Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಕ್ಷಿಪ್ರಿಯರ ನೆಚ್ಚಿನ ತಾಣವಾದ ಹೊಸಕೋಟೆ...

ಪಕ್ಷಿಪ್ರಿಯರ ನೆಚ್ಚಿನ ತಾಣವಾದ ಹೊಸಕೋಟೆ ಕೆರೆ

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.29 Sept 2025 2:56 PM IST
share
ಪಕ್ಷಿಪ್ರಿಯರ ನೆಚ್ಚಿನ ತಾಣವಾದ ಹೊಸಕೋಟೆ ಕೆರೆ
ದೊಡ್ಡ ಅಮಾನಿಕೆರೆ ದಂಡೆಯಲ್ಲಿ ರಾಜಹಂಸ ಹಕ್ಕಿಗಳ ಕಲರವ

ಹೊಸಕೋಟೆ: ‘ಹೊಸಕೋಟೆ ಕೆರೆ’ಯು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಪ್ರಮುಖ ಕೆರೆಯಾಗಿದೆ. ಇದು ಪಕ್ಷಿ ಪ್ರಿಯರ ನೆಚ್ಚಿನ ತಾಣವಾಗಿದೆ. ಈ ಕೆರೆಯು ಸುಮಾರು 808 ಎಕರೆ ವಿಸ್ತೀರ್ಣ ಹೊಂದಿದೆ.

ಕೆರೆಯ ವಿಸ್ತೀರ್ಣ ಮತ್ತು ಉತ್ತಮ ಪರಿಸರದಿಂದಾಗಿ ಕೊಕ್ಕರೆಗಳಂತಹ ಸ್ಥಳೀಯ ಪಕ್ಷಿಗಳು ಮಾತ್ರವಲ್ಲದೆ ಯುರೋಪಿಯನ್ ದೇಶಗಳಲ್ಲಿ ಕಂಡುಬರುವ ಫ್ಲೆಮಿಂಗೊಗಳು ಸಹ ವಲಸೆ ಬಂದು ಒಂದು ಅಥವಾ ಎರಡು ತಿಂಗಳು ಇಲ್ಲಿಯೇ ಇದ್ದು ಹಿಂತಿರುಗುತ್ತವೆ.

ದಕ್ಷಿಣ ಪಿನಾಕಿನಿ ನದಿಯೆಂದೇ ಹೆಸರಾಗಿರುವ ದೊಡ್ಡ ಅಮಾನಿಕೆರೆ ದಂಡೆಯಲ್ಲಿ ಪಕ್ಷಿಪ್ರಿಯರ ದಂಡು ದಿನೇ ದಿನೇ ಹೆಚ್ಚುತ್ತಿವೆೆ. ಪಕ್ಷಿಗಳ ಕಲರವ ಕಣ್ತುಂಬಿಕೊಳ್ಳಲು ಬರುವ ಸಾವಿರಾರು ಪಕ್ಷಿ ಪ್ರಿಯರಿಂದ ಕೆರೆ ಅಂಗಳ ತುಂಬಿ ತುಳುಕುತ್ತಿದೆ.

ವಾರಾಂತದಲ್ಲಿ ಪಕ್ಷಿ ಪ್ರಿಯರು ಮುಗಿಬೀಳುವುದು ಸಾಮಾನ್ಯವಾಗಿದೆ. ಪಕ್ಷಿಗಳ ತರಹೇವಾರಿ ಫೋಟೊ ತೆಗೆಯಲು ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ಮೈಮರೆಯುತ್ತಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿರುವ ಅಮಾನಿ ದೊಡ್ಡಕೆರೆಯಲ್ಲಿ ರವಿವಾರ ಬಂತೆಂದರೆ ಪಕ್ಷಿ ವೀಕ್ಷಣೆಗೆ ಜನಸಾಗರವೇ ಹರಿದುಬಂದಿದ್ದೇ ಇದಕ್ಕೆ ಸಾಕ್ಷಿ.

ನಗರ, ಗ್ರಾಮಾಂತರ ಪ್ರದೇಶ ಹಾಗೂ ದೂರದ ಊರುಗಳಿಂದ ವೀಕ್ಷಣೆಗೆ ಪಕ್ಷಿ ಪ್ರಿಯರು ಮುಂಜಾನೆಯೇ ಕೆರೆ ಅಂಗಳದಲ್ಲಿ ಬೀಡುಬಿಡುತ್ತಾರೆ. ಈ ದೃಶ್ಯ ಯಾವುದೋ ಜಾತ್ರೆ ನಡೆಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.

ದಶಕಗಳ ಹಿಂದೆ ನಂದಿಬೆಟ್ಟದ ತಪ್ಪಲಲ್ಲಿ ದಕ್ಷಿಣ ಪಿನಾಕಿನಿ ನದಿ ಹುಟ್ಟಿ ದೇವನಹಳ್ಳಿ ಹೊಸಕೋಟೆ ಮೂಲಕ ತಮಿಳುನಾಡಿಗೆ ಹರಿಯುತ್ತಿತ್ತು. (1985ರಲ್ಲಿ ಕೊನೆಯ ಬಾರಿಗೆ ಕೆರೆ ತುಂಬಿತ್ತು ಎನ್ನಲಾಗಿದೆ. ಆ ಸಂದರ್ಭದಲ್ಲಿ ದೊಡ್ಡ ಅಮಾನಿಕೆರೆಯಲ್ಲಿ ಹೊಸಕೋಟೆ ಸೇರಿ ಸುತ್ತಮುತ್ತಲ ಗ್ರಾಮದ ಜನರು ತೆಪ್ಪೋತ್ಸವ ಹಾಗೂ ದೀಪೋತ್ಸವ ನೆರವೇರಿಸಿದ್ದರು ಎನ್ನಲಾಗಿದೆ.) ಇತ್ತೀಚಿಗೆ ಬರಗಾಲದಿಂದ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಶೇಖರಣೆಯಾಗಿ ಕೆರೆ ಬತ್ತಿದಂತಿದೆ.

ಕೆಲವು ವರ್ಷಗಳ ಹಿಂದೆ ಎಲೆ ಮಲ್ಲಪ್ಪ ಕೆರೆಯಿಂದ ಏತ ನೀರಾವರಿ ಯೋಜನೆ ಮೂಲಕ ದೊಡ್ಡ ಅಮಾನಿ ಕೆರೆಗೆ ನೀರು ಹಾಯಿಸುವ ಯೋಜನೆ ಶುರುವಾದ ಬಳಿಕ ಈ ಕೆರೆಯಲ್ಲಿ ಮತ್ತೆ ನೀರಿನ ನೆಲೆ ಕಾಣಿಸಿಕೊಂಡಿತು. ಪರಿಣಾಮ ಮೀನುಗಾರಿಕೆಗೂ ಶುಕ್ರದೆಸೆ ಆರಂಭವಾಯಿತು. ಇದರಿಂದಾಗಿ ವಿದೇಶಿ ಪಕ್ಷಿಗಳು ಸಂತಾನೋತ್ಪತಿಗಾಗಿ ಈ ಭಾಗಕ್ಕೆ ದೌಡಾಯಿಸತೊಡಗಿದವು. 230ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳು ವಾತಾವರಣಕ್ಕೆ ಅನುಗುಣವಾಗಿ ಬರುತ್ತಿವೆ.

ವಾರಾಂತ್ಯದ ಪಿಕ್‌ನಿಕ್ ಸ್ಪಾಟ್: ಕಳೆಗುಂದಿದ್ದ ದೊಡ್ಡ ಅಮಾನಿಕೆರೆಗೀಗ ಜೀವಕಳೆ ಮರುಕಳಿಸಿದೆ. ಇದು ವಾರಾಂತ್ಯದ ಪಿಕ್‌ನಿಕ್ ಸ್ಪಾಟ್ ಆಗಿದೆ. ಕೆರೆ ನೀರಿನಲ್ಲಿ ವಿಹರಿಸುತ್ತಿರುವ ಪಕ್ಷಿಗಳನ್ನು ಕಣುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಸರಕಾರ ಮತ್ತಷ್ಟು ಕಾಳಜಿವಹಿಸಿ ಕೆರೆ ಅಭಿವೃದ್ಧಿಪಡಿಸಿದರೆ ಇದಕ್ಕೆ ಐತಿಹಾಸಿಕ ಮಹತ್ವ ದೊರೆಯಲಿದೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಪಕ್ಷಿಪ್ರಿಯರು ಸರಕಾರಕ್ಕೆ ಜನಪ್ರತಿನಿಧಿಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

230ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು

ಹೊಸಕೋಟೆ ಕೆರೆಯಲ್ಲಿ ಸದ್ಯ 230ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿ ಕಂಡುಬರುತ್ತಿವೆ. 2020ರಲ್ಲಿ ಮೊದಲ ಬಾರಿಗೆ ರಾಜಹಂಸ ಪಕ್ಷಿಗಳು ಠಿಕಾಣಿ ಹೂಡಿದ್ದವು. ಇದರಿಂದ ಈ ಭಾಗದಲ್ಲಿ ಪಕ್ಷಿ ಪ್ರಿಯರ ದಂಡೇ ಹಂಸಗಳನ್ನು ವೀಕ್ಷಿಸುತ್ತಿತ್ತು. ಈಗಲೂ ವಾರಾಂತ್ಯದಲ್ಲಿ ನೂರಾರು ಪಕ್ಷಿ ಪ್ರಿಯರು ಪಕ್ಷಿಗಳ ಪೋಟೊ ಕ್ಲಿಕ್ಕಿಸಲು ಬೆಳಗ್ಗೆ 6ರಿಂದಲೇ ಇಲ್ಲಿಗೆ ಬರುತ್ತಾರೆ.

ಸಂತಾನೋತ್ಪತ್ತಿಗೆ ಆಗಮನ

ಬೆಂಗಳೂರು ಗ್ರಾಮಾಂತರದಲ್ಲಿ ಯಾವುದೇ ಪಕ್ಷಿಧಾಮಗಳಿಲ್ಲ, ಆದರೆ ಇಲ್ಲಿನ ಕೆರೆಗಳಿಗೆ ಚಳಿಗಾಲದಲ್ಲಿ ವಿದೇಶಿ ಹಕ್ಕಿಗಳು ಬರುತ್ತವೆ. ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಕೆರೆಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಸ್ವಚ್ಛತೆಗೂ ಹೆಚ್ಚಿನ ಒತ್ತು ನೀಡಬೇಕು. ಗುಜರಾತ್‌ನಲ್ಲಿ ಗೋಚರಿಸುತ್ತಿದ್ದ ರಾಜಹಂಸ ಪಕ್ಷಿಗಳು ಇದೀಗ ಸ್ಥಳ ಬದಲಾಯಿಸಿ ಸಂತಾನೋತ್ಪತ್ತಿಗಾಗಿ ಸೂಕ್ತ ಜಾಗದ ಹುಡುಕಾಟ ನಡೆಸಿವೆ. ಶಾಂತಾ ವಾತಾವರಣ ಅರಸಿಕೊಂಡು ವಲಸೆ ಹೋಗುವುದು ಸಾಮಾನ್ಯ ಎಂದು ಪಕ್ಷಿ ತಜ್ಞರು ತಿಳಿಸಿದ್ದಾರೆ.

ಕಾಡು ಬೆಕ್ಕಿನಂತಹ ಮಾಂಸಹಾರಿ ಪ್ರಾಣಿಗಳು ಈ ಪ್ರದೇಶದಲ್ಲಿವೆ ಎಂದರೆ ಅವುಗಳಿಗೆ ಸಾಕಷ್ಟು ಆಹಾರ ದೊರೆಯುತ್ತಿರುವುದರ ಸೂಚನೆ ಇದಾಗಿದೆ. ಜತೆಗೆ ಆ ಪ್ರಾಣಿಗಳ ವಾಸಕ್ಕೆ ಯೋಗ್ಯ ಪ್ರದೇಶ ಇದು ಎಂದು ಹೇಳಬಹುದು. ಇಂತಹ ಪ್ರದೇಶವನ್ನು ಅಭಿವೃದ್ಧಿಪಡಿಸುವುದರಿಂದ ಸಾಕಷ್ಟು ಅನುಕೂಲಗಳಾಗುತ್ತವೆ.

-ಮಂಜು ಹೊಸಕೋಟೆ, ಪರಿಸರ ಪ್ರೇಮಿ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X