Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಜಯಪುರದ ಇಬ್ರಾಹಿಂ ರೋಜಾ ಸಂರಕ್ಷಣೆಗೆ...

ವಿಜಯಪುರದ ಇಬ್ರಾಹಿಂ ರೋಜಾ ಸಂರಕ್ಷಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ಖಾಜಾಮೈನುದ್ದೀನ್ ಪಟೇಲ್ಖಾಜಾಮೈನುದ್ದೀನ್ ಪಟೇಲ್24 Sept 2025 11:49 AM IST
share
ವಿಜಯಪುರದ ಇಬ್ರಾಹಿಂ ರೋಜಾ ಸಂರಕ್ಷಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ

ವಿಜಯಪುರ : ಯುಮನಾ ನದಿ ದಂಡೆಯ ಮೇಲೆ ಶುಭ್ರ ಬಿಳಿಬಣ್ಣದ ಸಂಗಮರಮರಿ ಕಲ್ಲುಗಳಿಂದ ಕಂಗೊಳಿಸುವ ಮನಮೋಹಕ ಸ್ಮಾರಕ ತಾಜ್ ಮಹಲ್‌ಗೆ ಸ್ಪೂರ್ತಿಯಾದ ವಿಜಯಪುರದ ಇಬ್ರಾಹೀಂ ರೋಜಾ ಸಂರಕ್ಷಣೆಗೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಸ್ಮಾರಕದ ಸುತ್ತ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ನಿಂತರೂ ಅದನ್ನು ಹೊರ ಹಾಕುವ ಕಾರ್ಯ ಇಂದಿಗೂ ನಡೆದಿಲ್ಲ ಎಂಬುದು ಸಾರ್ವಜನಿಕರ ಆರೋಪ.

ನಗರದ ಐತಿಹಾಸಿಕ ಇಬ್ರಾಹೀಂ ರೋಜಾ 400 ವರ್ಷ ಹಳೆಯದು. ಈಗ ಕಟ್ಟಡಕ್ಕೆ ಜಲದಿಗ್ಭಂಧನ ಆತಂಕ ಸೃಷ್ಟಿಸಿರುವುದಂತೂ ಸುಳ್ಳಲ್ಲ. ಒಂದು ಮನೆಯಲ್ಲಿ ನೀರು ನಿಂತರೆ ಪಾಯಾಕ್ಕೆ ನೀರು ತಲುಪಿ ಮಣ್ಣಿನ ಸವಕಳಿ ಉಂಟಾಗಿ ಕಟ್ಟಡಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. 400 ವರ್ಷಗಳಿಗೂ ಅಧಿಕ ಪುರಾತನವಾದ ಈ ಕಟ್ಟಡಕ್ಕೆ ದೊಡ್ಡ ಪ್ರಮಾಣದಲ್ಲಿ ಅದರಲ್ಲೂ ಎರಡು ತಿಂಗಳುಗಳಿಗೂ ಹೆಚ್ಚು ಕಾಲ ನೀರು ನಿಂತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿ ಮಣ್ಣಿನ ಸವಕಳಿಯಾದರೆ ಕಟ್ಟಡಕ್ಕೂ ಅಪಾಯ ಎಂಬ ಆತಂಕವನ್ನು ಸಾರ್ವಜನಿಕರು ಹೊರಹಾಕಿದ್ದಾರೆ.

ಪ್ರವೇಶ ದ್ವಾರದ ಉದ್ಯಾನವನ ದಾಟಿ ಪ್ರಮುಖ ಕಟ್ಟಡಕ್ಕೆ ಒಳ ಪ್ರವೇಶಿಸಿದರೆ ಎಡ ಬಲದ ಉದ್ಯಾನವನ ಸಂಪೂರ್ಣ ನೀರಿನಲ್ಲಿ ಮುಳುಗಿದೆ. ಕುದುರೆ ಕಟ್ಟುವ ಸ್ಥಳ ಸಂಪೂರ್ಣ ಮುಳುಗಡೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ನಿಂತಿರುವ ನೀರಿನಲ್ಲಿ ಶೀಲಿಂಧ್ರಗಳು, ಪಾಚಿ ಬೆಳೆದು ಹೋಗಿವೆ. ಇಬ್ರಾಹೀಂ ರೋಜಾ ಆವರಣದಲ್ಲಿ ಕಪ್ಪು ಶಿಲೆಯ ಸಮಾಧಿ ಸಂಪೂರ್ಣ ಜಲಾವೃತವಾಗಿದೆ. ಗಬ್ಬು ವಾಸನೆ ಸಹ ಅಧಿಕವಾಗಿದ್ದು ಪ್ರವಾಸಿಗರು ಮೂಗು ಮುಚ್ಚಿ ಕೊಂಡು ಇಬ್ರಾಹೀಂ ರೋಜಾ ದರ್ಶನ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

ವಾಸ್ತುಶಿಲ್ಪದ ವೈಭವ: ಗೋಳಗುಮ್ಮಟದಂತೆ ಇಬ್ರಾಹೀಂ ರೋಜಾ ತನ್ನದೇ ಆದ ವೈಶಿಷ್ಯತೆ ಹೊಂದಿದೆ. ಸೂಕ್ಷ್ಮ ಕೆತ್ತನೆಯ ವಾಸ್ತುಶಿಲ್ಪದ ವೈಭವವನ್ನು ಇಬ್ರಾಹೀಂ ರೋಜಾದಲ್ಲಿ ಕಾಣಬಹುದಾಗಿದೆ. 1626 ರಿಂದ 1627ರ ಅವಧಿಯಲ್ಲಿ ಬಿಜಾಪುರದ ಆಲ್ ಶಾಹಿ ಮನೆತನದ 2ನೇ ಇಬ್ರಾಹಿಂ ಆದಿಲ್ ಶಾಹಿ ತನ್ನ ರಾಣಿ ಸುಲ್ತಾನಾಳ ನೆನಪಿಗಾಗಿ ಕಟ್ಟಿಸಿದ ಕಟ್ಟಡ ಇಸ್ಲಾಮಿಕ್ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿ ನಿಂತಿದೆ. ಎದುರಿನಲ್ಲಿ ಭವ್ಯ ಮಸೀದಿ ಇದೆ. ಮಸೀದಿ ಮತ್ತು ಸಮಾಧಿ ಒಂದೇ ರೀತಿಯ ವಿನ್ಯಾಸ ವೈಶಿಷ್ಟ್ಯಗಳನ್ನು ಹಂಚಿಕೊಂಡಿದೆ. ಸಮಾಧಿ ಸಂಕೀರ್ಣದಲ್ಲಿ ಕಲಾತ್ಮಕ ಕರಕುಶಲತೆಯನ್ನು ಕೇಂದ್ರಿಕರಿಸಲಾಗಿದೆ.

ಸಮಾಧಿ ಮತ್ತು ಮಸೀದಿ ಎರಡೂ ಗುಂಡಗಿನ ಗುಮ್ಮಟವನ್ನು ಹೊಂದಿದ್ದು, ಇದು ಕಮಲದ ದಳಗಳ ವಿಶಿಷ್ಟವಾದ ನೆಲೆಯನ್ನು ಹೊಂದಿದೆ. ಆದಾಗ್ಯೂ, ಸಮಾಧಿಯ ಗುಮ್ಮಟವು ವ್ಯಾಸದಲ್ಲಿ ದೊಡ್ಡದಾಗಿದೆ. ಸಮಾಧಿಯು ನಾಲ್ಕು ಮೂಲೆಯ ಗುಮ್ಮಟಾಕಾರದ ಗೋಪುರಗಳನ್ನು ಹೊಂದಿದ್ದು, ಅವುಗಳ ಕೆಳಗೆ ಒಂದೇ ರೀತಿಯ ಕಮಾನುಗಳ ಮೇಲೆ ಪ್ರತಿ ಬದಿಯಲ್ಲಿ ಆರು ಸಣ್ಣ ಗೋಪುರಗಳನ್ನು ಹೊಂದಿದೆ. ಮೂರು ಮಧ್ಯದ ಕಮಾನುಗಳು ಗಾತ್ರದಲ್ಲಿ ಬಹುತೇಕ ಒಂದೇ ಆಗಿರುವುದು ವಿಶೇಷ.

ಐತಿಹಾಸಿಕ ವಿಜಯಪುರ ನಗರ ರೋಮ್ ನಗರವನ್ನು ಮೀರಿಸುವಂತಹದ್ದು, ಆದರೆ ಸ್ಮಾರಕಗಳ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ದಿನನಿತ್ಯ ಬರುವ ಪ್ರವಾಸಿಗರು ಸ್ಥಾರಕ ಅವ್ಯವಸ್ಥೆಯನ್ನು ನೋಡಿ ಮರುಕಪಡುವಂತಾಗಿದೆ. ಇಬ್ರಾಹೀಂ ರೋಜಾದಲ್ಲಿ ಎರಡು ತಿಂಗಳುಗಳಿಂದ ನೀರು ನಿಂತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ನೋವಿನ ಸಂಗತಿ.

-ದೇವಕಾಂತ ಬಿಜ್ಜರಗಿ, ಸಾಮಾಜಿಕ ಚಿಂತಕರು, ವಿಜಯಪುರ

share
ಖಾಜಾಮೈನುದ್ದೀನ್ ಪಟೇಲ್
ಖಾಜಾಮೈನುದ್ದೀನ್ ಪಟೇಲ್
Next Story
X