Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉನ್ನತ ಶಿಕ್ಷಣದ ಕುರಿತು ಯಾವುದೇ...

ಉನ್ನತ ಶಿಕ್ಷಣದ ಕುರಿತು ಯಾವುದೇ ದೂರದರ್ಶಿತ್ವ, ಧ್ಯೇಯ ಇಲ್ಲದ ಬಜೆಟ್

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್8 March 2026 7:30 AM IST
share
ಉನ್ನತ ಶಿಕ್ಷಣದ ಕುರಿತು ಯಾವುದೇ ದೂರದರ್ಶಿತ್ವ, ಧ್ಯೇಯ ಇಲ್ಲದ ಬಜೆಟ್

ಶಿಕ್ಷಣಕ್ಕೆ 47,224 ಕೋಟಿ ರೂ.(ಶೇ.10) ಹಂಚಿಕೆ ಮಾಡಿದ್ದಾರೆ. ಇದು ತುಂಬಾ ಕಡಿಮೆ ಅನುದಾನವಾಗಿದೆ. ವಾಸ್ತವದಲ್ಲಿ ಬಜೆಟ್ ವೆಚ್ಚದ ಶೇ.20-24ರಷ್ಟು ಹಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಶಿಕ್ಷಣವನ್ನು ಅನುತ್ಪಾದಕ ವಲಯ ಎಂದು ಪರಿಗಣಿಸಿರುವ ಸರಕಾರ ಸಾರ್ವಜನಿಕ ಹೂಡಿಕೆಯಿಂದ ಹಂತ ಹಂತವಾಗಿ ಹಿಂದೆ ಸರಿಯುತ್ತಿದೆ.

ಉನ್ನತ ಶಿಕ್ಷಣದ ಕುರಿತು ಹೇಳುವುದಾದರೆ ಬಜೆಟ್ ಹಂಚಿಕೆ ನಿರಾಶಾದಾಯಕವಾಗಿದೆ. ಉನ್ನತ ಶಿಕ್ಷಣಕ್ಕೆ ಬಜೆಟ್ ವೆಚ್ಚದ ಶೇ.2.1ರಷ್ಟು ಮಾತ್ರ ಹಂಚಿಕೆ ಮಾಡಿದ್ದಾರೆ. ಇದು ಈಗಿನ ಹಣಕಾಸಿನ ಕೊರತೆಗೆ ಯಾವುದೇ ರೀತಿಯಲ್ಲೂ ಪರಿಹಾರವಲ್ಲ. ಸಾರ್ವಜನಿಕ ಹೂಡಿಕೆ ಇಲ್ಲದೆ ಉನ್ನತ ಶಿಕ್ಷಣ ಉಳಿಸಲು ಸಾಧ್ಯವಿಲ್ಲ. ತಮಾಷೆಯೆಂದರೆ ಕಳೆದ 3 ವರ್ಷಗಳಿಂದ ಪ್ರತೀ ಬಜೆಟ್‌ನಲ್ಲಿಯೂ 2,000 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾ ಬರಲಾಗಿದೆ.ಇದುವರೆಗೂ ಅದರ ಆರಂಭಿಕ ಚಟುವಟಿಕೆಗಳು ಪ್ರಾರಂಭವಾಗಿಲ್ಲ. ಇದೊಂದು ಮರೆಮೋಸವಷ್ಟೆ.

ಇಂದು 430 ಪದವಿ ಕಾಲೇಜುಗಳಲ್ಲಿ ಮಾನವಿಕ ವಿಭಾಗಗಳು ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿವೆ. ಖಾಸಗಿ ವಿವಿಗಳ ಲಿಬರಲ್ ಆರ್ಟ್ಸ್, ಬಹುಶಿಸ್ತೀಯ ವ್ಯಾಸಂಗ ಕ್ರಮದ ಎದುರು ತುಂಬಾ ಪೇಲವವಾಗಿ ಕಾಣುತ್ತಿದೆ. ಈ ಬಿಕ್ಕಟ್ಟನ್ನು ಸಮಗ್ರವಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುವ ಯಾವುದೇ ಕಾರ್ಯಯೋಜನೆ ಇಲ್ಲ..

1,000 ವಿದ್ಯಾರ್ಥಿಗಳಿಗಿಂತ ಹೆಚ್ಚಿರುವ 50 ಪದವಿ ಕಾಲೇಜುಗಳ ಉನ್ನತೀಕರಣ. ಇದು ಬಾಯಿ ಮಾತಿನ ಹೇಳಿಕೆಯಷ್ಟೆ. ಇದಕ್ಕೆ ಯಾವುದೇ ನೀಲನಕ್ಷೆ ಇಲ್ಲ. ಆರು ತಿಂಗಳ ನಂತರ ಇದೇ ಉನ್ನತೀಕರಣದ ವಿಚಾರ ಎಲ್ಲಿಗೆ ಬಂದು ನಿಂತಿದೆ ಎಂದು ಕಾದು ನೋಡಿ ಪರಿಶೀಲಿಸಬಹುದು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಮೂಲಕ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕರ್ಕೇರಾ, ರಾಯಚೂರು ಜಿಲ್ಲೆಯ ಅಂಬಾಪುರ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ ಕೆಕೆಆರ್‌ಡಿಬಿ ಕಾರ್ಯಕ್ಷಮತೆ ತುಂಬಾ ನಿರಾಶಾದಾಯಕವಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಯಾವುದೇ ಬಗೆಯ ರಚನಾತ್ಮಕ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಇದರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಇಂತಹ ಮಂಡಳಿಯಿಂದ ಹೊಸ ಪದವಿ ಕಾಲೇಜು ಸ್ಥಾಪನೆ ಮತ್ತು ನಿರ್ವಹಣೆ ಕುರಿತು ಭರವಸೆ ಇಲ್ಲ. ಆದರೆ ಕಾದು ನೋಡಬೇಕಿದೆ.

ಸರಕಾರಿ ಪದವಿ ಕಾಲೇಜು ಹಾಗೂ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ಸೌಲಭ್ಯ ನೀಡಿರುವುದು ಸ್ವಾಗತಾರ್ಹ

ವಾಗಿದೆ. ಆದರೆ, ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾನಿಲಯ ಪ್ರಾರಂಭಿಸಲು 25 ಎಕರೆ ಭೂಮಿ ಕೊಡುವ ಪ್ರಸ್ತಾವವು ಒಂದು ಹಗರಣ ಎಂದೇ ಕರೆಯಬೇಕಾಗುತ್ತದೆ. ಯಾಕೆಂದರೆ ಖಾಸಗಿ ಸಂಸ್ಥೆಗಳಿಗೆ ಸರಕಾರಿ ಜಮೀನು ಕೊಡುವುದು ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ ಮತ್ತು ಈ ರೀತಿ ಖಾಸಗಿಯವರಿಗೆ ಪ್ರೋತ್ಸಾಹಿಸುವುದು ಸಾಧಕವಲ್ಲ, ಬಾಧಕ ಎಂದು ವಿಷಾದದಿಂದ ಹೇಳಬೇಕಿದೆ.

ಇನ್ನು ಹಾಸ್ಟೆಲ್‌ಗಳಿಗೆ ಅನುದಾನ ಮುಂತಾದವುಗಳು ಸಹಜವಾದ ಆಡಳಿತಾತ್ಮಕ ಕರ್ತವ್ಯಗಳು. ಇದರಲ್ಲಿ ಹೆಚ್ಚುಗಾರಿಕೆ ಏನಿಲ್ಲ. ಆದರೆ, ರಾಜ್ಯ ಶಿಕ್ಷಣ ನೀತಿ ಕುರಿತು ಯಾವುದೇ ಪ್ರಸ್ತಾವವಿಲ್ಲ.ಸಂಶೋಧನೆ ಕುರಿತು ಸಮಗ್ರ ನೀತಿಯಿಲ್ಲ. ಇಲ್ಲಿ ರಾಜ್ಯ ಶಿಕ್ಷಣ ನೀತಿಯೂ ಇಲ್ಲ, ರಾಷ್ಟ್ರೀಯ ಶಿಕ್ಷಣ ನೀತಿಯೂ ಇಲ್ಲ.

ಈ ಸರಕಾರದ ಅವಧಿ ಇನ್ನು ಎರಡು ವರ್ಷ ಮಾತ್ರ. ಥೋರಟ್ ಆಯೋಗ ಸಲ್ಲಿಸಿದ ಶಿಫಾರಸುಗಳ ವರದಿ ಮುಂಬರುವ ಆಗಸ್ಟ್‌ಗೆ ಒಂದು ವರ್ಷವಾಗುತ್ತದೆ. ಇದುವರೆಗೂ ಅದನ್ನು ಸಾರ್ವಜನಿಕವಾಗಿ ಪ್ರಕಟಿಸಲಿಲ್ಲ. ವಿಧಾನಮಂಡಲದ ಎರಡೂ ಸದನಗಳಲ್ಲಿಯೂ ಮಂಡಿಸಲಿಲ್ಲ. ಇದು ಬಿಡಿ ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆ ಮಾಡಲಿಲ್ಲ. ಈ ಬಾರಿ ಬಜೆಟ್‌ನಲ್ಲಿಯೂ ಪ್ರಸ್ತಾವವಿಲ್ಲ. ಇದು ಬೇಜವಾಬ್ದಾರಿಯಲ್ಲವೇ? ಇನ್ನುಳಿದ ಎರಡು ವರ್ಷಗಳಲ್ಲಿ ಈ ಎಸ್‌ಇಪಿ ಪರಾಮರ್ಶೆಯಾಗಿ, ಅಗತ್ಯವಿದ್ದರೆ ಸೂಕ್ತ ತಿದ್ದುಪಡಿಯಾಗಿ ಹಂತ ಹಂತವಾಗಿ ಅನುಷ್ಠಾನಗೊಳಿಸಲು ಸಾಧ್ಯವೇ? ಇದ್ಯಾವುದೂ ಆಗದೆ 2028ರ ಚುನಾವಣೆಯಲ್ಲಿ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದರೆ, ಅದು ಎಸ್‌ಇಪಿಯನ್ನು ಖಂಡಿತಾ ತಿರಸ್ಕರಿಸುತ್ತದೆ. ಆಗ ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯವೇನು?

ರೋಹಿತ್ ವೇಮುಲಾ ಕಾಯ್ದೆ ಜಾರಿ ಕುರಿತು ಪ್ರಸ್ತಾವ ಸ್ವಾಗತಾರ್ಹ. ಆದರೆ ಇದನ್ನು ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿ ಬೇಕು. ಏಕೆಂದರೆ ಕಳೆದ ಒಂದು ವರ್ಷದಿಂದ ಇದರ ಕುರಿತು ಸಾಕಷ್ಟು ಚರ್ಚೆ, ಸಂವಾದ ಮಾಡಿದ್ದೇವೆ. ಇಲ್ಲಿನ ಪ್ರಗತಿಪರ ಲೇಖಕರು, ನ್ಯಾಯವಾದಿಗಳು, ಪ್ರಾಧ್ಯಾಪಕರ ತಂಡವು ಸತತವಾಗಿ ಅಧ್ಯಯನ ಮಾಡಿ ಇದರ ಕರಡು ಪ್ರತಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಇದುವರೆಗೂ ಕ್ಯಾಬಿನೆಟ್ ಸಭೆಯಲ್ಲೂ ಇದರ ಕುರಿತು ಚರ್ಚೆ ನಡೆಸಲಿಲ್ಲ. ಕೇವಲ ಪ್ರಿಯಾಂಕ್ ಖರ್ಗೆಯವರು ಮಾತ್ರ ಇದರ ಕುರಿತು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಉನ್ನತ ಶಿಕ್ಷಣ ಸಚಿವರು ಮತ್ತು ಕಾನೂನು ಸಚಿವರು ಆಸಕ್ತಿ ತೋರಿಸುತ್ತಿಲ್ಲ. ಇದು ಕಳೆದ ಒಂದು ವರ್ಷದ ಬೆಳವಣಿಗೆ. ಈ ಬಾರಿಯಾದರೂ ಅನುಮೋದನೆ ದೊರಕಬಹುದು ನೋಡೋಣ.

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಿರ್ಧಾರ ಮೇಲ್ನೋಟಕ್ಕೆ ಸ್ವಾಗತಾರ್ಹವಾದರೂ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲದೇ ಹೋದರೆ, ಸೈದ್ಧಾಂತಿಕ ಸ್ಪಷ್ಟತೆಯಿಲ್ಲದೇ ಹೋದರೆ ಕ್ಯಾಂಪಸ್‌ಗಳು ಎಬಿವಿಪಿಯ ಆಡುಂಬೊಲವಾಗುವುದರಲ್ಲಿ ಅನುಮಾನವಿಲ್ಲ.

ಒಟ್ಟಾರೆ ಉನ್ನತ ಶಿಕ್ಷಣದ ಕುರಿತು ಯಾವುದೇ ದೂರದರ್ಶಿತ್ವ ಮತ್ತು ಧ್ಯೇಯ (ವಿಷನ್ ಪ್ಯಾಶನ್) ಇಲ್ಲದ ಈ ಬಜೆಟ್ ಕೇವಲ ಕಾಮಗಾರಿಗಳ ಘೋಷಣೆಯಷ್ಟೆ. ವಾಸ್ತವದಲ್ಲಿ ಸರಕಾರವು ಉನ್ನತ ಶಿಕ್ಷಣದ ಜೊತೆಗೆ ಎಂಗೇಜ್ ಆಗಬೇಕು. ಆದರೆ ಈಗ ಕೇವಲ ಮಧ್ಯಸ್ಥಿಕೆ ವಹಿಸುತ್ತಿದೆ. ಇದು ಕೇವಲ ಫೈರ್ ಫೈಟಿಂಗ್ ಅಷ್ಟೇ.. ಅಥವಾ ಅದೂ ಅಲ್ಲ.

ಜಾಗತಿಕವಾಗಿ ಉನ್ನತ ಶಿಕ್ಷಣ ಯಾವ ಹಂತದಲ್ಲಿದೆ? ನಾವೆಲ್ಲಿದ್ದೇವೆ ಎನ್ನುವ ಕನಿಷ್ಠ ಕಾಳಜಿಯೂ ಇಲ್ಲದೇ ಹೋದರೆ ಹೇಗೆ?

Tags

budgetEducation
share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X