Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೈತಿಕತೆ ಇಲ್ಲದ ಸಂಖ್ಯೆ...

ನೈತಿಕತೆ ಇಲ್ಲದ ಸಂಖ್ಯೆ ಹೆಚ್ಚಿಸಿಕೊಳ್ಳುವ ಆಟ

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.23 Jun 2026 10:17 AM IST
share
ನೈತಿಕತೆ ಇಲ್ಲದ ಸಂಖ್ಯೆ ಹೆಚ್ಚಿಸಿಕೊಳ್ಳುವ ಆಟ

ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಸ್ಥಾನಗಳನ್ನು ಹೊಂದುವುದಕ್ಕಾಗಿ ಆಡಳಿತಾರೂಢ ಬಿಜೆಪಿ ಏನೆಲ್ಲ ಆಟವಾಡುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ.

ಲೋಕಸಭಾ ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಡಿಲಿಮಿಟೇಶನ್ ಮಸೂದೆಗೆ ಸಂಸದರ ಬಲದ ಕೊರತೆಯಿಂದಾಗಿ ಈ ವರ್ಷ ಎಪ್ರಿಲ್‌ನಲ್ಲಿ ಸೋಲಾಯಿತು.

2024ರ ಲೋಕಸಭಾ ಚುನಾವಣೆಯಲ್ಲಿ 400ರ ಗಡಿ ದಾಟುವುದಾಗಿ ಅಬ್ಬರಿಸುತ್ತಿದ್ದ ಬಿಜೆಪಿ ಕಡೆಗೆ 300ನ್ನೂ ಮುಟ್ಟಲಾಗದೆ, ಕೇವಲ 240 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 293 ಸ್ಥಾನಗಳನ್ನು ಗಳಿಸಿತು.

ಡಿಲಿಮಿಟೇಶನ್ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ, ಮೂರನೇ ಎರಡರಷ್ಟು ಬಹುಮತವಿರದೆ, ಅಂದರೆ 54 ಮತಗಳ ಕೊರತೆಯಿಂದ ಮಸೂದೆ ಬಿದ್ದುಹೋಯಿತು.

ಆಗ ಬಿಜೆಪಿ, ಮುಂದಿನ ಅಧಿವೇಶನದಲ್ಲಿ ಅದನ್ನು ಮತ್ತೆ ಮಂಡಿಸಲು ನಿರ್ಧರಿಸಿತು.

ಆನಂತರ ಐದು ರಾಜ್ಯಗಳ ಚುನಾವಣೆಗಳು ಬಂದವು.

ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿತ್ತು.

2021ರ ಚುನಾವಣೆಯಲ್ಲಿ ಅಲ್ಲಿ ಬಿಜೆಪಿ 80 ಸ್ಥಾನಗಳನ್ನು ದಾಟಲು ಸಹ ಸಾಧ್ಯವಾಗಿರಲಿಲ್ಲ.

ಈ ಸಲ ಮಾತ್ರ ಎಲ್ಲಾ ತಿರುಗುಮುರುಗಾಗಿತ್ತು. ಆಗ ಬಿಜೆಪಿ ಅನುಭವಿಸಿದ್ದ ಹೀನಾಯ ಸೋಲನ್ನು ಈ ಬಾರಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಅನುಭವಿಸಿತು.

ಈ ಗೆಲುವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊಸ ರಾಜಕೀಯ ಆಟ ಶುರುಮಾಡಲು ನೆರವಾಗಿದೆ. ಪರೋಕ್ಷ ಆಪರೇಷನ್ ಕಮಲ ನಡೆದಿದೆ. ಟಿಎಂಸಿಯ ಮೂರನೇ ಎರಡರಷ್ಟು, ಅಂದರೆ 20 ಸಂಸದರು ಬಿಜೆಪಿ ನೆರಳು ಸೇರಿಯಾಗಿದೆ.

ಆ 20 ಸಂದರು ತ್ರಿಪುರಾದ ಎರಡು ವಿಧಾನಸಭಾ ಸ್ಥಾನಗಳಲ್ಲಿ ಒಮ್ಮೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಾಶನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (ಎನ್‌ಸಿಪಿಐ) ಸೇರುವ ಮೂಲಕ ಎನ್‌ಡಿಎ ಭಾಗವಾಗಿದ್ದಾರೆ.

ಇದೇ ರೀತಿ, ಮಹಾರಾಷ್ಟ್ರದಲ್ಲಿ ಶಿವಸೇನೆ ಯುಬಿಟಿಯ ಆರು ಸಂಸದರು ಬಂಡಾಯವೆದ್ದರು.

ಉದ್ಧವ್ ಠಾಕ್ರೆ ತಮ್ಮ ಸಂಸದರ ಸಭೆ ಕರೆದಾಗ, ಪಕ್ಷದ ಒಟ್ಟು 9 ಸಂಸದರಲ್ಲಿ ನಾಲ್ವರು ಮಾತ್ರ ಭಾಗವಹಿಸಿದ್ದರು. ಉಳಿದವರು ವರ್ಚುವಲ್ ಆಗಿ ಭಾಗವಹಿಸಿದ್ದಾರೆ ಎಂದು ವರದಿಗಳಿದ್ದವು.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವುದು ಆಪರೇಷನ್ ಕಮಲವಲ್ಲ. ಅದು ಆಪರೇಷನ್ ಟೈಗರ್. ಇಲ್ಲಿಯೂ ಮೂರನೇ ಎರಡರಷ್ಟು, ಅಂದರೆ ಆರು ಸಂಸದರು ಹೊರಹೋದರೆ, ಅನರ್ಹತೆಯ ತೂಗುಗತ್ತಿ ಅವರ ಮೇಲಿರುವುದಿಲ್ಲ ಎಂದು ವಾದಿಸಲಾಗುತ್ತಿದೆ.

ಅಂತೂ ಉದ್ಧವ್ ಠಾಕ್ರೆ ಅವರ ಶಿವಸೇನೆಯನ್ನು ಮತ್ತೆ ಒಡೆಯುವ ಕೆಲಸ ನಡೆಯಿತು.

ಕಳೆದ ಬಾರಿ ಏಕನಾಥ್ ಶಿಂದೆ ಅದನ್ನು ಒಡೆದಿದ್ದರು. ನಂತರ, ಉದ್ಧವ್ ಠಾಕ್ರೆ ಮೂಲ ಪಕ್ಷ ಮತ್ತು ಪಕ್ಷದ ಬಿಲ್ಲು ಮತ್ತು ಬಾಣದ ಚಿಹ್ನೆ ಕಳೆದುಕೊಳ್ಳಬೇಕಾಯಿತು.

2022ರ ಜೂನ್‌ನಲ್ಲಿ ಪಕ್ಷ ಮೊದಲ ಸಲ ವಿಭಜನೆಯಾಯಿತು. ಈ ಬಾರಿ ಮತ್ತೆ ಜೂನ್‌ನಲ್ಲಿ ಸಂಸದರು ದಂಗೆ ಎದ್ದರು.

ಈ ಸಲ ಪ್ರತಿಯೊಬ್ಬ ಸಂಸದರನ್ನು ರೂ. 50 ಕೋಟಿಗೆ ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಗಳ ನಂತರ, ಸಂಜಯ್ ರಾವುತ್ ಎರಡು ಬಾರಿ ಪತ್ರಿಕಾಗೋಷ್ಠಿಗಳಲ್ಲಿ ಬಂಡುಕೋರರನ್ನು ನಿಂದಿಸಿದ್ದಾರೆ.

ಆರು ಬಂಡಾಯ ಸಂಸದರು ಎನ್‌ಡಿಎ ಅಡಿಯಲ್ಲಿರುವ ಏಕನಾಥ್ ಶಿಂದೆ ಅವರ ಶಿವಸೇನೆಯೊಂದಿಗೆ ವಿಲೀನಗೊಳ್ಳಬಹುದು.

ಜಾರ್ಖಂಡ್ ಬಗ್ಗೆ ಊಹಾಪೋಹಗಳಿವೆ. ಜಾರ್ಖಂಡ್ ಕೋಟಾದಿಂದ ಎರಡು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆಗಳು ನಡೆದವು.

‘ಇಂಡಿಯಾ’ ಒಕ್ಕೂಟದ ಜಾರ್ಖಂಡ್ ಮುಕ್ತಿ ಮೋರ್ಚಾ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ಕಾಂಗ್ರೆಸ್ ಪಕ್ಷ ಇನ್ನೊಬ್ಬರನ್ನು ಕಣಕ್ಕಿಳಿಸಿತು. ಮೂರನೇ ಅಭ್ಯರ್ಥಿ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಕಾರ್ಪೊರೇಟ್ ವ್ಯವಹಾರಗಳ ನಿರ್ದೇಶಕರಾದ ಪರಿಮಳ್ ನಾಥ್ವಾನಿ ಬಿಜೆಪಿ ಬೆಂಬಲದೊಂದಿಗೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರು.

ಜಾರ್ಖಂಡ್ ಒಟ್ಟು 81 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ರಾಜ್ಯಸಭಾ ಸ್ಥಾನ ಗೆಲ್ಲಲು, 28 ಪ್ರಾಥಮಿಕ ಪ್ರಾಶಸ್ತ್ಯ ಮತಗಳು ಬೇಕಾಗಿದ್ದವು.

ಜಾರ್ಖಂಡ್ ಅನ್ನು ಕಾಂಗ್ರೆಸ್, ಆರ್‌ಜೆಡಿ ಮತ್ತು ಸಿಪಿಐಎಂಎಲ್ ಲಿಬರೇಶನ್ ಒಳಗೊಂಡ ಜೆಎಂಎಂ ನೇತೃತ್ವದ ಒಕ್ಕೂಟ ಆಳುತ್ತಿದ್ದು, ಒಟ್ಟು 56 ಶಾಸಕರನ್ನು ಹೊಂದಿದೆ. ಅಂದರೆ ಇಬ್ಬರು ಅಭ್ಯರ್ಥಿಗಳು ತಲಾ 28 ಮತಗಳನ್ನು ಸುಲಭವಾಗಿ ಪಡೆದು ಎರಡೂ ಸ್ಥಾನಗಳನ್ನು ಪಡೆಯಬಹುದಿತ್ತು.

ಇದಕ್ಕೆ ವ್ಯತಿರಿಕ್ತವಾಗಿ, ಎನ್‌ಡಿಎ ಕೇವಲ 24 ಶಾಸಕರನ್ನು ಹೊಂದಿದೆ. ಇದರಲ್ಲಿ ಬಿಜೆಪಿಯ 21 ಮತ್ತು ಜೆಡಿಯು, ಎಜೆಎಸ್‌ಯು ಮತ್ತು ಎಲ್‌ಜೆಪಿ ರಾಮ್ ವಿಲಾಸ್‌ನಿಂದ ತಲಾ ಒಬ್ಬರು ಸೇರಿದ್ದಾರೆ. ಅಂದರೆ, ಎನ್‌ಡಿಎಗೆ ಪರಿಮಳ್ ನಾಥ್ವಾನಿ ಗೆಲ್ಲಲು ಬೇಕಾದ 28 ಮತಗಳಿಗೂ ನಾಲ್ಕು ಮತಗಳ ಕೊರತೆಯಿತ್ತು.

ಆದರೆ, ಈ ಲೆಕ್ಕಾಚಾರ ವಿಫಲವಾಯಿತು. ಜೆಎಂಎಂ ಅಭ್ಯರ್ಥಿ 30 ಮತಗಳನ್ನು ಪಡೆದರು. ಎನ್‌ಡಿಎ ಬೆಂಬಲಿತ ಪರಿಮಳ್ ನಾಥ್‌ವಾನಿ ಕೂಡ 30 ಮತಗಳನ್ನು ಪಡೆದರು.ಆದರೆ ಕಾಂಗ್ರೆಸ್‌ನ ಪ್ರವೀಣ್ ಝಾ ಕೇವಲ 21 ಮತಗಳನ್ನು ಪಡೆದರು. ಅದರಲ್ಲೂ ಒಂದು ಮತವನ್ನು ಅಮಾನ್ಯವೆಂದು ಘೋಷಿಸಲಾಯಿತು.

‘ಇಂಡಿಯಾ’ ಒಕ್ಕೂಟದ ಆರು ಶಾಸಕರು ಅಡ್ಡ ಮತ ಚಲಾಯಿಸಿದರು ಎನ್ನಲಾಗಿದೆ.

ಕಾಂಗ್ರೆಸ್ ಈ ಸೋಲಿನ ಹೊಣೆಯನ್ನು ಜೆಎಂಎಂ, ಆರ್‌ಜೆಡಿ ಮತ್ತು ಸಿಪಿಐಎಂಎಲ್ ಲಿಬರೇಶನ್ ಮೇಲೆ ನೇರವಾಗಿ ಹೊರಿಸಿತು. ಸಿಪಿಐಎಂಎಲ್ ಲಿಬರೇಶನ್ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು, ತಮ್ಮ ಇಬ್ಬರೂ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಹೇಳಿದೆ.

ಆರ್‌ಜೆಡಿ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸೂಚಿಸಿದ್ದು, ಕಾಂಗ್ರೆಸ್ ತನ್ನ ಸ್ವಂತ ಶಾಸಕರಿಂದ ಬೆಂಬಲ ಗಳಿಸುವಲ್ಲಿ ವಿಫಲವಾದ ನಂತರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿಕೊಂಡಿದೆ.

ಜೆಎಂಎಂ ಮತ್ತು ಆರ್‌ಜೆಡಿಗಳಲ್ಲಿ ಅಡ್ಡ ಮತದಾನ ನಡೆದಿದೆ ಎಂದು ಕೂಡ ಹೇಳಲಾಗುತ್ತಿದೆ. ಅಂದರೆ ವಿಪಕ್ಷದ ಮೂವರು ಶಾಸಕರು ಬಿಜೆಪಿ ಬೆಂಬಲಿತ ಪರಿಮಳ್ ನಾಥ್ವಾನಿಗೆ ಮತ ಹಾಕಿದ್ದಾರೆ.

ಈ ಫಲಿತಾಂಶ ನೋಡಿದರೆ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದಲ್ಲಿನ ವಿದ್ಯಮಾನಗಳ ನಂತರದ ಬಲಿ ಜಾರ್ಖಂಡ್ ಆಗುವ ಸಾಧ್ಯತೆ ಹೆಚ್ಚು.

ಅಲ್ಲಿ ಏನಾಗಬಹುದು ಎಂಬುದರ ಬಗ್ಗೆ ಕೆಲವು ಊಹೆಗಳಿವೆ. ಒಂದು, ಜೆಎಂಎಂ ಮತ್ತು ಕಾಂಗ್ರೆಸ್ ಒಡೆಯುತ್ತವೆ. ಎರಡನೆಯದಾಗಿ, ಮೈತ್ರಿ ಹಾಗೆಯೇ ಉಳಿದರೂ, ಸಂಬಂಧಗಳು ಕೆಡುತ್ತವೆ ಮತ್ತು ಜೆಎಂಎಂ ಕೇಂದ್ರ ಸರಕಾರದ ಅಗತ್ಯಕ್ಕೆ ತಕ್ಕಂತೆ ವರ್ತಿಸುತ್ತದೆ.

2024ರಲ್ಲಿ ಈ.ಡಿ. ಹೇಮಂತ್ ಸೊರೆನ್ ಅವರನ್ನು ಭೂ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಅವರನ್ನು ಸುಮಾರು ಐದು ತಿಂಗಳು ಜೈಲಿನಲ್ಲಿ ಇರಿಸಲಾಗಿತ್ತು.

ಜನವರಿಯಲ್ಲಿ ಅವರನ್ನು ಬಂಧಿಸಿ ಜೂನ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಕೆಲ ತಿಂಗಳುಗಳ ನಂತರ ನವೆಂಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆದವು.

ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸಮ್ಮಿಶ್ರ ಸರಕಾರ ರಚನೆಯಾಯಿತು.

ವಿಧಾನಸಭಾ ಚುನಾವಣೆಗೆ ಮೊದಲು ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಎಂಎಂನ ಮೂವರು ಸಂಸದರು ಆಯ್ಕೆಯಾದರು.

ಇನ್ನು ಮುಂದಿನ ಹಂತ, ಕೆಲ ವಿಷಯಗಳಲ್ಲಿ ಜೆಎಂಎಂ ಬಿಜೆಪಿ ಸರಕಾರದ ಬೆಂಬಲಕ್ಕೆ ನಿಲ್ಲಲಿದೆ ಅಥವಾ ನೇರವಾಗಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗುತ್ತಿದೆ.

543 ಸ್ಥಾನಗಳ ಲೋಕಸಭೆಯಲ್ಲಿ, ಮೂರನೇ ಎರಡರಷ್ಟು ಬಹುಮತವೆಂದರೆ, 362 ಸಂಸದರ ಬಲ.

ಲೋಕಸಭೆಯಲ್ಲಿ ಮೂರು ಸ್ಥಾನಗಳು ಖಾಲಿಯಾಗಿವೆ. ಆದ್ದರಿಂದ, ಒಟ್ಟು ಸಂಸದರ ಸಂಖ್ಯೆ 540.

ಅದರಲ್ಲಿ ಮೂರನೇ ಎರಡರಷ್ಟು ಎಂದರೆ, 360. ಪ್ರಸ್ತುತ, ಲೋಕಸಭೆಯಲ್ಲಿ ಎನ್‌ಡಿಎ ಬಲ 298.

ಈಗ ಎನ್‌ಸಿಪಿಐಗೆ ಸೇರ್ಪಡೆಗೊಂಡಿರುವ ಟಿಎಂಸಿಯ 20 ಸಂಸದರು, ಶಿವಸೇನೆ ಯುಬಿಟಿಯ 6 ಸಂಸದರು ಎನ್‌ಡಿಎ ಪಾಲಾಗಿರುವುದು ಬಹುತೇಕ ಸ್ಪಷ್ಟವಾಗಿದ್ದು, ಔಪಚಾರಿಕತೆಯಷ್ಟೇ ಬಾಕಿ.

ಅವರ ಸೇರ್ಪಡೆಯೊಂದಿಗೆ ಒಟ್ಟು ಬಲ 324 ಆಗುತ್ತದೆ. ಇದರ ನಂತರವೂ, ಡಿಲಿಮಿಟೆಷನ್ ಮಸೂದೆ ಅಂಗೀಕರಿಸಲು ಲೋಕಸಭೆಯಲ್ಲಿ 36 ಸಂಸದರ ಕೊರತೆ ಇರುತ್ತದೆ.

ಬಲ ಹೆಚ್ಚಿಸಿಕೊಳ್ಳುವ ವಿಷಯದಲ್ಲಿ ಇವತ್ತಿನ ಬಿಜೆಪಿಗೆ ಯಾವುದೇ ನೈತಿಕ ಹಿಂಜರಿತ ಇಲ್ಲ. ಗುರಿ ಸಾಧಿಸಲು ಅಗತ್ಯವಿರುವ ಯಾವುದೇ ವಿಧಾನಗಳನ್ನು ಬಳಸಲು ಅದು ಹಿಂಜರಿಯದು. ಜೆಎಂಎಂನ ಮೂರು ಸಂಸದರು ಸಹ ಈಗ ಅದಕ್ಕೆ ಒಂದು ಸಾಧನವಾಗಬಹುದು.

ಅಂದಹಾಗೆ, ಮಸೂದೆ ಅಂಗೀಕರಿಸಲು ಒಂದು ವಿಶಿಷ್ಟ ನಿಯಮವಿದೆ.

ಮೂರನೇ ಎರಡರಷ್ಟು ಅಂಕಿಅಂಶವನ್ನು ಹಾಜರಿರುವ ಒಟ್ಟು ಸಂಸದರ ಸಂಖ್ಯೆ ಆಧರಿಸಿ ಲೆಕ್ಕಹಾಕಲಾಗುತ್ತದೆ.

ಅಂದರೆ, ವಿರೋಧ ಪಕ್ಷದ ಸಂಸದರು ಮತದಾನದ ದಿನದಂದು ಗೈರುಹಾಜರಾದರೂ, ಈ ಮೂರನೇ ಎರಡರಷ್ಟು ಅಂಕಿಅಂಶ ಕಡಿಮೆಯಾಗುವುದರಿಂದ ಬಿಜೆಪಿ ಲಾಭ ಪಡೆಯುತ್ತದೆ.

ಈ ಮಸೂದೆಗೆ ದಕ್ಷಿಣ ಭಾರತದಲ್ಲಿ ವಿರೋಧವಿರುವುದು ಹೆಚ್ಚು ಸ್ಪಷ್ಟವಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರೆ, ಅದು ದಕ್ಷಿಣ ಭಾರತದ ರಾಜ್ಯಗಳಿಗೆ ಹಾನಿ ಮಾಡುತ್ತದೆ ಎಂಬುದು ಆತಂಕ. ಏಕೆಂದರೆ ಈ ರಾಜ್ಯಗಳು ಉತ್ತರ ಭಾರತದ ರಾಜ್ಯಗಳಿಗಿಂತ ಕಡಿಮೆ ಜನಸಂಖ್ಯೆ ಹೊಂದಿವೆ.

ಇದರ ನಡುವೆಯೇ, ಪ್ರತೀ ರಾಜ್ಯಕ್ಕೂ ಸ್ಥಾನಗಳ ಸಂಖ್ಯೆಯನ್ನು ಶೇ. 50 ಹೆಚ್ಚಿಸುತ್ತಿದ್ದೇವೆ ಎಂದು ಹೇಳಲಾಗುತ್ತಿದೆ.

ಈ ಭರವಸೆ ಮೂಲಕ ಬಿಜೆಪಿ ಡಿಲಿಮಿಟೇಶನ್ ಮಸೂದೆಯನ್ನು ವಿರೋಧಿಸುತ್ತಿರುವ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಮನವೊಲಿಸಬಹುದು.

ಈ ಮೂಲಕ ಬಿಜೆಪಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆಯ ಬೆಂಬಲ ಪಡೆಯಲು ನೋಡುತ್ತಿದೆ. ಏಕೆಂದರೆ ಡಿಎಂಕೆ ಈಗ ಕಾಂಗ್ರೆಸ್ ಜೊತೆ ಇಲ್ಲ. ತಮಿಳುನಾಡಿನಲ್ಲಿ ಕಾಂಗ್ರೆಸ್ ವಿಜಯ್ ಸರಕಾರಕ್ಕೆ ಬೆಂಬಲ ನೀಡಿದ ಬಳಿಕ ಡಿಎಂಕೆ ಮೈತ್ರಿ ಮುರಿದುಕೊಂಡಿದೆ. ಮೊನ್ನೆ ನಡೆದ ‘ಇಂಡಿಯಾ’ ಒಕ್ಕೂಟದ ಸಭೆಯಲ್ಲೂ ಡಿಎಂಕೆ ಭಾಗವಹಿಸಲಿಲ್ಲ.

ಡಿಎಂಕೆ 22 ಸಂಸದರನ್ನು ಹೊಂದಿದ್ದು, ಮಸೂದೆ ವಿಷಯದಲ್ಲಿ ಬಿಜೆಪಿಗೆ ಬೆಂಬಲ ನೀಡಿದರೆ, ಮೂರನೇ ಎರಡರಷ್ಟು ಸಂಖ್ಯೆ ತಲುಪುವಲ್ಲಿ ಬಿಜೆಪಿಗೆ ಅತಿದೊಡ್ಡ ಬಲವಾಗಲಿದೆ. ಆಟ ಹೇಗೆಲ್ಲ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Tags

CongressBJP
share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X