Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರೇಷ್ಮೆಯ ಎಳೆಯ ಸುಳಿಯೊಳಗೆ ಸತ್ಯದ...

ರೇಷ್ಮೆಯ ಎಳೆಯ ಸುಳಿಯೊಳಗೆ ಸತ್ಯದ ಹುಡುಕಾಟ

ರೇಷ್ಮೆಯ ಉಗಮ ಸ್ಥಳ ಚೀನಾ ಅಲ್ಲ ಭಾರತ?

ಡಾ. ಸುನಿಲ್ ಕುಮಾರ್ ಟಿ.ಡಾ. ಸುನಿಲ್ ಕುಮಾರ್ ಟಿ.4 Sept 2026 12:00 PM IST
share
ರೇಷ್ಮೆಯ ಎಳೆಯ ಸುಳಿಯೊಳಗೆ ಸತ್ಯದ ಹುಡುಕಾಟ

29ನೇ ಜುಲೈ 2026ರಂದು ದೇಶದ ಪ್ರತಿಷ್ಠಿತ ದಿನ ಪತ್ರಿಕೆ ‘ದ ಟೈಮ್ಸ್ ಆಫ್ ಇಂಡಿಯಾ’ದಲ್ಲಿ Scientists discover ancient silk production in Uzbekistan nearly 2000 years before the silk Road ಎನ್ನುವ ವಿಷಯ ಮತ್ತು ಪ್ರಪಂಚದ ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆಯಾದ ‘Nature’ನಲ್ಲಿ, 2009ರಲ್ಲಿ ಫಿಲಿಪ್ ಬಾಲ್‌ರವರ ‘Rethinking of silk origins’ ವಿಷಯ ಕೂಡ ಕೇವಲ ಪುರಾತತ್ವ ಇಲಾಖೆಯ ಸಾಕ್ಷ್ಯಾಧಾರದ ಮೇಲೆ ಇಲ್ಲಿಯ ವರೆಗಿನ ‘ರೇಷ್ಮೆಯ ಉಗಮ ಸ್ಥಳ ಚೀನಾ’ಎನ್ನುವ ನಂಬಿಕೆಯ ದಿಕ್ಕನ್ನು ಬದಲಿಸಿತು. ವೈಜ್ಞಾನಿಕ ಸಿದ್ಧಾಂತಗಳ ಆಧಾರದ ಮೇಲೆ ಭಾರತೀಯ ನೆಲದಲ್ಲಿ ಕೇವಲ ವನ್ಯ ರೇಷ್ಮೆಯಲ್ಲದೆ ಹಿಪ್ಪು ನೇರಳೆ ರೇಷ್ಮೆ ಕೂಡ ಉಗಮಿಸಿದೆ ಎನ್ನುವ ಸಾಕಷ್ಟು ಸಾಕ್ಷ್ಯಾಧಾರಗಳು ಭಾರತದಲ್ಲಿವೆ.

ಇಲ್ಲಿಯವರೆಗಿನ ನಂಬಿಕೆ: 4,000 ವರ್ಷಗಳ ಹಿಂದೆ ಚೀನಾದಲ್ಲಿ ಹ್ಸಿ ಲಿಂಗ್ ಶಿ ಎಂಬ ರಾಜಕುಮಾರಿ ಅರಮನೆಯ ಹಿತ್ತಲಲ್ಲಿ ಚಹಾ ಸೇವಿಸುತ್ತಿರುವಾಗ ಅಚಾನಕ್ ಆಗಿ ಬಿಸಿ ಚಹಾದೊಳಗೆ ಗೂಡೊಂದು ಬಿದ್ದಿತು. ಅದನ್ನು ಹೊರತೆಗೆದಂತೆ, ನುಣುಪಾದ ದಾರ ಹೊರಬಂದಿದ್ದನ್ನು ಗಮನಿಸಿ ಅಲ್ಲಿದ್ದ ಹಿಪ್ಪು ನೇರಳೆ ಮರದ ಮೇಲಿನ ಗೂಡುಗಳನ್ನು ಸಂಗ್ರಹಿಸಿ ಚಿಟ್ಟೆ ಬರಿಸಿ ಅದರ ಜೀವನ ಕ್ರಮವನ್ನು ತಿಳಿದ ಬಳಿಕ ರೇಷ್ಮೆ ಪರಿಕಲ್ಪನೆಯನ್ನು ಮೊದಲಿಗೆ ಹುಟ್ಟು ಹಾಕಲಾಯಿತು. ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೆಟ್ಟ, ಗುಡ್ಡ, ಕಾಡು, ಮೇಡು ದಾಟಿ (ಸುಮಾರು 6,400 ಕಿ.ಮೀ. ಸುದೀರ್ಘ ದೂರ ಕ್ರಮಿಸಿ) ರೇಷ್ಮೆ ಹರಡಿದ್ದು ಇತಿಹಾಸ ಪುಟಗಳಲ್ಲಿ ‘ಸಿಲ್ಕ್ ರೂಟ್’ ಎಂದು ಪರಿಚಿತವಾಗಿ ಉಳಿದಿದೆ. ಆನಂತರದ ವರ್ಷಗಳಲ್ಲಿ ಚೀನಾ ದೇಶದ ರಾಜಕುಮಾರಿಯೊಬ್ಬಳನ್ನು ಟಿಬೆಟಿನ ರಾಜಕುಮಾರನಿಗೆ ವಿವಾಹ ಮಾಡಿದಾಗ ಅಲ್ಲಿಗೆ ರೇಷ್ಮೆ ಕಿರಣ ಹಬ್ಬಿತು. ಬಳಿಕ ಟಿಬೆಟಿನಿಂದ ಬೌದ್ಧಬಿಕ್ಕುಗಳು ಭಾರತಕ್ಕೆ ಬಂದಾಗ ರೇಷ್ಮೆ ಕೃಷಿಯು ಭಾರತಕ್ಕೆ ಕಾಲಿಟ್ಟಿತು ಎಂಬ ಇತಿಹಾಸ ಇಲ್ಲಿಯವರೆಗಿನ ನಂಬಿಕೆಯಾಗಿದೆ.

ಹೊಸ ಸಂಶೋಧನೆಗಳು ಏನು ಹೇಳುತ್ತಿವೆ?

ಚೀನಾ ನೆಲದಲ್ಲಿ ಕ್ರಿ.ಪೂರ್ವ 1600-1045ರ ಸಮಯದಲ್ಲಿ ರೇಷ್ಮೆ ನೇಯ್ಗೆ ಕಂಡು ಬಂದಿತ್ತು. ಆದರೆ ಹರಪ್ಪ ನಾಗರಿಕತೆಯ ಭಾಗವಾದ ಚಾನ್ ದಾರೊ ಸ್ಥಳದಲ್ಲಿ ಉತ್ಖನನದ ಸಮಯದಲ್ಲಿ ಸಿಕ್ಕ ಪುರಾವೆಗಳು ತಾಮ್ರದ ಆಭರಣಕ್ಕೆ ಜೋಡಿಸಲಾಗಿದ್ದ ರೇಷ್ಮೆಯ ದಾರವನ್ನು ಸಂಶೋಧನೆಗೆ ಅಳವಡಿಸಿದಾಗ ಭಾರತ ಮೂಲದ ಅಸ್ಸಾಮಿನಲ್ಲಿ ಸಿಗುವ ಟಸ್ಸಾರ್ ರೇಷ್ಮೆಯ ದಾರ ಎಂದು ಸಾಬೀತು ಪಡಿಸಿತು. ಅಲ್ಲದೆ ಅದನ್ನು ನೇಯ್ದದ್ದು ಸುಮಾರು ಕ್ರಿ.ಪೂರ್ವ 2450-2000 ಕಾಲಘಟ್ಟ ಎಂದು ರೇಡಿಯೊ ಕಾರ್ಬನ್ ಪದ್ಧತಿ ದೃಢಪಡಿಸಿತ್ತು. ಅಂದರೆ ಚೀನಾದಲ್ಲಿ ರೇಷ್ಮೆ ನೇಯುವ ಮುಂಚೆಯೇ ಭಾರತೀಯ ಮೂಲದಲ್ಲಿ ರೇಷ್ಮೆ ಕೃಷಿಯ ಜೊತೆ ನೇಯುವ ಪದ್ಧತಿ ಇತ್ತು ಎಂಬುದನ್ನು ಸಾಬೀತು ಪಡಿಸಿತು.(ಐ.ಎಲ್.ಗುಡಿ 2009).

HARP ಸಂಶೋಧನೆಯಲ್ಲಿ ಬೆಳಕಿಗೆ ಬಂದ ಭಾರತೀಯ ಮೂಲದ ಟಸ್ಸಾರ್ ರೇಷ್ಮೆಯ ಎಳೆ ಕ್ರಿ.ಪೂ. 2450-2000 ಹಳೆಯದ್ದು ಎಂದು ನಂಬಲಾಗಿದೆ.

23ನೇ ಜುಲೈ 2026ರಂದು ಹೊರಬಿದ್ದ ಚೀನಾ ದೇಶದ ಸಂಶೋಧಕರ ವೈಜ್ಞಾನಿಕ ಲೇಖನದಲ್ಲಿಯೂ ಉತ್ಖನನದ ಪುರಾವೆಗಳು ಮತ್ತು ಪ್ರೋಟಿಯೋಮಿಕ್ಸ್ ಸಂಶೋಧನೆಗಳ ತಿರುಳುಗಳು ಚೀನಾ ನೆಲದಲ್ಲಿ ರೇಷ್ಮೆಬೆಳೆಯು ಉಗಮದ ಮೊದಲು ಉಜ್ಬೇಕಿಸ್ತಾನದಲ್ಲಿ ರೇಷ್ಮೆ ಬೆಳೆಯ ಸಾಕ್ಷಿಗಳು ಸಿಕ್ಕಿದ್ದು (ಗ್ಸಿನ್ಯಿಂಗ್ 2026) ಹಿಮಾಲಯದ ತಪ್ಪಲಿನಲ್ಲಿ ಹಿಪ್ಪು ನೇರಳೆ ಮತ್ತು ರೇಷ್ಮೆಯ ಕುರುಹುಗಳು ಸಿಕ್ಕಿರುವುದು ರೇಷ್ಮೆ ಭಾರತ ಮೂಲದಲ್ಲಿ ಉಗಮವಾಗಿತ್ತು ಎನ್ನುವ ನಂಬಿಕೆಗೆ ಬಲವಾದ ಸಾಕ್ಷಿಯಾಗಿದೆ.

ವಿಜ್ಞಾನದ ಸಿದ್ಧಾಂತಗಳಿಗೆ ಪುಷ್ಟಿ ನೀಡುವ ಭಾರತದ ಮೂಲದ ಸಾಕ್ಷಿಗಳು

ಯಾವುದೇ ಒಂದು ಪ್ರಭೇದ ಸ್ಥಳವೊಂದರಲ್ಲಿ ಉಗಮವಾಯಿತು ಎನ್ನುವುದನ್ನು ಸಾಬೀತು ಪಡಿಸುವಾಗ ಈ ಕೆಳಕಂಡ ಅಂಶಗಳನ್ನು ಕಾಣುತ್ತೇವೆ. ‘‘ಜೀವ ವಿಕಾಸವಾದವು ವರ್ಣ ತಂತುಗಳ ಸಂಖ್ಯೆ ಏರಿಕೆ ಕ್ರಮದಲ್ಲಿ ಸಾಗುತ್ತವೆ ಎಂದು ಹೇಳುತ್ತದೆ. ಇದೇ ನಿಟ್ಟಿನಲ್ಲಿ ನೋಡುವುದಾದರೆ ಭಾರತದ ಹಿಮಾಲಯ ತಪ್ಪಲಿನಲ್ಲಿ ಕಂಡುಬರುವ ರೇಷ್ಮೆ ಹುಳುವಿನ ಪೂರ್ವಜರಾದ ಬಾಂಬೆಕ್ಸ್ ಮಂಡರಿನಾದ ವರ್ಣತಂತುಗಳ ಸಂಖ್ಯೆ 54 (Bombyx mandarina. Its ploidy level is 2n =54) ಆದರೆ ಚೀನಾ ದೇಶದಲ್ಲಿ ಕಂಡುಬರುವ ಬಾಂಬೆಕ್ಸ್ ಮಂಡರಿನಾದ ವರ್ಣತಂತುಗಳ ಸಂಖ್ಯೆ 56. ಈ ಸತ್ಯ ಹಿಪ್ಪುನೇರಳೆ ರೇಷ್ಮೆಯ ಪೂರ್ವಜರಾದ ಬಾಂಬೆಕ್ಸ್ ಮಂಡರಿನಾ ಭಾರತದ ಮೂಲದ್ದು ಎಂದು ಸ್ಪಷ್ಟೀಕರಣ ಕೊಡುತ್ತದೆ.

ಭಾರತದ ಮೂಲದಲ್ಲಿ ಹಿಪ್ಪುನೇರಳೆ ರೇಷ್ಮೆ, ಟಸ್ಸಾರ್, ಮೂಗಾ, ಎರಿ ರೇಷ್ಮೆಗಳಲ್ಲಿ ಜೀವವೈವಿಧ್ಯ ಹೆಚ್ಚು. ಅದಕ್ಕೆ ಪೂರಕವಾಗಿ ಭಾರತೀಯ ಭೌಗೋಳಿಕ ಪ್ರದೇಶವು ಉಷ್ಣ ಮತ್ತು ಉಪ ಉಷ್ಣವಲಯಗಳಲ್ಲಿ ಹಬ್ಬಿದೆ. ಇದು ವಿವಿಧ ರೇಷ್ಮೆ ಹುಳಗಳ ಜೀವವೈವಿಧ್ಯಕ್ಕೆ ಸಾಕ್ಷಿ. ವೈವಿಧ್ಯಕ್ಕೆ ಒಳಪಟ್ಟಷ್ಟು ಪ್ರಭೇದವೊಂದು ವಿಕಾಸಗೊಂಡು ತನ್ನ ವರ್ಣತಂತುಗಳಲ್ಲಿ ಏರಿಕೆ ಕಾಣುವುದು ಸಾರ್ವಕಾಲಿಕ ಸತ್ಯ. ಅದರಂತೆಯೇ ಭಾರತದಲ್ಲಿ ಕಂಡುಬರುವ ವಿವಿಧ ರೇಷ್ಮೆ ಹುಳಗಳ ವರ್ಣತಂತುಗಳನ್ನು ಗಮನಿಸಿ ನೋಡಿದಾಗ ಹೆಚ್ಚು ವರ್ಣತಂತುಗಳ ಸಂಖ್ಯೆ ಕಂಡುಬರುತ್ತಿದೆ. ಈ ಮೇಲ್ಕಂಡ ವೈಜ್ಞಾನಿಕ ಅಂಶಗಳು ರೇಷ್ಮೆ ಭಾರತದೆಡೆಗೆ ಮುಖ ಮಾಡುವುದನ್ನು ಸೂಚಿಸುತ್ತದೆ.

ಸ್ವಾರಸ್ಯಕರ ಸತ್ಯ

‘ಚೀನಾ ರೇಷ್ಮೆ ಕೃಷಿಯ ಉಗಮ ಸ್ಥಳ’’ ಎನ್ನುವ ಸಂಪೂರ್ಣ ಹಣೆಪಟ್ಟಿ ಪಡೆದಿದೆ. ಆದರೇ ವನ್ಯ ರೇಷ್ಮೆ ಪ್ರಭೇದಗಳಾದ ಮೂಗಾ ರೇಷ್ಮೆ ಭಾರತದ ಅಸ್ಸಾಂ ಹೊರತು ಪಡಿಸಿ ಪ್ರಪಂಚದಲ್ಲಿ ಎಲ್ಲಿಯೂ ಕಾಣ ಸಿಗುವುದಿಲ್ಲ. ಅದರ ಜೀವವೈವಿಧ್ಯ ಕೇವಲ ಭಾರತೀಯ ಮೂಲದಲ್ಲಿ ಮಾತ್ರ ಕಾಣಿಸುತ್ತದೆ.

ಅಸ್ಸಾಂ ಭಾಗದಲ್ಲಿ ಬೆಳೆಯಲಾದ ಟಸ್ಸಾರ್Antheraea mylitta ರೇಷ್ಮೆಯ ನೂಲು, Harappa Archeological Reasearch Projectನಲ್ಲಿ ಉತ್ಖನನದಲ್ಲಿ ಕಂಡ ನೂಲಿನ ರಚನೆಯನ್ನು ಸೂಕ್ಷ್ಮದರ್ಶಕ ವಿವರಣೆಯಲ್ಲಿ ಒಂದೇ ರೀತಿ ಕಂಡು ಬಂದಿದ್ದು, ಭಾರತ ಮೂಲದ ಟಸ್ಸಾರ್ ರೇಷ್ಮೆ ನೂಲು ಸರಿಸುಮಾರು ಕ್ರಿ.ಪೂ.2450-2000ಕ್ಕಿಂತಲೂ ಹಳೆಯದ್ದು ಅಂದರೆ ಚೀನಾದಲ್ಲಿ ಕಾಣಸಿಗುವ ರೇಷ್ಮೆ ನೇಯ್ಗೆಯ ಕಾಲಘಟ್ಟಕ್ಕೂ ಹಿಂದೆಯೇ ಭಾರತದಲ್ಲಿ ರೇಷ್ಮೆಬೆಳೆ ಬೆಳೆಯುವ ಪ್ರಕ್ರಿಯೆ, ನೇಯ್ಗೆ ಪ್ರಕ್ರಿಯೆ ಚಾಲ್ತಿಯಲ್ಲಿತ್ತು ಚೀನಿಗರಿಗಿಂತ ಮೊದಲೇ ಭಾರತದಲ್ಲಿ ರೇಷ್ಮೆ ಇತ್ತು ಎಂದು ಸಾಬೀತು ಮಾಡುತ್ತದೆ.

ಈ ಮೇಲ್ಕಂಡ ಸ್ವಾರಸ್ಯಕರ ಸತ್ಯಗಳನ್ನ ಪರೀಕ್ಷಿಸಿದಾಗ ವನ್ಯ ರೇಷ್ಮೆ ಸಂಪೂರ್ಣವಾಗಿ ಭಾರತದಲ್ಲಿ ಅಂದರೆ ‘ಭಾರತ ವನ್ಯ ರೇಷ್ಮೆಯ ಉಗಮ ಸ್ಥಳ’ ಎಂಬುದು ಖಾತರಿಯಾದಂತೆ.

ಆದರೂ ಅದು ಹೇಗೋ ಚೀನಾ ರೇಷ್ಮೆಯ ಉಗಮ ಸ್ಥಳವೆನಿಸಿಕೊಂಡಿದೆ. ಇತ್ತೀಚಿನ ರೇಷ್ಮೆ ಉಗಮದ ಬಗ್ಗೆ ಎದ್ದಿರುವ ವಿಚಾರಗಳಲ್ಲಿ ರೇಷ್ಮೆ ಕೃಷಿಯ ಹೆಜ್ಜೆಗುರುತುಗಳು ಹಿಮಾಲಯದ ತಪ್ಪಲಿನಲ್ಲಿ ಕಂಡುಬರುತ್ತಿರುವುದು ಮತ್ತು ಹಿಪ್ಪು ನೇರಳೆ ರೇಷ್ಮೆ ಪೂರ್ವಜ ಬಾಂಬೆಕ್ಸ್ ಮೆಂಡರಿನಾ ಹಿಮಾಲಯದ ತಪ್ಪಲಿನಲ್ಲಿ ನೇಯ್ಗೆ ಹಿಪ್ಪು ನೇರಳೆ ರೇಷ್ಮೆ ಕೂಡ ಭಾರತೀಯ ಮೂಲದ್ದು ಎಂದು ಪ್ರತಿಪಾದಿಸುತ್ತಿದೆ.

ವಿಶೇಷ ಉಲ್ಲೇಖ

ಭಾರತೀಯ ಮೂಲದ ಮಹಾಕಾವ್ಯಗಳಾದ ರಾಮಾಯಣದಲ್ಲಿ ರೇಷ್ಮೆಯ ಉಲ್ಲೇಖವಿದ್ದು ಪ್ರಸಿದ್ಧ ಇತಿಹಾಸ ತಜ್ಞ ನೀಲೇಶ್ ಓಕ್‌ರವರು ಸಂಶೋಧಿಸಿ ತಮ್ಮ ಕೃತಿಯಲ್ಲಿ ದಾಖಲಿಸಿರುವಂತೆ ಭಾರತದ ನೆಲದಲ್ಲಿ ಕ್ರಿ.ಪೂ. 12,000ರಲ್ಲಿ ರಾಮಾಯಣ ಮತ್ತು ಕ್ರಿ.ಪೂ. 5000 ವರ್ಷಗಳ ಹಿಂದೆಯಷ್ಟೇ ಮಹಾಭಾರತ ಗತಿಸಿರಬಹುದು ಎಂದು ಸಂಶೋಧನಾ ಕೃತಿಯನ್ನು ಮಂಡಿಸಿದ್ದಾರೆ. ಈ ಕಾಲಘಟ್ಟವನ್ನು ಚೀನಾದಲ್ಲಿ ರೇಷ್ಮೆ ಕಾಣಿಸಿಕೊಂಡ ಕಾಲಘಟ್ಟದ (ಕ್ರಿ.ಪೂ.2000 ವರ್ಷ) ಜೊತೆ ತಾಳೆ ಹಾಕಿದಾಗ, ಭಾರತೀಯ ಮೂಲದಲ್ಲಿ ಮೊದಲೇ ರೇಷ್ಮೆಯ ಉಲ್ಲೇಖ ಇರುವುದು ಕಂಡುಬರುತ್ತದೆ.

ಈ ಮೇಲ್ಕಂಡ ಚರ್ಚಿತ ವಿಷಯಗಳು ವನ್ಯರೇಷ್ಮೆ ಮಾತ್ರವಲ್ಲದೆ, ಹಿಪ್ಪುನೇರಳೆ ರೇಷ್ಮೆಯು ಕೂಡ ಜನ್ಮ ತಳೆದಿದೆ ಎಂದು ತಿಳಿದು ಬರುತ್ತದೆ.

Tags

silktruth
share
ಡಾ. ಸುನಿಲ್ ಕುಮಾರ್ ಟಿ.
ಡಾ. ಸುನಿಲ್ ಕುಮಾರ್ ಟಿ.

ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರು, ಚನ್ನರಾಯಪಟ್ಟಣ

Next Story
X