Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿವಿಧತೆಯಲ್ಲಿ ಏಕತೆ ಸಾರುವ ಬೀದರ್

ವಿವಿಧತೆಯಲ್ಲಿ ಏಕತೆ ಸಾರುವ ಬೀದರ್

ಡಾ. ಶ್ರೇಯಾ ಯಶಪಾಲ ಮಹಿಂದ್ರಕರ್ಡಾ. ಶ್ರೇಯಾ ಯಶಪಾಲ ಮಹಿಂದ್ರಕರ್17 Jan 2026 2:49 PM IST
share
ವಿವಿಧತೆಯಲ್ಲಿ ಏಕತೆ ಸಾರುವ ಬೀದರ್

ಧಾರ್ಮಿಕ, ಭಾಷಿಕ, ಜನಾಂಗೀಯ ಮತ್ತು ಸಾಂಸ್ಕೃತಿಕ ಭಿನ್ನತೆಗಳಿದ್ದರೂ ನಾವೆಲ್ಲರೂ ಒಂದೇ ಎಂದು ಸಾರುವ ಭಾವನೆಗೆ ಏಕತೆಯನ್ನುಬಹುದು. ಭಾರತದಲ್ಲಿ ಹೇಗೆ ಹಬ್ಬದ ಆಚರಣೆಗಳು, ಉಡುಗೆ ತೊಡುಗೆಗಳು, ಮಾತಾಡುವ ಭಾಷೆಗಳು, ಪಾಲಿಸುವ ಧರ್ಮಗಳು ಬೇರೆ ಬೇರೆ ಇವೆಯೋ ಹಾಗೆಯೇ ಬೀದರ್ ನಲ್ಲಿಯೂ ಈ ಎಲ್ಲಾ ವಿಶೇಷತೆಗಳನ್ನು ಕಾಣಬಹುದು. ಒಂದು ರೀತಿ ಬೀದರನ್ನು ‘ಪುಟ್ಟ ಭಾರತ’ ಎಂದು ಕರೆದರೆ ತಪ್ಪಾಗಲಾರದು.

ಬೀದರ್ ಜಿಲ್ಲೆಯು ಪಕ್ಕದ ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿ ಭಾಗವನ್ನು ಹೊಂದಿದೆ. ಇತ್ತ ಪೂರ್ವಕ್ಕೆ ತೆಲಂಗಾಣದ ನಿಜಾಮಾಬಾದ್ ಮತ್ತು ಮೇದಕ ಜಿಲ್ಲೆಗಳಿವೆ. ಇಲ್ಲಿಯ ಜನರು ತೆಲುಗು ಭಾಷೆಯನ್ನು ಮಾತನಾಡುತ್ತಾರೆ ಮತ್ತು ವ್ಯವಹಾರಿಕ ಭಾಷೆ ಕೂಡ ತೆಲುಗು. ಅತ್ತ ಪಶ್ಚಿಮ ಭಾಗದಲ್ಲಿ ಮಹಾರಾಷ್ಟ್ರದ ಲಾತೂರ, ನಾಂದೇಡ ಮತ್ತು ಉಸ್ಮಾನಾಬಾದ್ ಜಿಲ್ಲೆಗಳಿವೆ. ಇಲ್ಲಿಯ ಜನರು ಹೆಚ್ಚು ಮರಾಠಿ ಭಾಷಿಗರಾಗಿದ್ದಾರೆ. ದಕ್ಷಿಣ ಗಡಿ ಭಾಗಕ್ಕೆ ಹೋದರೆ ಕರ್ನಾಟಕದ ಬಿಸಿಲು ನಾಡು ಕಲಬುರಗಿಯ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಬೀದರಿನ ಕನ್ನಡಕ್ಕೂ, ಕಲಬುರಗಿಯ ಕನ್ನಡಕ್ಕೂ ತುಂಬಾ ವ್ಯತ್ಯಾಸ ಕಾಣಬಹುದು. ಸುತ್ತಲು ಅರಣ್ಯಗಳಿಂದ ಸುತ್ತುವರಿಯಲ್ಪಟ್ಟ ಬೀದರ್ ತಂಪಾದ ಪ್ರದೇಶವಾಗಿದ್ದು, ಹಿತವಾದ ವಾತಾವರಣವನ್ನು ಅನುಭವಿಸಬಹುದು. ಆದರೆ ಕಲಬುರಗಿಯಲ್ಲಿ ಬಿಸಿಲು ನೆತ್ತಿಗೇರಿರುತ್ತದೆ.

ಬೀದರಿನಲ್ಲಿ ಈ ಹಿಂದೆ ಮೌರ್ಯರು,ಶಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ಕಾಕತೀಯರು, ಬಹುಮನಿ ಸುಲ್ತಾನರು, ಬರೀದಶಾಹಿಗಳು, ಮೊಘಲರು ಮತ್ತು ನಿಜಾಮರು ಸೇರಿದಂತೆ ಹಲವಾರು

ರಾಜವಂಶಗಳು ಆಳ್ವಿಕೆ ಮಾಡಿರುವ ಇತಿಹಾಸವನ್ನು ನಾವು ಓದಿದ್ದೇವೆ. ಮೊಘಲರು ಮತ್ತು ನಿಜಾಮರ ಆಡಳಿತದ ಪ್ರಭಾವವನ್ನು ಇಂದಿಗೂ ಬೀದರ್ನಲ್ಲಿ ಕಾಣಬಹುದು. ಉರ್ದು ಭಾಷೆ ಆಗ ಬೀದರಿನಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು ಎಂದು ಇತಿಹಾಸ ಹೇಳುತ್ತದೆ. ಈಗಲೂ ಉರ್ದು ಶಾಲೆಗಳನ್ನು ಮತ್ತು ಉರ್ದು ಭಾಷೆ ಮಾತನಾಡುವ ಜನರನ್ನು ಮತ್ತು ಅಲ್ಲಲ್ಲಿ ಉರ್ದು ಬೋರ್ಡುಗಳನ್ನು ಕಾಣಬಹುದು. ಬೀದರಿನ ಓಲ್ಡ್ ಸಿಟಿ ಅಥವಾ ಹಳೆಯ ಬೀದರಿನಲ್ಲಿ ಹೆಚ್ಚು ಜನ ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡುತ್ತಾರೆ.

ಬೀದರಿನ ಮಹಮ್ಮದ್ ಗವಾನ್ ಮದರಸ ಐತಿಹಾಸಿಕ ಕಟ್ಟಡಗಳಲ್ಲಿ ಒಂದು. ಇದು ಮಿನಾರ್ಗಳು ಮಸೀದಿ, ಗ್ರಂಥಾಲಯ, ಉಪನ್ಯಾಸ ಸಭಾಂಗಣ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ಒಳಗೊಂಡಿತ್ತು. ಇದು ಆಗಿನ ಕಾಲದ ಒಂದು ದೊಡ್ಡ ವಿಶ್ವವಿದ್ಯಾಲಯ. ಇರಾನ್ ಮತ್ತು ಇರಾಕ್ನಿಂದ ಅನೇಕ ವಿದ್ವಾಂಸರು ಬಂದು ಇಲ್ಲಿ ಪ್ರವಚನ ಕೊಡುತ್ತಿದ್ದರು ಮತ್ತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅನ್ಯ ಮುಸ್ಲಿಂ ದೇಶಗಳಿಂದ ಮಕ್ಕಳು ವಿದ್ಯಾಭ್ಯಾಸಕ್ಕೆ ಎಂದು ಇಲ್ಲಿ ಬಂದು ಇಲ್ಲಿಯೇ ಉಳಿದು ತಮ್ಮ ಪರಂಪರೆಯನ್ನು ಕೂಡ ಕೊಡುಗೆಯಾಗಿ ಬಿಟ್ಟು ಹೋಗಿದ್ದಾರೆ. ಹೀಗೆ ಉರ್ದು ಭಾಷೆ ಈಗಲೂ ಪ್ರಚಲಿತ.

ಗುರುದ್ವಾರ ಎಂದರೆ ಇದು ಸಿಕ್ಕಧರ್ಮದವರಿಗೆ ಇರುವಂತಹ ಪವಿತ್ರ ಸ್ಥಳ. ಇದನ್ನು ಗುರುನಾನಕ್ ದೇವರಿಗೆ ಸಮರ್ಪಿಸಲಾಗಿದೆ. ಇವರು ಬೀದರ ಭೇಟಿಗೆ ಬಂದಾಗ ಇಲ್ಲಿ ಬರದ ಛಾಯೆ ಆವರಿಸಿತ್ತು. ನೀರಿಲ್ಲದೆ ಜನರು ಪರದಾಡುವ ಸ್ಥಿತಿ ತಲುಪಿದಾಗ ಗುರುನಾನಕ್ ತಮ್ಮ ಭಕ್ತಿಯ ಶಕ್ತಿಯಿಂದ ಕಾಲಿನಿಂದ ಕಲ್ಲಿನ ಮೇಲೆ ಜೋರಾಗಿ ಒತ್ತಿದಾಗ ನೀರು ಝಲ್ಲೆಂದು ಚಿಮ್ಮಿತು ಎಂದು ಹಿರಿಯರು ಹೇಳುತ್ತಾರೆ. ಅಲ್ಲಿನಿಂದ ಇಲ್ಲಿಯವರೆಗೆ ಬೀದರಿನಲ್ಲಿ ನೀರಿಗೆ ಬರಗಾಲವಿಲ್ಲ ಎಂದು ಪ್ರತೀತಿ ಇದೆ. ಆ ನೀರಿನ ಝರಿಯ ಉದ್ಭವ ಈಗಲೂ ನಿಗೂಢ. ಆದರೂ ಸದಾ ಹರಿಯುವ ಚಿಲುಮೆ ಇದು. ಈ ನೀರು ಸಿಹಿಯಾಗಿದ್ದು ಕುಡಿಯಲು ಯೋಗ್ಯ ಮತ್ತು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಪ್ರತಿ ವರ್ಷ ಗುರುಪೂರ್ಣಿಮೆಗೆ ಪಂಜಾಬಿನಿಂದ ಲಕ್ಷ ಲಕ್ಷ ಜನರು ಬೀದರಿಗೆ ಬಂದು ಗುರುನಾನಕ್ ಅವರ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಿಖ್ ಧರ್ಮದವರ ವಿಶೇಷ ವೇಷ ಭೂಷಣಗಳು ಅವರನ್ನು ವಿಶೇಷವಾಗಿ ಕಾಣುವಂತೆ ಮಾಡುತ್ತವೆ. ಸಿಖ್ ಜನರು ಸಾಂಕೇತಿಕವಾಗಿ ಪೇಟ ಎಂದರೆ ಕೇಶವನ್ನು ಮುಚ್ಚಿ

ಡಲು ಬಳಸುವ ಸಾಧನ ಧರಿಸುತ್ತಾರೆ. ಇವರು ತಮ್ಮ ಕೂದಲನ್ನು ಕತ್ತರಿಸುವುದಿಲ್ಲ. ಮಹಿಳೆಯರೇ ಇರಲಿ ಪುರುಷರೇ ಇರಲಿ ಅವರು ಕೂದಲನ್ನು ಕತ್ತರಿಸಬಾರದು ಎನ್ನುವ ನಿಯಮವಿದೆ. ಆ ಕೂದಲನ್ನು ಮುಚ್ಚಿಡಲು ಗಂಡಸರು ಪೇಟವನ್ನು ಧರಿಸುತ್ತಾರೆ. ಇವರು ಈ ಕೇಶ ರಾಶಿಯನ್ನು ಕ್ರಮಬದ್ಧವಾಗಿಡಲು ಕಂಗಾ/ ಬಾಚಾಣಿಕೆ ಎನ್ನುವ ಸಾಧನವನ್ನು ಬಳಸುತ್ತಾರೆ. ಇವರ ಸೊಂಟಕ್ಕೆ ಯಾವಾಗಲೂ ಕೃಪಾ ಅಥವಾ ಕಿರಪಾನ್ ಎನ್ನುವ ಶಸ್ತ್ರವಿರುತ್ತದೆ. ಇದು ಸಿಕ್ಕಧರ್ಮದ ಸಂಕೇತವು ಹೌದು ಮತ್ತು ಸ್ವರಕ್ಷಣೆಗೆ ಇರುವಂತಹ ಅಸ್ತ್ರ. ಕಚ್ಚೆ ಕೂಡ ಸಿಕ್ಕ ಧರ್ಮದ ಪದ್ಧತಿಯ ಪ್ರಕಾರ ಅವರು ಧರಿಸುವ ಒಂದು ಕೆಳವಸ್ತ್ರ. ಇವರು ಕಡಗವನ್ನು ಕೈಗೆ ಹಾಕಿಕೊಳ್ಳುತ್ತಾರೆ. ಇದು ಅವರ ಶೌರ್ಯದ ಸಂಕೇತ. ಈ ರೀತಿ ಸಿಖ್ ಜನರನ್ನು ಬೀದರಿನಲ್ಲಿ ನಾವು ಸಾಮಾನ್ಯವಾಗಿ ಎಲ್ಲಾ ಕಡೆಯೂ ಕಾಣಬಹುದು. ಹೀಗೆ ಇವರುವಿಶೇಷವಾಗಿಯೂ ವಿಭಿನ್ನವಾಗಿಯೂ ಕಂಡರೂ ಬೀದರಿನ ಜನರೊಂದಿಗೆ ಬೆರತು ಅವರೇ ಸ್ವಂತ ಉದ್ಯೋಗಗಳನ್ನು ಮಾಡಿಕೊಂಡು, ಕೆಲವರು ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಾಲಿರಿಸಿ, ಹೋಟೆಲ್ ಉದ್ಯಮದಲ್ಲೂ ಜಯಗೊಳಿಸಿ, ಬೀದರಿನ ಭಾಗವಾಗಿದ್ದಾರೆ.

ಬೀದರ ಕೂಡ ಯುದ್ಧ ವಿಮಾನಗಳನ್ನು ಹಾರಿಸಲು ಕಲಿಸುವ ಒಂದು ತರಬೇತಿ ಕೇಂದ್ರ. ಹಾಗಾಗಿ ಉತ್ತರ ಭಾರತದ ಹಲವಾರು ಯುವಕರು ಈ ಕೆಲಸವನ್ನು ಅರಸಿ ಇಲ್ಲಿಗೆ ಬರುತ್ತಾರೆ. ಹಾಗಾಗಿ ಹಿಂದಿ ಭಾಷೆಯ ಪ್ರಭಾವ ಜಾಸ್ತಿ ಇದೆ. ಇಲ್ಲಿ ಮೆಡಿಕಲ್ ಕಾಲೇಜ್ ಮತ್ತು ಎಂಜಿನಿಯರಿಂಗ್ ಕಾಲೇಜ್ ಇರುವುದರಿಂದ ಮರಾಠಿ, ತೆಲುಗು, ಪಂಜಾಬಿ ಭಾಷಿಗರು ಸಾಮಾನ್ಯವಾಗಿದ್ದಾರೆ. ದಾಂಡಿಯ ನವರಾತ್ರಿ ಉತ್ಸವದಲ್ಲಿ ಗುಜರಾತಿನ ನೃತ್ಯ ಪ್ರಕಾರ. ಆದರೆ ಈಗ ಇದು ಬೀದರಿನಲ್ಲಿಯೂ ‘ದಾಂಡಿಯ ರಾತ್ರಿ’ ಆಯೋಜಿಸುವುದನ್ನು ಕಾಣಬಹುದು.

ದೀಪಾವಳಿ ಸಮಯದಲ್ಲಿ ಆಚರಿಸಲ್ಪಡುವ ಮರಾಠಿಗರ ಹಬ್ಬ, ‘ಬಾವ್ ಬೀಜ’ ಕೂಡ ದೀಪಾವಳಿ ಸಮಯದಲ್ಲಿ ವಿಶೇಷವಾಗಿ ಆಚರಿಸಲ್ಪಡುತ್ತದೆ. ಅಲ್ಲಲ್ಲಿಕರವಾಚೌತ್, ಬಾಯಿದೋಜ, ಈದ್,ಕ್ರಿಸ್ಮಸ್, ಹಬ್ಬಗಳ ಆಚರಣೆಗಳು ಇವೆ. ಬೌದ್ಧರು, ಜೈನ್ಯರು, ಸಿಖ್ಖರು, ಮುಸ್ಲಿಮರೂ, ಕ್ರಿಶ್ಚಿಯನ್ನರು,ಹಿಂದುಗಳು ಸೇರಿದಂತೆ, ಬಸವ ನಾಡು, ಶರಣರ ನಾಡೆಂದೇ ಹೆಸರುವಾಸಿಯಾದ ಈ ಗಡಿನಾಡು, ಎಲ್ಲರನ್ನು ಒಪ್ಪಿಕೊಂಡು, ಅಪ್ಪಿಕೊಂಡಿದೆ ಎಂದರೆ ತಪ್ಪಾಗಲಾರದು. ಹಾಗಾಗಿ ಬೀದರ್ ಜಿಲ್ಲೆಯನ್ನು ವೈವಿಧ್ಯತೆಯಲ್ಲಿ ಏಕತೆ ಸಾರುವ ಜಾಗವೆಂದರೆ ಅತಿಶಯೋಕ್ತಿಯಾಗಲಾರದು.

share
ಡಾ. ಶ್ರೇಯಾ ಯಶಪಾಲ ಮಹಿಂದ್ರಕರ್
ಡಾ. ಶ್ರೇಯಾ ಯಶಪಾಲ ಮಹಿಂದ್ರಕರ್
Next Story
X