ಜಲಾಶಯದಲ್ಲಿ ನೀರು ಇದ್ದರೂ ನದಿಗೆ ಬಿಡುಗಡೆ ಇಲ್ಲ

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ತೀವ್ರ ಬರದ ಹಿನ್ನೆಲೆ ಸದ್ಯ ನದಿಗೆ ನೀರುಹರಿಸಲಾಗುತ್ತಿಲ್ಲ. ಇದರಿಂದ ಜಲಚರಗಳು ಮತ್ತು ನದಿ ಪಾತ್ರದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಜಲಾಶಯ ನಿರ್ಮಾಣವಾದಾಗಲೇ ನದಿಯನ್ನು ಸಂಪೂರ್ಣವಾಗಿ ಒಣಗಳು ಬಿಡದೆ ನದಿಯಲ್ಲಿನ ಜಲಚರಗಳಿಗಾಗಿ ಮತ್ತು ನದಿಯ ಅಕ್ಕ-ಪಕ್ಕ ಇರುವ ಜನ ಸಮೂಹಕ್ಕೆ ನೀರು ಸಿಗುವಂತಾಗಲು ನೀರು ಹರಿಸಲೇ ಬೇಕು ಎನ್ನುವ ತಿಳುವಳಿಕೆ ಮಾಡಿಕೊಳ್ಳಲಾಗಿದೆ.
ಎಲ್ ನಿನೊ ಪ್ರಭಾವದಿಂದ ಇದರಿಂದ ಕರ್ನಾಟಕ ರಾಜ್ಯದಲ್ಲೂ ಬರಗಾಲ ಉಂಟಾಗಿದ್ದು,ಕುಡಿಯುವ ನೀರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಸರಕಾರ ಜಲಾಶಯದಲ್ಲಿನ ನೀರು ಕಡಿಯಲು ಮಾತ್ರ ಬಳಸಲು ಸೂಚಿಸಿದ್ದು ಇದರಿಂದ ನದಿಗೆ ನೀರನ್ನು ಹರಿಸಲಾಗುತ್ತಿಲ್ಲ ಇದರಿಂದ ಜಲಾಚರಗಳು ಸೇರಿದಂತೆ ನದಿ ಪಾತ್ರ ಜನಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿವೆ.
ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ನದಿಯಲ್ಲಿನ ಮೀನುಗಳು, ನೀರುನಾಯಿ, ಆಮೆ ಮತ್ತು ಮೊಸಳೆಗಳು ನದಿಯಿಂದ ಹೊರ ಬರತೊಡಗಿವೆ. ಕೆಲವು ಕಡೆ ಮೊಸಳೆಗಳು ಜನ ಪ್ರದೇಶದ ಕಡೆ ಬಂದಿರುವ ಕುರಿತು ವರದಿಯಾಗಿವೆ.
ಈ ನಡುವೆ ವಿವಿಧ ರೈತ ಸಂಘಟನೆಗಳು 1.5 ಟಿಎಂಸಿ ನೀರನ್ನು ನದಿಗೆ ಮತ್ತು ವಿಜಯನಗರ ಕಾಲುವೆಗಳಿಗೆ ಹರಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹಗಳನ್ನು ನಡೆಸುತ್ತಿವೆ. ಸದ್ಯ ಜಲಾಶಯದಿಂದ ನೀರನ್ನು ಯಾವುದೇ ಕಾರ್ಖಾನೆಗಳಿಗೆ ಹರಿಸಲಾಗುತ್ತಿಲ್ಲ, ಎಲ್ಲಾ ಕಾರ್ಖಾನೆಗಳಿಗೆ ಎಪ್ರಿಲ್ ತಿಂಗಳಿನಲ್ಲೇ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ.
ಕೃಷಿಗೆ ಆಗಲಿ ಅಥವಾ ಬೇರೆ ಯಾವುದೇ ಚಟುವಟಿಕೆಗಳಿಗೆ ಬಳಸಲಾಗುತ್ತಿಲ್ಲ, ಕೇವಲ ಕುಡಿಯುವ ಸಲುವಾಗಿ ನೀರನ್ನು ಕಾಳುವೆಗಳಿಗೆ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೇ ನದಿಯಲ್ಲಿನ ಮೀನುಗಳನ್ನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುವ ಕುಟುಂಬಗಳು ಕೂಡ ಇದರಿಂದಾಗಿ ತೊಂದರೆಗೆ ಸಿಲುಕಿವೆ.
ನದಿಯಲ್ಲಿನ ನೀರು ಒಣಗಿದರೆ ಮೀನುಗಳು, ಕಪ್ಪೆಗಳು, ಏಡಿಗಳು ಆಮ್ಲಜನಕದ ಕೊರತೆಯಾಗಿ ಸಾವನ್ನಪ್ಪುವ ಸಾದ್ಯತೆಗಳು ಕೂಡ ಇವೆ. ಆದ್ದರಿಂದ, ಕೂಡಲೆ ಜಲಾಚರಗಳಿಗಾಗಿ ನದಿಗೆ ನೀರು ಹರಿಸಬೇಕೆಂಬ ಒತ್ತಾಯವೂ ಕೇಳಿ ಬರುತ್ತಿದೆ.






