Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಚಿಟ್ಟೆಗಳ...

ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಚಿಟ್ಟೆಗಳ ನೈಸರ್ಗಿಕ ಉದ್ಯಾನವನ

ನಝೀರ್ ಪೊಲ್ಯನಝೀರ್ ಪೊಲ್ಯ13 Oct 2025 9:54 AM IST
share
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಚಿಟ್ಟೆಗಳ ನೈಸರ್ಗಿಕ ಉದ್ಯಾನವನ
► 30 ಎಕರೆ ಪ್ರದೇಶದಲ್ಲಿ ಪಾರ್ಕ್ ► 98 ವಿವಿಧ ಪ್ರಭೇದಗಳ ಪಾತರಗಿತ್ತಿಗಳು

ಉಡುಪಿ: ಆಹಾರ ಸರಪಳಿಯ ಕೊಂಡಿಯಾಗಿ ಹಾಗೂ ಪರಾಗ ಸ್ಪರ್ಶದ ಮೂಲಕ ಪರಿಸರ ಸಮಾತೋಲನ ಕಾಪಾಡುವಲ್ಲಿ ಚಿಟ್ಟೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಚಿಟ್ಟೆಗಳು ಪ್ರಕೃತಿಯಲ್ಲಿ ಸೂಚಕ ಜೀವಿಗಳಾಗಿ ಮತ್ತು ಇತರ ಜೀವಿಗಳಿಗೆ ಆಹಾರವಾಗಿಯೂ ಕಾರ್ಯನಿರ್ವಹಿಸುತ್ತವೆ. ಆದರೆ ಇಂದು ಆಹಾರ ಸಸ್ಯಗಳ ನಾಶದಿಂದ ಚಿಟ್ಟೆಗಳ ಬಹಳಷ್ಟು ಪ್ರಭೇದಗಳು ಅಳಿವಿನಂಚಿನಲ್ಲಿವೆ.

ಇದೀಗ ಪರಿಸರದಲ್ಲಿ ಚಿಟ್ಟೆಗಳ ಪಾತ್ರ ಹಾಗೂ ಚಿಟ್ಟೆಗಳ ಸಂರಕ್ಷಣೆಯ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಚಿಟ್ಟೆಗಳ ಉದ್ಯಾನ ಸ್ಥಾಪಿಸಲಾಗಿದೆ. ಇಲ್ಲಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಚಿಟ್ಟೆಗಳನ್ನು ವೀಕ್ಷಿಸಲು ಮುಕ್ತವಾದ ಅವಕಾಶ ಕಲ್ಪಿಸಲಾಗಿದೆ.

ನೈಸರ್ಗಿಕವಾಗಿ ಬೆಳೆದ ಕಾಡು

ಬ್ರಹ್ಮಾವರದ ಕೃಷಿ ಕೇಂದ್ರದ ಆವರಣದಲ್ಲಿ 30 ಎಕರೆ ನೈಸರ್ಗಿ ಕವಾಗಿ ಬೆಳೆದ ಕಾಡಿನಲ್ಲಿರುವ ಈ ಉದ್ಯಾನವನಕ್ಕೆ 2024ರ ಕೃಷಿ ಮೇಳದಲ್ಲಿ ಚಾಲನೆ ನೀಡಲಾಗಿದೆ. ಈ ಕಾಡು ನೈಸರ್ಗಿಕವಾಗಿ ಹಲವಾರು ವರ್ಷಗಳಿಂದ ಯಾವುದೇ ಅಡೆ-ತಡೆಯಿಲ್ಲದೇ ದಟ್ಟವಾಗಿ ಬೆಳೆದು ವ್ಯಾಪಕವಾಗಿ ನೆಲೆನಿಂತು ಹಲವಾರು ಪ್ರಾಣಿ ಪ್ರಪಂಚಕ್ಕೆ ಆಸರೆಯಾಗಿದೆ.

ಈ ಉದ್ಯಾನವನದಲ್ಲಿ ವಿಹರಿಸುವಾಗ ಚಿಟ್ಟೆಗಳ ಅಂದ-ಚಂದ, ವಿವಿಧ ಭಂಗಿಯ ಹಾರಾಟದ ಶೈಲಿ, ಮಕರಂದ ಹೀರುವಿಕೆ, ಚಿಟ್ಟೆಯ ಹುಳಗಳಿಗೆ ಆಸರೆಯಾಗಿರುವ ಸಸ್ಯಗಳನ್ನು ಪ್ರಶಾಂತವಾದ ವಾತಾವರಣದಲ್ಲಿ ಮಂತ್ರಮುಗ್ಧರಾಗಿ ವೀಕ್ಷಿಸಿ ನೆಮ್ಮದಿ, ಉಲ್ಲಾಸ ಪಡೆಯಬಹುದಾಗಿದೆ. ಚಿಟ್ಟೆ ಪ್ರಿಯರಿಗೆ ಇದೊಂದು ಅತ್ಯುತ್ತಮ ವಾದ ನೈಸರ್ಗಿಕ ತಾಣ. ಈ ಉದ್ಯಾನವನದಲ್ಲಿ ಚಿಟ್ಟೆಗಳ ವೈವಿಧ್ಯ ಸಮೃದ್ಧಿಯಾಗಿದ್ದರೂ ಇತರ ವಿವಿಧ ರೀತಿಯ ಪ್ರಾಣಿ ಹಾಗೂ ಸಸ್ಯಗಳ ವೈವಿಧ್ಯವನ್ನು ನೈಸರ್ಗಿಕವಾಗಿ ಸಂರಕ್ಷಿಸಲಾಗಿದೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಬಿ.

ಫಲಕಗಳಲ್ಲಿ ಚಿಟ್ಟೆಗಳ ಮಾಹಿತಿ

ಬಹುತೇಕ ಜನಸಾಮಾನ್ಯರಿಗೆ ನಮ್ಮ ಪರಿಸರದಲ್ಲಿ ವಿವಿಧ ಪ್ರಭೇದಗಳ ಚಿಟ್ಟೆಗಳಿವೆ ಎಂಬುದರ ಅರಿವೇ ಇಲ್ಲ. ಅದರಲ್ಲೂ ಅವುಗಳಿಗೆ ವಿವಿಧ ಹೆಸರುಗಳಿವೆ ಎಂಬುದು ತಿಳಿದಿಲ್ಲ. ಈ ಕಾರಣಕ್ಕೆ ಚಿಟ್ಟೆ ಉದ್ಯಾನವನದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಚಿಟ್ಟೆಗಳ ಮಾಹಿತಿ ನೀಡಲಾಗಿದೆ. ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ.

ಉದ್ಯಾನವನದಲ್ಲಿ ಹಾದು ಹೋಗುವ ಮುಖ್ಯ ಹಾದಿಯ ಬದಿಯಲ್ಲಿ ಈ ಕಾಡಿನಲ್ಲಿರುವ ಚಿಟ್ಟೆಗಳ ವೈವಿಧ್ಯದ ವಿವರಗಳನ್ನು ಫಲಕಗಳ ಮೇಲೆ ಅತೀ ಸರಳ ಭಾಷೆಯಲ್ಲಿ ಚಿತ್ರಗಳೊಂದಿಗೆ ಪ್ರದರ್ಶಿಸಲಾಗಿದೆ. ಒಂದು ಬಾರಿ ಚಿಟ್ಟಗಳ ಉದ್ಯಾನವನ ಪ್ರವೇಶಿಸಿ ಹೊರಬರುವಷ್ಟರಲ್ಲಿ ಚಿಟ್ಟೆಗಳ ಚಮತ್ಕಾರಗಳನ್ನು ವೀಕ್ಷಿಸುವುದರ ಜೊತೆ ಅವುಗಳ ಪ್ರಭೇದಗಳನ್ನು ಗುರುತಿಸುವುದು, ಅವುಗಳಿಗೆ ಅವಶ್ಯವಿರುವ ತಾಣ, ಆಹಾರ ಹಾಗೂ ಇನ್ನಿತರ ವಿಶೇಷತೆಗಳು ಅರಿವಿಗೆ ಬರುತ್ತವೆ.

ಆಕರ್ಷಣೀಯ ತಾಣ

ಬ್ರಹ್ಮಾವರ ಕೃಷಿ ಕೇಂದ್ರದಲ್ಲಿರುವ ಚಿಟ್ಟೆಗಳ ಉದ್ಯಾನವನ ಸಾಕಷ್ಟು ಜನರಿಗೆ ಆಕರ್ಷಿಣೀಯ ತಾಣ ವಾಗಿ ಚಿಗುರುತ್ತಿದೆ. ಪ್ರತೀ ವರ್ಷ ನಡೆಯುವ ಕೃಷಿ ಮೇಳವು ಈ ಬಾರಿ ಅ.11 ಮತ್ತು 12ರಂದು ನಡೆದಿದ್ದು, ಇಲ್ಲಿಗೆ ಆಗಮಿಸಿದ ಬಹುತೇಕ ಮಂದಿ ಈ ಉದ್ಯಾನವನಕ್ಕೆ ಭೇಟಿ ನೀಡಿ ಚಿಟ್ಟೆಗಳ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಈ ಉದ್ಯಾನವನದ ಹುಟ್ಟು ಹಾಗೂ ಮಹತ್ವದ ಬಗ್ಗೆ ಕೇಂದ್ರದ ವಿಜ್ಞಾನಿಗಳು ಮುಕ್ತವಾಗಿ ಜನಸಾಮಾನ್ಯರೊಂದಿಗೆ ಸಂಚರಿಸಿ ವಿವರಿಸುತ್ತಾರೆ. ಶಾಲಾ-ಕಾಲೇಜಿನ ಮಕ್ಕಳು ಜೀವ-ವಿಜ್ಞಾನ ಅನುಭವಿಸಿ ಕಲಿಯಲು ಇದೊಂದು ಉತ್ತಮ ಅವಕಾಶ. ಸಂಶೋಧಕರು ಹಾಗೂ ರೈತರೂ ಈ ಉದ್ಯಾನವನದಲ್ಲಿ ಅಧ್ಯಯನ ಮಾಡಲು, ತಿಳಿದುಕೊಳ್ಳಲು ಮುಕ್ತ ಅವಕಾಶವಿದೆ ಎಂದು ಡಾ.ಧನಂಜಯ್ ಬಿ. ತಿಳಿಸಿದ್ದಾರೆ.

ವಿಷಕಾರಿ ಪೀಡೆನಾಶಕಗಳ ದುರ್ಬಳಕೆ

ಕೃಷಿಯಲ್ಲಿ ಬಳಸುವ ವಿಷಕಾರಿ ಪೀಡೆನಾಶಕಗಳ ದುರ್ಬಳಕೆ ಯಿಂದ ಇಂದು ಉಪಯುಕ್ತ ಕೀಟಗಳು ಹಾಗೂ ಇತರ ಜೀವಿಗಳು ಸಾಯುತ್ತಿವೆ. ಆದರೂ ಮತ್ತೆ ಮತ್ತೆ ಉಪಯುಕ್ತ ಕೀಟಗಳು ಹಾಗೂ ಇತರ ಜೀವಿಗಳು ನಮ್ಮ ಪರಿಸರದಲ್ಲಿ ಕಂಡುಬರಲು ನೈಸರ್ಗಿಕ ಕಾಡುಗಳು ಹಾಗೂ ನೈಸರ್ಗಿಕ ಉದ್ಯಾನವನಗಳು ಕಾರಣವಾಗಿವೆ.

ಉಪಯುಕ್ತ ಕೀಟಗಳು ಹಾಗೂ ಜೀವಿಗಳು ನೈಸರ್ಗಿಕ ಪ್ರದೇಶಗಳಲ್ಲಿ ಮಾತ್ರ ಬೆಳೆದು ಉಳಿಯಲು ಸಾಧ್ಯ. ಆದರೆ ಅವುಗಳು ಹೊಲ-ತೋಟಗಳಿಗೆ ಬಂದಾಗ ಇಂತಹ ಕೀಟ ನಾಶಕ ಗಳಿಂದಾಗಿ ಸಾಯುತ್ತವೆ. ಇಂತಹ ಸಂದರ್ಭದಲ್ಲಿ ನೈಸರ್ಗಿಕ ಉದ್ಯಾನವನಗಳ ಸಾಕಷ್ಟು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಕೃಷಿ ಕೇಂದ್ರದ ಆವರಣದಲ್ಲಿರುವ ನೈಸರ್ಗಿಕ ಚಿಟ್ಟೆಗಳ ಉದ್ಯಾನವನವನ್ನು ವೀಕ್ಷಿಸಿ ಆ ಮೂಲಕ ಕೀಟಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಕೇಂದ್ರ ವಿಜ್ಞಾನಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಈವರೆಗೆ 331 ಪ್ರಭೇದಗಳ ಚಿಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 98 ಪ್ರಭೇದಗಳ ಚಿಟ್ಟೆಗಳು ಬ್ರಹ್ಮಾವರ ವಿಜ್ಞಾನ ಕೇಂದ್ರದ ಆವರಣದಲ್ಲಿರುವ ಚಿಟ್ಟೆಗಳ ಉದ್ಯಾನವನದಲ್ಲಿ ಕಂಡುಬಂದಿವೆ.

ಸದರ್ನ್ ಬರ್ಡ್‌ವಿಂಗ್, ಕಮ್ಯಾಂಡರ್, ರೆಡ್ ಹೆಲೆನ್, ಬ್ಲೂ ಮಾರ್ಮೋನ್, ರುಸ್ಟಿಕ್, ಗ್ರೇಟ್ ಆರೆಂಜ್ ಟಿಪ್, ಪಿಕಾಕ್ ಪ್ಯಾನ್ಸಿ, ಗ್ರೇ ಫ್ಯಾನ್ಸಿ, ಕಾಮನ್ ಪಾಮ್ ಫ್ಲೈ, ಬ್ಲೂ ಫ್ಯಾನ್ಸಿ, ಕಾಮನ್ ರೋಸ್, ಕಾಮನ್ ಬ್ಯಾರನ್, ಪ್ಲೈನ್ ಟೈಗರ್, ಕಾಮನ್ ಬ್ಯೂ ಬಾಟಲ್, ಕಾಮನ್ ಕ್ರೋ, ಬ್ಲೂ ಟೈಗರ್ ಹೀಗೆ ಹಲವು ಪ್ರಭೇದಗಳ ಚಿಟ್ಟೆಗಳು ಇಲ್ಲಿ ಕಾಣಸಿಗುತ್ತಿವೆ.

‘ಉದ್ಯಾನವನದಲ್ಲಿ ಇಲ್ಲಿಯವರೆಗೆ ಒಟ್ಟು 98 ತರಹದ ಆಕರ್ಷಿಣೀಯ ಚಿಟ್ಟೆಗಳ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಕಾಡಲ್ಲಿ ನೂರಾರು ತರಹದ ಚಿಟ್ಟೆಗಳ ಹಾರಾಟವನ್ನು ವೀಕ್ಷಿಸುವ ಅವಕಾಶದ ಮೂಲಕ ಜನಸಾಮಾನ್ಯರಿಗೆ ಚಿಟ್ಟೆಗಳ ಮಹತ್ವದ ಬಗ್ಗೆ ಅರಿವು ಮೂಡಿಸಲು ಹಾಗೂ ಅಧ್ಯಯನಕ್ಕೆ ಅನುವು ಮಾಡಿಕೊಡಲು ಬ್ರಹ್ಮಾವರದ ಕೃಷಿ ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಬಿ. ತಿಳಿಸಿದ್ದಾರೆ.

share
ನಝೀರ್ ಪೊಲ್ಯ
ನಝೀರ್ ಪೊಲ್ಯ
Next Story
X