Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್:...

ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ11 Dec 2025 11:14 AM IST
share
ಭಗತ್ ಸಂಗಾತಿ ಗಯಾಪ್ರಸಾದ್ ಕಾಟಿಯಾರ್: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಕರಿನೀರಿನ ಕಠಿಣ ಶಿಕ್ಷೆ ಅನುಭವಿಸಿದ ಕ್ರಾಂತಿಕಾರಿಗಳು!

ಭಾಗ - 6

ಗಯಾಪ್ರಸಾದ್ ಕಾಟಿಯಾರ್ ಭಗತ್ ಸಿಂಗ್‌ನ ಸಂಗಾತಿಗಳಲ್ಲೊಬ್ಬರು. ಗಯಾಪ್ರಸಾದ್ ಜೂನ್ 20, 1900ರಲ್ಲಿ ಜಗದೀಶ್ ಪುರ್‌ನಲ್ಲಿ ಜನಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಗಯಾಪ್ರಸಾದ್ ವೈದ್ಯಕೀಯ ವಿದ್ಯಾಭ್ಯಾಸ ಓದಲು ಕಾನ್ಪುರಕ್ಕೆ ಹೋದರು. ಆ ವೇಳೆಗೆ ಸ್ವಾತಂತ್ರ್ಯ ಹೋರಾಟದ ಪ್ರಭಾವಕ್ಕೆ ಬಿದ್ದ ಅವರು 1921ರಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ಅಚಾನಕ್ ಅಸಹಕಾರ ಚಳವಳಿ ನಿಂತಾಗ ಆ ತಲೆಮಾರಿನ ಹಲವಾರು ಯುವಕರಂತೆ ಗಯಾಪ್ರಸಾದ್ ಕೂಡಾ ಸಶಸ್ತ್ರ ಕ್ರಾಂತಿಯೆಡೆಗೆ ಆಕರ್ಷಿತರಾದರು. 1926ರ ವೇಳೆಗೆ ಗಯಾಪ್ರಸಾದ್ ಭಗತ್ ಸಿಂಗ್ ಮತ್ತು ರಾಜ್ ಗುರು ಜೊತೆ ಒಡನಾಟ ಬೆಳೆಸಿಕೊಂಡಿದ್ದರು.

ಎಚ್.ಎಸ್.ಆರ್.ಎ.ಯ ಬಾಂಬು ತಯಾರಿಕಾ ವ್ಯವಸ್ಥೆಯ ಗುಪ್ತತೆ ಕಾಪಾಡುವುದು ಗಯಾಪ್ರಸಾದ್ ಜವಾಬ್ದಾರಿಯಾಗಿತ್ತು.

ಈ ತಂತ್ರ ಸರಳ! ಗಯಾಪ್ರಸಾದ್ ಕಳ್ಳ ಹೆಸರಲ್ಲಿ ಒಂದು ಕ್ಲಿನಿಕ್ ಶುರುಮಾಡುವುದು. ಉಳಿದ ಕ್ರಾಂತಿಕಾರಿಗಳು ಅವನ ಕ್ಲಿನಿಕ್‌ನ ಸಹಾಯಕರಾಗಿ ಇರುವುದು. ಈ ಕ್ಲಿನಿಕ್‌ನ ಒಳಗೆ ಗುಪ್ತ ಕೋಣೆಯೊಳಗೆ ಬಾಂಬು ತಯಾರಾಗುತ್ತಿತ್ತು. ಈ ರಾಸಾಯನಿಕಗಳ ವಾಸನೆ ಬಗ್ಗೆ ಯಾರಿಗಾದರೂ ಗುಮಾನಿ ಬಂದರೆ ಅದು ಔಷಧಿ ತಯಾರಿಯ ರಾಸಾಯನಿಕಗಳು ಅಂದರಾಯಿತು.

ಫಿರೋಝ್‌ಪುರದ ಇಂಥಾ ಒಂದು ಬಾಂಬು ಫ್ಯಾಕ್ಟರಿ 1928ರ ಆಗಸ್ಟ್‌ನಿಂದ 1929ರ ಫೆಬ್ರವರಿ ವರೆಗೆ ಕಾರ್ಯಾಚರಣೆ ನಡೆಸಿತು.

ಪೊಲೀಸರ ತನಿಖೆ ತೀವ್ರವಾದ ಬಳಿಕ ಈ ಬಾಂಬು ಫ್ಯಾಕ್ಟರಿಯನ್ನು ಸಹ್ರಾನ್ಪುರಕ್ಕೆ ಸ್ಥಳಾಂತರಿಸಲಾಯಿತು. ಅನತಿ ಕಾಲದಲ್ಲಿ ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಈ ಕೆಲಸ ಕುಂಟಿತು. ಈ ಸಂಬಂಧ ಗಯಾಪ್ರಸಾದ್ ಕಾನ್ಪುರಕ್ಕೆ ತೆರಳಬೇಕೆಂದಿದ್ದಾಗ ಸ್ಥಳೀಯ ಕ್ಷೌರಿಕನೊಬ್ಬನಿಗೆ ಪ್ರಸಾದ್ ಗುರುತು ನೆನಪಾಗಿ ಆತ ಪೊಲೀಸರಿಗೆ ತಿಳಿಸುತ್ತಾನೆ. 1929ರ ಮೇಯಲ್ಲಿ ಪೊಲೀಸರು ಈ ಕ್ಲಿನಿಕ್‌ಗೆ ರೈಡ್ ಮಾಡಿ ಶಿವ ವರ್ಮ ಮತ್ತು ಜೈದೇವ್ ಕಪೂರ್ ಇಬ್ಬರನ್ನೂ ಬಂಧಿಸಿದರು.

ಕಾಸು ಗಿಟ್ಟದೆ ಸಹ್ರಾನ್ಪುರಕ್ಕೆ ಬರಿಗೈಲಿ ಗಯಾಪ್ರಸಾದ್ ಮರಳಿದಾಗ ರಾತ್ರಿಯಾಗಿತ್ತು. ಆ ಕತ್ತಲಲ್ಲಿ ಕ್ಲಿನಿಕ್ ತಲುಪಿದಾಗ ಅಲ್ಲಿ ಅವಿತು ಕಾದು ಕೂತಿದ್ದ ಪೊಲೀಸರು ಗಯಾಪ್ರಸಾದ್ ಅವರನ್ನು ಬಂಧಿಸಿದರು. ಪ್ರಸಾದ್ ಅವರನ್ನು ಲಾಹೋರ್‌ಜೈಲಿಗೆ ಕಳಿಸಲಾಯಿತು. ಅಲ್ಲಿ ಅವರ ಬಹುತೇಕ ಸಂಗಾತಿಗಳೂ ಇದ್ದರು! ಭಗತ್ ಸಿಂಗ್ ಮತ್ತಿತರರು ಆರಂಭಿಸಿದ ಉಪವಾಸ ಸತ್ಯಾಗ್ರಹದಲ್ಲಿ ಗಯಾಪ್ರಸಾದ್ ಕೂಡಾ ಭಾಗವಹಿಸಿದ್ದರು. ಲಾಹೋರ್ ಒಳಸಂಚು ಪ್ರಕರಣದಲ್ಲಿ ಗಯಾಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಬಳಿಕ ಅವರನ್ನು ಅಂಡಮಾನ್‌ಗೆ ಕಳಿಸಲಾಯಿತು. ಅಲ್ಲೂ ಗಯಾಪ್ರಸಾದ್ ಜೈಲಿನ ಕರಾಳ ಸ್ಥಿತಿಗತಿ ವಿರುದ್ಧ 46 ದಿನಗಳ ಸತ್ಯಾಗ್ರಹ ಆರಂಭಿಸಿದರು. ಈ ಉಪವಾಸ ಸತ್ಯಾಗ್ರಹದಲ್ಲಿ ಅವರ ಸಂಗಾತಿ ಮಹಾವೀರ್ ಸಿಂಗ್ ಪೊಲೀಸರು ಒತ್ತಾಯದಲ್ಲಿ ಅನ್ನ ತಿನ್ನಿಸಿದ ಕಾರಣ ನೀಗಿಕೊಂಡರು. ಗಯಾಪ್ರಸಾದ್ ಅವರನ್ನು 1937ರಲ್ಲಿ ಭಾರತದ ಜೈಲಿಗೆ ಸ್ಥಳಾಂತರಿಸಲಾಯಿತು. ಅನತಿ ಕಾಲದಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು.

ಸ್ವತಾಂತ್ರ್ಯಾನಂತರವೂ ಗಯಾಪ್ರಸಾದ್ ರೈತರ-ಕಾರ್ಮಿಕರ ಪರವಾಗಿ ಹೋರಾಟಗಳಲ್ಲಿ ಭಾಗಿಯಾದರು. ಸ್ವತಂತ್ರ ಭಾರತದಲ್ಲೂ ಅವರು ಈ ಹೋರಾಟಗಳಿಗಾಗಿ 1958ರಲ್ಲಿ ಆರು ತಿಂಗಳು, 1966-68ರ ನಡುವೆ ಒಂದೂವರೆ ವರ್ಷ ಜೈಲಿನಲ್ಲಿದ್ದರು. ನಿಧಾನಕ್ಕೆ ತೆರೆಗೆ ಸರಿದ ಗಯಾಪ್ರಸಾದ್ ಫೆಬ್ರವರಿ 10, 1993ರಂದು ವೃದ್ಧಾಪ್ಯದ ಕಾರಣಗಳಿಂದ ತೀರಿಕೊಂಡರು.

ಬಹುತೇಕ ಅವರನ್ನು ದೇಶ ಮರೆತಿತ್ತು. 2016ರಲ್ಲಿ ಸರಕಾರ ಅವರ ಸ್ಮರಣಾರ್ಥ ಅಂಚೆ ಚೀಟಿಯೊಂದನ್ನು ಬಿಡುಗಡೆ ಮಾಡಿತು.

ಕ್ರಾಂತಿಕಾರಿ ಚಟುವಟಿಕೆಗಳನ್ನು ಹೊಗಳಿ ಗಾಂಧೀಜಿಯವರ ಅಹಿಂಸಾ ಮಾದರಿಯನ್ನು ಟೀಕಿಸುವ ಆರೆಸ್ಸೆಸ್ ಮತ್ತು ಅದರ ಸಂಘಟನೆಗಳಿಗೂ ಈ ಕ್ರಾಂತಿಕಾರಿಗಳ ಬಗ್ಗೆ ನೆನಪಿದ್ದ ಪುರಾವೆ ಇಲ್ಲ. ಸಾವರ್ಕರ್ ಬಿಟ್ಟರೆ ಇನ್ಯಾರ ಬಗ್ಗೆಯೂ ಈ ಸಂಘಟನೆಗಳಾಗಲೀ ಅವರ ಅನುಯಾಯಿಗಳಾಗಲೀ ಮಾತಾಡಿದ್ದಿಲ್ಲ.

ಈ ಕ್ರಾಂತಿಕಾರಿಗಳೆಲ್ಲಾ ಸಮಾಜವಾದಿ ಸಿದ್ಧಾಂತದವರಾಗಿದ್ದೇ ಇದಕ್ಕೆ ಕಾರಣ. ಈ ಕ್ರಾಂತಿಕಾರಿಗಳೆಲ್ಲ ಸಾವರ್ಕರ್ ಅವರಂತೆ ಅಂಡಮಾನ್‌ನಲ್ಲಿ ದುರ್ದಮ ಶಿಕ್ಷೆ ಅನುಭವಿಸಿಯೂ, ಬಿಡುಗಡೆಯಾದ ಬಳಿಕವೂ ತಮ್ಮ ಸಮಾಜವಾದಿ ಸೈದ್ಧಾಂತಿಕ ಬದ್ಧತೆ ಉಳಿಸಿಕೊಂಡು ಹೋರಾಟಗಳಲ್ಲಿ ಭಾಗಿಯಾಗಿದ್ದರು. ಇವರು ಸಮಸಮಾಜದ ಸಮಾಜವಾದಿ ಸಿದ್ಧಾಂತವನ್ನು ಎತ್ತಿ ಹಿಡಿಯುತ್ತಿದ್ದ ವೇಳೆ ಗೋಳ್ವಾಲ್ಕರ್ ಈ ಸಿದ್ಧಾಂತ ನಮ್ಮ ಮೊದಲ ಶತ್ರು ಎಂದು ಘೋಷಿಸಿದ್ದರು. ಸಿದ್ಧಾಂತ ಗಾಳಿಯಲ್ಲಿರುತ್ತದೆಯೇ? ಅದನ್ನು ನಂಬಿ ಅದಕ್ಕೆ ಬದ್ಧರಾದ ಧೀಮಂತರ ಮೂಲಕವೇ ಸಿದ್ಧಾಂತ ದೃಗ್ಗೋಚರವಾಗುವುದಷ್ಟೆ.

ಗೋಳ್ವಾಲ್ಕರ್ ಪ್ರಕಾರ ಈ ಸಮಾಜವಾದ ತಮ್ಮ ಮೊದಲ ಶತ್ರು ಎನ್ನಿಸಿದರೆ, ಇದನ್ನು ಪ್ರಚುರಪಡಿಸಲು ಜೀವಮುಡಿಪಿಟ್ಟ ಭಗತ್ ಸಿಂಗ್, ಚಂದ್ರಶೇಖರ ಆಝಾದ್ ಮತ್ತಿತರರು ಏನಾಗುತ್ತಾರೆ? ಈ ವ್ಯಂಗ್ಯ ಆರೆಸ್ಸೆಸ್‌ಗೆ ಮಾರು ಹೋಗಿರುವ ಯುವ ಮನಸ್ಸುಗಳಿಗೆ ಅರಿವಾಗಬೇಕು.

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X