Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೆಲದನಿ
  5. ಸರಕಾರಕ್ಕೆ ಸಿಜೆಪಿ ಅಪಥ್ಯವಾಗಿದ್ದು ಏಕೆ?

ಸರಕಾರಕ್ಕೆ ಸಿಜೆಪಿ ಅಪಥ್ಯವಾಗಿದ್ದು ಏಕೆ?

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ5 Nov 2026 10:20 AM IST
share
ಸರಕಾರಕ್ಕೆ ಸಿಜೆಪಿ ಅಪಥ್ಯವಾಗಿದ್ದು ಏಕೆ?

ಸುಪ್ರೀಂ ಕೋರ್ಟ್ ಈಚೆಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಇರಬೇಕೆಂದು ಸೂಚಿಸಿದೆ. ಇನ್ನಾದರೂ ಸರಕಾರ ಜನರ ಪ್ರತಿಭಟನೆ ಹಕ್ಕನ್ನು ಗೌರವಿಸುವುದೇ? ಆ ಮೂಲಕ ಸಂವಿಧಾನ ಮತ್ತು ಕೋರ್ಟ್ ತೀರ್ಪುಗಳಿಗೆ ಮನ್ನಣೆ ನೀಡುವುದೇ? ತನಗಾಗದವರನ್ನು ದಿಮಾಗಿ ನಕ್ಸಲರು ಮತ್ತು ದೇಶ ದ್ರೋಹಿಗಳು ಎಂದು ಬಿಂಬಿಸುವುದನ್ನು ನಿಲ್ಲಿಸುವುದೇ?

ಒಂದೇ ತಿಂಗಳಲ್ಲಿ ಕೇಂದ್ರ ಸರಕಾರದ ನಿಲುವಿನಲ್ಲಿ ಎಷ್ಟೊಂದು ಬದಲಾವಣೆ. ನವೆಂಬರ್ 1ರಂದು ದಿಲ್ಲಿ ಎರಡು ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ‘ಇಂಡಿಯಾ ಬ್ಲಾಕ್’ ಪಾಲುದಾರ ಪಕ್ಷಗಳ ‘ಚಲೋ ದಿಲ್ಲಿ’ ಒಂದೆಡೆ; 1984ರ ಸಿಖ್ ವಿರೋಧಿ ಹಿಂಸಾಚಾರ ಖಂಡಿಸುವ ರ್ಯಾಲಿ ಇನ್ನೊಂದೆಡೆ. ಎರಡೂ ಪ್ರತಿಭಟನೆ ಏಕಕಾಲಕ್ಕೆ ನಡೆದಿದ್ದಕ್ಕೆ ಯಾರ ಆಕ್ಷೇಪವೂ ಇಲ್ಲ. ಈ ಪ್ರತಿಭಟನೆಗಳಿಗೆ ಅನುಮತಿ ಕೊಟ್ಟಿದ್ದು ನ್ಯಾಯಸಮ್ಮತವಾಗಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆ. ಪ್ರಜಾಪ್ರಭುತ್ವ ತತ್ವಗಳಿಗೆ ಅನುಸಾರವಾಗಿದೆ. ಪ್ರಶ್ನೆ ಅದಲ್ಲ, ಸಿಜೆಪಿಗೆ (ಕಾಕ್ರೋಚ್ ಜನತಾ ಪಾರ್ಟಿ)ಈ ಮಾನದಂಡ ಏಕೆ ಅನ್ವಯಿಸಲಿಲ್ಲ? ‘ಜೆನ್ ಝಿ’ಗಳ ವಿಷಯದಲ್ಲಿ ಗೃಹ ಸಚಿವಾಲಯ ಅತೀ ಕಠಿಣವಾಗಿ ವರ್ತಿಸಿದ್ದು ಏಕೆ? ತಾರತಮ್ಯ ಮಾಡಿದ್ದು ಸರಿಯೇ ಎಂಬುದಷ್ಟೇ.

‘ವೋಟ್ ಚೋರಿ’ ಆರೋಪ ಸಂಬಂಧವಾಗಿ ಮುಖ್ಯ ಚುನಾವಣಾ ಕಮಿಷನರ್ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ‘ಇಂಡಿಯಾ ಬ್ಲಾಕ್’ ಮಿತ್ರ ಪಕ್ಷಗಳು ‘ಚಲೋ ದಿಲ್ಲಿ’ ನಡೆಸಿದವು. ಅಂದೇ ಬಿಜೆಪಿ, ‘ಸಿಖ್ ವಿರೋಧಿ ದಂಗೆ’ ಕೆದಕಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಎರಡೂ ಪ್ರತಿಭಟನೆಗೆ ಅವಕಾಶ ಕೊಟ್ಟ ಮೋದಿ, ಅಮಿತ್ ಶಾ ಅವರಿಗೆ ಸಿಜೆಪಿ ಅಪಥ್ಯವಾಗಿದ್ದು ಏಕೆ?

ಸಿಇಸಿ ರಾಜೀನಾಮೆಗೆ ಒತ್ತಾಯಿಸುತ್ತಿರುವ ಸಿಜೆಪಿಗೆ ಅಕ್ಟೋಬರ್ 10ಕ್ಕೆ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಲು ಸರಕಾರ ಅನುಮತಿ ಕೊಡಲಿಲ್ಲ. ಅದು ನಿಜಕ್ಕೂ ವಿಚಿತ್ರ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ಎಂದು ಬೊಗಳೆ ಬಿಡುವ ದೇಶದಲ್ಲಿ ಜೆನ್ ಝಿಗಳ ಪ್ರತಿಭಟನಾ ಹಕ್ಕು ಹತ್ತಿಕ್ಕಿದ್ದು, ಅವರ ದನಿ ಅಡಗಿಸಲು ಮುಂದಾಗಿದ್ದು ಅಕ್ಷಮ್ಯ.

ಪ್ರಜಾಪ್ರಭುತ್ವದಲ್ಲಿ ಪಕ್ಷಾತೀತ ಹೋರಾಟಗಳಿಗೆ ಮಹತ್ವವಿರಬೇಕು. ಯುವಕರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ವರ್ಗಗಳಿಗೆ ಆದ್ಯತೆ ಇರಬೇಕು. ಸಮಸ್ಯೆಗಳನ್ನು ಮುಕ್ತವಾಗಿ ನೋಡುವ ಕಣ್ಣಿರಬೇಕು. ಕೇಳುವ ಕಿವಿ ಇರಬೇಕು. ಸಂಧಾನದ ಬಾಗಿಲು ಸದಾ ತೆರೆದಿರಬೇಕು. ಯುವಜನರು ಹೋರಾಡುತ್ತಿರುವುದು ಜನರ ಹಕ್ಕುಗಳ ಉಳಿವಿಗೆ. ಪ್ರಜಾಪ್ರಭುತ್ವ ರಕ್ಷಣೆಗೆ. ಅದು ಅವರ ಸಾಮಾಜಿಕ ಹೊಣೆ. ಸರಕಾರ ಹೋರಾಟಗಾರರನ್ನು ಚರ್ಚೆಗೆ ಕರೆಯಬೇಕಿತ್ತು. ಅವರ ಮಾತು ಆಲಿಸಬೇಕಿತ್ತು. ಪ್ರಜಾಪ್ರಭುತ್ವ ಏಕಮುಖವಾಗಬಾರದು. ಎಲ್ಲ ವಿಚಾರಗಳಿಗೂ ಮುಕ್ತವಾಗಿರಬೇಕು. ಸರಕಾರ ಅಥವಾ ಆಳುವ ವರ್ಗ ತನ್ನದೇ ಆಚಾರ-ವಿಚಾರಗಳನ್ನು ಜನರ ಮೇಲೆ ಹೇರಿದರೆ ಅದು ಸರ್ವಾಧಿಕಾರ ಆಗುತ್ತದೆ. ಈಗ ನಡೆದಿರುವುದೂ ಅದೇ.

ಜೆನ್ ಝಿಗಳನ್ನು ಮುಚ್ಚಳಿಕೆಯ ಚೌಕಟ್ಟಿನೊಳಗೆ ಕಟ್ಟಿ ಹಾಕಿದರೂ ಪ್ರತಿಭಟನೆಗಳು ನಡೆದಿವೆ. ಅದು ಬೇರೆ ವಿಚಾರ. ಆದರೆ, ಜೆನ್ ಝಿಗಳ ಜತೆ ಪೊಲೀಸರು ಕನಿಷ್ಠ ಸೌಜನ್ಯ ತೋರದೆ ವರ್ತಿಸಿದರು. ಸಂವೇದನೆ ಕಳೆದುಕೊಂಡರು. ರಾಷ್ಟ್ರಧ್ವಜ ಹಿಡಿದಿದ್ದವರ ಮೇಲೆ ಬಲಪ್ರಯೋಗ ಮಾಡಿದರು. ಸಂವಿಧಾನಾತ್ಮಕ ಹಕ್ಕುಗಳನ್ನು ಗೌರವಿಸಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದರೂ ಕಿವಿಗೊಡಲಿಲ್ಲ. ‘ಹೀಗೇಕೆ’ ಎಂಬ ಪ್ರಶ್ನೆಗೆ ಉತ್ತರಿಸಬೇಕಾದ ಸರಕಾರ ಮೌನವಾಗಿದೆ. ತನ್ನ ಮಾತಿಗೆ ಮನ್ನಣೆ ಕೊಡದ ಸರಕಾರದ ನಡೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿದೆ. ಕೋರ್ಟ್ ಕಠಿಣ ಕ್ರಮಕ್ಕೆ ಮುಂದಾದರೆ ನ್ಯಾಯಾಲಯದ ಮೇಲಿನ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಇದು ಈ ಕ್ಷಣದ ತುರ್ತು ಅಗತ್ಯ.

ಜೆನ್ ಝಿಗಳ ಪ್ರತಿಭಟನೆಗೆ ಸರಕಾರ ಹೆದರಿತೇ? ಅದೇ ಕಾರಣಕ್ಕಾಗಿ ಚಳವಳಿಯನ್ನು ಆರಂಭದಲ್ಲೇ ಚಿವುಟಿ ಹಾಕಲು ಮುಂದಾಯಿತೆ? ಈ ಕಾರಣಕ್ಕೆ ಮುಂಬೈನಿಂದ ಬರುತ್ತಿದ್ದ ಸಿಜೆಪಿ ನಾಯಕರನ್ನು ವಿಮಾನದ ಒಳಗೇ ವಶಕ್ಕೆ ಪಡೆಯಲಾಯಿತೆ? ಚಳವಳಿಕಾರರನ್ನು ಭಯಪಡಿಸುವ ತಂತ್ರವಾಗಿಯೇ ಬ್ಯಾರಿಕೇಡ್ ಜಿಗಿದು ಜಂತರ್ ಮಂತರ್‌ಗೆ ನುಗ್ಗಲು ಯತ್ನಿಸಿದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಯಿತೇ? ಭಾರತ ನ್ಯಾಯ ಸಂಹಿತೆ 163ನೇ ಸೆಕ್ಷನ್ ಅಡಿ ಹಾಕಲಾಗಿದ್ದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ ಸಾಧಾರಣ ಆರೋಪಕ್ಕೆ ಒಂದು ವಾರ ಜೈಲಿಗೆ ಕಳಿಸಲಾಯಿತೇ? ಇವೆಲ್ಲ ಪ್ರಶ್ನೆಗಳು ಸಾರ್ವಜನಿಕ ಅಂಗಳದಲ್ಲಿವೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡಿಸಿದ ಸಿಜೆಪಿ ಮತ್ತಿತರ ಸಂಘಟನೆಗಳ ಚಳವಳಿ ತಾರ್ಕಿಕ ಅಂತ್ಯ ಕಂಡಿತು. ಚಳವಳಿ ವ್ಯಾಪಿಸಿದ ರೀತಿಯಿಂದ ಸರಕಾರ ಬೆಚ್ಚಿ ಬಿದ್ದಿದ್ದು ನೂರಕ್ಕೆ ನೂರು ನಿಜ. ಆಗಲೂ ವಿರೋಧ ಪಕ್ಷಗಳು ಪ್ರಧಾನ್ ‘ತಲೆದಂಡ’ಕ್ಕೆ ಪಟ್ಟು ಹಿಡಿದಿದ್ದವು. ಸಂಸತ್ ಕಲಾಪಕ್ಕೆ ಅಡ್ಡಿಪಡಿಸಿದ್ದವು. ಬೀದಿಗಿಳಿದು ಹೋರಾಟ ಮಾಡಿದ್ದವು. ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ. ಜೆನ್ ಝಿಗಳು ದಿಲ್ಲಿ ರಸ್ತೆಗಳನ್ನು ಜಿರಳೆಗಳಂತೆ ಮುತ್ತಿದ ಬಳಿಕ ಭಯ ಬಿದ್ದು ಅನಿವಾರ್ಯವಾಗಿ ರಾಜೀನಾಮೆ ಪಡೆಯಲಾಯಿತು. ಸರಕಾರಕ್ಕೆ ಯುವಜನರು ಕಾಟ ಕೊಟ್ಟರು. ನಿದ್ದೆ ಕೆಡಿಸಿದರು. ನೆಮ್ಮದಿ ಹಾಳು ಮಾಡಿದರು. ಹೀಗಾಗಿ, ಈಗ ಸಿಇಸಿ ವಿರುದ್ಧದ ಚಳವಳಿ ಬಲಿಯುವ ಮೊದಲೇ ಸರಕಾರ ಎಚ್ಚೆತ್ತುಕೊಂಡಿದೆ. ಪ್ರತಿಭಟನೆ ಚಿವುಟಿ ಹಾಕಲು ಬೇರೆ ಬೇರೆ ‘ಗಿಮಿಕ್’ ಬಳಸುತ್ತಿದೆ. ವಿರೋಧ ಪಕ್ಷಗಳ ಹೋರಾಟ ನಿಯಂತ್ರಣ ಸುಲಭ. ಯುವಸಮುದಾಯದ ಹೋರಾಟ ನಿಭಾಯಿಸುವುದು ಕಷ್ಟ. ಇತಿಹಾಸದ ಉದ್ದಕ್ಕೂ ನಡೆದಿರುವ ಚಳವಳಿಗಳೇ ಈ ಮಾತಿಗೆ ನಿದರ್ಶನ.

ಸಿಜೆಪಿ ನಾಯಕರನ್ನು ಹೆದರಿಸುವ ತಂತ್ರವಾಗಿ ‘ಶಾಂತಿ ಕದಡುವುದಿಲ್ಲ. ಕಾನೂನು- ಸುವ್ಯವಸ್ಥೆಗೆ ಭಂಗ ತರುವುದಿಲ್ಲ’ ಎಂಬ ಮುಚ್ಚಳಿಕೆಗಳಿಗೆ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ರಾಂಕಾ ಅವರಿಂದ ಸಹಿ ಹಾಕಿಸಿಕೊಳ್ಳಲಾಗಿದೆ. ಅವರಿಗಿರುವ ವೈಚಾರಿಕ ಸ್ಪಷ್ಟತೆ, ಗಟ್ಟಿಯಾಗಿ ಮಾತಾಡುವ ಧೈರ್ಯ, ಹೋರಾಟದ ಕಿಚ್ಚು, ಬದ್ಧತೆ ಗಮನಿಸಿದರೆ ಭಯ ಬಿದ್ದಿದ್ದಾರೆಂದು ಅನಿಸದು. ಅವರು ನಿಜವಾಗಿ ಹೆದರಿದ್ದರೆ, ‘ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ’ದ ಪ್ರತಿಭಟನೆ ವೇಳೆ ಹಿಂದೆ ಸರಿಯುತ್ತಿದ್ದರು. ಲಾಠಿ ಏಟು, ಜಲ ಫಿರಂಗಿ, ಅಶ್ರುವಾಯು, ಪೆಲೆಟ್ ಗನ್‌ಗಳ ವಿರುದ್ಧ ಸೆಟೆದು ನಿಲ್ಲುತ್ತಿರಲಿಲ್ಲ. ಅಕಸ್ಮಾತ್ ಹೆದರಿದ್ದರೂ ಇನ್ನು ಚಳವಳಿ ನಡೆಯುವುದಿಲ್ಲ ಎಂದು ಭಾವಿಸಬೇಕಿಲ್ಲ. ಏಕೆಂದರೆ, ಯುವಸಮುದಾಯ ಯಾವ ಕಾರಣಕ್ಕೆ ಹೋರಾಟಕ್ಕಿಳಿದರೋ ಅದನ್ನು ಮಾಡಿದ್ದಾರೆ. ದೇಶದಲ್ಲಿ 12 ವರ್ಷಗಳಿಂದಿದ್ದ ‘ಅಘೋಷಿತ ತುರ್ತು ಪರಿಸ್ಥಿತಿ’ಗೆ ಸವಾಲೆಸೆದಿದ್ದಾರೆ. ಉಸಿರು ಕಟ್ಟಿಸುವ ವಾತಾವರಣವನ್ನು ಚಿಂದಿ ಮಾಡಿದ್ದಾರೆ. ಭಯವನ್ನು ಬಡಿದೊಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನೂ ಪ್ರಶ್ನಿಸುವ ಸಂಸ್ಕೃತಿಗೆ ಮುನ್ನುಡಿ ಬರೆದಿದ್ದಾರೆ. ಪ್ರಧಾನ್ ರಾಜೀನಾಮೆ ಮೂಲಕ ಸರಕಾರವನ್ನೇ ಅಲುಗಾಡಿಸಿದ್ದಾರೆ. ಇದರಿಂದ ಬೇರೆಯವರು ಧೈರ್ಯವಾಗಿ ದನಿ ಎತ್ತುತ್ತಿದ್ದಾರೆ.

ಈ ಕಾರಣಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಸಿಜೆಪಿ ನಾಯಕರನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ‘ದಿಮಾಗಿ ನಕ್ಸಲರು’ ಎಂದು ಜರಿಯುತ್ತಿದ್ದಾರೆ. ‘ದಾರಿ ತಪ್ಪಿದವರು’ ಎಂದು ಆರೋಪಿಸುತ್ತಿದ್ದಾರೆ. ಪ್ರಧಾನಿ ಹಾಗೂ ಗೃಹ ಸಚಿವರು ಒಂದು ವಿಷಯ ಮರೆತಂತಿದೆ. ಇದೇ ಯುವ ಸಮುದಾಯ 2014, 2019 ಮತ್ತು 2024ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಬೆಂಬಲಿಸಿದ್ದು. ಅವರಿಂದ ಅಧಿಕಾರಕ್ಕೆ ಬಂದಿದ್ದು.

ಮತದಾನ ಜನರ ಮೂಲಭೂತ ಹಕ್ಕು. ದೇಶದ ಒಟ್ಟು ಮತದಾರರ ಸಂಖ್ಯೆ 97 ಕೋಟಿ. ಅದರಲ್ಲಿ 13 ಕೋಟಿ ಹೆಸರು ತೆಗೆಯಲಾಗಿದೆ. ಕರ್ನಾಟಕದಲ್ಲಿ ತೆಗೆದಿರುವ 99.32 ಲಕ್ಷ ಹೆಸರುಗಳೂ ಸೇರಿದರೆ ಸುಮಾರು 14 ಕೋಟಿ ಆಗಲಿದೆ. ಮತದಾನದ ಹಕ್ಕು ಕಸಿದುಕೊಂಡ ಚುನಾವಣಾ ಆಯೋಗದ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜನರ ಮೂಲಭೂತ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಸಂವಿಧಾನ ರಚನಾ ಸಮಿತಿ ಸಭೆಯಲ್ಲೇ ಪ್ರತಿಭಟನಾ ಹಕ್ಕಿನ ಮೇಲೆ ಸಮಗ್ರ ಚರ್ಚೆ ನಡೆದಿತ್ತು. ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದರು.

‘ಪ್ರತಿಭಟನೆ ಜನರ ಮೂಲಭೂತ ಹಕ್ಕು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ, ಶಾಂತಿಯುತ ಸಭೆಗೆ ಅವಕಾಶವಿರಬೇಕು’ ಎಂಬ ಸಾಮಾನ್ಯವಾದ ಅಭಿಪ್ರಾಯ ವ್ಯಕ್ತವಾಗಿತ್ತು. ‘ದೇಶದ ಏಕತೆ- ಸಮಗ್ರತೆ; ರಾಜ್ಯದ ಸುರಕ್ಷತೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯಾದಾಗ ನ್ಯಾಯಸಮ್ಮತ ನಿರ್ಬಂಧ ಹಾಕಬೇಕು’ ಎಂಬ ನಿಲುವು ವ್ಯಕ್ತವಾಯಿತು. ಆನಂತರ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಯಿತು.

1951ರಲ್ಲಿ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತರಲಾಯಿತು. ಆಗ ಇದಕ್ಕೆ ಅಲ್ಪಸ್ವಲ್ಪ ಬದಲಾವಣೆ ಮಾಡಲಾಯಿತು. ಆದರೆ, ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಯಿತು. ಸಂವಿಧಾನದ ಇದೇ ಆಶಯಗಳಡಿ ವಿವಿಧ ಕೋರ್ಟ್‌ಗಳು ಪ್ರತಿಭಟನಾ ಹಕ್ಕಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿವೆ. ಸುಪ್ರೀಂ ಕೋರ್ಟ್ ಈಚೆಗೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ಇರಬೇಕೆಂದು ಸೂಚಿಸಿದೆ. ಇನ್ನಾದರೂ ಸರಕಾರ ಜನರ ಪ್ರತಿಭಟನೆ ಹಕ್ಕನ್ನು ಗೌರವಿಸುವುದೇ? ಆ ಮೂಲಕ ಸಂವಿಧಾನ ಮತ್ತು ಕೋರ್ಟ್ ತೀರ್ಪುಗಳಿಗೆ ಮನ್ನಣೆ ನೀಡುವುದೇ? ತನಗಾಗದವರನ್ನು ದಿಮಾಗಿ ನಕ್ಸಲರು ಮತ್ತು ದೇಶ ದ್ರೋಹಿಗಳು ಎಂದು ಬಿಂಬಿಸುವುದನ್ನು ನಿಲ್ಲಿಸುವುದೇ?

(ಅಂಕಣಕಾರರು ಹಿರಿಯ ಪತ್ರಕರ್ತರು)

Tags

US Midterm ElectionsUS ElectionsAmerican PoliticsHistoric Election Results
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X