Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸ

ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸ

ವಾರ್ತಾಭಾರತಿವಾರ್ತಾಭಾರತಿ25 Jun 2026 3:12 PM IST
share
ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಇತಿಹಾಸ

18 ಮತ್ತು 19ನೇ ಶತಮಾನದಲ್ಲಿ ಬಳ್ಳಾರಿ-ರಾಯಚೂರು ಭಾಗದ ಬಹುತೇಕ ಪ್ರದೇಶಗಳು ನಿಜಾಮರು ಮತ್ತು ಬ್ರಿಟಿಷರ ಆಡಳಿತದ ನಡುವೆ ಹಂಚಿಕೆಯಾಗಿದ್ದವು. ಒಂದರ್ಥದಲ್ಲಿ ದ್ವಿ-ಆಡಳಿತದ ವಾತಾವರಣ ಇದ್ದರೂ, ಜನಜೀವನ ಸುಧಾರಿಸುವಂತಹ ಮಹತ್ವದ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಮಳೆಯಾಧಾರಿತ ಕೃಷಿಯೇ ಈ ಭಾಗದ ಜೀವನಾಡಿಯಾಗಿತ್ತು. ಆದರೆ ಕಾಲಕ್ರಮೇಣ ಮಳೆಯ ಪ್ರಮಾಣ ಕಡಿಮೆಯಾಗುತ್ತಾ ಬರಗಾಲದ ಭೀತಿ ಹೆಚ್ಚಾಯಿತು.

ಬಳ್ಳಾರಿ, ರಾಯಚೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಒಂದು ಕಾಲದಲ್ಲಿ ಕೃಷಿ ಸಮೃದ್ಧಿಯಿಂದ ಗುರುತಿಸಿಕೊಂಡಿದ್ದವು. ಆದರೆ ನಂತರದ ವರ್ಷಗಳಲ್ಲಿ ಮಳೆ ಕೈಕೊಟ್ಟ ಪರಿಣಾಮ ಆಹಾರ ಧಾನ್ಯಗಳ ಕೊರತೆ ಉಂಟಾಯಿತು. ದನ-ಕರುಗಳಿಗೂ ನೀರು ಸಿಗದ ಸ್ಥಿತಿ ನಿರ್ಮಾಣವಾಯಿತು. ಬರಗಾಲದ ಪರಿಣಾಮ ಜನರು ಹಸಿವಿನಿಂದ ಕಂಗೆಟ್ಟರು. ಕಾಲರಾ, ಪ್ಲೇಗ್‌ನಂತಹ ಮಾರಕ ರೋಗಗಳು ವ್ಯಾಪಿಸಿ ಜನಜೀವನ ಅಸ್ತವ್ಯಸ್ತವಾಯಿತು. ಸತ್ತ ಹೆಣಗಳ ಶವಸಂಸ್ಕಾರ ಮಾಡಲಾಗದ ಸ್ಥಿತಿ ಉಂಟಾಯಿತು. ಸತ್ತ ಹೆಣಗಳನ್ನು ನಾಯಿ ನರಿಗಳು ತಿಂದುಹೋದ ದೃಶ್ಯಗಳು ಎದುರಾದವು ಎಂದು ಹೇಳಲಾಗುತ್ತಿದೆ.

ಈ ದುರಂತ ಪರಿಸ್ಥಿತಿಯೇ ಬ್ರಿಟಿಷ್ ಆಡಳಿತದ ಗಮನವನ್ನು ಈ ಭಾಗದ ಶಾಶ್ವತ ನೀರಾವರಿ ಯೋಜನೆಗಳತ್ತ ಸೆಳೆದಿತು. ಬರ ಪರಿಹಾರಕ್ಕೆ ವರ್ಷಾನುವರ್ಷ ಖರ್ಚು ಮಾಡುವುದಕ್ಕಿಂತ, ನದಿಗಳ ನೀರನ್ನು ಸಂಗ್ರಹಿಸಿ ಕಾಲುವೆಗಳ ಮೂಲಕ ಹೊಲಗಳಿಗೆ ತಲುಪಿಸುವ ಶಾಶ್ವತ ಯೋಜನೆ ಅಗತ್ಯ ಎಂಬ ಚಿಂತನೆ ಮೂಡಿತು. ಬರಕ್ಕೆ ಖರ್ಚು ಮಾಡುವ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ, ಶಾಶ್ವತ ಕಾಲುವೆ ನಿರ್ಮಿಸಿ ಪರಿಹಾರ ಮಾಡಬೇಕೆಂದು ಆಲೋಚಿಸಿದರು.ಇದೇ ಚಿಂತನೆಯು ಮುಂದೆ ತುಂಗಭದ್ರಾ ಅಣೆಕಟ್ಟು ಯೋಜನೆಗೆ ಬುನಾದಿಯಾಯಿತು. ಹಾಗಾಗಿ ಬ್ರಿಟಿಷ್ ಸರಕಾರ ಅಲ್ಲಲ್ಲಿ ಅಣೆಕಟ್ಟುಗಳನ್ನು ಕಟ್ಟುವ ಕಾರ್ಯದಲ್ಲಿ ತೊಡಗಿತು.

ಆಗಿನ ಬ್ರಿಟಿಷ್ ನಿರಾವರಿ ತಜ್ಞ ಆರ್ಥರ ಕಾಟನರವರು ದೇಶಾದ್ಯಂತ್ಯ ಅನೇಕ ಅಣೆಕಟ್ಟುಗಳನ್ನು ಕಟ್ಟಿ ಪ್ರಸಿದ್ಧರಾಗಿದ್ದವರು. ಅವರು ಬರಕ್ಕೆ ಖರ್ಚು ಮಾಡುವ ಹಣದಲ್ಲಿ ಕೆಲವು ಭಾಗಗಳನ್ನು ಅಣೆಕಟ್ಟುಗಳನ್ನು ಕಟ್ಟಿ ಜನರ ಬವಣೆ ನೀಗಿಸಬಹುದೆಂದು ಸಲಹೆ ನೀಡಿದರು. ಆದರೆ ಅಂದಿನ ಬ್ರಿಟಿಷ್ ಸರಕಾರ ಹಣದ ಕೊರೆತೆಯ ನೆಪಹೂಡಿ ತುಂಗಭದ್ರಾ ಯೋಜನೆಯನ್ನು ಕೈ ಬಿಟ್ಟರು.

ಕೊನೆಗೆ 1902ರಲ್ಲಿ ಮದ್ರಾಸ್ ಸರಕಾರದ ಮುಖ್ಯ ಇಂಜಿನಿಯರ್ ಆಗಿದ್ದ ಕರ್ನಲ್ ಸ್ಮಾರ್ಟ್ ತುಂಗಭದ್ರಾ ಅಣೆಕಟ್ಟಿನ ನಿರ್ಮಾಣಕ್ಕಾಗಿ ವಿವರವಾದ ವರದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರು. ಬ್ರಿಟಿಷ್ ಕಾಲದ ಪ್ರಸಿದ್ಧ ನೀರಾವರಿ ತಜ್ಞ ಸರ್ ಆರ್ಥರ್ ಕಾಟನ್ ಅವರು ದೇಶದ ಅನೇಕ ಭಾಗಗಳಲ್ಲಿ ನೀರಾವರಿ ಯೋಜನೆಗಳನ್ನು ರೂಪಿಸಿದ್ದವರು. ತುಂಗಭದ್ರಾ ನದಿಯ ನೀರನ್ನು ಬಳಸಿಕೊಂಡು ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸಬಹುದು ಎಂಬ ಕಲ್ಪನೆಯನ್ನು ಅವರು ಮುಂದಿಟ್ಟಿದ್ದರು. ಆದರೆ ಹಣಕಾಸಿನ ಕೊರತೆ ಹಾಗೂ ಆಡಳಿತಾತ್ಮಕ ಅಡೆತಡೆಗಳ ಕಾರಣದಿಂದ ಯೋಜನೆ ತಕ್ಷಣ ಜಾರಿಗೆ ಬರಲಿಲ್ಲ.

1902ರಲ್ಲಿ ಮದ್ರಾಸ್ ಸರಕಾರದ ಮುಖ್ಯ ಎಂಜಿನಿಯರ್ ಕರ್ನಲ್ ಸ್ಮಾರ್ಟ್ ಅವರು ತುಂಗಭದ್ರಾ ಅಣೆಕಟ್ಟು ನಿರ್ಮಾಣದ ಕುರಿತು ವಿವರವಾದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದರು. ನಂತರ ಮೆಕೆಂಜಿ ಅವರು ಮಲ್ಲಾಪುರ ಮತ್ತು ಹೊಳೆನಿಂಗಾಪುರ ಗ್ರಾಮಗಳ ಮಧ್ಯದ ಎರಡು ಗುಡ್ಡಗಳ ನಡುವೆ ಅಣೆಕಟ್ಟು ನಿರ್ಮಿಸಬಹುದು ಎಂಬ ಸಲಹೆ ನೀಡಿದರು.

ಆಗ ಹೈದರಾಬಾದಿನ ನಿಜಾಮನು ನದಿಯ ಮೇಲೆ ನಮಗೂ ಹಕ್ಕಿದೆ ಎಂದು ಹಕ್ಕೊತ್ತಾಯ ಮಾಡಿದರು. ಇದಲ್ಲದೇ ಮುಂಬೈ ಪ್ರಾಂತ್ಯ, ಮೈಸೂರು ಪ್ರಾಂತ್ಯ ಮತ್ತು ಮದ್ರಾಸ ಪ್ರಾಂತ್ಯಗಳೂ ಸಹ ತಮ್ಮ-ತಮ್ಮ ಹಿತಾಸಕ್ತಿಗನುಗುಣವಾಗಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವನೆಯನ್ನು ಸಲ್ಲಿಸಿದರು. ಇದರಿಂದಾಗಿ ಈ ಯೋಜನೆಯು ನೆನೆಗುದಿಗೆ ಬಿದ್ದಿತು. ತುಂಗಭದ್ರಾ ಅಣೆಕಟ್ಟು ನಿರ್ಮಿಸಿ ಈ ಪ್ರದೇಶದ ಬರಸ್ಥಿತಿ ಕಡಿಮೆ ಮಾಡಲು ಹೊರಟ ಮಹತ್ವದ ಕಾರ್ಯಕ್ಕೆ ಹಿನ್ನೆಡೆಯುಂಟಾಯಿತು.

ಮದ್ರಾಸ್ ಪ್ರಾಂತ್ಯವು ಆಗಿನ ಮುಖ್ಯ ಇಂಜಿನಿಯರ್ ತಿರುಮಲೆ ಅಯ್ಯರ್‌ರನ್ನು ಒಂದು ವಸ್ತುನಿಷ್ಠ ಯೋಜನೆ ತಯಾರಿಸಲು ನೇಮಿಸಲಾಯಿತು. ಹೈದರಾಬಾದಿನ ನಿಜಾಮರೂ ಸಹ ಸಿ.ಸಿ.ದಲಾಲ್ ಎಂಬ ಇಂಜಿನಿಯರ್‌ಗೆ ಒಂದು ಪ್ರತ್ಯೇಕ ವರದಿ ತಯಾರಿಸಲು ನೇಮಿಸಿದರು. ಈ ಎರಡೂ ವರದಿಗಳನ್ನು ಪರಿಶೀಲಿಸಿದ ಮದ್ರಾಸ್ ಪ್ರಾಂತ್ಯದ ಸರಕಾರ 1942ರಲ್ಲಿ ತಿರುಮಲೆ ಅಯ್ಯರ್ ವರದಿಯನ್ನೇ ಅಂತಿಮಗೊಳಿಸಿ ಅನುಮೋದನೆ ನೀಡಿತು. ಸುಮಾರು ನಲವತೈದು ವರ್ಷಗಳ ಸುದೀರ್ಘ ಚರ್ಚೆ, ವಾದ, ವಿವಾದಗಳ ನಂತರ 1945ರ ಫೆಬ್ರುವರಿ 28ರಂದು ಮದ್ರಾಸ್ ಪ್ರಾಂತೀಯ ಗೌವರ್ನರ್ ಆಗಿದ್ದ ಸರ್ ಅರ್ಥರ್ ಹೋಪ್ ಅಡಿಗಲ್ಲು ಹಾಕಿ, ಈ ತುಂಗಭದ್ರಾ ಅಣೆಕಟ್ಟು ಯೋಜನೆಯನ್ನು ಪ್ರಾರಂಭಿಸಿದರು.

ಅದರಂತೆ ಮುನಿರಾಬಾದ ಗ್ರಾಮದ ಹತ್ತಿರವಿರುವ ಬೆಟ್ಟಗಳ ಸಾಲಿನಲ್ಲಿ ಒಂದು ಅಣೆಕಟ್ಟು ಕಟ್ಟಲು ಪ್ರಾರಂಭಿಸಿದರು. ಆಗ ದೇಶಕ್ಕೆ ಸ್ವಾತಂತ್ರ ಬಂದ ಕಾರಣ ಮತ್ತು ಹಣದ ಹಂಚಿಕೆ ಹಾಗೂ ಕೊರತೆಯ ಕಾರಣದಿಂದ ಯೋಜನೆಗೆ ಮತ್ತಷ್ಟು ಕಂಟಕ ಉಂಟಾಯಿತು. ಹೇಗೋ ಒಟ್ಟಿನಲ್ಲಿ ತುಂಗಭದ್ರ ಅಣೆಕಟ್ಟು ಯೋಜನೆ ಕುಂಟುತ್ತಾ ಸಾಗಿತು.

ಒಟ್ಟಿನಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕ ಎರಡೂ ರಾಜ್ಯಗಳ ಹಣದ ಹಂಚಿಕೆಯ ಮೇಲೆ ಅಣೆಕಟ್ಟಿನ ನಿರ್ಮಾಣದ ಕಾರ್ಯ ಸಾಗಿತು. ಈ ಯೋಜನೆ ಪೂರ್ಣಗೊಳಿಸಲು ತಿರುಮಲೆ ಅಯ್ಯರ್‌ಗೆ ಜವಾಬ್ಧಾರಿ ನೀಡಲಾಗಿತ್ತು.ಇದರ ಜೊತೆಗೆ ಈ ಅಣೆಕಟ್ಟು ನಿಮಾರ್ಣಕ್ಕೆ ಆಂಧ್ರಪ್ರದೇಶ ಮತ್ತು ಮುಖ್ಯವಾಗಿ ತಮಿಳುನಾಡು ರಾಜ್ಯಗಳಿಂದ ಕಾರ್ಮಿಕರನ್ನು ಕರೆಸಲಾಗಿತ್ತು. ಜೊತೆಗೆ ತಂತ್ರಜ್ಞರು, ಇಂಜಿನಿಯರ್‌ಗಳನ್ನು ಕರೆಸಲಾಗಿತ್ತು. ಒಟ್ಟಾರೆ ಅಡೆ-ತಡೆಗಳು ಮತ್ತು ವಾದ-ವಿವಾದಗಳ ನಡುವೆಯೇ ಅಣೆಕಟ್ಟು ಪೂರ್ಣಗೊಂಡು 1953ರ ಜುಲೈ 1ರಂದು ಪ್ರಪ್ರಥಮವಾಗಿ ಕಾಲುವೆಗೆ ನೀರು ಹರಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X