Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಂಡೆಗಳ ಮೇಲೆ ಬದುಕು ಕಟ್ಟಿಕೊಂಡ...

ಬಂಡೆಗಳ ಮೇಲೆ ಬದುಕು ಕಟ್ಟಿಕೊಂಡ ಇರುಳಿಗರು

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್29 Oct 2025 10:21 AM IST
share
ಬಂಡೆಗಳ ಮೇಲೆ ಬದುಕು ಕಟ್ಟಿಕೊಂಡ ಇರುಳಿಗರು

ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಇರುಳಿಗರು ಕಾವೇರಿ ನದಿಯ ತಪ್ಪಲಿನಲ್ಲಿ ಪಾರಂಪರಿಕವಾಗಿ ಜೀವಿಸಿಕೊಂಡು ಬರುತ್ತಿದ್ದಾರೆ. ಸಿಂಧೂ ಕಣಿವೆಯ ಜನಕ್ಕೆ ಹೇಗೆ ಸಿಂಧೂ ನದಿ ಆಧಾರವೋ ಅದೇ ರೀತಿಯಲ್ಲಿ ಇರುಳಿಗರಿಗೆ ಕಾವೇರಿ ನದಿಯೇ ಆಧಾರ. ಕಾವೇರಿಯೊಂದಿಗೆ ಇವರ ಬದುಕು ಬೆಸೆದುಕೊಂಡು ಇಂದಿಗೂ ಇವರ ನಂಬಿಕೆ, ಐತಿಹ್ಯ, ಪುರಾಣಗಳಲ್ಲೂ ಕಾವೇರಿ ನದಿಯೊಂದಿಗಿನ ಉಲ್ಲೇಖಗಳು ಸಿಗುವುದನ್ನು ಕಾಣಬಹುದು.

ಸುಮಾರು ಎರಡೂವರೆ ವರ್ಷಗಳ ಹಿಂದೆ ಇರುಳಿಗ ಸಮುದಾಯದ ಮೊದಲ ಪಿಎಚ್.ಡಿ. ಪದವೀಧರ ಆದರೂ ನಿರುದ್ಯೋಗಿ ಆಗಿದ್ದ ಡಾ. ಕೃಷ್ಣಮೂರ್ತಿ ಎಂಬ ಹುಡುಗನ ಜತೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ವೆಂಕಟರಾಯನ ದೊಡ್ಡಿಯ ಕೂತಗಾನಹಳ್ಳಿಗೆ ಹೋಗಿದ್ದೆ. ದೊಡ್ಡದೊಡ್ಡ ಬಂಡೆಗಳ ನಡುವೆ ಮತ್ತು ಸುಡುಬಂಡೆಗಳ ಮೇಲೆ ಸಣ್ಣ ಸಣ್ಣ ಗುಡಿಸಲುಗಳಲ್ಲಿ ಆದಿಮಾನವರಂತೆ ಬದುಕುತ್ತಿದ್ದ ಇರುಳಿಗರನ್ನು ನೋಡಿ ದಂಗು ಬಡಿದುಹೋದೆ! ಬೆಂಗಳೂರಿನ ವಿಧಾನಸೌಧದಿಂದ ಕೇವಲ 58 ಕಿ.ಮೀ. ದೂರದಲ್ಲಿರುವ ದೃಶ್ಯವಿದು! ನಾನು ಅಲ್ಲಿಗೆ ಹೋಗುವುದರ ಸುಳಿವು ತಿಳಿದು ಇರುಳಿಗರ ಯುವಕ-ಯುವತಿಯರು ಇಡೀ ಕಾಡೆಲ್ಲ ಹುಡುಕಾಡಿ ಕಾಡಹೂವುಗಳನ್ನು ತಂದು ಹೂಮಾಲೆ ಕಟ್ಟಿ ನನಗೆ ಹಾಕಿದ್ದರು. ಬಹುಶಃ ನನ್ನ ಜೀವನದಲ್ಲಿ ಅಷ್ಟು ಸುಂದರ ಬಣ್ಣಗಳ ಹೂವುಗಳ ಹೂಮಾಲೆಯನ್ನು ಕಂಡಿರಲಿಲ್ಲ! ಆ ಬಡ ಆದಿವಾಸಿಗಳ ನಿರ್ಮಲ ಪ್ರೀತಿಗೆ ನನ್ನ ಹೃದಯ ಮತ್ತು ಕಣ್ಣುಗಳು ತೇವಗೊಂಡಿದ್ದವು.

ರಾಮನಗರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಇರುಳಿಗರು ಕಾವೇರಿ ನದಿಯ ತಪ್ಪಲಿನಲ್ಲಿ ಪಾರಂಪರಿಕ ವಾಗಿ ಜೀವಿಸಿಕೊಂಡು ಬರುತ್ತಿದ್ದಾರೆ. ಸಿಂಧೂ ಕಣಿವೆಯ ಜನಕ್ಕೆ ಹೇಗೆ ಸಿಂಧೂ ನದಿ ಆಧಾರವೋ ಅದೇ ರೀತಿಯಲ್ಲಿ ಇರುಳಿಗರಿಗೆ ಕಾವೇರಿ ನದಿಯೇ ಆಧಾರ. ಕಾವೇರಿಯೊಂದಿಗೆ ಇವರ ಬದುಕು ಬೆಸೆದುಕೊಂಡು ಇಂದಿಗೂ ಇವರ ನಂಬಿಕೆ, ಐತಿಹ್ಯ, ಪುರಾಣಗಳಲ್ಲೂ ಕಾವೇರಿ ನದಿಯೊಂದಿಗಿನ ಉಲ್ಲೇಖಗಳು ಸಿಗುವುದನ್ನು ಕಾಣಬಹುದು. ಕರ್ನಾಟಕದಲ್ಲಿ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಹಾಗೂ ಕೇರಳದ ಕಾವೇರಿ ನದಿ ಆಸುಪಾಸಿನ ಭಾಗದಲ್ಲೂ ಕಂಡುಬರುವ ಇರುಳಿಗರನ್ನು ಸಾಮಾನ್ಯವಾಗಿ ಇರುಳ, ಇರುಳಾಸ್, ಇಲ್ಲಿಗರು, ಕಾಡು ಪೂಜಾರಿ, ಕಾಡ್ ಚೆನ್ಸು ಎಂಬ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ. ಅನೇಕ ಪ್ರದೇಶಗಳಲ್ಲಿ ನೆಲೆಸಿರುವ ಇವರೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ರಕ್ತ ಸಂಬಂಧವನ್ನು ಹೊಂದಿದವರೇ ಆಗಿದ್ದಾರೆ. ಜೊತೆಗೆ ಕರ್ನಾಟಕದ ಇತರ ಭಾಗಕ್ಕೂ ಈ ಕಾವೇರಿ ನದಿ ಭಾಗದಿಂದಲೇ ಹೋಗಿ ನೆಲೆಸಿದ್ದಾರೆ ಎಂದು ಇರುಳಿಗ ಸಮುದಾಯದ ಹಿರಿಯರು ಹೇಳುತ್ತಾರೆ. ಹೀಗೆ ತಮ್ಮದೇ ಆದ ಪಾರಂಪರಿಕ ಇತಿಹಾಸವನ್ನು ಹೊಂದಿರುವ ಇರುಳಿಗರು ಇಂದು ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಇರಲು ಸೂರಿಲ್ಲದೆ, ಭೂಮಿ ಇಲ್ಲದೆ, ಇತರರಂತೆ ಬದುಕಲು ನಯನಾಜೂಕು ಗೊತ್ತಿಲ್ಲದೆ, ನೀರಿನಿಂದ ಹೊರಗೆಸೆದ ಮೀನಿನಂತೆ ಬದುಕುಳಿಯಲು ಒದ್ದಾಡುತ್ತಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಇತರ ಮುಂದುವರಿದ ಸಮುದಾಯದವರ ಮನೆ, ಹೊಲ, ಗದ್ದೆಗಳಲ್ಲಿ ಇಂದಿಗೂ ಜೀತ ಹಾಗೂ ದಿನಗೂಲಿ ಮಾಡುವುದಲ್ಲದೆ ರಸ್ತೆ ಬದಿಯಲ್ಲಿ ಪೇಪರ್ ಆಯುತ್ತಾ ಬದುಕುತ್ತಿರುವುದನ್ನು ಕಾಣಬಹುದು. ಇಟ್ಟಿಗೆ ಫ್ಯಾಕ್ಟರಿ ಮತ್ತು ರೇಷ್ಮೆಗೂಡು ಬೇಯಿಸುವ ಕಾರ್ಖಾನೆಗಳಲ್ಲಿ ನಿರಂತರವಾಗಿ ದುಡಿಯುವುದರಿಂದ ಈ ಜನಾಂಗದವರಲ್ಲಿ ಅನೇಕ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗಿ ಸಾವು ನೋವು ಸಂಭವಿಸಿ ದಿನದಿಂದ ದಿನಕ್ಕೆ ಇರುಳಿಗ ಸಮುದಾಯದವರ ಜನಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ.

ಇನ್ನು ಈ ಜನಾಂಗದ ಜನಸಂಖ್ಯೆ ಎಷ್ಟಿರಬಹುದೆಂಬ ನಿಖರವಾದ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ. ಸರಕಾರಿ ದಾಖಲೆಗಳಲ್ಲಿ ಒಂದಾದರೆ ವಾಸ್ತವದ ಜನಸಂಖ್ಯೆಯೇ ಬೇರೆ ಎಂದು ಸಮುದಾಯದವರು ಹೇಳುತ್ತಾರೆ. 2001ರ ಜನಗಣತಿಯಲ್ಲಿ ಒಟ್ಟಾರೆ ಕರ್ನಾಟಕದಲ್ಲಿ ಇರುಳಿಗ ಸಮುದಾಯದ ಜನಸಂಖ್ಯೆ 8,486 ಇದ್ದು ಇದರಲ್ಲಿ 4,392 ಪುರುಷರು ಹಾಗೂ 4,094 ಮಹಿಳೆಯರು ಇದ್ದಾರೆಂದು ದಾಖಲಾಗಿದೆ. ಹಾಗೆಯೇ ಬೆಂಗಳೂರು ಗ್ರಾಮಾಂತರ(ಈಗಿನ ರಾಮನಗರವನ್ನು ಒಳಗೊಂಡಂತೆ) 5,645 (2,939 ಗಂಡಸರು, 2,706 ಹೆಂಗಸರು) ದಾಖಲಾಗಿದೆ. ಹಾಗೆಯೇ 2011ರ ಜನಗಣತಿಯಲ್ಲಿ ಇರುಳಿಗರ ಜನಸಂಖ್ಯೆ ಕರ್ನಾಟಕದಲ್ಲಿ 10,259 ಇದೆ. ಇದರಲ್ಲಿ ಪುರುಷರು-5,267, ಮಹಿಳೆಯರು 4,992 ಇದ್ದಾರೆ. ಆದರೆ ಕರ್ನಾಟಕದಲ್ಲಿ ಇರುಳಿಗರ ಒಟ್ಟು ಜನಸಂಖ್ಯೆ 18ರಿಂದ 20 ಸಾವಿರದಷ್ಟು ಎಂದು ಇರುಳಿಗರೇ ಹೇಳಿಕೊಳ್ಳುತ್ತಾರೆ. ಇರುಳಿಗರಲ್ಲಿ ಶೇ. 40ರಷ್ಟು ಜನರು ವಾಸಿಸಲು ಸೂರಿಲ್ಲದೆ ಇಂದಿಗೂ ಮಾವಿನ ತೋಟಗಳು, ಇಟ್ಟಗೆ ಫ್ಯಾಕ್ಟರಿಗಳು, ಎಸ್ಟೇಟ್‌ಗಳು ಹಾಗೂ ಕೋಳಿ ಫಾರಂಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದು ಇವರಲ್ಲಿ ಯಾವುದೇ ಮೂಲಭೂತವಾದ ದಾಖಲಾತಿಯೂ ಇಲ್ಲದೆ ಸರಕಾರದ ಜನಗಣತಿಯಲ್ಲಿ ಲೆಕ್ಕಕ್ಕೆ ಸಿಗದೆ ಉಳಿದುಬಿಟ್ಟಿರುವುದಾಗಿ ಹೇಳುತ್ತಾರೆ.

ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಕೊಲಾರ, ಚಾಮರಾಜನಗರ, ಶಿವಮೊಗ್ಗ, ಕೊಡಗು ಹಾಗೂ ಮಂಡ್ಯದ ಕೆಲವು ಭಾಗದಲ್ಲಿ ಇರುಳಿಗರು ಜೀವಿಸುತ್ತಿದ್ದು ಇವರು ಜೇನುಕುರುಬ, ಸೋಲಿಗ, ಕುರುಬ, ಮಲೆಕುಡಿಯ ಎಂಬ ಇತರ ಹೆಸರುಗಳಿಂದ ಕರೆಸಿಕೊಂಡು ಬದುಕುತ್ತಿದ್ದಾರೆ! ‘‘ಯಾಕೆ ಹೀಗೆ.?’’ ಎಂದು ಕೇಳಿದರೆ ‘‘ಇರುಳಿಗ ಎಂದರೆ ನಮಗೆ ಏನೂ ಸೌಲಭ್ಯ ಸಿಗೋದಿಲ್ಲ ಸ್ವಾಮಿ. ಹೀಗೆ ಬೇರೆ ಜಾತಿಯ ಹೆಸರುಗಳಲ್ಲಿ ಗುರುತಿಸಿಕೊಂಡ ಮೇಲೆ ನಮಗೆ ಒಂದಷ್ಟು ಪೌಷ್ಟಿಕ ಆಹಾರ ಹಾಗೂ ಇತರ ಸೌಲಭ್ಯಗಳು ಸಿಗುತ್ತಿವೆ’’ ಎನ್ನುತ್ತಾರೆ. ಇದು ಇವತ್ತಿನ ಇರುಳಿಗ ಜನಾಂಗದ ಅವನತಿಗೂ ಕಾರಣ ಎಂದರೆ ತಪ್ಪಾಗಲಾರದು. ಹಿಂದೆ ಒಂದು ಮಾತು ಇತ್ತು- ‘‘ಒಂದು ಸಮುದಾಯದ ಕಟ್ಟ ಕಡೆಯ ವ್ಯಕ್ತಿ ಬದುಕಿರುವ ವರೆಗೂ ಆ ಸಮುದಾಯದ ಪ್ರತಿನಿಧೀಕರಣ ಇರುತ್ತದೆ’’ ಎಂದು. ಆದರೆ ಇಂದು ಸರಕಾರಿ ದಾಖಲೆಗಳಲ್ಲಿ ಒಂದು ಸಮುದಾಯದ ಹೆಸರು ಬಿಟ್ಟು ಹೋದರೆ ಮುಗಿಯಿತು, ಆ ಸಮುದಾಯವೇ ಇಲ್ಲವಾಗಿ ಬಿಡುತ್ತದೆ. ಇಂತಹ ದುಸ್ಥಿತಿ ಈಗ ಇರುಳಿಗರಿಗೆ ಬಂದೊದಗಿದೆ.

ಇಷ್ಟೆಲ್ಲಾ ಸಾವು-ನೋವುಗಳಿದ್ದರೂ ಸಾಂಸ್ಕೃತಿಕವಾಗಿ ತಮ್ಮ ಪಾರಂಪರಿಕ ನಂಬಿಕೆ ಆಚರಣೆಗಳನ್ನು ಬಿಟ್ಟುಕೊಡದೆ ಇಂದಿಗೂ ಈ ಸಮುದಾಯ ಉಳಿಸಿಕೊಂಡು ಬರುತ್ತಿರುವುದನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಲೆ ಎಬ್ಬಿಸಿದ ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯರ ಕಾಲದಲ್ಲಿಯೂ ಜೀವಿಸಿ, ಅವರ ಅನುಕರಣೆಗಳಿಗೆ ಮತ್ತು ಪ್ರಭಾವಗಳಿಗೆ ಒಳಗಾಗದೆ ಸೆಡ್ಡು ಹೊಡೆದು ತಮ್ಮದೇ ಆದ ಬುಡಕಟ್ಟು ನಂಬಿಕೆ ಮತ್ತು ಆಚರಣೆಗಳನ್ನು ಉಳಿಸಿಕೊಂಡು ಅವರುಗಳಿಗೆ ಪರ್ಯಾಯವಾಗಿ ತಮ್ಮದೇ ಆದ ದೇವರು ಧರ್ಮ, ಆಚರಣೆ ನಂಬಿಕೆ ಮತ್ತು ರೂಢಿ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿದ್ದಾರೆ.

ಇರುಳಿಗರ ಸಾವಿನ ಸಂದರ್ಭದ ಸಂಪ್ರದಾಯಗಳನ್ನು ಗಮನಿಸಿದಾಗ ಪ್ರಪಂಚದ ಎಲ್ಲಾ ಧರ್ಮಗಳ ನಂಬಿಕೆಗಳಿಗಿಂತಲೂ ಇವರದು ಭಿನ್ನವಾಗಿ ಕಂಡುಬರುತ್ತದೆ!. ಜೊತೆಗೆ ಇವರಲ್ಲಿ ಇವರ ಪೂರ್ವಿಕರ ರೂಢಿ ಪದ್ಧತಿಗಳು ಇಂದಿಗೂ ಉಳಿದುಕೊಂಡಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ಸತ್ತ ಮೇಲೆ ದೆವ್ವ-ಭೂತವಾಗುತ್ತಾನೆ ಅಥವಾ ಸ್ವರ್ಗಕ್ಕೋ-ನರಕಕ್ಕೋ ಹೋಗುವುದಾಗಿ ‘ಸಭ್ಯ’ ಸಮಾಜದಲ್ಲಿ ಪ್ರಚಲಿತ ನಂಬಿಕೆಗಳಿವೆ. ಇದಕ್ಕೆ ಪೂರಕವಾಗಿ ಪುರಾಣಗಳು, ಆಗಮಗಳು, ವೇದ ಉಪನಿಷತ್‌ಗಳು ಇವೆ. ಆದರೆ ಇರುಳಿಗರಲ್ಲಿ ಸತ್ತ ವ್ಯಕ್ತಿಯನ್ನು ತಮ್ಮ ಜೀವಿತಕಾಲದವರೆಗೂ ತಮ್ಮೊಂದಿಗೆ ಇರಿಸಿಕೊಂಡು, ಕರೆದಾಗಲೆಲ್ಲ ಬಂದು ಕಷ್ಟ-ಕಾರ್ಪಣ್ಯಗಳನ್ನು ಬಗೆಹರಿಸುವಂತಹ ಶಕ್ತಿಯಾಗಿಸಿಕೊಂಡು ಸತ್ತ ವ್ಯಕ್ತಿಯ ಕಳೇಬರವನ್ನೇ ದೇವರಾಗಿ ಪೂಜಿಸುವುದು ಇರುಳಿಗರಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದಲೇ ಇರುಳಿಗರಲ್ಲಿ ವ್ಯಕ್ತಿ ಸತ್ತ ಮೇಲೆ ಹೂಳುವುದಾಗಲಿ ಅಥವಾ ಸುಡುವುದಾಗಲಿ ಮಾಡದೇ ‘ಕಲ್ಲು ಸೇವೆ’ ಮಾಡುತ್ತೇವೆ ಎನ್ನುತ್ತಾರೆ. ಮಣ್ಣಿನಲ್ಲಿ ಹೂಳುವುದರಿಂದ ಅಥವಾ ಬೆಂಕಿಯಲ್ಲಿ ಸುಟ್ಟುಬಿಡುವುದರಿಂದ ನಮ್ಮ ಹಿರಿಯರ ಕಳೇಬರ ನಾಶವಾಗಿ ಅವರ ನೆನಪುಗಳೇ ನಮಗೆ ಸಿಗದಂತಾಗುತ್ತದೆ. ಅದರ ಬದಲು ಕಲ್ಲುಗಳ ನಡುವೆ ಹೆಣವನ್ನು ಇಟ್ಟು ಪ್ರಾಣಿ, ಪಕ್ಷಿಗಳಿಗೆ, ಕ್ರಿಮಿಕೀಟಗಳಿಗೆ ದೇಹ ದಕ್ಕುವಂತೆ ಮಾಡುತ್ತಾರೆ, ಇದನ್ನು ಕಲ್ಲು ಸೇವೆ ಎಂದು ಕರೆಯುತ್ತಾರೆ. ಕಲ್ಲು ಸೇವೆ ಮಾಡುವುದರಿಂದ ಅವರ ಮೂಳೆಗಳನ್ನಾದರೂ ನೋಡಿಕೊಂಡು ನಮ್ಮ ಹಿರಿಯರ ನೆನಪು ಮಾಡಿಕೊಳ್ಳುತ್ತೇವೆ. ಬದುಕಿರುವಾಗಲಂತೂ ಒಬ್ಬರಿಗೆ ಉಪಕಾರ ಮಾಡಲಿಕ್ಕೆ ಆಗಲಿಲ್ಲ. ಆದರೆ ಸತ್ತಮೇಲಾದರೂ ತನ್ನ ದೇಹ ನಾಲ್ಕು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಲಿ ಎನ್ನುವ ನಂಬಿಕೆಯಿಂದಲೇ ಕಲ್ಲುಸೇವೆ ಅಥವಾ ಕಲ್ಲು ಮಲ್ಲಯ್ಯನನ್ನು ಮಾಡುವುದಾಗಿ ಇರುಳಿಗರು ಹೇಳುತ್ತಾರೆ.

ಇವರ ಪಾರಂಪರಿಕ ಕಲ್ಲು ಗುಹೆಗಳು ಕಾಡಿನ ಮಧ್ಯಭಾಗದಲ್ಲಿದ್ದು, ಅರಣ್ಯ ಇಲಾಖೆಯವರು ಅರಣ್ಯ ಸಂರಕ್ಷಣೆಯ ಕಾರಣವೊಡ್ಡಿ ಇರುಳಿಗರಿಗೆ ತಮ್ಮ ಕಲ್ಲುಸೇವೆಯ ಹತ್ತಿರ ಹೋಗಲು ಬಿಡುತ್ತಿಲ್ಲ. ಇವರು ತಲಾತಲಾಂತರದಿಂದ ಆಚರಿಸಿಕೊಂಡು ಬರುತ್ತಿದ್ದ ನಂಬಿಕೆ ಮತ್ತು ಆಚರಣೆಗಳನ್ನು ಮಾಡಲಾಗದ ಸ್ಥಿತಿಯಲ್ಲಿದ್ದು, ತಮ್ಮ ನಂಬಿಕೆ-ಆಚರಣೆಗಳನ್ನು ಮಾಡಲು ಹಾಗೂ ತಮ್ಮ ಹಿರಿಯರ ಕಲ್ಲುಗೋರಿ, ಕಲ್ಲುಗುಹೆಗಳನ್ನು ಉಳಿಸಿಕೊಡುವ ಅವಕಾಶ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಮುಂದೆ ಇರುಳಿಗರು ಅಂಗಲಾಚುತ್ತಿದ್ದಾರೆ.

ಹಗಲಿರುಳೂ ಬೇರೆಯವರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಬರುವ ಇರುಳಿಗರು ರಾತ್ರಿ ಅರೇಕಲ್ಲಿನ ಮೇಲಕ್ಕೆ ಬಂದು ಸೇರುತ್ತಾರೆ. ಅಲ್ಲೆ ಉಣ್ಣುತ್ತಾ ರಾತ್ರಿ ಕಳೆಯುತ್ತಾರೆ. ಹಾಗೊಮ್ಮೆ ಮಳೆ ಬಂದರೆ ಅಲ್ಲೇ ಹತ್ತಿರ ಇರುವ ಸರಕಾರಿ ಪ್ರಾಥಮಿಕ ಆಸ್ಪತ್ರೆ ಅಥವಾ ಶಾಲೆಯ ವರಾಂಡಗಳಲ್ಲಿ ಮಲಗುವುದಾಗಿ ಹೇಳುತ್ತಾರೆ. ಬೆಳಗ್ಗೆ ಎದ್ದು ಎಂದಿನಂತೆ ಕೂಲಿಗೆ ಹೋಗುವುದೇ ಇವರ ಕಾಯಕವಾಗಿದೆ. ಕೂಲಿ ಕೆಲಸ ಮಾಡಿಸಿಕೊಳ್ಳುವ ಧಣಿಗಳೂ ತಮ್ಮ ಹೊಲದ ಹತ್ತಿರ ಇರಲು ಅವಕಾಶ ಮಾಡಿಕೊಟ್ಟರೆ ಜೋಪಡಿಗಳನ್ನು ಕಟ್ಟಿಕೊಂಡು ಅಲ್ಲೇ ಬದುಕುತ್ತಾರೆ. ಗುಡಿಸಲು ಹಾಕಿಕೊಳ್ಳಲು ಅವಕಾಶ ಮಾಡಿಕೊಟ್ಟ ಜಮೀನು ಮಾಲಕನ ಮನೆ, ಗದ್ದೆಯಲ್ಲಿ ಉಚಿತವಾಗಿ ದುಡಿಯುತ್ತಾರೆ. ಇದಕ್ಕೆ ಸಂಭಾವನೆಯಾಗಿ ಯಜಮಾನ ರಾತ್ರಿ ಎಣ್ಣೆ ಕೊಡಿಸುತ್ತಾನೆ. (ನವ ಮಾದರಿಯ ಜೀತಗಾರಿಕೆ). ಇವರೇ ಹೇಳುವಂತೆ ‘‘ಒಂದು ನೆಲೆ ಇಲ್ಲದ ನಮ್ಮ ಜೀವನ ಊರಿಂದ ಊರು ತಿರುಗುವುದೇ ಆಗಿದೆ’’.

ಇರುಳಿಗರು ಕಬ್ಬಾಳು ಬೆಟ್ಟ, ಸಾವನದುರ್ಗಬೆಟ್ಟ, ರೇವಣಸಿದ್ದೇಶ್ವರಬೆಟ್ಟ, ರಾಮದೇವರಬೆಟ್ಟ ಹಾಗೂ ಮದುಗಿರಿಯಬೆಟ್ಟಗಳಲ್ಲಿ ಇಂದಿಗೂ ಆದಿಮಾನವರಂತೆ ಬದುಕುತ್ತಿದ್ದಾರೆ. ಒಂದೆರಡು ವರ್ಷಗಳ ಹಿಂದೆ ತಮಿಳು ನಟ ಸೂರ್ಯ ಅಭಿನಯಿಸಿರುವ ತಮಿಳು ಸಿನೆಮಾ ‘ಜೈ ಭೀಮ್’ ನೋಡಿದವರಿಗೆ ಇರುಳಿಗರು ಹೇಗಿದ್ದಾರೆ ಇವರ ಬದುಕು ಹೇಗಿದೆ ಎಂಬುದು ಅರ್ಥವಾಗಬಹುದು.

share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X