Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬುಲ್ಡೋಜರ್ ರಾಜಕೀಯದ ಅಪಾಯಕಾರಿ ಆಯಾಮ

ಬುಲ್ಡೋಜರ್ ರಾಜಕೀಯದ ಅಪಾಯಕಾರಿ ಆಯಾಮ

ಎಸ್. ಸುದರ್ಶನ್ಎಸ್. ಸುದರ್ಶನ್28 May 2025 10:25 AM IST
share
ಬುಲ್ಡೋಜರ್ ರಾಜಕೀಯದ ಅಪಾಯಕಾರಿ ಆಯಾಮ

ಬುಲ್ಡೋಜರ್ ನ್ಯಾಯದ ಈ ರೀತಿ, ಒಂದೆಡೆ ಕಾನೂನು ಸಾಧನವೆಂಬಂತೆ ಕಾಣಿಸುತ್ತಲೇ ಇನ್ನೊಂದೆಡೆ ಹಿಂಸೆಯ ಅಸ್ತ್ರವಾಗುತ್ತದೆ. ಮೂಲಭೂತ ಹಕ್ಕುಗಳು, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು ಇಲ್ಲವಾಗಿಯೇ ಹೋಗುತ್ತಿರುವಾಗಲೂ, ಕಾನೂನುಬದ್ಧತೆಯ ಹೊದಿಕೆಯಡಿ ಆ ಕಟು ಸತ್ಯ ಮರೆಯಾಗಿಬಿಡುತ್ತಿದೆ.

ಇದು ಸಾಂವಿಧಾನಿಕ ರಕ್ಷಣೆಗಳ ಗಂಭೀರ ಅನುಪಸ್ಥಿತಿಯನ್ನು ತೋರಿಸುತ್ತದೆ.

ಸಾವಿರಾರು ಮನೆಗಳ ನಾಶಕ್ಕೆ ಕಾರಣವಾದಾಗಲೂ, ಸರಕಾರದ ಕ್ರಮವನ್ನೇ ಕಾನೂನುಬದ್ಧ ಎನ್ನಲಾಗುತ್ತಿದೆ.

ನ್ಯಾಯಾಲಯಗಳು ಸರಕಾರದ ಇಂಥ ಅಕ್ರಮದ ವಿರುದ್ಧ ನಿಲ್ಲದೇ ಹೋದರೆ, ಘನತೆಯ ಬದುಕಿನ ಹಕ್ಕುಗಳು ಬರೀ ಭರವಸೆಯಲ್ಲಿ ಮಾತ್ರ ಉಳಿಯಲಿವೆ.

ಗುಜರಾತ್‌ನಲ್ಲೊಂದು ಸಾಮೂಹಿಕ ಸ್ಥಳಾಂತರದ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.

ಚಂದೋಲಾ ಲೇಕ್ ಪ್ರದೇಶದಲ್ಲಿ ೮,೦೦೦ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ಪೂರ್ವ ಸೂಚನೆ ಅಥವಾ ಪರ್ಯಾಯ ಪುನರ್ವಸತಿ ಇಲ್ಲದೆ ರಾತ್ರೋರಾತ್ರಿ ಸ್ಥಳಾಂತರಿಸಲಾಯಿತು.

ಅವರ ಮನೆಗಳನ್ನು ಸರಕಾರದ ಬುಲ್ಡೋಜರ್‌ಗಳು ನೆಲಸಮಗೊಳಿಸಿದಾಗ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಬಟಾಬಯಲಿನಲ್ಲಿ ಅನಾಥರಂತೆ ಬಿದ್ದಿರುವ ಹೃದಯವಿದ್ರಾವಕ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿವೆ.

ಅವರೆಲ್ಲ ಮೂರ್ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಅಲ್ಲಿ ವಾಸಿಸುತ್ತಿದ್ದರು. ಅನೇಕರ ಬಳಿ ವೋಟರ್ ಐಡಿ, ಆಧಾರ್ ಕಾರ್ಡ್, ಪಡಿತರ ಚೀಟಿ ಎಲ್ಲವೂ ಇತ್ತು. ಅಲ್ಲಿ ದೀರ್ಘಕಾಲದಿಂದ ವಾಸಿಸುತ್ತಿರುವ ಬಗ್ಗೆ ದಾಖಲೆಗಳು ಕೂಡ ಅವರ ಬಳಿ ಇದ್ದವು. ಅಷ್ಟಿದ್ದೂ, ಗುಜರಾತ್ ಸರಕಾರ ಅವರನ್ನು ವಿದೇಶಿ ಪ್ರಜೆಗಳು ಎಂದು, ರೊಹಿಂಗ್ಯಾಗಳೆಂದು ಹಣೆಪಟ್ಟಿ ಕಟ್ಟಿರುವ ಬಗ್ಗೆ ವರದಿಯಾಗಿದೆ.

ಮುಸ್ಲಿಮ್ ಕೊಳೆಗೇರಿ ನಿವಾಸಿಗಳಿಗೆ ಕಳಂಕ ಹಚ್ಚಲು ಈಗಂತೂ ರೊಹಿಂಗ್ಯಾ ಎನ್ನುವುದನ್ನು ಅತಿಯಾಗಿ ಬಳಸುವುದು ನಡೆಯುತ್ತಿದೆ. ದೇಶವಿಲ್ಲದ ನಿಜವಾದ ರೊಹಿಂಗ್ಯಾ ನಿರಾಶ್ರಿತರು ಅಂತಹ ಯಾವುದೇ ಗುರುತಿನ ಚೀಟಿಗಳನ್ನು ಹೊಂದಿರುವುದಿಲ್ಲ. ಆದರೆ ಇಲ್ಲಿ ಎಲ್ಲವನ್ನೂ ಹೊಂದಿದ್ದವರನ್ನು ರೊಹಿಂಗ್ಯಾಗಳು ಎನ್ನಲಾಯಿತು.

ಈ ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಲೆಂದೇ ಗುಜರಾತ್ ಸರಕಾರ ನಿರ್ಧರಿಸಿಬಿಟ್ಟಿತ್ತು ಎಂಬುದು ಇಲ್ಲಿ ಬಯಲಾಗಿದೆ.

ಕೊಳೆಗೇರಿಗಳ ತೆರವು ಭಾರತದಲ್ಲಿ ಹೊಸದೇನಲ್ಲ. ಆದರೆ ಈಗ ಅದು ಅತಿ ಭಯಾನಕ ರೀತಿಯಲ್ಲಿ ಮತ್ತೆ ಮತ್ತೆ ನಡೆಯುತ್ತಿದೆ. ಅಂಚಿನಲ್ಲಿರುವವರ ರಕ್ಷಣೆಗೆ ನಿಲ್ಲಬೇಕಿದ್ದ ಕೋರ್ಟ್‌ಗಳು ಕೂಡ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತಿವೆ. ಇನ್ನೊಂದು ರೀತಿಯಲ್ಲಿ ಕೋರ್ಟ್‌ಗಳು ಬುಲ್ಡೋಜರ್ ಆರ್ಭಟವನ್ನು ನ್ಯಾಯಸಮ್ಮತ ಎನ್ನುವಂತೆ ಮಾಡಿವೆ. ಇದು ಇನ್ನಷ್ಟು ಆತಂಕದ ವಿಷಯವಾಗಿದೆ.

ಈ ಬಡಪಾಯಿಗಳನ್ನು ಅತಿಕ್ರಮಣಕಾರರು ಎಂದುಬಿಡಲಾಗುತ್ತಿರುವುದು, ಅವರನ್ನು ಶಿಕ್ಷೆಯ ಬಾಯಿಗೆ ಕೆಡಹುವ ಅಪಾಯವಾಗಿ ಪರಿಣಮಿಸಿದೆ.

ಒಂದು ಕಾಲದ ಅತಿ ಮಹತ್ವದ ಕೋರ್ಟ್ ನಿರ್ಧಾರಗಳು ಸ್ಥಳಾಂತರಗೊಂಡ ಜನರು ಘನತೆಯಿಂದ ಬದುಕುವುದಕ್ಕೆ ಪೂರಕವಾಗಿ ಪುನರ್ವಸತಿ ಕಲ್ಪಿಸುವ ಹೊಣೆಯನ್ನು ಸರಕಾರ ಹೊರುವಂತೆ ಮಾಡಿದ್ದವು. ಅಂಥ ಸಾಂವಿಧಾನಿಕ ಕಳಕಳಿ, ಆ ದೃಷ್ಟಿಕೋನ ಈಗ ಇಲ್ಲವಾಗಿದೆ.

ಹಿಂದೆ, ಕೊಳೆಗೇರಿ ನಿವಾಸಿಗಳ ದಾಖಲಾತಿ ಪರಿಶೀಲಿಸಲು ಮತ್ತು ಅವರ ಪುನರ್ವಸತಿಗೆ ವ್ಯವಸ್ಥೆ ಮಾಡುವ ಹೊಣೆ ಸರಕಾರದ್ದಾಗಿರುತ್ತಿತ್ತು. ಇಂದು, ಅವರ ಮನೆಗಳನ್ನು ಅಕ್ರಮ ಎಂಬ ಹೆಸರಿನಲ್ಲಿ ನೆಲಸಮ ಮಾಡಲಾಗುತ್ತದೆ. ನ್ಯಾಯಾಲಯಗಳು ಕೂಡ ಆ ಜನರನ್ನು ಸರಕಾರಿ ಭೂಮಿಯ ಅತಿಕ್ರಮಣದಾರರು ಎಂದು ಭಾವಿಸತೊಡಗಿವೆ. ಇದರ ಪರಿಣಾಮವಾಗಿ ಅವರಿಗೆ ರಕ್ಷಣೆಯೇ ಇಲ್ಲವಾದಂತಾಗಿದೆ. ಇದರಿಂದಾಗಿ, ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸುವ ಹೊಣೆಗಾರಿಕೆಯಿಂದ ಸರಕಾರ ತಪ್ಪಿಸಿಕೊಳ್ಳುವಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಬುಲ್ಡೋಜರ್ ಎಂಬುದು ಒಂದು ಆಡಳಿತ ನೀತಿಯಾಗಿಬಿಟ್ಟಿದೆ. ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೊಂದು ಕ್ರಮ ಜೋರಾಯಿತು.

ಕ್ರಿಮಿನಲ್ ನಡವಳಿಕೆಯ ಆರೋಪ ಹೊತ್ತಿರುವವರ ವಿರುದ್ಧ ಬಹಳ ಸಲ ವಿಚಾರಣೆ ಕೂಡ ಇಲ್ಲದೆ ಶಿಕ್ಷೆ ಕೊಡಲು ಅವರ ಮನೆ ತೆರವುಗೊಳಿಸುವುದನ್ನು ಆದಿತ್ಯನಾಥ್ ಸರಕಾರ ಶುರು ಮಾಡಿತು.

ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಈ ಬುಲ್ಡೋಜರ್ ನೀತಿ ವ್ಯಾಪಕವಾಗಿದೆ. ಬುಲ್ಡೋಜರ್ ನ್ಯಾಯ ಎಂದು ಅದನ್ನು ಕರೆಯುತ್ತ, ಮುಸ್ಲಿಮ್ ಸಮುದಾಯದ ವ್ಯಕ್ತಿಗಳನ್ನು ಗುರಿಯಾಗಿಸಲಾಗುತ್ತಿದೆ.

ಅದೊಂದು ಬಗೆಯಲ್ಲಿ ಸಾಮೂಹಿಕ ಶಿಕ್ಷೆಯ ಅಸ್ತ್ರವಾಗಿಬಿಟ್ಟಿದೆ. ಅವರ ಮನೆಗಳು, ಅಂಗಡಿಗಳು ಮತ್ತು ಜೀವನೋಪಾಯದ ಸಾಧನಗಳನ್ನು ನಾಶ ಮಾಡಲಾಗುತ್ತಿದೆ.

ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ವರದಿಯೊಂದು, ಈ ಪದ್ಧತಿ ದೇಶಾದ್ಯಂತ ಹೇಗೆ ವಿಸ್ತರಿಸಿತು ಎಂಬುದನ್ನು ಎತ್ತಿ ತೋರಿಸುತ್ತದೆ.

ಸರಕಾರ ಇಲ್ಲಿನ ಮುಸ್ಲಿಮ್ ಸಮುದಾಯದ ವಿರುದ್ಧ ಬುಲ್ಡೋಜರ್‌ಗಳನ್ನು ಬಹಿರಂಗವಾಗಿ ಬಳಸುತ್ತಿದೆ.

ಈ ವಿಷಯದಲ್ಲಿ ಸರಕಾರ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತದೆ.

ಗುಜರಾತ್‌ನಲ್ಲಿನ ಈಗಿನ ಪರಿಸ್ಥಿತಿ ನೋಡಿದರೆ, ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ಹೊಸ ಆಟ ನಡೆಯುತ್ತಿದೆ ಎಂಬುದು ತಿಳಿಯುತ್ತದೆ. ಸರಕಾರದ ಬುಲ್ಡೋಜರ್ ಕ್ರಮವನ್ನು ಕಾನೂನುಬದ್ಧಗೊಳಿಸುವ ಪ್ರಯತ್ನಗಳೂ ನಡೆದಂತಿದೆ.

ಗುಜರಾತಿನಲ್ಲಿ ಈಗ ನಡೆದಿರುವ ತೆರವು ಕಾರ್ಯಾಚರಣೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಕ್ಕಿದ್ದೆನ್ನಲಾದ ಸೂಕ್ಷ್ಮ ಮಾಹಿತಿಗಳ ಆಧಾರದ ಮೇಲೆ ಕೈಗೊಂಡಿರುವುದಾಗಿ ಹೇಳಲಾಗುತ್ತಿದೆ.

ಹೈಕೋರ್ಟ್‌ಗೆ ಗುಜರಾತ್ ಸರಕಾರ ಹಾಗೆ ಹೇಳಿದೆ.

ಆ ಪ್ರದೇಶದಲ್ಲಿ ದಾಖಲೆರಹಿತ ಬಾಂಗ್ಲಾದೇಶಿ ವಲಸಿಗರು ಇದ್ದುದಾಗಿ ಸರಕಾರ ಆರೋಪಿಸಿದೆ.

ತೆರವು ಕಾರ್ಯಾಚರಣೆಯ ನಂತರ ಸಂತ್ರಸ್ತ ನಿವಾಸಿಗಳು ಕೋರ್ಟ್ ಮೊರೆಹೋದರು. ಅರ್ಜಿದಾರರು ಚಂದೋಲಾ ಲೇಕ್ ಪ್ರದೇಶದಲ್ಲಿ ದೀರ್ಘಕಾಲದಿಂದ ವಾಸಿಸುತ್ತಿದ್ದರೂ, ಗುಜರಾತ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿತು.

ಆದೇಶದಲ್ಲಿನ ತಾರ್ಕಿಕತೆ ಎಷ್ಟು ಅಪಾಯಕಾರಿ ಯೆಂಬುದನ್ನು ಕಾನೂನು ಹಾಗೂ ಸಂವಿಧಾನದ ಪರಿಣಿತರು ಗಮನಿಸಿದ್ದಾರೆ.

ಮೊದಲನೆಯದಾಗಿ, ಸಂತ್ರಸ್ತ ನಿವಾಸಿಗಳನ್ನು ಸರಕಾರಿ ಭೂಮಿಯ ಅತಿಕ್ರಮಣಕಾರರು ಎಂದು ಕೋರ್ಟ್ ಪರಿಗಣಿಸಿತು.

ಅವರು ನೆಲೆಸಿರುವುದೇ ಕಾನೂನುಬಾಹಿರವಾಗಿದೆ ಎಂಬ ಏಕೈಕ ಆಧಾರದ ಮೇಲೆ, ತಡೆಯಾಜ್ಞೆ ನೀಡಲು ನಿರಾಕರಿಸಿದ್ದನ್ನು ಅದು ಸಮರ್ಥಿಸಿಕೊಂಡಿತು. ಈ ತಾರ್ಕಿಕತೆಯ ಮೂಲಕ ಸಹಜ ನ್ಯಾಯದ ಮೂಲಭೂತ ತತ್ವಗಳನ್ನು ಬದಿಗೆ ಸರಿಸಲಾಯಿತು. ಮನೆಗಳನ್ನು ಕೆಡಹುವ ಮೊದಲು ಪೂರ್ವ ಸೂಚನೆ ನೀಡುವ ಅಗತ್ಯ ಕೂಡ ಇಲ್ಲವೆನ್ನಲಾಯಿತು.

ಎರಡನೆಯದಾಗಿ, ಸರಕಾರ ಏನು ಹೇಳಿತೋ ಅದನ್ನು ಹಾಗೇ ಒಪ್ಪಿಬಿಡುವ ಕೆಲಸ ನಡೆಯಿತು.

ಸರಕಾರದ ಆರೋಪಗಳ ವಿಚಾರವಾಗಿ ಪ್ರಾಥಮಿಕ ಕಾನೂನು ಪರಿಶೀಲನೆಯ ಅಗತ್ಯವಿತ್ತು.

೮,೦೦೦ ಕುಟುಂಬಗಳಲ್ಲಿ ಅನೇಕರು ಎಲ್ಲ ದಾಖಲೆಗಳನ್ನು ಹೊಂದಿದ್ದಾಗಲೂ, ದಶಕಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾಗಲೂ, ವಿದೇಶಿಯರು ಎಂದು ಪರಿಗಣಿಸಲು ಸರಕಾರ ಯಾವ ಆಧಾರದ ಮೇಲೆ ನಿರ್ಧರಿಸಿದೆ ಎಂಬುದರ ಕುರಿತು ಯಾವುದೇ ತನಿಖೆ ನಡೆಸಲಾಗಿಲ್ಲ.

ಆ ನಿವಾಸಿಗಳನ್ನು ರೊಹಿಂಗ್ಯಾ ಅಥವಾ ಬಾಂಗ್ಲಾದೇಶಿ ಎಂದು ಬ್ರಾಂಡ್ ಮಾಡುವುದು ಸರಿಯೇ ಎಂದು ನೋಡಲು ನ್ಯಾಯಾಲಯ ನಿರಾಕರಿಸಿತು.

ಸಂವಿಧಾನದ ೨೧ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ನ್ಯಾಯ ಪ್ರಕ್ರಿಯೆಯ ಉಲ್ಲಂಘನೆ ಬಗ್ಗೆ ಕೋರ್ಟ್ ತಲೆಕೆಡಿಸಿಕೊಳ್ಳಲೇ ಇಲ್ಲ.

ವಿದೇಶಿ ರಾಷ್ಟ್ರೀಯತೆಯ ಆಧಾರರಹಿತ ಆರೋಪಗಳನ್ನು ಮಾತ್ರ ಹೊರಿಸಿ ಮಾಡಲಾದ ತೆರವು ಕಾರ್ಯಾಚರಣೆ ಸಾಂವಿಧಾನಿಕ ರಕ್ಷಣೆಗಳನ್ನು ನಿರಾಕರಿಸಲು ಸಾಕೆ ಎಂಬ ಪ್ರಶ್ನೆಯನ್ನು ಕೋರ್ಟ್ ಎತ್ತಲೇ ಇಲ್ಲ.

ಈ ಲೋಪ ನ್ಯಾಯಾಲಯದ ಸಾಂವಿಧಾನಿಕ ಜವಾಬ್ದಾರಿಯ ಗಂಭೀರ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಪರಿಣಿತರು.

ಕೋರ್ಟ್‌ನ ಇಂಥ ಮೌನ, ಸಾಮೂಹಿಕ ತೆರವನ್ನು ಸಮರ್ಥಿಸಲು ರಾಷ್ಟ್ರೀಯ ಭದ್ರತೆಯ ಅಸ್ತ್ರ ಬಳಸಲು ಸರಕಾರಕ್ಕೆ ಅವಕಾಶ ಮಾಡಿಕೊಟ್ಟಿತು.

ಇದು ಬುಲ್ಡೋಜರ್ ರಾಜಕೀಯದ ಹೊಸ ಮತ್ತು ಅಪಾಯಕಾರಿ ಆಯಾಮಕ್ಕೆ ನಾಂದಿ ಹಾಡಿದಂತಿದೆ.

ಇದರೊಂದಿಗೆ, ರಾಷ್ಟ್ರೀಯ ಭದ್ರತೆ ಎಂಬುದು ಇಡೀ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲು ಆಧಾರವಾಗುತ್ತದೆ.

ಕೊಳೆಗೇರಿ ನಿರ್ಮೂಲನೆ ಕಾರ್ಯಾಚರಣೆಗಳು ರಾಷ್ಟ್ರೀಯ ಭದ್ರತೆ ನೆಪದಲ್ಲಿ ಮುಚ್ಚಿಹೋಗುತ್ತವೆ. ಪ್ರತಿಯೊಂದು ಮುಸ್ಲಿಮ್ ನೆರೆಹೊರೆಯವರನ್ನು ಅನುಮಾನದಿಂದ ನೋಡು ವಂತೆ ಮಾಡುವ ಅಪಾಯ ತಲೆದೋರುತ್ತದೆ. ಸರಕಾರ ಅವರನ್ನು ಇನ್ನಷ್ಟು ಅನಾಯಾಸವಾಗಿ ಗುರಿ ಮಾಡುತ್ತದೆ.

ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಇಂಥ ಅನಿಯಂತ್ರಿತ ತೆರವಿನ ವಿರುದ್ಧ ರಕ್ಷಣೆ ನೀಡಿದೆ. ನ್ಯಾಯಯುತ ಪ್ರಕ್ರಿಯೆಯನ್ನು ಪಾಲಿಸದೆ ನಡೆಸಲಾದ ಕಾರ್ಯಾಚರಣೆಗಳು ಕಾನುನುಬಾಹಿರ ಎಂಬುದನ್ನು ತೀರ್ಪು ಹೇಳಿದೆ. ಕ್ರಿಮಿನಲ್ ನಡವಳಿಕೆಯ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಸೇರಿದ ಆಸ್ತಿಗಳನ್ನು ಧ್ವಂಸ ಮಾಡುವುದನ್ನು ಕೋರ್ಟ್ ಒಪ್ಪಿಲ್ಲ. ಆದರೂ, ಬಡ ಮುಸ್ಲಿಮ್ ಸಮುದಾಯಗಳನ್ನೇ ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡು ನಡೆಯುವ ಈ ಕ್ರಮಗಳ ಅಸಮಾನತೆಯನ್ನು ಗುರುತಿಸುವಲ್ಲಿ ತೀರ್ಪು ವಿಫಲವಾಗಿದೆ ಎಂದು ಪರಿಣಿತರು ಹೇಳುತ್ತಾರೆ.

ಮತ್ತು ಹಾಗಾಗಿಯೇ, ಗುಜರಾತ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಗೆ ರಾಷ್ಟ್ರೀಯ ಭದ್ರತೆಯ ನೆಪ ಬಳಸಿ, ಕಾನೂನುಬಾಹಿರ ಎಂಬುದರಿಂದ ತಪ್ಪಿಸಿಕೊಳ್ಳಲು ಗುಜರಾತ್ ಸರಕಾರಕ್ಕೆ ಅವಕಾಶ ಸಿಕ್ಕಿದಂತಾಗಿದೆ.

ಇದಲ್ಲದೆ, ಸಾರ್ವಜನಿಕ ಅತಿಕ್ರಮಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತನ್ನ ತೀರ್ಪಿನ ವ್ಯಾಪ್ತಿಯಿಂದ ಕೋರ್ಟ್ ಸ್ಪಷ್ಟವಾಗಿ ಹೊರಗಿಟ್ಟಿದೆ. ಆ ಮೂಲಕ, ಯಾವ ಆಸ್ತಿಗಳು ಮತ್ತು ನಿವಾಸಗಳು ಆ ವರ್ಗಕ್ಕೆ ಬರುತ್ತವೆ ಎಂಬುದನ್ನು ನಿರ್ಧರಿಸುವ ಅನಿಯಂತ್ರಿತ ಅಧಿಕಾರವನ್ನು ಕೋರ್ಟ್ ಸರಕಾರದ ಕೈಗೇ ಒಪ್ಪಿಸಿದಂತಾಗಿದೆ.

ಹೀಗಾಗಿ, ಸಹಜ ನ್ಯಾಯದ ತತ್ವ ಇನ್ನು ಮುಂದೆ ಎಲ್ಲರಿಗೂ ಅನ್ವಯವಾಗದಂತಾಗುತ್ತದೆ.

ಏಕರೂಪವಾಗಿ ಅನ್ವಯಿಸದ ಒಂದು ಅಪವಾದವನ್ನು ಅದು ರೂಪಿಸುತ್ತದೆ, ನ್ಯಾಯ ಪ್ರಕ್ರಿಯೆ ಎಂಬುದು ಸರಕಾರದ ವಿವೇಚನೆಯ ಮೇಲೆ ಸೆಲೆಕ್ಟಿವ್ ಆಗಲಿದೆ ಮತ್ತು ಅನಿಶ್ಚಿತವಾಗಲಿದೆ. ಯಾರಿಗೆ ಕಾನೂನಿನ ರಕ್ಷಣೆ ಮತ್ತು ಯಾರಿಗೆ ದಂಡನೆ ಎಂಬುದನ್ನು ಸರಕಾರ ನಿರ್ಧರಿಸುತ್ತದೆ.

ಬುಲ್ಡೋಜರ್ ನ್ಯಾಯದ ಈ ರೀತಿ, ಒಂದೆಡೆ ಕಾನೂನು ಸಾಧನವೆಂಬಂತೆ ಕಾಣಿಸುತ್ತಲೇ ಇನ್ನೊಂದೆಡೆ ಹಿಂಸೆಯ ಅಸ್ತ್ರವಾಗುತ್ತದೆ. ಮೂಲಭೂತ ಹಕ್ಕುಗಳು, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳು ಇಲ್ಲವಾಗಿಯೇ ಹೋಗುತ್ತಿರುವಾಗಲೂ, ಕಾನೂನುಬದ್ಧತೆಯ ಹೊದಿಕೆಯಡಿ ಆ ಕಟು ಸತ್ಯ ಮರೆಯಾಗಿಬಿಡುತ್ತಿದೆ.

ಇದು ಸಾಂವಿಧಾನಿಕ ರಕ್ಷಣೆಗಳ ಗಂಭೀರ ಅನುಪಸ್ಥಿತಿಯನ್ನು ತೋರಿಸುತ್ತದೆ.

ಸಾವಿರಾರು ಮನೆಗಳ ನಾಶಕ್ಕೆ ಕಾರಣವಾದಾಗಲೂ, ಸರಕಾರದ ಕ್ರಮವನ್ನೇ ಕಾನೂನುಬದ್ಧ ಎನ್ನಲಾಗುತ್ತಿದೆ.

ನ್ಯಾಯಾಲಯಗಳು ಸರಕಾರದ ಇಂಥ ಅಕ್ರಮದ ವಿರುದ್ಧ ನಿಲ್ಲದೇ ಹೋದರೆ, ಘನತೆಯ ಬದುಕಿನ ಹಕ್ಕುಗಳು ಬರೀ ಭರವಸೆಯಲ್ಲಿ ಮಾತ್ರ ಉಳಿಯಲಿವೆ.

(ಕೃಪೆ: The Wire ನಲ್ಲಿ ಪ್ರಕಟಿತ

Kawalpreet Kaur ಅವರ ಲೇಖನ ಆಧರಿತ)

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X