Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿದ್ದು 2.0 ಸರ್ಕಾರ ಎಸಗಿರುವ 10...

ಸಿದ್ದು 2.0 ಸರ್ಕಾರ ಎಸಗಿರುವ 10 ಸಾಮಾಜಿಕ ಅನ್ಯಾಯಗಳು

ಶಿವಸುಂದರ್ಶಿವಸುಂದರ್10 Jan 2026 12:10 PM IST
share
ಸಿದ್ದು 2.0 ಸರ್ಕಾರ ಎಸಗಿರುವ  10 ಸಾಮಾಜಿಕ ಅನ್ಯಾಯಗಳು

ಆತ್ಮೀಯರೇ ,

ಸಿದ್ಧರಾಮಯ್ಯನವರು ದೇವರಾಜ ಅರಸರ ದಾಖಲೆಯನ್ನು ಮೀರಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾದವರೆಂಬ ಇತಿಹಾಸ ಸೃಷ್ಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಅವರ ಸಾಧನೆಯ ಬಗ್ಗೆ ಜಾಹಿರಾತುಗಳ, ಪ್ರಗತಿಪರರ ಹೇಳಿಕೆಗಳ ಮಹಾಪೂರ ಹರಿಯತೊಡಗಿದೆ.

ಇವೆಲ್ಲದರಲ್ಲೂ ಒಂದಷ್ಟು ಸತ್ಯವಿದೆ. ಸಾಮಾಜಿಕ ನ್ಯಾಯದ ಪರವಾದ , ಸಂವಿಧಾನ ಪರವಾದ, ಕೋಮು ಸೌಹಾರ್ದ ಪರವಾದ ಸಿದ್ಧರಾಮಯ್ಯನವರ ಸ್ಪಷ್ಟ ಹಾಗೂ ಖಡಕ್ ಮಾತುಗಳು ದಲಿತ ಮತ್ತು ದಮನಿತರಲ್ಲಿ ಭರವಸೆಯನ್ನು ಹುಟ್ಟಿಸಿದ್ದು ನಿಜ. ಆದರೆ ಆ ಭರವಸೆಗಳನ್ನು ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಈಡೇರಿಸಿದೆಯೇ ಅಥವಾ ಬಿಜೆಪಿ ಕಾಲದ ವಂಚನೆಗಳನ್ನು ಮುಂದುವರೆಸಿವೆಯೇ?

ಸಿದ್ದರಾಮಯ್ಯನವರ ಸಾಧನೆಗಳ ಬಗ್ಗೆ ಸಾಕಷ್ಟು ಉತ್ರೇಕ್ಷಿತ ಚರ್ಚೆಯಾಗುತ್ತಿದೆ. ಆದರೆ ಸಿದ್ಧರಾಮಯ್ಯನವರ ಅಧಿಕಾರ ಕಾಲಘಟ್ಟದಲ್ಲಿ ಕಾಂಗ್ರೆಸ್ಸಿನ ಜಾಯಮಾನಕ್ಕೆ ತಕ್ಕಂತೆ ಮೃದು ಹಿಂದೂತ್ವಕ್ಕೆ ಪೂರಕವಾದ , ಕಾರ್ಪೊರೇಟ್ ಪರವಾದ ಹಲವಾರು ಸಾಮಾಜಿಕ ಆನ್ಯಾಯಗಳು ನಡೆದಿವೆ. ನಡೆಯುತ್ತಿವೆ..

ಅವುಗಳಲ್ಲಿ ಹತ್ತು ಪ್ರಮುಖ ಸಾಮಾಜಿಕ ಅನ್ಯಾಯಗಳು ಇಂತಿವೆ:

1. ಸಂಘಿ ಶ್ರೀಗಳಿಂದ ಆಶೀರ್ವಚನ :

ಅಧಿಕಾರಕ್ಕೆ ಬಂದಕೂಡಲೇ ಹೊಸ ಶಾಸಕರ ತರಬೇತಿಯ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಸ್ಪೀಕರ್ ಇಂದ ಸಂಘಿ ಮನಸ್ಥಿತಿಯ ಶ್ರೀಗಳಿಂದ ಆಶೀರ್ವಚನ

2. ಬಾಬಾಬುಡನ್ ದರ್ಗಾದಲ್ಲಿ ಸಂಘಿಗಳ ಅಜೇಂಡಾ ಜಾರಿ:

ಬಾಬಾಬುಡನ್ ದರ್ಗಾ ವಿಷಯದಲ್ಲಿ ತನ್ನದೇ ಸರ್ಕಾರದ ನಿಲುವಿಗೆ ವಿರುದ್ಧವಾಗಿ ಸಂಘಿಗಳ ಆಗ್ರಹಕ್ಕೆ ತಕ್ಕಂತೆ ಅರ್ಚಕನ ನೇಮಕಾತಿಗೆ ಒಪ್ಪಿಗೆ

3. SCSP , TSP ನಿಧಿಯ ದುರ್ಬಳಕೆ:

ಗ್ಯಾರಂಟಿಗಳಿಗೆ ಬೇಕಾದ ಸಂಪನ್ಮೂಲವನ್ನು ಆಡಳಿತ ಸುಧಾರಣೆ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ಅಧಿಕ ತೆರಿಗೆ ಸಂಪನ್ಮೂಲ ಕ್ರೂಢೀಕರಣ ಮತ್ತು ಭ್ರಷ್ಟಾಚಾರ ನಿಗ್ರಹದ ಮೂಲಕ ಪೂರೈಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರೂ ಅವೇನನ್ನು ಮಾಡದೆ SCSP , TSP ನಿಧಿಯಾ ದುರ್ಬಳಕೆ ಮತ್ತು ತಳಸಮುದಾಯಗಳ ಇತರ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳಿಗೆ ಹಣದ ಕೊರತೆ. ಈ ದುರ್ಬಳಕೆಯ ಬಗ್ಗೆ ಬಿಜೆಪಿಗೆ ಯಾವುದೇ ವಿಮ್ಸರಿಹೆ ಮಾಡುವ ಅಧಿಕಾರವಿಲ್ಲ. ಏಕೆಂದರೆ ಅವರ ಆಳ್ವಿಕೆಯ ರಾಜ್ಯಗಳಲ್ಲಿ ಇದನ್ನು ಅವರು ಜಾರಿಗೂ ತಂದಿಲ್ಲ. ಆದರೆ ಬಾಧಿತ ಸಮುದಾಯಗಳ ದೃಷ್ಟಿಯಲ್ಲಿ ಇದೊಂದು ಮಹಾ ಸಾಮಾಜಿಕ ಅನ್ಯಾಯವೇ ಅಲ್ಲವೇ?

4. ಬಲಿಷ್ಠ ಜಾತಿಗಳಿಗೆ ಮಣಿದು ಕಾಂತರಾಜ್ ವರದಿ- ಸಾಮಾಜಿಕ ನ್ಯಾಯ ಮೂಲೆಗುಂಪು :

ಸಾಮಾಜಿಕ ನ್ಯಾಯ ಜಾರಿ ಮಾಡಲು ಅತ್ಯಗತ್ಯವಾಗಿದ್ದ ಜಾತಿಗಳ ಸಾಮಾಜಿಕ ಸ್ಥಿತಿಗತಿಯ ಸಮೀಕ್ಷೆಯ ಕಾಂತರಾಜ್ ವರದಿಯನ್ನು ಬಿಜೆಪಿಯ ಮತ್ತು ಕಾಂಗ್ರೆಸ್ಸಿನೊಳಗಿನ ಮನುವಾದಿಗಳ ಒತ್ತಡಕ್ಕೆ ಮಣಿದು ನಿರಾಕರಣೆ. ತಯಾರಿಯಿಲ್ಲದ, ಮತ್ತೊಂದು ಅವಸರದ , ಅಪೂರ್ಣ ಸಾರದಲ್ಲಿ ಪರಿಣಾಮಕಾರಿಯಲ್ಲದ ಸಾಮಾಜಿಕ ಸಮೀಕ್ಷೆ ನಡೆಸಿದೆ.

5. ಪರಿಶಿಷ್ಟರ ಒಳಮೀಸಲಲ್ಲಿ ಅಲೆಮಾರಿಗಳಿಗೆ ಮಹಾ ಅನ್ಯಾಯ :

ಸುಪ್ರೀಂ ತೀರ್ಪು ಬಂದ ನಂತರವೂ ಒಳಮೀಸಲಾತಿ ಅನುಷ್ಠಾನಕ್ಕೆ ಮೀನಮೇಷ. ವೈಜ್ಞಾನಿಕವಾದ ನ್ಯಾ. ನಾಗಮೋಹನ್ ದಾಸ್ ವರದಿ ತಿರಸ್ಕಾರ . ಪ್ರಶ್ನಾರ್ಹ 6:6:5 ಸೂತ್ರ ಜಾರಿ. ಎಲ್ಲಕ್ಕಿಂತ ಹೆಚ್ಚಯಾಗಿ ಪರಿಶಿಷ್ಟರಲ್ಲೆ ಅತ್ಯಂತ ಹಿಂದುಳಿದ ಅಲೆಮಾರಿಗಳನ್ನು ಪರಿಶಿಷ್ಟರಲ್ಲಿ ಸಾಪೇಕ್ಷವಾಗಿ ಮುಂದುವರೆದ ಜಾತಿಗಳ ಜೊತೆ ಸೇರಿಸಿ, ಅಲೆಮಾರಿಗಳು ಹಿಂದುಳಿದಿಲ್ಲ ಎಂದು ಹೈಕೋರ್ಟಿನಲ್ಲಿ ವಾದಿಸಿರುವ ಮಹಾದ್ರೋಹ.

6. ನಕ್ಸಲ್ ಶರಣಾಗಾತಿಯ ಬಗ್ಗೆ ಅಪ್ರಾಮಾಣಿಕ ಧೋರಣೆ :

ಸಿದ್ದು ಸರ್ಕಾರದ ನಕ್ಸಲ್ ಶರಣಾಗತಿ ಯೋಜನೆಗೂ ಬಿಜೆಪಿ ಸರ್ಕಾರಗಳ ಶರಣಾಗತಿ ಯೋಜನೆಗೂ ಸಾರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ವಿಕ್ರಂ ಗೌಡ ರನ್ನು ಸೆರೆ ಹಿಡಿಯಬಹುದಾಗಿದ್ದರೂ ಕ್ರೂರವಾಗಿ ಕೊಂದು ಹಾಕಿ ಅದನ್ನು ಹೆಮ್ಮೆಯಿಂದ ಸಿದ್ದು ಸರ್ಕಾರವೂ ಸಮರ್ಥಿಸಿಕೊಂಡಿತ್ತು. ಸಿದ್ದು ಮೊದಲ ಅವಧಿಯಲ್ಲಿ ಶರಣಾಗತರಾದ ಕನ್ಯಾಕುಮಾರಿ ಇನ್ನಿದುವರೆಗೂ ಸೆರೆಯಲ್ಲೇ. ಪದ್ಮನಾಭ ಇನ್ನಿತರ ಶರಣಾಗತರಾದ ನಕ್ಸಲರಿಗೆ ಪುನರ್ ವಸತಿಯೂ ಇಲ್ಲ. ತ್ವರಿತವಾದ ನ್ಯಾಯ ಪ್ರಕ್ರಿಯೆಯೂ ಇಲ್ಲ. ಹೋದವರ್ಷ ಶರಣಾಗತರಾದ ಆರು ನಕ್ಸಲರ ವಿಷಯದಲ್ಲೂ ಉದ್ದುದ್ದು ಹೇಳಿಕೆಗಳು ಬಿಟ್ಟರೆ ಪರಿಣಾಮಕಾರಿಯಾದ ಆಡಳಿತಾತ್ಮಕ ಅಥವಾ ಅನ್ಯಾಯಿಕ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿ ಶಾಸಿತಾ ರಾಜ್ಯಗಳಲ್ಲಿ ಕೇಸುಗಳನ್ನೂ ವಾಪಾಸ್ ಪಡೆಯಲಾಗುತ್ತಿದೆ., ತ್ವರಿತ ಪುನರ್ ವಸತಿಯನ್ನೂ ಮಾಡಲಾಗುತ್ತಿದೆ.

7. ದೇವನಹಳ್ಳಿ ರೈತರಿಗೆ ಅನ್ಯಾಯ ಮತ್ತು ಸೇಡಿನ ಕ್ರಮ :

ದೇವನಹಳ್ಳಿಯ ರೈತರ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಕಬಿಡುವುದಾಗಿ ಘೋಷಿಸಿ ಪ್ರಗತಿಪರ , ರೈತ ಸಂಘಟನೆಗಳಿಂದ ಅಪಾರವಾಗಿ ಹೊಗಳಿಸಿಕೊಂಡಿದ್ದ ಸಿದ್ದು ಸರ್ಕಾರ ಡಿ ನೋಟಿಫಿಕೇಶನ್ ಮಾಡಿರಲೇ ಇಲ್ಲ. ಕೊನೆಗೆ ಡಿಸೇಂಬರ್ ನಲ್ಲಿ ಮಾಡಿದ ಆದೇಶದಲ್ಲಿ ರೈತರು ಆಗ್ರಹಿಸುತ್ತಿದ್ದಂತೆ ಸರಳ ಡಿ ನೋಟಿಫಿಕ್ಸಷನ್ ಮಾಡದೆ, ರೈತರು ಕೇಳದಿದ್ದರೂ ಅದನ್ನು ಕಾನೂನಲ್ಲೇ ಇಲ್ಲದ ರೀತಿಯಲ್ಲಿ ಶಾಶ್ವತ ಕೃಷಿ ವಲಯ ಎಂದು ಘೋಶಿಸಿ, ಪರೋಕ್ಷವಾಗಿ ಆ ರೈತರನ್ನು ಕೃಷಿ ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡಲು ಯೋಜನೆ ರೂಪಿಸುತ್ತಿದೆ. ಸೇಡು ತೀರಿಸಿಕೊಳ್ಳುತ್ತಿದೆ. 2013 ರಲ್ಲಿ ತನ್ನ ನೇತೃತ್ವದ UPA ಸರ್ಕಾರ ರೈತರ ಜಮೀನನನ್ನು ಅವರ ಒಪ್ಪಿಗೆ ಇಲ್ಲದೆ ವಶಪಡಿಸಿಕೊಳ್ಳಬಾರದೆಂಬ ನೀತಿಗೂ ತಾನೇ ಕಾರ್ಪೊರೇಟ್ ಪರವಾದ ತಿದ್ದುಪಡಿಗಳನ್ನು ತಂದು ಬಿಜೆಪಿ ಸರ್ಕಾರದಂತೆ ತಾನೂ ರೈತದ್ರೋಹ ಬಗೆದಿದೆ.

8. ಕಾಂಗ್ರೆಸ್ಬು ಸರ್ಕಾರ- ಬಿಜೆಪಿ ಬುಲ್ಡೋಜರ್? :

ಕೋಗಿಲು, ಥಣಿಸಂದ್ರ ಇನ್ನಿತರ ಬೆಂಗಳೂರಿನಲ್ಲಿಇರಬಹುದಾದ 1200 ಕ್ಕೂ ಹೆಚ್ಚು ಅನಧಿಕೃತಾ ಸ್ಲಮ್ ಗಳಲ್ಲಿ ಪ್ರಾಣಿಗಳಂತೆ ಬದುಕುತ್ತಿರುವ ಆದರೆ ಈ ದೇಶದ ನಾಗರಿಕರೇ ಆದ ಸ್ಲಾಮ್ ವಾಸಿಗಳಿಗೆ ಘನತೆಯಿಂದ ಬದುಕಲು ಅವಕಾಶ ಕಲ್ಪಿಸಬೇಕಾದದ್ದು ಸಾಮಾಜಿಕ ನ್ಯಾಯ. ಬಿಜೆಪಿ ಸರ್ಕಾರಗಳು ಅವರನ್ನು ನಾಗರಿಕರೇ ಅಲ್ಲವೆಂದು ಬುಲ್ಡೋಜರ್ ಚಲಾಯಿಸುತ್ತದೆ. ಅದು ಸಾಮಾಜಿಕ ಅನ್ಯಾಯ. ಅನಾಗರಿಕ. ಅಮಾನವೀಯ.

ಆದರೆ ನು ಸಾಮಾಜಿಕ ನ್ಯಾಯಕ್ಕೆ ಬದ್ಧ ಎನ್ನುವ ಸಿದ್ದು ಸರ್ಕಾರ ಕೂಡ ರಾತ್ರೋರಾತ್ರಿ ಬುಲ್ಡೋಜರ್ ಹರಿಸಿ ಬಡ ಗುಡಿಸಲುವಾಸಿಗಳನ್ನು ಬೀದಿ ಪಾಲು ಮಾಡುತ್ತಿದೆ.. ಕಾರ್ಪೊರೇಟ್ ಅಭಿವೃದ್ಧಿಗಾಗಿ. ಹಾಗಿದ್ದಲ್ಲಿ ಮೋದಿಯ ಕಾರ್ಪೊರೇಟ್ ವಿಕಸಿತ ಭಾರತಕ್ಕೂ, ಸಿದ್ದು ಸರ್ಕಾರದ ಬಿಲ್ಡ್ರರ್ ಗಳ ಗ್ರೇಟರ್ ಬೆಂಗಳೂರಿಗೂ ಏನು ವ್ಯತ್ಯಾಸ . ಬಿಜೆಪಿಯ ಬುಲೆಟ್ ಟ್ರೈ ನ್ ನಗರ ನೀತಿಯಲ್ಲಿ ಸ್ಲಮ್ ಭಾರತದ ಅಭಿವೃದ್ಧಿಯ ನೀಲನಕ್ಷೆಯೇ ಇಲ್ಲ. ಹಾಗೆಯೇ , ಸಿದ್ದು ಸರ್ಕಾರದ ಟನೆಲ್ ರೋಡ ನಗರ ಯೋಜನೆಯಲ್ಲಿ ನಗರದ ಬಡವರಿಲ್ಲ. ಬಿಜೆಪಿಯ ಬುಲ್ಡೋಜರ್ ಎಷ್ಟು ಸಾಮಾಜಿಕ ಅನ್ಯಾಯವೋ ಕಾಂಗ್ರೆಸ್ಸಿನ ಬುಲ್ಡೋಜರ್ ಕೂಡ ಅಷ್ಟೇ ಸಾಮಾಜಿಕ ಅನ್ಯಾಯ ..

9. KPS ಶಾಲೆಗಳು: ಅಹಿಂದ ವರ್ಗದ ಮಕ್ಕಳಿಗೆ ಅಕ್ಷರ ಅನ್ಯಾಯ :

ಬಿಜೆಪಿ ಸರ್ಕಾರ ತನ್ನ ಜನವಿರೋಧಿ , ಜನದ್ರೋಹಿ ಹಿಂದೂತ್ವ ವಾದಿ ಕಾರ್ಪೊರೇಟ್ ಪರ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯ ಭಾಗವಾಗಿ ಸರ್ಕಾರಿ ಶಾಲೆಗಳ ಮುಚ್ಚುವಿಕೆಯ ಹೆಸರಿನ ಮಹಾನ್ ಸಾಮಾಜಿಕ ಅನ್ಯಾಯದ ಯೋಜನೆಯನ್ನು ಜಾರಿ ಮಾಡಿದೆಯಷ್ಟೆ. ಈಗ ಸಾಮಾಜಿಕ ನ್ಯಾಯದ ಸಿದ್ದು ಸರ್ಕಾರ ಕೂಡ ಅದೇ ಉದ್ದೇಶದಿಂದ KPS ಮತ್ತು ಮ್ಯಾಗ್ನೆಟ್ ಶಾಲಾ ಯೋಜನೆಯನ್ನು ವೇಗವಾಗಿ ಜಾರಿಗೆ ತರುತ್ತಿದೆ.

ಇದರಿಂದಾಗಿ 32000 ಸರ್ಕಾರಿ ಶಾಲೆಗಳನ್ನು ಮುಚ್ಚಿ ಗ್ರಾಮೀಣ ಪ್ರದೇಶದ ಅಹಿಂದ ವರ್ಗದ ಬಡ ಮಕ್ಕಳಿಗೆ ಸಿಗುತ್ತಿದ್ದ ಕಳಪೆ ಗುಣಮಟ್ಟದ್ದೇ ಆದರೂ ಅಲ್ಪಸ್ವಲ್ಪ ಅಕ್ಷರ ಭಾಗ್ಯವನ್ನೂ ಕೂಡಾ ಸಿದ್ದು ಸರ್ಕಾರ ವಂಚಿಸುತ್ತಿದೆ. KPS ಶಾಲೆಯ ಹೆಸರಿನಲ್ಲಿ ಬಾಲ್ಯಾವಸ್ಥೆಯ ಮಕ್ಕಳ ಶೈಕ್ಷಣಿಕ ಸಾಮಾಜೀಕರಣಕ್ಕೆ ಸಂಪೂರ್ಣ ವಿರೋಧಿಯಾದ ಕಾರ್ಪೊರೇಟ್ ವಾದಿ ಶೈಕ್ಷಣಿಕ ನೀತಿಯನ್ನು ಜಾರಿಗೆ ತಂದು ಅಹಿಂದ ಸಮುದಾಯಕ್ಕೆ ಮಹಾ ಶೆಕ್ಷಣಿಕ ಅನ್ಯಾಯವನ್ನು ಮಾಡುತ್ತಿದೆ.

10. ಬಿಜೆಪಿ ಸರ್ಕಾರ ಗೋಹತ್ಯಾ, APMC ನೀತಿಗಳ ಮುಂದುವರಿಕೆ :

ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಾಗಳಾಗುತ್ತಾ ಬಂದರು ಬಿಜೆಪಿ ಸರ್ಕಾರ ಜಾರಿಗೆ ತಂದ ಭೂ ಹಿಡುವಳಿ,ಖಾಸಗಿ APMC , ಗೋಹತ್ಯಾ ನಿಷೇಧ ಕಾಯಿದೆ ಇತ್ಯಾದಿಗಳನ್ನು ಈವರೆಗೆ ಮುಂದುವರೆಸಿಕೊಂಡೆ ಹೋಗುತ್ತಿದೆ.

ಸಾರವಿಷ್ಟೇ....

ಸಿದ್ಧಾರಾಮಯ್ಯ ವ್ಯಕ್ತಿಯಾಗಿ ಎಷ್ಟೇ ಸಾಮಾಜಿಕ ಕಳಕಳಿ ಇದ್ದರೂ, ಇರದಿದ್ದರೂ ಅವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಯಾಗಿದ್ದಾರೆ. ಅವರ ಸಕ್ರಿಯ ಒಪ್ಪಿಗೆ ಅಥವಾ ಗಾಂಧಾರಿ ಕುರುಡಿನ ಒಪ್ಪಿಗೆಯ ಮೂಲಕವೇ ಈ ಎಲ್ಲಾ ಸಾಮಾಜಿಕ ಅನ್ಯಾಯದ ಯೋಜನೆಗಳು ಜಾರಿಗೆ ಬಂದಿವೆ. ಇದರ ಅರ್ಥ ಇದಕ್ಕಿಂತ ಬಿಜೆಪಿ ಉತ್ತಮ ಎಂದಲ್ಲ. ಬಿಜೆಪಿ ಅಪಾಯ. ಕಾಂಗ್ರೆಸ್ ನಿರಾಶೆ. ಬಿಜೆಪಿ ಸಮಸ್ಯೆ. ಕಾಂಗ್ರೆಸ್ ಸಮಸ್ಯೆಯ ಮುಂದುವರಿಕೆ. ಸಿದ್ದು ಮುಖ್ಯಮಂತ್ರಿ ಯಾಗಿದ್ದರೂ ಬಿಜೆಪಿಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿ ನೀತಿಗಳನ್ನು ಕಾಂಗ್ರೆಸ್ ಸರ್ಕಾರ ಮೃದುವಾಗಿ ಮುಂದುವರಿಸುತ್ತದೆ. ಬಿಜೆಪಿ ಅದೇ ನೀತಿಗಳನ್ನು ಉಗ್ರವಾಗಿ ಜಾರಿ ಮಾಡುತ್ತದೆ.

ಹೀಗಾಗಿ ಸಾರಾಂಶ :

ಕಾಂಗ್ರೆಸ್- ಬಿಜೆಪಿ ಒಂದೇ ಅಲ್ಲ. ಆದರೆ ಅವೆರೆಡರ ನಡುವೆ ವ್ಯತ್ಯಾಸ ಹೆಚ್ಚೇನಿಲ್ಲ. ಆದ್ದರಿಂದ ಕೇವಲ ಪಕ್ಷಗಳು ಬದಲಾದರೆ ಬದುಕು ಹಸನಾಗುವುದಿಲ್ಲ. ಕಾಂಗ್ರೆಸ್ಸಿನ ಮೂಲಕ ಫ್ಯಾಶಿಸಂ ಸೋಲಿಸುವ ಭ್ರಮೆ ಫಲಿಸುವುದಿಲ್ಲ. ಕನಿಷ್ಠ ಸಿದ್ದು ಸರ್ಕಾರದ ಕಳೆದ ಎರಡೂವರೆ ವರ್ಷದ ಆಳ್ವಿಕೆ ಆ ಬ್ರಾಂತಿಯನ್ನು ಕಳಚಬೇಕು. ಸಂವಿಧಾನ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ಸಾಕಾರಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟ ಕಟ್ಟದೆ ದೇಶಕ್ಕೆ ಉಳಿಗಾಲವಿಲ್ಲ. ಫ್ಯಾಶಿಸಂ ಇಂದ ಮುಕ್ತಿ ಇಲ್ಲ.ಅಲ್ಲವೇ?


share
ಶಿವಸುಂದರ್
ಶಿವಸುಂದರ್
Next Story
X