Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸೈಬರ್ ವಂಚನೆ ಬಗ್ಗೆ ಧಾರ್ಮಿಕ...

ಸೈಬರ್ ವಂಚನೆ ಬಗ್ಗೆ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ

ವಾರ್ತಾಭಾರತಿವಾರ್ತಾಭಾರತಿ2 March 2026 8:00 AM IST
share
ಸೈಬರ್ ವಂಚನೆ ಬಗ್ಗೆ ಧಾರ್ಮಿಕ ಕೇಂದ್ರಗಳಲ್ಲಿ ಜಾಗೃತಿ
ಮಸೀದಿ, ದೇವಸ್ಥಾನ, ಚರ್ಚ್‌ಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಮಂಗಳೂರು ಪೊಲೀಸರು

ಮಂಗಳೂರು, ಮಾ.1: ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಿದಷ್ಟೂ ವಂಚನೆ ಪ್ರಕರಣಗಳು ಬೆಳಕಿಗೆಬರುತ್ತಿರುವುದು ಕಂಡುಬರುತ್ತಿದೆ. ಅದರಲ್ಲೂ ಮಂಗಳೂರಿನಂ ತಹ ನಗರದ ಸುಶಿಕ್ಷಿತರೂ ಈ ವಂಚನೆಯ ಬಲೆಗೆ ಸಿಲುಕುತ್ತಿರುವುದು ವಿಪರ್ಯಾಸ.

ಈ ಹಿಂದೆ ಪ್ರತಿಯೊಂದು ಠಾಣೆಯ ಪೊಲೀಸರು ಮನೆ ಮನೆಗೆ ತೆರಳಿ ಸೈಬರ್ ಅಪರಾಧದ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆ ಬಳಿಕ ಪ್ರಮುಖ ಜಂಕ್ಷನ್‌ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಜೊತೆಗೆ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕಾಲೇಜು ವಿದ್ಯಾರ್ಥಿಗಳಿಗೂ ಮಾಹಿತಿ ನೀಡುತ್ತಿದ್ದರು. ಆದರೆ ಜಾಗೃತಿ ಮೂಡಿಸಿದಷ್ಟು ಸೈಬರ್ ವಂಚನೆ ಪ್ರಕರಣ ಹೆಚ್ಚುತ್ತಲೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಎಷ್ಟೇ ಮಾಹಿತಿ ನೀಡಿದರೂ, ತಿಳುವಳಿಕೆ ಮೂಡಿಸಿದರೂ ಸಾರ್ವಜನಿಕರಲ್ಲಿ ಜಾಗೃತಿ ಆಗದಿರುವುದನ್ನು ಮನಗಂಡ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯವು ಇದೀಗ ಧಾರ್ಮಿಕ ಕೇಂದ್ರಗಳಿಗೆ ಮೊರೆ ಹೋಗಿದೆ. ಅಂದರೆ ಪೊಲೀಸರು ಮಸೀದಿ, ದೇವಸ್ಥಾನ, ಚರ್ಚ್‌ಗಳಿಗೆ ತೆರಳಿ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಆರಂಭಿಸಿದ್ದಾರೆ. ಇಲ್ಲೆಲ್ಲಾ ಅಧಿಕ ಸಂಖ್ಯೆಯ ಭಕ್ತರು ಸೇರುವ ಕಾರಣ ಈ ಜಾಗೃತಿ ಶಿಬಿರ ಹೆಚ್ಚು ಪ್ರಯೋಜನವಾದೀತು ಎಂಬ ವಿಶ್ವಾಸ ಪೊಲೀಸ್ ಇಲಾಖೆಯದ್ದಾಗಿದೆ.

ಸೈಬರ್ ಕ್ರೈಂ ಅಂದರೆ ಏನು? ಅದು ಹೇಗೆ ಸಂಭವಿಸುತ್ತದೆ?

ಈ ವಂಚನೆಯ ಬಲೆಗೆ ಬೀಳದಿರಲು ಏನು ಮಾಡಬೇಕು? ವಂಚನೆಗೆ ಒಳಗಾದರೆ ಏನು ಮಾಡಬೇಕು? ಎಂಬಿತ್ಯಾದಿಯ ಬಗ್ಗೆ ಕನ್ನಡವಲ್ಲದೆ ತುಳು, ಬ್ಯಾರಿ, ಕೊಂಕಣಿಯಲ್ಲಿ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ. ಆಯಾ ಜನರ ಮಾತೃಭಾಷೆಯಲ್ಲಿ ಇಂತಹ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರೆ ವಂಚನೆಯಿಂದ ಪಾರು ಮಾಡಬಹುದು ಎಂಬುದು ಪೊಲೀಸ್ ಇಲಾಖೆಯ ಅಭಿಪ್ರಾಯವಾಗಿದೆ.

<ಈ ಹಿಂದೆ ದಿನಾ ಬೆಳಗ್ಗೆ 10ರ ಬಳಿಕ ಪೊಲೀಸರು ಮನೆ ಮನೆಗೆ ತೆರಳಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆದರೆ ಈ ವೇಳೆ ಹೆಚ್ಚಿನ ಪುರುಷರು ಕೆಲಸಕ್ಕೆ ಹೋಗಿ ಆಗಿರುತ್ತದೆ. ಮನೆಯಲ್ಲಿದ್ದ ಮಹಿಳೆಯರಿಗೆ ಮಾಹಿತಿ ನೀಡಿದರೂ ನಿರೀಕ್ಷಿತ ಪರಿಣಾಮ ಆಗುತ್ತಿರಲಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯು ಧಾರ್ಮಿಕ ಕೇಂದ್ರಗಳ ಮೊರೆ ಹೋಗಿದೆ. ಅಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಪ್ರಯತ್ನ ಫಲಪ್ರದವಾಗಬಹುದು ಎಂಬ ನಿರೀಕ್ಷೆಯಲ್ಲಿ ಪೊಲೀಸ್ ಇಲಾಖೆ ಇದೆ.

<ಯಾವ ಕಾರಣಕ್ಕೂ ಮೊಬೈಲ್ ಫೋನನ್ನು ಮಕ್ಕಳ ಕೈಗೆ ಕೊಡಬೇಡಿ. ಅವರು ಮೊಬೈಲ್‌ನಲ್ಲಿ ಆಟವಾಡುವಾಗ ಯಾವುದೋ ಲಿಂಕ್ ಅನ್ನು ಅರಿವಿಲ್ಲದೆ ಕ್ಲಿಕ್ ಮಾಡಿದರೆ ಸೈಬರ್ ವಂಚಕರಿಗೆ ಅದು ವರವಾಗಬಹುದು. ಹಿರಿಯರು ಕೂಡ ಮೊಬೈಲ್ ಬಳಸುವಾಗ ಸದಾ ಎಚ್ಚರ ವಹಿಸಬೇಕು. ಅನಾಮಿಕರ ಕರೆಗೆ ಅನಗತ್ಯವಾಗಿ ಸ್ಪಂದಿಸಬಾರದು.

<ಕೋಡ್ ಡಯಲ್ ಮಾಡುವ ಮೊದಲು ಎಚ್ಚರಿಕೆ ಇರಲಿ: ಡಿಜಿಟಲ್ ಸೇವೆಗಳು ದಿನದಿಂದ ದಿನಕ್ಕೆ ಜನಸಾಮಾನ್ಯರಿಗೆ ಹತ್ತಿರವಾಗುತ್ತಿದೆ. ಹಾಗಾಗಿ ಸೈಬರ್ ವಂಚಕರು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಹೊಸ ಹೊಸ ತಂತ್ರಗಳನ್ನು ಬಳಸಿ ಬ್ಯಾಂಕ್ ಖಾತೆಯಿಂದ ಹಣ ಲೂಟಿ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ಅಂದರೆ ದೇಶದ ವಿವಿಧ ಭಾಗಗಳಲ್ಲಿ ಯುಎಸ್ ಎಸ್‌ಡಿ ಕೋಡ್ ಆಧಾರಿತ ಕಾಲ್ ಫಾರ್ವರ್ಡಿಂಗ್ ವಂಚನೆ ನಡೆಸಲಾಗುತ್ತದೆ. ಸಾಮಾನ್ಯ ಮೊಬೈಲ್ ಬಳಕೆದಾರರು ಸುಲಭವಾಗಿ ಈ ಮೋಸದ ಬಲೆಗೆ ಬೀಳುತ್ತಿರುವುದು ಗಮನಾರ್ಹ.

ಯುಎಸ್ ಎಸ್‌ಡಿ (Unstructured Supplementary Service Data) ಎಂಬುದು ಮೊಬೈಲ್ ನೆಟ್‌ವರ್ಕ್ ಸೇವೆಗಳಿಗಾಗಿ ಬಳಸುವ ತಂತ್ರಜ್ಞಾನವಾಗಿದೆ. ಸಾಮಾನ್ಯವಾಗಿ ಬ್ಯಾಲೆನ್ಸ್ ಚೆಕ್, ಕಾಲ್ ಫಾರ್ವರ್ಡಿಂಗ್, ಸೇವಾ ಆಕ್ಟಿವೇಷನ್‌ಗಳಿಗೆ ಇದನ್ನು ಬಳಸಲಾಗುತ್ತದೆ. ಆದರೆ ವಂಚಕರು ಇದೇ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಬಳಕೆದಾರರ ಗಮನಕ್ಕೆ ಬಾರದಂತೆ ಅವರ ಮೊಬೈಲ್ ಕರೆಗಳನ್ನು ತಮ್ಮ ಸಂಖ್ಯೆಗೆ ಫಾರ್ವರ್ಡ್ ಮಾಡಿಕೊಳ್ಳುವ ಮೂಲಕ ವಂಚನೆ ಮಾಡುತ್ತಿದ್ದಾರೆ.

<ವಂಚನೆ ಹೇಗೆ ನಡೆಯುತ್ತದೆ?: ಬ್ಯಾಂಕ್ ಸಿಬ್ಬಂದಿ, ಟೆಲಿಕಾಂ ಅಧಿಕಾರಿಗಳು ಅಥವಾ ತಾಂತ್ರಿಕ ಸಹಾಯವಾಣಿ ಸಿಬ್ಬಂದಿ ಎಂದೆಲ್ಲಾ ಹೇಳಿ ನೆಟ್‌ವರ್ಕ್ ಸಮಸ್ಯೆ ಸರಿಪಡಿಸಲು, 5ಜಿ ಆ್ಯಕ್ಟಿವೇಶನ್, ಸಿಮ್ ಅಪ್ಡೇಟ್, ಆಫರ್ ವೆರಿಫಿಕೇಶನ್ ಎಂಬ ನೆಪದಲ್ಲಿ ಬಳಕೆದಾರರಿಗೆ ಕೆಲವು ಯುಎಸ್‌ಎಸ್ ಕೋಡ್‌ಗಳನ್ನು ಡಯಲ್ ಮಾಡಲು ವಂಚಕರು ಸೂಚಿಸುತ್ತಾರೆ. ಆ ಕೋಡ್‌ಗಳನ್ನು ಡಯಲ್ ಮಾಡಿದ ಕ್ಷಣದಿಂದಲೇ ಬಳಕೆದಾರರಿಗೆ ಬರುವ ಕರೆಗಳು ನೇರವಾಗಿ ವಂಚಕರಿಗೆ ಹೋಗುತ್ತವೆ. ಆ ಮೂಲಕ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

<ಒಟಿಪಿ, ಬ್ಯಾಂಕ್ ಕರೆಗಳೂ ಅಪಾಯ: ಈ ಕೋಡ್‌ನ ಮತ್ತೊಂದು ಅಪಾಯದ ಸಂಗತಿ ಏನೆಂದರೆ ಬ್ಯಾಂಕ್‌ನಿಂದ ಬರುವ ಒಟಿಪಿ ಕರೆಗಳು, ಯುಪಿಐ ದೃಢೀಕರಣ ಕರೆಗಳು, ಗ್ರಾಹಕ ಪರಿಶೀಲನೆಗಾಗಿ ಬರುವ ಸ್ವಯಂಚಾಲಿತ ಕರೆಗಳು ಹೀಗೆ ಎಲ್ಲವೂ ವಂಚಕರ ಕೈಗೆ ಸೇರುತ್ತವೆ. ಇದರಿಂದ ಬ್ಯಾಂಕ್ ಖಾತೆ, ಡಿಜಿಟಲ್ ವಾಲೆಟ್‌ಗಳು ಖಾಲಿಯಾಗುವ ಸಾಧ್ಯತೆ ಇದೆ. ಹಿರಿಯ ನಾಗರಿಕರು, ಗ್ರಾಮೀಣ ಪ್ರದೇಶದ ಜನರು ಈ ಜಾಲಕ್ಕೆ ಬೇಗನೆ ಬೀಳುವ ಸಾಧ್ಯತೆ ಅಧಿಕವಾಗಿರುತ್ತದೆ.


ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಕೆಲವು ಮಸೀದಿಗಳಿಗೆ ಕಳೆದ ಶುಕ್ರವಾರ ನಮ್ಮ ಪೊಲೀಸರು ತೆರಳಿ ಮಾಹಿತಿ ನೀಡಿದ್ದರು. ಇಂದು (ರವಿವಾರ) ನಗರ ಮತ್ತು ಹೊರವಲಯದ ದೇವಸ್ಥಾನ, ಚರ್ಚ್‌ಗಳಲ್ಲೂ ಕೂಡ ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಹಿರಿಯರನ್ನು ಕೇಂದ್ರೀಕರಿಸಿ ಇದನ್ನು ಮಾಡಲಾಗುತ್ತದೆ. ಜಾತ್ರೆ, ಉರೂಸ್ ಸಂದರ್ಭವೂ ಈ ಮಾಹಿತಿ ಶಿಬಿರ ನಡೆಯಲಿದೆ.

-ಕೆ.ರವಿಶಂಕರ್, ಉಪಾಯುಕ್ತರು, ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರ ಸೂಚನೆಯಂತೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಮದನಿ ನಗರ ಜುಮಾ ಮಸೀದಿಯಲ್ಲಿ ಕಳೆದ ಶುಕ್ರವಾರ ಜುಮಾ ನಮಾಝ್ ಬಳಿಕ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಲಾಗಿದೆ. ಅಧಿಕ ಮಂದಿ ಗಮನವಿಟ್ಟು ಆಲಿಸಿದರಲ್ಲದೆ ಕೆಲವು ಪ್ರಶ್ನೆಗಳನ್ನೂ ಕೇಳಿ ಸಂಶಯಗಳನ್ನು ನಿವಾರಿಸಿಕೊಂಡರು. ಇದು ನನಗೆ ತುಂಬಾ ಖುಷಿಕೊಟ್ಟ ಸಂಗತಿಯಾಗಿದೆ. ನನ್ನಂತೆ ಇತರ ಪೊಲೀಸರು ಕೂಡ ದೇವಸ್ಥಾನ, ಚರ್ಚ್‌ಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿ ಶಿಬಿರವು ಹೆಚ್ಚು ಪರಿಣಾಮಕಾರಿಯಾಗಬಹುದು ಎಂಬ ವಿಶ್ವಾಸ ನಮಗೆ ಇದೆ.

-ಮನ್ಸೂರ್ ಮುಲ್ಕಿ, ಸಹಾಯಕ ಸಬ್ ಇನ್‌ಸ್ಪೆಕ್ಟರ್, ಉಳ್ಳಾಲ ಪೊಲೀಸ್ ಠಾಣೆ

ಅನುಮಾನಾಸ್ಪದ ಕರೆ ಬಗ್ಗೆ ಜಾಗೃತರಾಗಿರಿ

ಬ್ಯಾಂಕ್ ಅಥವಾ ಟೆಲಿಕಾಂ ಕಂಪೆನಿ ಫೋನ್‌ನಲ್ಲಿ ಯುಎಸ್ ಎಸ್‌ಡಿ ಕೋಡ್ ಡಯಲ್ ಮಾಡಲು ಹೇಳುವುದಿಲ್ಲ. ಇಂತಹ ಕರೆಗಳು ಬಂದರೆ ತಕ್ಷಣ ಕಡಿತಗೊಳಿಸಬೇಕು. ಫೋನ್‌ನ ಫಾರ್ವರ್ಡಿಂಗ್ ಸೆಟ್ಟಿಂಗ್‌ಗಳನ್ನು ಸದಾ ಪರಿಶೀಲಿಸಬೇಕು. ಅನುಮಾನಾಸ್ಪದ ಕರೆ ಬಂದೊಡನೆ ಟೆಲಿಕಾಂ ಕಸ್ಟಮರ್ ಕೇರ್‌ಗೆ ಮಾಹಿತಿ ನೀಡಬೇಕು. 002 ಡಯಲ್ ಮಾಡಿ ಕಾಲ್ ಫಾರ್ವರ್ಡಿಂಗ್ ರದ್ದುಪಡಿಸಬೇಕು. ಬ್ಯಾಂಕ್ ಮತ್ತು ಟೆಲಿಕಾಂ ಸಂಸ್ಥೆಗೆ ಮಾಹಿತಿ ನೀಡಬೇಕು ಸೈಬರ್ ಕ್ರೈಂ ಸಹಾಯವಾಣಿ 1930 ಅಥವಾ cybercrime.gov.inನಲ್ಲಿ ದೂರು ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.

Tags

Awarenessreligious centerscyber fraud
share
ವಾರ್ತಾಭಾರತಿ
ವಾರ್ತಾಭಾರತಿ
Next Story
X