Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಔಷಧಿಜನ್ಯ ವ್ಯಾಧಿಗಳ ಬಗ್ಗೆ...

ಔಷಧಿಜನ್ಯ ವ್ಯಾಧಿಗಳ ಬಗ್ಗೆ ಎಚ್ಚರವಿರಲಿ...

ಡಾ. ಕರವೀರಪ್ರಭು ಕ್ಯಾಲಕೊಂಡಡಾ. ಕರವೀರಪ್ರಭು ಕ್ಯಾಲಕೊಂಡ29 Feb 2024 9:51 AM IST
share
ಔಷಧಿಜನ್ಯ ವ್ಯಾಧಿಗಳ ಬಗ್ಗೆ ಎಚ್ಚರವಿರಲಿ...

ವೈದ್ಯರು ರೋಗ ಗುಣಪಡಿಸಲು ಔಷಧಿ ಕೊಡುತ್ತಾರೆ. ಆದರೆ ವೈದ್ಯರು ಸೂಚಿಸುವ ಔಷಧಿಯನ್ನು ಅವರು ಹೇಳಿದಷ್ಟು ದಿನ, ಹೇಳಿದಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ರೋಗಿಗಳು ಎಂದೂ ಮರೆಯಬಾರದು. ವೈದ್ಯರು ‘ಒಂದು ಕೋರ್ಸ್’ ಔಷಧಿಯನ್ನು ನೀಡಿದ್ದರೆ ಎರಡು-ಮೂರು ದಿನ ತೆಗೆದುಕೊಂಡು ಆರಾಮ ಆಗಿದೆಯೆಂದು ಔಷಧಿ ಸೇವನೆ ನಿಲ್ಲಿಸುವುದು ಸರಿಯಲ್ಲ. ಹೀಗೆ ಅರ್ಧಂಬರ್ಧ ಔಷಧಿ ಸೇವನೆಯಿಂದ ರೋಗದ ಲಕ್ಷಣಗಳು ಮರುಕಳಿಸಿದಾಗ, ಸಂಬಂಧಪಟ್ಟ ವೈದ್ಯರ ಜೊತೆ ಸಮಾಲೋಚನೆ ಮಾಡದೆ, ಹಳೆಯ ಚೀಟಿಯನ್ನೇ ಔಷಧ ಅಂಗಡಿಯಲ್ಲಿ ತೋರಿಸಿ, ಔಷಧಿ ಸೇವಿಸುವುದು ಇನ್ನೂ ಸರಿಯಲ್ಲ. ಇಂದು ಮಾರುಕಟ್ಟೆಯಲ್ಲಿ ಲಭ್ಯ ಇರುವ ಯಾವ ಔಷಧಿಯೂ ಬೇಕಾಬಿಟ್ಟಿ ಸೇವಿಸಿದಾಗ ಅಡ್ಡ ಪರಿಣಾಮಗಳು ಕಾಣುವುದು ಸಹಜ. ಸ್ವಯಂ ಔಷಧಿ ಸೇವನೆ ಅಪಾಯಕಾರಿ.

ನಮ್ಮ ಶರೀರದ ಅಂತರ್ಗತ ಕ್ರಿಯಾಜಾಲ ಹಾಗೂ ಅದರ ಕ್ರಿಯಾವೈಖರಿ, ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುವುದು. ಕ್ರಿಯಾ ಸೂತ್ರ ಒಂದೇ ಆಗಿದ್ದರೂ ಅದು ಅನೇಕ ಬಾಹ್ಯ ಪರಿಣಾಮಗಳಿಂದ ಅಂದರೆ ಆಹಾರ, ವಾತಾವರಣ, ವೃತ್ತಿ, ಮಾನಸಿಕ ನೆಮ್ಮದಿ, ಶರೀರಕ್ಕೆ ಒಗ್ಗದ ಕೆಲ ಸಂಗತಿಗಳು ಕಾರಣವಾಗಿರುತ್ತವೆ. ಶರೀರ ಪರೀಕ್ಷೆ, ರೋಗ ಚರಿತ್ರೆಯ ವಿವರಗಳು, ಪರೀಕ್ಷಾ ವರದಿಗಳು ಇವೆಲ್ಲವುಗಳನ್ನು ತೂಗಿ ನೋಡಿ, ರೋಗದ ಕುರಿತು ವೈದ್ಯರು ಒಂದು ನಿರ್ಧಾರಕ್ಕೆ ಬರುತ್ತಾರೆ. ಈ ವಿಷಯ ಕಲೆ ಹಾಕುವಾಗ ತಪ್ಪು ಮಾಹಿತಿ ಲಭಿಸಿದಲ್ಲಿ ಹಾಗೂ ರೋಗಿಯು ವಿಷಯ ಮುಚ್ಚಿಟ್ಟಲ್ಲಿ, ವೈದ್ಯರು ವಿಧಿಸುವ ಉಪಚಾರದ ಮಾರ್ಗ ಸಹ ದಾರಿ ತಪ್ಪುತ್ತದೆ.

ಔಷಧಿ ವರವೂ ಹೌದು, ಶಾಪವೂ ಹೌದು

ಹಿಪೊಕ್ರೆಟಿಸ್ ಕಾಲದಿಂದಲೂ ಜನರಿಗೆ ಔಷಧಿಯ ಅಡ್ಡ ಪರಿಣಾಮಗಳ ಅರಿವಿತ್ತು. ಉಪಚಾರದಲ್ಲಿರುವ ದೋಷಗಳು, ಅಸಾಂಪ್ರದಾಯಿಕ ಔಷಧಗಳು, ಮೂಢನಂಬಿಕೆಗಳು ಸಾವನ್ನು ಬರಮಾಡಿಕೊಳ್ಳುತ್ತವೆ. ರೋಗೋಪಚಾರದಲ್ಲಿ ಆರಂಭಿಕ ಪರಿಣಾಮಗಳು, ಅದರ ಜಟಿಲ ಪರಿಣಾಮಗಳು... ಇತ್ಯಾದಿಗಳು ಔಷಧಿಜನ್ಯ ವ್ಯಾಧಿಗಳು. ಅಲೋಪಥಿ, ಹೋಮಿಯೋಪಥಿ, ಸಿದ್ಧಿ, ಆಯುರ್ವೇದದ ಎಲ್ಲ ಮಾತ್ರೆಗಳನ್ನು ಕೂಡಿಯೇ ತೆಗೆದುಕೊಳ್ಳುವ ಮಹಾಶಯರು ಇದ್ದಾರೆ. ಇದರಿಂದ ಉಂಟಾಗುವ ಪ್ರತಿಕ್ರಿಯೆಗಳಿಂದ ಅಡ್ಡ ಪರಿಣಾಮ ಕಟ್ಟಿಟ್ಟ ಬುತ್ತಿಯೇ! ನೆನಪಿಡಿ: ಔಷಧಿ ವರವೂ ಹೌದು, ಶಾಪವೂ ಹೌದು. ಹೀಗಾಗಿಯೇ ಇತ್ತೀಚೆಗೆ ವೈದ್ಯಲೋಕದ ಕೆಲವೊಂದು ಅವಾಂತರಗಳನ್ನು ಅನುಲಕ್ಷಿಸಿ ‘ಔಷಧವಿಲ್ಲದೆ ಬದುಕಲು ಕಲಿಯಿರಿ’ ಎಂಬ ಚಳವಳಿ ಆರಂಭವಾಗಿದೆ.

ಮುಂದುವರಿದ ದೇಶಗಳಲ್ಲಿ ನಿಖರವಾದ ಅಂಕಿ-ಸಂಖ್ಯೆಗಳು ಲಭ್ಯವಿದ್ದು, ಭಾರತದಲ್ಲಿ ಅಲಭ್ಯವಿರುವುದರಿಂದ ಔಷಧಿಜನ್ಯ ವ್ಯಾಧಿಗಳು ನಮಗೆ ಗಣನೆಗೆ ಬರುತ್ತಿಲ್ಲ. ಯಾವುದೇ ಸಂದರ್ಭದಲ್ಲಾಗಲಿ ವೈದ್ಯ ರೋಗಿಗೆ ಔಷಧಿಯನ್ನು ಕೊಟ್ಟಾಗ ಕೆಲಮಟ್ಟಿಗೆ ಅಪಾಯವನ್ನು ಎದುರಿಸುವುದು ಅನಿವಾರ್ಯವಾಗುತ್ತದೆ. ಆದರೆ ಆ ಅಪಾಯವು ಅಲ್ಪ ಪ್ರಮಾಣದಲ್ಲಿದ್ದರೆ ಅದರಿಂದ ಏನೂ ಅನಾಹುತವಾಗದು. ನಾವಿಲ್ಲಿ ರೋಗಿಗೆ ಆಗುವ ಒಳಿತು ಮತ್ತು ಕೆಡುಕನ್ನು ತೂಕ ಮಾಡಿ ನೋಡುವುದು ಅವಶ್ಯವಿದೆ.

ವಿಷಮಜ್ವರಕ್ಕೆ ಕೊಡುವ ಕ್ಲೋರೋಮೈಸಿಟಿನ್‌ದಿಂದಾಗುವ ರಕ್ತಹೀನತೆಯು ಖಂಡಿತವಾಗಿಯೂ ಗಂಡಾಂತರಕಾರಿ. ಆದರೆ ವಿಷಮಜ್ವರವನ್ನು ಕ್ಲೋರೋಮೈಸಿಟಿನ್ ದಿಂದ ಉಪಚರಿಸದೇ ಹೋದರೆ ಆಗ ಬರಬಹುದಾದ ರೋಗಿಯ ಸಾವಿಗಿಂತ ರಕ್ತಹೀನತೆ ಮುಖ್ಯವಲ್ಲ. ಆಗ ರಕ್ತಹೀನತೆ ಬಂದಾಗ ನಾವು ವೈದ್ಯರನ್ನು ದೂಷಿಸುವುದು ಸರಿಯಲ್ಲ. ಹೆಚ್ಚು ರಕ್ತದೊತ್ತಡದಿಂದ ಬಳಲುವವರಿಗೆ ರಾವಲ್ಷಿಯಾ ಔಷಧ ಕೊಟ್ಟಾಗ ಅದರ ಮಾಂದ್ಯಜನಿಕ ಪರಿಣಾಮದಿಂದಾಗಿ ರೋಗಿಯು ಆತ್ಮಹತ್ಯೆ ಮಾಡಿಕೊಳ್ಳುವುದು ಹಾಗೂ ದೀರ್ಘಕಾಲದ ಸಂಧಿವಾತದಿಂದ ಬಳಲು ವವರು ತೆಗೆದುಕೊಳ್ಳುವ ಪಿನಾಯಿಲ್ ಬೂಟಾಜೋನ್‌ದ ರಕ್ತವೈಪರೀತ್ಯದ ಸಾವುಗಳಿಗೆ ಔಷಧಿ ಜನ್ಯ ಸಾವುಗಳೆಂದೇ ಕರೆಯಬೇಕು. ಹಾಗೆಯೇ ಇನ್ಸುಲಿನ್, ಲಿಗ್ನೋಕೇನ್ ಎಂಬ ಅರಿವಳಿಕೆ, ಪೆನ್ಸಿಲಿನ್, ಇಮಿಪ್ರಮಿನ್ ಪಿನೋಥೈಜೀನ್ ಮಾಂದ್ಯಜನಿಕಗಳಿಂದಲೂ ಸಾವು ಬರಬಹುದು.

ಕ್ಲೋರೋಪ್ರೊಮೋಜಿನ್ ಎಂಬ ಮಾಂದ್ಯಜನಿಕವು ಹಾಗೂ ರಕ್ತದೊತ್ತಡದಲ್ಲಿ ತೆಗೆದುಕೊಳ್ಳುವ ರಿಸರ್ಪಿನ್ ಎಂಬ ಔಷಧಗಳು ‘ಪಾರ್ಕಿನ್ ಸೋನಿಸಮ್’ ಎಂಬ ದೇಹ ಹೊಯ್ದಾಟದ ರೋಗಕ್ಕೆ ಮೂಲವಾಗಬಹುದು. ಗ್ಲುಕೊಕಾರ್ಟಿಕಾಯಿಡ್ ಎಂಬ ಸಂಧಿವಾತದಲ್ಲಿ ತೆಗೆದುಕೊಳ್ಳುವ ಔಷಧಿಯು ರಕ್ತದೊತ್ತಡ ಹೆಚ್ಚಿಸುವಲ್ಲಿ ಹಾಗೂ ಹೃದಯರೋಗಕ್ಕೆ ಕಾರಣವಾಗಬಹುದು. ಅದರಂತೆ ಎ.ಪಿ.ಸಿ. ಮಾತ್ರೆ, ಇಂಡೋಮೆಥಾಸಿನ್‌ಗಳು ಜಠರದ ಹುಣ್ಣನ್ನು ತೂತು ಮಾಡಿ, ರಕ್ತಸ್ರಾವವಾಗಿ ವ್ಯಕ್ತಿಯ ಮರಣಕ್ಕೂ ಕಾರಣವಾಗಬಹುದು.

ಹೃದಯದ ರೋಗಗಳಲ್ಲಿ ಉಪಯೋಗಿಸುವ ಅತ್ಯವಶ್ಯಕ ಔಷಧಿಗಳಲ್ಲಿ ಡಿಜಿಟ್ಯಾಲಿಸ್ ಒಂದಾಗಿದ್ದು ಸರಿಯಾದ ಪ್ರಮಾಣದಲ್ಲಿ, ಸರಿಯಾದ ಸಂದರ್ಭಗಳಲ್ಲಿ ಅರಿತು ಬಳಸಿದರೆ ರೋಗಿಗೆ ಸಂಜೀವಿನಿಯಾಗಬಲ್ಲದು. ಇಲ್ಲವಾದರೆ ಅದೇ ಅವನ ಪ್ರಾಣವನ್ನೂ ತೆಗೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬ ವೈದ್ಯರೂ ಔಷಧಿಯ ಬಗ್ಗೆ ಜಾಗರೂಕರಾಗುವುದು ಅವಶ್ಯವಿದೆ. 1785ರಷ್ಟು ಹಿಂದೆಯೇ ವಿಲಿಯಂ ವಿಥರಿಂಗ್ ಡಿಜಿಟ್ಯಾಲಿಸ್ ನ್ನು ಹೇಗೆ ಉಪಯೋಗಿಸಬೇಕು ಎಂದಿರುವ ನಿಯಮಗಳೇ ಇಂದಿಗೂ ಪ್ರಸ್ತುತವಾಗಿವೆ.

ಆ್ಯಂಟಿಬಯೋಟಿಕ್ ಬಳಕೆ ಮಿತಿ ಇರಲಿ

ಆ್ಯಂಟಿಬಯೋಟಿಕ್ ಔಷಧಿಗಳು ಕರುಳಿನ ಒಳಹಾಸುವನ್ನು ಜೀರ್ಣಗೊಳಿಸುತ್ತವೆ. ಒಳಹಾಸುವಿನಲ್ಲಿ ಬಿ-ಕಾಂಪ್ಲೆಕ್ಸ್ ಜೀವಸತ್ವಗಳು ಸಿದ್ಧವಾಗುತ್ತವೆ. ಜೀರ್ಣಗೊಂಡ ಒಳಹಾಸು ಬಿ-ಕಾಂಪ್ಲೆಕ್ಸ್ ಜೀವಸತ್ವ ಸಿದ್ಧಪಡಿಸಲಾರದು. ಹಾಗಾಗಿ ಆ್ಯಂಟಿಬಯೋಟಿಕ್ ಜೊತೆಗೆ ಬಿ-ಕಾಂಪ್ಲೆಕ್ಸ್ ಮಾತ್ರೆ ಸೇವಿಸಬೇಕು. ಇಲ್ಲದಿದ್ದರೆ ಬಿ-ಕಾಂಪ್ಲೆಕ್ಸ್ ಅಭಾವದ ಲಕ್ಷಣಗಳು ತೋರುತ್ತವೆ. ಕೆಲ ಔಷಧಿಗಳು ರೋಗ ನಿವಾರಣೆಗಾಗಿ ನೀಡಿದರೂ ಅವು ಯಕೃತ್ ಅಥವಾ ಮೂತ್ರಪಿಂಡಗಳಿಗೆ ಹಾನಿಯುಂಟುಮಾಡುವವು. ಕೆಲ ನಿದ್ರಾಮಾತ್ರೆಗಳು ದೀರ್ಘಾವಧಿಗೆ ನೀಡಿದಲ್ಲಿ ಚಟವಾಗಿ ಪರಿಣಮಿಸುತ್ತವೆ. ಮುಂದೆ ಮಾತ್ರೆಯಿಲ್ಲದೆ ನಿದ್ದೆಯೇ ಬರುವುದಿಲ್ಲ. ಇದಕ್ಕೆ ‘ಪಿಜಿಯಾಲಾಜಿಕಲ್ ಡಿಪೆಂಡನ್ಸ್’ ಎನ್ನುತ್ತಾರೆ. ಹೀಗೆ ಔಷಧಿಯ ಅವಾಂತರಗಳ ಸೃಷ್ಟಿಯ ಬಗ್ಗೆ ಸೇವಿಸುವ ವ್ಯಕ್ತಿಗೆ ಕನಿಷ್ಠ ಪಕ್ಷ ಪ್ರಾಥಮಿಕ ತಿಳುವಳಿಕೆ ಇರಲೇಬೇಕು.

ಗರ್ಭಿಣಿಯರಲ್ಲಿ ಚಿಕಿತ್ಸೆ

ಗರ್ಭಿಣಿಯರಿಗೆ ಔಷಧಿ ಕೊಡುವಾಗ ವೈದ್ಯರು ಹೆಚ್ಚು ಜಾಗರೂಕರಾಗಿರಬೇಕು. ಕೆಲ ವರ್ಷಗಳ ಹಿಂದೆ ಜಗತ್ತಿನಾದ್ಯಂತ ಗರ್ಭಿಣಿಯರಲ್ಲಿ ಕಂಡು ಬರುವ ವಾಂತಿಯನ್ನು ತಡೆಯಲು ವೈದ್ಯರು ಉಪಯೋಗಿಸುತ್ತಿದ್ದಂಥ ಥಲಿಡೋಮೈಡ್ ಔಷಧಿಯ ಅನಾಹುತವನ್ನು ವೈದ್ಯಕೀಯ ಪ್ರಪಂಚವು ಇನ್ನೂ ಮರೆತಿಲ್ಲ. ಈ ಔಷಧಿಯಿಂದ ಶಿಶುಗಳಲ್ಲಿ ಕಂಡು ಬಂದ ಕೈಕಾಲು, ತಲೆಬುರುಡೆ, ಕಿವಿ, ಹೃದಯ, ಯಕೃತ್ ನ್ಯೂನತೆಗಳು ವೈದ್ಯರನ್ನು ದಿಗ್ಭ್ರಾಂತಗೊಳಿಸಿತು. ಒಂದು ಹಂತದ ಗರ್ಭಾವಸ್ಥೆಯ ಅವಧಿಯಲ್ಲಿ ಮಹಿಳೆಯು ಒಂದೇ ಒಂದು ಮಾತ್ರೆಯನ್ನು ತೆಗೆದುಕೊಂಡರೂ ಅದರ ಕೆಡುಕು ಕಂಡು ಬಂದಿದೆ. ಕೆಲವೊಂದು ಔಷಧಿಗಳಂತೂ ಗರ್ಭಪಾತಕ್ಕೂ, ಮಗುವಿನ ಕುಂಠಿತ ಬೆಳವಣಿಗೆಗೂ, ಎಲುಬುಗಳ ನ್ಯೂನತೆಗೂ, ಕಿವುಡತನ, ದೃಷ್ಟಿನಾಶಕ್ಕೂ ಕಾರಣವಾಗುತ್ತವೆ.

ರೋಗಿಗಳು ಉಪಚಾರ ಮಾಡುತ್ತಿರುವ ವೈದ್ಯರ ಮೇಲಿನ ವಿಶ್ವಾಸ ಬಹಳ ಮುಖ್ಯ. ಆಗಾಗ ಆಪ್ತಸಮಾಲೋಚನೆ ಮಾರ್ಗದರ್ಶನ ನೀಡಬಲ್ಲದು. ಚಿಕಿತ್ಸೆಯನ್ನು ಒಂದು ಪದ್ಧತಿಯಿಂದ ಇನ್ನೊಂದು ಪದ್ಧತಿಗೂ, ಹಾಗೆಯೇ ವೈದ್ಯರನ್ನು ಮೇಲಿಂದ ಮೇಲೆ ಬದಲಾಯಿಸುವುದು ಕೂಡ ತಪ್ಪು. ಅಂಧ ಶ್ರದ್ಧೆಗೆ ಶರಣು ಹೋಗುವುದು, ಅದರಿಂದ ಉಂಟಾದ ದುಷ್ಪರಿಣಾಮಕ್ಕೆ ವೈದ್ಯರನ್ನು ದೂರುವುದು ತರವಲ್ಲ.

share
ಡಾ. ಕರವೀರಪ್ರಭು ಕ್ಯಾಲಕೊಂಡ
ಡಾ. ಕರವೀರಪ್ರಭು ಕ್ಯಾಲಕೊಂಡ
Next Story
X