Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಯಾಂತ್ರಿಕ ವಾಹನಗಳ ಭರಾಟೆಗೆ...

ಯಾಂತ್ರಿಕ ವಾಹನಗಳ ಭರಾಟೆಗೆ ಮರೆಯಾಗುತ್ತಿರುವ ಎತ್ತಿನಗಾಡಿ

ವಾರ್ತಾಭಾರತಿವಾರ್ತಾಭಾರತಿ25 March 2024 4:09 PM IST
share
ಯಾಂತ್ರಿಕ ವಾಹನಗಳ ಭರಾಟೆಗೆ ಮರೆಯಾಗುತ್ತಿರುವ ಎತ್ತಿನಗಾಡಿ

ಹೊಸಕೋಟೆ: ಒಂದು ಕಾಲದಲ್ಲಿ ಜನರ, ಕೃಷಿ ಬದುಕಿನ ಭಾಗವಾಗಿ ಪ್ರಯಾಣದ ಸಂಗಾತಿಯಾಗಿದ್ದ ಎತ್ತಿನಗಾಡಿ (ಬಂಡಿ) ಸದ್ಯ ಕಣ್ಮರೆಯಾಗತೊಡಗಿದೆ. ದಿಬ್ಬಣಕ್ಕೆ ತಲುಪಿಸಲೂ ಸಹಕಾರಿಯಾಗಿದ್ದ ಎತ್ತಿನ ಗಾಡಿ ಈಗ ಅಪರೂಪ ಎಂದೆನಿಸಿದೆ.

ಗಡಗಡ ಸದ್ದಿನೊಂದಿಗೆ ಉತ್ಸಾಹದಿಂದ ಎತ್ತುಗಳು ಮುನ್ನುಗ್ಗಿ ಹೋಗುತ್ತಿದ್ದರೆ, ಅವುಗಳ ಕೊರಳಲ್ಲಿ ಕಟ್ಟಿದ್ದ ಗೆಜ್ಜೆನಾದ ಹಾಗೂ ಚಕ್ರದ ಸದ್ದನ್ನು ಆನಂದಿಸಿದವರಿಗೆ ಈಗಲೂ ದನಿ ಕಿವಿಯಲ್ಲಿ ರಿಂಗಣಿಸುತ್ತದೆ. ರೈತರಿಗೆ ವರವಾಗಿದ್ದ ಎತ್ತಿನ ಗಾಡಿಗಳನ್ನು ಇಂದು ಕೇವಲ ಪ್ರದರ್ಶನಗಳಲ್ಲಿ ನೋಡುವಂತಾಗಿದೆ. ಹಿಂದಿನ ಕಾಲದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬಹುತೇಕ ಎತ್ತಿನಗಾಡಿಗಳನ್ನು ಆಶ್ರಯಿಸಿದ್ದರು. ದೈನಂದಿನ ಬದುಕಿಗೆ ಕೃಷಿ ಪರಿಕರ ಸಾಗಿಸುವುದರಿಂದ ಹಿಡಿದು ಹುಲ್ಲು, ಧಾನ್ಯಗಳನ್ನು ಮನೆಗೆ ಸಾಗಿಸಲು ಎತ್ತಿನಗಾಡಿ ಉಪಕಾರಿಯಾಗಿತ್ತು. ರೈತರಿಗೆ ಗೊಬ್ಬರ, ಬೆಳೆಗಳನ್ನು ಸಾಗಿಸಲು ಎತ್ತಿನಗಾಡಿಗಳೇ ಬೇಕಾಗಿತ್ತು.

ಹಬ್ಬ, ಜಾತ್ರೆ, ಮದುವೆ, ಮೆರವಣಿಗೆ ಮೊದಲಾದ ಸಮಾರಂಭಗಳಿಗೆ ಎತ್ತಿನಗಾಡಿ ಸಂಭ್ರಮವೇ ಆಗಿತ್ತು. ಬೆಂಗಳೂರು ಗ್ರಾಮಾಂತರ ತಾಲೂಕು ತರಕಾರಿ ಸೀಮೆಯಾದ ಕಾರಣ ತರಕಾರಿ, ರೇಷ್ಮೆ ಇವುಗಳನ್ನು ಎಷ್ಟಿದ್ದರೂ ಎತ್ತಿನಗಾಡಿಗಳಲ್ಲಿ ಸಾಗಿಸುತ್ತಿದ್ದರು.

ಎತ್ತಿನಗಾಡಿ ನಿರ್ಮಿಸಿ ಬದುಕು ಕಟ್ಟಿಕೊಂಡಿದ್ದ ಅದೆಷ್ಟೋ ಜನರು ಇಂದು ಬೇರೆ ಕಸುಬುಗಳನ್ನು ಆಶ್ರಯಿಸಿಕೊಂಡಿದ್ದಾರೆ. ಎತ್ತಿನಗಾಡಿಗಳನ್ನು ಸುಂದರವಾಗಿ ರೂಪಿಸುತ್ತಿದ್ದ ಬಡಗಿಗಳು, ಗಾಡಿಗಳಿಗೆ ಪೂರಕವಾಗಿ ಚಕ್ರಗಳಿಗೆ ಕಬ್ಬಿಣದ ಹೊದಿಕೆಯನ್ನು ಬಿಗಿಗೊಳಿಸಿ ಜೀವನ ಸಾಗಿಸುತ್ತಿದ್ದ ಕುಲುಮೆದಾರರು ಪರ್ಯಾಯ ವ್ಯವಸ್ಥೆ ಹುಡುಕಿ ಹೊರಟಿದ್ದಾರೆ. ನಗರಗಳ ಬಸ್ ನಿಲ್ದಾಣಗಳಲ್ಲಿ ಒಂಟಿ ಎತ್ತಿನಗಾಡಿ ನಡೆಸಿ ಬದುಕು ಕಟ್ಟಿಕೊಂಡಿದ್ದ ಹಮಾಲರಿಗೂ ಈಗ ಉದ್ಯೋಗವಿಲ್ಲ. ಎತ್ತಿನಗಾಡಿಗಳು ಮರೆಯಾದಂತೆ ಎತ್ತುಗಳಿಗೆ ಪಾದ ಸವೆಯದಂತೆ ಲಾಳ ಕಟ್ಟುತ್ತಿದ್ದವರೂ ಮರೆಯಾಗುತ್ತಿದ್ದಾರೆ. ಚಕ್ಕಡಿಗಳ ಸ್ಥಾನವನ್ನು ಈಗ ಆಟೊ, ಟ್ರಾಕ್ಟರ್ ಮತ್ತಿತರ ಗೂಡ್ಸ್ ವಾಹನಗಳು ಆವರಿಸಿಕೊಂಡಿವೆ. ಅಪರೂಪಕ್ಕೆ ಕಾಣಸಿಗುವ ಎತ್ತಿನ ಗಾಡಿಯನ್ನು ಜನ ಹುಬ್ಬೇರಿಸಿ ನೋಡುವಂತಾಗಿದೆ.

ಚಿಕ್ಕವರಿದ್ದಾಗ ಜಾತ್ರೆ ಸೇರಿದಂತೆ ಶುಭಕಾರ್ಯಗಳಿಗೆ ಹೋಗಲು ಎತ್ತಿನಗಾಡಿಗಳನ್ನು ಬಳಸುತ್ತಿದ್ದೆವು. ಗಾಡಿ ಹಾಗೂ ಎತ್ತುಗಳನ್ನು ಸಿಂಗರಿಸಿಕೊಂಡು ಗ್ರಾಮೀಣ ರಸ್ತೆಗಳಲ್ಲಿ ಹೋಗುತ್ತಿದ್ದರೆ ಅದರ ಮಜವೇ ಬೇರೆಯಿತ್ತು. ಗಾಡಿಯಲ್ಲಿ ಕುಳಿತು ಸುಂದರ ಪರಿಸರ ವೀಕ್ಷಿಸುತ್ತಾ ಸಾಗುವುದು ಆಹ್ಲಾದಕರವಾಗಿತ್ತು. ಈಗ ವಾಹನಗಳ ಹೊಗೆ ಸೇವಿಸುತ್ತಾ, ಸಿಮೆಂಟ್ ರಸ್ತೆಯಲ್ಲಿ ಸಾಗಬೇಕಾಗಿದೆ.

-ರಂಜಿತಾ, ಗೃಹಿಣಿ- ಚಿಕ್ಕಕೋಲಿಗ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X