Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಲಬುರಗಿಗೂ ಜಪಾನ್ ಮಾದರಿಯ ಬುಲೆಟ್ ರೈಲು!

ಕಲಬುರಗಿಗೂ ಜಪಾನ್ ಮಾದರಿಯ ಬುಲೆಟ್ ರೈಲು!

►ಮುಂಬೈ-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಡಿಪಿಆರ್ ಸಿದ್ಧ

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ9 Sept 2026 2:10 PM IST
share
ಕಲಬುರಗಿಗೂ ಜಪಾನ್ ಮಾದರಿಯ ಬುಲೆಟ್ ರೈಲು!

ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕಲಬುರಗಿಗೆ ಶೀಘ್ರದಲ್ಲೇ ಜಪಾನ್ ಮಾದರಿಯ ಹೈಸ್ಪೀಡ್ ಬುಲೆಟ್ ರೈಲು ಸಂಪರ್ಕ ದೊರೆಯುವ ಸಾಧ್ಯತೆ ಇದೆ. ಮುಂಬೈ-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ನ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ಕೇಂದ್ರ ಸರಕಾರದ ಅನುಮೋದನೆಗೆ ಮುಂದಾಗಿದೆ ಎನ್ನಲಾಗಿದೆ.

ಈ ಯೋಜನೆಯಿಂದ ಮುಂಬೈ, ಪುಣೆ, ಸೋಲಾಪುರ, ಕಲಬುರಗಿ ಮತ್ತು ಹೈದರಾಬಾದ್ ನಗರಗಳನ್ನು ಸಂಪರ್ಕಿಸುವ ರೈಲು ಮಾರ್ಗವು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ಆರ್ಥಿಕ ಚಟುವಟಿಕೆಗಳಿಗೆ ಹೊಸ ವೇಗ ಸಿಗಲಿದೆ.

671 ಕಿ.ಮೀ. ಉದ್ದದ ಬೃಹತ್ ಕಾರಿಡಾರ್: ಜಪಾನ್ ದೇಶದ ಸಹಕಾರದೊಂದಿಗೆ ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಸಿದ್ಧಪಡಿಸಿರುವ ಪ್ರಸ್ತಾವಿತ ಕಾರಿಡಾರ್ ಒಟ್ಟು 671 ಕಿ.ಮೀ. ಉದ್ದವಿದೆ. ಮಹಾರಾಷ್ಟ್ರದಲ್ಲಿ 457 ಕಿ.ಮೀ, ಕರ್ನಾಟಕದಲ್ಲಿ 121 ಕಿ.ಮೀ ಹಾಗೂ ತೆಲಂಗಾಣದಲ್ಲಿ 93 ಕಿ.ಮೀ ಹಾಯ್ದುಹೋಗಲಿದೆ. ಯೋಜನೆಯು 13 ಸುರಂಗಗಳು ಒಳಗೊಂಡಿರುವ ನಿರೀಕ್ಷೆಯಿದ್ದು, ಖಂಡಾಲಾಘಾಟ್ನಲ್ಲಿ (26 ಕಿ.ಮೀ) ಅತಿ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ ಎಂದು ಡಿಪಿಆರ್ ಮೂಲಗಳು ತಿಳಿಸಿವೆ.

ಕಲಬುರಗಿಯಲ್ಲಿ ಪ್ರತ್ಯೇಕ ರೈಲು ನಿಲ್ದಾಣ:

ಕರ್ನಾಟಕದ 121 ಕಿ.ಮೀ. ಮಾರ್ಗದಲ್ಲಿ ಕಲಬುರಗಿಯಲ್ಲಿ (ತಾಜ್ ಸುಲ್ತಾನಪುರ ಸಮೀಪ) ಪ್ರತ್ಯೇಕ ಹೈಸ್ಪೀಡ್ ರೈಲು ನಿಲ್ದಾಣ ನಿರ್ಮಿಸುವ ಪ್ರಸ್ತಾವವಿದೆ. ಯೋಜನೆ ಜಾರಿಯಿಂದ ಕಲ್ಯಾಣ ಕರ್ನಾಟಕದ ಪ್ರಯಾಣಿಕರು, ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಿಗಳು ಮುಂಬೈ, ಪುಣೆ ಮತ್ತು ಹೈದರಾಬಾದನಂತಹ ಪ್ರಮುಖ ನಗರಗಳಿಗೆ ತೆರಳಲು ಸಾಧ್ಯವಾಗಲಿದೆ.

ಯಾವೆಲ್ಲ ನಗರಗಳಿಗೆ ಸಂಪರ್ಕ?

ಪ್ರಸ್ತಾವಿತ ಮಾರ್ಗವು ಮಹಾರಾಷ್ಟ್ರದ ಮುಂಬೈ ಬಿಕೆಸಿ, ನವಿ ಮುಂಬೈ, ಲೋನವಾಳ, ಪಿಂಪ್ರಿ-ಚಿಂಚ್ವಾಡ್, ಪುಣೆ, ಬಾರಾಮತಿ, ಪಂಢರಪುರ, ಸೋಲಾಪುರ, ಕರ್ನಾಟಕದ ಕಲಬುರಗಿ, ತೆಲಂಗಾಣದ ವಿಕಾರಾಬಾದ್, ಹೈದರಾಬಾದ್ ನಗರಕ್ಕೆ ಸಂಪರ್ಕಿಸಲಿದೆ.

12 ಗಂಟೆಯ ಪ್ರಯಾಣ ಕೇವಲ 3 ಗಂಟೆ:

ಪ್ರಸ್ತುತ ಮುಂಬೈ-ಹೈದರಾಬಾದ್ ನಡುವಿನ ರೈಲು ಪ್ರಯಾಣಕ್ಕೆ ಸುಮಾರು 12ರಿಂದ 15 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಪ್ರಸ್ತಾವಿತ ಹೈಸ್ಪೀಡ್ ರೈಲು ಗಂಟೆಗೆ ಸುಮಾರು 300ರಿಂದ 320 ಕಿ.ಮೀ. ವೇಗದಲ್ಲಿ ಸಂಚರಿಸುವ ಗುರಿ ಹೊಂದಿದ್ದು, ಇದರಿಂದ ಪ್ರಯಾಣದ ಅವಧಿ ಸುಮಾರು 3ರಿಂದ 3.5 ಗಂಟೆಗಳಿಗೆ ಇಳಿಯುವ ಸಾಧ್ಯತೆಯಿದೆ. ಸಮಯ ಉಳಿತಾಯದಿಂದ ನಗರಗಳ ನಡುವೆ ವ್ಯಾಪಾರ, ಕೈಗಾರಿಕೆ, ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

ಯೋಜನೆಗೆ 1.5ರಿಂದ 2 ಲಕ್ಷ ಕೋಟಿ ವೆಚ್ಚ?:

ಯೋಜನೆಯ ಒಟ್ಟು ವೆಚ್ಚವು1.5 ಲಕ್ಷ ಕೋಟಿಯಿಂದ 2 ಲಕ್ಷ ಕೋಟಿ ವ್ಯಾಪ್ತಿಯಲ್ಲಿರಬಹುದು ಅಂತಿಮ ಯೋಜನಾ ವೆಚ್ಚವು ಡಿಪಿಆರ್ ಪರಿಶೀಲನೆ, ತಾಂತ್ರಿಕ

ಮೌಲ್ಯಮಾಪನ ಮತ್ತು ಕೇಂದ್ರ ಸರಕಾರದ ಅನುಮೋದನೆಯ ಬಳಿಕವೇ ಸ್ಪಷ್ಟವಾಗಲಿದೆ. ಕಾಮಗಾರಿ 2027-28ಕ್ಕೆ ಆರಂಭಭವಾದರೆ ಮುಗಿಯಲು 8ರಿಂದ 10 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕಲ್ಯಾಣ ಕರ್ನಾಟಕಕ್ಕೆ ಹೊಸ ಆರ್ಥಿಕ ಹೆದ್ದಾರಿ:

ಈ ಯೋಜನೆ ವೇಗದ ಸಾರಿಗೆ ವ್ಯವಸ್ಥೆಯಾಗಿರದೆ, ಮೂರು ರಾಜ್ಯಗಳ ಪ್ರಮುಖ ಆರ್ಥಿಕ ಕಾರಿಡಾರ್ ಆಗುವ ಸಾಧ್ಯತೆಯಿದೆ. ವಿಶೇಷವಾಗಿ ಕಲಬುರಗಿಯಲ್ಲಿ ಕೈಗಾರಿಕೆ, ಕೃಷಿ ಆಧಾರಿತ ಉದ್ಯಮ, ಶಿಕ್ಷಣ, ಆರೋಗ್ಯ, ರಿಯಲ್ ಎಸ್ಟೇಟ್, ಪ್ರವಾಸೋದ್ಯಮ ಮತ್ತು ಸೇವಾ ವಲಯಗಳಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಬಹುದು. ಕಲಬುರಗಿಗೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು ನೆರವಾಗಬಹುದು ಎಂಬ ನಿರೀಕ್ಷೆ ಇದೆ.

ಕೇಂದ್ರ ಸರಕಾರದ ಬೃಹ ಯೋಜನೆಯಾಗಿರುವ ಹೈಸ್ಪೀಡ್ ಬುಲೆಟ್ ರೈಲು ಸಂಪರ್ಕ ಯೋಜನೆಯು ದೇಶದ ಅಭಿವೃದ್ಧಿ ಪಥವನ್ನೇ ಬದಲಿಸಲಿದೆ. ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಯೋಜನೆಯಿಂದ ವಿಶೇಷವಾಗಿ ಕಲಬುರಗಿ ಭಾಗದ ಆರ್ಥಿಕತೆ ಪುಟಿದೇಳಲಿದೆ.

-ವಿ.ಸೋಮಣ್ಣ

ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ

ಹಲವು ದಶಕಗಳಿಂದ ಕಲಬುರಗಿ ನಗರವು ದೊಡ್ಡ ಮಟ್ಟದ ಮೂಲ ಸೌಕರ್ಯ ಹೂಡಿಕೆ ನಿರೀಕ್ಷಿಸುತ್ತಿದೆ. ಪ್ರಸ್ತಾವಿತ ಬುಲೆಟ್ ರೈಲು ಸಂಪರ್ಕದಿಂದ ಮೆಟ್ರೋಪಾಲಿಟನ್ ನಗರಗಳೊಂದಿಗೆ ವೇಗದ ಸಂಪರ್ಕ ದೊರೆಯಲಿದೆ. ಇದು ಆರ್ಥಿಕ, ಕೈಗಾರಿಕಾ, ಶೈಕ್ಷಣಿಕ ಬೆಳವಣಿಗೆ, ಉದ್ಯೋಗ, ಹೂಡಿಕೆ, ವ್ಯಾಪಾರ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತರಬಲ್ಲದು. ಕಲಬುರಗಿಯನ್ನು ರಾಷ್ಟ್ರೀಯ ಅಭಿವೃದ್ಧಿಯ ನಕ್ಷೆಯಲ್ಲಿ ಇನ್ನಷ್ಟು ಪ್ರಮುಖ ಸ್ಥಾನಕ್ಕೆ ತರುವ ಈ ಮಹತ್ವಾಕಾಂಕ್ಷಿ ಯೋಜನೆ ಈ ಭಾಗದ ಅಭಿವೃದ್ಧಿಗೆ ಹೊಸ ಆಧ್ಯಾಯ ಬರೆಯಲಿದೆ.

-ಸಂತೋಷ್ ನಾಯಕ

ಅಭಿವೃದ್ಧಿಪರ ಚಿಂತಕ, ಜೇವರ್ಗಿ

Tags

Japanese-stylebullet trainKalaburagi
share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X