ದಶಕಗಳು ಕಳೆದರೂ ಜನರಿಗೆ ಸಿಗದ ನಿವೇಶನ ಭಾಗ್ಯ

ಸಾಂದರ್ಭಿಕ ಚಿತ್ರ
ಕೊಪ್ಪಳ: ನಗರದಲ್ಲಿ ದಶಕಗಳಿಂದ ವಾಸಿಸುತ್ತಿರುವ ಅನೇಕ ಜನರಿಗೆ ಈವರೆಗೆ ನಿವೇಶನಗಳೇ ದೊರೆತಿಲ್ಲ, ಇದರಿಂದ ಜನರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಾ ಜೀವನ ಸಾಗಿಸುತ್ತಿದ್ದು, ಸಮಸ್ಯೆ ಪರಿಹಾರಕ್ಕಾಗಿ ಸರಕಾರದ ಕಡೆ ಮುಖಮಾಡಿದ್ದಾರೆ.
ಕೊಪ್ಪಳ ನಗರ ಸಭೆ ವ್ಯಾಪ್ತಿಯಲ್ಲಿ 31 ವಾರ್ಡ್ಗಳಿದ್ದು ಅವುಗಳಲ್ಲಿ 30-35 ವರ್ಷಗಳಿಂದ ಬಾಡಿಗೆ ಮನೆಗಳಲ್ಲೆ ಜನರು ವಾಸಿಸುತಿದ್ದು, ಅಂತಹ ಜನರಿಗೆ ಈವರೆಗೆ ನಿವೇಶನವೇ ಸಿಗದಿರುವುದರಿಂದ ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತಿದ್ದಾರೆ, ಮತ್ತು ಈ ಜನರಲ್ಲಿ ತೀರ ಬಡತನದಲ್ಲಿ ಇರುವವರ ಸಂಖ್ಯೆ ಹೆಚ್ಚಿದೆ. ಈ ಜನರು ದಿನಗೂಲಿ ಹೋಗಿ ಅದರಿಂದ ಬರುವ ನೂರು ನೂರೈವತ್ತು ರೂಪಾಯಿಂದ ತಾವು ಬದುಕುವುದೇ ಕಷ್ಟವಾಗಿರುತ್ತದೆ ಅಂತದರಲ್ಲಿ ಮನೆ ಬಾಡಿಗೆಯನ್ನು ಕಟ್ಟಿ ತಮ್ಮ ಕುಟುಂಬದ ನಿರ್ವಹಣೆ ಮಾಡುವುದು ತುಂಬಾ ಕಷ್ಟ ಅಂತವರಿಗೆ ಗುರಿತಿಸಿ ಸೂಕ್ತ ನಿವೇಶನ ನೀಡಿದರೆ ಅವರಿಗೆ ಸಹಾಯವಾಗುತ್ತದೆ.
ವಾರ್ಡ್ಗಳ ಚುನಾವಣೆಯ ಸಂದರ್ಭದಲ್ಲಿ ನಿವೇಶನ ನೀಡುವ ಭರವಸೆ ನೀಡಿ ಚನಾವಣೆಗೆ ನಿಲ್ಲುತಾರೆ ಮತ್ತು ಗೆಲ್ಲುತ್ತಾರೆ. ನಂತರ ಅದಾದ ಬಳಿಕ ನಿವೇಶನ ನೀಡುವ ಮಾತೆ ಆಡುವುದಿಲ್ಲ, ಕೇಳಿದರೆ ಅವರು ಇಂದು ನೀಡುತ್ತೇವೆ ನಾಳೆ ನೀಡುತ್ತೇವೆ ಎಂದು ಕಾಲ ಕಳೆಯುತ್ತಾರೆ ಸ್ವಲ್ಪ ಜೋರಾಗಿ ಕೇಳಿದಾಗ ನಮ್ಮ ಓಣಿಗೆ ಬರುವುದನ್ನೇ ಬಿಟ್ಟುಬಿಡುತ್ತಾರೆ ಎಂದು ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಬಡವರಿಗಾಗಿ ಬಂದ ನಿವೇಶನವನ್ನು ವಾರ್ಡ್ ಸದಸ್ಯರು ತಮ್ಮ ಕುಟುಂಬದವರಿಗೆ ಮತ್ತು ತಮಗೆ ಬೇಕಾದವರಿಗೆ ನೀಡುತ್ತಾರೆ ಮತ್ತು ಅವರು ವಾಸಿಸುವ ಸ್ಥಳದ ಸುತ್ತ ಮುತ್ತ ಒಳ್ಳೆಯ ರಸ್ತೆಗಳು ಮತ್ತು ಚರಂಡಿಗಳ ವ್ಯವಸ್ಥೆ ಮಾಡಿಸಿಕೊಳ್ಳುತ್ತಾರೆ. ಆದರೆ ಬಡ ಜನ ವಾಸಿಸುವ ಬೀದಿಯಲ್ಲಿ ಯಾವುದೇ ಅಭಿವೃದ್ಧಿ ಮಾಡುವುದಿಲ್ಲ, ಯಾರೇ ಚುನಾವಣೆಯಲ್ಲಿ ಗೆದ್ದರೂ ಈ ಪರಿಸ್ಥಿತಿ ನಮಗೆ ತಪ್ಪಿದಲ್ಲ ಪ್ರತಿಭಟನೆ ಮಾಡೋಣ ಅಂದರೆ ನಾವು ಕೆಲಸ ಬಿಟ್ಟು ಬರಬೇಕು ಒಂದು ವೇಳೆ ಪ್ರತಿಭಟನೆ ಮಾಡಿದರೆ ವಾರ್ಡ್ ಸದಸ್ಯರ ಆಕ್ರೋಶಕ್ಕೆ ತುತ್ತಾಗ ಬೇಕಾಗುತ್ತದೆ ಎಂದು ಜನರು ಹೇಳುತಿದ್ದಾರೆ.
ನಗರ ಸಭೆ ಅಧಿಕಾರಿಗಳು ಇಂತಹವರನ್ನು ಗುರುತಿಸಿ ಅವರಿಗೆ ನಿವೇಶನ ನೀಡಬೇಕು ಮತ್ತು ಬಡ ಜನರಿಗಾಗಿ ಇರುವ ನಿವೇಶನಗಳು ಉಳ್ಳವರ ಪಾಲಿಗೆ ಹೋಗುವುದನ್ನು ತಡೆಯಬೇಕು ಎಂದು ಸ್ಥಳೀಯರ ಅಗ್ರಹವಾಗಿದೆ.







