ನಾಲ್ಕು ವರ್ಷಗಳಲ್ಲಿ 7,559 ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು
8ಶೇ.82.93ರಷ್ಟು ವಿಚಾರಣಾ ಹಂತದಲ್ಲಿಯೇ ಬಾಕಿ, ಶೇ.7.44ರಷ್ಟು ಸುಳ್ಳು ಪ್ರಕರಣ

ಸಾಂದರ್ಭಿಕ ಚಿತ್ರ | Photo Credit : magnific
ಬೆಂಗಳೂರು, ಸೆ.27: ರಾಜ್ಯದಲ್ಲಿ ಪ್ರತಿವರ್ಷ ಸರಾಸರಿ 1,880 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗುತ್ತಿದ್ದು, ನಾಲ್ಕು ವರ್ಷಗಳಲ್ಲಿ 7,559 ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿವೆ. ಶೇ.82.93ರಷ್ಟು ಪ್ರಕರಣಗಳು ವಿಚಾರಣಾ ಹಂತದಲ್ಲಿಯೇ ಬಾಕಿ ಉಳಿದಿವೆ. ಒಟ್ಟು ಪ್ರಕರಣಗಳಲ್ಲಿ ಶೇ.7.44ರಷ್ಟು ಪ್ರಕರಣಗಳು ಸುಳ್ಳು ಪ್ರಕರಣಗಳಾಗಿವೆ.
2023ರಿಂದ ಇಲ್ಲಿಯವರೆಗೆ 7,559 ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದ್ದು, ಅವುಗಳಲ್ಲಿ 563 ಸುಳ್ಳು ಪ್ರಕರಣಗಳಾಗಿವೆ. 2023ರಲ್ಲಿ 2,286 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 191 ಸುಳ್ಳು ಪ್ರಕರಣಗಳಾಗಿವೆ. 2024ರಲ್ಲಿ ದಾಖಲಾದ 1,942 ಪ್ರಕರಣಗಳಲ್ಲಿ 204 ಸುಳ್ಳು ಪ್ರಕರಣ, 2025ರಲ್ಲಿ ದಾಖಲಾದ 2,028 ಪ್ರಕರಣಗಳಲ್ಲಿ 131 ಸುಳ್ಳು ಪ್ರಕರಣಗಳಾಗಿವೆ. 2026ರಲ್ಲಿ ದಾಖಲಾದ 1,303 ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ 37 ಸುಳ್ಳು ಪ್ರಕರಣಗಳಾಗಿವೆ.
ಒಟ್ಟು ಪ್ರಕರಣಗಳಲ್ಲಿ 6,269 ಪ್ರಕರಣಗಳು ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಗಳಲ್ಲಿ ವಿಚಾರಣಾ ಹಂತದಲ್ಲಿಯೇ ಬಾಕಿ ಉಳಿದಿವೆ. 2023ರಲ್ಲಿ ದಾಖಲಾದ ಪ್ರಕರಣಗಳ ಪೈಕಿ 1,622 ಪ್ರಕರಣಗಳು ನ್ಯಾಯಾಲಯದಲ್ಲಿ, 291 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ವಿಚಾರಣಾ ಹಂತದಲ್ಲಿವೆ. 2024ರಲ್ಲಿ ದಾಖಲಾದ ಪ್ರಕರಣಗಳಲ್ಲಿ 1,335 ಪ್ರಕರಣಗಳು ನ್ಯಾಯಾಲಯದಲ್ಲಿ, 99 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ವಿಚಾರಣಾ ಹಂತದಲ್ಲಿವೆ. 2025ರಲ್ಲಿ ದಾಖಲಾದ ಪ್ರಕರಣಗಳಲ್ಲಿ 1,519 ನ್ಯಾಯಾಲಯದಲ್ಲಿ, 153 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ವಿಚಾರಣಾ ಹಂತದಲ್ಲಿವೆ. 2026ರಲ್ಲಿ ದಾಖಲಾದ ಪ್ರಕರಣಗಳಲ್ಲಿ 568 ನ್ಯಾಯಾಲಯದಲ್ಲಿ, 682 ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ವಿಚಾರಣಾ ಹಂತದಲ್ಲಿವೆ.
2023ರಿಂದ 2026ರ ಆಗಸ್ಟ್ ಅಂತ್ಯದವರೆಗೆ ಬೆಂಗಳೂರು ನಗರದಲ್ಲಿ 3,481 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿದ್ದರೆ, ಮೈಸೂರು ನಗರದಲ್ಲಿ 492, ಹುಬ್ಬಳ್ಳಿ-ಧಾರವಾಡ ಅವಳಿ ನಗರ 3, ಮಂಗಳೂರು ನಗರ 99, ಬೆಳಗಾವಿ ನಗರ 14, ಕಲಬುರಗಿ ನಗರದಲ್ಲಿ 151, ಕೆಜಿಎಫ್ನಲ್ಲಿ 57 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ.
ಬೆಂಗಳೂರು ನಗರ ಹೊರತುಪಡಿಸಿ ಬೆಂಗಳೂರು ಜಿಲ್ಲೆಯಲ್ಲಿ 130, ಬೆಂಗಳೂರು ದಕ್ಷಿಣ(ರಾಮನಗರ) 171, ತುಮಕೂರು 406, ಕೆಜಿಎಫ್ ಹೊರತುಪಡಿಸಿ ಕೋಲಾರ ಜಿಲ್ಲೆಯಲ್ಲಿ 66, ಚಿಕ್ಕಬಳ್ಳಾಪುರ 37, ಚಿತ್ರದುರ್ಗ 181, ದಾವಣಗೆರೆ 228, ಶಿವಮೊಗ್ಗ 383, ಹಾವೇರಿ 103, ಮಂಗಳೂರು ನಗರ ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 25, ಉಡುಪಿ 27, ಚಿಕ್ಕಮಗಳೂರು 53, ಉತ್ತರ ಕನ್ನಡ ಜಿಲ್ಲೆಯಲ್ಲಿ 56 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ ಜಿಲ್ಲೆ 70, ಬಾಗಲಕೋಟೆ 74, ವಿಜಯಪುರ 19, ಧಾರವಾಡ 13, ಗದಗ 55, ಕಲಬುರಗಿ ಜಿಲ್ಲೆಯಲ್ಲಿ 127, ಬೀದರ್ 81, ಯಾದಗಿರಿ 51, ಮೈಸೂರು ಜಿಲ್ಲೆ 55, ಮಂಡ್ಯ 129, ಚಾಮರಾಜನಗರ 86, ಹಾಸನ 278, ಕೊಡಗು 16, ಬಳ್ಳಾರಿ 55, ಕೊಪ್ಪಳ 3, ರಾಯಚೂರು 221, ವಿಜಯನಗರ ಜಿಲ್ಲೆಯಲ್ಲಿ 63 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ.






