ಕಾವೇರಿ ತವರಿಗಿಲ್ಲ ವಿಶೇಷ ಯೋಜನೆ

ಮಡಿಕೇರಿ, ಮಾ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಐತಿಹಾಸಿಕ 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕದ್ವಯರೇ ಇರುವುದರಿಂದ ಈ ಬಾರಿಯ ಬಜೆಟ್‌ನಲ್ಲಿಯೂ ಕಾವೇರಿ ತವರು ಕೊಡಗು ಜಿಲ್ಲೆಗೆ ವಿಶೇಷ ಯೋಜನೆ ಘೋಷಣೆಯಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಗೆ ವಿಶೇಷ ಯೋಜನೆ ಹಾಗೂ ವಿಶೇಷ ಪ್ಯಾಕೇಜ್ ನಿರೀಕ್ಷೆಗಳು ಹುಸಿಯಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ವಿಶೇಷ ಪ್ಯಾಕೇಜ್, ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಗೆ ವಿಶೇಷ ಯೋಜನೆ, ಕಾಡು ಪ್ರಾಣಿ ಮಾನವ ಸಂಘರ್ಷ ತಡೆಗಟ್ಟಲು ವಿಶೇಷ ಅನುದಾನ, ಹೀಗೆ ಜಿಲ್ಲೆಯ ಜನತೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳು ಇತ್ತು. ಆದರೆ, ಜಿಲ್ಲೆಯ ಪಾಲಿಗೆ ಈ ಬಾರಿಯ ಬಜೆಟ್ ನಿರಾಸೆಯುಂಟು ಮಾಡಿದೆ.
Next Story





