Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪೂರ್ವಾಗ್ರಹ ಪೀಡಿತ ಸೋಷಿಯಲ್ ಮೀಡಿಯ...

ಪೂರ್ವಾಗ್ರಹ ಪೀಡಿತ ಸೋಷಿಯಲ್ ಮೀಡಿಯ ಪೋಸ್ಟ್‌ಗಳ ಬಗ್ಗೆ ಎಚ್ಚರವಿರಲಿ

ಡಾ. ಎ. ಶ್ರೀಧರಡಾ. ಎ. ಶ್ರೀಧರ25 Jun 2025 11:03 AM IST
share
ಪೂರ್ವಾಗ್ರಹ ಪೀಡಿತ ಸೋಷಿಯಲ್ ಮೀಡಿಯ ಪೋಸ್ಟ್‌ಗಳ ಬಗ್ಗೆ ಎಚ್ಚರವಿರಲಿ

ಬಿಡುವು ಸಿಕ್ಕಿದಾಗಲೆಲ್ಲ ಮನೆಯ ಹತ್ತಿರವೇ ಇರುವ ಲಾಲ್‌ಬಾಗಿನಲ್ಲಿ ಅಡ್ಡಾಡುವುದು ಸುಮಾರು ದಶಕಗಳ ನನ್ನ ಅಭ್ಯಾಸ. ವಾಯುವಿಹಾರ ಮುಗಿಸಿದ ನಂತರ ಬಳಿಯಲ್ಲೇ ಇರುವ ಹೆಸರಾಂತ ಟಿಫಿನ್ ರೂಂಗೆ ಕಾಫಿ ಕುಡಿಯಲು ಭೇಟಿ. ಹೊರಗಡೆ ನಿಂತು ಕಾಫಿ ಸವಿಯುತ್ತ ಅವರಿವರ ಮಾತು, ಅಭಿಪ್ರಾಯಗಳಿಗೆ ಕಿವಿಕೊಡುವುದೂ ಕೂಡ ಅಭ್ಯಾಸವಾಗಿಯೇ ಬಿಟ್ಟಿದೆ. ಎಲ್ಲಾ ವಿಷಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಹಿರಿಯರೇ ಟಿಫಿನ್ ರೂಂ ಹೊರಗಡೆ ನಿಂತು ಕಾಫಿ ಕುಡಿಯುವುದು ಇಲ್ಲಿ ಕಂಡು ಬರುವ ವಿಶೇಷ ಲಕ್ಷಣ. ಐಪಿಎಲ್ ಪಂದ್ಯಾವಳಿಗಳ ಬಗ್ಗೆಯಂತೂ ಚರ್ಚೆಯೋ ಚರ್ಚೆ. ಅದೆಷ್ಟೋ ಸಲ ತೀರಾ ವಿಕೋಪಕ್ಕೆ ಹೋಗುವಷ್ಟರ ಅಭಿಪ್ರಾಯಗಳು. ಆಟಕ್ಕಿಂತಲೂ ಟೀಂ ಪ್ರಾದೇಶಿಕತೆ, ಆಟಗಾರರ ಆಟದ ಸಾಮರ್ಥ್ಯಕ್ಕಿಂತಲೂ ಆಟಗಾರರ ಅಭಿನಯ ಸಾಮರ್ಥ್ಯದ ಬಗ್ಗೆ ಬಿರುಸಿನ ವಿಶ್ಲೇಷಣೆ ಸಮರ್ಥಿಸಿಕೊಳ್ಳಲು ನೀಡುತ್ತಿದ್ದ ಆಧಾರಗಳು. ಹೆಚ್ಚಿನ ಸಮಯದಲ್ಲಿ ಇವುಗಳ ಮೂಲವು ಬಹು ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್ ರವಾನೆಗಳಿಂದ ಬಂದಿದ್ದವುಗಳು. ಇವುಗಳನ್ನು ಕೇಳಿಸಿಕೊಂಡಾಗಲೆಲ್ಲಾ ನನಗನಿಸುತ್ತಿದ್ದದ್ದು ಕೇವಲ ಒಂದು ನಿಮಿಷದೊಳಗಿನ ಚಿತ್ರ ಸಹಿತವಾದ ವಿಷಯಗಳು ಅನುಭವ, ವಯೋಮಾನದಲ್ಲಿ ಮುಂದಿರುವವರ ಮನಸ್ಸಿಗೆ ಎಷ್ಟು ಸರಾಗವಾಗಿ ಅಂಟಿಕೊಳ್ಳುತ್ತಿದೆಯಲ್ಲ ಏಕೆ, ಹೇಗೆ ಎನ್ನುವುದು.

ಮನಸ್ಸಿನಲ್ಲಿ ಮೂಡುತ್ತಿದ್ದ ಈ ಪ್ರಶ್ನೆಗೆ ಉತ್ತರ ಹುಡುಕುವ ಸಲುವಾಗಿ ಮನದ ಅಧ್ಯಯನ, ಪ್ರಯೋಗಗಳನ್ನು ಶೋಧಿಸಲು ಆರಂಭಿಸಿದೆ. ಉತ್ತರಗಳೇನೋ ಸಿಕ್ಕಿದವು. ಈ ಮಾಧ್ಯಮಗಳು ಒಂದು ದೃಷ್ಟಿಯಲ್ಲಿ ಗೊತ್ತುಗುರಿಯಿಲ್ಲದ ರೀತಿಯಲ್ಲಿ ಹುಟ್ಟಿಕೊಂಡರೂ ಅವುಗಳಲ್ಲಿ ವೈಯಕ್ತಿಕ ಸ್ವರೂಪದ ಬೇಗುದಿ, ಆಕ್ರೋಶಗಳು ಮೂಡಿಸುವಂತಹ ವಿಷಯಗಳು ಮುನ್ನೆಲೆಗೆ ಬಂದಿರುತ್ತವೆ. ಇದು ಬಹಳ ಸಹಜದ ಮಾನಸಿಕ ಕ್ರಿಯೆಯೂ ಹೌದು. ಒಂದು ರೀತಿಯಲ್ಲಿ ನರಮಂಡಲದಿಂದ ಮೂಡುವ ತಕ್ಷಣದ ಪ್ರತಿಕ್ರಿಯೆ. ಪ್ರಾಣಿಗಳಲ್ಲಿವು ತನ್ನ ಜಾಗ, ಆಹಾರ ಮತ್ತು ಸಂತತಿಯನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಹೊರಬರುವ ಆಕ್ರಮಣಕಾರಿ ವರ್ತನೆ. ಆದರೆ ಮನುಷ್ಯನಲ್ಲಿದು ನಾಗರಿಕತೆಯ ಪರಿಣಾಮದಿಂದಾಗಿ, ಅಂದರೆ ಸಹಬಾಳ್ವೆಯ ಅಗತ್ಯ, ಶಿಕ್ಷಣ, ಆಲೋಚನೆ, ಮಾತಾಡುವ ಸಾಮರ್ಥ್ಯಗಳು ಇಂತಹ ವರ್ತನೆಗಳನ್ನು ಕಾಲಾನುಕಾಲಕ್ಕೆ ಬದಲಾಯಿಸಿರುತ್ತದೆ. ಆದರಿಂದು ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು ಮತ್ತದೇ ಹಳೆಯ ರೋಷ, ಆವೇಶಭರಿತ ನಡೆನುಡಿಗಳನ್ನು ತನ್ನವರಲ್ಲದವರು ಅನಿಸಿದಾಗ ಹೊರತರುತ್ತದೆ. ಇವುಗಳನ್ನು ಮನೋವೈಜ್ಞಾನಿಕ ಭಾಷೆಯಲ್ಲಿ ಪ್ರಿಜುಡಿಸ್(ಪೂರ್ವಾಗ್ರಹ) ಸ್ಟಿರಿಯೋಟೈಪ್ಸ್ (ರೂಢಿಗತ) ವರ್ತನೆಗಳೆಂದು ಗುರುತಿಸಲಾಗುತ್ತದೆ.

ಅತಿಭಾವುಕತೆಯನ್ನು ಬಲಪಡಿಸುವ ಸೋಷಿಯಲ್ ಮೀಡಿಯಾ ಪೋಸ್ಟುಗಳು

ಈ ಎರಡು ಮಾನಸಿಕ ಸ್ಥಿತಿಗಳು ಬಹುವೇಗವಾಗಿ ವ್ಯಕ್ತಿಯ ಮನದಾಳವನ್ನು ಪ್ರವೇಶಿಸಿ ಪ್ರತಿಯೊಂದು ಆಲೋಚನೆ, ಅಭ್ಯಾಸಗಳಲ್ಲಿ ನುಸುಳಿರುವುದು. ಹೀಗಾದಾಗ ವ್ಯಕ್ತಿಯ ಮನಸ್ಸು ನಿರ್ದಾಕ್ಷಿಣ್ಯವಾಗಿ ವಿಚಾರ ಮಾಡಬಲ್ಲ ಶಕ್ತಿಯನ್ನು ಬದಿಗೆ ಸರಿಸಿ ಭಾವುಕ ಶಕ್ತಿಯನ್ನು ಮಾತ್ರ ಹೊರತರುತ್ತದೆ. ನೀವೇ ಕೊಂಚ ಯೋಚಿಸಿ ನೋಡಿ ನಿಮ್ಮ ಮನಸ್ಸು ಹದಗೆಟ್ಟಿದ್ದಾಗ ಅದೆಷ್ಟೋ ಅರ್ಥವಿಲ್ಲದ ಸಂಗತಿ, ಪ್ರಸಂಗಗಳೂ ಕೂಡ ತೀವ್ರವೆನಿಸುವುದಿಲ್ಲವೆ? ಆಗ ಸಿಟ್ಟು ಆಕ್ರೋಶ ಭರಿತ ಕ್ರಿಯೆಗಳು ಸುಲಭವಾಗಿ ಹೊರಬಂದಿರುವ ಅನುಭವವನ್ನು ನೀವು ಗಮನಿಸಿಯೂ ಇರಬಹುದು. ರಾಜಕಾರಣಿಗಳು ತಮ್ಮ ಭಾಷಣದ ಭರದಲ್ಲಿ ಅನಗತ್ಯವಾಗಿ ದ್ವೇಷಭರಿತ ಮಾತುಗಳು ಹೊರತರುವಂತೆ. ತಿಳಿವಳಿಕೆಗೆ ಹೆಸರಾದ ಚಲನಚಿತ್ರ ತಾರೆಯರು ಭಾಷೆ, ಅಭಿಮಾನಗಳ ಬಗ್ಗೆ ಆಡುವ ಹಗುರವಾದ ಹೇಳಿಕೆಗಳೂ ಇಂತಹುದರ ನಿದರ್ಶನ. ಜನಾಕ್ರೋಶಕ್ಕೆ ಕಾರಣವಾಗುವ ಇಂತಹ ಅಭಿಪ್ರಾಯಗಳಲ್ಲಿ ಭಾಷೆ, ಹೊರಗಿನವರು, ತನ್ನವರಲ್ಲ ಎನ್ನುವ ಒಳಮನಸ್ಸಿನ ಭಾವನೆಗಳಿಗೆ ಪೂರ್ವಾಗ್ರಹ ಅಥವಾ ಸರಿತಪ್ಪು ಎನ್ನುವ ವಿಮರ್ಶೆ ಮಾಡದೆ ಏಕಾಏಕಿ ಕೊಡುವ ಸಮ್ಮತಿಯಿಂದಾದುರ ಪ್ರಭಾವ ಎನ್ನಬಹುದು. ಈ ಮಾನಸಿಕ ಸ್ಥಿತಿಯನ್ನು ನಿರಂತರವಾಗಿ ಬಲಪಡಿಸುವ ಲಕ್ಷಣವನ್ನು ಸಾಮಾಜಿಕ ಮಾಧ್ಯಮಗಳು ಹೊಂದಿರುತ್ತವೆ. ಯಾವಾಗಲೋ ಯಾರೋ ಆಡಿದ ಹಳಸಿದ ಮಾತುಗಳು, ಎಂದೋ ಎಲ್ಲೋ ನಡೆದಿರಬಹುದಾದ ದೃಶ್ಯ, ಚಿತ್ರಗಳನ್ನು ಇಂದು ನಿನ್ನೆ ನಡೆದದ್ದು ಎನ್ನುವ ರೀತಿಯಲ್ಲಿ ಬಿಂಬಿಸಿ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಯಾವಾಗಲೂ ಇರುವ ತಾಳ್ಮೆ, ತರ್ಕಗಳಿಗೆ ಬಲವಾದ ಹೊಡೆತ ಕೊಟ್ಟು ಬದಲಾವಣೆಗೆ ಒಳಪಡಿಸುವುದು. ಅಂದರೆ ನೀವು ನಿಜವಾಗಿಯೂ ಒಪ್ಪದ ವಿಚಾರ, ಅಭಿಪ್ರಾಯಗಳನ್ನು ಒಪ್ಪುವಂತಹ ಮನೋಒತ್ತಡಗಳನ್ನು ಈ ಮಾಧ್ಯಮಗಳು ಸೃಷ್ಟಿಸಬಲ್ಲದ್ದಾಗಿರುವುದು.

ಈ ವಿಷಯಗಳು ಮೇಲ್ನೋಟಕ್ಕೆ ಅಪಾಯಕಾರಿ ಎನಿಸದಿದ್ದರೂ ಒಳಮನಸ್ಸಿನಲ್ಲಿ ನಿರಂತರವಾಗಿ ಕಳಂಕ, ಪಾಪಪ್ರಜ್ಞೆ ಮತ್ತು ಅಸಹಾಯಕತೆಯ ಭಾವಗಳನ್ನು ಸೃಷ್ಟಿಸುತ್ತಲೇ ಇರುವುದು. ಇದು ಎಲ್ಲಿಯ ತನಕ ಒತ್ತೆಯಾಳಾಗಿ ಇರುವುದೋ ಹೇಳುವುದು ಸುಲಭವಲ್ಲ. ಒಂದಿಲ್ಲೊಂದು ಸನ್ನಿವೇಶದಲ್ಲಿ ಇದು ಹೊರಬರುವುದಂತೂ ನಿಶ್ಚಿತ. ಆದರದು ಕುಸಿದ ಮಾನಸಿಕ ಬಲವಾಗಿದ್ದು ಅಪಕ್ವ ವರ್ತನೆಗಳ ಮೂಲಕ ಕಾಣಿಸಿಕೊಳ್ಳುತ್ತದೆ. ನಿದ್ರಾಹೀನತೆ, ಅಸಹಕಾರ, ಅಂಧಶ್ರದ್ಧೆ, ಹತಾಶೆಯ ಛಾಯೆಗಳು ಇಂತಹ ಮಾನಸಿಕತೆಯ ಪ್ರಮುಖ ಲಕ್ಷಣ.

ಮನಸ್ಸಿನಲ್ಲಿ ಪೂರ್ವಾಗ್ರಹ ಇಳಿಯುವ ರೀತಿ

ಇಂದಿನ ತಂತ್ರಜ್ಞಾನದ ನೆಲೆಗಳಿಂದ ಹೊರ ಬರುತ್ತಿರುವ ವಿನೂತನ ಸಾಮೂಹಿಕ ಸಂಪರ್ಕದ ಸಾಧನ, ತಂತ್ರಾಂಶಗಳು, ಕೃತಕ ಬುದ್ಧಿಶಕ್ತಿಯ ಸ್ವರೂಪಗಳೂ ಸೇರಿದಂತೆ, ವ್ಯಕ್ತಿಯ ಮನದಾವರಣದ ದೊಡ್ಡ ಭಾಗವನ್ನು ವಶಪಡಿಸಿಕೊಂಡಿರುವ ಸಾಧ್ಯತೆಗಳು ಹೆಚ್ಚು. ತಮ್ಮ ಪರಸ್ಪರ ಸಂಪರ್ಕ, ಸಂಭಾಷಣೆಗಳನ್ನು ಸಹ ಈ ತಂತ್ರಾಂಶ ಅಥವಾ ಸಾಧನೆಗಳು ಸಮಯೋಚಿತವಾಗಿ ಒದಗಿಸಬಲ್ಲ ಮಾಧ್ಯಮಗಳೇ ಇಂದು ಪ್ರಬಲ. ಅತಿ ಸಣ್ಣ ವಯಸ್ಸಿನಿಂದಲೇ ನಗರ ಪ್ರದೇಶ, ಕೆಲವು ಗ್ರಾಮೀಣ ಪ್ರದೇಶಗಳ ಮಕ್ಕಳಿಗೂ ಇವುಗಳ ಪರಿಚಯವಿರುವುದರಲ್ಲಿ ಸಂದೇಹವಿಲ್ಲ. ಆದರೆ ಈ ಮಾಧ್ಯಮಗಳು ಹೊರತರುವ ವಿಷಯಗಳ ನಂಬಲರ್ಹತೆ ಮತ್ತು ಉಪಯುಕ್ತತೆಗಳು ಹೆಚ್ಚಿನ ಪಾಲಿನ ಬಳಕೆದಾರರಿಗೆ ಗೊತ್ತಾಗದು. ಅತಿ ಮುಖ್ಯವಾಗಿ ಸುದ್ದಿ ಸ್ವರೂಪವನ್ನು ಹೊತ್ತು ಹೊರಬರುವ ವಿಷಯಗಳು ಸಾಮಾಜಿಕ ಸಾಮರಸ್ಯ, ವ್ಯಕ್ತಿ ಭಾವನೆ, ವೈಯಕ್ತಿಕತೆಗಳನ್ನು ಕಡೆಗಣಿಸಿ ತಮ್ಮ ಉದ್ದೇಶ, ಹೆಚ್ಚಿನ ಸಮಯದಲ್ಲಿ ದುರದ್ದೇಶಗಳನ್ನು, ಪ್ರಚಾರಮಾಡುವುದು. ವ್ಯಕ್ತಿ ಮನಸ್ಸಿನಲ್ಲಿ ಹಿಂಸೆ, ಆಕ್ರೋಶವನ್ನು ಬಿತ್ತುವಂತಹ ಸುದ್ದಿ, ವಿಚಾರಗಳನ್ನು ಸಚಿತ್ರವಾಗಿ ವರ್ಣಿಸಿ, ಪ್ರಸರಣಕ್ಕೆ ಬಿಟ್ಟಾಗ ಅದು ಗಟ್ಟಿಯಾಗಿ ಮನದೊಳಗೆ ಸೇರುವಂತೆ ಮಾಡುತ್ತದೆ ಮಾಧ್ಯಮ ಮತ್ತು ಸಲಕರಣೆ, ಸಾಧನಗಳು. ಏಕೆಂದರೆ ಇವುಗಳ ಮೇಲೆ ಬಳಕೆದಾರ ಇಟ್ಟಿರುವ ಪ್ರಶ್ನಾತೀತ ವಿಶ್ವಾಸ, ನಂಬಿಕೆಗಳು ವಿಷಯದಲ್ಲಡಗಿರುವ ಹುಸಿತನ, ಆವೇಶಗಳನ್ನು ಗುರುತಿಸಲಾಗದಂತೆ ಮಾಡಿಬಿಡುತ್ತದೆ. ಹೀಗೆ ಮಾಡಲಿ ಎನ್ನುವ ಉದ್ದೇಶವೇ ಪ್ರಸರಣಕ್ಕೆ ಒಳಪಡಿಸುವವರ ಉದ್ದೇಶವೂ ಆಗಿರುತ್ತದೆ ಎನ್ನುವುದನ್ನು ಮರೆಮಾಚುವಂತಿಲ್ಲ. ತಮ್ಮ ವಿಚಾರ ಮಾಡುವ ಬಲವನ್ನು ಬದಿಗಿರಿಸಿ ಪ್ರಚಾರದಲ್ಲಿರುವ ಸುದ್ದಿಯನ್ನು ನಂಬಿ ಸಂಕಟ, ಆವೇಶಕ್ಕೆ ಒಳಗಾಗುವುದನ್ನೇ ಪೂರ್ವಾಗ್ರಹದ ಪರಿಣಾಮ ಎನ್ನುವುದು. ಹೆಚ್ಚಿನ ಸಮಯದಲ್ಲಿ ಪೂರ್ವಾಗ್ರಹವು ಇರುವ ಕ್ಷೇತ್ರಗಳು ಜನಾಂಗೀಯತೆ, ಕೋಮು ಭಾವ, ಧಾರ್ಮಿಕತೆ, ಭಾಷೆ ಮತ್ತು ಆಹಾರಕ್ಕೆ ಸಂಬಂಧಿಸಿದ ನಂಬಿಕೆಗಳತ್ತ ತೀವ್ರವಾಗಿರುತ್ತವೆ.

ಜನಾಂಗೀಯ ದ್ವೇಷಕ್ಕೆ ಸಿಲುಗಿದ್ದ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಸಿಗ್ಮಂಡ್ ಫ್ರಾಯ್ಡ್

ಇಂತಹ ಮಾನಸಿಕತೆಯನ್ನು ನಿರೂಪಿಸಿರುವ ಹಳೆಯದಾದ ಉದಾಹರಣೆ ಎಂದರೆ ಜರ್ಮನಿಯಲ್ಲಿ ನೂರಾರು ವರ್ಷಗಳ ಹಿಂದೆ ಯಹೂದಿಗಳು ಎದುರಿಸುತ್ತಿದ್ದ ಅನಾದರ ಮತ್ತು ದ್ವೇಷ. ಇಂತಹದೊಂದು ದ್ವೇಷದ ಸ್ಥಿತಿಯನ್ನು ಎದುರಿಸಲಾರದೆ ದೇಶ ಬಿಟ್ಟವರಲ್ಲಿ ಖ್ಯಾತ ಭೌತವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಖ್ಯಾತ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಸೇರಿದ್ದಾರೆ. ಫ್ರಾಯ್ಡ್ ತಮ್ಮ ಜೀವನ ವೃತ್ತಾಂತದಲ್ಲಿ ಈ ವಿಷಯವನ್ನು ಬಹಳ ಆಳವಾಗಿ ವಿಮರ್ಶಿಸಿದ್ದಾರೆ. ಅವರು ಸಣ್ಣ ವಯಸ್ಸಿನವರಿದ್ದಾಗ ನಡೆದ ಪ್ರಸಂಗವಿದು. ಅವರಿದ್ದ ಊರು ಆಸ್ಟ್ರಿಯಾದ ಒಂದು ಸಣ್ಣ ಹಳ್ಳಿ. ಒಮ್ಮೆ ಅವರ ತಂದೆಯೊಂದಿಗೆ ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಮೂರ್ನಾಲ್ಕು ಜನ ಯಹೂದಿ ವಿರೋಧಿಗಳು ಫ್ರಾಯ್ಡ್‌ನ ತಂದೆ ಹಾಕಿಕೊಂಡಿದ್ದ ಟೋಪಿಯನ್ನು ಕಸಿದು ಪಕ್ಕದಲ್ಲಿದ್ದ ಗಟಾರದಲ್ಲಿ ಬಿಸಾಡಿದ್ದರು. ನಂತರ ಅದನ್ನು ತೆಗೆದುಕೊಳ್ಳುವಂತೆಯೂ ಮಾಡಿದ್ದರು. ಇದನ್ನು ಗಮನಿಸಿದ್ದ ಫ್ರಾಯ್ಡ್ ನಂತರ ತಂದೆಯವರಲ್ಲಿ ಈ ಬಗ್ಗೆ ಏಕೆ ಪ್ರತಿಭಟಿಸಲಿಲ್ಲವೆಂದು ಕೇಳಿದಾಗ ಇದರ ಬಗ್ಗೆ ಕ್ರಮೇಣ ನಿನಗೇ ಅರ್ಥವಾಗುತ್ತದೆ ಎಂದು ವಿಷಯ ಬದಲಾಯಿಸಿದ್ದರು. ಈ ನಮೂನೆಯ ವರ್ತನೆಗಳು ಅವರ ವಿದ್ಯಾರ್ಥಿ ದೆಸೆ ಮತ್ತು ವೈದ್ಯರಾಗಿದ್ದ ಆಸ್ಪತ್ರೆಯಲ್ಲಿಯೂ ಮುಂದುವರಿದಿತ್ತು. ಆದರೆ ಒಮ್ಮೆ ಅವರು ಕೊಂಚ ಹೆಸರುವಾಸಿಯಾಗಿದ್ದ ಸಮಯದಲ್ಲಿ ತಮ್ಮ ಮಕ್ಕಳೊಂದಿಗೆ ಒಂದು ರೆಸಾರ್ಟ್ ಪಾರ್ಕಿನಲ್ಲಿ ವಾಯುವಿಹಾರ ಮಾಡುತ್ತಿದ್ದಾಗ ಯಹೂದಿ ವಿರೋಧಿ ಪುಂಡರು ಮಗನನ್ನು ಕೀಟಲೆ ಮಾಡುತ್ತಿದ್ದನ್ನು ಗಮನಿಸಿದ ಅವರು ಯಾವುದೇ ಸಂಕೋಚವಿಲ್ಲದೆ ಪುಂಡರತ್ತ ತಮ್ಮ ಬಳಿಯಿದ್ದ ಬೆತ್ತವನ್ನು ಬೀಸುತ್ತಾ ನುಗ್ಗಿದ್ದರು. ಇದನ್ನು ಕಂಡ ಪುಂಡರು ಅಲ್ಲಿಂದ ಕಾಲ್ಕಿತ್ತಿದ್ದನ್ನು ಕಂಡು ಮಕ್ಕಳಿಗೆ ಕೊಂಚ ದಿಗ್ಭ್ರಮೆಯೇ ಆಗಿತ್ತು, ಏಕೆಂದರೆ ಪುಂಡರು ತಿರುಗಿ ಬಿದ್ದಿದ್ದರೇ ಎನ್ನುವ ಆತಂಕ. ಆಗ ಫ್ರಾಯ್ಡ್ ಹೇಳಿದ್ದ ಮಾತುಗಳು ಮಕ್ಕಳ ಮನಸ್ಸಿಗೆ ಹಿಡಿಸಿತ್ತು. ಧರ್ಮದಲ್ಲಿ ನಂಬಿಕೆಗಿಂತ ಮೂಢನಂಬಿಕೆ ಇದ್ದವರ ವರ್ತನೆಗಳೇ ಹೀಗೆ ಪಲಾಯನ ಮಾಡುವುದು. ಇತರರಿಗೆ ಹಿಂಸೆ ಕೊಡುವವರನ್ನು ಕಂಡು ಹೆದರುವುದಕ್ಕಿಂತ ತನ್ನಲ್ಲಿರುವ ವಿವೇಚನಾ ಶಕ್ತಿಯ ಮೂಲಕ ಪಡೆಯುವ ಸಮಯ ಪ್ರಜ್ಞೆ ಸದಾ ಬಲಿಷ್ಠವಾಗಿರುತ್ತದೆ ಎನ್ನುವುದನ್ನು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಟ್ಟಿದ್ದರು. ಹಾಗೆಯೇ ಮಹಾತ್ಮಾ ಗಾಂಧೀಜಿಯವರನ್ನು ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಹೊರಹಾಕಿದ ಪ್ರಸಂಗವೇ ಅಲ್ಲಿದ್ದ ವರ್ಣಭೇದ ನೀತಿಯ ಅಂತ್ಯಕ್ಕೆ ಕಾರಣವಾಯಿತು.

ಆದರೆ, ಇಂದಿನ ಕಾಲಘಟ್ಟದಲ್ಲಿ ಇಂತಹ ಸನ್ನಿವೇಶಗಳನ್ನೇ ಮಹಾರಂಜನೀಯವಾಗಿಸಿ, ಭಾವೋದ್ರೇಕ ಭರಿತ ದೃಶ್ಯ, ಮಾತುಗಳ ಮೂಲಕ ಕ್ಷಣ ಮಾತ್ರದಲ್ಲಿ ಲಕ್ಷೋಪಲಕ್ಷ ಜನರಿಗೆ ತಲುಪುವಂತೆ ಮಾಡುವ ಸಾಧ್ಯತೆಗಳು ಹೇರಳ. ವ್ಯಕ್ತಿಯಲ್ಲಡಗಿರುವ ವಿವೇಚನೆ ವಿರೋಧಗಳು ಹೊರಬರದಿರುವುದಕ್ಕೂ ಈ ವೇಗ, ಆವೇಗಗಳು ಕಾರಣವಾಗಿರಬಲ್ಲವು. ಇಂತಹ ಸನ್ನಿವೇಶದಲ್ಲಿ ಸಂಯಮ, ಸಜ್ಜನಿಕೆಯ ಮನಸ್ಸುಳ್ಳವರೂ ಇವುಗಳನ್ನು ಒಪ್ಪಿಕೊಳ್ಳಲಾರದೆ, ಎದುರಿಸಲಾಗದೇ ಬೇರೆ ಇನ್ನಾವ ದಾರಿಯೂ ಕಾಣದೆ ಹತಾಶೆ, ಜಿಗುಪ್ಸೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ಈ ಸ್ಥಿತಿಗಳು ವ್ಯಕ್ತಿಯಲ್ಲಿ ವಿದ್ಯೆ, ಆರೋಗ್ಯಕರ ಬೆಳವಣಿಗೆ ಇರುವವರ ಮನಸ್ಸಿಗೂ ಆಘಾತಗಳನ್ನು ಉಂಟುಮಾಡಿ ಸಂಕುಚಿತ ಮನಸ್ಥಿತಿಗೆ ಕಾರಣವಾಗಬಲ್ಲದು.

ಆದುದರಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡು ಬರುವ ವಿಷಯಗಳೆಲ್ಲವೂ ನಂಬಲು ಅರ್ಹವಾದುದು ಅಲ್ಲ. ಅವುಗಳಲ್ಲಿನ ಹೆಚ್ಚಿನವು ಅನಾರೋಗ್ಯಕರ ಮಾನಸಿಕತೆ ಇರುವವರಿಂದ ಹೊರಬಂದಿರುವಂತಹದ್ದು ಎಂದು ಅಂದಾಜಿಸುವುದರಿಂದ ಲಾಭವೇ ಹೆಚ್ಚು. ಏಕೆಂದರೆ ಅನಾರೋಗ್ಯಕರ ಆತಂಕ, ಭಯದ ಸ್ಥಿತಿಯಲ್ಲಿರುವವರು ಅವುಗಳು ಕೊಡುವ ಹಿಂಸೆಯಿಂದ ತಪ್ಪಿಸಿಕೊಳ್ಳಲು ತವಕದಿಂದ ಕಾಯುತ್ತಲೇ ಇರುತ್ತಾರೆ. ತಮ್ಮಿಂದ ಬೇರೆಯವರಿಗೆ ವರ್ಗಾಯಿಸುವ ಅವಕಾಶಕ್ಕಾಗಿ ಕಾಯುತ್ತಿರುವುದಂತೂ ತೀರಾ ಸಾಮಾನ್ಯ. ಅವಕಾಶ ಸಿಕ್ಕಿದ ತಕ್ಷಣ ವರ್ಗಾವಣೆ ಮಾಡಿ ನೆಮ್ಮದಿ ಸಿಕ್ಕಿತೆಂದುಕೊಳ್ಳುತ್ತಾರೆ. ಮನೋ ಒತ್ತಡದಿಂದ ಬಿಡುಗಡೆಯಾದೆ ಎನ್ನುವ ಭ್ರಮೆ ಅವರಿಗೆ ಸುಖ ಅಥವಾ ಏನೋ ಮಹದುಪಕಾರ ಮಾಡಿರುವ ಭಾವನೆಯನ್ನು ಹುಟ್ಟಿಸಿರುತ್ತದೆ.

share
ಡಾ. ಎ. ಶ್ರೀಧರ
ಡಾ. ಎ. ಶ್ರೀಧರ

ಮನೋವಿಜ್ಞಾನಿ

Next Story
X