Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಗ್ರ ಕೃಷಿಯಿಂದ ಲ‌ಕ್ಷಾಂತರ ರೂಪಾಯಿ...

ಸಮಗ್ರ ಕೃಷಿಯಿಂದ ಲ‌ಕ್ಷಾಂತರ ರೂಪಾಯಿ ಗಳಿಸುತ್ತಿರುವ ರೈತ

ಚಿತ್ರಶೇನ ಫುಲೆಚಿತ್ರಶೇನ ಫುಲೆ9 July 2026 6:59 AM IST
share
ಸಮಗ್ರ ಕೃಷಿಯಿಂದ ಲ‌ಕ್ಷಾಂತರ ರೂಪಾಯಿ ಗಳಿಸುತ್ತಿರುವ ರೈತ
ಎರಡೂವರೆ ಎಕರೆ ಭೂಮಿಯೇ ರೈತನಿಗೆ ಆಧಾರ: ತಿಪ್ಪೆ ಗೊಬ್ಬರವೇ ಮಣ್ಣಿನ ಫಲವತ್ತತೆಗೆ ಜೀವಾಳ

ಬೀದರ್: ಇತ್ತೀಚಿಗೆ ಮಹಾನಗರ ಪಾಲಿಕೆಗೆ ಒಳಪಟ್ಟಿರುವ ಚಿಕ್ಕಪೇಟ್ ಎನ್ನುವ ಚಿಕ್ಕ ಗ್ರಾಮದಲ್ಲಿ ಬರೀ ಎರಡು ಎಕರೆ ಪ್ರದೇಶದಲ್ಲಿಯೇ ತಿಪ್ಪೆ ಗೊಬ್ಬರ ಹಾಕಿಯೇ ಹಲವಾರು ಬೆಳೆ ಬೆಳೆದು ಜೊತೆಗೆ ಹೈನುಗಾರಿಕೆ ಮಾಡುತ್ತಾ ಸಮಗ್ರ ಕೃಷಿಯಿಂದ ವೀರಶೆಟ್ಟಿ ಪಾಟೀಲ್ ಎನ್ನುವ ರೈತರು ಲಕ್ಷಾಂತರ ರೂಪಾಯಿ ಆದಾಯ ಗಳಿಸಿದ್ದಾರೆ.

ವೀರಶೆಟ್ಟಿ ಅವರಿಗೆ ಒಬ್ಬ ಮಗನಿದ್ದು, ಅವನು ಇತ್ತೀಚಿಗೆ ಅಗ್ರಿಕಲ್ಚರ್ ಡಿಪ್ಲೋಮಾ ಮುಗಿಸಿದ್ದಾನೆ. ಇದೀಗ ಆತ ಬಿಎಸ್ಸಿ ಪದವಿಯಲ್ಲಿ ಓದುತ್ತಿದ್ದಾನೆ. ಆದರೆ, ಆತನಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಆತ ಸದಾ ತಮ್ಮ ಹೊಲದಲ್ಲಿಯೇ ದುಡಿಯುತ್ತಾನೆ. ವೀರಶೆಟ್ಟಿ ಅವರ ಪತ್ನಿಯೂ ಕೂಡ ಹೊಲದಲ್ಲಿ ದುಡಿಯುತ್ತಾರೆ.

ಕೈ ಹಿಡಿದ ಕರಿಬೇವು: ವೀರಶೆಟ್ಟಿ ಪಾಟೀಲ್ ಅವರು ಮೂರು ವರ್ಷದ ಹಿಂದೆ ಬೀದರಿನ ತೋಟಗಾರಿಕೆ ಇಲಾಖೆ ಹಾಗೂ ಪಕ್ಕದ ತೆಲಂಗಾಣಾ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯಿಂದ 1,500 ಸುಹಾಸಿನಿ ತಳಿಯ ಕರಿಬೇವಿನ ಸಸಿಗಳು ತಂದು ಒಂದು ಎಕರೆ ಭೂಮಿಯಲ್ಲಿ ನೆಟ್ಟಿದ್ದಾರೆ. ಸುಹಾಸಿನಿ ತಳಿಯೂ ಬೇರೆ ತಳಿಗಳಿಗಿಂತಲೂ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಎರಡು ವರ್ಷದಿಂದ ಕರಿಬೇವು ಕಟಾವು ಮಾಡುತ್ತಿದ್ದು, ಸದ್ಯಕ್ಕೆ ದಿನಾಲೂ 50 ರಿಂದ 60 ಕೆ.ಜಿ ಫಸಲು ಬರುತ್ತಿದೆ. ಬೆಸಿಗೆಯಲ್ಲಿ ಸ್ವಲ್ಪ ಫಸಲು ಕಡಿಮೆಯಾಗುತ್ತದೆ.

ಕರಿಬೇವು 1 ಕೆ.ಜಿಗೆ ಕನಿಷ್ಠ 50 ರೂ. ಹಾಗೂ ಗರಿಷ್ಠ 200 ರೂ. ಬೆಲೆಯಾಗುತ್ತದೆ. ಅದರ ಬೆಲೆ ಏರಿಳಿತವಾಗುತ್ತದೆ. ಆದರೆ, 1 ಕೆ.ಜಿಗೆ ಕನಿಷ್ಠ 20 ರೂ. ಬೆಲೆಯಾದರೂ ಹಾನಿಯಾಗುವುದಿಲ್ಲ. ಕರಿಬೇವಿನ ಬೆಳೆಯಿಂದ ದಿನಾಲೂ ಸುಮಾರು 1 ಸಾವಿರ ರೂ. ಲಾಭವಾಗುತ್ತದೆ. ಎರಡು ವರ್ಷದಿಂದ ದಿನಾಲೂ 1 ಸಾವಿರ ರೂ. ಅದರಿಂದ ಲಾಭವಾಗುತ್ತಿದೆ. ಸದ್ಯಕ್ಕೆ ದಿನಾಲೂ 50 ರಿಂದ 60 ಕೆ.ಜಿ ಫಸಲು ಬರುತ್ತಿದೆ. ಬೆಸಿಗೆಯಲ್ಲಿ ಸ್ವಲ್ಪ ಫಸಲು ಕಡಿಮೆಯಾಗುತ್ತದೆ. ಇದು ಒಂದು ಸಲ ಸಸಿ ಹಾಕಿದರೆ ಸುಮಾರು 15-20 ವರ್ಷಕ್ಕಿಂತಲೂ ಹೆಚ್ಚಿನ ವರ್ಷಗಳು ಫಸಲು ನೀಡುತ್ತದೆ. ಕರಿಬೇವು ಬೆಳೆಯಿಂದಲೇ ವರ್ಷಕ್ಕೆ ಕನಿಷ್ಠ ಎಂದರೆ 2 ಲಕ್ಷ ರೂ.ಕ್ಕಿಂತಲೂ ಹೆಚ್ಚಿನ ಲಾಭವಾಗುತ್ತದೆ ಎಂದು ವೀರಶೆಟ್ಟಿ ಅವರು ಹೇಳುತ್ತಾರೆ.

ಕರಿಬೇವಿನ ಗಿಡಗಳ ಖಾಲಿ ಇರುವ ಜಾಗದಲ್ಲಿ ಇರುಳ್ಳಿ, ಸೊಯಾ, ಪಾಲಕ್, ಮೆಂತೆ ಸೇರಿದಂತೆ ಇತರೆ ಬೆಳೆಗಳು ಬೆಳೆಯುವ ಇವರು ಅದರಿಂದಲೂ ಕೂಡ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾರೆ.

ಆದಾಯದ ಪಾಲಾದ ಪಾಲಕ್: ಎಕರೆ ಭೂಮಿಯಲ್ಲಿ ಪಾಲಕ್ ಬೆಳೆ ಬೆಳೆಸುತ್ತಿರುವ ಇವರು, ಪಾಲಾಕ್ ಸೊಪ್ಪಿನಿಂದಲೂ ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದಾರೆ. ಸುಮಾರು 3 ರಿಂದ 4 ತಿಂಗಳಲ್ಲಿಯೇ ಸುಮಾರು 2 ಲಕ್ಷ ರೂ. ಪಾಲಾಕ್ ಸೊಪ್ಪಿನಿಂದ ಲಾಭ ಗಳಿಸುತ್ತಾರೆ. ಅದು ಸೀಸನಿನ್ನಲ್ಲಿ ಒಂದು ಕ್ವಿಂಟಾಲ್‌ಗೆ ಸುಮಾರು 6ರಿಂದ7 ಸಾವಿರ ರೂ.ಗೆ ಮಾರಾಟವಾಗುತ್ತದೆ. ಏನಿಲ್ಲ ಎಂದರೂ 1 ಕ್ವಿಂಟಾಲ್‌ಗೆ 1 ಸಾವಿರ ರೂ. ಆದರೂ ಬರುತ್ತದೆ. ಇದರಿಂದ ನಷ್ಟವಿಲ್ಲ. ಪಾಲಾಕ್ ಬೀಜ ತುಂಬಾ ಕಡಿಮೆ ಬೆಲೆಗೆ ಎಂದರೆ 100 ರೂ.ಗೆ ಒಂದು ಕೆ.ಜಿ ಬೀಜ ಬರುತ್ತವೆ. 4 ಕೆ.ಜಿ ಪಾಲಾಕ್ ಬೀಜ ಭೂಮಿಗೆ ಹಾಕಿದರೆ ಅದರಿಂದ 20 ಕ್ವಿಂಟಾಲ್‌ವರೆಗೆ ಪಾಲಾಕ್ ಸೊಪ್ಪಿನ ಬೆಳೆ ಬರುತ್ತದೆ. ಬೇಸಿಗೆಯಲ್ಲಿ ತಿಪ್ಪೆ ಗೊಬ್ಬರ ಹಾಕಿ ಬಿಟ್ಟು ಮಳೆಗಾಲದ ಸಮಯದಲ್ಲಿ ಪಾಲಾಕ್ ಬೀಜ ಹಾಕಿದರೆ 30 ದಿನದಲ್ಲಿಯೇ ಫಸಲು ಬರುತ್ತದೆ. 3ರಿಂದ 4 ತಿಂಗಳು ಈ ಫಸಲು ಬರುತ್ತಿರುತ್ತದೆ. ಪಾಲಾಕ್ ಸೊಪ್ಪು ಬೆಳೆದು ಒಂದು ವರ್ಷದಲ್ಲಿ ಸುಮಾರು 2 ಲಕ್ಷ ರೂ. ಆದಾಯ ಗಳಿಸುತ್ತೇನೆ. ಕಳೆದ ಸಲ 40 ದಿನದಲ್ಲಿಯೇ 1 ಲಕ್ಷ ರೂ. ಲಾಭವಾಗಿದೆ. ಇದೀಗ ಮತ್ತೆ ಬೇಸಿಗೆಯಲ್ಲಿ ತಿಪ್ಪೆ ಗೊಬ್ಬರ ಹಾಕಿ ಮತ್ತೆ ಪಾಲಾಕ್ ಬೀಜ ಹರಡುತ್ತಿದ್ದೇನೆ ಎಂದು ಆ ರೈತ ಖುಷಿಯಿಂದ ಹೇಳುತ್ತಾರೆ.

ಬೆಳೆದ ಬದನೆ ಬಂದ ಆದಾಯ: ಇನ್ನರ್ಧ ಎಕರೆ ಭೂಮಿಯಲ್ಲಿ ಬದನೆಕಾಯಿ ಬೆಳೆದಿದ್ದು, ಅದು ನಾಲ್ಕು ತಿಂಗಳಿಂದ ಫಸಲು ನೀಡುತ್ತಿದೆ. ಬದನೆ ಕಾಯಿಯು ನಾಲ್ಕು ತಿಂಗಳಿನಿಂದ ಇಲ್ಲಿಯವರೆಗೆ ದಿನಾಲೂ 1 ಕ್ವಿಂಟಾಲ್‌ನಷ್ಟು ಫಸಲು ನೀಡಿದೆ. ಅದರಿಂದ ತಿಂಗಳಲ್ಲಿ ಸುಮಾರು 1 ಲಕ್ಷ 50 ಸಾವಿರ ರೂ. ಲಾಭವಾಗಿದೆ. ಅದೀಗ ತೆಗೆದು ಭತ್ತ ಹಾಕುವ ಯೋಚನೆ ಇದೆ ಎಂದು ಅವರು ಹೇಳುತ್ತಾರೆ.

ತೋಟಗಾರಿಕೆ ಗಿಡಗಳು ಕೈ ಬಿಟ್ಟಿಲ್ಲ: ವೀರಶೆಟ್ಟಿ ಅವರ ಭೂಮಿಯಲ್ಲಿ ಕರಿಬೇವಿನ ಮಧ್ಯ ಹಾಗೂ ಹೊಲದ ಕಟ್ಟೆಯಲ್ಲಿ ಚೆನ್ನಂಗಿ ಎಂಬ ತಳಿಯ 150 ತೆಂಗಿನ ಸಸಿಗಳಿದ್ದು, ಅದು ಕೇರಳ ರಾಜ್ಯದವರೇ ಬಂದು 500 ರೂ. ಗೆ ಒಂದು ಸಸಿ ನೆಟ್ಟು ಹೋಗಿದ್ದಾರೆ. ಅವು ಫಸಲು ಬರುವುದಕ್ಕೆ ಇನ್ನೇರಡು ವರ್ಷ ಬೇಕು. ಹೊಲದ ಬದಿಯಲ್ಲಿ 50 ಮಾವಿನಕಾಯಿ ಮರಗಳಿವೆ. 60 ನಿಂಬೆಹಣ್ಣಿನ ಗಿಡಗಳಿವೆ. 32 ಪೇರಳೆ ಹಣ್ಣಿನ (ಜಾಪುಳಕಾಯಿಯ) ಗಿಡಗಳಿವೆ. ಕೆಲವೊಂದು ನೆರಳೆ ಮರಗಳಿವೆ. ಹಾಗೆಯೇ ಹತ್ತಾರು ಗಜಲಿಂಬೆ ಗಿಡಗಳಿವೆ.

ನಿಂಬೆಹಣ್ಣಿನ ಬೆಲೆ 1ಕೆ.ಜಿಗೆ ಕನಿಷ್ಠ 40 ರೂ.ಯಿಂದ ಗರಿಷ್ಠ 150 ರೂ. ಬೆಲೆ ಇರುತ್ತದೆ. ಇದರ ಬೆಲೆ ಕೂಡ ಏರಿಳಿತವಾಗುತ್ತದೆ. ಆದರೆ ಯಾವುದೇ ನಷ್ಟವಿಲ್ಲ. ಪೇರಳೆ ಹಣ್ಣು (ಜಾಪುಳಕಾಯಿ) ಸದ್ಯ 30 ರೂ. ಒಂದು ಕೆ.ಜಿ ಮಾರಾಟವಾಗುತ್ತಿದೆ. ಉಳಿದ ತೋಟಗಾರಿಕೆ ಬೆಳೆಯಿಂದಲೂ ಆದಾಯ ಬರುವ ನಿರೀಕ್ಷೆಯಲ್ಲಿ ವೀರಶೆಟ್ಟಿ ಅವರಿದ್ದಾರೆ.

3 ಎಮ್ಮೆಯ ಹೈನುಗಾರಿಕೆಯಿಂದ ಲಕ್ಷಾಂತರ ಆದಾಯ: ಈ ರೈತನ ಹತ್ತಿರ ಮೂರು ಎಮ್ಮೆಗಳಿದ್ದು, ಪ್ರತಿಯೊಂದು ಎಮ್ಮೆ ಬೆಳಿಗ್ಗೆ ಮತ್ತು ಸಾಯಂಕಾಲ ಸೇರಿ ದಿನಾಲೂ ಸುಮಾರು 10 ಲೀಟರ್ ಹಾಲು ನೀಡುತ್ತದೆ. ಹಾಗಾಗಿ ಪ್ರತಿದಿನ 20ರಿಂದ 25 ಲೀಟರ್ ಹಾಲು ಮಾರಾಟವಾಗಿ ದಿನಾಲೂ 1 ಸಾವಿರ ರೂ.ಗಿಂತಲೂ ಹೆಚ್ಚಿನ

ಆದಾಯ ಮಾಡುತ್ತೇವೆ. ಈ ಹಾಲಿನಿಂದಲೇ ವರ್ಷಕ್ಕೆ ಸುಮಾರು 2ಲಕ್ಷ ರೂ.ಗಿಂತಲೂ ಹೆಚ್ಚಿನ ಆದಾಯ ಬರುತ್ತದೆ. ಹಾಗೆಯೇ ಎಮ್ಮೆಗಳಿಂದಲೇ ಹೊಲಕ್ಕೆ ಗೊಬ್ಬರ ಕೂಡ ತಯಾರಾಗುತ್ತದೆ. ವೀರಶೆಟ್ಟಿ ಪಾಟೀಲ್ ಅವರು ವರ್ಷಕ್ಕೆ ಒಟ್ಟು ಕನಿಷ್ಠ 6 ಲಕ್ಷ ರೂ. ಗಿಂತಲೂ ಹೆಚ್ಚಾಗಿ ಆದಾಯ ಗಳಿಸುವ ರೈತರಾಗಿದ್ದಾರೆ.

share
ಚಿತ್ರಶೇನ ಫುಲೆ
ಚಿತ್ರಶೇನ ಫುಲೆ
Next Story
X