Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಗ್ನಿಪಥ ಎನ್ನುವ ಆಳವಾದ ಪ್ರಪಾತ

ಅಗ್ನಿಪಥ ಎನ್ನುವ ಆಳವಾದ ಪ್ರಪಾತ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್30 May 2024 10:29 AM IST
share
ಅಗ್ನಿಪಥ ಎನ್ನುವ ಆಳವಾದ ಪ್ರಪಾತ

ಭಾಗ- 2

4. ನಾಲ್ಕು ವರ್ಷಗಳ ನಂತರ ನಿರುದ್ಯೋಗಿಗಳಾಗುವ 33,750 ಅಗ್ನಿವೀರರಿಗೆ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಶೇ.10 ಪ್ರಮಾಣದಲ್ಲಿ ಹುದ್ದೆಗಳನ್ನು ಮೀಸಲಿಡಲಾಗುತ್ತದೆ ಎಂದು ಸಹ ವರದಿಯಾಗಿದೆ. ಇದರ ಸಾಧ್ಯತೆಗಳ ಚರ್ಚೆ ಬಿಡಿ ತಮಾಷೆಯೆಂದರೆ ಇವೆಲ್ಲಾ ನಿಶ್ಚಿತ ಪಿಂಚಣಿರಹಿತ ಹುದ್ದೆಗಳಾಗಿವೆ.

ಮುಖ್ಯವಾಗಿ ವಾಸ್ತವ ದತ್ತಾಂಶಗಳು ಸಂಪೂರ್ಣ ವ್ಯತಿರಿಕ್ತವಾಗಿದೆ. 10 ಸಾರ್ವಜನಿಕ ಉದ್ದಿಮೆಗಳು (ಪಿಎಸ್‌ಯು) ರಕ್ಷಣಾ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಉದ್ಯಮಿ ಪೆರಿ ಮಹೇಶ್ವರ್ ಅವರು ‘ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ಗ್ರೂಪ್ ಡಿ ವಿಭಾಗದಲ್ಲಿ ಶೇ.20, ಗ್ರೂಪ್ ಸಿ ವಿಭಾಗದಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರು, ಸೇನಾ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಆದರೆ ಗ್ರೂಪ್ ಸಿ ನಲ್ಲಿನ 10,84,705 ಉದ್ಯೋಗಿಗಳ ಪೈಕಿ ಕೇವಲ 13,976 ಸಂಖ್ಯೆಯಲ್ಲಿ, ಶೇ.1.3ರಷ್ಟು ಮಾತ್ರ ಸೇನಾ ನಿವೃತ್ತರಿದ್ದಾರೆ. ಗ್ರೂಪ್ ಡಿ ನಲ್ಲಿನ 3,25,265 ಉದ್ಯೋಗಿಗಳ ಪೈಕಿ ಕೇವಲ 8,642 ಸಂಖ್ಯೆಯಲ್ಲಿ, ಶೇ.2.65ರಷ್ಟು ಮಾತ್ರ ಸೇನಾ ನಿವೃತ್ತರಿದ್ದಾರೆ.

ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ಡಿ ವಿಭಾಗದಲ್ಲಿ ಶೇ. 24.5, ಗ್ರೂಪ್ ಸಿ ವಿಭಾಗದಲ್ಲಿ ಶೇ.14.5ರಷ್ಟು ಹುದ್ದೆಗಳನ್ನು ಮಾಜಿ ಸೈನಿಕರು, ಸೇನಾ ಅಧಿಕಾರಿಗಳಿಗೆ ಮೀಸಲಿಡಲಾಗಿದೆ. ಆದರೆ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.1.3 ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.0.3ರಷ್ಟು ಮಾತ್ರ ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ.

ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಸಾರ್ವಜನಿಕ ಉದ್ದಿಮೆಗಳಲ್ಲಿ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.3.45 ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.2.71ರಷ್ಟು ಮಾತ್ರ ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ. ಕೇಂದ್ರ ಅರೆ ಸೇನಾಪಡೆ (ಸಿಆರ್‌ಪಿಎಫ್)ಯ ಗ್ರೂಪ್ ಸಿ ಹುದ್ದೆಗಳಲ್ಲಿ ಶೇ.0.47 (8,81,397 ಉದ್ಯೋಗಿಗಳ ಪೈಕಿ ಕೇವಲ 4,146 ಮಾತ್ರ) ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ.0.87ರಷ್ಟು (61,650 ಉದ್ಯೋಗಿಗಳ ಪೈಕಿ 539 ಮಾತ್ರ), ಗ್ರೂಪ್ ಎ ಹುದ್ದೆಗಳಲ್ಲಿ ಶೇ.2.20 ರಷ್ಟು (76,681 ಉದ್ಯೋಗಿಗಳ ಪೈಕಿ 1,687 ಮಾತ್ರ) ನಿವೃತ್ತ ಸೇನಾ ಅಧಿಕಾರಿ, ಸೈನಿಕರಿದ್ದಾರೆ ಎಂದು ಹೇಳುತ್ತಾರೆ. ಈ ವಾಸ್ತವ ದತ್ತಾಂಶಗಳು ನಮ್ಮ ಮುಂದಿರುವಾಗ ಶೇ.75ರಷ್ಟಿರುವ ನಿರುದ್ಯೋಗಿ ಅಗ್ನಿವೀರರಿಗೆ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯಲ್ಲಿ ಶೇ.10ರಷ್ಟು ಹುದ್ದೆಗಳನ್ನು ಮೀಸಲಿಡುತ್ತೇವೆ ಎನ್ನುವ ಭರವಸೆಯನ್ನು ನಂಬಲು ಯಾರು ತಯಾರಿದ್ದಾರೆ? ಇದು ಕೇವಲ ಮೂಗಿಗೆ ತುಪ್ಪ ಸವರುವ ತಂತ್ರ ಎಂದು ಯುವಜನತೆಗೂ ಮನವರಿಕೆಯಾಗಿದೆ. ವಂಚನೆಗೊಳಗಾದ ಹತಾಶೆಯೆ ಈ ಪ್ರತಿಭಟನೆಗೆ ಕಾರಣವಾಗಿದೆ. ಜನರಿಂದ ಆಯ್ಕೆಯಾಗಿ, ತನ್ನ ಜನರಿಗೇ ಮೋಸ ಮಾಡುವ ಜನಪ್ರಿಯ ಸರಕಾರವನ್ನು ಹೊಂದಿರುವ ದೇಶಕ್ಕೆ ಕರಾಳತೆಯ ಕಬಂಧ ಬಾಹುಗಳಿಂದ ಬಿಡುಗಡೆ ಕಷ್ಟವಿದೆ.

ಇನ್ನು ದೇಶದ ನಿರುದ್ಯೋಗದ ಪರಿಸ್ಥಿತಿಯೂ ಸುಧಾರಿಸಿಲ್ಲ. ಮಾರ್ಚ್ 2024ರ ವೇಳೆಗೆ ಶೇ.8ರಷ್ಟು ನಿರುದ್ಯೋಗದ ಪ್ರಮಾಣವಿದೆ. 16-64ನೇ ವಯಸ್ಸಿನೊಳಗಿನ ಉದ್ಯೋಗದಲ್ಲಿರುವ, ಉದ್ಯೋಗ ಹುಡುಕುತ್ತಿರುವ ಶ್ರಮಿಕ ವರ್ಗಗಳ ಅನುಪಾತ (ಎಲ್‌ಎಫ್‌ಆರ್) 2022ರ ಅವಧಿಯಲ್ಲಿ ಶೇ.55ರಷ್ಟಿದ್ದರೆ ಫೆಬ್ರವರಿ 2024ರಲ್ಲಿ ಶೇ.41.4ಕ್ಕೆ ಕುಸಿದಿದೆ. ಉದ್ಯೋಗದ ಪ್ರಮಾಣ ಶೇ.38.1ರಷ್ಟಿದೆ. ಹತ್ತು ವರ್ಷಗಳ ಹಿಂದೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದ ಮೋದಿಯವರಿಗೆ ಇಂದಿಗೂ ಅದನ್ನು ಈಡೇರಿಸಲು ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಸಂಪೂರ್ಣವಾಗಿ ಸೋತಿರುವ ಮೋದಿ ಸರಕಾರವು ತನ್ನ ಈ ವಿಫಲತೆಯನ್ನು ಮರೆ ಮಾಚಲು ಮತ್ತು ತಾತ್ಕಾಲಿಕ ಪರಿಹಾರವಾಗಿ ಅಲ್ಪಾವಧಿ ಉದ್ಯೋಗ ಯೋಜನೆಯಾದ ‘ಅಗ್ನಿಪಥ’ವನ್ನು ಪ್ರಚಾರ ಮಾಡುತ್ತಿದೆ. ಆದರೆ ದೀರ್ಘಾವದಿಯಲ್ಲಿ ಇದು ಮತ್ತಷ್ಟು ನಿರುದ್ಯೋಗವನ್ನು ಸೃಷ್ಟಿಸುತ್ತದೆ. ನಾಲ್ಕು ವರ್ಷಗಳ ನಂತರ ಮಾಜಿ ಅಗ್ನವೀರರಾಗಿ ಹೊರ ಬೀಳುವ ಈ 27 ವಯಸ್ಸಿನ ಯುವಜನತೆ ನಿರುದ್ಯೋಗಿಗಳಾಗಿ ಸಮಾಜಕ್ಕೆ ಮರಳುತ್ತಾರೆ. ಅಂದರೆ ಈ ಮೂಲಕ ಹತಾಶರಾದ, ಮಾನಸಿಕವಾಗಿ ವಿಕ್ಷಿಪ್ತಗೊಂಡಿರುವ ಯುವಸಮೂಹವನ್ನು ಸೃಷ್ಟಿಸಲಾಗುತ್ತದೆ. ಇದು ಮುಂದೆ ಸಮೂಹ ಸನ್ನಿಯಾಗಿ ಪರಿವರ್ತನೆಗೊಳ್ಳುತ್ತದೆ. ನಂತರ ಸಂಘ ಪರಿವಾರ ಇವರನ್ನು ತನ್ನ ಸಂಘಟನೆಗೆ ಬಳಸಿಕೊಳ್ಳುತ್ತದೆ ಮತ್ತು ಹಿಟ್ಲರ್‌ನ ನಾಝಿ ಪಡೆಯ ಸ್ಟಾರ್ಮ್ ಟ್ರೂಪ್ ರೀತಿಯಲ್ಲಿ ಸೇನೆಯಲ್ಲಿ ತರಬೇತಿ ಹೊಂದಿದ ಅಗ್ನಿವೀರರ ಖಾಸಗಿ ಪಡೆಯನ್ನು ಕಟ್ಟಿಕೊಳ್ಳುತ್ತದೆ ಎನ್ನುವ ಆರೋಪದಲ್ಲಿ ಸತ್ಯಾಂಶವಿದೆ. ಅಂದರೆ ಲಾಠಿ ಹಿಡಿಯುವ ಸಂಘ ಪರಿವಾರದ ಕಾರ್ಯಕರ್ತರ ಕೈಯಲ್ಲಿ ಬಂದೂಕು ಹಿಡಿಯುವ ದಿನಗಳು ದೂರವಿಲ್ಲ.

5. ಒಂದೆಡೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ರಕ್ಷಣಾ ಇಲಾಖೆಯ ಸೈನಿಕರ, ತಂತ್ರಜ್ಞರ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದೆಡೆ ಮುಂದಿನ ಒಂದೂವರೆ ವರ್ಷಗಳಲ್ಲಿ 10 ಲಕ್ಷ ಉದ್ಯೋಗ ಭರ್ತಿ ಮಾಡಲಾಗುವುದು ಎಂದು 2022ರಲ್ಲಿ ಟ್ವೀಟ್ ಮಾಡಿದ್ದಾರೆ. ಇದುವರೆಗೂ ಯಾವುದೇ ಬೆಳವಣಿಗೆಗಳಾಗಲಿಲ್ಲ. ಇದನ್ನು ಎಂತಹ ಮೋಸವೆಂದು ಕರೆಯಬೇಕು? ಇಂದು ಕೇಂದ್ರ ಸರಕಾರದ ಅಡಿಯಲ್ಲಿ 9.64 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿವೆ. ಎಲ್ಲಾ ರಾಜ್ಯಗಳಲ್ಲಿ ಅಂದಾಜು 45-50 ಲಕ್ಷ ಹುದ್ದೆಗಳು ಖಾಲಿಯಿವೆ. ಅನೇಕ ವರ್ಷಗಳಿಂದ ನೇಮಕಾತಿ ನಡೆಯುತ್ತಿಲ್ಲ. ಈಗ ದಿಢೀರನೆ ನೇಮಕಾತಿ ಮಾಡಿಕೊಳ್ಳುವ ಘೋಷಣೆಗೆ ಯಾವ ಸಮರ್ಥನೆಯಿದೆ? ಇದರ ಹಿಂದಿನ ರಾಜಕಾರಣವೇನು? ಈ 10 ಲಕ್ಷ ಹುದ್ದೆಗಳಿಗೆ ತಗಲುವ ಕನಿಷ್ಠ ವೇತನವನ್ನು ಪರಿಗಣಿಸಿದರೂ ತಿಂಗಳಿಗೆ 25-30 ಸಾವಿರ ಕೋಟಿ ರೂ., ವಾರ್ಷಿಕವಾಗಿ 3-3.5 ಲಕ್ಷ ಕೋಟಿ ರೂ. ಅಗತ್ಯವಿದೆ. ಆದರೆ ಎಲ್ಲಾ ಆದಾಯಗಳು ತಳಮಟ್ಟ ತಲುಪಿರುವ ಈ ಸಂದರ್ಭದಲ್ಲಿ ಮೋದಿ ಸಾಹೇಬರು ಈ ನೇಮಕಾತಿಗಳಿಗೆ ಅಗತ್ಯವಾದ ರೆವಿನ್ಯೂವನ್ನು ಎಲ್ಲಿಂದ ಸೃಷ್ಟಿಸುತ್ತಾರೆ? ಅದಕ್ಕೆ ಯಾವ ಯೋಜನೆಗಳಿವೆ? ಈ ಪ್ರಶ್ನೆಗಳಿಗೆ ಉತ್ತರವಿಲ್ಲ. ಕಳೆದ ಹತ್ತು ವರ್ಷಗಳಿಂದ ಮೋಸ, ಕಪಟತನದಿಂದಲೇ ಅಧಿಕಾರ ಗಳಿಸಿರುವ, ಅಧಿಕಾರ ನಡೆಸುತ್ತಿರುವ ಮೋದಿ ಸರಕಾರ ಈ ದೇಶವನ್ನು ಸುಸ್ಥಿತಿಯಲ್ಲಿ ಉಳಿಸುತ್ತದೆಯೇ? ಇದಕ್ಕೆ 4, ಜೂನ್ 2024ರ ನಂತರ ಉತ್ತರ ದೊರಕಬಹುದೇ?

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X