Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಟಾಪರ್‌ಗಳ ಫೋಟೊಗಳು ಶಾಲೆ/ಕೋಚಿಂಗ್...

ಟಾಪರ್‌ಗಳ ಫೋಟೊಗಳು ಶಾಲೆ/ಕೋಚಿಂಗ್ ಸಂಸ್ಥೆಗಳ ಜಾಹೀರಾತು ಫಲಕಗಳೇ?

ಡಾ.ಡಿ.ಸಿ.ನಂಜುಂಡಡಾ.ಡಿ.ಸಿ.ನಂಜುಂಡ4 Aug 2026 12:25 PM IST
share
ಟಾಪರ್‌ಗಳ ಫೋಟೊಗಳು ಶಾಲೆ/ಕೋಚಿಂಗ್ ಸಂಸ್ಥೆಗಳ ಜಾಹೀರಾತು ಫಲಕಗಳೇ?

ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳು, ನೀಟ್ ಇತ್ಯಾದಿ ಪ್ರಕಟವಾಗುತ್ತಿದ್ದಂತೆಯೇ ರಾಜ್ಯದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು ವಿದ್ಯಾರ್ಥಿಗಳ ಸಾಧನೆಯನ್ನು ಪ್ರಚಾರದ ಸಾಧನವಾಗಿ ಬಳಸುವ ಪ್ರಕ್ರಿಯೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಫೋಟೊಗಳು, ಅಂಕಗಳ ವಿವರಗಳು ಹಾಗೂ ವೈಯಕ್ತಿಕ ಮಾಹಿತಿಯನ್ನು ಅವರ ಪೂರ್ವಾನುಮತಿ ಇಲ್ಲದೆ ಬಣ್ಣ ಬಣ್ಣದ ದೊಡ್ಡದಾದ ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳು ಸಾಮಾಜಿಕ ಜಾಲತಾಣಗಳು, ವೆಬ್‌ಸೈಟ್‌ಗಳಲ್ಲಿ ಪ್ರಸಾರ ಮಾಡುತ್ತಿರುವುದು ಮಕ್ಕಳ ಖಾಸಗಿತನಕ್ಕೆ ಭಾರೀ ಧಕ್ಕೆ ಉಂಟುಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಇತ್ತೀಚಿನ ವರ್ಷಗಳಲ್ಲಿ ಈ ಪ್ರಚಾರ ಪದ್ಧತಿ ವ್ಯಾಪಕವಾಗಿದ್ದು, ಖಾಸಗಿ ಶಾಲೆಗಳು ಮತ್ತು ತರಬೇೀತಿ ಸಂಸ್ಥೆಗಳು ತಮ್ಮ ಖ್ಯಾತಿ ಹೆಚ್ಚಿಸಲು ‘ಟಾಪರ್’ ವಿದ್ಯಾರ್ಥಿಗಳನ್ನು ಬ್ರಾಂಡ್ ರೀತಿಯಲ್ಲಿ ಬಳಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸಾಧನೆಯನ್ನು ಹೊಗಳುವ ಹೆಸರಿನಲ್ಲಿ ವಿಶೇಷವಾಗಿ ವಿದ್ಯಾರ್ಥಿನಿಯರ ಅವರ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಕೇವಲ ನೈತಿಕ ಪ್ರಶ್ನೆಯಷ್ಟೇ ಅಲ್ಲ, ಕಾನೂನುಪರವಾಗಿ ಸಹ ಗಂಭೀರ ವಿಷಯವಾಗಿದೆ. ಇತ್ತೀಚೆಗೆ ಮೈಸೂರಿನ ಶಾಲೆಯೊಂದರ ಶಿಕ್ಷಕರು ನಾಲ್ಕು ವಿದ್ಯಾರ್ಥಿನಿಯರ ಮಾಹಿತಿಯನ್ನು ಖಾಸಗಿ ವಿದ್ಯಾರ್ಥಿನಿಯರಿಗೆ ಹಂಚಿ ಆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ನೆನಪು ಹಸಿಯಾಗಿದೆ.

ಅತ್ಯಂತ ಆತಂಕಕಾರಿ ಅಂಶವೆಂದರೆ, ಕೆಲ ಸಂಸ್ಥೆಗಳು ವಿದ್ಯಾರ್ಥಿಗಳ ಹಿಂದಿನ ಸಾಧನೆಗಳನ್ನು ಹೋಲಿಕೆ ಮಾಡುವ ಮೂಲಕ ‘‘ಈ ಶಾಲೆಗೆ ಸೇರುವ ಮೊದಲು ಕಡಿಮೆ ಅಂಕ ಪಡೆದಿದ್ದೆ’’/‘‘ನಿರಾಶೆಯಾಗಿದ್ದೆ’’ ಎಂಬ ರೀತಿಯ ಬರಹಗಳನ್ನು ಬ್ಯಾನರ್‌ಗಳಲ್ಲಿ ಪ್ರಕಟಿಸುತ್ತಿರುವುದು. ಇಂತಹ ಪ್ರಚಾರ ವಾಕ್ಯಗಳು ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆಯುಂಟುಮಾಡುವುದರ ಜೊತೆಗೆ, ಅವರ ಮನೋಸ್ಥಿತಿಯ ಮೇಲೂ ದುಷ್ಪರಿಣಾಮ ಬೀರುತ್ತವೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಭ್ರಮಿಸುವ ಬದಲು, ಅವರ ವೈಯಕ್ತಿಕ ಪ್ರಯಾಣವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದು ಶಿಕ್ಷಣದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎನ್ನಬಹುದು. ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳ ನಂಬರನ್ನು ಅದೇ ಶಾಲೆಗಳಿಂದ ಪಡೆದು ಪಿಯುಸಿ ಕಾಲೇಜಿನವರು ತಮ್ಮ ಕಾಲೇಜಿನಲ್ಲಿ ದಾಖಲಾತಿಗೆ ಪೋಷಕರಿಗೆ ಫೋನ್ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಸಾಮಾಜಿಕ ಜಾಲತಾಣಗಳ ವ್ಯಾಪ್ತಿಯನ್ನು ಗಮನಿಸಿದರೆ, ಈ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಒಮ್ಮೆ ವಿದ್ಯಾರ್ಥಿಯ ಫೋಟೊ ಅಥವಾ ಮಾಹಿತಿ ಆನ್‌ಲೈನ್‌ನಲ್ಲಿ ಹಂಚಿಕೆಯಾದರೆ, ಅದನ್ನು ಸಂಪೂರ್ಣವಾಗಿ ಅಳಿಸುವುದು ಬಹುತೇಕ ಅಸಾಧ್ಯ. ಈ ಡಿಜಿಟಲ್ ಚಕ್ರವ್ಯೆಹದಲ್ಲಿ ಸಿಲುಕಿದ ಮಾಹಿತಿ ಅನೇಕ ಅನಧಿಕೃತ ವೆಬ್‌ಸೈಟ್‌ಗಳಿಗೆ ತಲುಪುವ ಸಾಧ್ಯತೆ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಬ್ಲ್ಯಾಕ್‌ಮೇಲ್ ಅಥವಾ ‘ಸೈಬರ್ ಬುಲಿಯಿಂಗ್’ನಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕೂಡ ಗಮನಾರ್ಹವಾಗಿದೆ. ವಿಶೇಷವಾಗಿ, ‘ಸ್ವಯಂ ಬುಲಿಯಿಂಗ್’ ಎಂಬ ಹೊಸ ರೀತಿಯ ಮಾನಸಿಕ ಒತ್ತಡಗಳು ಮಕ್ಕಳಲ್ಲಿ ಆತಂಕಕಾರಿ ಪರಿಣಾಮಗಳನ್ನುಂಟುಮಾಡುತ್ತಿವೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಪ್ರಶ್ನೆ ಅತ್ಯಂತ ಪ್ರಮುಖವಾಗುತ್ತದೆ. ಸಾರ್ವಜನಿಕವಾಗಿ ಹಂಚಿಕೊಳ್ಳಲ್ಪಟ್ಟ ಮಾಹಿತಿ ಕಾರಣವಾಗಿ ವಿದ್ಯಾರ್ಥಿಗಳು ಮುಜುಗರ, ಸಾಮಾಜಿಕ ಅವಮಾನ ಹಾಗೂ ಒತ್ತಡವನ್ನು ಅನುಭವಿಸುವ ಸಾಧ್ಯತೆ ಹೆಚ್ಚುತ್ತದೆ. ಇದು ಅವರ ಆತ್ಮವಿಶ್ವಾಸವನ್ನು ಕುಗ್ಗಿಸುವುದರ ಜೊತೆಗೆ, ದೀರ್ಘಕಾಲಿಕ ಮನೋವೈಕಲ್ಯಗಳಿಗೆ ಕಾರಣವಾಗಬಹುದು ಎನ್ನುವ ಆತಂಕವಿದೆ.

ಕಾನೂನು ದೃಷ್ಟಿಯಿಂದಲೂ ಈ ವಿಚಾರ ಅತ್ಯಂತ ಗಂಭೀರವಾಗಿದೆ. ಭಾರತ ಸಂವಿಧಾನದ ವಿಧಿ 21 ಅಡಿಯಲ್ಲಿ ವ್ಯಕ್ತಿಯ ಖಾಸಗಿತನವು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. 2017ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಕೆ.ಎಸ್. ಪುಟ್ಟಸ್ವಾಮಿ ತೀರ್ಪು ಖಾಸಗಿತನವನ್ನು ಸಾಂವಿಧಾನಿಕ ಹಕ್ಕಾಗಿ ಘೋಷಿಸಿದೆ. ಇದಲ್ಲದೆ, 2023ರ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಕಾಯ್ದೆ, 2015ರ ಮಕ್ಕಳ ನ್ಯಾಯ ಕಾಯ್ದೆ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಾನದಂಡಗಳು ಮಕ್ಕಳ ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿವೆ. ಈ ಎಲ್ಲಾ ನಿಯಮಗಳ ಪ್ರಕಾರ, ಯಾವುದೇ ವಿದ್ಯಾರ್ಥಿಯ ವೈಯಕ್ತಿಕ ಮಾಹಿತಿ ಅಥವಾ ಫೋಟೊ ಪ್ರಕಟಿಸುವ ಮೊದಲು ಸ್ಪಷ್ಟ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಕಾಯ್ದೆ, 2023 ಪ್ರಕಾರ, ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕವಾಗಿ ಬಳಸುವ ಪ್ರಕ್ರಿಯೆ ಕಾನೂನುಬದ್ಧವಾಗಿರಬೇಕು (ಸೆಕ್ಷನ್ 4) ಮತ್ತು ವ್ಯಕ್ತಿಯ ಅನುಮತಿ ಇಲ್ಲದೆ ಪ್ರಕಟಿಸುವುದು ಅಕ್ರಮವಾಗಿದೆ. ಡೇಟಾವನ್ನು ಬಳಸುವ ಮೊದಲು ಅದರ ಉದ್ದೇಶ ಮತ್ತು ಬಳಕೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಕಡ್ಡಾಯ (ಸೆಕ್ಷನ್ 5)ವಾಗಿದ್ದು, ಒಪ್ಪಿಗೆ ಸ್ವತಂತ್ರ, ತಿಳಿದ ಮತ್ತು ನಿರ್ದಿಷ್ಟವಾಗಿರಬೇಕು (ಸೆಕ್ಷನ್ 6), ಅಂದರೆ ಸಾಮಾನ್ಯ ಅಥವಾ ಅಸ್ಪಷ್ಟ ಒಪ್ಪಿಗೆ ಸಾಕಾಗುವುದಿಲ್ಲ. ವಿಶೇಷವಾಗಿ ಮಕ್ಕಳ ವಿಷಯದಲ್ಲಿ, ಅವರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಅಥವಾ ಬಳಸಲು ಪೋಷಕರ ಪರಿಶೀಲಿತ ಅನುಮತಿ ಅವಶ್ಯಕ (ಸೆಕ್ಷನ್ 9)ವಾಗಿದ್ದು, ಮಕ್ಕಳ ಮೇಲೆ ವರ್ತನೆ ಆಧಾರಿತ ಟ್ರ್ಯಾಕಿಂಗ್ ಅಥವಾ ಪ್ರೊಫೈಲಿಂಗ್ ನಡೆಸುವುದು ನಿಷೇಧಿಸಲಾಗಿದೆ (ಸೆಕ್ಷನ್ 11).

ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸುವ ಹೆಸರಿನಲ್ಲಿ ಸಂಪೂರ್ಣ ಅಂಕಪಟ್ಟಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ವಿದ್ಯಾರ್ಥಿಯ ಫೋಟೊ ಜೊತೆ ‘ನಮ್ಮ ಸಂಸ್ಥೆಯ ಯಶೋಗಾಥೆ’ ಎಂಬ ಟ್ಯಾಗ್‌ಲೈನ್ ಬಳಸುವುದು ಅಥವಾ ಹಿಂದಿನ ಸಾಧನೆಗಳನ್ನು ಹೋಲಿಕೆ ಮಾಡಿ ಹಿಂದೆಂದೂ ಕಾಣದ ಸಾಧನೆ ಎಂದು ಪ್ರಚಾರ ಮಾಡುವುದು ಎಲ್ಲವೂ ಡೇಟಾ ದುರುಪಯೋಗ ಕಾಯ್ದೆಯ ವ್ಯಾಪ್ತಿಗೆ ಸೇರುತ್ತವೆ. ಈ ಹಿನ್ನೆಲೆಯಲ್ಲಿ, ಶಾಲೆಗಳು ವಿದ್ಯಾರ್ಥಿಗಳನ್ನು ಶಿಕ್ಷಣ/ಕೋಚಿಂಗ್ ಸಂಸ್ಥೆಗಳು ಮಕ್ಕಳನ್ನು ಉಚಿತವಾಗಿ ಬ್ರಾಂಡಿಂಗ್ ರೀತಿಯಲ್ಲಿ ಪ್ರೊಫೈಲಿಂಗ್ ಮಾಡುವುದು ಅಪರಾಧ. ಇಂತಹ ಉಲ್ಲಂಘನೆಗಳಿಗೆ ಲಕ್ಷಾಂತರ ರೂ. ದಂಡ ವಿಧಿಸುವ ವ್ಯವಸ್ಥೆ ಭಾರತದಲ್ಲಿ ಇದ್ದು, ಅಂತಹ ಸಂಸ್ಥೆಯ ವಿರುದ್ಧ ತನಿಖೆ ಹಾಗೂ ಡೇಟಾ ಪ್ರೊಸೆಸಿಂಗ್ ನಿಷೇಧಿಸುವಂತಹ ಕ್ರಮಗಳು ಜಾರಿಯಾಗಬಹುದು. ಇದರಿಂದ ಶಿಕ್ಷಣ ಸಂಸ್ಥೆಗಳ ವಿಶ್ವಾಸಾರ್ಹತೆಗೂ ಧಕ್ಕೆಯಾಗುತ್ತದೆ.

ಮುಖ್ಯವಾಗಿ ಸಾಮಾಜಿಕ ಮತ್ತು ಮಾನಸಿಕವಾಗಿ ನೋಡಿದರೆ, ಸಾಮಾಜಿಕ ಹೋಲಿಕೆ ತತ್ವದ ಪ್ರಕಾರ ವಿದ್ಯಾರ್ಥಿಗಳು ತಮ್ಮನ್ನು ಅಂಕಗಳ ವಿಚಾರದಲ್ಲಿ ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿ ಹೊಂದಿರುವುದರಿಂದ, ಸಾರ್ವಜನಿಕ ಪ್ರದರ್ಶನ ಕಡಿಮೆ ಅಂಕ ಪಡೆದವರಲ್ಲಿ ಹೀನಭಾವನೆ, ಕಾರ್ಯಕ್ಷಮತೆಯ ಆತಂಕ, ಪೋಷಕರ ಒತ್ತಡ ಹಾಗೂ ಆತ್ಮಹತ್ಯೆಗೂ ಕಾರಣವಾಗಬಹುದು; ಕೆಲವು ಅಧ್ಯಯನಗಳು ಇಂತಹ ಬೆಳವಣಿಗೆ ಮಕ್ಕಳಲ್ಲಿ ಕ್ರಮೇಣ ಕೀಳರಿಮೆಯನ್ನು ಬೆಳೆಸುತ್ತದೆ ಎಂದು ಮನೋತಜ್ಞರು ಹೇಳುತ್ತಾರೆ. ಜೊತೆಗೆ, ಒಮ್ಮೆ ಆನ್‌ಲೈನ್‌ನಲ್ಲಿ ಹಂಚಿಕೆಯಾದ ಫೋಟೊ ಅಥವಾ ಮಾಹಿತಿ ಶಾಶ್ವತ ಡಿಜಿಟಲ್ ರೂಪದಲ್ಲಿ ಉಳಿದು, ತೃತೀಯ ವ್ಯಕ್ತಿಗಳ ದುರುಪಯೋಗ, ಗುರುತು ಕಳವು ಅಥವಾ ನಕಲಿ ಖಾತೆಗಳ ಸೃಷ್ಟಿಗೆ ದಾರಿ ಮಾಡಿಕೊಡಬಹುದು ಎನ್ನಲಾಗಿದೆ. ಭಾರತದಲ್ಲೇ ಶಾಲಾ ವೆಬ್‌ಸೈಟ್‌ಗಳಿಂದ ತೆಗೆದುಕೊಂಡ ವಿದ್ಯಾರ್ಥಿನಿಯರ ಚಿತ್ರಗಳನ್ನು ಬಳಸಿ ನಕಲಿ ಖಾತೆ ತೆರೆಯುವ ಘಟನೆಗಳು ಕಂಡುಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರದ ನೀತಿ ಮಟ್ಟದಲ್ಲೂ ಗಂಭೀರ ಕೊರತೆಗಳು ಕಂಡುಬರುತ್ತಿವೆ.

ಭಾರತದ ಬಹುತೇಕ ಶಾಲೆಗಳಲ್ಲಿ ಡೇಟಾ ರಕ್ಷಣಾ ನೀತಿ ಇಲ್ಲ, ಅನುಮತಿ ಪಡೆಯುವ ಕ್ರಮ ಸ್ಪಷ್ಟವಿಲ್ಲ, ದೂರು ಪರಿಹಾರ ವ್ಯವಸ್ಥೆ ಇಲ್ಲ ಹಾಗೂ ಶಿಕ್ಷಕರಿಗೆ ಡೇಟಾ ನೈತಿಕತೆಯ ಬಗ್ಗೆ ತರಬೇತಿ ಕೊರತೆಯಿದೆ. ಈ ಹಿನ್ನೆಲೆ, ಕಡ್ಡಾಯ ಅನುಮತಿ ವ್ಯವಸ್ಥೆ (ಲಿಖಿತ ಮತ್ತು ಡಿಜಿಟಲ್), ಪ್ರಚಾರಕ್ಕಾಗಿ ಪ್ರತ್ಯೇಕ ಒಪ್ಪಿಗೆ, ಅಗತ್ಯವಿರುವ ಮಾಹಿತಿಯಷ್ಟೇ ಪ್ರಕಟಿಸುವ ಡೇಟಾ ಮಿನಿಮೈಸೇಶನ್, ಹೆಸರು ಅಥವಾ ಫೋಟೊ ಇಲ್ಲದೇ ಫಲಿತಾಂಶ ಪ್ರಕಟಿಸುವ ಅನಾಮಧೇಯ ವಿಧಾನ, ಪ್ರಚಾರದ ಮೊದಲು ಮಕ್ಕಳ ಮೇಲೆ ಪರಿಣಾಮ ವಿಶ್ಲೇಷಣೆ, ಶಿಕ್ಷಣ ಇಲಾಖೆಯಿಂದ ನಿಯಮಿತ ಮೇಲ್ವಿಚಾರಣೆ, ಉಲ್ಲಂಘನೆಗೆ ದಂಡಾತ್ಮಕ ಕ್ರಮ ಹಾಗೂ ಜಾಗೃತಿ ಕಾರ್ಯಕ್ರಮಗಳು ಅತ್ಯವಶ್ಯಕ. ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯುರೋಪಿನ GDPR ಮತ್ತು ಅಮೆರಿಕದ COPPA ನಿಯಮಗಳು ಮಕ್ಕಳ ಡೇಟಾ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ; ಅಲ್ಲಿನ ಶಾಲೆಗಳು ಸಾಮಾನ್ಯವಾಗಿ ಅನುಮತಿ ಇಲ್ಲದೆ ಫೋಟೋ ಇಲ್ಲ ನೀತಿಯನ್ನು ಅನುಸರಿಸುತ್ತವೆ.

ಈ ಹಿನ್ನೆಲೆಯಲ್ಲೇ, ಶಿಕ್ಷಣ ಸಂಸ್ಥೆಗಳ ಪ್ರಚಾರ ಚಟುವಟಿಕೆಗಳಿಗೆ ನಿಯಂತ್ರಣ ಅಗತ್ಯವಿದೆ ಎಂಬ ಅಭಿಪ್ರಾಯ ಇದೀಗ ಬಲವಾಗಿ ವ್ಯಕ್ತವಾಗುತ್ತಿದೆ. ಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳ ಫೋಟೋ, ಅಂಕಗಳು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಬಳಸುವ ಮೊದಲು ವಿದ್ಯಾರ್ಥಿ ಹಾಗೂ ಪೋಷಕರ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಬೇಕು. ಜೊತೆಗೆ, ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ಯಾವುದೇ ಹೋಲಿಕೆ ಅಥವಾ ನಿಂದನಾತ್ಮಕ ವಿಷಯಗಳನ್ನು ಪ್ರಕಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

ಇದರೊಂದಿಗೆ, ಪ್ರತಿಯೊಂದು ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳ ಖಾಸಗಿ ಮಾಹಿತಿ ಸಂರಕ್ಷಿಸಲು ಎಂಬ ಸ್ಪಷ್ಟ ನೀತಿಯನ್ನು ರೂಪಿಸಬೇಕು. ಈ ನೀತಿಯ ಮೂಲಕ ಶಾಲೆಗಳು ವಿದ್ಯಾರ್ಥಿಗಳ ಮಾಹಿತಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ, ಬಳಸಲಾಗುತ್ತದೆ ಮತ್ತು ಸಂರಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಪಾರದರ್ಶಕತೆ ಇರಬೇಕು. ವಿಶೇಷವಾಗಿ, ವಿದ್ಯಾರ್ಥಿಗಳ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು. ಮತ್ತೊಂದೆಡೆ, ಶಾಲಾ ಆಡಳಿತಗಳು ಮತ್ತು ಶಿಕ್ಷಕರಿಗೆ ಮಕ್ಕಳ ಖಾಸಗಿತನದ ಮಹತ್ವದ ಬಗ್ಗೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಇದು ಕೇವಲ ನಿಯಮ ಪಾಲನೆಗಾಗಿ ಮಾತ್ರವಲ್ಲ, ವಿದ್ಯಾರ್ಥಿಗಳ ಮಾನವೀಯ ಗೌರವವನ್ನು ಕಾಪಾಡುವ ದೃಷ್ಟಿಯಿಂದ ಕೂಡ ಅತ್ಯಂತ ಮುಖ್ಯವಾಗಿದೆ. ರಾಜ್ಯ ಸರಕಾರ ಹಾಗೂ ಸಂಬಂಧಿತ ಇಲಾಖೆಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಬೇಕಾಗಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ವ್ಯವಸ್ಥೆ ಇರಬೇಕು. ಇದರಿಂದ ಮಾತ್ರ ಈ ಅನಾರೋಗ್ಯಕರ ಪ್ರಚಾರ ಸಂಸ್ಕೃತಿಗೆ ತಡೆ ಬೀಳಬಹುದು.

ಒಟ್ಟಿನಲ್ಲಿ, ವಿದ್ಯಾರ್ಥಿಗಳ ಸಾಧನೆಗಳನ್ನು ಗೌರವಿಸುವುದು ಅತ್ಯಂತ ಮಹತ್ವದ್ದಾಗಿದ್ದರೂ, ಅದನ್ನು ಪ್ರಚಾರದ ಸಾಧನವಾಗಿ ಬಳಸುವಾಗ ಅವರ ಖಾಸಗಿತನ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿದೆ. ಶಿಕ್ಷಣ/ಕೋಚಿಂಗ್ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯನ್ನು ಅರಿತು, ಮಕ್ಕಳ ಗೌರವ, ಖಾಸಗಿತನ ಮತ್ತು ಸಮಗ್ರ ಅಭಿವೃದ್ಧಿಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಾಗಿದೆ.

Tags

photostoppersschoolsCoaching
share
ಡಾ.ಡಿ.ಸಿ.ನಂಜುಂಡ
ಡಾ.ಡಿ.ಸಿ.ನಂಜುಂಡ
Next Story
X