರ್ ಮಂತರ್’

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ15 Oct 2026 12:15 PM IST
share
ಮರೆಯಲಾಗದ ‘ಜಂತರ್ ಮಂತರ್’

‘ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ’ದ ವಿರುದ್ಧ ದಿನಗಟ್ಟಲೆ ಹೋರಾಟ ನಡೆದಿದ್ದೂ ಇಲ್ಲೇ. ಅದೆಷ್ಟು ಶಾಲಾ-ಕಾಲೇಜು ಮಕ್ಕಳು, ಯುವಜನರು ಪಾಲ್ಗೊಂಡಿದ್ದರು. ಮಹಿಳಾ ಕುಸ್ತಿ ಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಅವರು ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದೂ ಇಲ್ಲೇ. ನ್ಯಾಯಕ್ಕಾಗಿ ಅವರು ತಿಂಗಳುಗಟ್ಟಲೆ ಕಣ್ಣೀರು ಹಾಕಿದರು. ಹೈದರಾಬಾದ್ ಸೆಂಟ್ರಲ್ ವಿವಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ವಿರುದ್ಧದ ವಿದ್ಯಾರ್ಥಿಗಳ ಹೋರಾಟ; ಮಾಜಿ ಸೈನಿಕರ ‘ಒಆರ್‌ಒಪಿ’ ಬೇಡಿಕೆ ಪ್ರತಿಧ್ವನಿಸಿದ್ದೂ ಇಲ್ಲೇ. ಇಂಥ ಜಂತರ್ ಮಂತರ್ ಜನರಿಂದ ದೂರವಾಗುತ್ತಿದೆ. ಅದನ್ನು ಪ್ರಶ್ನಿಸಿದವರನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತಿದೆ.

ನಾನು ದಿಲ್ಲಿ ಬಿಟ್ಟುಬಂದು ಹತ್ತು ವರ್ಷ ಕಳೆದಿದೆ. ಈ ಅವಧಿಯಲ್ಲಿ ಬೇಕಾದಷ್ಟು ಮಿಸ್ ಮಾಡಿಕೊಂಡಿದ್ದೇನೆ. ಅತ್ತ ಮನಸ್ಸು ಹೊರಳಿದಾಗ ನೆನಪುಗಳ ಮೆರವಣಿಗೆ ಹಾದುಹೋಗುತ್ತವೆ. 2009ರ ಮೇ ಅಂತ್ಯಕ್ಕೆ ‘ಪ್ರಜಾವಾಣಿ’ ದಿಲ್ಲಿ ವರದಿಗಾರನಾಗಿ ವರ್ಗವಾದಾಗ ಮನಸ್ಸಿಲ್ಲದೇ ಹೋಗಿದ್ದೆ. ಅಲ್ಲಿ ಕೆಲಸ ಮಾಡುವ ಅವಕಾಶ ತಪ್ಪಿಸಿಕೊಳ್ಳುವಂತಿರಲಿಲ್ಲ. ಪತ್ರಕರ್ತರ ಬದುಕಲ್ಲಿ ಅದೊಂದು ದೊಡ್ಡ ಅವಕಾಶ.

ದಿಲ್ಲಿಗೆ ಹೋದಾಗ ಹಿಂದಿ ಬರುತ್ತಿರಲಿಲ್ಲ. ಈಗಲೂ ಬರುವುದಿಲ್ಲ. ‘ಮ್ಯಾನೇಜ್’ ಮಾಡಬಹುದಷ್ಟೇ. ಆದರೂ ಕೆಲವೇ ತಿಂಗಳಲ್ಲಿ ಅಲ್ಲಿಯವನೇ ಆಗಿದ್ದೆ. ಅಲ್ಲಿ ನೆಲೆಯೂರಲು ಉಮಾಪತಿ, ದಿನೇಶ್ ಅಮಿನ್ ಮಟ್ಟು, ಅಜಿತ್ ಅತ್ರಾಡಿ, ಬಿ.ಎಸ್. ಅರುಣ್, ಮುರಳೀಧರ ನಾಯಕ್, ಚಂದ್ರಮೋಹನ್ ಮತ್ತಿತರ ಗೆಳೆಯರು ಸಹಕರಿಸಿದರು. ದಿಲ್ಲಿ ಎಷ್ಟು ಒಗ್ಗಿತ್ತೆಂದರೆ ವಾಪಸ್ ಬರಲು ಕಷ್ಟವಾಯಿತು. ‘ಬರಬೇಡ ಅಲ್ಲೇ ಇದ್ದುಬಿಡು’ ಎಂದು ಮಿತ್ರ ಉದಯಕುಮಾರ್ ಒತ್ತಾಯಿಸಿದ್ದ. ದಿಲ್ಲಿ ಒಮ್ಮೆ ಹಚ್ಚಿಕೊಂಡರೆ ಬಿಡುವುದಿಲ್ಲ. ಅಲ್ಲಿನ ಪರಿಸರವೇ ಹಾಗೆ. ನಾನು ಓಡಾಡುತ್ತಿದ್ದ ಮಾರ್ಗದ ಡಿಟಿಸಿ ಬಸ್ಸುಗಳ ಡ್ರೈವರ್, ಕಂಡಕ್ಟರ್, ಸೈಕಲ್ ರಿಕ್ಷಾ ತುಳಿಯುವವರು, ಟ್ಯಾಕ್ಸಿ ಚಾಲಕರು, ಬೇರೆ ರಾಜ್ಯಗಳಿಂದ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಕೆಲವು ಐಎಎಸ್ ಅಧಿಕಾರಿಗಳು, ರಾಜಕಾರಣಿಗಳು ಮಿತ್ರರಾಗಿದ್ದರು. ಹರಕುಮುರುಕು ಹಿಂದಿ ಸಹಿಸಿಕೊಳ್ಳುತ್ತಿದ್ದರು. ಜನರೊಟ್ಟಿಗಷ್ಟೇ ಅಲ್ಲ, ಅಲ್ಲಿನ ಸ್ಥಳಗಳೊಂದಿಗೂ ಭಾವನಾತ್ಮಕ ಸಂಬಂಧ ಬೆಳೆದಿತ್ತು. ‘ಜಂತರ್ ಮಂತರ್’ ಕೂಡಾ ಹೃದಯಕ್ಕೆ ಹತ್ತಿರವಾಗಿತ್ತು.

ದಿಲ್ಲಿಯ ಆಯಕಟ್ಟಿನ ಸ್ಥಳದಲ್ಲಿ (ರಫಿ ಮಾರ್ಗ್) ನಮ್ಮ ಕಚೇರಿ. ಅದು ‘ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ’(ಐಎನ್‌ಎಸ್) ಬಿಲ್ಡಿಂಗ್. ಬಹುತೇಕ ಪತ್ರಿಕೆಗಳ ಕಚೇರಿ ಇರುವುದು ಅಲ್ಲೇ. ಈ ಬಿಲ್ಡಿಂಗ್ ಬಲಕ್ಕೆ ಶ್ರಮಶಕ್ತಿ ಭವನ, ಎಡಕ್ಕೆ ರಿಸರ್ವ್ ಬ್ಯಾಂಕ್, ಎದುರು ಕಾನ್‌ಸ್ಟಿಟ್ಯೂಷನ್ ಕ್ಲಬ್, ಹಿಂಬದಿ ಗೇಟ್ ಬಳಿ ಪಿಟಿಐ ಸುದ್ದಿ ಸಂಸ್ಥೆ, ಅದರ ಎದುರು ಆಕಾಶವಾಣಿ ಕೇಂದ್ರ, ಕೂಗಳತೆ ದೂರದಲ್ಲಿ ಸಂಸತ್ ಭವನ, ಅದಕ್ಕೆ ಹೊಂದಿಕೊಂಡಂತೆ ರೈಲ್ವೆ ಭವನ, ಸಮೀಪದಲ್ಲಿ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಹಿಂದೆಯೇ ಶಾಸ್ತ್ರಿ ಭವನ. ಒಂದಕ್ಕೊಂದು ಪೋಣಿಸಿದಂತೆ. ಈಚೆಗೆ ಕೆಲವು ಹಳೆ ಕಟ್ಟಡಗಳ ಜಾಗದಲ್ಲಿ ಹೊಸ ಕಟ್ಟಡಗಳು ಎದ್ದಿವೆ. ಬೆಂಗಳೂರಿಗೆ ಹಿಂದಿರುಗಿದ ಬಳಿಕ ಮತ್ತೆ ದಿಲ್ಲಿಯತ್ತ ತಿರುಗಿ ನೋಡಿಲ್ಲ.

ಐಎನ್‌ಎಸ್ ಮುಂದಿನ ಗೇಟ್‌ನಿಂದ ಹೊರಬಂದು ಎಡಕ್ಕೆ ಹೊರಳಿದರೆ ಪಟೇಲ್ ಚೌಕ್ ಮೆಟ್ರೋ ಸ್ಟೇಷನ್. ಈ ಸ್ಟೇಷನ್ ದಾಟಿಕೊಂಡು ಕಾಲು ದಾರಿಯಲ್ಲಿ ಕನಾಟ್ ಪ್ಲೇಸ್‌ನತ್ತ ಹೆಜ್ಜೆ ಹಾಕಿದರೆ ನಡುವೆ ಸಿಗುವುದೇ ಜಂತರ್ ಮಂತರ್. ಐಎನ್‌ಎಸ್ ಮುಂದೆ ನಿಂತು ಗಟ್ಟಿಯಾಗಿ ಕೂಗಿದರೆ ಜಂತರ್ ಮಂತರ್‌ಗೆ ಕೇಳುತ್ತದೆ. ಜಂತರ್ ಮಂತರ್ ಸೊಗಸಾದ ಹೆಸರು. ಜೈಪುರದ ಮಹಾರಾಜ ಸವಾಯಿ ಜೈಸಿಂಗ್-II ಕಟ್ಟಿಸಿದ್ದು. ಖಗೋಳ ಶಾಸ್ತ್ರಜ್ಞನಾಗಿದ್ದ ಆತ ಖಗೋಳ ಅಧ್ಯಯನಕ್ಕೆ ವೀಕ್ಷಣಾಲಯ ಮಾಡಿದ್ದ ಎಂದು ಇತಿಹಾಸ ಹೇಳುತ್ತದೆ.

ನಾನು ಅಲ್ಲಿದ್ದ ಏಳು ವರ್ಷಗಳಲ್ಲಿ ಜಂತರ್ ಮಂತರ್‌ಗೆ ಅದೆಷ್ಟು ಪ್ರದಕ್ಷಿಣೆ ಹಾಕಿದ್ದೇನೊ. ಅದೆಷ್ಟು ಪ್ರತಿಭಟನೆ, ಧರಣಿಗಳನ್ನು ನೋಡಿದ್ದೇನೊ ಲೆಕ್ಕವಿಲ್ಲ. ಜಂತರ್ ಮಂತರ್ 1993ರಲ್ಲಿ ಧರಣಿ-ಪ್ರತಿಭಟನೆಗಳ ಕೇಂದ್ರವಾಯಿತು. ಇದಕ್ಕೂ ಹಿಂದೆ, ‘ಬೋಟ್ ಕ್ಲಬ್’ ಚಳವಳಿಗಳ ‘ಎಪಿಕ್ ಸೆಂಟರ್’. ಅಕ್ಟೋಬರ್ 12ರಂದು ಗೃಹ ಸಚಿವಾಲಯ ಜಂತರ್ ಮಂತರ್‌ನಲ್ಲಿ ಚಳವಳಿ ನಡೆಸದಂತೆ ಆದೇಶ ಹೊರಡಿಸಿದೆ. ಬದಲಿಗೆ, ರಾಮಲೀಲಾ ಮೈದಾನ, ಬುರಾಡಿ ಮೈದಾನ ಮತ್ತು ಸಿಬಿಡಿ ಮೈದಾನ ಸೇರಿ ಮೂರು ಸ್ಥಳಗಳನ್ನು ನಿಗದಿಪಡಿಸಿದೆ. ರಾಮಲೀಲಾ ಮೈದಾನ ಬಿಟ್ಟರೆ ಉಳಿದೆರಡು ಸ್ಥಳಗಳು ಬಲು ದೂರ. ಉದ್ದೇಶಪೂರ್ವಕವಾಗಿ ಈ ಸ್ಥಳ ಗುರುತಿಸಿರಬಹುದು. ಪ್ರತಿಭಟಿಸುವ ಹಕ್ಕುಗಳನ್ನು ಪರೋಕ್ಷವಾಗಿ ಕಸಿಯುವ ಹುನ್ನಾರವಿರಬಹುದು. ಹಾದಿ ದೂರವಾದರೆ ಪ್ರತಿಭಟನಾ ದನಿಯೂ ಕ್ಷೀಣಿಸಬಹುದೆಂಬ ಲೆಕ್ಕಾಚಾರ ಇರಬಹುದು.

ಪ್ರಧಾನಿ ಕಚೇರಿ, ಸಂಸತ್ ಭವನಕ್ಕೆ (ಸೀಟ್ ಆಫ್ ಪವರ್) ಸಮೀಪವಿರುವ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಯದಿದ್ದರೆ ಬಿಕೋ ಎನ್ನುತ್ತದೆ. ಅದು ವೈಭವ ಕಳೆದುಕೊಳ್ಳುತ್ತದೆ. ಸರಕಾರಕ್ಕೆ ಬೇಕಿರುವುದೂ ಅದೇ. ತಲೆ ಕೆಡದ ವಾತಾವರಣ. ಈಗ ಈ ಪರಿಸರ ಪೊಲೀಸರು, ವಿದ್ಯಾರ್ಥಿಗಳು, ಯುವಜನರಿಂದ ರಣರಣಿಸುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2017ರಲ್ಲಿ ಜಂತರ್ ಮಂತರ್‌ನಲ್ಲಿ ಚಳವಳಿಗಳನ್ನು ನಿರ್ಬಂಧಿಸಿತ್ತು. ಆನಂತರ ಸುಪ್ರೀಂ ಕೋರ್ಟ್, ‘ಸಂಪೂರ್ಣವಾಗಿ ಪ್ರತಿಭಟನೆ ನಿರ್ಬಂಧಿಸಲಾಗದು’ ಎಂದು ಮರು ವರ್ಷವೇ ಸಾರಿತು. ಇಲ್ಲಿಯವರೆಗೆ ಅಲ್ಲಿ ಬೇಕಾದಷ್ಟು ಚಳವಳಿಗಳು ನಡೆದಿವೆ. ದೇಶದ ಬೇರೆ ಬೇರೆ ಭಾಗಗಳಲ್ಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಡಾ. ಮನಮೋಹನ್ ಸಿಂಗ್ ಸರಕಾರ ಪತನಗೊಂಡು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲು ಕಾರಣವಾದ ‘ಭ್ರಷ್ಟಾಚಾರ ವಿರೋಧಿ ಆಂದೋಲನ’ ಆರಂಭವಾಗಿದ್ದೇ ಇಲ್ಲಿ. ಬಳಿಕ ರಾಮಲೀಲಾ ಮೈದಾನಕ್ಕೆ ಸ್ಥಳಾಂತರವಾಯಿತು. ಈ ಚಳವಳಿ ಬೆನ್ನಲ್ಲೇ ‘ಆಮ್ ಆದ್ಮಿ ಪಕ್ಷ’ (ಎಎಪಿ) ಹುಟ್ಟು ಪಡೆದು, ದಿಲ್ಲಿಯಲ್ಲಿ ಅಧಿಕಾರಕ್ಕೇರಿದ್ದು. ಅದೀಗ ಮುಗಿದ ಅಧ್ಯಾಯ. ಆದರೆ, ಆ ಚಳವಳಿ ಹತ್ತಿಕ್ಕಲು ಯುಪಿಎ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಅದರ ರಾಜಕೀಯ ಪರಿಣಾಮಗಳನ್ನು ಅರಿಯಲಿಲ್ಲ. ಚಳವಳಿ ಬಳಿಕ ಅಣ್ಣಾ ಹಝಾರೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ದೊಡ್ಡ ಹೋರಾಟ ನಡೆಯುತ್ತಿದ್ದರೂ ಅವರು ತುಟಿ ಬಿಚ್ಚಿಲ್ಲ. ದಿಲ್ಲಿ ಕಡೆ ತಲೆ ಹಾಕಿಲ್ಲ.

‘ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ’ದ ವಿರುದ್ಧ ದಿನಗಟ್ಟಲೆ ಹೋರಾಟ ನಡೆದಿದ್ದೂ ಇಲ್ಲೇ. ಅದೆಷ್ಟು ಶಾಲಾ-ಕಾಲೇಜು ಮಕ್ಕಳು, ಯುವಜನರು ಪಾಲ್ಗೊಂಡಿದ್ದರು. ಮಹಿಳಾ ಕುಸ್ತಿ ಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಅವರು ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದ್ದೂ ಇಲ್ಲೇ. ನ್ಯಾಯಕ್ಕಾಗಿ ಅವರು ತಿಂಗಳುಗಟ್ಟಲೆ ಕಣ್ಣೀರು ಹಾಕಿದರು. ಹೈದರಾಬಾದ್ ಸೆಂಟ್ರಲ್ ವಿವಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣದ ವಿರುದ್ಧದ ವಿದ್ಯಾರ್ಥಿಗಳ ಹೋರಾಟ; ಮಾಜಿ ಸೈನಿಕರ ‘ಒಆರ್‌ಒಪಿ’ ಬೇಡಿಕೆ ಪ್ರತಿಧ್ವನಿಸಿದ್ದೂ ಇಲ್ಲೇ. ಇಂಥ ಜಂತರ್ ಮಂತರ್ ಜನರಿಂದ ದೂರವಾಗುತ್ತಿದೆ. ಅದನ್ನು ಪ್ರಶ್ನಿಸಿದವರನ್ನು ಬಂಧಿಸಿ ಜೈಲಿಗೆ ಕಳಿಸಲಾಗುತ್ತಿದೆ.

ಜಂತರ್ ಮಂತರ್‌ಗೆ ಮೊದಲು ಚಳವಳಿಗಾರರಿಗೆ ಕಂಡಿದ್ದು

ಇಂಡಿಯಾ ಗೇಟ್ ಸಮೀಪದ ಬೋಟ್ ಕ್ಲಬ್. 1998ರ ರೈತ ಚಳವಳಿಯ ‘ಚಂಡ ಮಾರುತ’ಕ್ಕೆ ಸಿಕ್ಕಿ ಆಗಿನ ರಾಜೀವ್ ಗಾಂಧಿ ಸರಕಾರ ನಡುಗಿತು. ರೈತ ನಾಯಕ ಮಹೇಂದ್ರಸಿಂಗ್ ಟಿಕಾಯತ್ ಲಕ್ಷಾಂತರ ಬೆಂಬಲಿಗರ ಜತೆ ಬೋಟ್ ಕ್ಲಬ್‌ನಲ್ಲಿ ಠಿಕಾಣಿ ಹೂಡಿದ್ದರು. ಎಂಟು ಲಕ್ಷ ರೈತರು ಬಂದಿದ್ದರು ಎಂಬ ಅಂದಾಜು. ಆ ದೃಶ್ಯಗಳನ್ನು ಹಳೆಯ ಪತ್ರಿಕೆಗಳಲ್ಲಿ ನೋಡಬೇಕಷ್ಟೆ. ಬಳಿಕ ಭದ್ರತೆ ನೆಪದಲ್ಲಿ ಪ್ರತಿಭಟನೆ ಸ್ಥಳ ಜಂತರ್ ಮಂತರ್‌ಗೆ ಸ್ಥಳಾಂತರವಾಯಿತು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿದ ಚಳವಳಿ; ಈ ತಿಂಗಳ 10ರಿಂದ ಮುಖ್ಯ ಚುನಾವಣಾ ಕಮಿಷನರ್ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಗಳು ಜಂತರ್ ಮಂತರ್ ಸುತ್ತಮುತ್ತಲೇ ಗಿರಕಿ ಹೊಡೆಯುತ್ತಿದೆ. ಆದರೆ, ಪೊಲೀಸರು, ಭದ್ರತಾ ಪಡೆಗಳು ಸುತ್ತುವರಿದಿವೆ. ಜೆನ್ ಝಿಗಳು ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಪೊಲೀಸರು ಬೆನ್ನಟ್ಟಿಕೊಂಡು ಹೋಗಿ ಅವರನ್ನು ಹಿಡಿದು, ಎಳೆದಾಡಿ ವಶಕ್ಕೆ ಪಡೆಯುತ್ತಿದ್ದಾರೆ. ಇದು ಪ್ರತಿನಿತ್ಯದ ಕಸರತ್ತಾಗಿದೆ.

ಐದು ದಶಕಗಳ ಹಿಂದೆ ಆಗಿನ ಪ್ರಧಾನಿ ಇಂದಿರಾಗಾಂಧಿ ರಾತ್ರೋರಾತ್ರಿ ‘ತುರ್ತು ಪರಿಸ್ಥಿತಿ’ ಘೋಷಿಸಿ, ಜನರ ಹಕ್ಕುಗಳನ್ನು ದಮನಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕಿದ್ದರು. ಈಗ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ‘ಅಘೋಷಿತ ತುರ್ತು ಪರಿಸ್ಥಿತಿ’ ಹೇರಿದ್ದಾರೆಂದು ಆರೋಪಿಸಲಾಗುತ್ತಿದೆ. ಇಡೀ ಜಂತರ್ ಮಂತರ್‌ಗೆ ಪೊಲೀಸರು ಬೇಲಿ ಹಾಕಿದ್ದಾರೆ. ಪ್ರತಿಭಟನೆ ಅಡಗಿಸಲು ಯತ್ನಿಸಿದ್ದಾರೆ. ಚಳವಳಿಗಾರರಷ್ಟೇ ಅಲ್ಲ, ಪತ್ರಕರ್ತರನ್ನೂ ಬಂಧಿಸಲಾಗುತ್ತಿದೆ.

ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದರೂ ಕೇಳುತ್ತಿಲ್ಲ. ದೇಶದ ಸಂವಿಧಾನವೂ ಜನರಿಗೆ ಪ್ಪತಿಭಟಿಸುವ ಹಕ್ಕು ಕೊಟ್ಟಿದೆ. ಪ್ರತಿಭಟನೆ ಶಾಂತಿಯುತವಾಗಿರಬೇಕು. ಬೇರೆಯವರ ಹಕ್ಕುಗಳನ್ನು ಹತ್ತಿಕ್ಕಬಾರದು. ಶಾಂತಿಯುತ ಸಭೆಗಳನ್ನು ನಡೆಸಬಹುದು ಎಂದು ಸಂವಿಧಾನ ಹೇಳಿದೆ. ಸದ್ಯ ಅದಕ್ಕೂ ಬೆಲೆ ಇಲ್ಲವಾಗಿದೆ.

ಜೆನ್ ಝಿ ಚಳವಳಿಗೆ ವಿರೋಧ ಪಕ್ಷಗಳು ಬೆಂಬಲಿಸಿವೆ. ಹೋರಾಟ ಒಂದೆಯಾದರೂ ದಾರಿಗಳು ಬೇರೆ. ‘ವೋಟ್ ಚೋರಿ’ ಆರೋಪ ಮೊದಲು ಮಾಡಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ. ಅವರ ಕೂಗಿಗೆ ಸರಕಾರ ಜಗ್ಗಲಿಲ್ಲ. ಈಗ ಜೆನ್ ಝಿಗಳು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಹೋರಾಟ ಪ್ರಬಲವಾಗುವ ಲಕ್ಷಣ ಕಾಣುತ್ತಿದೆ. ಹಾಗಾದರೆ ಧರ್ಮೇಂದ್ರ ಪ್ರಧಾನ್ ಅವರನ್ನು ಹಿಂಬಾಲಿಸುವುದು ಸಿಇಸಿಗೆ ಅನಿವಾರ್ಯ ಆಗಬಹುದು.

(ಅಂಕಣಕಾರರು ಹಿರಿಯ ಪತ್ರಕರ್ತರು)

Tags

Jantar Mantar
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X