Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೊರಗ ಸಮುದಾಯದ ಯುವತಿ ಅಶ್ವಿತಾ...

ಕೊರಗ ಸಮುದಾಯದ ಯುವತಿ ಅಶ್ವಿತಾ ಬಾರ್ಕೂರುಗೆ ಪಿಎಚ್‌ಡಿ

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ13 July 2026 8:50 AM IST
share
ಕೊರಗ ಸಮುದಾಯದ ಯುವತಿ ಅಶ್ವಿತಾ ಬಾರ್ಕೂರುಗೆ ಪಿಎಚ್‌ಡಿ
ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸಾ ವಿಷಯದಲ್ಲಿ ಸಂಶೋಧನೆ; ಮೂಲನಿವಾಸಿ ಸಮುದಾಯದಲ್ಲಿ ಪಿಎಚ್‌ಡಿ ಪಡೆದ 5ನೇ ಸಾಧಕಿ

ಬಾರಕೂರು ರಂಗನಕೆರೆಯ ಅಶ್ವಿತಾ ಅವರು ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಡಾ.ನೂರ್ ಮುಬಾಶಿರ್ ಸಿ.ಎ. ಮಾರ್ಗದರ್ಶನದಲ್ಲಿ ‘ಎ ಸ್ಟಡಿ ಆನ್ ಹಾಸ್ಪಿಟಲ್ ಆಂಕ್ಸೈಂಟಿ ಆ್ಯಂಡ್ ಸೈಕೋ ಸೋಶಿಯಲ್ ಸ್ಟೇಟಸ್ ಆಫ್ ವುಮೆನ್ ಅಂಡರ್ ಗೋಯಿಂಗ್ ಕೀಮೋ ಥೆರಪಿ ಫಾರ್ ಬ್ಲಡ್ ಕ್ಯಾನ್ಸರ್’ ಎಂಬ ಮಹಾಪ್ರಬಂಧವನ್ನು ಸಮಾಜಕಾರ್ಯ ವಿಷಯದಲ್ಲಿ ಮಂಡಿಸಿ ಈ ಪ್ರಬಂಧಕ್ಕೆ ಮೈಸೂರು ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಅಶ್ವಿತಾ ಅವರು ಉಡುಪಿ ಜಿಲ್ಲೆಯ ಕೊರಗ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಣೇಶ್ ಬಾರ್ಕೂರು, ಅನಿತಾ ದಂಪತಿಯ ಕಿರಿಯ ಪುತ್ರಿ. ಶ್ರೀದುರ್ಗಾಪರಮೇಶ್ವರಿ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ರಂಗನಕೆರೆಯಲ್ಲಿ ಅಂಗನವಾಡಿಯಿಂದ ಒಂದನೇ ತರಗತಿ

ಯವರೆಗೆ, ಪ್ರಾಥಮಿಕ ಶಿಕ್ಷಣವನ್ನು ಬಾರಕೂರು ಮೇರಿನೊಲ್ ಶಾಲೆಯಲ್ಲಿ, ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನು ಬಾರಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನಲ್ಲಿ ಪಡೆದಿದ್ದ ಅಶ್ವಿತಾ, ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪದವಿ ಕಾಲೇಜು ಮತ್ತು ಅಧ್ಯಯನ ಕೇಂದ್ರದಲ್ಲಿ ಬ್ಯಾಚುಲರ್ ಆಫ್ ಸೋಶಿಯಲ್ ವರ್ಕ್ (ಬಿಎಸ್‌ಡಬ್ಲ್ಯು)ಮತ್ತು ಮಾಸ್ಟರ್ ಆಫ್ ಸೋಶಿಯಲ್ ವರ್ಕ್ (ಎಂಎಸ್‌ಡಬ್ಲ್ಯು) ಸ್ನಾತಕೋತ್ತರ ಪದವಿ ಪಡೆದಿದ್ದರು.

ಸರಕಾರ ಸ್ಪಂದಿಸಬೇಕು: ಸಂಶೋಧನಾ ಅಧ್ಯಯನ ಮಾಡುವಾಗ ನಾಲ್ಕು ಜಿಲ್ಲೆಗಳಲ್ಲಿರುವ ಆಸ್ಪತ್ರೆಗೆ ಭೇಟಿ ಮಾಡಿದ್ದ ಅಶ್ವಿತಾ, ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ನೋಡಿ ಅವರು ಹಾಗೂ ಕುಟುಂಬಿಕರು ಪಡುವ ಸಂಕಷ್ಟಗಳನ್ನು ಖುದ್ದಾಗಿ ಕಂಡು, ಮಾಹಿತಿ ಪಡೆದುಕೊಂಡಿದ್ದರು. ಸರಕಾರ ಇಂತಹ ರೋಗಿಗಳ ಚಿಕಿತ್ಸೆಗೆ ಯಾವುದೇ ಮಾನದಂಡಗಳಿಲ್ಲದೆ ಸ್ಪಂದನೆ ನೀಡಬೇಕು. ಆರ್ಥಿಕವಾಗಿ ಅವರ ನೆರವಿಗೆ ನಿಲ್ಲಬೇಕು. ಸಮಾಜವು ಅವರ ಜೊತೆಯಾಗಬೇಕು ಎಂಬ ಚಿಂತನೆಯನ್ನು ಇವರು ವ್ಯಕ್ತಪಡಿಸುತ್ತಾರೆ.

ಕೊರಗ ಸಮುದಾಯದಲ್ಲಿ ಐದನೇ ಪಿಎಚ್‌ಡಿ :

ಶತಶತಮಾನಗಳಿಂದ ಶೋಷಣೆಗೆ ಸಿಲುಕಿ ನಲುಗಿದ್ದ ತೀರಾ ಹಿಂದುಳಿದ, ಈಗಲೂ ಸಮಾಜದ ಮುಖ್ಯ ವಾಹಿನಿಗೆ ಬರಲು ಹಿಂಜರಿಯುತ್ತಿರುವ ಕರಾವಳಿಯ ಕೊರಗ ಸಮುದಾಯದಲ್ಲಿ ವಿದ್ಯಾಭ್ಯಾಸ ಪಡೆದವರ ಸಂಖ್ಯೆ ತೀರಾ ವಿರಳ. ಈಗಲೂ ಕೈಬೆರಳೆಣಿಕೆಯ ವೈದ್ಯರು, ಇಂಜಿನಿಯರ್‌ಗಳು ಸಮುದಾಯದಲ್ಲಿದ್ದಾರೆ.

ಅಶ್ವಿತಾ ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಐದನೇ ಸಾಧಕಿಯಾಗಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಹೆಗ್ಗಳಿಕೆಯೂ ಇವರಿಗಿದೆ. ಕೊರಗ ಸಮುದಾಯದಲ್ಲಿ ಇದುವರೆಗೆ ಒಟ್ಟು ನಾಲ್ವರು ವಿವಿಧ ವಿಷಯಗಳಲ್ಲಿ ಅಧ್ಯಯನ ನಡೆಸಿ ಪಿಎಚ್ಡಿ ಪಡೆದಿದ್ದಾರೆ. ಡಾ.ಬಾಬು ಕೊರಗ ಬೆಳ್ತಂಗಡಿ, ಡಾ.ಸಬೀತಾ ಗುಂಡ್ಮಿ ಹಾಗೂ ಅವರ ಪತಿ ದಿನಕರ ಕೆಂಜೂರು ಅಲ್ಲದೇ ಕಲಾವತಿ ಇದುವರೆಗೆ ಡಾಕ್ಟರೆಟ್ ಪಡೆದ ಕೊರಗ ಸಮುದಾಯದ ಸಾಧಕರು. ಇದೀಗ ಕಿರಿಯ ವಯಸ್ಸಿನಲ್ಲಿ ಅಶ್ವಿತಾ ಪಿಎಚ್ಡಿ ಪದವಿ ಪಡೆಯುವ ಮೂಲಕ ಐದನೇ ಸಾಧಕಿಯಾಗಿದ್ದು ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ.

ರಾಜಕೀಯ ಬಲವಿಲ್ಲದ ಕೊರಗ ಸಮುದಾಯ :

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಡಂಚಿನಲ್ಲಿ ತೀರಾ ಹಿಂದುಳಿದ ಸ್ಥಿತಿಯಲ್ಲಿ ಈಗಲೂ ಬದುಕಿರುವ ಮೂಲ ನಿವಾಸಿ ಕೊರಗಸಮುದಾಯದ ಜನಸಂಖ್ಯೆ 10ರಿಂದ 20 ಸಾವಿರ ನಡುವೆ ಇದೆ. ಪ್ರತಿ ಗಣತಿಯ ಸಂದರ್ಭದಲ್ಲೂ ಸಮುದಾಯದ ಜನಸಂಖ್ಯೆ ಕುಸಿಯುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಸರಕಾರದ ವಿಶೇಷ ಪ್ರಯತ್ನದ ಹೊರತಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಈ ಸಮುದಾಯ ಈಗಲೂ ಸಮಾಜದ ವಿಶೇಷ ನಿಗಾಕ್ಕೆ ಅರ್ಹವಾಗಿದೆ.

ನಗಣ್ಯ ಜನಸಂಖ್ಯೆಯ ಕಾರಣ ಇವರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಈಗಲೂ ದುರ್ಬಲರೆಂದೇ ಹೇಳಬಹುದು. ಮೀಸಲಾತಿಯೊಳಗೆ ಸಮುದಾಯ ಬಂದರೂ ರಾಜಕೀಯ ಶಕ್ತಿಯ ಬೆಂಬಲ ಇಲ್ಲದೇ ಇರುವ ಕಾರಣ, ಕೆಲವೇ ಕೆಲವು ಪದವೀಧರರಿಗೆ ಈಗಲೂ ಪೌರಕಾರ್ಮಿಕ ಹುದ್ದೆಗಿಂತ ಮೇಲಿನ ಹುದ್ದೆಪಡೆಯಲು ಹರಸಾಹಸ ಪಡಬೇಕು. ಪಿಎಚ್‌ಡಿ ಪಡೆದಿರುವ ಐವರು ಸಾಧಕರಲ್ಲಿ ಖಾಯಂ ನೌಕರಿ ಸಿಕ್ಕಿರುವುದು ಇಬ್ಬರಿಗೆ ಮಾತ್ರ ಎಂಬುದು ಅಚ್ಚರಿ ಎನಿಸಿದರೂ ನಿಜ. ಕೊರಗರ ಉದ್ಧಾರ ಎಂಬುದು ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ಬಾಯಿ ಮಾತಿಗೆ ಮಾತ್ರ ಸೀಮಿತವಾಗುಳಿದಿದೆ.

ಕೊರಗ ಸಮುದಾಯಕ್ಕೆ ಸರಕಾರ ವಿಶೇಷ ಸವಲತ್ತು, ಸೌಲಭ್ಯ ಘೋಷಿಸುತಿದ್ದರೂ ಸಮುದಾಯಕ್ಕೆ ತಲುಪದಿರಲು ಆಡಳಿತದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂಬುದು ಸುಳ್ಳಲ್ಲ. ಇಲ್ಲದಿದ್ದರೆ ಕೆಲವೇ ಸಾವಿರ ಜನಸಂಖ್ಯೆ ಸಮುದಾಯವೊಂದರ ಪದವೀಧರರಲ್ಲಿ ಅಧಿಕಾಂಶ ಮಂದಿ ಸರಕಾರಿ ನೌಕರಿಗೆ ಪರಿಗಣಿತ ವಾಗದೇ ನಿರುದ್ಯೋಗಿಗಳಾಗಿ ಇರುತ್ತಿರಲಿಲ್ಲ.

ಕೊರಗ ಸಮುದಾಯದ ಮೇಲೆ ಅಧ್ಯಯನ ಮಾಡುವ ಇಂಗಿತ ವ್ಯಕ್ತಪಡಿಸಿದ್ದೆ. ಆದರೆ ನನ್ನ ಮಾರ್ಗದರ್ಶಕರು ಈ ಟೈಟಲ್ ಸೂಕ್ತ ಎಂದು ಹುರಿದುಂಬಿಸಿದರು. ಅವರ ಮಾರ್ಗದರ್ಶನದಲ್ಲಿ ಆಂಗ್ಲ ಭಾಷೆಯಲ್ಲಿ ಮಹಾ ಪ್ರಬಂಧವನ್ನು ಮಂಡಿಸಿರುವೆ. ಕುಟುಂಬ, ಸಮುದಾಯ ಸಹಿತ, ಬೇರೆ ಸಮುದಾಯದವರು ಪಿಎಚ್‌ಡಿ ಪಡೆಯುವ ನನ್ನ ಶ್ರಮಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಕೊರಗ ಸಮುದಾಯ ಸಹಿತ ಸಣ್ಣ ಸಮುದಾಯಗಳು ಇಂದು ಬಲಿಷ್ಟರಾಗಲು ಶಿಕ್ಷಣವೇ ಪ್ರಬಲ ಅಸ್ತ್ರ. ವಿದ್ಯೆಯು ಜೀವನ ಭದ್ರತೆ ನೀಡುತ್ತದೆ. ಮುಂದೆ ಇನ್ನಷ್ಟು ಸಂಶೋಧನೆ ನಡೆಸುವುದಲ್ಲದೆ ಪ್ರಾಧ್ಯಾಪಕಿಯಾಗಿ ವೃತ್ತಿ ಮುಂದುವರಿಸುವ ಬಯಕೆಯಿದೆ.

-ಡಾ.ಅಶ್ವಿತಾ, ಕೊರಗ ಸಮುದಾಯದ ಪಿಎಚ್‌ಡಿ ಪದವೀಧರೆ

ಬಡತನ, ಅಸ್ಪೃಶ್ಯತೆ ಶಿಕ್ಷಣಕ್ಕೆ ಅಡ್ಡಿಯಲ್ಲ ಎಂಬುದನ್ನು ಅಶ್ವಿತಾ ತೋರಿಸಿದ್ದಾರೆ. ಎಲ್ಲಾ ಅಡತಡೆಗಳನ್ನು ಬದಿಗೊತ್ತಿ ಛಲ ಬಿಡದೆ ಶಿಕ್ಷಣ ಪಡೆದು, ತಮ್ಮ ಜೀವನದ ಗುರಿಯಂತೆಯೇ ಡಾಕ್ಟರೇಟ್ ಪಡೆದು ಕೊರಗ ಸಮುದಾಯಕ್ಕೆ ಹೆಮ್ಮೆ ತಂದಿದ್ದಾರೆ. ಯುವ ಜನಾಂಗಕ್ಕೆ ಅವರು ಮಾದರಿ.

-ಗಣೇಶ್ ವಿ. ಕುಂದಾಪುರ, ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ

ಮಗಳ ಸಾಧನೆ ಹೆಮ್ಮೆ ತಂದಿದೆ. ನಮ್ಮ ಸಮುದಾಯದ ಎಲ್ಲಾ ಮಕ್ಕಳು ಉನ್ನತ ಸ್ಥಾನಕ್ಕೇರಬೇಕು ಎಂಬುದು ನಮ್ಮ ಉದ್ದೇಶವಾಗಿದೆ.

-ಗಣೇಶ್ ಬಾರ್ಕೂರು, ಡಾ.ಅಶ್ವಿತಾರ ತಂದೆ

Tags

Koraga community
share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X