Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಕಾಕ್ರೋಚ್ ಜನತಾ ಪಾರ್ಟಿ’ಯ ಸುತ್ತ...

‘ಕಾಕ್ರೋಚ್ ಜನತಾ ಪಾರ್ಟಿ’ಯ ಸುತ್ತ ಮುತ್ತ...

ಎಸ್. ಸುದರ್ಶನ್ಎಸ್. ಸುದರ್ಶನ್20 May 2026 12:13 PM IST
share
‘ಕಾಕ್ರೋಚ್ ಜನತಾ ಪಾರ್ಟಿ’ಯ ಸುತ್ತ ಮುತ್ತ...

ದೇಶದ ಸರಕಾರ, ನ್ಯಾಯಾಂಗ ಹಾಗೂ ಇತರ ಪ್ರಮುಖ ಸಾಂಸ್ಥಿಕ ವ್ಯವಸ್ಥೆಗಳು ಸಾಮಾನ್ಯ ಜನರ ಮತ್ತು ಯುವಜನತೆಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ರೀತಿಗೆ ಪ್ರತಿಯಾಗಿ ಹುಟ್ಟಿಕೊಂಡಿರುವ ಬೌದ್ಧಿಕ ಪ್ರತಿರೋಧ ಇದಾಗಿದೆ.

ದೇಶದ ತೆರಿಗೆದಾರರ ಹಣದಲ್ಲಿ ಐಷಾರಾಮಿ ಜೀವನ ಮಾಡುವ ರಾಜಕಾರಣಿಗಳ ನಡುವೆ, ಪ್ರಭುತ್ವವು ಸಾಮಾನ್ಯ ಜನರನ್ನು ಕೀಟಗಳಂತೆ ನಡೆಸಿಕೊಂಡರೆ, ಅದೇ ಕೀಟಗಳು ಒಟ್ಟಾಗಿ ಸೇರಿ ಇಡೀ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಬಲ್ಲವು ಎಂಬ ಕಟು ಸತ್ಯವನ್ನು ಈ ಚಳವಳಿ ನೆನಪಿಸುತ್ತಿದೆ.

ಚುನಾವಣೆಗಳು ಮುಗಿದು, ಐದು ರಾಜ್ಯಗಳಲ್ಲಿ ಹೊಸ ಅಥವಾ ಪುನರಾಯ್ಕೆಯಾದ ಸಿಎಂಗಳು ಪ್ರಮಾಣ ವಚನ ಸ್ವೀಕರಿಸುತ್ತಿರುವಾಗಲೇ, ಭಾರತಕ್ಕೆ ದಿಢೀರನೆ ಹೊಸದೊಂದು ‘ಪಾರ್ಟಿ’ ಲಗ್ಗೆ ಇಡುತ್ತಿದೆ.

ಸದ್ಯಕ್ಕೆ ಎಲ್ಲ ಗೆದ್ದ, ಸೋತ ದೊಡ್ಡ ದೊಡ್ಡ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳಿಗಿಂತ ಹೆಚ್ಚು ಸುದ್ದಿಯಲ್ಲಿರುವುದು ಈ ನಿನ್ನೆ ಮೊನ್ನೆಯಷ್ಟೇ ಲಾಂಚ್ ಆಗಿರುವ ಹೊಸ ಪಾರ್ಟಿ.

ಅಷ್ಟಕ್ಕೂ ಈ ಹೊಸ ಪಾರ್ಟಿಯ ಹೆಸರೇ ಬಹಳ ವಿಚಿತ್ರವಾಗಿದೆ, ಅದೇ ಈಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಮಹುವಾ ಮೊಯಿತ್ರಾರಂತಹ ಘಟಾನುಘಟಿಗಳೇ ‘‘ನನಗೂ ನಿಮ್ಮ ಪಾರ್ಟಿಯಲ್ಲಿ ಅವಕಾಶ ಕೊಡಿ’’ ಎಂದು ಕೇಳುತ್ತಿದ್ದಾರೆ.

ಆ ಪಾರ್ಟಿಯ ಹೆಸರು ‘ಕಾಕ್ರೋಚ್ ಜನತಾ ಪಾರ್ಟಿ’ ಅಂತ.

ಇತ್ತೀಚೆಗೆ ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯುವಜನತೆ, ಪತ್ರಕರ್ತರನ್ನು, ಮಾಹಿತಿ ಹಕ್ಕು ಕಾರ್ಯಕರ್ತರನ್ನು ಉದ್ಯೋಗವಿಲ್ಲದ ‘ಜಿರಳೆಗಳು’ ಮತ್ತು ‘ಪರಾವಲಂಬಿಗಳು’ ಎಂದು ಕರೆದು ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದರು.

ದೇಶದ ಪ್ರಮುಖ ಸಾಂಸ್ಥಿಕ ವ್ಯವಸ್ಥೆಗಳು ಯುವಕರ ನೋವಿಗೆ ಸ್ಪಂದಿಸುವ ಬದಲು ಅವರನ್ನು ಹೀಗೆ ಜಿರಳೆಗಳು ಎಂದು ಜರೆಯುವಾಗ, ಅದಕ್ಕೆ ಪ್ರತಿಯಾಗಿ ಹುಟ್ಟಿಕೊಂಡಿರುವ ಬೌದ್ಧಿಕ ಪ್ರತಿರೋಧದ ಸ್ವರೂಪ ಮಾತ್ರ ಬಹಳ ಆಸಕ್ತಿಕರವಾಗಿದೆ

ನಿರುದ್ಯೋಗ ಮತ್ತು ವ್ಯವಸ್ಥೆಯ ಮೇಲಿನ ತೀವ್ರ ಆಕ್ರೋಶವನ್ನು ಕೇವಲ ಎರಡು ದಿನಗಳಲ್ಲಿ ಈ ವಿಚಿತ್ರ, ವಿಭಿನ್ನ ತಂತ್ರ ಬೃಹತ್ ಆನ್‌ಲೈನ್ ಆಂದೋಲನವಾಗಿ ಪರಿವರ್ತಿಸಿದೆ

ಇಂದಿನ ಯುವಜನತೆ ಪ್ರಮುಖ ರಾಜಕೀಯ ಪಕ್ಷಗಳನ್ನು ಬಿಟ್ಟು, ‘ಕಾಕ್ರೋಚ್ ಜನತಾ ಪಾರ್ಟಿ’ ಅಥವಾ ಸಿಜೆಪಿ ಎಂಬ ಕಾಲ್ಪನಿಕ, ವಿಡಂಬನಾತ್ಮಕ ಪಕ್ಷದ ಹಿಂದೆ ಮುಗಿಬೀಳುತ್ತಿರುವುದರ ಹಿಂದೆ ಅವರ ಹತಾಶೆ ಹಾಗೂ ಕುತೂಹಲ ಕೆಲಸ ಮಾಡಿದೆ

ಆನ್‌ಲೈನ್‌ನಲ್ಲಿ ಈ ಹೊಸ ಕಾಕ್ರೋಚ್ ಜನತಾ ಪಾರ್ಟಿ ಲಾಂಚ್ ಮಾಡಿದವರು ಅಭಿಜೀತ್ ದೀಪ್ಕೆ.

ದೇಶದ ಯುವಕರು ಉದ್ಯೋಗವಿಲ್ಲದೆ, ಭವಿಷ್ಯದ ದಾರಿಯರಿಯದೆ ತತ್ತರಿಸುತ್ತಿರುವಾಗ, ಅವರ ಆಕ್ರೋಶಕ್ಕೆ ಹಾಸ್ಯದ ಮುಖವಾಡ ತೊಡಿಸಿ, ಇಡೀ ನ್ಯಾಯಾಂಗ ಮತ್ತು ರಾಜಕೀಯ ವ್ಯವಸ್ಥೆಯ ವೈಫಲ್ಯವನ್ನು ಜಗತ್ತಿಗೆ ತೋರಿಸಲು ಹೊರಟಿರುವ ಈ ಹೊಸ ಆಂದೋಲನವು ಅತ್ಯಂತ ಚಾಣಾಕ್ಷ ಹೆಜ್ಜೆಯಾಗಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊಗಳ ಪ್ರಕಾರ, ಈ ಕಾಕ್ರೋಚ್ ಜನತಾ ಪಾರ್ಟಿಯ ಅಸಲಿ ಆಕರ್ಷಣೆ ಇರುವುದು ಅದು ದೇಶದ ಮುಂದಿಟ್ಟಿರುವ ಅತ್ಯಂತ ತಮಾಷೆಯ, ಅಷ್ಟೇ ಚಿಂತನೆಗೆ ಹಚ್ಚುವ ಅದರ ಚುನಾವಣಾ ಪ್ರಣಾಳಿಕೆಯಲ್ಲಿ.

‘‘ಈ ಪ್ರಣಾಳಿಕೆಯನ್ನು ಒಮ್ಮೆ ಓದಿ, ಎರಡನೇ ಬಾರಿ ಓದಿ, ನಂತರ ಇದನ್ನು ಓದಬೇಕಾದ ಅತಿ ಮುಖ್ಯ ವ್ಯಕ್ತಿಗಳಿಗೆ ತಲುಪಿಸಿ’’ ಎಂದು ಯುವಕರು ಜಾಲತಾಣಗಳಲ್ಲಿ ಸಾರುತ್ತಿದ್ದಾರೆ.

ಈ ಪ್ರಣಾಳಿಕೆಯ ಮೊದಲ ಪ್ರಮುಖ ಆಗ್ರಹ, ದೇಶದ ಯಾವುದೇ ಮುಖ್ಯ ನ್ಯಾಯಮೂರ್ತಿಗಳಿಗೆ ನಿವೃತ್ತಿಯ ನಂತರ ಯಾವುದೇ ಕಾರಣಕ್ಕೂ ರಾಜ್ಯಸಭಾ ಸೀಟುಗಳನ್ನು ಪ್ರಸಾದದ ರೂಪದಲ್ಲಿ ನೀಡಬಾರದು.

ಇನ್ನು ದೇಶದಲ್ಲಿ ಒಂದೇ ಒಂದು ಅರ್ಹ ಮತದಾರನ ಹೆಸರನ್ನು ವೋಟರ್ ಲಿಸ್ಟ್‌ನಿಂದ ಡಿಲೀಟ್ ಮಾಡಿದರೂ ಸಹ, ದೇಶದ ಮುಖ್ಯ ಚುನಾವಣಾ ಆಯುಕ್ತರನ್ನು ನೇರವಾಗಿ ಕಟು ಕಾನೂನಾದ ‘ಯುಎಪಿಎ’ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಬೇಕು.

ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಭಾಷಣ ಬಿಡುವ ಹೆಚ್ಚಿನ ಪಕ್ಷಗಳಿಗೆ ಕುಟುಕುವಂತೆ, ಸಂಸತ್ತಿನಲ್ಲಿ ಕೇವಲ ಶೇ. 33ರಷ್ಟು ಮಾತ್ರವಲ್ಲ, ಇಡೀ ಎಲ್ಲಾ ಸಚಿವ ಸ್ಥಾನಗಳಲ್ಲಿ ಮಹಿಳೆಯರಿಗೆ ಕಡ್ಡಾಯವಾಗಿ ಶೇ. 50ರಷ್ಟು ಮೀಸಲಾತಿಯನ್ನು ನೀಡಬೇಕು ಎಂದು ಈ ಜಿರಳೆಗಳ ಪಕ್ಷದ ಪ್ರಣಾಳಿಕೆ ಹಠ ಹಿಡಿದಿದೆ.

ದೇಶದ ಮಾಧ್ಯಮ ರಂಗವನ್ನು ಕಾರ್ಪೊರೇಟ್ ಧಣಿಗಳು ನಿಯಂತ್ರಿಸುತ್ತಿರುವುದರ ವಿರುದ್ಧವೂ ಇದು ತೀಕ್ಷ್ಣವಾಗಿ ತಿರುಗಿಬಿದ್ದಿದೆ.

ದೇಶದ ಪ್ರಮುಖ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿ ಒಡೆತನದ ಎಲ್ಲಾ ಮಾಧ್ಯಮ ಸಂಸ್ಥೆಗಳ ಲೈಸೆನ್ಸ್ ಗಳನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ಆಡಳಿತ ಪಕ್ಷದ ತಾಳಕ್ಕೆ ತಕ್ಕಂತೆ ಕುಣಿಯುವ ಮಡಿಲ ಮಾಧ್ಯಮ ಆಂಕರ್‌ಗಳ ಬ್ಯಾಂಕ್ ಖಾತೆಗಳ ಬಗ್ಗೆ ತಕ್ಷಣವೇ ತನಿಖೆ ನಡೆಸಬೇಕು ಎಂಬ ಬೇಡಿಕೆಗಳು ಈ ಜಿರಳೆ ಪಕ್ಷದ ಪ್ರಣಾಳಿಕೆಯಲ್ಲಿವೆ.

ಇನ್ನು ಪ್ರಜಾಪ್ರಭುತ್ವವನ್ನು ಹರಾಜಿಗಿಟ್ಟಿರುವ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಲು, ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಜಿಗಿಯುವ ಯಾವುದೇ ಶಾಸಕ ಅಥವಾ ಸಂಸದರನ್ನು ಮುಂದಿನ 20 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮತ್ತು ಯಾವುದೇ ಸಾರ್ವಜನಿಕ ಹುದ್ದೆಯನ್ನು ಅಲಂಕರಿಸದಂತೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಕಠಿಣ ನಿಯಮವನ್ನು ತರಲಿದೆಯಂತೆ. ಗಮನಿಸಿ ಈ ಪಕ್ಷ ಅಧಿಕಾರಕ್ಕೆ ಬಂದರೆ ಐದು, ಹತ್ತು ವರ್ಷ ಅಲ್ಲ, ಪಕ್ಷಾಂತರಿಗಳಿಗೆ ಇಪ್ಪತ್ತು ವರ್ಷ ವನವಾಸ.

ಮೇಲ್ನೋಟಕ್ಕೆ ಇವೆಲ್ಲವೂ ತಮಾಷೆಯಾಗಿ ಕಂಡರೂ, ಇಂದಿನ ಭಾರತೀಯ ರಾಜಕೀಯದ ನೈತಿಕ ಕುಸಿತ ಮತ್ತು ಮಡಿಲ ಮಾಧ್ಯಮಗಳ ನಾಚಿಕೆಗೇಡು ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿವೆ.

ವೈರಲ್ ವೀಡಿಯೊಗಳಲ್ಲಿ ತೋರಿಸಿರುವಂತೆ, ಈ ವಿಲಕ್ಷಣ ಪಕ್ಷದ ಸದಸ್ಯರಾಗಲು ಇರಬೇಕಾದ ಅಧಿಕೃತ ಮಾನದಂಡಗಳು ಇಂದಿನ ಇಡೀ ಯುವ ಪೀಳಿಗೆಯ ಪರಿಸ್ಥಿತಿಯನ್ನು ಬಿಂಬಿಸುತ್ತವೆ.

ಒಬ್ಬ ವ್ಯಕ್ತಿ ಈ ಪಕ್ಷದ ಸದಸ್ಯನಾಗಬೇಕಾದರೆ ಆತನಿಗೆ ಸಿಸ್ಟಮ್ ಒದಗಿಸಿದ ಯಾವುದೇ ಉದ್ಯೋಗ ಇರಬಾರದು ಅಂದರೆ ಆತ ಕಡ್ಡಾಯವಾಗಿ ನಿರುದ್ಯೋಗಿಯಾಗಿರಬೇಕು, ಸೋಮಾರಿಯಾಗಿರಬೇಕು, ದಿನದ ಇಪ್ಪತ್ತನಾಲ್ಕು ಗಂಟೆಯೂ ಆನ್‌ಲೈನ್‌ನಲ್ಲಿ ಕಾಲ ಕಳೆಯುವ ‘ಕ್ರೋನಿಕಲಿ ಆನ್‌ಲೈನ್’ ಕಾಯಿಲೆ ಆತ ಅಥವಾ ಆಕೆಗೆ ಇರಬೇಕು. ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ ಹಾಗೂ ವೃತ್ತಿಪರವಾಗಿ ಆಕ್ರೋಶ ಹೊರಹಾಕುವ ಕಲೆ ಹೊಂದಿರಬೇಕು.

ಇಂತಹ ತಮಾಷೆ ನಿಯಮಗಳ ಮೂಲಕವೇ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಗಂಭೀರ ಸಮಸ್ಯೆಯನ್ನು ಇಡೀ ಜಗತ್ತಿಗೆ ತಲುಪಿಸುವಲ್ಲಿ ಈ ಆಂದೋಲನ ಯಶಸ್ವಿಯಾಗಿದೆ.

ಈ ಕಾಲ್ಪನಿಕ ಪಕ್ಷದ ಜನಪ್ರಿಯತೆ ಎಷ್ಟು ವೇಗವಾಗಿ ಹರಡಿತು ಎಂದರೆ, ಕೇವಲ ಎರಡೇ ದಿನಗಳಲ್ಲಿ ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಯುವಕರು ಗೂಗಲ್ ಫಾರ್ಮ್ ಭರ್ತಿ ಮಾಡಿ ಇದರ ಹೆಮ್ಮೆಯ ಸದಸ್ಯರಾಗುತ್ತಿದ್ದಾರೆ.

ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಈ ಪಕ್ಷ, ತನ್ನ ಚುನಾವಣಾ ಚಿಹ್ನೆಯಾಗಿ ಇಂದಿನ ಯುವ ಪೀಳಿಗೆಗೆ ಪ್ರಾಣವಾಗಿರುವ ‘ಮೊಬೈಲ್ ಫೋನ್’ ಅನ್ನು ಆರಿಸಿಕೊಂಡಿದೆ.

ಈ ಇಡೀ ವಿಡಂಬನಾತ್ಮಕ ಮತ್ತು ವಿಶಿಷ್ಟ ಆಂದೋಲನದ ಹಿಂದಿರುವುದು ರಾಜಕೀಯ ಸಂವಹನ ಕ್ಷೇತ್ರದಲ್ಲಿ ದಶಕದಷ್ಟು ಅನುಭವ ಹೊಂದಿರುವ ತಂತ್ರಜ್ಞ ಅಭಿಜೀತ್ ದೀಪ್ಕೆ.

ಇವರು ನಿನ್ನೆಯಷ್ಟೇ ಹುಟ್ಟಿಕೊಂಡ ಹವ್ಯಾಸಿ ಮೀಮ್ ಕ್ರಿಯೇಟರ್ ಖಂಡಿತ ಅಲ್ಲ. ದೀಪ್ಕೆ 2020ರ ದಿಲ್ಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂತ್ರಗಳನ್ನು ರೂಪಿಸಿ, ಯುವ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮೀಮ್‌ಗಳು, ಕಿರು ವೀಡಿಯೊಗಳು ಮತ್ತು ಯುವ ಪೀಳಿಗೆಗೆ ಅರ್ಥವಾಗುವ ಭಾಷೆಯಲ್ಲಿ ರಾಜಕೀಯ ಸಂದೇಶಗಳನ್ನು ರವಾನಿಸುವ ಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದ ತಂಡದಲ್ಲಿ ಇವರು ಕಾರ್ಯನಿರ್ವಹಿಸಿದ್ದರು. ನಂತರ ಆಪ್ ಪಕ್ಷದ ಸಂವಹನ ನಿರ್ದೇಶಕರಾಗಿ ಹಾಗೂ ದಿಲ್ಲಿ ಸರಕಾರದ ಶಿಕ್ಷಣ ಇಲಾಖೆಯ ಸಂವಹನ ಸಲಹೆಗಾರರಾಗಿಯೂ ಜವಾಬ್ದಾರಿ ನಿಭಾಯಿಸಿದ ಇತಿಹಾಸ ಇವರಿಗಿದೆ.

ಸದ್ಯ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಈ ಡಿಜಿಟಲ್ ಪಂಡಿತ, ವಿದೇಶದಲ್ಲಿ ಕುಳಿತೇ ಭಾರತದ ರಾಜಕೀಯ ವ್ಯವಸ್ಥೆಗೆ ಸರಿಯಾದ ಆನ್‌ಲೈನ್ ಏಟು ನೀಡಿದ್ದಾರೆ.

ಈ ‘ಕಾಕ್ರೋಚ್ ಜನತಾ ಪಾರ್ಟಿ’ ಎನ್ನುವುದು ಕೇವಲ ಒಂದು ವಾರದ ಆನ್‌ಲೈನ್ ಟ್ರೆಂಡ್ ಅಥವಾ ಕ್ಷಣಿಕ ಹಾಸ್ಯದ ವಿಷಯವಲ್ಲ. ಹಿರಿಯರು ಅಥವಾ ಸಿಸ್ಟಮ್‌ನಲ್ಲಿರುವ ‘ಅಂಕಲ್’ಗಳು ಯುವಕರನ್ನು ಜಿರಳೆಗಳು ಎಂದು ಕರೆಯುತ್ತಾ ತಮ್ಮ ಅಹಂಕಾರ ಪ್ರದರ್ಶಿಸುತ್ತಿದ್ದರೆ, ಅದಕ್ಕೆ ಕೇವಲ ಸಾಮಾನ್ಯ ವಿಮರ್ಶೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ, ಬದಲಿಗೆ ಅವರ ಈ ಅಹಂಕಾರವನ್ನು ನೋಡಿ ಇಡೀ ಜಗತ್ತೇ ನಗುವಂತೆ ಅಣಕಿಸುವುದೇ ಸರಿಯಾದ ದಾರಿ ಎಂಬುದನ್ನು ಈ ಆನ್‌ಲೈನ್ ಅಭಿಯಾನ ಸಾಬೀತುಪಡಿಸಿದೆ.

ದೇಶದ ಸರಕಾರ, ನ್ಯಾಯಾಂಗ ಹಾಗೂ ಇತರ ಪ್ರಮುಖ ಸಾಂಸ್ಥಿಕ ವ್ಯವಸ್ಥೆಗಳು ಸಾಮಾನ್ಯ ಜನರ ಮತ್ತು ಯುವಜನತೆಯ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿರುವ ರೀತಿಗೆ ಪ್ರತಿಯಾಗಿ ಹುಟ್ಟಿಕೊಂಡಿರುವ ಬೌದ್ಧಿಕ ಪ್ರತಿರೋಧ ಇದಾಗಿದೆ.

ದೇಶದ ತೆರಿಗೆದಾರರ ಹಣದಲ್ಲಿ ಐಷಾರಾಮಿ ಜೀವನ ಮಾಡುವ ರಾಜಕಾರಣಿಗಳ ನಡುವೆ, ಪ್ರಭುತ್ವವು ಸಾಮಾನ್ಯ ಜನರನ್ನು ಕೀಟಗಳಂತೆ ನಡೆಸಿಕೊಂಡರೆ, ಅದೇ ಕೀಟಗಳು ಒಟ್ಟಾಗಿ ಸೇರಿ ಇಡೀ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸಬಲ್ಲವು ಎಂಬ ಕಟು ಸತ್ಯವನ್ನು ಈ ಚಳವಳಿ ನೆನಪಿಸುತ್ತಿದೆ.

ಒಟ್ಟಿನಲ್ಲಿ, ದೇಶದ ರಾಜಕೀಯ ಪಕ್ಷಗಳ ಒಣ ಹಾಗೂ ಸುಳ್ಳು ಭಾಷಣಗಳಿಗಿಂತ ಈ ಜಿರಳೆಗಳ ಮೌನ ಮತ್ತು ವ್ಯಂಗ್ಯವೇ ಇಂದಿನ ಪ್ರಜಾಪ್ರಭುತ್ವಕ್ಕೆ ಹೊಸ ಚೈತನ್ಯ ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

Tags

Cockroach Janata Party
share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X