Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯಡ್ರಾಮಿ: ನಡು ದಾರಿಯಲ್ಲೇ...

ಯಡ್ರಾಮಿ: ನಡು ದಾರಿಯಲ್ಲೇ ಕೈಕೊಡುತ್ತಿರುವ ಬಸ್‌ಗಳು

ಪ್ರಶಾಂತ್ ಚವ್ಹಾಣಪ್ರಶಾಂತ್ ಚವ್ಹಾಣ13 May 2026 1:44 PM IST
share
ಯಡ್ರಾಮಿ: ನಡು ದಾರಿಯಲ್ಲೇ ಕೈಕೊಡುತ್ತಿರುವ ಬಸ್‌ಗಳು

ಯಡ್ರಾಮಿ: ಸಗರನಾಡಿನ ಮಡಿಲಲ್ಲಿರುವ ಅವಳಿ ತಾಲೂಕಿನ ಸಾರಿಗೆ ಸೇವೆ ಹಾಗೂ ಬಸ್‌ಗಳ ಅವ್ಯವಸ್ಥೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದೆಡೆ ಗ್ರಾಮೀಣ ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದ ಸಮಸ್ಯೆ ಎದುರಾಗಿದ್ದರೆ, ಮತ್ತೊಂದೆಡೆ ಯಡ್ರಾಮಿ ಪಟ್ಟಣದ ಬಸ್ ನಿಲ್ದಾಣವೂ ಸೂಕ್ತ ನಿರ್ವಹಣೆ ಇಲ್ಲದೆ ಪ್ರಯಾಣಿಕರ ಪಾಡು ಹೇಳತೀರದಂತಾಗಿದೆ.

ಅವಳಿ ತಾಲೂಕಿನ ಭಾಗವಾಗಿ ಜೇವರ್ಗಿ ಪಟ್ಟಣದಲ್ಲಿ ಕೆಕೆಆರ್‌ಟಿಸಿ ಡಿಪೋ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಸಾರ್ವಜನಿಕರು ಸರಕಾರಿ ಬಸ್ ಸೇವೆಯನ್ನೇ ಅವಲಂಬಿಸಿದ್ದಾರೆ.

ಯಡ್ರಾಮಿ ತಾಲೂಕಿನ ವಡಗೇರಿ, ಏನಾಪುರ,ಬಿರಾಳ, ಮಳ್ಳಿ, ಕುಳಗೇರಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಸಂಚಾರವಿಲ್ಲದೆ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಮಾರ್ಗ ಮಧ್ಯೆ ಕೆಟ್ಟು ನಿಲ್ಲುವ ಬಸ್‌ಗಳು: ಸಗರನಾಡಿಗೆ ಸಂಪರ್ಕ ಹೊಂದಿರುವ ತಾಲೂಕಿನ ಹಲವು ಮಾರ್ಗಗಳಲ್ಲಿ ಸುಸ್ಥಿತಿಯ ಬಸ್‌ಗಳ ಬದಲು ಹಳೆಯ ‘ಡಕೋಟಾ’ ಬಸ್‌ಗಳು ಸಂಚರಿಸುತ್ತಿವೆ. ಈ ಬಸ್‌ಗಳು ಆಗಾಗ್ಗೆ ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರು ಗಂಟೆಗಳ ಕಾಲ ಪರದಾಡುವುದು ಮಾಮೂಲಿ.

ಸ್ವಾತಂತ್ರ್ಯ ದೊರೆತು ದಶಕಗಳಾದರೂ ತಾಲೂಕಿನ ಶಿವಪುರ, ಬಳಬಟ್ಟಿ, ಮಲ್ಲಾಬಾದ್, ಅಂಬರಖೇಡ ಸೇರಿದಂತೆ ಕೆಲವು ಗ್ರಾಮಗಳಿಗೆ ಇನ್ನೂ ಕೆಂಪು ಬಣ್ಣದ ಸರಕಾರಿ ಬಸ್ ಸೇವೆ ಸಮರ್ಪಕವಾಗಿ ಲಭ್ಯವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಇನ್ನು ವಡಗೇರಿ, ಮಾಗಣಗೇರಿ, ಕಾಚಾಪುರ, ದುಮ್ಮದ್ರಿ ಸೇರಿದಂತೆ ಹಲವು ಗ್ರಾಮಗಳಿಗೆ ಬೆಳಿಗ್ಗೆ ಒಂದು ಬಸ್ ಹೊರತುಪಡಿಸಿ ರಾತ್ರಿ ತನಕ ತಾಲೂಕು ಕೇಂದ್ರಕ್ಕೆ ಯಾವುದೇ ನೇರ ಬಸ್ ಸೌಲಭ್ಯ ಇಲ್ಲ. ಪರಿಣಾಮ ಪ್ರಯಾಣಿಕರು ಸುಮಾರು 10 ಕಿ.ಮೀ. ದೂರದ ನಾಗರಹಳ್ಳಿ ಅಥವಾ ಇತರೆ ಗ್ರಾಮಗಳಿಗೆ ತೆರಳಿ ಆಟೋ ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲೂಕುಗಳಲ್ಲಿ ಒಟ್ಟು 80 ಸಾರಿಗೆ ಬಸ್‌ಗಳು ಸಾರ್ವಜನಿಕ ಸೇವೆ ನೀಡುತ್ತಿವೆ. 2025ರಲ್ಲಿ ಸರಕಾರ 21 ಹೊಸ ಬಸ್‌ಗಳನ್ನು ನೀಡಿದ್ದು, ಅವುಗಳಲ್ಲಿ 11 ಬಸ್‌ಗಳು ಬೆಂಗಳೂರು, ಹೈದರಾಬಾದ್ ಹಾಗೂ ಸೋಲಾಪುರ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಉಳಿದ ಬಸ್‌ಗಳನ್ನು ನಗರ ಹಾಗೂ ಗ್ರಾಮೀಣ ಮಾರ್ಗಗಳಿಗೆ ಬಳಸಲಾಗುತ್ತಿದೆ.

ಸರಕಾರಿ ನಿಯಮದ ಪ್ರಕಾರ 12 ಲಕ್ಷ ಕಿಲೋಮೀಟರ್‌ಗಿಂತ ಹೆಚ್ಚು ಓಡಿದ ಬಸ್‌ಗಳನ್ನು ಸೇವೆಯಿಂದ ಹಿಂಪಡೆಯಬೇಕು. ಆದರೆ ಜೇವರ್ಗಿ ಘಟಕದಲ್ಲಿ ಕೆಲ ಬಸ್‌ಗಳನ್ನು 18ರಿಂದ 25 ಲಕ್ಷ ಕಿ.ಮೀ.ವರೆಗೆ ಓಡಿಸಲಾಗುತ್ತಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಸದ್ಯ ಅವಳಿ ತಾಲೂಕುಗಳಲ್ಲಿ ಸಂಚರಿಸುತ್ತಿರುವ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಚಾರಕ್ಕೆಸುರಕ್ಷಿತವಲ್ಲ ಎಂದು ಗುರುತಿಸಲಾದ ನಾಲ್ಕು ಬಸ್‌ಗಳನ್ನು ಈಗಾಗಲೇ ಸ್ಕ್ರಾಪ್‌ಗೆ ಕಳುಹಿಸಲಾಗಿದೆ.

-ಕೃಷ್ಣಪ್ಪ ಪವಾರ

ಕೆಕೆಆರ್‌ಟಿಸಿ ಘಟಕದ ವ್ಯವಸ್ಥಾಪಕಕೆಕೆಆರ್‌ಟಿಸಿ ಘಟಕದ ವ್ಯವಸ್ಥಾಪಕ

ನಮ್ಮ ಗ್ರಾಮಕ್ಕೆ ದಿನಕ್ಕೆ ಒಂದೆರಡು ಬಸ್ ಮಾತ್ರ ಬರುತ್ತವೆ. ಬೆಳಗ್ಗೆ ಬಸ್ ಮಿಸ್ ಆದರೆ ತಾಲೂಕು ಕೇಂದ್ರಕ್ಕೆ ಹೋಗಲು ಆಟೋವೇ ಆಶ್ರಯವಾಗುತ್ತದೆ. ವಿದ್ಯಾರ್ಥಿಗಳು ಹಾಗೂ ವೃದ್ಧರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

-ಶಿವರಾಜ, ಪ್ರಯಾಣಿಕ, ವಡಗೇರಿ

ಹಳೆಯ ಬಸ್‌ಗಳು ಮಾರ್ಗ ಮಧ್ಯೆಯೇ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಕೆಲವೊಮ್ಮೆ ಗಂಟೆಗಳ ಕಾಲ ಕಾಯಬೇಕಾಗುತ್ತದೆ. ಗ್ರಾಮೀಣ ಭಾಗಕ್ಕೂ ಹೊಸ ಬಸ್‌ಗಳನ್ನು ನೀಡಬೇಕು.

-ಅಶೋಕ ಹೊಸಗೌಡ್ರು, ಪ್ರಯಾಣಿಕ

ಯಡ್ರಾಮಿ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಮಳೆ ಬಂದರೆ ನಿಲ್ದಾಣವೇ ಕೆರೆಯಂತಾಗುತ್ತದೆ. ಪ್ರಯಾಣಿಕರಿಗೆ ಮೂಲ ಸೌಲಭ್ಯ ಒದಗಿಸಬೇಕು.

-ಶರಣಮ್ಮ, ಯಡ್ರಾಮಿ

share
ಪ್ರಶಾಂತ್ ಚವ್ಹಾಣ
ಪ್ರಶಾಂತ್ ಚವ್ಹಾಣ
Next Story
X