Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಬೂಣೆಪಟ್ಟ’ ಎಂಬ ಬೆರಳೆಣಿಕೆಯಷ್ಟು...

‘ಬೂಣೆಪಟ್ಟ’ ಎಂಬ ಬೆರಳೆಣಿಕೆಯಷ್ಟು ಜನರಿರುವ ಸಮುದಾಯ!

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್28 Oct 2026 10:56 AM IST
share
‘ಬೂಣೆಪಟ್ಟ’ ಎಂಬ ಬೆರಳೆಣಿಕೆಯಷ್ಟು ಜನರಿರುವ ಸಮುದಾಯ!

ಹಾಗೆ ನೋಡಿದರೆ ಈ ಸಮುದಾಯಕ್ಕೆ ಅಸ್ಮಿತೆಯೇ ಇಲ್ಲ. ಎಡ್ಗರ್ ಥರ್ಸ್ಟನ್, ಎಂತೋವನ್, ನಂಜುಂಡಯ್ಯ, ಅಯ್ಯರ್ ಅಂತಹ ಯಾವ ಮಾನವಶಾಸ್ತ್ರಜ್ಞರೂ ಈ ಸಮುದಾಯವನ್ನು ಎಲ್ಲೂ ದಾಖಲಿಸಿಲ್ಲ. ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ತಮ್ಮ ‘ಅಮರಸುಳ್ಯ ಸಂಗ್ರಾಮ 1837’ ಪುಸ್ತಕದಲ್ಲಿ ಕೊಡಗು ಭಾಷಿಕ ಸಮುದಾಯಗಳ ಪಟ್ಟಿಯಲ್ಲಿ ಮಾತ್ರ ‘ಬೂಣೆಪಟ್ಟ’ ಸಮುದಾಯದ ಹೆಸರನ್ನು ದಾಖಲಿಸಿದ್ದಾರೆ.

ಕೊಡಗಿನಲ್ಲಿ ವಾಸವಿರುವ ‘ಸಭ್ಯ’ ಸಮಾಜಗಳಿಗೇ ಇಂತಹದ್ದೊಂದು ಸಮುದಾಯ ಇರುವ ಬಗ್ಗೆ ಅರಿವಿರುವ ಸಾದ್ಯತೆ ಕಡಿಮೆ. ‘ಬೂಣೆಪಟ್ಟ’ ಎನ್ನುವ ವಿರಳಾತಿ ವಿರಳ ಸಮುದಾಯ ಕೊಡಗಿನ ಭಾಷಿಕ ಸಮುದಾಯಗಳಲ್ಲಿ ಒಂದಾಗಿದೆ. ಇವರು ಕೊಡಗಿಗೆ ಎಲ್ಲಿಂದ ಬಂದರು ಎಂಬ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ. ‘ಬೂಣೆಪಟ್ಟ’ದಲ್ಲಿ ಇರುವ ‘ಪಟ್ಟ’ ಅಂದರೆ ಕೊಡವಭಾಷೆಯಲ್ಲಿ ‘ಬ್ರಾಹ್ಮಣ’ ಎಂದರ್ಥವಂತೆ. ಹಿಂದಿನವರ ಮಾತಿನ ಪ್ರಕಾರ ಹಿಂದೆ ಯುದ್ಧವೊಂದರಲ್ಲಿ ಈ ಸಮುದಾಯದ ಜನ ವೀರಾವೇಶದಿಂದ ಭಾಗವಹಿಸಿ ಹೆಚ್ಚಿನ ಜನ ಮರಣ ಹೊಂದಿದರಂತೆ. ಈ ಕಾರಣಕ್ಕೆ ಇಂದಿಗೂ ಇವರ ಜನಸಂಖ್ಯೆ ಬೆರಳೆಣಿಕೆಯಷ್ಟಿದೆಯಂತೆ. ಕೆಲವರ ಪ್ರಕಾರ ಇವರ ಜನಸಂಖ್ಯೆ ಹದಿನೈದರಿಂದ ಇಪ್ಪತ್ತು ಇರಬಹುದು. ಇನ್ನೂ ಕೆಲವರ ಪ್ರಕಾರ ಇವರ ಜನಸಂಖ್ಯೆ ಐವತ್ತು ಮೀರಿಲ್ಲ!

ಬೂಣೆಪಟ್ಟ ಸಮುದಾಯದವರನ್ನು ಬ್ರಾಹ್ಮಣರು ಎಂದು ತೀರ್ಮಾನಿಸಿ ಮಾಂಸಾಹಾರಿಗಳು ಇವರನ್ನು ಯಾವುದೇ ಸಮಾರಂಭಗಳಿಗೆ ಕರೆಯುವುದಿಲ್ಲವಂತೆ. ಎಲ್ಲಾ ಕೊಡವರಿಗೂ ಇದ್ದಂತೆ ಬೂಣೆಪಟ್ಟ ಸಮುದಾಯದವರಿಗೂ ಹಿಂದೆ ಐನ್ ಮನೆ ಇತ್ತಂತೆ, ಜಮ್ಮ ಭೂಮಿ ಕೂಡ ಇತ್ತಂತೆ. ಈಗಲೂ ಈ ಸಮುದಾಯದ ಆಚಾರ, ವಿಚಾರ, ಆಹಾರ ಪದ್ಧತಿ, ಪರಂಪರೆ ಎಲ್ಲವೂ ಕೂಡ ಕೊಡವ ಸಂಪ್ರದಾಯದಂತೆಯೇ ಇದೆ. ಇವರು ಎಲ್ಲದರಲ್ಲೂ ಕೊಡವರ ಸಂಪ್ರದಾಯವನ್ನೇ ಪಾಲಿಸುತ್ತಾರೆ. ಆದರೆ ಇವರು ಯಾವ ವರ್ಗಕ್ಕೆ ಸೇರುತ್ತಾರೆ ಎಂಬುದು ಇವರಿಗೇ ಗೊತ್ತಿಲ್ಲ! ಆದರೆ ಕೊಡವ ಭಾಷೆ ಮತ್ತು ಶುದ್ಧ ಕೊಡಗಿನ ಸಂಪ್ರದಾಯ ಪಾಲಿಸುವವರು ಎಂಬಲ್ಲಿ ಅನುಮಾನವಿಲ್ಲ.

ಇಲ್ಲಿನ ಇತರ ಕೊಡವ ಭಾಷಿಕ ಕೆಲ ಸಮುದಾಯಗಳಂತೆ ಇವರಿಗೂ ಕೂಡ ಸ್ವಜಾತಿಯಲ್ಲಿ ವಧು ವರರು ಸಿಗದ ಕೊರತೆಯಿಂದಾಗಿ ಬೂಣೆಪಟ್ಟ ಸಮುದಾಯದ ಸಂತಾನ ಅಭಿವೃದ್ಧಿಯಾಗಲಿಲ್ಲ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ತಮ್ಮ ಜನಾಂಗದ ಶ್ರೇಷ್ಠತೆಯನ್ನು ಉಳಿಸುವ ಕಾರಣದಿಂದಲೂ ಇವರು ಇತರ ಜನಾಂಗಗಳ ಜತೆ ಸಂಬಂಧವನ್ನು ಬೆಳೆಸದೆ ಇರುವುದರ ಪರಿಣಾಮ ಇವರ ಜನಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬೆರಳೆಣಿಕೆಗೆ ಇಳಿದಿರುವ ಸಾಧ್ಯತೆ ಇದೆ.

ಬೂಣೆಪಟ್ಟ ಜನಾಂಗವು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಕಂಡುಬರುವ ಕೊಡವ ಭಾಷಿಕ ಮೂಲನಿವಾಸಿ ಸಮುದಾಯಗಳಲ್ಲಿ ಒಂದಾಗಿದೆ. ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಹೆಮ್ಮೆಯಿಂದ ಆಚರಿಸಿಕೊಂಡು ಬಂದಿರುವ 22ಕ್ಕೂ ಹೆಚ್ಚು ವಿಭಿನ್ನ ಕೊಡವ ಉಪ-ಸಮುದಾಯಗಳಲ್ಲಿ ಇವರೂ ಪ್ರಮುಖರಾಗಿದ್ದಾರೆ ಎಂಬ ಮಾತಿನಲ್ಲಿ ಎಳ್ಳಷ್ಟೂ ಅನುಮಾನವಿಲ್ಲ. ಇವರು ಕೊಡಗು ಜಿಲ್ಲೆಯಲ್ಲಿ ಶತಶತಮಾನಗಳಿಂದ ನೆಲೆಸಿದ್ದು, ಜನಾಂಗದ ಸಾರ್ವತ್ರಿಕ ಭಾಷೆಯಾಗಿ ಕೊಡವ ತಕ್ಕ್ (ಕೊಡವ ಭಾಷೆ) ಅನ್ನು ಮಾತನಾಡುತ್ತಾರೆ.

ಇವರ ಹೆಸರಿನಲ್ಲಿ ‘ಪಟ್ಟ’ ಎಂದಿದ್ದರೂ, ಇವರ ಆಚರಣೆಗಳು ವಿಭಿನ್ನವಾಗಿವೆ. ಅನೇಕರು ಭಾವಿಸಿರುವಂತೆ ಇವರು ಸಸ್ಯಾಹಾರಿಗಳಲ್ಲ, ಬದಲಿಗೆ ಮಾಂಸಾಹಾರಿಗಳಾಗಿದ್ದು ‘ಎರ್ಚಿ, ಮೀನು’ ಸೇವಿಸುವ ಜನಾಂಗದವರಾಗಿದ್ದಾರೆ.

ಇವರ ವಿವಾಹ ಆಚರಣೆಗಳಲ್ಲಿ ಕೊಡವ ಸಂಸ್ಕೃತಿಯಂತೆಯೇ ಕುಪ್ಯ-ಚಾಲೆ ಧರಿಸುವುದು ಹಾಗೂ ಇತರ ಸಾಂಪ್ರದಾಯಿಕ ವಿಧಿವಿಧಾನಗಳು ಕಂಡುಬರುತ್ತವೆ. ಮಗುವಿನ ನಾಮಕರಣ ‘ಪೆದ ಇಡುವಿಕೆ’, ದೇವರಿಗೆ ಕೊಡುಗೆ ನೀಡುವುದು, ಸಾವು ಮತ್ತು ಉತ್ತರಕ್ರಿಯೆಗಳ ‘ಮಾದ’ ಪದ್ಧತಿಗಳೂ ಸಂಪೂರ್ಣವಾಗಿ ಕೊಡವ ಶೈಲಿಯಲ್ಲೇ ಇರುತ್ತವೆ. ಬೂಣೆಪಟ್ಟ ಸಮುದಾಯದವರಿಗೂ ವಿಶಿಷ್ಟವಾದ ಕುಟುಂಬದ ಹೆಸರುಗಳು ಅಂದರೆ ‘ಮನೆ ಪೆದ’ ಅಥವಾ ‘ಒಕ್ಕ’ ಇವೆ. ಕೊಡಗಿನ ಇತರ ಮೂಲನಿವಾಸಿಗಳಂತೆ ಇವರೂ ಪ್ರಕೃತಿಯನ್ನು ಆರಾಧಿಸುವ ಕೃಷಿ ಪ್ರಧಾನ ಹಿನ್ನೆಲೆಯನ್ನು ಹೊಂದಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಮತ್ತು ಅಖಿಲ ಕೊಡವ ಸಮಾಜದಂತಹ ಸಂಸ್ಥೆಗಳು ಬೂಣೆಪಟ್ಟ ಸಮುದಾಯವನ್ನು ಕೊಡವ ಭಾಷಾ ಜನಾಂಗದ ಅವಿಭಾಜ್ಯ ಅಂಗವೆಂದು ಗುರುತಿಸಿದ್ದು, ಇವರ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳುತ್ತಿವೆ ಎಂದು ಹೇಳಲಾಗುತ್ತದೆ.

ನಿಜಕ್ಕೂ ಬೇಸರದ ಸಂಗತಿಯೆಂದರೆ ಈ ಸಮುದಾಯ ಕರ್ನಾಟಕದ ಜಾತಿಪಟ್ಟಿಯಲ್ಲಿ ಎಲ್ಲೂ ದಾಖಲಾಗಿಲ್ಲ. ಕರ್ನಾಟಕದ ಸರಕಾರ ಅಥವಾ ಯಾವುದೇ ಆಯೋಗಗಳು ಇವರನ್ನು ಎಲ್ಲೂ ಗುರುತಿಸಿಲ್ಲ. ಇಂತಹದ್ದೊಂದು ಸಮುದಾಯದ ಇರುವಿಕೆಯೇ ಇವರಾರಿಗೂ ಗೊತ್ತಿಲ್ಲ. ಹಾಗೆ ನೋಡಿದರೆ ಈ ಸಮುದಾಯಕ್ಕೆ ಅಸ್ಮಿತೆಯೇ ಇಲ್ಲ. ಎಡ್ಗರ್ ಥರ್ಸ್ಟನ್, ಎಂತೋವನ್, ನಂಜುಂಡಯ್ಯ, ಅಯ್ಯರ್ ಅಂತಹ ಯಾವ ಮಾನವಶಾಸ್ತ್ರಜ್ಞರೂ ಈ ಸಮುದಾಯವನ್ನು ಎಲ್ಲೂ ದಾಖಲಿಸಿಲ್ಲ. ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ತಮ್ಮ ‘ಅಮರಸುಳ್ಯ ಸಂಗ್ರಾಮ 1837’ ಪುಸ್ತಕದಲ್ಲಿ ಕೊಡಗು ಭಾಷಿಕ ಸಮುದಾಯಗಳ ಪಟ್ಟಿಯಲ್ಲಿ ಮಾತ್ರ ‘ಬೂಣೆಪಟ್ಟ’ ಸಮುದಾಯದ ಹೆಸರನ್ನು ದಾಖಲಿಸಿದ್ದಾರೆ. ಇದನ್ನು ಹೊರತು ಪಡಿಸಿದರೆ ಶ್ರೀಮತಿ ಕಾಮೆಯಂಡ ಕಲ್ಪನಾ ಸಾಮ್ರಾಟ್ ಅವರು ‘ಕೊಡಗಿನ ಪಾರಂಪರಿಕ ಆಭರಣ ಹಾಗೂ ಶಸ್ತ್ರಾಸ್ತ್ರಗಳ ಹಿನ್ನೆಲೆ’ ಎಂಬ ತಮ್ಮ ಗ್ರಂಥದಲ್ಲಿ ‘ಕೊಡವ ಭಾಷಿಕ ಸಮುದಾಯಗಳ ಪರಿಚಯ’ ಎಂಬ ಹಣೆಬರಹದಡಿ ಬೂಣೆಪಟ್ಟ ಸಮುದಾಯದ ಕುರಿತು ಸಣ್ಣ ಟಿಪ್ಪಣೆಯೊಂದನ್ನು ದಾಖಲಿಸಿದ್ದಾರೆ.

ದುರಂತವೆಂದರೆ ನಮ್ಮ ಕಣ್ಣಮುಂದಿನ ಜನ ಸಮುದಾಯವೊಂದು ನಶಿಸಿ (extinct) ಹೋಗುತ್ತಿದೆ! ಪಂಚೇಂದ್ರಿಯಗಳನ್ನು ಕಳಕೊಂಡ ನಮ್ಮ ಸರಕಾರಗಳು, ಆಯೋಗಗಳು ಇರಲಿ, ನಾವೂ ಕೂಡ ಲಕ್ವ ಹೊಡೆದವರಂತೆ ತಣ್ಣಗೆ ಕುಂತಿದ್ದೇವೆ..!!

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

Tags

communitypeopleBoonepatta
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X