Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೆಂಗಳೂರು ಸಾಹಿತ್ಯೋತ್ಸವ:...

ಬೆಂಗಳೂರು ಸಾಹಿತ್ಯೋತ್ಸವ: ಕೇಳಿಸುತ್ತಿರುವ ಧ್ವನಿಗಳು, ಮರೆಮಾಡಲ್ಪಟ್ಟ ಸ್ವರಗಳು

ಡಾ. ರವಿನಾರಾಯಣ ಚಕ್ರಕೋಡಿಡಾ. ರವಿನಾರಾಯಣ ಚಕ್ರಕೋಡಿ11 Dec 2025 3:13 PM IST
share
ಬೆಂಗಳೂರು ಸಾಹಿತ್ಯೋತ್ಸವ: ಕೇಳಿಸುತ್ತಿರುವ ಧ್ವನಿಗಳು, ಮರೆಮಾಡಲ್ಪಟ್ಟ ಸ್ವರಗಳು

ಇತ್ತೀಚೆಗೆ ನಡೆದ ಎರಡು ದಿನಗಳ ಬೆಂಗಳೂರು ಸಾಹಿತ್ಯೋತ್ಸವವು (Bangalore Literature Festival) ಸಾಹಿತ್ಯ, ಸಂಸ್ಕೃತಿ ಮತ್ತು ಬೌದ್ಧಿಕ ಚಿಂತನೆಗಳ ವೈವಿಧ್ಯತೆಯಿಂದ ತುಂಬಿತ್ತು. ನಗರ ಜೀವನ, ಲಿಂಗ, ಆಹಾರ ಪರಂಪರೆ, ಶಾಸ್ತ್ರೀಯ ಸಂಪ್ರದಾಯಗಳು, ಮನೋವೈಜ್ಞಾನಿಕ ಚಿಂತನೆಗಳ ಕುರಿತ ಸಂವಾದಗಳ ಜೊತೆಗೆ ಚಿತ್ರಕಲೆ, ಶಾಸ್ತ್ರೀಯ ಪಠ್ಯಗಳು, ಬಹುಭಾಷಾ ಕಥನ ಪರಂಪರೆ, ಸಮಕಾಲೀನ ಅಧಿಕಾರ, ರಾಜಕೀಯ, ಮಾನಸಿಕ ಆರೋಗ್ಯ, ಸಮುದಾಯ ಕಥನಗಳು, ಕೃತಕ ಬುದ್ಧಿಮತ್ತೆ ಮುಂತಾದ ವಿಷಯಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ಅನ್ವೇಷಿಸಲಾಯಿತು.

ಹಾಗೇನೆ, ಇತಿಹಾಸ, ಸಾಮ್ರಾಜ್ಯಗಳ ಉದಯ-ಪತನ, ಹವಾಮಾನ ಬದಲಾವಣೆ, ಕುಟುಂಬದ ಕಥಾನಕಗಳು, ಚಲನಚಿತ್ರ ನಿರ್ಮಾಣ, ಕ್ರೈಂ ಫಿಕ್ಷನ್, ಷೇರು ಮಾರುಕಟ್ಟೆ ಮುಂತಾದ ವಿಷಯಗಳ ಕುರಿತು ಚರ್ಚೆಗಳು ನಡೆದವು.

ಆದರೆ ಇದೇ ಸಮಯದಲ್ಲಿ, ಈ ಉತ್ಸವ ನನ್ನೊಳಗೊಂದು ಮೌನವಾದ ಪ್ರಶ್ನೆಯನ್ನು ಹುಟ್ಟುಹಾಕಿತು: ಈ ವೇದಿಕೆಯಲ್ಲಿ ಯಾರು ಇದ್ದರು? ಮತ್ತು ಯಾರು ಇರಲಿಲ್ಲ?

ಎಷ್ಟೇ ಉತ್ತಮ ಚರ್ಚೆಗಳಿದ್ದರೂ, ಒಂದು ಮಾತ್ರ ನಿಜ: ಈ ಉತ್ಸವದಲ್ಲಿ ಎಲ್ಲರ ಧ್ವನಿಗಳೂ ಇರಲಿಲ್ಲ.

ಬಹುತೇಕರು ನಗರ ಕೇಂದ್ರಿತ Gen Z ಬಗ್ಗೆ, ಅವರ ಬಿಚ್ಚು ನುಡಿಗಳ ಬಗ್ಗೆ, ಮಧ್ಯಮ ವರ್ಗದ ಜೀವನಾನುಭಗಳ ಬಗ್ಗೆ ಮಾತನಾಡಿದರು. ಆದರೆ ಅವರು ಯಾರನ್ನು ಉದ್ದೇಶಿಸುತ್ತಿದ್ದರು?

ಅದು ಅಂಚಿನಲ್ಲಿರುವ ದಮನಿತ, ಶೋಷಿತ ಸಮುದಾಯಗಳ ಬಗ್ಗೆ ಅಲ್ಲ, ಅದು ಸರಕಾರಿ ಶಾಲೆಯ ಮಕ್ಕಳ ಬಗ್ಗೆ ಅಲ್ಲ. ಅದು ಗ್ರಾಮೀಣ ಜನರ ಬದುಕಿನ ಜಂಜಾಟಗಳ ಬಗ್ಗೆಯೂ ಅಲ್ಲ ಅವರ ಮಾತುಗಳಲ್ಲಿ ಮಧ್ಯಮ ವರ್ಗದ ಸಣ್ಣ ಗುಂಪಿನ ಮಕ್ಕಳು ಮಾತ್ರ Gen Z ಆಗಿಬಿಟ್ಟರು! ಇದು ಬೆಂಗಳೂರು ಸಾಹಿತ್ಯ ಉತ್ಸವದ ದೊಡ್ಡ ಸಮಸ್ಯೆಯ ಸೂಚಕ.

ಇಂಗ್ಲಿಷ್ ಸಾಹಿತ್ಯದ ವೇದಿಕೆಗಳಲ್ಲಿ ಈ ಹೊರಗೂಡುವಿಕೆ ಇನ್ನಷ್ಟು ತೀವ್ರವಾಗಿದೆ. ಕನ್ನಡ ಸಾಹಿತ್ಯದಲ್ಲಿ ದಮನಿತರ ಧ್ವನಿಗೆ, ಅಂಚಿನವರ ಅನುಭವಗಳಿಗೆ ಒಂದು ದೀರ್ಘ ಪರಂಪರೆ ಇದೆ. ಆದರೆ ಇಂಗ್ಲಿಷ್ ಸಾಹಿತ್ಯ? ಇನ್ನೂ ಅದು ಮಧ್ಯಮ ವರ್ಗ ಮತ್ತು ಎಲೀಟ್ ವರ್ಗದವರಿಗೆ ಸೇರಿದ ಸುರಕ್ಷಿತ ವಲಯ!

ಎರಡು ದಿನಗಳ ಕಾರ್ಯಕ್ರಮಗಳ ಪಟ್ಟಿ ನೋಡಿದರೆ ಒಂದು ಅಚ್ಚರಿಯ ಸಂಗತಿ ಗೋಚರಿಸುತ್ತದೆ: ಅಲ್ಲಿ ಶೋಷಿತರ, ದಮನಿತರ ಕುರಿತಾಗಿ ಚರ್ಚೆ ಇಲ್ಲ. ದಲಿತ ಸಾಹಿತ್ಯದ ಕುರಿತು ಗೋಷ್ಠಿ, ಸಂವಾದಗಳಿಲ್ಲ.

ಇದು ಯಾಕೆ? ದಮನಿತರು, ಶೋಷಿತರು ಇಂಗ್ಲಿಷ್‌ನಲ್ಲಿ ಬರೆಯುತ್ತಿಲ್ಲವೇ? ದಲಿತ ಸಾಹಿತ್ಯದ ಇಂಗ್ಲಿಷ್ ಅನುವಾದಗಳು ಲಭ್ಯವಿಲ್ಲವೇ? ಶೋಷಿತ ಸಮುದಾಯಗಳ ಬರಹಗಳಿಗೆ ಮೌಲ್ಯವಿಲ್ಲವೇ?

ಇದು ಯಾವ ಕಾರಣವೂ ಅಲ್ಲ.

ನಿಜ ಏನೆಂದರೆ - ಅವರಿಗೆ ಅವಕಾಶ ದೊರಕುವುದಿಲ್ಲ. ಅವರು ಧ್ವನಿಯಿಲ್ಲದವರು ಅಲ್ಲ; ಅವರಿಗೆ ಮಾತನಾಡಲು ಒದಗಿಸುವ ವೇದಿಕೆಗಳೇ ಇಲ್ಲ.

ಇದಕ್ಕೂ ಮಿಗಿಲಾಗಿ, ಅವರು ಇಂಗ್ಲಿಷ್ ಬರವಣಿಗೆಯಲ್ಲಿ ಸ್ಪರ್ಧೆ ಮಾಡಲು ಅಸಮರ್ಥ ಎಂಬ ಭಾವನೆ ಉಂಟುಮಾಡಲಾಗಿದೆ. ಅದಕ್ಕೆ ಮೂಲ ಕಾರಣವೇ ಶಿಕ್ಷಣ. ವಿಶೇಷವಾಗಿ, ಇಂಗ್ಲಿಷನ್ನು ಶಿಕ್ಷಣ ಹಂತದಲ್ಲಿ ಕಡೆಗಣಿಸಿರುವುದು!

ಈ ಉತ್ಸವ ನನಗೆ ಕಲಿಸಿದ ಪಾಠವೇನೆಂದರೆ ಇಂಗ್ಲಿಷ್ ಅನ್ನು ಶಾಲಾ ಹಂತದಲ್ಲಿ, ಮುಖ್ಯವಾಗಿ ಸರಕಾರಿ ಶಾಲೆಗಳಲ್ಲಿ, ಕೇವಲ ಭಾಷೆಯಾಗಿ ಕಲಿಸಿದರೆ ಸಾಕಾಗುವುದಿಲ್ಲ-ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಂದಿನ ತುರ್ತು!

ಅಂಚಿನ ಸಮುದಾಯಗಳಿಗೆ ಇಂಗ್ಲಿಷ್ ಕಲಿಸುವುದು ಸಾಮಾಜಿಕ-ನೈತಿಕ ಕರ್ತವ್ಯ. ಆದರೆ ಕೇವಲ ಭಾಷೆ ಕಲಿಸಿದರೆ ಸಾಲದು. ಅವರು ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ತತ್ವಶಾಸ್ತ್ರ, ಸಂಗೀತ, ಕಲೆ, ರಾಜಕೀಯ, ತಂತ್ರಜ್ಞಾನ ಈ ಎಲ್ಲಾ ವಿಷಯಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು. ಪ್ರಾಥಮಿಕ ತರಗತಿಗಳಲ್ಲಿ ದ್ವಿಭಾಷಾ ಮಾಧ್ಯಮದ ಮೂಲಕ ಅವರ ಭಾಷಾ ಪ್ರಭುತ್ವ, ವಿಷಯ ಜ್ಞಾನ ಗ್ರಹಿಸುವಿಕೆಯನ್ನು ವೃದ್ಧಿಗೊಳಿಸಬೇಕು. ಅವರ ಜೀವನಾನುಭವಗಳು, ರಾಜಕೀಯ ವೀಕ್ಷಣೆಗಳು, ಸಾಮಾಜಿಕ ಚಿಂತನೆಗಳು-all must find a place in English. ಆಗ ಮಾತ್ರ ಅವರು ರಾಷ್ಟ್ರೀಯ ವೇದಿಕೆಗಳಲ್ಲಿ, ಇಂತಹ ಸಾಹಿತ್ಯ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಲು ಸಾಧ್ಯ ವಾಗುತ್ತದೆ.

ಒಬ್ಬ ಮಧ್ಯಮ ವರ್ಗದ ವ್ಯಕ್ತಿಯು ಶೋಷಿತರ ನೋವು, ಅವಮಾನ, ಬದುಕಿನ ಹೋರಾಟವನ್ನು ಪ್ರತಿನಿಧಿಸಲಾಗುವುದಿಲ್ಲ. ದಲಿತನು ತನ್ನ ಜೀವನಾನುಭವವನ್ನು ತಾನೇ ಹೇಳಬೇಕು. ಅದಕ್ಕಾಗಿ ಅವನಿಗೆ ಭಾಷೆಯೂ ಬೇಕು, ವೇದಿಕೆಯೂ ಬೇಕು. ಆಗ ಮಾತ್ರ ಸಾಹಿತ್ಯ-ನಿಜಕ್ಕೂ-ಎಲ್ಲರ ಸಾಹಿತ್ಯವಾಗುತ್ತದೆ.

share
ಡಾ. ರವಿನಾರಾಯಣ ಚಕ್ರಕೋಡಿ
ಡಾ. ರವಿನಾರಾಯಣ ಚಕ್ರಕೋಡಿ

ಪ್ರಾಧ್ಯಾಪಕರು, ಶೈಕ್ಷಣಿಕ ಮುಖ್ಯಸ್ಥರು ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ, ದಕ್ಷಿಣ ಭಾರತ, ಬೆಂಗಳೂರು

Next Story
X