Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀಸಲಾತಿ ವಿರೋಧಿ ಕೊಸರಾಟ: ‘ಜೆನ್ ಝಿ’...

ಮೀಸಲಾತಿ ವಿರೋಧಿ ಕೊಸರಾಟ: ‘ಜೆನ್ ಝಿ’ ವಿರುದ್ಧದ ಷಡ್ಯಂತ್ರವೇ?

ಮಾಚಯ್ಯ ಎಂ. ಹಿಪ್ಪರಿಗಿಮಾಚಯ್ಯ ಎಂ. ಹಿಪ್ಪರಿಗಿ30 July 2026 11:39 AM IST
share
ಮೀಸಲಾತಿ ವಿರೋಧಿ ಕೊಸರಾಟ: ‘ಜೆನ್ ಝಿ’ ವಿರುದ್ಧದ ಷಡ್ಯಂತ್ರವೇ?

ಯುವಜನರ ಹೋರಾಟಕ್ಕೆ ಧ್ವನಿಯಾಗುತ್ತಿರುವ ರಾಹುಲ್ ಗಾಂಧಿಯವರ ನಾಯಕತ್ವದತ್ತ ಜೆನ್‌ಝಿ ತಲೆಮಾರು ಹೊರಳುತ್ತಿರುವ ಸೂಚನೆಗಳು ಕಾಕ್ರೋಚ್ ಹೋರಾಟದಲ್ಲಿ ವ್ಯಕ್ತವಾಗಿದ್ದವು. ಶಿಕ್ಷಣ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿಯ ಕಾರಣಕ್ಕೆ ರಾಹುಲ್ ಗಾಂಧಿಯವರತ್ತ ಹೊರಳಿಕೊಳ್ಳುತ್ತಿರುವ ಜೆನ್ ಝಿಗಳ ಈ ನಿಲುವು, ಶಾಶ್ವತ ರಾಜಕೀಯ ನಿಲುವಾಗಿ ಬದಲಾಗಿ, ಕಾಂಗ್ರೆಸ್‌ನ ಮತದಾರರನ್ನಾಗಿಸುವ ಮೊದಲೇ ಅದನ್ನು ತಡೆಯುವುದು ಸಂಘ ಪರಿವಾರದ ಮುಂದಿದ್ದ ಸವಾಲು. ಅದನ್ನು ಮೀಸಲಾತಿ ವಿರೋಧಿ ಹೋರಾಟದ ಮೂಲಕ ಸಾಧಿಸಲು ಮುಂದಾಗಿದೆ.

ಮೀಸಲಾತಿ ವಿರೋಧಿ ಹೋರಾಟ ಮತ್ತೆ ಮುನ್ನೆಲೆಗೆ ಬಂದಿರುವುದರ ಹಿಂದೆ ‘ಜೆನ್ ಝಿ’ಗಳ ನಡುವೆ ಒಡಕು ಮೂಡಿಸುವ ಒಂದು ಸ್ಪಷ್ಟ ರಾಜಕೀಯ ಹುನ್ನಾರವಿದ್ದಂತಿದೆ. ಎಂಭತ್ತರ ದಶಕದಲ್ಲಿ ಮಂಡಲ್ ವರದಿಗೆ ವಿರುದ್ಧ ತೀವ್ರವಾಗಿದ್ದ ಮೀಸಲಾತಿ ವಿರೋಧಿ ಕೂಗು ಆಗಿಂದಾಗ ಕೇಳಿಬರುತ್ತಲೇ ಇರುತ್ತದೆ. ಆದರೆ ಇದೀಗ ದಿಢೀರ್ ಮರುಕಳಿಸುತ್ತಿರುವುದಕ್ಕೂ, ಇತ್ತೀಚೆಗಷ್ಟೆ ಕೇಂದ್ರ ಸರಕಾರವನ್ನೇ ಬೆಚ್ಚಿಬೀಳಿಸಿದ ಕಾಕ್ರೋಚ್ ಹೋರಾಟಕ್ಕೂ ಸಂಬಂಧವಿದೆ.

ವಿದ್ಯಾರ್ಥಿಗಳ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದದ್ದು ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಯುವಜನರು. ಈ ವರ್ಗದ ಹಿಂದಿನ ತಲೆಮಾರಿನವರು, ಅಂದರೆ ಇವರ ಅಪ್ಪ-ಅಮ್ಮ, ಅಜ್ಜ-ಅಜ್ಜಿಯರು ಬಿಜೆಪಿಯ ವೋಟ್‌ಬ್ಯಾಂಕ್ ಎಂದು ಪರಿಗಣಿಸಲ್ಪಟ್ಟವರು. ಅವರೆಲ್ಲ ಹೆಚ್ಚುಕಮ್ಮಿ ಕೋಮುವಾದ, ರಾಷ್ಟ್ರೀಯತೆ ಮತ್ತು ಮೀಸಲಾತಿ-ವಿರೋಧಿ ಸಿದ್ಧಾಂತಗಳಿಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದವರು. ಈಗ ಅವರ ಮಕ್ಕಳು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಶಿಕ್ಷಣ ನೀತಿಗಳು, ನಿರುದ್ಯೋಗ ಹೆಚ್ಚಳದ ವಿರುದ್ಧ ಆಕ್ರೋಶಿತರಾಗಿದ್ದಾರಷ್ಟೆ; ಆದರೆ, ತಮ್ಮ ಪೋಷಕರ ರಾಜಕೀಯ ಪ್ರಭಾವದಿಂದ ಸಂಪೂರ್ಣವಾಗಿ ಹೊರಬಂದು ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದಾರೆ ಎನ್ನಲಾಗದು. ಪ್ರತಿಭಟನಾ ಕೇಂದ್ರವಾಗಿದ್ದ ಜಂತರ್‌ಮಂತರ್‌ನಲ್ಲಿ ಕೋಮುವಾದಿ-ವಿರೋಧಿ, ಹಿಂದೂ-ಮುಸ್ಲಿಮ್ ಏಕತೆ, ಗಾಂಧಿ-ಅಂಬೇಡ್ಕರ್-ಭಗತ್ ಚಿಂತನೆಯ ಕೆಲವೊಂದು ನಿದರ್ಶನಗಳು ಕಂಡುಬಂದಿದ್ದು ನಿಜ. ಆದರೆ ಆ ನಿದರ್ಶನಗಳನ್ನಷ್ಟೇ ಮಾನದಂಡವಾಗಿಸಿಕೊಂಡು ಇಡೀ ಜೆನ್-ಝಿಗಳ ಸೈದ್ಧಾಂತಿಕ ನಿಲುವಿನ ಬಗ್ಗೆ ತೀರ್ಮಾನಕ್ಕೆ ಬರಲಾಗದು. ಯಾಕೆಂದರೆ, ಹೊಸ ತಲೆಮಾರಿನ ಜೆನ್-ಝಿಗಳ ಸಾಮೂಹಿಕ ಹೆಸರಿನಲ್ಲಿ ಈ ಹೋರಾಟ ನಡೆಯಿತಾದರೂ, ಎಡ ಮತ್ತು ಪ್ರಗತಿಪರ ಚಿಂತನೆಯ ವಿದ್ಯಾರ್ಥಿ ಘಟಕಗಳು ಕೂಡಾ ಈ ಚಳವಳಿಯಲ್ಲಿ ಭಾಗಿಯಾಗಿದ್ದವು. ನಮಗೆ ಗೋಚರಿಸಿದ ಸೈದ್ಧಾಂತಿಕ ನಿಲುವಿನ ಮೇಲ್ಕಾಣಿಸಿದ ನಿದರ್ಶನಗಳು ಆ ಸಂಘಟನೆಗಳ ಅಭಿವ್ಯಕ್ತಿ ಅಥವಾ ಪ್ರಭಾವಕ್ಕೊಳಗಾದವು ಆಗಿರಬಹುದು. ಹಾಗಾಗಿ ಜೆನ್ ಝಿ ತಲೆಮಾರಿನವರ ಸೈದ್ಧಾಂತಿಕ ಯೋಚನಾ ಲಹರಿಯನ್ನು ನಾವು ನಿರ್ಧರಿಸಲು ಇನ್ನೂ ಒಂದಷ್ಟು ಸಮಯ ಮತ್ತು ಸವಾಲುಗಳು ಎದುರಾಗಬೇಕಿದೆ.

ಅಂತಹ ಸವಾಲನ್ನು ಈಗ ಮೀಸಲಾತಿ ವಿರೋಧಿ ಹೋರಾಟದ ನೆಪದಲ್ಲಿ ಜೆನ್ ಝಿಗಳ ಮುಂದೆ ಕಟೆದು ನಿಲ್ಲಿಸಲಾಗಿದೆ. ಮೇಲೆ ವಿವರಿಸಿದಂತೆ ಶಿಕ್ಷಣ ಮತ್ತು ಉದ್ಯೋಗ ನೀತಿಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಅವರಿಗೆಲ್ಲ ಆಕ್ರೋಶವಿರುವುದು ನಿಜ. ಆದರೆ ಮೀಸಲಾತಿಯಂತಹ ವಿಚಾರ ಬಂದಾಗ ಅವರು ತಮ್ಮ ಮಧ್ಯಮ ವರ್ಗದ ಆಸಕ್ತಿಯನ್ನು ಕೈಚೆಲ್ಲಿ ಮೀಸಲಾತಿ ಪರವಾಗಿ ನಿಲ್ಲುವರೇ? ಮೀಸಲಾತಿಯಿಂದಾಗಿ ನೈಜ ಪ್ರತಿಭೆಗಳಿಗೆ, ನಿಖರವಾಗಿ ಹೇಳಬೇಕೆಂದರೆ ಮೇಲ್ಜಾತಿ ಮಧ್ಯಮ ವರ್ಗದ ಪ್ರತಿಭೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಮಿಥ್ಯ ಪರಿಕಲ್ಪನೆಯನ್ನು ಆಳವಾಗಿ ಬೇರೂರಿಸಿಕೊಂಡು ಬೆಳೆದ ವರ್ಗ ಅದು. ಅದು ಬಿಜೆಪಿ ಮೇಲಿನ ಸಿಟ್ಟಿನ ಕಾರಣಕ್ಕೆ ಅಷ್ಟು ಸುಲಭವಾಗಿ ಆ ವರ್ಗದವರಿಂದ ಸರಿದುಹೋಗದು.

ಇದನ್ನು ಅರ್ಥ ಮಾಡಿಕೊಂಡಿರುವ ಬಿಜೆಪಿ ಮತ್ತು ಸಂಘ ಪರಿವಾರಗಳು ಜೆನ್ ಝಿ ತಲೆಮಾರಿನವರು ತಮ್ಮ ರಾಜಕೀಯ ನಿಲುವಿನ ಬಗ್ಗೆ ಗೊಂದಲಗೊಳ್ಳುವಂತೆ ಮಾಡಲು ಮೀಸಲಾತಿ ವಿರೋಧಿ ಹೋರಾಟವನ್ನು ಮುನ್ನೆಲೆಗೆ ತಂದಂತಿವೆ. ಬಹುಮುಖ್ಯವಾಗಿ, ಯುವಜನರ ಹೋರಾಟಕ್ಕೆ ಧ್ವನಿಯಾಗುತ್ತಿರುವ ರಾಹುಲ್ ಗಾಂಧಿಯವರ ನಾಯಕತ್ವದತ್ತ ಈ ತಲೆಮಾರು ಹೊರಳುತ್ತಿರುವ ಸೂಚನೆಗಳು ಕಾಕ್ರೋಚ್ ಹೋರಾಟದಲ್ಲಿ ವ್ಯಕ್ತವಾಗಿದ್ದವು. ಶಿಕ್ಷಣ ಸುಧಾರಣೆ ಮತ್ತು ಉದ್ಯೋಗ ಸೃಷ್ಟಿಯ ಕಾರಣಕ್ಕೆ ರಾಹುಲ್ ಗಾಂಧಿಯವರತ್ತ ಹೊರಳಿಕೊಳ್ಳುತ್ತಿರುವ ಜೆನ್ ಝಿಗಳ ಈ ನಿಲುವು, ಶಾಶ್ವತ ರಾಜಕೀಯ ನಿಲುವಾಗಿ ಬದಲಾಗಿ, ಕಾಂಗ್ರೆಸ್‌ನ ಮತದಾರರನ್ನಾಗಿಸುವ ಮೊದಲೇ ಅದನ್ನು ತಡೆಯುವುದು ಸಂಘ ಪರಿವಾರದ ಮುಂದಿದ್ದ ಸವಾಲು. ಅದನ್ನು ಮೀಸಲಾತಿ ವಿರೋಧಿ ಹೋರಾಟದ ಮೂಲಕ ಸಾಧಿಸಲು ಮುಂದಾಗಿದೆ.

ಈಗ ಸಹಜವಾಗಿಯೇ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮೀಸಲಾತಿ ಪರವಾಗಿ ನಿಲ್ಲಬೇಕಾಗುತ್ತದೆ. ಇದರಿಂದಾಗಿ ಮೀಸಲಾತಿ ವಿರೋಧಿ ಮನಸ್ಥಿತಿಗಳ ಪ್ರಭಾವದಲ್ಲಿ ಬೆಳೆದುಬಂದ ಮೇಲ್ಮಧ್ಯಮ ವರ್ಗದ ಹೊಸ ತಲೆಮಾರಿನವರು ರಾಹುಲ್ ಗಾಂಧಿಯವರಿಂದ ವಿಮುಖಗೊಳ್ಳುತ್ತಾರೆ. ಆ ಅವಕಾಶ ಬಳಸಿಕೊಂಡು, ‘ನಿಮಗೆ ಬಿಜೆಪಿ ಮೇಲೆ ಎಷ್ಟೇ ಕೋಪವಿದ್ದರೂ, ನಿಮ್ಮ ಹಿತಾಸಕ್ತಿಯನ್ನು ಕಾಪಾಡಬೇಕೆಂದರೆ ಬಿಜೆಪಿಯೇ ಅನಿವಾರ್ಯ ಆಯ್ಕೆ’ ಎಂದು ಜೆನ್ ಝಿಗಳನ್ನು ಮನವರಿಕೆ ಮಾಡಲು ಮುಂದಾಗಬಹುದು ಎನ್ನುವುದು ಸಂಘ ಪರಿವಾರದ ಲೆಕ್ಕಾಚಾರ. ಹೇಗೂ ಈ ತಲೆಮಾರು ಸೋಷಿಯಲ್ ಮೀಡಿಯಾದ ರೀಲ್ಸ್‌ಗಳ ಪ್ರಭಾವಕ್ಕೆ ಒಳಗಾಗಿರುವುದರಿಂದ, ಅದನ್ನೇ ಬಳಸಿಕೊಂಡು ಮೀಸಲಾತಿ ವಿರೋಧಿ ಕಂಟೆಂಟ್‌ಗಳನ್ನು ಹಂಚುವುದು ಸಂಘ ಪರಿವಾರದ ಐಟಿ ಸೆಲ್‌ಗಳಿಗೆ ಕಷ್ಟವಲ್ಲ.

ಕೇವಲ ಕಾಂಗ್ರೆಸ್ ಮಾತ್ರವಲ್ಲ, ಕಾಕ್ರೋಚ್ ಚಳವಳಿಯನ್ನು ಮುನ್ನಡೆಸಿದ ನಾಯಕರನ್ನೂ ಇಕ್ಕಟ್ಟಿಗೆ ಸಿಲುಕಿಸುವುದು ಈ ಹುನ್ನಾರದ ಸ್ಪಷ್ಟ ಉದ್ದೇಶ. ಅಕಸ್ಮಾತ್ ಅವರೇನಾದರೂ ಮೀಸಲಾತಿ ಪರವಾಗಿ ತಮ್ಮ ನಿಲುವು ವ್ಯಕ್ತಪಡಿಸಿದರೆ, ಮಧ್ಯಮವರ್ಗದ ಜೆನ್ ಝಿ ತಲೆಮಾರಿನ ದೊಡ್ಡ ಸಮುದಾಯ ಅವರ ಪ್ರಭಾವದಿಂದ ದೂರ ಸರಿಯುವ ಸಂಭವವಿದೆ. ಆಗ ಕಾಕ್ರೋಚ್ ವೇದಿಕೆಯ ಬಲ ಕುಸಿಯುತ್ತದೆ. ಒಂದು ವೇಳೆ, ಅವರು ಮೀಸಲಾತಿ ವಿರೋಧಿ ನಿಲುವಿಗೆ ತಮ್ಮ ಸಹಮತ ವ್ಯಕ್ತಪಡಿಸಿದರೆ ಅಥವಾ ಯಾವ ಅಭಿಪ್ರಾಯವನ್ನೂ ಹೊರಹಾಕದೆ ಮೌನಕ್ಕೆ ಶರಣಾದರೆ, ಆಗ ಅವರ ಸೈದ್ಧಾಂತಿಕ ನಿಲುವಿನ ಬಗ್ಗೆಯೇ ಪ್ರಗತಿಪರ ವಲಯದಲ್ಲಿ ಅಪನಂಬಿಕೆಗಳು ಶುರುವಾಗಿ ಅವರಿಗೆ ದೊರಕುತ್ತಿದ್ದ ಪ್ರಗತಿಪರ ಸಮುದಾಯ-ಸಂಘಟನೆಗಳ ಬೆಂಬಲ ಕೈತಪ್ಪಿಹೋಗುತ್ತದೆ. ಈ ಎರಡರಲ್ಲಿ ಯಾವುದು ಘಟಿಸಿದರೂ ಅದು ಕಾಕ್ರೋಚ್ ಚಳವಳಿಗೆ ಹಿನ್ನಡೆ; ಬಿಜೆಪಿಗೆ ಲಾಭ!

ಈ ಲೆಕ್ಕಾಚಾರದಿಂದಲೇ ತನ್ನ ಯಥಾ ಶೈಲಿಯ ಧರ್ಮ, ರಾಷ್ಟ್ರೀಯತೆ, ಹಿಂದೂ-ಮುಸ್ಲಿಮ್ ದ್ವೇಷದಂತಹ ಅಸ್ತ್ರಗಳನ್ನು ಬದಿಗಿರಿಸಿ, ನೇರವಾಗಿ ಯುವಸಮುದಾಯ ರಿಯಾಕ್ಟ್ ಮಾಡಲೇಬೇಕಾದ ಮೀಸಲಾತಿ ವಿರೋಧಿ ಅಸ್ತ್ರವನ್ನು ಝಳಪಿಸಲಾಗುತ್ತಿದೆ.

ಬಲಾಢ್ಯ ಜಾತಿಗಳಿಗೂ ಈಗ ಇಡಬ್ಲ್ಯುಎಸ್ ಹೆಸರಿನಲ್ಲಿ ಶೇ. 10 ಮೀಸಲಾತಿ ನೀಡಲಾಗುತ್ತಿದೆ; ಮೀಸಲಾತಿಯ ನೇರ ಪ್ರಯೋಜನ ಲಭಿಸುವಂತಹ ಸರಕಾರಿ ಹುದ್ದೆಗಳ ನೇಮಕಾತಿಯನ್ನೇ ಖಾಸಗೀಕರಣ ಮತ್ತು ಗುತ್ತಿಗೆ ನೇಮಕಾತಿಯ ಮೂಲಕ ಅಪ್ರಸ್ತುತಗೊಳಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೀಸಲಾತಿ ರದ್ದತಿ ಬಗ್ಗೆ ಧ್ವನಿ ಎತ್ತುವುದರಿಂದ ಹೆಚ್ಚೇನು ಪ್ರಯೋಜನವಿಲ್ಲ ಎಂಬುದು ತಿಳಿದಿದ್ದರು ಕೂಡಾ, ಮೇಲ್ಮಧ್ಯಮ ವರ್ಗದ ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಪ್ರಚೋದಿಸುವ ಮೂಲಕ ಆ ವರ್ಗದ ನವಪೀಳಿಗೆಯನ್ನು ಗೊಂದಲಗೊಳಿಸುವ ಸಲುವಾಗಿಯೇ ಈ ಅಜ್ಞಾತ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ನಿಜಕ್ಕೂ ಜೆನ್‌ಝಿ ತಲೆಮಾರಿ ನವರ ಸೈದ್ಧಾಂತಿಕ ನಿಲುವನ್ನು ಸವಾಲಿಗೊಡ್ಡುವ ಸಂದರ್ಭ. ಅದನ್ನು ಅವರು ಹೇಗೆ ತಡೆಹಾಯ್ದು ಬರಬಲ್ಲರು ಮತ್ತು ಈ ಹುನ್ನಾರವನ್ನು ಮಣಿಸಲು ಪ್ರಗತಿಪರ ವಲಯ ಹೇಗೆಲ್ಲಾ ಅವರ ಜೊತೆ ನಿಲ್ಲಬಲ್ಲದು ಎಂಬುದು ತುರ್ತು ಪ್ರಶ್ನೆ.

Tags

Gen Z
share
ಮಾಚಯ್ಯ ಎಂ. ಹಿಪ್ಪರಿಗಿ
ಮಾಚಯ್ಯ ಎಂ. ಹಿಪ್ಪರಿಗಿ
Next Story
X