Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕರಾವಳಿ ಕನ್ನಡದ ಕೋಗಿಲೆ, ಕನ್ನಡ ಕಟ್ಟಾಳು...

ಕರಾವಳಿ ಕನ್ನಡದ ಕೋಗಿಲೆ, ಕನ್ನಡ ಕಟ್ಟಾಳು ಬಿ.ಎಂ.ಇದಿನಬ್ಬ

ಹಂಝ ಮಲಾರ್ಹಂಝ ಮಲಾರ್9 March 2026 8:04 AM IST
share
ಕರಾವಳಿ ಕನ್ನಡದ ಕೋಗಿಲೆ, ಕನ್ನಡ ಕಟ್ಟಾಳು ಬಿ.ಎಂ.ಇದಿನಬ್ಬ

ಉಳ್ಳಾಲ ಎಂದಾಗ ಐತಿಹಾಸಿಕವಾಗಿ ‘ಅಬ್ಬಕ್ಕನ ನಾಡು’ ಎಂದು ಗುರುತಿಸುತ್ತೇವೆ. ಇದೇ ಸಂದರ್ಭದಲ್ಲಿ ‘ಐಕ್ಯಗಾನ’ವನ್ನು ನಾಡಿನಾದ್ಯಂತ ಪಸರಿಸಿದ ‘ಇದಿನಬ್ಬರ ಊರು’ ಎಂದೂ ನಾಡು ಉಳ್ಳಾಲವನ್ನು ಗುರುತಿಸುತ್ತದೆ. ಕನ್ನಡದ ಕಟ್ಟಾಳು ವಾಗಿ, ಕವಿಯಾಗಿ, ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ, ಮೂರು ಬಾರಿ ಶಾಸಕರಾಗಿ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದ ದಿವಂಗತ ಬಿ.ಎಂ.ಇದಿನಬ್ಬ ಅವರ ಸ್ಮರಣೆ ಇಂದಿನ ದಿನಗಳಿಗೆ ಅತ್ಯಗತ್ಯವಾಗಿದೆ. ಬದುಕಿನುದ್ದಕ್ಕೂ ಜಾತ್ಯತೀತತೆ, ಸೌಹಾರ್ದ ಕರಾವಳಿಗಾಗಿ ಮಿಡಿದ ಇದಿನಬ್ಬರು ಕರಾವಳಿಯ ಇಂದಿನ ಎಲ್ಲ ಪಕ್ಷಗಳ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಮಠ ಎಂಬಲ್ಲಿ 1919ರ ಸೆಪ್ಟಂಬರ್ 17ರಂದು ಅಬ್ದುಲ್ ರಹ್ಮಾನ್ ಮತ್ತು ಫಾತಿಮಾ ದಂಪತಿಯ ಪುತ್ರನಾಗಿ ಜನಿಸಿದ ಬೊಳುಂಬುಡ ಮಠ (ಬಿ.ಎಂ.) ಇದಿನಬ್ಬ ಅವರು ಉಳ್ಳಾಲದಲ್ಲಿ ಬದುಕು ಕಟ್ಟಿಕೊಂಡವರು. ಪುತ್ತೂರಿನಲ್ಲಿ ಹೈಸ್ಕೂಲ್ ಕಲಿತ ಬಳಿಕ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೃಷಿಕರ ಸಹಕಾರಿ ಸಂಘದಲ್ಲಿ 34 ವರ್ಷಗಳ ಕಾಲ ಅವರು ಉದ್ಯೋಗಿಯಾಗಿದ್ದರು. 1978ರಲ್ಲಿ ನಿವೃತ್ತರಾಗುವಾಗ ‘ದಕ್ಷ ಸಹಕಾರಿ’ ಎಂಬ ಬಿರುದು ಅವರಿಗೆ ಪ್ರಾಪ್ತವಾಗಿತ್ತು. ಬ್ಯಾರಿ ಮಾತೃಭಾಷಿಗರಾಗಿದ್ದ ಇದಿನಬ್ಬ ಕನ್ನಡಕ್ಕಾಗಿ ಕೈಯೆತ್ತಿದ್ದರು. ಕನ್ನಡದಲ್ಲಿ ನೂರಾರು ಕವನ ರಚಿಸಿದ್ದರು. ಕಯ್ಯಾರ ಕಿಂಞಣ್ಣ ರೈ ಅವರ ‘ಐಕ್ಯಗಾನ’ವನ್ನು ನಾಲ್ಕು ಸಾವಿರಕ್ಕೂ ಅಧಿಕ ಬಾರಿ ಹಾಡಿ ರಾಜ್ಯದ ಮೂಲೆ ಮೂಲೆಗೆ ತಲುಪಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದ ಅವರು ಎಂದೂ ಸಚಿವ ಸ್ಥಾನ ಸಹಿತ ಯಾವುದೇ ಅಧಿಕಾರಕ್ಕಾಗಿ ಲಾಬಿ ನಡೆಸಿದವರಲ್ಲ. ರಾಜಕಾರಣವನ್ನು ಕಸುಬ ನ್ನಾಗಿಸಿದವರೂ ಅಲ್ಲ. ತನ್ನ ಕುಟುಂಬದ ಸದಸ್ಯರನ್ನು ರಾಜಕೀ ಯದತ್ತ ಸುಳಿಯಲು ಬಿಟ್ಟವರೂ ಅಲ್ಲ. ಅರ್ಹವಾಗಿ ಬಂದ ಅಧಿಕಾರ-ಸ್ಥಾನಮಾನವನ್ನು ಮಾತ್ರ ಸದುಪಯೋಗಿಸಿಕೊಂಡಿದ್ದರು.

1994ರಲ್ಲಿ ರಾಜ್ಯದ 224 ಶಾಸಕರ ಪೈಕಿ ತನಗೆ ಮುಂದಿನ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಬೇಡ ಎಂದಿದ್ದ ಏಕೈಕ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿ.ಎಂ.ಇದಿನಬ್ಬ. ತಾನೊಬ್ಬ ಶಾಸಕ ಅಥವಾ ರಾಜಕಾರಣಿ ಎಂದು ಗುರುತಿ ಸಿಕೊಳ್ಳುವುದಕ್ಕಿಂತಲೂ ಸ್ವಾತಂತ್ರ್ಯ ಹೋರಾಟಗಾರ, ಅಪ್ಪಟ ಗಾಂಧಿವಾದಿ, ಖಾದಿಧಾರಿ, ಕವಿ, ಕಥೆಗಾರ, ಹಾಡುಗಾರ, ಕನ್ನಡದ ಕಟ್ಟಾಳು ಇತ್ಯಾದಿಯಾಗಿ ಗುರುತಿಸಿ ಕೊಳ್ಳಲು ಇಷ್ಟಪಡುತ್ತಿದ್ದರು.

ರಾಜಕೀಯ ಕ್ಷೇತ್ರ: ತನ್ನ 19ರ ಹರೆಯದಲ್ಲಿ ಅಂದರೆ, 1938ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ಬಿ.ಎಂ.ಇದಿನಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದರ ಫಲ ವಾಗಿ 1962ರಲ್ಲಿ ಉಳ್ಳಾಲ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಲಭಿಸಿತ್ತು. ಮೊದಲ ಯತ್ನದಲ್ಲಿ ಅವರಿಗೆ ಸೋಲಾ ಯಿತು. 1967ರಲ್ಲಿ ಮತ್ತೆ ಟಿಕೆಟ್ ಸಿಕ್ಕಿತ್ತು. ಈ ಬಾರಿ ಅವರು ಗೆಲುವು ಸಾಧಿಸಿದರು. ಆ ಮೂಲಕ ಬ್ಯಾರಿ ಮುಸ್ಲಿಮ್ ಸಮುದಾಯದ ಪ್ರಪ್ರಥಮ ಶಾಸಕ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು. 1972, 1978, 1983ರಲ್ಲಿ ಅವರಿಗೆ ಟಿಕೆಟ್ ಲಭಿಸಲಿಲ್ಲ. ಹಾಗೆಂದು ಅವರು ಹತಾಶರಾಗಲಿಲ್ಲ. ಧೃತಿ ಗೆಡಲೂ ಇಲ್ಲ. ಪಕ್ಷಕ್ಕೆ ನಿಷ್ಠೆ ತೋರಿಸಿದ್ದರ ಪರಿಣಾಮ 1985 ರಲ್ಲಿ ಕಾಂಗ್ರೆಸ್ ಮತ್ತೆ ಅವರಿಗೆ ಟಿಕೆಟ್ ನೀಡಿತ್ತು. ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದ ಅವರು 1989ರಲ್ಲಿ ಮೂರನೇ ಬಾರಿಯೂ ಶಾಸಕರಾದರು. ನಾಲ್ಕನೇ ಬಾರಿಗೆ ಅಂದರೆ 1994ರಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಇದ್ದರೂ ತನಗೆ ಟಿಕೆಟ್ ಬೇಡ ಎಂದು ಹೇಳಿ ರಾಜಕೀಯಕ್ಕೆ ಸ್ವಯಂ ನಿವೃತ್ತಿ ಘೋಷಿಸಿ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಇತಿಹಾಸ.

ಭಾಷೆ-ಸಾಹಿತ್ಯ-ಸಾಂಸ್ಕೃತಿಕ ಜವಾಬ್ದಾರಿ: ತನ್ನ 83ರ ಹರೆಯದ ಇಳಿ ವಯಸ್ಸಿನಲ್ಲಿ ಅಂದರೆ 2003ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕಾಗ ಅದನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸಿ ನಾಡಿನಾದ್ಯಂತ ಸಂಚರಿಸಿ ಕನ್ನಡದ ಅಭಿವೃದ್ಧಿಗೆ ಟೊಂಕ ಕಟ್ಟಿದ್ದರು. ಅದಕ್ಕೂ ಮೊದಲು ಅಂದರೆ 1991ರಿಂದ 1994ರವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಈ ಮಧ್ಯೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. 1962ರಿಂದ 1971ರವರೆಗೆ ಸತತ ಒಂಭತ್ತು ವರ್ಷಗಳ ಕಾಲ ಕರ್ನಾಟಕ ಸಾಹಿತ್ಯ ಅಕಾಡ ಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 1970ರಿಂದ 1982ರವರೆಗೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಸಮಿತಿಯ ಸದಸ್ಯರಾಗಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2002ರಲ್ಲಿ ಮೂಡುಬಿದಿರೆಯಲ್ಲಿ ನಡೆದ 12ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮತ್ತು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಲ್ಲಿ ನಡೆದ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಮಂಗಳೂರಿನ ಕನ್ನಡ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಬಿ.ಎಂ.ಇದಿನಬ್ಬ ಅವರ ಬದುಕಿನ ಘಟನೆಯನ್ನು ಆಧರಿಸಿ ಸಾಹಿತಿ ವಿ.ಗ. ನಾಯಕ ಬರೆದ ‘ಕನ್ನಡದ ಕಟ್ಟಾಳು: ಬಿಎಂ ಇದಿನಬ್ಬ’ ಕೃತಿಯನ್ನು ಕಾಂತಾವರ ಕನ್ನಡ ಸಂಘವು ‘ನಾಡಿಗೆ ನಮಸ್ಕಾರ-ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ’ಯಡಿ ಪ್ರಕಟಿಸಿತ್ತು.

ರಾಜಕೀಯ ಸ್ಥಾನಮಾನ: 1993ರಲ್ಲಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವ ಹಿಸಿದ್ದರು. ಅದರೊಂದಿಗೆ ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ವಿವಿಧ ಸ್ಥಾನಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು. ರಾಜಕೀಯವನ್ನು ಎಂದಿಗೂ ದುರುಪಯೋಗಪಡಿಸಿಕೊಳ್ಳದ, ಹೆಸರನ್ನೂ ಕೆಡಿಸಿಕೊಳ್ಳದ ಬಿ.ಎಂ.ಇದಿನಬ್ಬ ಅಧಿಕಾರವನ್ನು ಸಮಾಜಕ್ಕಾಗಿ ಬಳಸಿಕೊಂಡರು ಎನ್ನಬಹುದು.

ಮಂಗಳೂರು ವಿಶ್ವವಿದ್ಯಾನಿಲಯ ಸ್ಥಾಪನೆಯಲ್ಲೂ ಬಿ.ಎಂ. ಇದಿನಬ್ಬ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿಯ ಸದಸ್ಯರಾಗಿ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಮಂಗಳೂರು ಬಂದರ್ ಟ್ರಸ್ಟ್‌ನ ಸದಸ್ಯರಾಗಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

ಸಾಹಿತ್ಯ ಕ್ಷೇತ್ರ: ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ-ಮುಸ್ಲಿಮ್ ಸಮುದಾಯದಿಂದ ಹೊರಹೊಮ್ಮಿದ ಮೊತ್ತ ಮೊದಲ ಸಾಹಿತಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಬಿ.ಎಂ.ಇದಿನಬ್ಬ, ಮಾನವತಾ ಸಾಹಿತ್ಯ ಮಾಲೆ ಪ್ರಕಾಶನ ಸಂಸ್ಥೆಯ ಮೂಲಕ ಒಟ್ಟು 6 ಕಥಾ ಸಂಕಲನ, 6 ಕವನ ಸಂಕಲನ, 2 ಮಕ್ಕಳ ಸಾಹಿತ್ಯ ಕೃತಿಯನ್ನೂ ರಚಿಸಿದ್ದಾರೆ. ಅದರಲ್ಲಿ ಹೃದಯಗೀತೆಗಳು, ಜೇನುಗೂಡು, ವಿರಹಗೀತೆ ಗಳು, ಕಿಡಿಗಳು, ಹನಿಗವನಗಳು, ಕಾವ್ಯಕುಂಜ ಎಂಬ ಕವನ ಸಂಕಲನಗಳಲ್ಲದೆ ಬಾಳಿನ ಚಿತ್ರಗಳು, ಹರಿದ ಕೋಟು, ಒಂದು ಗೊನೆ ರಸಬಾಳೆ, ರತ್ನಮಾಲೆ, ಹೃದಯ ಪರಿವರ್ತನೆ, ಕಥಾಗೊಂಚಲು ಎಂಬ ಕಥಾಸಂಕಲನಗಳು ಹಾಗೂ ಚುಟುಕ ರಾಶಿ, ಮಣಿಮಾಲೆ ಇತ್ಯಾದಿಯಾಗಿ ಮಕ್ಕಳಿಗೆ ಸಂಬಂಧಿಸಿದ ಕೃತಿಗಳೂ ಸೇರಿವೆ.

ಭಾರತ-ಚೀನಾ, ಭಾರತ-ಪಾಕಿಸ್ತಾನ ಯುದ್ಧ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿ ಅನೇಕ ಕವನಗಳನ್ನು ರಚಿಸಿ ದ್ದಾರೆ. ಉಪ್ಪಿನಂಗಡಿಯ ಮಠದಲ್ಲಿ ಹುಟ್ಟಿ ಬೆಳೆದರೂ ಉಳ್ಳಾಲವನ್ನು ತನ್ನ ಕರ್ಮಭೂಮಿಯನ್ನಾಗಿಸಿದ್ದರು. ಅದರ ಫಲವಾಗಿ ‘ಉಳ್ಳಾಲದ ನಾಡಗೀತೆ’ ಎಂದೇ ಹೇಳಲಾಗುವ ‘ಇದು ಉಳ್ಳಾಲ’ ಕವಿತೆಯಲ್ಲಿ ಉಳ್ಳಾಲದ ಸೌಂದರ್ಯವನ್ನು ಅವರು ಬಣ್ಣಿಸಿದ್ದಾರೆ. ಜೊತೆಗೆ ಸ್ವಾಗತ ಗೀತೆ, ಉಳ್ಳಾಲದ ಉರೂಸ್ ಕವಿತೆಗಳ ಮೂಲಕ ಉಳ್ಳಾಲದ ಹಿರಿಮೆ ಎತ್ತಿ ಹಿಡಿದಿದ್ದಾರೆ.

ಸೌಹಾರ್ದಕ್ಕೆ ಒತ್ತು ಕೊಟ್ಟು ಗಮಕ ಕಲೆಯಲ್ಲೂ ಅವರು ನಿರತ ರಾಗಿದ್ದರು. ದೇಶಭಕ್ತಿ ಸಹಿತ ಅನೇಕ ಕವಿತೆಗಳನ್ನು ವಾಚನ-ಹಾಡುವ ಮೂಲಕ ಕನ್ನಡದ ಕೋಗಿಲೆ, ಸಾಹಿತ್ಯರತ್ನ, ಕಾವ್ಯಜ್ಯೋತಿ ಇತ್ಯಾದಿ ಬಿರುದುಗಳಿಗೂ ಪಾತ್ರರಾಗಿದ್ದರು. ಬೆಂಗಳೂರು ಮತ್ತು ಮಂಗಳೂರು ಆಕಾಶವಾಣಿಯಲ್ಲೂ ಕವನ ವಾಚನ, ಚಿಂತನಾ ಭಾಷಣ ಪ್ರಸಾರವಾಗಿತ್ತು. ಸತತ ಮೂರು ಬಾರಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಹಿರಿಮೆಯೂ ಅವರದ್ದಾಗಿದೆ.

ನಾನಾ ಕ್ಷೇತ್ರ: ಕತೆ, ಕವನ ಸಹಿತ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಬರೆಯುತ್ತಿದ್ದ ಬಿ.ಎಂ.ಇದಿನಬ್ಬ ಎಳೆಯ ಹರೆಯದಲ್ಲೇ ಭಾಷಣ, ಬರಹದಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಶಾಲೆಯ ಹಸ್ತ ಪತ್ರಿಕೆ ‘ವಿದ್ಯಾರ್ಥಿ ಮಿತ್ರ’ದಲ್ಲಿ ಪ್ರಕಟವಾಗುತ್ತಿದ್ದ ಬರಹಗಳಲ್ಲಿ ಅವರ ಕಥೆ, ಕವನ, ಲೇಖನಗಳೇ ತುಂಬಿತ್ತು. ಆ ದಿನಗಳಲ್ಲೇ ಅವರನ್ನು ಸಹಕಾರಿ ಧುರೀಣ ಮೊಳಹಳ್ಳಿ ಶಿವರಾಯರು ಗುರುತಿಸಿದ್ದರು. ಹಾಗೇ ಪ್ರೌಢಶಾಲೆಯ ಕಲಿಕೆ ಮುಗಿದ ಬಳಿಕ ಬಿ.ಎಂ.ಇದಿನಬ್ಬ ಸಹಕಾರಿ ಕ್ಷೇತ್ರದಲ್ಲಿ ತನ್ನ ವೃತ್ತಿ ಬದುಕು ಕಟ್ಟಿಕೊಂಡರು.

ಜೊತೆಗೆ ಉದಯಚಂದ್ರ ಪತ್ರಿಕೆಯ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡರು. ಪ್ರಜಾವಾಣಿ, ವಿಶಾಲ ಕರ್ನಾಟಕ, ನವಕೀರ್ತಿ ಪತ್ರಿಕೆಗಳಲ್ಲೂ ದುಡಿದರು. ಬೇರೆ ಬೇರೆ ಪತ್ರಿಕೆಗಳಲ್ಲಿ ಅವರ 700ಕ್ಕೂ ಅಧಿಕ ಲೇಖನಗಳು ಪ್ರಕಟಗೊಂಡಿವೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಹೊರತರುತ್ತಿದ್ದ ಪತ್ರಿಕೆಯ ಸಂಪಾದಕರೂ ಆಗಿದ್ದರು. ದ.ಕ. ಜಿಲ್ಲಾ ಜರ್ನಲಿಸ್ಟ್ ಅಸೋಸಿಯೇಶನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಬ್ಯಾರಿ ಆಂದೋಲನದ ಮುಂದಾಳು: ಬಿ.ಎಂ.ಇದಿನಬ್ಬ ಬ್ಯಾರಿ ಆಂದೋಲನದ ಮುಂದಾಳು ಕೂಡ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ತನ್ನ ಛಾಪು ಮೂಡಿಸಿದ್ದ ಅವರು 1998ರ ನವೆಂಬರ್ 22ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಪ್ರಥಮ ಬ್ಯಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಗೌರವ ಸಲಹೆಗಾರರಾಗಿದ್ದರು. ಬ್ಯಾರಿ ಸಾಹಿತ್ಯ ಅಕಾಡಮಿಯನ್ನು ಘೋಷಿಸಲೇಬೇಕು ಎಂದು ಸರಕಾರದ ಮುಂದೆ ಪಟ್ಟು ಹಿಡಿದು ಆಗ್ರಹಿಸಿದ್ದರು.

ಪ್ರಶಸ್ತಿಗಳ ಗರಿ: ಖಾದಿ ಜುಬ್ಬಾ, ಕೋಟು, ಬಿಳಿ ಪಂಚೆ ಉಡುವ, ಟೋಪಿ ಧರಿಸುವ ಅವರು ಗಡ್ಡಧಾರಿಯೂ ಆಗಿದ್ದರು. ಶುದ್ಧ ಮತ್ತು ಶುಭ್ರ ಮನಸ್ಸಿನ, ಸರಳ-ಸಜ್ಜನಿಕೆಯ, ದೇಶಪ್ರೇಮಿ-ಮಾನವತಾವಾದಿಯಾಗಿದ್ದ ಬಿ.ಎಂ.ಇದಿನಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಪ್ರಶಸ್ತಿ, ಕನ್ನಡ ಏಕೀಕರಣ ಪ್ರಶಸ್ತಿ, ಗೋರೂರು ರಾಮಸ್ವಾಮಿ ಅಯ್ಯಂಗಾರ ಪ್ರಶಸ್ತಿಯೂ ಲಭಿಸಿದೆ.

share
ಹಂಝ ಮಲಾರ್
ಹಂಝ ಮಲಾರ್
Next Story
X