ಬುಡಕಟ್ಟು ಪರಂಪರೆಯನ್ನು ಮುಂದುವರೆಸುತ್ತಿರುವ ಬಂಜಾರ ಸಮುದಾಯದ 'ದವಾಳಿ' ಆಚರಣೆ

ಭಾರತದ ಮೂಲ ನಿವಾಸಿಗಳಾದ ಬಂಜಾರರ ಇತಿಹಾಸವು ಸುಮಾರು 8,000 ವರ್ಷಗಳ ಪ್ರಾಚೀನವಾಗಿದೆ. ಈ ದೇಶದ ವಿವಿಧ ರಾಜ್ಯಗಳಲ್ಲಿ ಹೆಸರುಗಳು ವಿಭಿನ್ನ ರೂಪಗಳಲ್ಲಿ ಕಾಣಿಸುತ್ತವೆ. ಈ ಬಂಜಾರ ಬುಡಕಟ್ಟು ಜನಾಂಗವು ತಮ್ಮ ವಿಶಿಷ್ಟ ಸಂಸ್ಕೃತಿ, ಆಚರಣೆಗಳು ಮತ್ತು ಬೋಲಿಯನ್ನು (ಭಾಷೆಯನ್ನು) ಉಳಿಸಿಕೊಂಡಿದೆ. ಆದರೆ ಜಾಗತೀಕರಣ, ಅನ್ಯ ಸಂಸ್ಕೃತಿಗಳ ಪ್ರಭಾವ, ಸಂಸ್ಕೃತಿಯ ಮೇಲ್ಮುಕ ಚಲನೆ, ಇತ್ತೀಚಿನ ಕಾಲಘಟ್ಟದಲ್ಲಿ ತಮ್ಮ ಸಂಪ್ರದಾಯ ಮತ್ತು ಆಚರಣೆಗಳನ್ನು ಕಳೆದುಕೊಳ್ಳುವ ಭಯ ಭೀತಿಯ ಪರಿಸ್ಥಿತಿಯಲ್ಲಿದ್ದಾರೆ.
ಬಂಜಾರ ಸಮುದಾಯದಲ್ಲಿ ವಿವಿಧ ಹಬ್ಬ ಆಚರಣೆಗಳನ್ನು ಆಚರಿಸಲಾಗುತ್ತದೆ. ಈ ರೀತಿಯ ಹಬ್ಬ ಉತ್ಸವಗಳಲ್ಲಿ ದೀಪಾವಳಿಯು ಒಂದು. ಬಂಜಾರರು ದೀಪಾವಳಿಯನ್ನು ದವಾಳಿ ಎಂದು ಕರೆಯುತ್ತಾರೆ ಹಾಗೂ ಗೋರ್ ಬಂಜಾರ ಸಮುದಾಯವು ದೀಪಾವಳಿಯಲ್ಲಿನ ಕಾಳಿಮಾಸ್ ಅಂದರೆ ದೀಪಾವಳಿ ಅಮಾವಾಸ್ಯೆಯನ್ನು ಹೊಸ ವರ್ಷದ ಆಚರಣೆ ಎಂದು ಆಚರಿಸುತ್ತಾರೆ.
ಗೋರ್ ಬಂಜಾರರು ದೀಪಾವಳಿಯ ಮೊದಲನೆಯ ದಿನ ಕಾಳಿಮಾಸ್ ಹಾಗೂ ಎರಡನೆಯ ದಿನ ದಬುಕರ್ ದೇರೋ ದನ್ (ಪೂರ್ವಿಕರಿಗೆ ಎಡೆ ಇಡುವುದು) ಎಂದು ಆಚರಿಸುತ್ತಾರೆ.
ಅಮಾವಾಸ್ಯೆ (ಕಾಳಿಮಾಸ್) ಅಮಾವಾಸ್ಯೆಯ ದಿನ ತಾಂಡದ ಹಟ್ಟಿನಾಯಕರ ಮನೆಯ ಮುಂದೆ ಕಪ್ಪು ಆಡಿನ ಮರಿಯನ್ನು ಬಲಿ ಕೊಡಲಾಗುತ್ತದೆ. ಅಲ್ಲಿ ತಾಂಡದ ಹಿರಿಯರು ಒಬ್ಬರಿಗೊಬ್ಬರು ಹಣೆಯ ಮೇಲೆ ರಕ್ತ ತಿಲಕವನ್ನ ಹಚ್ಚಿಕೊಂಡು ಆಲಂಗಿಸಿಕೊಳ್ಳುತ್ತಾ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗೂ ಚೊಕೊ ಪೂಜಾ ಆಭರಣ ಹಾಗೂ ಆಯುಧಗಳನ್ನಿಟ್ಟು ಎಲ್ಲರ ಮನೆಗಳಲ್ಲಿ ಪೂಜೆ ನೆರವೇರಿಸುತ್ತಾರೆ. ಎಲ್ಲರೂ ಸೇರಿ ಭೋಜನವನ್ನು ತಯಾರಿಸಿ ಕತ್ತಲಾಗುವದರ ಒಳಗೆ ಸಾಮೂಹಿಕ ಭೋಜನ ಮಾಡಿ ಒಲೆಯ ಬೆಂಕಿಯನ್ನು ಆರಿಸಿ ತಮ್ಮ ಮನೆಗೆ ತೆರಳುತ್ತಿದ್ದರು.
ಸಂಜೆಯಾದ ತಕ್ಷಣ ನಾಯಕಣ್ (ಹಟ್ಟಿ ನಾಯಕರ ಮಡದಿ) ತಾಂಡದ ಯುವತಿಯರಿಗೆ ಆಹ್ವಾನ( ಆರೋಳಿ )ನೀಡುತ್ತಾರೆ.
ಹಾಳದಿ ಮಳದಿ ಗಾಟ್ ಗಟಳೋ
ಸುವಾ ಮಟಳೋ
ದೀವೋ ಗೋಚ್ ಕಪಾಳೇರ ಪಾರ
ಆವೋಯೇ ನಾರ ದೀವೋ ಬಾಳಾ
ನಾನಕ ಮೋತೀ ಫೂಲೋ ವಘಾಡಾ.
(ಲಾವಣಿ)
ಮುಂದಿನ ವರ್ಷದಲ್ಲಿ ವಿವಾಹ ಆಗಿ ಬೇರೆ ತಾಂಡಗಳಿಗೆ ತೆರಳುವ ಯುವತಿಯರು ಮರಿಯಮ್ಮ ಸತ್ಗರು ಸೇವಾಲಾಲ್ ದೇವಸ್ಥಾನದ ದೀಪ ಹಚ್ಚಿ ಪ್ರಾರ್ಥನೆ ಮಾಡುತ್ತಾರೆ ಹಾಗೂ ಯಾಡಿ ಮರಿಯಮ್ಮ ಸತ್ಗರು ಸೇವಾಭಾಯ ಬಳಿ ಮೇರಾ ಅಂದರೆ ಆಶೀರ್ವಾದ ಬೇಡುತ್ತಾರೆ, ನಂತರ ತಾಂಡದ ನಾಯಕ್ ನಾಯ್ಕಣ ಹಾಗೂ ಗುರು ಹಿರಿಯರ ಬಳಿ ಹೋಗಿ
ವರಸೆ ದನೇರ ಕೋಟ ದವಾಳಿ ಸೇವಾಭಾಯ ತೋನ ಮೇರಾ.
ವರಸೆ ದನೆರ ಕೋಟ್ ದವಾಳಿ ಮರಿಯಮ್ಮ ತೋನ ಮೇರಾ.
ವರಸೆ ದನೇರ ಕೋಟ ದವಾಳಿ ನಾಯಕ ನಾಯಕಣ ತಮೇನ (ಮೇರಾ).
ಆಶೀರ್ವಾದ ಕೇಳುವ ಯುವತಿಯರಿಗೆ ಒಂದು ರೂಪಾಯಿ ನಾಣ್ಯವನ್ನು ಉಡುಗೊರೆಯಾಗಿ ನೀಡಿ ದೀಪದಲ್ಲಿ ಎಣ್ಣೆ, ಬೆಲ್ಲ ನೀಡಿ ಬಾಯಿ ಸಿಹಿ ಮಾಡಿ ಆಶೀರ್ವದಿಸುತ್ತಾರೆ. ಈ ಒಂದು ರೂಪಾಯಿ ನಾಣ್ಯ ತಾಂಡಾದ ಸ್ಮರಣೆಗೆ ಸವಿ ನೆನಪಿಗೆ ಮದುವೆಯಲ್ಲಿ ಬಂಜಾರ ಸಾಂಪ್ರದಾಯಕ ಉಡುಪು ಘುಂಗಟೋದಲ್ಲಿ ಸೇರಿಸಿ ಕಸೂತಿ ಹೊಲೆಯುತ್ತಾರೆ.
ಮನೆಯಿಂದ ಮನೆಗೆ ತೆರಳುವಾಗ...
ರಾತ್ ಅಂದೇರಿಯೇ ದಿವಲೋ ಬಾಳಲಿಜೋ
ಪಾಣಿರೊ ತೋಟೊಯೆ ಝೋರೀ ಝೋಕಳಲಿಜೊ
ಕುತರಾ ಭಸದಿಯತೊ ಹಡಹುಡ ಕರತೀಜೊ
ಘರ ಸಕಳಾಯಿ ಮಕಳಾಯಿ ಕರಲೀಜೊ
ವಾಟೇಪ ಹವೇಲಿಯೇ ವೀರಾವಾಳಿ ಆಯೇನ ದ.
ಅಯೇನ ದ ಯೇ ಬಾಯೀ ಜಾಯೆನ ದ
ಝೂರಿ ಝಕೋಳ ಪಾಣೀ ಪೀಯೇನ ದ
ಟೌಟಾಕೇರೀ ಥೀಕಳಿ ಬೇಸೇನ ದ
ಬಾಳಿಯಾ ಘೋಡಲೋ ಬೇಸೇನ ದ
ರಾತ ಅಂದೇರಿಯೆ ದಿವಲೊ ಬಾಳಲೀಜೊ.
ಪಾಣೀರೋ ತೋಟೋಯೇ ಝೂರೀ ಝಕೊಳಲಿಜೊ.
ಎಂದು ಹಾಡುತ್ತಾ ಬಂಜಾರ ಸಮುದಾಯದ ಮೇಲೆ ಆಗಿರುವ ಶೋಷಣೆಯನ್ನು ನೆನಪಿಸಿಕೊಳ್ಳುತ್ತಾ, ಸಾವಿರಾರು ವರ್ಷಗಳಿಂದ ಕತ್ತಲೆಯಲ್ಲಿದ್ದೀರಿ ನಾನು ದೀಪ ಹಿಡಿದುಕೊಂಡು ಬಂದಿದ್ದೇನೆ ನೀವು ಪ್ರಗತೀ ಪರಿವರ್ತನೆಯಡೆ ಬೆಳಕಿನೆಡೆಗೆ ಸಾಗಿರೆನ್ನುತ್ತಾ ತಾಂಡದಲ್ಲಿರುವ ಮನೆಗಳಿಗೆ ಭೇಟಿ ನೀಡಿ ಆಶೀರ್ವಾದ (ಮೇರಾ) ಪಡೆಯುತ್ತಾ ಈ ಸಂದೇಶವನ್ನ ಸಾರುತ್ತಾರೆ.
ಅಮಾವಾಸ್ಯೆಯ ಮಾರನೆಯ ದಿನ ಬೆಳಗಿನ ಜಾವ ತಾಂಡದಲ್ಲಿರುವ ಯುವಕರು ಧಾನ್ಯ ಕೇಳುವ ಮತ್ತು ಮರದ ಕೈ ಚಮಚವನ್ನು (ಚಾಟು ಅನ್ ಛಾದಲಾ ಕೂಟನ ತುಕಾರಿ/ಸಿಂಧೂ ರಾಜ್ಯ) ಲಯಬದ್ಧವಾಗಿ ಬಾರಿಸುತ್ತ ತಮ್ಮ ದನ ಕರುಗಳ ಕೊಟ್ಟಿಗೆಯ ಸುತ್ತಲೂ ಹಾಡುತ್ತಾ ನರ್ತಿಸುತ್ತಾ ಸುತ್ತುವರಿಯುತ್ತಾರೆ.
ಅಗ ಝಡ ಬಗ ಝಡ
ಗಂಗೋಡ ಝಡಜೋ
ಆಳಸ ನಿಕಳ ಲಾರ ಬೇಸ್
ವೂಟ ರಂಡೀ ಭಾರ ಬೇಸ್.
ಇತ್ತ ಬಂಜಾರ ಯುವತಿಯರು ಎಲ್ಲರೂ ಸೇರಿಕೊಂಡು ತಾಂಡಾದ ಹತ್ತಿರ ಇರುವ ಕಾಡಿನ ಕಡೆ ತೆರಳಿ ಆಗಷ್ಟೇ ಬೆಳೆದ ಹೂವುಗಳನ್ನು ಸಂಗ್ರಹಿಸಲು ಹೋಗುವಾಗ ತಮ್ಮ ಇತಿಹಾಸದ ಹಾಡುಗಳನ್ನು ಹಾಡುತ್ತಾ ಹೋಗುತ್ತಾರೆ.
ದನೇ ದವಾಳೀರೋ ಸಣ್ ಛ ಯೇ ಸಾತಣೋ.
ಬರೂ ಫೂಲ್ ಲೇಯೇನ ಚಾಲೋಯೇ ಯಾ
ದನೇ ದವಾಳೀರೋ ಸಣ್ ಛ ಯೇ ಸಾತಣೋ
ಹರಿ ಭರೀ ತಮ ರೀಜೋ ಯೇ ಯಾ
ರೀ ರಾ ಸಾಯಿ ಲೇ ಸಾಯೀ ಬೋಲತೀ ಜೋ ಯೇ ಯಾ.
ದನ ದವಾಳೀರೋ ಸಣ ಛ ಯೇ ಸಾತಣೋ
ಛೇಳೀರೋ ಛೇಳಕ್ಯಾ ಢೋರೂರೋ ಢೋರೂಕ್ಯಾ
ಬರ್ರೂರೀ ಖಬರ ಮನ ಕೇದೋರೇ ಆಜ
ದನ ದವಾಳೀರೋ ಸಣ ಛ ಯೇ ಸಾತಣೋ
ಲಾಂಬಡೀರ ಫೂಲ ಲೇಯೇನ ಜಾಮಾ ಯೇ ಆಜ
ಖಾಳಿಯಾರೋ ವಾವಾರ ಛ.
ಖೇಚಡೀರೋ ಝಾಡ ಛ ಯೇ
ವೋರೇ ಹೇಟ ವೀರೇಣಾ ಸುತೋಛ
ಯೇ ಆಜ
ಹಾತೇಮ ಝೂರೀ ಪಾಟಲೀಮ ಚುಮರೋ
ಚಲೀ ಜಾರಿಯೇ ವಿರೇಣಾರೇ ಖಬರೇನ
ವೂಟರೇ ವೀರೇಣಾ ಹಾತ್ ಮುಂಡೋ ಧೋಲ
ಮುಠೀ ಏಕ ಚುರಮೋ ಖಾಲರೇ ವೀರೇಣಾ
ಝೂರೀ ಝಕೋಳ ಪಾಣೀ ಪೀಲರೇ ವಿರೇಣಾ
ವೀರಾರೇ ದಾಮಣೀತೀ ಛುಟೀಯೇ ಬಳದ
ಬಳದ ಢುಂಗರೇತೀ ಹಾಲ ಸೋ ಮೋರ್
ಕಾಂಯಿ ಖಾವಚ ವೀರಾ ಢುಂಗರೇತೀ ಬಳದ
ವೋ ಪೀವರೋ ಗಂಗಾರೋ ಯೇ ಪಾಣೀ
ಕೂಣ ವಜಾಯೋ ರಂಗೀ ವಾಸಳೀಯೇ ಭುರಿಯಾ
ಯೇ ಭೂರಿಯಾ ವರತೀ ಆವ ಯೇ ಝೂಲ
ಕೂಣ ಸಿಡಾಯೋ ತಾರೋ ಢಾಬಳೋ ಯೇ ಪಾಮಡೀ
ಯೇ ಕೂಣ ಲಗಾಯೋ ಲಾಂಬೀ ಡೋರ್.
ಲಾಂಬಡೀಯೇ ಲಾಂಬಡೀ
ತಾರೀ ಕಾಡೂ ಚಾಂಬಡೀ
ವೋ ಚಾಂಬಡೀಮ ಬೇಳೋಯೇ ಸೀಂದಿಯಾ ನೂಣ್.
ಹೀಗೆ ಕಾಡಿನಲ್ಲಿರುವ ಹೂವುಗಳನ್ನು ಫಲ ಪುಷ್ಪಗಳನ್ನು ಸಂಗ್ರಹಿಸಿಕೊಂಡು ಹಾಡು ಹಾಡುತ್ತಾ ಯುವತಿಯರು ಮರಳಿ ತಾಂಡಾದ ಸತ್ಗರು ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಹೂವುಗಳನ್ನ ಇಟ್ಟು ನೃತ್ಯ ಮಾಡುತ್ತಾ ಕುಲ ದೇವರನ್ನು ಆರಾಧಿಸುತ್ತಾರೆ.
ದೀಪಾವಳಿಯ ದಿನ ತಾಂಡದ ಎಲ್ಲಾ ಮನೆಗಳಲ್ಲಿ ಹಿರಿಯರ ಪೂಜೆ (ದಬುಕರ್) ಮೂಲಕ ನೆರವೇರಿಸುತ್ತಾರೆ. ಹಾಗೆಯೇ ಯುವತಿಯರು ಕಾಡಿನಿಂದ ತಂದ ಹೂವುಗಳನ್ನು ಮನೆಯ ಕೊಟ್ಟಿಗೆಯಲ್ಲಿ, ಪೂಜಾ ಸ್ಥಳದಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಹೂವುಗಳನ್ನು ಇಟ್ಟು ಗೋಧನ್ ಪೂಜಾ ನೆರವೇರಿಸುತ್ತಾ ಈ ರೀತಿ ಆ ಕುಟುಂಬದವರಿಗೆ ಹಾರೈಸುತ್ತಾರೆ.
ಖೆವಡಿಯಾ ಮೇವಡಿಯಾ
ಬಾಂಡಿಯಾ ಬುಚಿಯಾ
ಛಾದಲಾಸ ಕಾನೇರ ಛೋಡಕಾಸ ದಾಂತೇರ
ಘೋಡೇರೀ ಘನಾಳೇ ಊಂಟೇರೀ ಕಠಾರೇ
ಧೋಳೀ ಹಾರೇ ಪೀಳೀ ಹಾರೇ
ಲೂಣೀರೋ ಲಚಕೋ ಜಾಮಣೆರೋ ಸಡಕೋ
ದಾಮಣ ಭರೀ ಗಾವಡೀ ದೊಡ್ಡಿ ಭರೀ ಛೇಳೀ
ಘರ ಘರ ವೇಗಿ ಪನವಾಳೀ
ಚಾಂದಾ ಸೂರಿಯಾ ದಾಡೇಮ
ವಜಾಳೋ ಪಡಗೋ ಘರೇಮ
ಘಣೋ ಘಣೋ ದೇಸ ದವಾಳೀ ಮಾತಾ
ಮಾರ ವೀರಾರೀ ಟಾಂಗೇ ರೂಂಚೀ ಕರೇಸ.
ದೀಪಾವಳಿಯ ಸಂಜೆ ಗೋಧನ್ ಪೂಜೆ ನೆರವೇರಿಸಿ ಯುವತಿಯರು ಒಂದೆಡೆ ಸೇರಿ ಸಿಹಿ ಭೋಜನ ತಯಾರಿಸಿ ಸಹಪಂಕ್ತಿ ಭೋಜನ ಮಾಡುತ್ತಾರೆ.
ಹೀಗೆ ದೀಪಾವಳಿಯು ಬಂಜಾರ ಸಮುದಾಯದಲ್ಲಿ ಹಿಂದೆ ಈ ಸಮುದಾಯದ ಮೇಲಾಗಿರುವ ದಾಳಿ ಅನ್ಯಾಯ ಹಾಗೂ ಕಳೆದುಹೋಗಿರುವ ಗೋ ಸಂಪತ್ತು, ಪ್ರಕೃತಿ ಪೂಜೆ, ಗುರು ಹಿರಿಯರ ಪೂಜೆಯ ಮೂಲಕ ವಿಭಿನ್ನವಾದ ಆಚರಣೆಯ ಮೂಲಕ ಬುಡಕಟ್ಟು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಈ ಸಮುದಾಯವು ಇಂದು ತುಂಬಾ ಸಂಕ್ರಮಣದ ಕಾಲಘಟ್ಟದಲ್ಲಿದೆ. ಅಪರೂಪದ ಈ ದವಾಳೀ ಮೇರಾ ಮಾಂಗೇರೋ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಮೇಲಿದೆ.
ಮಾಣಾವತ್ ಭೋಜರಾಜ್ ನಾಯಕ್
MA, BEd
ಶಿಕ್ಷಕರು, ಬಂಜಾರ ಸಂಸ್ಕೃತಿ ಚಿಂತಕರು.
ಮುದ್ದನಹಳ್ಳಿ-ತಾಂಡಾ.ಶಿಕಾರಿಪುರ ತಾಲ್ಲೂಕು
ಶಿವಮೊಗ್ಗ-ಜಿಲ್ಲೆ.







