Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶತಮಾನೋತ್ಸವ, ಕಾಯಕಲ್ಪದ ನಿರೀಕ್ಷೆಯಲ್ಲಿ...

ಶತಮಾನೋತ್ಸವ, ಕಾಯಕಲ್ಪದ ನಿರೀಕ್ಷೆಯಲ್ಲಿ ಬದ್ರಿಯಾ ವಿದ್ಯಾಸಂಸ್ಥೆ

ತುಫೈಲ್ ಮುಹಮ್ಮದ್, thenational.aeತುಫೈಲ್ ಮುಹಮ್ಮದ್, thenational.ae18 Sept 2025 7:02 PM IST
share
ಶತಮಾನೋತ್ಸವ, ಕಾಯಕಲ್ಪದ ನಿರೀಕ್ಷೆಯಲ್ಲಿ ಬದ್ರಿಯಾ ವಿದ್ಯಾಸಂಸ್ಥೆ

ನೂರರ ಹೊಸ್ತಿಲಲ್ಲಿರುವ ಮಂಗಳೂರಿನ ಬದ್ರಿಯಾ ವಿದ್ಯಾ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಅಲ್ಲಿನ ಹಳೆ ವಿದ್ಯಾರ್ಥಿಗಳು ರಂಗಕ್ಕಿಳಿದಿರುವುದು ಅತ್ಯಂತ ಸ್ವಾಗತಾರ್ಹ. ಈ ಉಪಕ್ರಮಕ್ಕೆ ಸಂಸ್ಥೆಯ ಆಡಳಿತ ಮಂಡಳಿ- ಮುಸ್ಲಿಮ್ ಎಜುಕೇಶನಲ್ ಅಸೋಸಿಯೇಶನ್ ಬೆಂಬಲ ಸೂಚಿಸಿರುವುದು ಹೊಸ ಭರವಸೆ ಮೂಡಿಸಿದೆ. ಕಳೆದ ಹತ್ತು ವರ್ಷಗಳಿಂದ ಗಲ್ಫ್

ರಾಷ್ಟ್ರಗಳೂ ಸೇರಿದಂತೆ ಹಲವೆಡೆ ಸಂಸ್ಥೆಯ ಬೆಳವಣಿಗೆಗೆ ಸ್ವಯಂ ಆಸಕ್ತಿಯಿಂದ ಸಂಘಸಂಸ್ಥೆಗಳನ್ನು ಕಟ್ಟಿಕೊಂಡು ಹಳೆ ವಿದ್ಯಾರ್ಥಿಗಳು ತೋರಿದ್ದ ಉತ್ಸಾಹಕ್ಕೆ ಈಗ ಆನೆಬಲ ಬಂದಂತಾಗಿದೆ.

2013ರ ಸುಮಾರಿಗೆ ಇಂತಹ ಪ್ರಯತ್ನವೊಂದು ಸಂಸ್ಥೆಯ ಹಳೆ ವಿದ್ಯಾರ್ಥಿ ಮತ್ತು ಅಂದು ಮಂಗಳೂರು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿದ್ದ ಮುಹಮ್ಮದ್ ಅಮೀನ್ ನೇತೃತ್ವದಲ್ಲಿ ನಡೆದಿತ್ತು. ಮೂಲಭೂತ ಸೌಕರ್ಯಗಳ ಕೊರತೆ, ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಇಳಿಮುಖವೂ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಸಂಸ್ಥೆಗೆ ಕಾಯಕಲ್ಪ ಕಲ್ಪಿಸುವುದು ಅವರ ಉದ್ದೇಶವಾಗಿತ್ತು. ಆಡಳಿತ ಮಂಡಳಿಯೊಂದಿಗೆ ಈ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದ ಈ ಅಭಿಯಾನದ ಕೆಲವು ಮುಖಂಡರು ಅಂದು ‘ಸಕಾರಾತ್ಮಕ ಪ್ರತಿಕ್ರಿಯೆ’ ದೊರೆಯದ ಕಾರಣ ನಿರಾಶರಾಗಿ ಆ ಪ್ರಯತ್ನ ನನೆಗುದಿಗೆ ಬಿದ್ದಿತ್ತು.

ಹಾಗಿದ್ದೂ ಈ ಉಪಕ್ರಮದಿಂದ ಎಚ್ಚೆತ್ತುಕೊಂಡ ಸಂಸ್ಥೆಯ ಆಡಳಿತ ಮಂಡಳಿಯು 2015ರಲ್ಲಿ ಬದ್ರಿಯಾ ಶತಮಾನೋತ್ಸವ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಘೋಷಣೆ ಮಾಡಿತ್ತು. ವಿದ್ಯಾಸಂಸ್ಥೆಯನ್ನು ಮಂಗಳೂರಿನ ಹತ್ತಿರದಲ್ಲೇ ಹೊಸ ಕ್ಯಾಂಪಸ್‌ಗೆ ಸ್ಥಳಾಂತರಿಸುವುದು, ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಕಾಲೇಜನ್ನು ಆರಂಭಿಸುವುದು, ಹಳೆ ಬಂದರ್‌ನಲ್ಲಿರುವ ಈಗಿನ ಕ್ಯಾಂಪಸ್‌ನ ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಉನ್ನತೀಕರಣವೂ ಸೇರಿದಂತೆ ಹಲವು ಯೋಜನೆಗಳನ್ನು ಆಗ ಘೋಷಿಸಲಾಗಿತ್ತು. ದೇಶ ವಿದೇಶಗಳಲ್ಲಿರುವ ಹಳೆ ವಿದ್ಯಾರ್ಥಿಗಳ ಬೆಂಬಲವನ್ನೂ ಕ್ರೋಢೀಕರಿಸಿ ಶತಮಾನೋತ್ಸವದ ಯೋಜನೆಗಳಿಗೆ ‘ಬದ್ರಿಯಾ 100’ ಎಂಬ ಹೆಸರಿನಲ್ಲಿ ನೂರು ಕೋಟಿ ರೂ.ಸಂಗ್ರಹಿಸುವ ಅಭಿಯಾನವನ್ನೂ ಆರಂಭಿಸಲಾಗಿತ್ತು.

1928ರಲ್ಲಿ ಆರಂಭಗೊಂಡ ಬದ್ರಿಯಾದ ಐತಿಹಾಸಿಕ ಮೈಲಿಗಲ್ಲಿಗೆ ಇದೀಗ ಕ್ಷಣಗಣನೆ ಆರಂಭಗೊಂಡಿರುವುದರಿಂದ ಸಂಸ್ಥೆಯ ಪುನಶ್ಚೇತನದ ಪ್ರಯತ್ನಗಳಿಗೆ ಮತ್ತಷ್ಟು ಚುರುಕು ಮುಟ್ಟಿಸುವ ಅಗತ್ಯವನ್ನು ಸಂಸ್ಥೆಯ ಹಳೆವಿದ್ಯಾರ್ಥಿಗಳು ಮನಗಂಡಿದ್ದಾರೆ. ಜಗತ್ತಿನಾದ್ಯಂತ ಹಬ್ಬಿರುವ ಹಳೆ ವಿದ್ಯಾರ್ಥಿಗಳು ವಾಟ್ಸ್‌ಆ್ಯಪ್ ಗುಂಪುಗಳನ್ನು ಕಟ್ಟಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಈ ಪ್ರಯತ್ನಕ್ಕೆ ಬೆಂಬಲ ಘೋಷಿಸಿದ್ದಾರೆ. ಶುಕ್ರವಾರ(ಸೆ.19) ನಡೆಯುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಮಾವೇಶದಲ್ಲಿ ಕನಿಷ್ಠ ಒಂದು ಸಾವಿರ ಮಂದಿ ಭಾಗವಹಿಸುವರೆಂಬುದು ಸಂಘಟಕರ ನಿರೀಕ್ಷೆ.

ಮುಸ್ಲಿಮರಲ್ಲಿ ಶಿಕ್ಷಣದ ಜಾಗೃತಿ ಇನ್ನೂ ಕಡಿಮೆಯಿದ್ದ ಕಾಲದಲ್ಲಿ ಸಮುದಾಯದ ಕೆಲವು ಹಿತಚಿಂತಕರು ಸೇರಿ ಬಂದರಿನ ಬದ್ರಿಯಾ ಮಸೀದಿಯ ಅಧೀನದಲ್ಲೇ ಆರಂಭಿಸಿದ ಈ ಸಂಸ್ಥೆಯು ಇಸ್ಲಾಮ್ ಶಿಕ್ಷಣಕ್ಕೆ ಎಷ್ಟು ಒತ್ತು ನೀಡುತ್ತದೆ ಎಂಬುದಕ್ಕೆ ಬಹುದೊಡ್ಡ ಪುರಾವೆ. ಮದ್ರಸದ ಕಟ್ಟಡದಲ್ಲೇ ಶಾಲಾ ಕಾಲೇಜುಗಳು ಮೈದಳೆದ ಹಲವು ಉದಾಹರಣೆಗಳು ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕಂಡು ಬರುತ್ತವೆ. ‘ಎಲ್ಲರಿಗೂ ಶಿಕ್ಷಣ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆ ಕಳೆದ ಒಂಭತ್ತು ದಶಕಗಳಲ್ಲಿ ಜಾತಿಮತ ಭೇದವಿಲ್ಲದೆ ಅಸಂಖ್ಯ ಮಂದಿಗೆ ಶಿಕ್ಷಣ ನೀಡಿದೆ. ಆರಂಭದ ವರ್ಷಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳನ್ನೂ ಈ ಸಂಸ್ಥೆ ಆಕರ್ಷಿಸುತ್ತಿತ್ತೆಂಬುದು, ಅದರಲ್ಲೂ ವಿಶೇಷವಾಗಿ ಹಿಂದುಳಿದ ಬೆಂಗರೆ, ಬೋಳಾರ ಪರಿಸರದ ಮೊಗವೀರ ಸಮಾಜದ ಯುವಕ- ಯುವತಿಯರಿಗೂ ಕಲಿಕೆಯ ಕೇಂದ್ರ ಆಗಿತ್ತೆಂಬುದು ಇಲ್ಲಿ ಗಮನಾರ್ಹ.

ಬದ್ರಿಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲು ಸುಮಾರು ಶತಮಾನಗಳ ಕಾಲ ಬೇಕಾಯಿತೆಂಬುದು ಸ್ವಲ್ಪಬೇಸರದ ಸಂಗತಿ. ಇದಕ್ಕೆ ಹತ್ತು ಹಲವು ಕಾರಣಗಳಿರಬಹುದಾದರೂ ಆಡಳಿತ ಮಂಡಳಿಯೊಂದಿಗೆ ಸೇರಿಕೊಂಡು, ಸಮನ್ವಯ ಮತ್ತು ಸಂಯೋಜನೆಯೊಂದಿಗೆ ಈ ಹೊಸ ಪ್ರಯತ್ನ ನಡೆಯುತ್ತಿರುವುದು ಆಶಾದಾಯಕ. ಹೊಸ ತಲೆಮಾರಿನ ಯುವಕ, ಯುವತಿಯರನ್ನು ಸೇರಿಸಿ, ಹೊಸ ಜಗತ್ತಿನ ಅಗತ್ಯಗಳಿಗೆ ಸ್ಪಂದಿಸುತ್ತಾ ವಿದ್ಯಾಸಂಸ್ಥೆ ಸಮಗ್ರ ಕಾಯಕಲ್ಪಪಡೆಯುವ ನಿರೀಕ್ಷೆ ಗರಿಗೆದರಿದೆ. ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯಲ್ಲೂ ಈ ಯುವಕ ಯುವತಿಯರಿಗೆ ಪ್ರಾತಿನಿಧ್ಯ ದೊರೆತರೆ ಶತಮಾನೋತ್ಸವದ ವೇಳೆಗೆ ಬದ್ರಿಯಾ ತನ್ನ ‘ಗತವೈಭವ’ದತ್ತ ದಾಪುಗಾಲು ಇಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಹಳೆ ವಿದ್ಯಾರ್ಥಿಸಮಾವೇಶದ ಸಂಘಟಕರು.

ಬದ್ರಿಯಾ ಸಂಸ್ಥೆಯ ಏಳಿಗೆಯ ಹಿಂದೆ ನೂರಾರು ಶಿಕ್ಷಕರ ಶ್ರಮ ಇದೆಯಾದರೂ ವಿದ್ಯಾರ್ಥಿಗಳು ಇಂದಿಗೂ ನೆನಪಿಸುವ ಕೆಲವು ಹೆಸರುಗಳಲ್ಲಿ ಪ್ರಮುಖವಾದುದು ದಿವಂಗತ ಪ್ರೊ.ಅಬ್ದುಲ್ ಖಾದರ್. ಉಪ್ಪಿನಂಗಡಿ ಸರಕಾರಿ ಕಾಲೇಜಿನ ತನ್ನ ವೃತ್ತಿಯನ್ನು ತೊರೆದು ಬದ್ರಿಯಾದಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾಗಿ ಬಂದಿದ್ದ ಅವರು ತನ್ನ ದೂರದೃಷ್ಟಿ ಮತ್ತು ಪಾಂಡಿತ್ಯದಿಂದ ಅಲ್ಪ ಸಮಯದಲ್ಲೇ ಅಪಾರ ಜನಪ್ರಿಯತೆ ಪಡೆದಿದ್ದರು. ಹೈಸ್ಕೂಲ್ ವಿಭಾಗದಲ್ಲಿ ನೀತಿ ಶಿಕ್ಷಣ ಬೋಧಿಸುತ್ತಿದ್ದ ದಿ. ಪ್ರೊ.ಅಬೂಬಕರ್ ತುಂಬೆ ಮತ್ತು ಪದವಿ ಪೂರ್ವ ವಿಭಾಗದಲ್ಲಿ ಅಕೌಂಟೆನ್ಸಿ ಬೋಧಿಸುತ್ತಿದ್ದ ದಿ. ಶ್ರೀ ರಾಧಾಕೃಷ್ಣ ರಾವ್ ಅವರ ಕೊಡುಗೆಯನ್ನೂ ಅವರ ಹಳೆ ವಿದ್ಯಾರ್ಥಿಗಳು ಇಂದಿಗೂ ನೆನಪಿಸುತ್ತಾರೆ. ಬದ್ರಿಯಾದ ಅಭ್ಯುದಯಕ್ಕೆ ತಮ್ಮ ಪ್ರತಿಭೆಯನ್ನು ಮುಡಿಪಾಗಿಟ್ಟ ಅಧ್ಯಾಪಕರನ್ನು ಸ್ಮರಿಸುವುದರ ಜೊತೆಗೆ ತಮ್ಮ ಶಾಲಾ, ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕಲಿಕ್ಕೂ ಸೆ.19ರಂದು ನಡೆಯುವ ವಿದ್ಯಾರ್ಥಿ ಸಮಾವೇಶ ವೇದಿಕೆ ಕಲ್ಪಿಸಲಿದೆ.

ಕಳೆದ 20-25 ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮ್ ಉದ್ಯಮಿಗಳು, ಸಮಾಜ ಸೇವಾ ಸಂಸ್ಥೆಗಳು ಆರಂಭಿಸಿದ ವಿದ್ಯಾಸಂಸ್ಥೆಗಳ ಪರಿಣಾಮವಾಗಿ ಒಂದು ದೊಡ್ಡ ಶೈಕ್ಷಣಿಕ ಕ್ರಾಂತಿಯೇ ನಡೆದಿದೆ. ಮುಸ್ಲಿಮ್ ಉದ್ಯಮಿಗಳು ಮತ್ತು ಖಾಸಗಿ ಸಂಸ್ಥೆಗಳು ಇಂದು ಇಂಜಿನಿಯರಿಂಗ್, ಮೆಡಿಕಲ್, ಡಿಗ್ರಿ ಕಾಲೇಜುಗಳನ್ನು ಕಟ್ಟಿ ವಿಶ್ವದರ್ಜೆಯ ಗುಣಮಟ್ಟದ ಶಿಕ್ಷಣದ ಮೂಲಕ ದೇಶಾದ್ಯಂತ ಹೆಸರು ಮಾಡುತ್ತಿವೆ. ಡೀಮ್ಡ್ ಯುನಿವರ್ಸಿಟಿಯ ಮಟ್ಟಕ್ಕೂ ಅವು ಬೆಳೆದಿವೆ. ಆದರೆ ಇಷ್ಟು ಹೊತ್ತಿಗೆ ಒಂದು ವಿಶ್ವವಿದ್ಯಾನಿಲಯವಾಗಿ ಪರಿವರ್ತನೆಗೊಳ್ಳಬೇಕಾಗಿದ್ದ ಬದ್ರಿಯಾ ಸಂಸ್ಥೆಯು ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಏದುಸಿರು ಬಿಡುತ್ತಿರುವುದು ಖೇದಕರ. ಶತಮಾನೋತ್ಸವದ ಈ ಸಂದರ್ಭದಲ್ಲಾದರೂ ಈ ಬಗ್ಗೆ ಆತ್ಮಾವಲೋಕನ ನಡೆದು ಸಂಸ್ಥೆಯ ಸಮಗ್ರ ಕಾಯಕಲ್ಪಕ್ಕೆ ಯೋಜನೆ ರೂಪುಗೊಳ್ಳಲಿ ಎಂಬುದು ಹಳೆ ವಿದ್ಯಾರ್ಥಿಗಳ ಹಾರೈಕೆ.


ತುಫೈಲ್ ಮುಹಮ್ಮದ್

share
ತುಫೈಲ್ ಮುಹಮ್ಮದ್, thenational.ae
ತುಫೈಲ್ ಮುಹಮ್ಮದ್, thenational.ae
Next Story
X