Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ನೆಲದನಿ
  5. ವಿಧಾನಸಭೆ ಚುನಾವಣೆ ಮಾಯಾಗೆ ಸವಾಲು

ವಿಧಾನಸಭೆ ಚುನಾವಣೆ ಮಾಯಾಗೆ ಸವಾಲು

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ17 Sept 2026 11:38 AM IST
share
ವಿಧಾನಸಭೆ ಚುನಾವಣೆ ಮಾಯಾಗೆ ಸವಾಲು

1995ರಿಂದ 2012ರವರೆಗೆ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿ. ಈ ಅವಧಿಯಲ್ಲಿ ಬರೀ ವಿವಾದಗಳನ್ನೇ ಮೈಮೇಲೆ ಎಳೆದುಕೊಂಡರು. ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಟ್ಟಕಡೆಯಲ್ಲಿರುವ ದಲಿತರ ಬದುಕಿಗೆ ಆಶಾಕಿರಣವಾಗಬೇಕಿದ್ದ ಅವರು ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನುವುದು ನಿರ್ವಿವಾದ. ಯಾವ ಸಮುದಾಯದ ಬೆಂಬಲದಿಂದ ಅಧಿಕಾರಕ್ಕೆ ಬಂದರೋ ಆ ಜನರ ಬದುಕನ್ನು ಹಸನುಗೊಳಿಸಲಿಲ್ಲ. ಸ್ವಾಭಿಮಾನ ಬಡಿದೆಬ್ಬಿಸಲಿಲ್ಲ. ಅಧಿಕಾರದ ಅಮಲಿನಲ್ಲಿ ಮೈಮರೆತರು.

1995ರ ಜೂನ್ ತಿಂಗಳು. ಉತ್ತರ ಪ್ರದೇಶದ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ತೆರೆಯಿತು. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಮುಲಾಯಂ ಸಿಂಗ್ ಸರಕಾರಕ್ಕೆ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ನೀಡಿದ್ದ ಬೆಂಬಲ ಹಿಂಪಡೆಯಿತು. ಒಂದೂವರೆ ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ ಸರಕಾರ ಪತನಗೊಂಡಿತು. ಮರು ದಿನವೇ ಬಿಜೆಪಿ ಹೊರಗಿನ ಬೆಂಬಲದಿಂದ ಮಾಯಾವತಿ ಸರಕಾರ ಮಾಡಿದರು. ದೇಶದ ಮೊದಲ ದಲಿತ ಮಹಿಳಾ ಮುಖ್ಯಮಂತ್ರಿ ಎಂಬ ದಾಖಲೆ ಬರೆದರು. ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಹೊರಟಿದ್ದ ಮಹಿಳೆ, ‘ದಲಿತ್ ಐಕಾನ್’ ಕಾನ್ಶೀರಾಮ್ ಸಂಪರ್ಕಕ್ಕೆ ಬಂದು ಮುಖ್ಯಮಂತ್ರಿ ಗದ್ದುಗೆ ಏರಿದ್ದು ಅದೃಷ್ಟವಲ್ಲದೆ ಮತ್ತೇನಲ್ಲ. ಮುಂದೆ 2003ರವರೆಗೆ ಬಿಎಸ್‌ಪಿ-ಬಿಜೆಪಿ ಜುಗಲ್ಬಂದಿ. ನಡುನಡುವೆ ರಾಷ್ಟ್ರಪತಿ ಆಳ್ವಿಕೆ. ಇದು ಬಾಬರಿ ಮಸೀದಿ ನೆಲಸಮದ ನಂತರ ಉತ್ತರ ಪ್ರದೇಶದಲ್ಲಿ ಕಂಡುಬಂದ ರಾಜಕೀಯ ಚಿತ್ರಣ.

ಬಹುಜನ ಸಮಾಜವನ್ನೇ ನಂಬಿ ರಾಜಕಾರಣ ಮಾಡುತ್ತಿರುವ ಬಿಎಸ್‌ಪಿ 2007ರ ಅಸೆಂಬ್ಲಿ ಚುನಾವಣೆಯಲ್ಲಿ 206 ಸ್ಥಾನ ಗೆದ್ದು ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಸರಕಾರ ಮಾಡಿತು. ಐದು ವರ್ಷ ಮಾಯಾವತಿ ಅವರೇ ಮುಖ್ಯಮಂತ್ರಿ. ಮುಂದಿನ ಅವಧಿ (2012) ಸಮಾಜವಾದಿ ಪಕ್ಷದ ಸರದಿ. 224 ಸ್ಥಾನಗಳೊಂದಿಗೆ ಸಮಾಜವಾದಿ ಪಕ್ಷ ಸರಕಾರ ಅಧಿಕಾರ ಹಿಡಿಯಿತು. ಕಳೆದ 9 ವರ್ಷಗಳಿಂದ ಬಿಜೆಪಿಯ ಯೋಗಿ ಆದಿತ್ಯನಾಥರದ್ದೇ ದರ್ಬಾರು. ಬುಲ್ಡೋಜರ್ ಕಾರುಬಾರು!

2012ರ ಬಳಿಕ ನಡೆದಿರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸೋಲಿನ ಮೇಲೆ ಸೋಲು ಕಂಡ ಮಾಯಾವತಿ ಆನಂತರ ಜನರ ಕಣ್ಣಿಗೇ ಬೀಳಲಿಲ್ಲ. ಮಾಯಾವತಿ ಎಲ್ಲಿದ್ದಾರೆ; ಅನಾರೋಗ್ಯದಿಂದ ಬಳಲಿದ್ದಾರೆಯೇ; ಚುನಾವಣೆ ಸೋಲಿನಿಂದ ಸೊರಗಿದ್ದಾರೆಯೇ; ಕೊರಳಿಗೆ ಸುತ್ತಿಕೊಂಡಿರುವ ಭ್ರಷ್ಟಾಚಾರ ಆರೋಪಗಳಿಂದ ಕಂಗೆಟ್ಟಿದ್ದಾರೆಯೇ; ಪಕ್ಷದೊಳಗಿನ ಗುಂಪುಗಾರಿಕೆಗೆ ಬೇಸತ್ತಿದ್ದಾರೆಯೇ ಹೀಗೆ ಹತ್ತು-ಹಲವು ಸಂಶಯ ಮೂಡಿದ್ದು ಸಹಜ, ಯಾವುದಕ್ಕೂ ಸ್ಪಷ್ಟ ಉತ್ತರವಿರಲಿಲ್ಲ.

ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ‘ಅಜ್ಞಾತವಾಸ’ದಿಂದ ಹೊರಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅನಾರೋಗ್ಯದ ವದಂತಿಯನ್ನು ಅಲಗಳೆದಿದ್ದಾರೆ. ಕುಟುಂಬದೊಳಗಿನ ‘ಶೀತಲ ಸಮರ’ ಕುರಿತು ಪ್ರಸ್ತಾಪಿಸಿದ್ದಾರೆ. ‘ಅನಾರೋಗ್ಯ ವದಂತಿ ಪಿತೂರಿಯ ಭಾಗ’ ಎಂದು ದೂರಿದ್ದಾರೆ. ಈ ಕಾರಣಕ್ಕೆ ಸೋದರ ಆನಂದ್ ಅವರ ಪುತ್ರ ಆಕಾಶ್ ಆನಂದ್, ಮತ್ತೊಬ್ಬ ಪುತ್ರ ಇಶಾನ್ ಆನಂದ್ ಅವರನ್ನು ಪಕ್ಷದಿಂದ ಹೊರ ದಬ್ಬಿದ್ದಾರೆ. ಆಕಾಶ್ ಅವರ ಮಾವ (ಪತ್ನಿ ಅಪ್ಪ) ಅಶೋಕ್ ಸಿದ್ಧಾರ್ಥ್ ಅವರನ್ನು ಮೊದಲೇ ಉಚ್ಚಾಟಿಸಿದ್ದಾರೆ.

ಒಂದು ಕಾಲಕ್ಕೆ ಅಶೋಕ್ ಸಿದ್ಧಾರ್ಥ್ ಬಿಎಸ್‌ಪಿಯಲ್ಲಿ ನಂಬರ್ ಟು ಸ್ಥಾನದಲ್ಲಿದ್ದವರು. ಸೋದರಳಿಯ ಆಕಾಶ್ ಆನಂದ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಮಾಯಾವತಿ ಘೋಷಿಸಿದ್ದರು. ಕಾನ್ಶೀರಾಮ್ ಸೈಕಲ್ ತುಳಿದು, ಬೆವರು ಬಸಿದು ಕಟ್ಟಿದ ಪಕ್ಷವೀಗ ಮಾಯಾವತಿ ಕುಟುಂಬದ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಬಹುಜನ ಸಮಾಜದ ಸ್ವತ್ತಾಗಬೇಕಿದ್ದ ಪಕ್ಷ ‘ಫ್ಯಾಮಿಲಿ ಪ್ರೈವೇಟ್ ಲಿ.’ ಕಂಪೆನಿ ಆಗುತ್ತಿರುವುದು ಪ್ರಜಾಪ್ರಭುತ್ವದ ವಿಪರ್ಯಾಸ.

ಮುಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ. ಈ ಕಾರಣಕ್ಕೆ ಮಾಯಾವತಿ ಬಿಸಿಲಿಗೆ ಬಂದಿದ್ದಾರೆ. ಅದೂ ಕುಟುಂಬ ಕಲಹದ ಸಂದರ್ಭದಲ್ಲಿ. ಈ ಅವಕಾಶ ಬಳಸಿಕೊಳ್ಳಲು ಬೇರೆ ಪಕ್ಷಗಳು ಪ್ರಯತ್ನಿಸುತ್ತಿವೆ. ಅದು ಸಾಧ್ಯವೇ ಎಂದು ಈಗಲೇ ಹೇಳಲಾಗದು. ಬಿಎಸ್‌ಪಿಯಲ್ಲಿ ಮಾಯಾವತಿ ಅವರನ್ನು ಹೊರತುಪಡಿಸಿದರೆ ಪಕ್ಷ ಮುನ್ನಡೆಸಲು ಮತ್ತೊಬ್ಬ ನಂಬಿಕಸ್ಥ ನಾಯಕನಿಲ್ಲ. ಈ ಪರಿಸ್ಥಿತಿಯಲ್ಲಿ ಮಾಯಾವತಿ ನೋಡುತ್ತಿರುವುದು ತಮ್ಮ ಕುಟುಂಬದತ್ತ. ಸೋದರ ಸೊಸೆ (ಆನಂದ್ ಅವರ ಮಗಳು) ದೀಪಿಕಾ ಅವರನ್ನು ಮಾಯಾ ಅವಲಂಬಿಸುವ ಸುಳಿವು ನೀಡಿದ್ದಾರೆ.

ಮಾಯಾವತಿ ಇಷ್ಟು ವರ್ಷ ಬಹಿರಂಗವಾಗಿ ಕಾಣಿಸಿಕೊಳ್ಳದಿರಲು ಬೇರೇನು ಕಾರಣ ಇರಬಹುದು? ಭ್ರಷ್ಟಾಚಾರ ಆರೋಪಗಳ ತನಿಖೆಗೆ ಹೆದರಿ ಮನೆಯೊಳಗೆ ಕುಳಿತಿದ್ದರೇ? ಕೇಂದ್ರ-ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಈ ಪ್ರಕರಣಗಳನ್ನು ಬಳಸಿಕೊಂಡು ಅವರನ್ನು ಮೂಲೆಗೆ ತಳ್ಳಿತೇ? ಈಗ ಮೈಕೊಡವಿ ಎದ್ದಿರುವ ಬಿಎಸ್‌ಪಿ ನಾಯಕಿ ಯಾವ ಪಕ್ಷಕ್ಕೆ ಲಾಭ ಮಾಡಿಕೊಡಲು ಚುನಾವಣೆಗೆ ಸಜ್ಜಾಗುತ್ತಿದ್ದಾರೆ? ಅವರನ್ನು ಆಡಿಸಲು ಹೊರಟಿರುವ ಸೂತ್ರಧಾರ ಯಾರು? ಎಲ್ಲಿದ್ದಾರೆ? ಲಕ್ನೋದಲ್ಲೋ? ದಿಲ್ಲಿಯಲ್ಲೋ?

1995ರಿಂದ 2012ರವರೆಗೆ ಮಾಯಾವತಿ ನಾಲ್ಕು ಬಾರಿ ಮುಖ್ಯಮಂತ್ರಿ. ಈ ಅವಧಿಯಲ್ಲಿ ಬರೀ ವಿವಾದಗಳನ್ನೇ ಮೈಮೇಲೆ ಎಳೆದುಕೊಂಡರು. ಶ್ರೇಣೀಕೃತ ವ್ಯವಸ್ಥೆಯಲ್ಲಿ ಕಟ್ಟಕಡೆಯಲ್ಲಿರುವ ದಲಿತರ ಬದುಕಿಗೆ ಆಶಾಕಿರಣವಾಗಬೇಕಿದ್ದ ಅವರು ಅಧಿಕಾರವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನುವುದು ನಿರ್ವಿವಾದ. ಯಾವ ಸಮುದಾಯದ ಬೆಂಬಲದಿಂದ ಅಧಿಕಾರಕ್ಕೆ ಬಂದರೋ ಆ ಜನರ ಬದುಕನ್ನು ಹಸನುಗೊಳಿಸಲಿಲ್ಲ. ಸ್ವಾಭಿಮಾನ ಬಡಿದೆಬ್ಬಿಸಲಿಲ್ಲ. ಅಧಿಕಾರದ ಅಮಲಿನಲ್ಲಿ ಮೈಮರೆತರು. ಸಾವಿರಾರು ಕೋಟಿ ಹಣವನ್ನು ಲಕ್ನೋ, ನೊಯ್ಡಾ ಮತ್ತಿತರ ನಗರಗಳ ಪಾರ್ಕ್ ಮತ್ತು ಉದ್ಯಾನಗಳಲ್ಲಿ ಪಕ್ಷದ ಚಿಹ್ನೆ ಆನೆ, ಡಾ.ಅಂಬೇಡ್ಕರ್, ಕಾನ್ಶೀರಾಮ್ ಮತ್ತು ತಮ್ಮದೇ ಪ್ರತಿಮೆಗಳ ಸ್ಥಾಪನೆಗೆ ಬಳಸಿದರು. ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರವೂ ಪ್ರಾಣಿ ಕೊಟ್ಟಿಗೆಗಳಿಗಿಂತಲೂ ಕಡೆಯಾಗಿರುವ ದಲಿತರ ಕೇರಿಗಳ ಅಭಿವೃದ್ಧಿಗೆ ವಿನಿಯೋಗಿಸಲಿಲ್ಲ. ಅಸಹಾಯಕ ಸಮುದಾಯದ ಶಿಕ್ಷಣ-ಉದ್ಯೋಗಕ್ಕೆ ವೆಚ್ಚ ಮಾಡಲಿಲ್ಲ. ಬಹುಜನ ಸಮಾಜ ಅಧಿಕ ಸಂಖ್ಯೆಯಲ್ಲಿರುವ ಗ್ರಾಮಗಳು ಹಾಗೂ ಪ್ರದೇಶಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಿಸಲಿಲ್ಲ. ಘನತೆ-ಗೌರವದಿಂದ ಬದುಕುವ ವಾತಾವರಣ ಕಲ್ಪಿಸಲಿಲ್ಲ. ಯಾಕೆಂದು ಅಮಾಯಕ ಸಮಾಜವೂ ಕೇಳಲಿಲ್ಲ. ‘ಮಾಯಾವತಿ ಎಲ್ಲ ಮಾಡಿದ್ದಾರೆ’ ಎಂದು ಅವರ ಪಕ್ಷದ ನಾಯಕರು ಹೇಳಿಕೊಳ್ಳುತ್ತಿದ್ದರೂ ವಾಸ್ತವ ಬೇರೆ.

ಜಾತಿ ಬಿಟ್ಟು ಉತ್ತರ ಪ್ರದೇಶದ ರಾಜಕಾರಣವಿಲ್ಲ. ಒಂದೊಂದು ಪಕ್ಷಗಳ ಬೆನ್ನಿಗೂ ಒಂದೊಂದು ಜಾತಿ. ಬಿಎಸ್‌ಪಿಗೆ ಜಾಟವರು-ಜಾಟವೇತರರನ್ನು ಒಳಗೊಂಡ ಬಹುಜನ ಸಮಾಜವಿದೆ. ಸಮಾಜವಾದಿ ಪಕ್ಷಕ್ಕೆ ಯಾದವರು-ಇತರ ಹಿಂದುಳಿದ ವರ್ಗಗಳಿವೆ. ಬಿಜೆಪಿಗೆ ಬ್ರಾಹ್ಮಣ ಮತ್ತಿತರ ಮೇಲ್ಜಾತಿಗಳಿವೆ. ಕೆಲವೊಮ್ಮೆ ಜಾತಿ ಗೋಡೆಗಳು ಒಡೆದಾಗ ಅದರ ಲಾಭ ಬೇರೆ ಪಕ್ಷಗಳ ಪಾಲಾಗುತ್ತವೆ. ಅಚ್ಚುಕಟ್ಟಾಗಿ ಜಾತಿ ಸಮೀಕರಣ ಮಾಡಿದ ಪಕ್ಷಗಳು ಅಧಿಕಾರ ಹಿಡಿಯುತ್ತವೆ. ಬಿಎಸ್‌ಪಿಗೆ ಎದುರಾಗಿದ್ದು ಇಂತಹದೇ ಸ್ಥಿತಿ. ಬಿಎಸ್‌ಪಿ ಕಟ್ಟಿದ್ದ ಬಹುಜನ ಸಮಾಜದ ಕೋಟೆ 2012ರಲ್ಲಿ ಕುಸಿದಿದೆ, ಪುನಃ ಕಟ್ಟುವುದು ಕಷ್ಟ. ಅದರ ಮತಗಳೀಗ ಬೇರೆ ಬೇರೆ ಪಕ್ಷಗಳಿಗೆ ಚದುರಿಹೋಗಿವೆ. 1993ರ ಚುನಾವಣೆಯಲ್ಲಿ ಶೇ. 11.8ರಷ್ಟು ಮತ ಪಡೆದಿದ್ದ ಬಿಎಸ್‌ಪಿ ಎರಡು ದಶಕದ ಬಳಿಕ ಹೆಚ್ಚುಕಡಿಮೆ ಅಲ್ಲಿಗೇ ಬಂದು ನಿಂತಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಶೇ. 12.88ರಷ್ಟು ಮತ ಗಳಿಸಿದೆ. ಸೀಟುಗಳಲ್ಲಿ ಭಾರೀ ವ್ಯತ್ಯಾಸವಾಗಿದೆ. ಆಗ 67 ಕ್ಷೇತ್ರಗಳಲ್ಲಿ ಗೆದ್ದಿತ್ತು. ಈಗ ಗೆದ್ದಿರುವುದು ಬರೀ ಒಂದು ಕ್ಷೇತ್ರದಲ್ಲಿ. 2007ರಲ್ಲಿ ಬಹುಜನ ಸಮಾಜ, ಬ್ರಾಹ್ಮಣರು, ಮುಸ್ಲಿಮರ ಸಮೀಕರಣದಲ್ಲಿ ಮಾಯಾವತಿ ಚುನಾವಣೆ ಎದುರಿಸಿದ್ದರು. 206 ಸ್ಥಾನ ಪಡೆದರು. ಆಗ ಅವರಿಗೆ ಬಂದಿದ್ದು ಶೇ. 30.43ರಷ್ಟು ಮತಗಳು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಮತ ಪ್ರಮಾಣ ಇನ್ನಷ್ಟು ಕುಸಿದಿದೆ. ಶೇ. 9.39 ಮತ ಪಡೆದರೂ ಒಂದೂ ಕ್ಷೇತ್ರ ಗೆಲ್ಲಲಾಗಿಲ್ಲ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು 43 ಸ್ಥಾನ ಪಡೆದಿದೆ. ಇವೆರಡೂ ಪಕ್ಷಗಳ ಮತ ಪ್ರಮಾಣ ಶೇ. 43ಕ್ಕಿಂತಲೂ ಅಧಿಕ. ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಗ್ಗಿದೆ. ಬಿಜೆಪಿ ಶೇ. 33.59 ಮತಗಳೊಂದಿಗೆ 33 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿದೆ.

ಉತ್ತರ ಪ್ರದೇಶದ ಜಾತಿ ಲೆಕ್ಕಾಚಾರ ಹಾಕಿದರೆ, ಬಹುಜನ ಸಮಾಜ (ಜಾಟವರು ಶೇ. 12-ಜಾಟವೇತರರು ಶೇ. 10)ಶೇ. 22. ಯಾದವರು ಶೇ. 10, ಮುಸ್ಲಿಮರು ಶೇ. 20, ಬ್ರಾಹ್ಮಣರು ಶೇ. 10, ಠಾಕೂರರು ಶೇ. 8, ಕುರ್ಮಿ ಶೇ. 5, ಇತರ ಹಿಂದುಳಿದ ವರ್ಗ ಶೇ. 25. ಲೋಕಸಭೆ ಚುನಾವಣೆಯಲ್ಲಿ ಅಖಿಲೇಶ್ ಹೊಸ ಪ್ರಯೋಗ ಮಾಡಿದ್ದಾರೆ. ಪಿಚಡಾ, ದಲಿತ, ಅಲ್ಪಸಂಖ್ಯಾತರನ್ನು ಬೆಸೆದಿದ್ದಾರೆ. ಅವರ ‘ಪೀಡಾ’ ಪ್ರಯೋಗ ಯಶಸ್ವಿಯಾಗಿದೆ.

ವಿಧಾನಸಭೆ ಚುನಾವಣೆ ಎಲ್ಲ ಪಕ್ಷಗಳಿಗೂ ಸವಾಲು. ಬಿಜೆಪಿ ಮತ್ತು ಎಸ್‌ಪಿಗಿಂತ ಮಾಯಾವತಿ ಹಾದಿ ಕಠಿಣ. ಚದುರಿರುವ ಮತಗಳನ್ನು ಒಗ್ಗೂಡಿಸುವರೇ? ಕಳೆದು ಹೋಗಿರುವ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವರೇ? ಇದು ಸಾಧ್ಯವಾದರೆ ಬಿಎಸ್‌ಪಿ ರಾಜಕೀಯದ ಮುಖ್ಯ ವಾಹಿನಿಗೆ ಪುನಃ ಬರಬಹುದು.

(ಅಂಕಣಕಾರರು ಹಿರಿಯ ಪತ್ರಕರ್ತರು)

Tags

Assembly elections
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X