Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗೊಂದಲದ ಗೂಡಲ್ಲಿ ಅಲೆಮಾರಿ ಬುಡಕಟ್ಟು

ಗೊಂದಲದ ಗೂಡಲ್ಲಿ ಅಲೆಮಾರಿ ಬುಡಕಟ್ಟು

ಟಿ.ವಿ. ಗೋಪಾಲಕೃಷ್ಣಟಿ.ವಿ. ಗೋಪಾಲಕೃಷ್ಣ25 Feb 2025 12:40 PM IST
share
ಗೊಂದಲದ ಗೂಡಲ್ಲಿ ಅಲೆಮಾರಿ ಬುಡಕಟ್ಟು

ಇತ್ತೀಚಿನ ದಿನಗಳಲ್ಲಿ ಸರಕಾರಿ ಮಾತುಕತೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಚರ್ಚಿತವಾಗುತ್ತಿರುವ ಸಮುದಾಯ ಅಲೆಮಾರಿ ಬುಡಕಟ್ಟು. ಈ ಚರ್ಚೆಗೆ ಹಲವಾರು ಕಾರಣಗಳಿವೆ. ಅಲೆಮಾರಿ ಬುಡಕಟ್ಟು ಈಗ ಪ್ರಜ್ಞಾವಂತವಾಗಿದೆ ಅನ್ನುವುದು ಒಂದು ಕಾರಣ ಅಂದುಕೊಂಡರೂ, ಅಲೆಮಾರಿ ಸಮುದಾಯ ಎಷ್ಟು ಪ್ರಜ್ಞಾವಂತವಾಗಿದೆ, ಆ ಪ್ರಜ್ಞಾವಂತಿಕೆಯಿಂದ ಅಲೆಮಾರಿ ಬುಡಕಟ್ಟುಗಳಿಗೆ ದಿಕ್ಕು ದೆಸೆ ಸಿಕ್ಕಿದೆಯೇ ಅನ್ನುವ ಪ್ರಶ್ನೆ ಮುಂದಿಟ್ಟುಕೊಂಡರೆ ಆಗ ಮಾತ್ರ ಅಂತಹ ಮಹತ್ವದ ಬೆಳವಣಿಗೆ ಆಗಿದೆ ಅನ್ನಿಸುವುದಿಲ್ಲ. ಕೇವಲ ಖಾಲಿ ಡಬ್ಬದಲ್ಲಿ ಶಬ್ದ ಉಂಟಾದ ರೀತಿಯಲ್ಲಿ ಶಬ್ದ ಕೇಳಿ ಬರುತ್ತಿದೆ ಅಷ್ಟೇ. ಅಲೆಮಾರಿ ಬುಡಕಟ್ಟು ಸಮುದಾಯಗಳ ಈ ದಿನಗಳಲ್ಲಿ ಚರ್ಚಿತ ವಿಷಯಗಳನ್ನು ಘನೀಕರಿಸಿ ಫಲಪ್ರದ ಮಾಡಿಕೊಳ್ಳುವುದು ಹೇಗೆ? ಅನ್ನುವುದೇ ನಮ್ಮ ಮುಂದಿರುವ ಸವಾಲು.

ಅಲೆಮಾರಿ ಬುಡಕಟ್ಟುಗಳು ಆಯುರ್ವೇದ, ಪ್ರಾಣಿ ವೈದ್ಯ, ಭವಿಷ್ಯ ಹೇಳುವುದು, ಹಚ್ಚೆ ಹಾಕುವುದು, ಕಥೆ, ಕವನ, ಸಂಗೀತ, ಲಾವಣಿಗಳು, ಬಯಲಾಟ, ಯಕ್ಷಗಾನ ಇನ್ನೂ ಅನೇಕ ಇಂತಹ ಸಂಪತ್ತನ್ನು ಹೊಂದಿದ್ದವು. ಇವುಗಳನ್ನು ಅಧ್ಯಯನ ಮಾಡುವ ನೆಪದಿಂದ ಬಂದ ಜನರು ಈ ಜ್ಞಾನ ಭಂಡಾರವನ್ನು ದೋಚಿ ಒಂದಷ್ಟು ಜನ ಡಾಕ್ಟರೇಟ್ ಪಡೆದರು. ಪ್ರಶಸ್ತಿಗಳನ್ನು ಪಡೆದರು. ಅಕಾಡಮಿಯಲ್ಲಿ ಹೋಗಿ ಕುಳಿತರು. ಒಂದಷ್ಟು ಜ್ಞಾನ, ಕೈಗಾರಿಕೆಗಳಿಗೆ ಅನುಕೂಲವಾಯಿತು. ಅಲೆಮಾರಿ ಬುಡಕಟ್ಟುಗಳ ಸಂಸ್ಕೃತಿ ವರ್ಗಾವಣೆಯಾಯಿತು. ನಮ್ಮ ಸಂಸ್ಕೃತಿಯನ್ನು ಅವರ ಸಂಸ್ಕೃತಿ ಎನ್ನುವಂತೆ ಬಿಂಬಿಸಿಕೊಂಡರು. ಇಷ್ಟಾದರೂ ಅಲೆಮಾರಿ ಬುಡಕಟ್ಟುಗಳು ತಾವು ಕಳೆದುಕೊಂಡಿದ್ದ ಸಂಪತ್ತಿನ ಬಗ್ಗೆ ಅರಿವಿಲ್ಲದಂತೆ ಬದುಕು ಸಾಗಿಸಿದರು. ಇದರ ಮುಂದುವರಿದ ಭಾಗದಂತೆ ತಮ್ಮ ಅಮಾಯಕತನ ಮತ್ತು ತಮ್ಮ ಮೂರ್ಖತನದ ಫಲವಾಗಿ ಅಲೆಮಾರಿ ಬುಡಕಟ್ಟು ಸಮುದಾಯಗಳು ತಮ್ಮಲ್ಲಿ ತಮ್ಮ ನಾಯಕನನ್ನು ಕಂಡುಕೊಳ್ಳದೆ ಹೊರಗಿನ ನಾಯಕರನ್ನು ಹಿಂಬಾಲಿಸುವುದು ಹಾಗೂ ಅವರ ಗುಲಾಮಿತನ ಮಾಡುವುದು ಇಂದಿಗೂ ಮುಂದುವರಿಯಿತು. ಇಂದಿಗೂ ಅಲೆಮಾರಿ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ನಾಟಕದಂತೆ ಸೇರಿಕೊಂಡ ಆ ವ್ಯಕ್ತಿಗಳು ಈ ಅಲೆಮಾರಿ ಬುಡಕಟ್ಟು ಸಮುದಾಯವನ್ನು ಉಳಿಸಲು ಬಂದ ದೇವಮಾನವರಂತೆ ತೋರ್ಪಡಿಸುತ್ತಾ ತಾವು ಪ್ರತಿನಿಧಿಸುವ ಬದಲಾಗಿ ಈ ಸಮುದಾಯದ ಯಜಮಾನಿಕೆಯನ್ನೇ ಕಿತ್ತುಕೊಳ್ಳುವುದು ಈ ಬುಡಕಟ್ಟು ಸಮುದಾಯಕ್ಕೆ ಎಂದಿಗೂ ನಾಯಕತ್ವಗಳನ್ನು ಬೆಳೆಸಿಕೊಳ್ಳದ ರೀತಿಯಲ್ಲಿ ಈ ಸಮುದಾಯಗಳನ್ನು ಕಟ್ಟಿ ಹಾಕುವುದು, ತಾನು ಪ್ರತಿನಿಧಿಸಿದ ಕಾರಣಕ್ಕಾಗಿ ಎಂಎಲ್‌ಸಿ, ಎಂಎಲ್‌ಎ, ಚೇರ್ಮನ್‌ಗಿರಿಯನ್ನು ಕೇಳುವುದು ನಡೆಯುತ್ತಲೇ ಇದೆ. ಅಲೆಮಾರಿ ಬುಡಕಟ್ಟು ಸಮುದಾಯದ ಜನರು ತಾವು ನಾಯಕರಾಗಬಹುದಾದ ಅವಕಾಶವನ್ನು ಮತ್ತೊಬ್ಬರಿಗೆ ಬೆಳ್ಳಿ ತಟ್ಟೆಯಲ್ಲಿಟ್ಟು ತಾವೇ ಕೊಟ್ಟರೆ ಆ ಜನರು ತೆಗೆದುಕೊಳ್ಳದೆ ಇರಲು ಅವರೇನು ಬುದ್ಧನಂತೆ ಎಲ್ಲವನ್ನು ತ್ಯಜಿಸುವ ಗುಣದವರೇ? ನಾಲ್ಕು ಬುದ್ಧನ ಮಾತುಗಳನ್ನು ಹೇಳಿ ನಮ್ಮನ್ನು ರಂಜಿಸಿ ನಮ್ಮಿಂದಲೇ ಕಿತ್ತುಕೊಳ್ಳುವವರು.

ಅಲೆಮಾರಿಗಳು ಪ್ರಬುದ್ಧರಾಗಬೇಕಿದೆ. ತಮ್ಮ ಹಸಿವನ್ನು ಪ್ರಕಟ ಮಾಡುವ, ತಮ್ಮ ಹಸಿವಿನ ಗಾತ್ರವನ್ನು ಬೇರೊಬ್ಬರ ಮೂಲಕ ಹೇಳಿಸದೆ ಸರಕಾರಕ್ಕೆ ತಾವೇ ತಿಳಿಸುವ, ತಮ್ಮನ್ನು ತಾವು ಬೆಳೆಸಿಕೊಳ್ಳುವ ಕಾರ್ಯ ಮಾಡಬೇಕಿದೆ. ರಾಜಕೀಯ ನಾಯಕರು, ಅಧಿಕಾರಿಗಳು, ಅಲೆಮಾರಿ ಬುಡಕಟ್ಟುಗಳಲ್ಲಿರುವ ವರ್ಗೀಕರಣದ ವ್ಯವಸ್ಥೆಯ ರೂಪಗಳನ್ನು ತಮಗಿಷ್ಟ ಬಂದಂತೆ ವ್ಯಾಖ್ಯಾನಿಸುವುದು ಇತ್ತೀಚೆಗೆ ಮಾಮೂಲಿ ವಿಷಯವಾಗಿದೆ. ಪ್ರತೀ ಜಾತಿಯಲ್ಲೂ ಏಕೈಕ ಸಂಘಗಳಿಲ್ಲ. ಪ್ರತೀ ಜಾತಿಗಳಲ್ಲಿಯೂ ಕನಿಷ್ಠವೆಂದರೂ ಮೂರ್ನಾಲ್ಕು ಗುಂಪುಗಳಿರುವುದು ಸವೇರ್ಸಾಮಾನ್ಯ. ಸರಕಾರ ಅಲೆಮಾರಿ ಬುಡಕಟ್ಟುಗಳನ್ನು ಎಸ್‌ಸಿ ಅಲೆಮಾರಿ ಬುಡಕಟ್ಟು, ಎಸ್‌ಟಿ ಅಲೆಮಾರಿ ಬುಡಕಟ್ಟು, ಒಬಿಸಿ ಅಲೆಮಾರಿ ಬುಡಕಟ್ಟು ಎಂದು ಮೂರು ಭಾಗವಾಗಿ ವಿಂಗಡಿಸಿದೆ. ಸರಕಾರ ವಿಂಗಡಿಸಿದ ಈ ಮೂರು ವರ್ಗಗಳಲ್ಲಿ ಒಟ್ಟು 120 ಜಾತಿಗಳಿವೆ, ಈ 120 ಜಾತಿಗಳಲ್ಲಿ ಕೆಲವು ಜಾತಿಗಳು ಸಂಘಟನೆ ಮಾಡಿಕೊಂಡಿವೆ. ಸರಕಾರ ವರ್ಗೀಕರಣ ಮಾಡಿರುವ ಮೂರು ವರ್ಗಗಳಲ್ಲಿ ಕೂಡ ಎರಡು-ಮೂರು ಸಂಘಟನೆಗಳಿವೆ. ಈ ಎಲ್ಲಾ ಸಂಘಟನೆಗಳು ರಾಜಕೀಯ ನಾಯಕರನ್ನು, ಸರಕಾರಿ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯ. ಇದೇ ಕಾರಣವನ್ನು ಬಳಸಿ ಅಲೆಮಾರಿ ಬುಡಕಟ್ಟುಗಳಲ್ಲಿ ಐಕ್ಯತೆ ಇಲ್ಲ, ಒಟ್ಟು ಅಭಿಪ್ರಾಯ ಇಲ್ಲವೆಂದು ಬಿಂಬಿಸುವ ಕಾರ್ಯ ಸಾರ್ವಜನಿಕಗೊಳ್ಳುತ್ತಿದೆ. ಅಲೆಮಾರಿ ಬುಡಕಟ್ಟುಗಳು ನಮ್ಮನ್ನು ಮೂರು ವರ್ಗಗಳನ್ನಾಗಿ ಮಾಡಿ ಎಂದು ಎಂದಿಗೂ ಯಾರನ್ನು ಬೇಡಿಯೂ ಇಲ್ಲ. ಸರಕಾರಿ ದಾಖಲೆಗಳಲ್ಲಿ ಮೂರು ವರ್ಗಗಳಾಗಿ ವಿಂಗಡಿಸಿ ಹೋಗಿದ್ದರೂ ನಾವೆಲ್ಲರೂ ಒಂದೇ ಕರುಳಬಳ್ಳಿ ಎಂಬುದು ನಮಗೆಲ್ಲರಿಗೂ ತಿಳಿದ ಸತ್ಯವಾಗಿರುವುದರಿಂದ ನಮ್ಮನ್ನು ಒಂದೇ ಗುಂಪಿನಲ್ಲಿ ಇಡಿ ಎಂಬ ಒತ್ತಾಯ ಸರ್ವಕಾಲಕ್ಕೂ ನಮ್ಮದಾಗಿದೆ. ಗೊಂದಲಗಳು ಅಲೆಮಾರಿ ಬುಡಕಟ್ಟುಗಳಲ್ಲಿಲ್ಲ. ಆದರೆ ಗೊಂದಲಗಳನ್ನು ಇತ್ತೀಚೆಗೆ ಉಂಟು ಮಾಡುವ ದೊಡ್ಡಪಡೆಯೇ ಸೃಷ್ಟಿಯಾಗುತ್ತಿದೆ. ಅಲೆಮಾರಿ ಬುಡಕಟ್ಟುಗಳು ಇನ್ನಾದರೂ ಎಚ್ಚರಿಕೆಯಿಂದ ವ್ಯವಹರಿಸುವುದು ಅತ್ಯಂತ ಅವಶ್ಯವಿದೆ.

ಅಲೆಮಾರಿ ಬುಡಕಟ್ಟುಗಳು ಈ ಗೊಂದಲದಿಂದ ಹೊರಗೆ ಬರಲು ಬಹುದಿನಗಳಿಂದ ಆಯೋಗ ರಚನೆಗೆ ಕೇಳಿಕೊಳ್ಳುತ್ತಾ ಬಂದಿದೆ. ಆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಎಸ್‌ಸಿ, ಎಸ್‌ಟಿ, ಒಬಿಸಿ ಅಲೆಮಾರಿ ಬುಡಕಟ್ಟುಗಳೊಟ್ಟಿಗೆ ಆಯೋಗ ರಚನೆ ಆಗಬೇಕೆಂಬುದು ನಮ್ಮ ಆಸೆಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಭೆಯಲ್ಲಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಇಂದೂಧರ ಹೊನ್ನಾಪುರ, ಡಿ.ಟಿ. ಶ್ರೀನಿವಾಸ್, ಕೊತ್ತೂರು ಮಂಜುನಾಥ್ ಮತ್ತು ನಾನು ಹಾಗೂ ಇನ್ನುಳಿದ ಅಲೆಮಾರಿ ಮುಖಂಡರು ಆಯೋಗದ ರಚನೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಅಂದು ನಾನು ‘‘ಅಲೆಮಾರಿ ಬುಡಕಟ್ಟು ಸಮುದಾಯಗಳಲ್ಲಿ ತಂದೆಯದ್ದು ಎಸ್‌ಸಿ ಅಲೆಮಾರಿ ಬುಡಕಟ್ಟು ಆಗಿದ್ದರೆ ಮಗ ಒಬಿಸಿ ಪಟ್ಟಿಯಲ್ಲಿದ್ದಾನೆ, ತಾಯಿ ಎಸ್‌ಟಿ ಪಟ್ಟಿಯಲ್ಲಿದ್ದರೆ ಮಗ ಒಬಿಸಿ ಪಟ್ಟಿಯಲ್ಲಿದ್ದಾನೆ ಈ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಎಸ್‌ಸಿ ಆಯೋಗಕ್ಕಾಗಲೀ, ಒಬಿಸಿ ಆಯೋಗಕ್ಕಾಗಲೀ ಸಾಧ್ಯವಿಲ್ಲ ಈ ಆಯೋಗಗಳ ಕಾರ್ಯವ್ಯಾಪ್ತಿ ಆ ವರ್ಗದ ಸಮುದಾಯಕ್ಕೆ ಒಳಪಟ್ಟಿರುತ್ತದೆ, ಎಸ್‌ಸಿ, ಎಸ್‌ಟಿ, ಒಬಿಸಿಗಳ ಒಟ್ಟು ಅಲೆಮಾರಿ ಬುಡಕಟ್ಟುಗಳ ಆಯೋಗ ರಚನೆಯಾದರೆ ಮಾತ್ರ ಎಸ್‌ಸಿ, ಎಸ್‌ಟಿ, ಒಬಿಸಿಗಳ ಸಮಸ್ಯೆಗಳನ್ನು ಕ್ರೋಡೀಕರಿಸಿ ಬಗೆಹರಿಸಲು ಸಾಧ್ಯ. ಈ ಸಮಸ್ಯೆಯು ಕಿವಿ, ಮೂಗು, ಗಂಟಲಿನ ಸಮಸ್ಯೆ ಪರಿಹರಿಸುವ ವೈದ್ಯರಂತೆ ಆಯೋಗ ಕೆಲಸ ಮಾಡಿ ಸಮಸ್ಯೆ ಬಗೆಹರಿಸಬೇಕಾಗಿದೆ’’ ಎಂದು ವಾದ ಮಾಡಿದ್ದೆ. ಅಂದು ಮುಖ್ಯಮಂತ್ರಿಗಳು ಕಾನೂನಿನ ವಿವರಣೆ ಪಡೆದು ಆಯೋಗ ರಚಿಸುವ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದರು. ಇಷ್ಟು ವಿವರಣೆ ಕೊಟ್ಟ ಬಳಿಕವೂ ಅಧಿಕಾರಿಗಳು ಈ ಆಯೋಗವನ್ನು ಒಬಿಸಿ ಅಲೆಮಾರಿ ಬುಡಕಟ್ಟುಗಳ ಆಯೋಗವನ್ನಾಗಿ ರಚನೆ ಮಾಡಿರುವುದು ಮತ್ತಷ್ಟು ಗೋಜಲುಗಳಿಗೆ ಕಾರಣವಾಗಿದೆ. ಮಾನ್ಯ ಮುಖ್ಯಮಂತ್ರಿಗಳು ಮುಂದಿನ ಬಜೆಟ್‌ನಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಅಲೆಮಾರಿ ಬುಡಕಟ್ಟುಗಳಿಗೆ ಅನ್ವಯವಾಗುವಂತೆ ಮಾರ್ಪಾಡುಗಳನ್ನು ಮಾಡಿ ತ್ವರಿತವಾಗಿ ಕಾರ್ಯರೂಪಕ್ಕೆ ಬರುವಂತೆ ಮಾಡಿದರೆ ಗೊಂದಲಗಳಲ್ಲಿ ಮುಳು ಗಿರುವ ಅಲೆಮಾರಿ ಬುಡಕಟ್ಟು ಒಂದಷ್ಟು ನೆಮ್ಮದಿ ಕಾಣಬಹುದಾಗಿದೆ.

share
ಟಿ.ವಿ. ಗೋಪಾಲಕೃಷ್ಣ
ಟಿ.ವಿ. ಗೋಪಾಲಕೃಷ್ಣ
Next Story
X