Breaking Kannada News Live: ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಸಿಎಂ ಸೂಚನೆ: ಕೃಷ್ಣಭೈರೇಗೌಡ

Karnataka Kannada News Today Live Updates: ಕರ್ನಾಟಕದಲ್ಲಿನ ರಾಜಕೀಯ, ಹವಾಮಾನ, ಅಪರಾಧ ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಕುರಿತಾದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.
Live Updates
- 9 Jun 2023 3:51 PM IST
Breaking Kannada News Live: ನಾಳೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯರಿಂದ ಕೃತಜ್ಞತಾ ಸಮಾವೇಶ
ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ನಾಳೆ ಮೈಸೂರಿನಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದಾರೆ. ವರುಣ ಕ್ಷೇತ್ರದ ಜನತೆಗೆ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಸಮಾವೇಶ ನಡೆಸಲಿದ್ದಾರೆ. ನಾಳೆ ಬೆಳಗ್ಗೆ 11.30 ಬೆಂಗಳೂರಿನಿಂದ ತೆರಳುವ ಸಿಎಂ ಸಿದ್ದರಾಮಯ್ಯ, ಮಧ್ಯಾಹ್ನ 12.20ಕ್ಕೆ ಸುತ್ತೂರು ಹೆಲಿಪ್ಯಾಡ್ಗೆ ತಲುಪಲಿದ್ದಾರೆ. ಮಧ್ಯಾಹ್ನ 12.35ಕ್ಕೆ ಕೃತಜ್ಞತಾ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ನಂತರ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿ ನಾಳೆ ಸಂಜೆ 4 ಗಂಟೆಗೆ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ. ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೋಡಿ ಜೂ.11ರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
- 9 Jun 2023 3:29 PM IST
Breaking Kannada News Live: ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆರ್ಎಸ್ಎಸ್ ನಾಯಕರದ್ದು ಯಾಕೆ ಓದಬಾರದು?: ಸಿಟಿ ರವಿ ಪ್ರಶ್ನೆ
ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು, ಆರ್ಎಸ್ಎಸ್ ನಾಯಕರದ್ದು ಯಾಕೆ ಓದಬಾರದು? ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ. ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಪಠ್ಯದಿಂದ ಹೊರಹಾಕಬಹುದು, ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ. ಆರ್ಎಸ್ಎಸ್ ವಿಚಾರದಲ್ಲಿ ನೆಹರು, ಇಂದಿರಾ ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್ ನವರನ್ನು ಯಾಕೆ ಅಂಡಮಾನ್ ಜೈಲಿಗೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.
- 9 Jun 2023 3:29 PM IST
Breaking Kannada News Live: ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ: ಸಿಟಿ ರವಿ ಹೊಂದಾಣಿ ರಾಜಕಾರಣದಿಂದ ಬಿಜೆಪಿ ಸೋತಿದೆ
ದೆಹಲಿ: ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿ ರಾಜಕಾರಣದಿಂದ ಬಿಜೆಪಿ ಸೋತಿದೆ. ಈ ನಡೆ ಅನುಸರಿಸದಿದ್ದಿದ್ದರೆ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿ.ಟಿ ರವಿ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.
- 9 Jun 2023 3:29 PM IST
Breaking Kannada News Live: ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣವನ್ನು ಮರುತನಿಖೆ ನಡೆಸಲು ಮುಂದಾದ ರಾಜ್ಯ ಸರ್ಕಾರ
ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣವನ್ನು ಮರುತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಮನ್ವಯ ಇರುವುದರಿಂದ ತನಿಖೆ ಮಾಡಬೇಕಿದೆ. ಈ ಹಿಂದಿನ ಸರ್ಕಾರ ತನಿಖೆಗೆ ಕೆಲವರನ್ನು ನೇಮಕ ಮಾಡಿತ್ತು. ಆದರೆ ಆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ ನಮ್ಮ ಹೊಸ ಸರ್ಕಾರ ಬಂದಿರುವುದರಿಂದ ಮರು ತನಿಖೆಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದೇನೆ. ಅದಕ್ಕೆ ಡಿಪಿಆರ್ ಕೂಡ ಸಿದ್ಧವಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
- 9 Jun 2023 3:28 PM IST
Breaking Kannada News Live: ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಸಿಎಂ ಸೂಚನೆ: ಕೃಷ್ಣಭೈರೇಗೌಡ
ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾಗಿ ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಲು ಸೂಚಿಸದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿಯಿಂದ ಜಮೀನು ನೀಡಿದ್ದಾರೆ. ತರಾತುರಿಯ ತೀರ್ಮಾನಗಳ ಬಗ್ಗೆ ಮರು ಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.
- 9 Jun 2023 3:27 PM IST
Breaking Kannada News Live: ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ: ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ: ಶಾಲಾ ಪಠ್ಯ ಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಉಡುಪಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸರ್ಕಾರ ಯಾವಾಗಲೂ ವ್ಯಕ್ತಿಗಳ ಆಧಾರದಲ್ಲಿ ನಡೆಯುವುದಿಲ್ಲ. ಶಾಸನದ ಆಧಾರದಲ್ಲಿ ಸರ್ಕಾರ ನಡೆಯುವುದು. ಸರ್ಕಾರ ಪರಿಶೀಲನೆ ಮಾಡದೆ ಪಠ್ಯ ಬದಲು ಮಾಡುವುದು ಸರಿಯಲ್ಲ. ಬನ್ನಂಜೆ ಗೋವಿಂದಾಚಾರ್ಯರ ಪಾಠ ಹಿಂಪಡೆದಿದ್ದು ಖಂಡನಾರ್ಹ, 2009ರಲ್ಲಿ ಯುಪಿಎ ಸರ್ಕಾರ ಬನ್ನಂಜೆ ಅವರಿಗೆ ಪದ್ಮಶ್ರೀ ನೀಡಿತ್ತು. ಹೆಡ್ಗೆವಾರ್ ಪಾಠವನ್ನು ಸರ್ಕಾರ ವಾಪಸ್ ಪಡೆಯುವುದಾಗಿ ಹೇಳಿದೆ. ಚಕ್ರವರ್ತಿ ಸೂಲಿಬೆಲೆ ಪಾಠ ವಾಪಸ್ ಪಡೆಯುವುದಾಗಿ ಹೇಳುತ್ತಿದ್ದಾರೆ. ವೈಚಾರಿಕ ವಿಚಾರದ ಮೇಲೆ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಎಲ್ಲ ಬೆಳವಣಿಗೆಗಳನ್ನೂ ಬಿಜೆಪಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಮನವರಿಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
- 9 Jun 2023 3:27 PM IST
Breaking Kannada News Live: ಮಂಗಳೂರಿನ ಸಮುದ್ರ ತೀರಕ್ಕೆ ಹೋಗದಂತೆ ಪ್ರವಾಸಿಗರಿಗೆ ಸೂಚನೆ
ಮಂಗಳೂರು: ಬಿಪರ್ಜಾಯ್ ಚಂಡಮಾರುತದ ಆತಂಕ ಹಿನ್ನೆಲೆ ಮಂಗಳೂರಿನ ಸಮುದ್ರ ತೀರಕ್ಕೆ ಹೋಗದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ. ಉಳ್ಳಾಲ ಕಡಲ ತೀರದಲ್ಲಿ ಭಾರೀ ವೇಗವಾಗಿ ಗಾಳಿ ಬೀಸುತ್ತಿದೆ. ಭಾರೀ ಗಾಳಿಯ ಕಾರಣಕ್ಕೆ ಬೀಚ್ಗಳ ಬಳಿಯ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
- 9 Jun 2023 3:25 PM IST
Breaking Kannada News Live: ವೀಕೆಂಡ್ ಶಾಕ್, ಜೂ9ರಿಂದ 11ರವರೆಗೆ ಪವರ್ ಕಟ್
ಬೆಂಗಳೂರು: ಜೂನ್ 9ರಿಂದ 11ರ ವರೆಗೆ 3 ದಿನಗಳ ಕಾಲ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ತಿಳಿಸಿದೆ. ಇನ್ನು ಜೂನ್ 9ರಿಂದ ಜೂ.11ರ ವರೆಗೆ ಯಾವೆಲ್ಲ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎನ್ನುವ ವಿವರ ಈ ಕೆಳಗಿನಂತಿದೆ.
ಜೂ9ರಿಂದ 11ರವರೆಗೆ ವಿದ್ಯುತ್ ವ್ಯತ್ಯಯ: ಎಲ್ಲೆಲ್ಲೆ?
- 9 Jun 2023 3:24 PM IST
Breaking Kannada News Live: ಆಸ್ತಿ ವಿವರ ಸಲ್ಲಿಸುವಂತೆ ಕರ್ನಾಟಕದ 224 ಶಾಸಕರಿಗೂ ಡೆಡ್ಲೈನ್
ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲಾ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಡೆಡ್ಲೈನ್ ನೀಡಿದ್ದಾರೆ.
- 9 Jun 2023 3:24 PM IST
Breaking Kannada News Live: ಬೆಂಗಳೂರಿನ ಭಾರತ್ ಇನ್ಫ್ರಾ ಕಂಪನಿ ಮೇಲೆ ಇಡಿ ರೇಡ್
ಬೆಂಗಳೂರು: ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ ಬೆಂಗಳೂರು ಹಾಗೂ ದಾವಣಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ. ಜೂನ್ 7ರಂದು ಇಡಿ ಈ ರೇಡ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.






