Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಐರಿ’ ಎಂಬ ಕುಶಲಕರ್ಮಿಗಳು

‘ಐರಿ’ ಎಂಬ ಕುಶಲಕರ್ಮಿಗಳು

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್7 Oct 2026 10:20 AM IST
share
‘ಐರಿ’ ಎಂಬ ಕುಶಲಕರ್ಮಿಗಳು

ಐರಿಗಳ ಜನಸಂಖ್ಯೆ ಸುಮಾರು ಐದರಿಂದ ಆರು ಸಾವಿರ ಇರಬಹುದು. ಐರಿಗಳು ತಮ್ಮ ಕುಶಲಕಲೆಯಿಂದ ಈಗೀಗ ವಿಮುಖರಾಗಿದ್ದಾರೆ. ಕೆಲವೇ ಕುಟುಂಬಗಳು ಮಾತ್ರ ತಮ್ಮ ಕುಲವೃತ್ತಿಯನ್ನು ಮುಂದುವರಿಸುತ್ತಿವೆ. ಚಿನ್ನದ ಕುಸುರಿ ಮಾಡಲು ಯಂತ್ರಗಳು ಬಂದಿವೆ. ಆದ್ದರಿಂದ ಐರಿ ಸಮುದಾಯದ ಚಿನ್ನದ ಕುಶಲಕಲೆಗೆ ಪೆಟ್ಟು ಬಿದ್ದಿದೆ.

ಕೊಡವ ಭಾಷಿಕ ಸಮುದಾಯಗಳಲ್ಲಿ ‘ಐರಿ’ ಎಂಬುದು ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಅತಿ ಸೂಕ್ಷ್ಮ ಸಮುದಾಯಗಳಲ್ಲಿ ಒಂದು. ‘ಐರಿ’ ಅಂದರೆ ಕನ್ನಡದಲ್ಲಿ ‘ಶಿಲ್ಪಿ’ ಎಂದರ್ಥ. ಐರಿ ಸಮುದಾಯಕ್ಕೆ ತಮ್ಮದೇ ಆದ ಅಸ್ಮಿತೆಯಿದೆ. ಕೊಡಗಿನ ಎಂಟು ಸಮುದಾಯಗಳಿಗೆ ಜಮ್ಮ ಭೂಮಿಯಿದ್ದು ಇವರಲ್ಲಿ ಐರಿಗಳೂ ಸೇರುತ್ತಾರೆ. ತೀರಾ ನಿರ್ಲಕ್ಷಿಸಲ್ಪಟ್ಟಿದ್ದ ಇಂತಹ ಕೊಡವ ಭಾಷಿಕ ಸಮುದಾಯಗಳ ಕುರಿತು ಶ್ರೀಮತಿ ಕಾಮೆಯಂಡ ಕಲ್ಪನಾ ಸಾಮ್ರಾಟ್ ಅವರು ‘ಕೊಡಗಿನ ಪಾರಂಪರಿಕ ಆಭರಣ ಹಾಗೂ ಶಸ್ತ್ರಾಸ್ತ್ರಗಳ ಹಿನ್ನೆಲೆ’ಯೆಂಬ ತಮ್ಮ ಸಂಶೋಧನಾ ಗ್ರಂಥದಲ್ಲಿ ದಾಖಲಿಸಿದ್ದಾರೆ.

ಇತಿಹಾಸಕಾರ ರಿಕ್ಟರ್ ಅಭಿಪ್ರಾಯದಂತೆ ಐರಿಗಳು ಕೊಡವ ಸಂಸ್ಕೃತಿಯವರಾದರೂ ಕುಶಲಕರ್ಮಿಗಳಾಗಿ ದೇಶಾದ್ಯಂತ ಬೇರೆಬೇರೆ ಹೆಸರುಗಳಲ್ಲಿ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡಿದ್ದಾರೆ. ಕೇರಳದಲ್ಲಿ ಆಚಾರಿ, ಕೊಲ್ಲ, ತಟ್ಟ, ಕರಾವಳಿಯಲ್ಲಿ ದೈವಜ್ಞ ಬ್ರಾಹ್ಮಣರೆನ್ನುವ ಚಿನ್ನ, ಬೆಳ್ಳಿ ಆಭರಣ ವಿನ್ಯಾಸಕರು, ತುಳುನಾಡಿನಲ್ಲಿ ವಿಶ್ವಕರ್ಮರು, ಉತ್ತರಭಾರತದಲ್ಲಿ ಭಂಡಾರ್ಕರ್ ಎನ್ನುವ ಬಂದೂಕು ಮತ್ತಿತರ ಶಸ್ತ್ರಾಸ್ತಗಳನ್ನು ಮಾಡುವ ಪರಿಣಿತರು. ದೇಶದ ನಾನಾ ಭಾಗಗಳಲ್ಲಿ ಪಂಚಾಲ, ಅಕ್ಕಸಾಲಿ, ಆಚಾರ್ಯ, ಸೊನರ್, ಪಟ್ಟರ್, ಸೂತರ್ ಮುಂತಾಗಿ ಕರೆಯುತ್ತಾರೆ. ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ಕೊಡಗಿಗೆ ಸಂಬಂಧಪಟ್ಟ ಅನೇಕ ಸಂಶೋಧನೆಗಳಲ್ಲಿ ಐರಿ ಸಮುದಾಯವನ್ನು ಸ್ಮರಿಸಿದ್ದಾರೆ.

ಚೋಯಿಲಿಯಿಂದ ಐರಿಗಳು ಕೊಡಗಿಗೆ ವಲಸೆ ಬರುವಾಗ ತಮ್ಮೊಂದಿಗೆ ತಮ್ಮ ಮನೆದೇವರಾದ ‘ಚೀರಂಭಿ’ಯನ್ನು ಕರೆತಂದರು ಎಂದು ಹೇಳುತ್ತಾರೆ. ಚೀರಂಭಿಯೊಂದಿಗೆ ನಾಗದೇವ, ಪೂದಿ, ಕೊಡಿಬೀರ, ಚೌಂಡಿದೇವತೆ, ಈಶ್ವರ, ಇಗ್ಗುತಪ್ಪ, ಕಾವೇರಿ ಮಾತೆಯನ್ನು ಇವರು ಆರಾಧಿಸುತ್ತಾರೆ. ಕೊಡಗಿನ ಬೇರೆಬೇರೆ ದೇವಾಲಯಗಳಲ್ಲಿ ಐರಿ ಸಮುದಾಯದವರು ದೇವರ ಆಯುಧಗಳನ್ನು, ಆಭರಣಗಳನ್ನು ಮಾಡುವುದರೊಂದಿಗೆ ದೇವಾಲಯಗಳ ಮರದ ಕೆತ್ತನೆಗಳನ್ನು ಮಾಡುತ್ತಾರೆ. ಇವರ ಶಿಲ್ಪಕಲೆಯ ಕೈಚಳಕ ನೋಡಬೇಕೆಂದರೆ ಕೊಡಗಿನ ಐನ್ಮನೆ ಮತ್ತು ಮುಂದ್ಮನೆಗಳನ್ನು ನೋಡಬೇಕು. ಇನ್ನು ಕೃಷಿಗೆ ಸಂಬಂಧಿಸಿದ ಸಲಕರಣೆಗಳಾದ ನೇಗಿಲು, ಕತ್ತಿ, ನೊಗ ಮುಂತಾದುವನ್ನು ತಯಾರಿಸುವಲ್ಲಿಯೂ ಐರಿಗಳು ಸಿದ್ಧಹಸ್ತರು. ಕೊಡಗಿನ ರಾಜರಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸಿಕೊಡುವವರೂ ಐರಿಗಳೇ ಆಗಿದ್ದರು. ಈ ಕಾರ್ಯವನ್ನು ಶ್ಲಾಘಿಸುತ್ತಿದ್ದ ರಾಜರು ಇವರ ಕೆಲಸವನ್ನು ಮೆಚ್ಚಿ ಇವರಿಗೆ ಉಡುಗೊರೆಯ ರೂಪದಲ್ಲಿ ಜಹಗೀರ್ ಹಾಗೂ ಉಂಬಳಿಯನ್ನು ನೀಡುತ್ತಿದ್ದರು. ಹಾಲೇರಿ ರಾಜರುಗಳು ಅರಮನೆ ನಿರ್ಮಿಸಿದಾಗ ಅರಮನೆಯ ಮರದ ಕುಸುರಿಯ ವಿನ್ಯಾಸಗಳನ್ನು ಮಾಡಿದವರು ಐರಿಗಳೇ. ಅಂತೆಯೇ ಮಡಿಕೇರಿಯ ಕೋಟೆ ನಿರ್ಮಿಸುವಲ್ಲಿಯೂ ಐರಿಗಳ ಶ್ರಮ ಮತ್ತು ಕುಶಲಕಲೆ ಡಾಳಾಗಿ ಕಾಣುತ್ತದೆ.

ಕೊಡಗಿನಲ್ಲಿ ದೊರೆತಿರುವ ಶಿಲಾಶಾಸನಗಳನ್ನು ಕೊರೆದವರೂ ಐರಿಗಳೇ. ಭಾಗಮಂಡಲದ ಭಗಂಡೇಶ್ವರ ದೇವಸ್ಥಾನದಲ್ಲಿರುವ ಶಾಸನವನ್ನು ಕೊರೆದವರೂ ಐರಿಗಳೇ ಎಂದು ಕಲ್ಪನಾ ಸಾಮ್ರಾಟ್ ಅವರು ಹೇಳುತ್ತಾರೆ.

ಪ್ರೊ.ವಿಜಯ ಪೂಣಚ್ಚ ತಂಬಂಡ ಅವರು ತಮ್ಮ ‘ಅಮರಸುಳ್ಯ ಸಂಗ್ರಾಮ 1837’ ಎಂಬ ಸಂಶೋಧನೆಯಲ್ಲಿ ಐರಿ ಸಮುದಾಯವನ್ನು ಅನೇಕ ಕಡೆ ಸ್ಮರಿಸಿದ್ದಾರೆ. ಕೊಡಗಿನ ಜಮ್ಮ ಭೂಮಿ ಹೊಂದಿದವರ ಕೋಷ್ಟಕದಲ್ಲಿ ಯಾವ ಯಾವ ತಾಲೂಕಿನಲ್ಲಿ ಐರಿ ಸಮುದಾಯಕ್ಕೆ ಜಮ್ಮ ಭೂಮಿ ಇದೆ ಎಂದು ದಾಖಲಿಸುತ್ತಾ ಐರಿ ಸಮುದಾಯದ ಕುಟುಂಬಗಳಿಗೆ ಒಟ್ಟಾರೆ 20ರಷ್ಟು ಭೂಮಿ ಇರುವುದಾಗಿ ಹೇಳುತ್ತಾರೆ. ಅಂತೆಯೇ ಕೆಂಬಟ್ಟಿ ಹೊಲೆಯರೇ ಮುಂತಾದ ಕೊಡಗಿನ ಭಾಷಿಕ ಸಮುದಾಯಗಳೊಂದಿಗೆ ಐರಿಗಳೂ ಗುಲಾಮರಾಗಿದ್ದರು. ಕೊಡಗಿನಲ್ಲಿ ಶತಮಾನಗಳಿಂದ ಜಮೀನು ಉಳುಮೆ ಮಾಡುತ್ತಿದ್ದವರಲ್ಲಿ ಐರಿಗಳೂ ಇದ್ದರು. ರಾಜರಿಂದ ಜಮ್ಮ ಭೂಮಿ ಪಡೆದುಕೊಂಡ ಸಮುದಾಯಗಳು ಕಂದಾಯ ವಿನಾಯಿತಿಗಾಗಿ ಅರಮನೆಯಲ್ಲಿ ಬಿಟ್ಟಿ ಚಾಕರಿ ಮಾಡುತಿದ್ದವರಲ್ಲಿ ಐರಿಗಳೂ ಇದ್ದರು. ಕೊಡವರು ಮಾತಾಡುವ ಭಾಷೆ, ಅನುಸರಿಸುವ ಸಂಸ್ಕೃತಿ, ಉಡುಗೆತೊಡಿಗೆಗಳಿಗೂ ಕೊಡಗು ಭಾಷಿಕರಾದ ಐರಿಗಳ ಭಾಷೆ, ಸಂಸ್ಕೃತಿ, ವೇಷಭೂಷಣಗಳಿಗೂ ಯಾವುದೇ ರೀತಿಯ ವ್ಯತ್ಯಾಸ ಇರಲಿಲ್ಲ. ಐರಿಗಳು ಕೃಷಿ ಮಾಡುವುದರೊಂದಿಗೆ ಚಿನ್ನದ ಕೆಲಸ, ಬೆಳ್ಳಿಯ ಕೆಲಸ ಮಾಡಿಕೊಂಡಿದ್ದರೂ ಅರಮನೆ ಬಿಟ್ಟಿ ಚಾಕರಿ ಮಾಡುವುದರಿಂದ ಅವರಿಗೆ ತೆರಿಗೆ ಕಟ್ಟುವುದರಿಂದಲೂ ವಿನಾಯಿತಿ ನೀಡಲಾಗಿತ್ತು.

ಐರಿಗಳಲ್ಲಿ ಚಿನ್ನದ ಕೆಲಸ ಮಾಡುವವರನ್ನು ‘ತಟ್ಟ ಐರಿ’, ಕಬ್ಬಿಣದ ಕೆಲಸ ಮಾಡುವವರನ್ನು ‘ಕೊಲ್ಲ ಐರಿ’ ಎನ್ನುತ್ತಾರೆ. ಈ ಒಳಪಂಗಡಗಳಲ್ಲಿ ವಿವಾಹ ಸಂಬಂಧಗಳಿದ್ದವು. ಆದರೆ ಇನ್ನೊಂದು ಒಳಪಂಗಡವಾದ ‘ಕಂಬಳ ಐರಿ’ ಗಳೊಂದಿಗೆ ವಿವಾಹ ಸಂಬಂಧಗಳು ಇರಲಿಲ್ಲ. ಆಶ್ಚರ್ಯವೆಂದರೆ ಇವರಲ್ಲಿ ಕುಲುಮೆ ಉಳ್ಳವರಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿತ್ತು. ಜಮ್ಮ ಭೂಮಿ ಹೊಂದಿದ್ದ ಐರಿಗಳು ತಮ್ಮ ಭೂಮಿಯಲ್ಲೂ ಹುಕುಂನಂತೆ ಜೀತ ಮಾಡಬೇಕಿತ್ತು, ಗುಲಾಮರಾಗಿಯೇ ಇರಬೇಕಿತ್ತು. ತಮಗೆ ಜಮ್ಮ ಭೂಮಿ ದಕ್ಕಬೇಕಾದರೆ ತಮ್ಮ ಕೈಯಲ್ಲಿ ಹಿಡಿ ಮಣ್ಣನ್ನು ಹಿಡಿದು ದಿವಾನ್ ಕಚೇರಿಗೆ ಒಪ್ಪಿಸಬೇಕಿತ್ತು. ಬಿಟ್ಟಿ ಚಾಕರಿ ಮಾಡದ ಐರಿ ಸಮುದಾಯದ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಿದ ವಿವರಗಳನ್ನೂ ಸಹ ಪ್ರೊ. ವಿಜಯ ಪೂಣಚ್ಚ ತಂಬಂಡ ದಾಖಲಿಸಿದ್ದಾರೆ. ಕೊಡಗಿನ ಇತರ ಬುಡಕಟ್ಟುಗಳೊಂದಿಗೆ ಹೋಲಿಸಿದಾಗ ಐರಿಗಳನ್ನು ಸವಲತ್ತು ಹೊಂದಿದ ಸಮುದಾಯ ಎಂದು ಗುರುತಿಸಲಾಗಿತ್ತು! ಕ್ರಮೇಣ ಭೂಮಿ ಕಳಕೊಂಡ ಕೆಲ ಐರಿಗಳ ಬದುಕು ಬರ್ಬರವಾಯಿತು.

ಐರಿಗಳ ಜನಸಂಖ್ಯೆ ಸುಮಾರು ಐದರಿಂದ ಆರು ಸಾವಿರ ಇರಬಹುದು. ಐರಿಗಳು ತಮ್ಮ ಕುಶಲಕಲೆಯಿಂದ ಈಗೀಗ ವಿಮುಖರಾಗಿದ್ದಾರೆ. ಕೆಲವೇ ಕುಟುಂಬಗಳು ಮಾತ್ರ ತಮ್ಮ ಕುಲವೃತ್ತಿಯನ್ನು ಮುಂದುವರಿಸುತ್ತಿವೆ. ಚಿನ್ನದ ಕುಸುರಿ ಮಾಡಲು ಯಂತ್ರಗಳು ಬಂದಿವೆ. ಆದ್ದರಿಂದ ಐರಿ ಸಮುದಾಯದ ಚಿನ್ನದ ಕುಶಲಕಲೆಗೆ ಪೆಟ್ಟು ಬಿದ್ದಿದೆ. ಐರಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ 2(ಎ)ಪಟ್ಟಿಯಲ್ಲಿ ಸೇರಿಸಲಾಗಿದೆ. ಇವರಲ್ಲಿ ಒಂದಷ್ಟು ಜನರಿಗೆ ಸರಕಾರಿ ಮತ್ತು ಖಾಸಗಿ ವಲಯಗಳಲ್ಲಿ ಉದ್ಯೋಗ ಸಿಕ್ಕಿದೆ. ಮಿಕ್ಕಂತೆ ಐರಿಗಳದೂ ಕೊಡಗಿನ ಇತರ ಭಾಷಿಕ ಸಮುದಾಯಗಳಂತೆಯೇ ದುಸ್ತರ ಬದುಕೇ ಎನ್ನುವುದು ನಿರ್ವಿವಾದ.

(ಅಂಕಣಕಾರರು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರು, ಚಿಂತಕರು)

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X