Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಯಲು ಮೂತ್ರ ವಿಸರ್ಜನೆ ತಡೆಗೆ ವಿನೂತನ...

ಬಯಲು ಮೂತ್ರ ವಿಸರ್ಜನೆ ತಡೆಗೆ ವಿನೂತನ ಪ್ರಯೋಗ: ಗೋಡೆಗೆ ಕನ್ನಡಿ ಅಳವಡಿಕೆ

ಚಿತ್ರಶೇನ ಫುಲೆಚಿತ್ರಶೇನ ಫುಲೆ2 July 2026 2:57 PM IST
share
ಬಯಲು ಮೂತ್ರ ವಿಸರ್ಜನೆ ತಡೆಗೆ ವಿನೂತನ ಪ್ರಯೋಗ: ಗೋಡೆಗೆ ಕನ್ನಡಿ ಅಳವಡಿಕೆ

ಬೀದರ್: ಬಯಲು ಮೂತ್ರ ವಿಸರ್ಜನೆ ಮುಖ್ಯವಾಗಿ ಗೋಡೆ ಹತ್ತಿರ ಮೂತ್ರ ವಿಸರ್ಜನೆ ತಡೆಯಬೇಕು ಎನ್ನುವ ಕಾರಣಕ್ಕೆ ನಗರದ ಕೋಟೆ ರಸ್ತೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಉಪ ವಿಭಾಗ ಕಚೇರಿಯ ಕಾಂಪೌಂಡ್ ಗೋಡೆಗಳ ಮೇಲೆ ಸ್ವಚ್ಛತಾ ಕನ್ನಡಿ (ಆ್ಯಂಟಿ ಯೂರಿನ್ ರಿಫ್ಲೆಕ್ಟಿವ್ ಸ್ಟೀಲ್ ಶೀಟ್) ಗಳನ್ನು ಅಳವಡಿಸಲಾಗಿದೆ.

ಈ ವಿನೂತನ ಸ್ವಚ್ಛತಾ ಕನ್ನಡಿಗಳನ್ನು ಅಳವಡಿಸಿದರ ಪರಿಣಾಮವಾಗಿ ಸಾರ್ವಜನಿಕರು ಮನಬಂದಂತೆ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಯಲಾಗಿದೆ. ಇದರಿಂದಾಗಿ ಗೋಡೆಗೆ ಮೂತ್ರ ವಿಸರ್ಜನೆ ಮಾಡುವವರು ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳುವಂತಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮುಜುಗರ ಪಟ್ಟು ಗೋಡೆಗೆ ಮೂತ್ರ ಮಾಡುವುದನ್ನು ತಪ್ಪುತ್ತದೆ. ಇಂತಹ ವಿನೂತನ ಪ್ರಯೋಗವು ಹಾಸ್ಯಮಯವಾಗಿದ್ದರೂ, ಸ್ವಚ್ಛತೆಯ ದೃಷ್ಟಿಯಿಂದ ಪರಿಣಾಮಕಾರಿಯಾಗಿದೆ.

ನಗರವನ್ನು ಸುಂದರ, ಸ್ವಚ್ಛ ಮತ್ತು ಸಾರ್ವಜನಿಕ ನೈರ್ಮಲ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದ್ದು, ಬೀದರ್ ಜಿಲ್ಲೆಯಲ್ಲಿ ಇಂಥ ಪ್ರಯೋಗ ಮೊಟ್ಟ ಮೊದಲು ಮಾಡಿದ್ದರಿಂದ ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಈ ಹಿಂದೆ ಇಂತಹ ಕಾಂಪೌಂಡ್ ಗೋಡೆಗಳ ಮೇಲೆ ಎಷ್ಟೇ ಜಾಗೃತಿ ಫಲಕಗಳನ್ನು ಹಾಕಿದರೂ, ಸ್ವಚ್ಛ ಭಾರತ ಅಭಿಯಾನದ ಜಾಹಿರಾತುಗಳು ಸುಣ್ಣ ಬಣ್ಣದಿಂದ ಸಿಂಗರಿಸಿ ಬರೆದರೂ ಗೋಡೆಗೆ ಮೂತ್ರ ವಿಸರ್ಜನೆ ಮಾಡುವುದನ್ನು ಸಂಪೂರ್ಣ ತಡೆಯಲು ಸಾಧ್ಯವಾಗಿರಲಿಲ್ಲ. ಜೊತೆಗೆ ಗೋಡೆ ಪಕ್ಕದಲ್ಲಿ ಕಸ ಬಿಸಾಡುವುದನ್ನು ನಿಲ್ಲಿಸಿರಲಿಲ್ಲ. ಈಗಲೂ ಕೂಡ ಹಲವು ಗೋಡೆಗಳ ಪಕ್ಕದಲ್ಲಿ ಹಾದು ಹೋಗಬೇಕಾದರೆ ಮೂಗು ಮುಚ್ಚಿಕೊಂಡೆ ಹೊಗಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಇಡೀ ಪರಿಸರ ಹಾಳಾಗುವ ಜೊತೆಗೆ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಈ ಹೊಸ ಪ್ರಯೋಗದಿಂದ ಇದನ್ನು ಸ್ವಲ್ಪ ಮಟ್ಟಿಗೆ, ಸ್ವಲ್ಪ ದಿನ ಆದರೂ ತಡೆಯಬಹುದು.

ಜನರಲ್ಲಿ ಬೇಕಿದೆ ಸ್ವಚ್ಛತೆಯ ಜಾಗೃತಿ: ಈ ಪ್ರಯೋಗದಿಂದಾದರೂ ಜನರ ಮನಸ್ಸು ಬದಲಾಗಬೇಕು. ಅದೆಷ್ಟೋ ಜನರು ಇದನ್ನು ಹಾಸ್ಯಮಯವಾಗಿ ತಿಳಿದುಕೊಂಡು ಪಕ್ಕದ ಗೋಡೆ ಹತ್ತಿರ ಗಲೀಜು ಮಾಡುವ ಮನಸ್ಥಿತಿಗಳನ್ನು ಹೊಂದಿದ್ದಾರೆ. ಆ ಮನಸ್ಥಿತಿಗಳನ್ನು ಬದಲಿಸುವ ಕೆಲಸ ಸರಕಾರದಿಂದ ಆಗಬೇಕಾಗಿದೆ. ಹಳ್ಳಿ ಹಳ್ಳಿಗಳಿಗೆ ಹೋಗಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಆದರೆ, ಸ್ವಚ್ಛತೆಯ ಬಗ್ಗೆ ಸರಕಾರ ಅದೆಷ್ಟೆ ಯೊಜನೆಗಳು ತಂದರು ಅವು ಹಳ್ಳಿಯಲ್ಲಿರುವ ಕಟ್ಟ ಕಡೆಯ ಜನರಿಗೆ ತಲುಪುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.

ಸ್ವಚ್ಛವಾಗಬೇಕಿದೆ ಸಾರ್ವಜನಿಕ ಶೌಚಾಲಯಗಳು: ಜಿಲ್ಲೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಬಸ್ ನಿಲ್ದಾಣ ಬಿಟ್ಟರೆ ಬೇರೆ ಕಡೆಗೆ ಸಿಗುವುದು ಅತೀ ವಿರಳ. ಒಂದು ವೇಳೆ ಸಾರ್ವಜನಿಕ ಶೌಚಾಲಯಗಳು ಇದ್ದರೂ ಕೂಡ ಅವು ಕೆಟ್ಟ ದುರ್ನಾತದಿಂದ ಕೂಡಿರುತ್ತವೆ. ಸರಕಾರಿ ಕಚೇರಿಗಳಲ್ಲಿರುವ ಅದೆಷ್ಟೋ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಸಾರ್ವಜನಿಕ ಶೌಚಾಲಯಗಳ ಪರಿಸ್ಥಿತಿಯಿಂದಲೇ ಜನರು ಗೋಡೆಗಳ ಮೊರೆ ಹೋಗುತ್ತಾರೆ. ಆದ್ದರಿಂದ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಹೆಚ್ಚಾಗಬೇಕು. ಹಾಗೆಯೇ ಶೌಚಾಲಯಗಳ ಸಂಖ್ಯೆ ಮಾತ್ರ ಸಾಲಲ್ಲ, ಅವುಗಳನ್ನು ಸ್ವಚ್ಛವಾಗಿಡುವುದಕ್ಕೆ ಕ್ರಮ ಕೈಗೊಳ್ಳಬೇಕು. ಆವಾಗ ಮಾತ್ರ ಸರಕಾರಿ ಕಚೇರಿಗಳ ಗೋಡೆಗಳು ಸ್ವಚ್ಛವಾಗಿ ಕಾಣಬಹುದು.

ಸಾರ್ವಜನಿಕರು ಆ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಆದ್ದರಿಂದ ಮಹಾನಗರ ಪಾಲಿಕೆಯಿಂದ ತುರ್ತಾಗಿ ಈ ವಿನೂತನ ಪ್ರಯೋಗ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಸ್ಥಳಗಳಲ್ಲಿಯೂ ಕೂಡ ಇಂತಹ ಸ್ಟಿಲ್ ಶೀಟ್ ಅಥವಾ ಪೇಂಟಿಂಗ್ ಬಳಿಯಲಾಗುವುದು.

-ಮುಕುಲ್ ಜೈನ್

ಪಾಲಿಕೆ ಆಯುಕ್ತರು, ಬೀದರ್

ಕೋಟೆ ಹತ್ತಿರದ ಗೋಡೆ ಬದಿಯಲ್ಲಿ ಜನರು ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಸ್ವಚ್ಛತಾ ಕನ್ನಡಿ ಅಥವಾ ಸ್ಟಿಲ್ ಶೀಟ್ ಗಳನ್ನು ಅಳವಡಿಸುವ ವಿನೂತನ ಪ್ರಯೋಗ ಮಾಡಲಾಗಿದೆ. ಇದರಿಂದಾಗಿ ಸ್ವಚ್ಛತೆ ಕಾಪಾಡಬಹುದಾಗಿದೆ. ನಗರದ ಹಲವಾರು ಗೋಡೆಗಳಿಗೆ ಇಂತಹದೇ ಸ್ಟಿಲ್ ಶೀಟ್‌ಗಳು ಅಳವಡಿಸಿದರೆ ಚೆನ್ನಾಗಿರುತ್ತದೆ. ಹಾಗೆಯೇ ಸಾರ್ವಜನಿಕ ಶೌಚಾಲಯಗಳು ಹೆಚ್ಚಾಗಿ ನಿರ್ಮಿಸಿದರೆ ಸ್ವಚ್ಛ ಬೀದರ್ ನಿರ್ಮಾಣ ಮಾಡಬಹುದು.

-ನಿಜಾಮುದ್ದೀನ್, ಸ್ಥಳೀಯ ನಿವಾಸಿ

share
ಚಿತ್ರಶೇನ ಫುಲೆ
ಚಿತ್ರಶೇನ ಫುಲೆ
Next Story
X