Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪರಿಸರ ಸ್ನೀಹಿ , ಹಸಿರು ಪಟಾಕಿಗಳು...

ಪರಿಸರ ಸ್ನೀಹಿ , ಹಸಿರು ಪಟಾಕಿಗಳು ಪರ್ಯಾಯವೇ, ಪರಿಹಾರವೇ?

ಕೆ.ಸಿ.ಶಂಕರ್ಕೆ.ಸಿ.ಶಂಕರ್9 Nov 2026 2:07 PM IST
share
ಪರಿಸರ ಸ್ನೀಹಿ , ಹಸಿರು ಪಟಾಕಿಗಳು ಪರ್ಯಾಯವೇ, ಪರಿಹಾರವೇ?

9ನೇ ಶತಮಾನದಲ್ಲಿ ಚೀನಾ ದೇಶದಲ್ಲಿ ಆವಿಷ್ಕರಿಸಿದ ಗನ್ ಪೌಡರ್‌ನಿಂದ ಪಟಾಕಿಯ ಉಗಮವಾಯಿತು. ಪೆಟ್ಲುಪ್ಪು, ಗಂಧಕ ಮತ್ತು ಚಾರ್ಕೋಲ್ ಮಿಶ್ರಣದಿಂದ ಉಂಟಾಗುವ ವಿಸ್ಮಯ ಸ್ಫೋಟಕ ಬೆಳಕಿನಿಂದ ದೆವ್ವ ಭೂತಗಳನ್ನು ಮತ್ತು ಅವುಗಳಿಂದ ಬರುವ ಕಾಯಿಲೆಗಳನ್ನು, ನಿಗ್ರಹಿಸಬಹುದು, ವಾಸಿ ಮಾಡಬಹುದು ಎಂದು ನಂಬಿಕೊಂಡ ಚೀನೀಯರು ಈ ‘ಪಟಾಕಿಗೆ’ ಅಮೃತ ಔಷಧ ಎಂದು ಹೆಸರಿಟ್ಟರು! ಇದೇ ಅಮೃತ ಇಂದು ಜಗತ್ತನ್ನು ವಿಷಪೂರಿತ ಮಾಡಿದೆ. ಈ ಸ್ಫೋಟಕಗಳು ರಾಜನಿಗೆ ಗೋಚರವಾದಾಗ ಮಾರಕ ಯುದ್ಧ ಅಸ್ತ್ರಗಳಾದ ತುಪಾಕಿ ಮತ್ತು ಫಿರಂಗಿಗಳು ಸೃಷ್ಟಿಯಾದವು. ಕ್ರಮೇಣ ಪಟಾಕಿ ಸಂಸ್ಕೃತಿ ಜಗತ್ತಿನಾದ್ಯಂತ ಪಸರಿಸಿ, ಪರಿಸರವನ್ನು ಈ ಮಟ್ಟಕ್ಕೆ ತಳ್ಳಿದೆ. ಈಗ ಪಟಾಕಿಗಳು ನಮ್ಮನ್ನು ನಿಜವಾಗಿಯೂ ಕೊಲ್ಲುವ ತುಪಾಕಿ ಫಿರಂಗಿಗಳು ಆಗಿವೆ! ಪಟಾಕಿ ಹೊಡೆಯುವುದು ಮೂಲ ಆಧ್ಯಾತ್ಮಿಕ, ಧಾರ್ಮಿಕ ಪರಂಪರೆ ಅಲ್ಲವೇ ಅಲ್ಲ.

ಇಂದು ಪಟಾಕಿ ಸಿಡಿಸುವುದು ಕಾಲದೇಶದ ಪರಿಮಿತಿಗಳನ್ನು ಮೀರಿದೆ. ಎಲ್ಲಾ ಹಬ್ಬಗಳು, ಹುಟ್ಟು ಹಬ್ಬಗಳು, ಮದುವೆ, ಸಾವು, ಚುನಾವಣಾ ಫಲಿತಾಂಶ, ಕ್ರೀಡೆ- ಕ್ರಿಕೆಟ್ ಗೆಲುವು ಎಲ್ಲಾ ಮೋಜು ಮಸ್ತಿಯ ಸಂದರ್ಭದಲ್ಲಿ ಪಟಾಕಿ ಹೊಡಿಸದಿದ್ದರೆ ನೆಮ್ಮದಿಯೇ ಇಲ್ಲ. ಇಂದು ಪಟಾಕಿ ಸಿಡಿಸದಿರುವ ಸ್ಥಳಗಳೇ ಇಲ್ಲ-ಶಾಲೆ, ಆಸ್ಪತ್ರೆ, ಅನಾಥಾಶ್ರಮ, ಪರಿಸರ ಸೂಕ್ಷ್ಮ ಪ್ರದೇಶಗಳು, ಕಾಡು, ಗುಡ್ಡ, ಬೆಟ್ಟ, ಬೀದಿ, ಬಯಲು, ಹೊಲಗಳೆಂಬ ಪರಿ ಮಿತಿಯೇ ಇಲ್ಲ.

ಪಟಾಕಿ ಸಿಡಿಸುವಿಕೆ ತಾರಕಕ್ಕೆ ಏರುವುದು ಗಣಪತಿ ವಿಸರ್ಜನೆ ಮತ್ತು ದೀಪಾವಳಿ ಸಂದರ್ಭ. ದೀಪಾವಳಿ ಹಬ್ಬಕ್ಕೆ ಅಂಟಿಕೊಂಡಿದ್ದ ಪಟಾಕಿ ಸಿಡಿಸುವಿಕೆ ಈಗ ಎಲ್ಲಾ ಹಬ್ಬಗಳನ್ನು ಪ್ರವೇಶಿಸಿದೆ.

ದೀಪಾವಳಿಯಂತೂ ಬೆಳಕಿನ ಹಬ್ಬವಾಗದೆ ರಾಸಾಯನಿಕ, ಮಾಲಿನ್ಯ ಹಬ್ಬವಾಗಿದೆ. ಧಾರ್ಮಿಕ ನಂಬಿಕೆಯು ವೈದ್ಯಕೀಯ, ವೈಜ್ಞಾನಿಕ ಸತ್ಯಗಳಿಗೆ ನಮ್ಮನ್ನು ಕುರುಡು ಮಾಡಬಾರದು. ಐದು ನಿಮಿಷದ ಮೋಜು ಜೀವನ ಪರ್ಯಂತ ನಮ್ಮನ್ನು ಹಲವಾರು ಕಾಯಿಲೆಗಳಿಗೆ ತುತ್ತು ಮಾಡಿ, ಬೆಳಕಿನ ಹಬ್ಬ ನಮ್ಮನ್ನು ಕತ್ತಲೆಗೆ ತಳ್ಳಬಾರದು.

ಪಟಾಕಿ ತಯಾರಿಕೆಯಲ್ಲಿ ಬಳಸುವಂತಹ ರಾಸಾಯನಿಕಗಳಾದ ಪೊಟಾಸಿಯಂ ನೈಟ್ರೇಟ್, ಚಾರ್ಕೋಲ್, ಪ್ಲಾಸ್ಟಿಕ್, ಗಂಧಕ, ಬೇರಿಯಂ ಮುಂತಾದ ವಸ್ತುಗಳ ರಾಸಾಯನಿಕ ಕ್ರಿಯೆಯಿಂದ ಸಿಡಿಯುವ ಸ್ಫೋಟದಿಂದ ಸೂಸುವ ರಾಸಾಯನಿಕ ಮಾಲಿನ್ಯಗಳಾದ ಗಂಧಕದ ಡೈಯಾಕ್ಸೆ ಡ್, ನೈಟ್ರೋಜನ್ ಡಯಾಕ್ಸೆ ಡ್, ಮಿಥೇನ್, ಕಾರ್ಬನ್ ಡೈ ಆಕ್ಸೆ ಡ್, ಬೆನ್ಸನ್, ಹೈಡ್ರೋಪ್ಲೋರೋ ಕಾರ್ಬನ್‌ಗಳು, ಹಸಿರು ಮನೆ ಅನಿಲಗಳು, ಫ್ರೀ ರಾಡಿಕಲ್ಸ್, ಸೀಸದಂತಹ ಹೆವಿ ಮೆಟಲ್‌ಗಳಿಂದ ಬುದ್ಧಿಮಾಂದ್ಯತೆ, ಪಾರ್ಕಿನ್‌ಸನ್ಸ್, ಲಕ್ವ, ಹೃದಯಾಘಾತ, ಎಂಟು ರೀತಿಯ ಕ್ಯಾನ್ಸರ್, ಸ್ತ್ರೀಯರಲ್ಲಿ ಬಂಜೆತನ, ಅಕಾಲಿಕ ಶಿಶು ಜನನ, ಮಕ್ಕಳಲ್ಲಿ ಮೆದುಳಿನ ಸಾಮರ್ಥ್ಯ ಕುಂದುವ ಆಟಿಸಂ, ಜನ್ಮ ದೋಷಗಳಂತಹ ಕಾಯಿಲೆಗಳು ಬರಬಹುದು. ನಾವು ಉಸಿರಾಡುವ ವಿಷ ಗಾಳಿಯು ನಮ್ಮ ಕ್ರೋಮೋಸೋಮ್ ಮತ್ತು ಡಿಎನ್‌ಎ ರಚನೆಯನ್ನೇ ಬದಲಾಯಿಸಬಹುದು. ಭಾರತದಲ್ಲಿ ಶೇ.25ರಷ್ಟು ಸಾವುಗಳು ಪರಿಸರ ಮಾಲಿನ್ಯದಿಂದ ಆಗುತ್ತವೆ ಎಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆರೋಗ್ಯ ತಜ್ಞರ ಪ್ರಕಾರ ದಿಲ್ಲಿಯಲ್ಲಿ

ಶೇ. 40ರಷ್ಟು ಮಕ್ಕಳ ಸ್ವಾಶಕೋಶ ಹಾನಿಯಾಗಿದೆ.

ಕಾಡು ಮತ್ತು ಸಾಕು ಪ್ರಾಣಿಗಳು, ಪಕ್ಷಿಗಳು ಕೀಟ ಸಂಕುಲಗಳ ಮೇಲೆ ದುಷ್ಪರಿಣಾಮ ಬೀರಿ ಸಮಗ್ರ ಪರಿಸರಕ್ಕೆ ಪಟಾಕಿಯ ಸ್ಫೋಟವು ವಿನಾಶಕಾರಿಯಾಗುತ್ತದೆ. ಅದರಲ್ಲೂ ವಿನಾಶದ ಅಂಚಿನಲ್ಲಿರುವ ಜೇನುನೊಣಗಳನ್ನು ನಾಶ ಮಾಡಿ ಜಗತ್ತಿನಲ್ಲಿ ಆಹಾರದ ಕೊರತೆ, ಕ್ಷಾಮವನ್ನು ಉಂಟು ಮಾಡುತ್ತದೆ. ಪಟಾಕಿಯ ಸ್ಫೋಟದಿಂದ ಉತ್ಪಾದನೆ ಆಗುವ ರಾಸಾಯನಿಕಗಳು ನೆಲವನ್ನು ಸೇರಿ ಹರಿಯುವ ನೀರಿನ ಮೂಲಕ ಹಳ್ಳ ಕೊಳ್ಳಗಳನ್ನು ಸೇರಿ ಜಲಚರಗಳಿಗೆ ಕಂಟಕಪ್ರಾಯವಾಗುತ್ತದೆ, ಕುಡಿಯುವ ನೀರನ್ನು ಮಾಲಿನ್ಯ ಮಾಡುತ್ತದೆ. ದೇವರ ಮತ್ತು ಧರ್ಮದ ಹೆಸರಿನಲ್ಲಿ ಪರಿಸರಕ್ಕೆ ಆಗುವ ಹಾನಿ ಸಲ್ಲದು. ಪ್ರಕೃತಿಯೇ ದೇವರೆಂದು ಆರಾಧಿಸುವ ನಮಗೆ ಇದು ಎಷ್ಟು ಸೂಕ್ತವಾದದ್ದು? ನೆರೆಹೊರೆಯವರಿಗೆ ತೊಂದರೆ, ಮಾಲಿನ್ಯ, ಹಿಂಸೆ ಕೊಡುವುದು ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಅಪರಾಧ. ಈ ವಿಚಾರದಲ್ಲಿ ನಾವು ವಿಜ್ಞಾನಿಗಳು ಹೇಳುವ ಮಾತನ್ನು ಕೇಳಬೇಕೆ ಹೊರತು, ರಾಜಕಾರಣಿಗಳು,ಮಠಾಧಿಪತಿಗಳು ಮತ್ತು ಧರ್ಮ ಗುರುಗಳ ಮಾತನ್ನಲ್ಲ.

ವಿಷ ಯಾವ ಬಣ್ಣದಲ್ಲಿದ್ದರೇನು ವಿಷ ವಿಷವೇ, ಪಟಾಕಿಗಳಿಂದ ಉಂಟಾಗುವ, ಭೀಕರ ಪರಿಸರ ಮಾಲಿನ್ಯ ಮತ್ತು ಆರೋಗ್ಯಕ್ಕೆ ಮಾರಕತೆಯನ್ನು, ಅದರಲ್ಲೂ ದಿಲ್ಲಿಯ ಮಾರಕ ಪರಿಸರ ಮಾಲಿನ್ಯವನ್ನು ಮನಗಂಡ ದೇಶದ ಮಾನ್ಯ ಸರ್ವೋಚ್ಚ ನ್ಯಾಯಾಲಯವು 2018 ರಲ್ಲಿ ರಾಸಾಯನಿಕ ಪಟಾಕಿಗಳನ್ನು ನಿಷೇಧ ಮಾಡಿತು. ಪರ್ಯಾಯವಾಗಿ 2019ರಲ್ಲಿ ಹಸಿರು ಪಟಾಕಿಗಳಿಗೆ ಮಾನ್ಯತೆ ನೀಡಲಾಯಿತು. ಹಸಿರು ಪಟಾಕಿಯನ್ನು ದೇಶದ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರವಾದ ಸಿಎಸ್‌ಐಆರ್ ಹೊರತಂದಿತು.

ಹಸಿರು ಪಟಾಕಿಯ ನಿಯಮ ಮತ್ತು ಲಕ್ಷಣಗಳು -(1) ಹಸಿರು ಪಟಾಕಿಯಲ್ಲಿ ಮಾಲಿನ್ಯತೆಯು ರಾಸಾಯನಿಕ ಪಟಾಕಿಗಳಿಗಿಂತ ಶೇ.30ರಷ್ಟು ಕಡಿಮೆ ಇರುತ್ತದೆ. (2)ಇವುಗಳಲ್ಲಿ ಬೇರಿಯಂ, ನೈಟ್ರೇಟ್, ಲಿಥಿಯಂ, ಆರ್ಸೆನಿಕ್ ಮತ್ತು ಸೀಸಕ್ಕೆ ಪರ್ಯಾಯವಾಗಿ, ಇತರ ಕಡಿಮೆ ಅಪಾಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. (3) ಪಟಾಕಿ ತಯಾರಿಸುವ ಕಂಪೆನಿಗಳು (1,700) ಪೆಟ್ರೋಲಿಯಂ ಸ್ಫೋಟಕ ಸುರಕ್ಷಾ ಸಂಸ್ಥೆಯಿಂದ ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆದು, ಅವರು ನೀಡುವ ಕಿಖ ಕೋಡನ್ನು ಪಟಾಕಿ ತಯಾರಿಕರು ತಮ್ಮ ಪ್ಯಾಕ್‌ಗಳ ಮೇಲೆ ಕಡ್ಡಾಯವಾಗಿ ನಮೂದಿಸಬೇಕು. (4) ಸರಕಾರವು ಮೂರು ರೀತಿಯ ಹಸಿರು ಪಟಾಕಿಗಳಿಗೆ ಅವಕಾಶವನ್ನು ನೀಡಿದೆ -(ಎ) ಸುರಕ್ಷಿತ ಹವೆ ಸೂಸಿ ಮಾಲಿನ್ಯ ಕಣಗಳನ್ನು ಹರಡದಂತೆ ತಡೆಯುವ (ಬಿ) ಉರಿಯುವ ಗುಣಮಟ್ಟವನ್ನು ಹೆಚ್ಚಿಸಿ ಮಾಲಿನ್ಯ ಹೊಗೆಯನ್ನು ಕಡಿಮೆ ಮಾಡುವ, (ಸಿ) ತಯಾರಿಕೆಯಲ್ಲಿ ಕಡಿಮೆ ಅಲ್ಯುಮಿನಿಯಂ ಬಳಕೆ.

(5) ಮಾಲೆಗಳ ರೂಪದಲ್ಲಿ ಪಟಾಕಿ ತಯಾರು ಮತ್ತು ವ್ಯಾಪಾರ ನಿಷೇಧಿಸಿದೆ.

(6) ಶಾಲಾ ಕಾಲೇಜುಗಳು, ಆಸ್ಪತ್ರೆ, ಅನಾಥಾಶ್ರಮ, ಪ್ರಾಣಿ ಸಂಗ್ರಹಾಲಯ, ಪರಿಸರ ಸೂಕ್ಷ್ಮ ಪ್ರದೇಶಗಳ 300 ಮೀಟರ್ ಸುತ್ತಲಿನ ಪರಿಧಿಯಲ್ಲಿ ಪಟಾಕಿಗಳನ್ನು ಸ್ಫೋಟಿಸುವಂತಿಲ್ಲ.

ಈ ಸುರಕ್ಷತೆಯ ಬಗ್ಗೆ ಜವಾಬ್ದಾರಿ ವಹಿಸುವ ಇಲಾಖೆಗಳೆಂದರೆ ಪೊಲೀಸ್ ಮತ್ತು ಪರಿಸರ ಮಾಲಿನ್ಯ ಇಲಾಖೆಗಳು.

ಆದರೆ ಪ್ರಶ್ನೆ ಇರುವುದು ಭಾರತದಂತಹ ದೇಶದಲ್ಲಿ ಈ ಹಸಿರು ಪಟಾಕಿಗಳ ಬಗ್ಗೆ ಈ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ, ಓದಿ ತಿಳಿದುಕೊಂಡು ಸ್ಫೋಟಿಸುವಷ್ಟು ಪ್ರಜ್ಞಾಪೂರ್ವಕ, ವಿದ್ಯಾವಂತ ಮತ್ತು ಪರಿಸರ ಕಾಳಜಿ ಜನಸಮೂಹಕ್ಕೆ ಇದೆಯೇ ಎಂಬುದು. ಈ ವಿಚಾರದಲ್ಲಿ ಸಾರ್ವಜನಿಕ ಅರಿವಿನ ಮೂಲಕ ಬದಲಾವಣೆಯನ್ನು ತರುವುದು ಅಸಾಧ್ಯವಾದದ್ದು. ದೇಶ, ಪರಿಸರ,

ಪ್ರಾಣಿ ಸಂಕುಲ, ನಮ್ಮ ಆರೋಗ್ಯ ಎಲ್ಲದರ ಹಿತದೃಷ್ಟಿಯಿಂದ ಪಟಾಕಿ ಮುಕ್ತ ವಿಶ್ವ, ಪಟಾಕಿ ಮುಕ್ತ ದೇಶವಾಗಬೇಕು. ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಪಟಾಕಿ ಉತ್ಪಾದನೆಯಿಂದ ಬರುವ 7,000 ರೂ. ಕೋಟಿ ವರಮಾನ ದೇಶವನ್ನು ನಾಶ ಮಾಡದಿರಲಿ.

ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಂಪತ್ತು ಎಂಬ ಘೋಷಣೆಯು ನಮ್ಮಲ್ಲಿ ನಿತ್ಯ ಘೋಷಣೆಯಾಗಲಿ.

Tags

firecrackersgreen firecrackers
share
ಕೆ.ಸಿ.ಶಂಕರ್
ಕೆ.ಸಿ.ಶಂಕರ್

ಸಂಸ್ಥಾಪಕ ಕಾರ್ಯದರ್ಶಿಗಳು, ಕುವೆಂಪು ವಿದ್ಯಾನಿಕೇತನ, ಚಿಕ್ಕಮಗಳೂರು.

Next Story
X