Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಿಕೆಶಿಗೆ ಸಂಪುಟ ವಿಸ್ತರಣೆ ತಂದ ಸಂಕಷ್ಟ

ಡಿಕೆಶಿಗೆ ಸಂಪುಟ ವಿಸ್ತರಣೆ ತಂದ ಸಂಕಷ್ಟ

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ6 Aug 2026 10:03 AM IST
share
ಡಿಕೆಶಿಗೆ ಸಂಪುಟ ವಿಸ್ತರಣೆ ತಂದ ಸಂಕಷ್ಟ

ಕಾಂಗ್ರೆಸ್ ನಾಯಕರು ಎರಡು ರೀತಿ ಆಲೋಚಿಸಬಹುದಿತ್ತು. ಒಂದು, ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವರಾಗಿದ್ದವರ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚಿ ದಕ್ಷರನ್ನು ನೇಮಿಸಬಹುದಿತ್ತು. ಇನ್ನೊಂದು, ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನಡುವೆ ಅಧಿಕಾರ ಹಂಚಿಕೆ ಆದಂತೆ ಸಚಿವರ ವಿಷಯದಲ್ಲೂ ಮಾಡಬಹುದಿತ್ತು. ಸಂಪುಟಕ್ಕೆ ಸಂಪೂರ್ಣ ಹೊಸಬರನ್ನೇ ಪರಿಗಣಿಸಬಹುದಿತ್ತು. ಹೀಗೆ ಮಾಡಿದ್ದರೆ ಭಿನ್ನಮತಕ್ಕೆ ಅವಕಾಶ ಇರುತ್ತಿರಲಿಲ್ಲ.

ಇದು ಯಾರ ಪಟ್ಟಿ; ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದೋ; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೋ; ಎಐಸಿಸಿ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆ ಅವರದ್ದೋ; ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರದ್ದೋ ಅಥವಾ ಕಾಂಗ್ರೆಸ್ ಹೈಕಮಾಂಡ್ ನಾಯಕರದ್ದೋ ಎಂದು ದಿಲ್ಲಿಯಿಂದ ಹಾರಿ ಬಂದ ಸಚಿವರ ಪಟ್ಟಿ ಕುರಿತು ಮೂರು ದಿನಗಳಿಂದ ವಿಧಾನಸೌಧದ ಮೊಗಸಾಲೆ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ. ಮಾಧ್ಯಮಗಳು ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡಿವೆ.

ಎರಡು ತಿಂಗಳು ಅಳೆದು ತೂಗಿ ಡಿಕೆಶಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಖಾಲಿ ಉಳಿದಿದ್ದ ಒಟ್ಟು 20ರಲ್ಲಿ 19 ಸ್ಥಾನಗಳನ್ನು ತುಂಬಲಾಗಿದೆ. ಒಂದು ಸ್ಥಾನ ಹಾಗೇ ಉಳಿಸಿಕೊಳ್ಳಲಾಗಿದೆ. ಸಂಪುಟವೇನೋ ವಿಸ್ತರಣೆ ಆಯಿತು. ಆದರೆ, ಇದು ಮುಖ್ಯಮಂತ್ರಿ ನಿದ್ದೆ ಕೆಡಿಸಿದೆ. ಸಚಿವ ಸ್ಥಾನದ ‘ಲಾಟರಿ’ ಬಂದವರು ಕ್ಷೇತ್ರಗಳ ಹಾದಿ ಹಿಡಿದು ಬೆಂಬಲಿಗರ ಜತೆಗೂಡಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸಚಿವ ಸ್ಥಾನ ಸಿಗಬಹುದೆಂದು ನಿರೀಕ್ಷೆಯಲ್ಲಿದ್ದವರು ಅಸಮಾಧಾನಗೊಂಡು ಭಿನ್ನಮತದ ದಾರಿ ಹಿಡಿದಿದ್ದಾರೆ. ಕೆಲವು ಅತೃಪ್ತರು ಶಾಸಕ ಸ್ಥಾನಕ್ಕೇ ರಾಜೀನಾಮೆ ಕೊಡುವ ಮಾತಾಡುತ್ತಿದ್ದಾರೆ. ಭಿನ್ನಮತೀಯರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ.

ಸಚಿವ ಸ್ಥಾನ ಸಿಕ್ಕವರ ಸಂಭ್ರಮ; ಸಿಗದಿದ್ದವರ ಸಂಕಟ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೆ, ಮನೆ ಬಾಗಿಲಿಗೆ ಬಂದಿದ್ದ ಅದೃಷ್ಟ, ಲೋಕಭವನ ಸೇರುವಷ್ಟರಲ್ಲಿ ತಪ್ಪಿಹೋದವರ ಕಥೆ ಏನಾಗಿರಬಹುದು? ಅವರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಪಾಪ, ವಿಧಾನ ಪರಿಷತ್ ಸದಸ್ಯೆ ಚಿಕ್ಕಮಗಳೂರಿನ ಗಾಯತ್ರಿ ಶಾಂತೇಗೌಡ ಅವರಿಗೆ ‘ಬಯಸದೇ ಬಂದ ಭಾಗ್ಯ’ ಕೈಕೊಟ್ಟಿದೆ. ಯಾರಿಗೋ ಸಚಿವ ಸ್ಥಾನ ಸಿಗಲಿಲ್ಲವೆಂದು ಇನ್ಯಾರಿಗೋ ಅವಕಾಶ ತಪ್ಪಿಸಲಾಗಿದೆ. ಇದು ಸರಿಯಲ್ಲ. ಸಂಪುಟ ವಿಸ್ತರಣೆಯಲ್ಲಿ ಅವರೊಬ್ಬರಿಗೇ ಅವಕಾಶ ತಪ್ಪಿಲ್ಲ. ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬ ಗಾದೆಯಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವಿಧಾನಸಭಾ ಕ್ಷೇತ್ರದ ಸದಸ್ಯ ಮಂಕಾಳ ವೈದ್ಯ ಅವರಿಗೂ ಸಚಿವ ಹುದ್ದೆ ತಪ್ಪಿದೆ. ಮೊದಲ ಪಟ್ಟಿಯಲ್ಲಿ ವೈದ್ಯ ಅವರ ಹೆಸರಿತ್ತು. ಆನಂತರ ಹೊರಬಿದ್ದ ಪಟ್ಟಿಯಲ್ಲಿ ಅವರ ಹೆಸರೇ ಮಾಯ. ಆ ಜಾಗದಲ್ಲಿ ದಾವಣಗೆರೆಯ ಎಸ್.ಎಸ್. ಮಲ್ಲಿಕಾರ್ಜುನ ಹೆಸರು ನುಸುಳಿತು. ಗಾಯತ್ರಿ ಅವರ ಬದಲಿಗೆ ಬೇರೆಯವರ ನೇಮಕ ಆಗಿಲ್ಲ. ಸಚಿವ ಸ್ಥಾನದಿಂದ ವಂಚಿತರಾದ ಇಬ್ಬರೂ ಪ್ರಬಲ ಜಾತಿಗೆ ಸೇರಿದವರಲ್ಲ. ಇತರ ಹಿಂದುಳಿದ ಜಾತಿ(ಒಬಿಸಿ)ಯವರು. ಗಾಯತ್ರಿ ಕುರುಬರು. ವೈದ್ಯ ಮೊಗವೀರ. ಹೀಗಾಗಿ, ಅವರಿಬ್ಬರ ಪರವಾಗಿ ಯಾರೂ ದನಿ ಎತ್ತಲಿಲ್ಲ. ಗದ್ದಲ-ಗಲಾಟೆ ಮಾಡಲಿಲ್ಲ. ಪ್ರತಿಭಟನೆಗೆ ಇಳಿಯಲಿಲ್ಲ. ‘ಒಕ್ಕಲಿಗ ಇಲ್ಲವೇ ಲಿಂಗಾಯತ ಶಾಸಕರಿಗೆ ಹೀಗಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು’ ಎಂದು ಸುಲಭವಾಗಿ ಊಹಿಸಬಹುದು. ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯ ಆಗಿರುವುದು ಇದೇ ಮೊದಲಲ್ಲ. ಹಿಂದಿನಿಂದ ನಡೆದು ಬಂದಿದೆ. ಆ ಸಮುದಾಯಗಳು ಸಹಿಸಿಕೊಂಡು ಸುಮ್ಮನಾಗಿವೆ. ಅವರಿಗೆ ಅಸಹಾಯಕತೆ ಬಿಟ್ಟರೆ ಬೇರೆ ಆಯ್ಕೆ ಏನಿದೆ?

ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಟಿಕೆಟ್ ಕೇಳಿದ್ದರು. ಅವರನ್ನು ನಿರ್ಲಕ್ಷಿಸಿ ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಸಿದ್ಧಾರ್ಥ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿತು. ದಾವಣಗೆರೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ. ಕಾಂಗ್ರೆಸ್ ಟಿಕೆಟ್ ಅವರಿಗೇ ಕೊಡಬೇಕಿತ್ತು. ಆಗ ರಾಜ್ಯ ಕಾಂಗ್ರೆಸ್‌ನ ದೊಡ್ಡ ದೊಡ್ಡ ನಾಯಕರು ಮುಸ್ಲಿಮರ ಪರ ಮಾತಾಡಲಿಲ್ಲ. ಮಾತೆತ್ತಿದರೆ ‘ಅಹಿಂದ’ಎನ್ನುವ ಸಿದ್ದರಾಮಯ್ಯ ಅವರೂ ಏಕೋ ಮೌನವಾದರು. ಬಂಡಾಯದ ಸುಳಿವು ನೀಡಿದ್ದ ಸಾದಿಕ್ ಅವರ ಮನವೊಲಿಸಿದ್ದು ಬೇರೆ ಮಾತು. ಸಮರ್ಥ್ ಗೆಲುವಿಗೆ ಕೈ ನಾಯಕರು ಎಷ್ಟೊಂದು ಕಷ್ಟಪಡಬೇಕಾಯಿತು ಎಂಬುದನ್ನು ಫಲಿತಾಂಶ ತೋರಿಸಿತು. ಆಗ, ಪ್ರಬಲ ಜಾತಿಯವರನ್ನು ಸಂತೃಪ್ತಿಗೊಳಿಸಲು ಅಲ್ಪಸಂಖ್ಯಾತರ ಹಿತಾಸಕ್ತಿ ‘ಬಲಿ’ ಕೊಡಲಾಯಿತು. ಈಗ ಹಿಂದುಳಿದ ವರ್ಗದವರ ಆಶೋತ್ತರಗಳನ್ನು ಛಿದ್ರ ಮಾಡಲಾಗಿದೆ. ಕಡೇ ಗಳಿಗೆಯಲ್ಲಿ ಹೈಕಮಾಂಡ್ ನಾಯಕರು ಶಾಮನೂರು ಕುಟುಂಬದ ಒತ್ತಡಕ್ಕೆ ತಲೆ ಬಾಗಿದ್ದಾರೆ. ಕಾಂಗ್ರೆಸ್ ನಾಯಕರ ಎಡಬಿಡಂಗಿ ತೀರ್ಮಾನಕ್ಕೆ ವೈದ್ಯ ಬೆಲೆ ತೆತ್ತಿದ್ದಾರೆ.

ಸೋಮವಾರ ಬೆಳಗ್ಗೆಯಿಂದ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುವವರೆಗೆ ಮೂರು ಸಲ ಪಟ್ಟಿ ಬದಲಾಗಿದೆ. ಯಾವುದೇ ಪಕ್ಷದ ಸರಕಾರ ಇದ್ದರೂ ಸಂಪುಟ ರಚನೆ, ವಿಸ್ತರಣೆ ಅಥವಾ ಪುನರ್‌ರಚನೆ ವೇಳೆ ಒತ್ತಡ ಇದ್ದೇ ಇರುತ್ತದೆ. ಎಲ್ಲ ಕಾಲಕ್ಕೂ ಎಲ್ಲರನ್ನೂ ಸಮಾಧಾನಪಡಿಸಲು ಆಗುವುದಿಲ್ಲ. ಆದರೆ, ಸಾಮಾಜಿಕ ನ್ಯಾಯ, ಒಬಿಸಿ ರಾಜಕಾರಣದ ಪರ ಮಾತಾಡುವ ಕಾಂಗ್ರೆಸ್ ಕಡೇ ಗಳಿಗೆಯಲ್ಲಿ ಹಿಂದುಳಿದ ಜಾತಿಗಳ ಇಬ್ಬರನ್ನು ಬದಲಾವಣೆ ಮಾಡಿ, ಪ್ರಬಲ ಜಾತಿಯ ಮಲ್ಲಿಕಾರ್ಜುನ್ ಅವರ ಸಂಪುಟ ಸೇರ್ಪಡೆಗೆ ಅವಕಾಶ ಮಾಡಿದ್ದನ್ನು ಯಾರೂ ಒಪ್ಪುವುದಿಲ್ಲ.

ಕೆಲವೇ ಕುಟುಂಬಗಳ ತಾಳಕ್ಕೆ ಕಾಂಗ್ರೆಸ್ ಕುಣಿಯುತ್ತಿದೆ. ಶಾಮನೂರು ಕುಟುಂಬದ ವಿಷಯದಲ್ಲಿ ಇದು ಮತ್ತೆ ಸಾಬೀತಾಗಿದೆ. ಅಪ್ಪ ಮಂತ್ರಿ, ಅಮ್ಮ ಲೋಕಸಭೆ ಸದಸ್ಯೆ, ಮಗ ಶಾಸಕ. ಒಂದು ಸಂಕೇತವಾಗಷ್ಟೇ ಈ ವಿಷಯ ಪ್ರಸ್ತಾಪಿಸಲಾಗಿದೆ. ಕರ್ನಾಟಕವಷ್ಟೇ ಅಲ್ಲ, ದೇಶಾದ್ಯಂತ ಇಂಥ ಹತ್ತಾರು ಕುಟುಂಬಗಳು ಸಿಗುತ್ತವೆ. ‘ಎಲ್ಲ ಅವಕಾಶಗಳು, ಸ್ಥಾನಮಾನಗಳು ಕೆಲವೇ ಕುಟುಂಬಗಳ ಪಾಲಾಗುವುದಾದರೆ ಉಳಿದವರು ಪಕ್ಷಕ್ಕೆ ಯಾಕೆ ದುಡಿಯಬೇಕು’ ಎಂಬ ಪ್ರಶ್ನೆ ಅನೇಕ ನಾಯಕರು ಮತ್ತು ಕಾರ್ಯಕರ್ತರನ್ನು ಕಾಡುತ್ತಿದೆ. ಹೊಸ ನಾಯಕತ್ವ, ಯುವ ನಾಯಕತ್ವದ ಬಗ್ಗೆ ಮಾತಾಡುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.

ಹೈಕಮಾಂಡ್ ನಾಯಕರು ‘ಬೆಟ್ಟ ಅಗೆದು ಇಲಿ ಹಿಡಿದಿದ್ದಾರೆ’. ಎಂಟು ಮಂದಿ ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಕೊಟ್ಟಿರುವುದನ್ನು ಬಿಟ್ಟರೆ ಹೇಳಿಕೊಳ್ಳುವಂತಹದ್ದು ಏನೂ ಇಲ್ಲ. ಶಿವಕುಮಾರ್, ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಳಗೊಂಡಂತೆ ಎಲ್ಲರನ್ನೂ ಸಂತೃಪ್ತಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಮುಖ್ಯಮಂತ್ರಿ ಶಿವಕುಮಾರ್ ಅವರೇ ಒಕ್ಕಲಿಗರು. ಹೀಗಿದ್ದಾಗ, ಅದೇ ಸಮುದಾಯದ ಇನ್ನೂ ಐವರಿಗೆ ಸಚಿವ ಸ್ಥಾನ ಕೊಡುವ ಅಗತ್ಯವಿತ್ತೇ? ವೀರಶೈವರಿಗೆ ಅಷ್ಟೊಂದು ಸ್ಥಾನ ಬೇಕಿತ್ತೆ? ಸಿದ್ದರಾಮಯ್ಯ ಸಂಪುಟದಲ್ಲಿ ಭೈರತಿ ಸುರೇಶ್ ಅವರೊಬ್ಬರನ್ನು ಬಿಟ್ಟರೆ ಮತ್ಯಾರೂ ಕುರುಬ ಜಾತಿಯವರು ಇರಲಿಲ್ಲ. ‘ನಾನೇ ಕುರುಬ ಸಮುದಾಯಕ್ಕೆ ಸೇರಿರುವಾಗ ಹೆಚ್ಚಿನವರು ಏಕೆ ಬೇಕು?’ ಎಂದು ಅವರು ಹೇಳಿದ್ದರಂತೆ.

ಡಿಕೆಶಿ ಸಂಪುಟದಲ್ಲಿ ಹಿಂದುಳಿದ ಜಾತಿಗಳಿಗೂ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಕುರುಬರು ಇಬ್ಬರಿದ್ದಾರೆ. ಈಡಿಗರು ಒಬ್ಬರಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರೇ ಈಡಿಗರು. ಹೀಗಿದ್ದಾಗ ಹೆಚ್ಚಿನವರಿಗೆ ಕೊಡುವ ಅಗತ್ಯವಿಲ್ಲ. ಏಕೆಂದರೆ, ಅಧ್ಯಕ್ಷ ಸ್ಥಾನ ಅತ್ಯಂತ ಪ್ರಬಲವಾದದ್ದು. ಉಳಿದಂತೆ ಉಪ್ಪಾರರು, ಮರಾಠರು, ರಜಪೂತರು ತಲಾ ಒಬ್ಬರಿದ್ದಾರೆ. ‘ಹಿಂದುಳಿದ ಜಾತಿಗಳಿಗೆ ಅಗತ್ಯ ಪ್ರಾತಿನಿಧ್ಯ ಕೊಡಲಾಗಿದೆ’ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರೂ, ದನಿಯೇ ಇಲ್ಲದ ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಾಣುವಂತಿದೆ. ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತು ಉಲ್ಲೇಖ ಮಾಡದಿರುವುದೇ ಲೇಸು. ತೋರಿಸುವುದಕ್ಕೆ ಒಬ್ಬ ಮಹಿಳೆಯೂ ಇಲ್ಲ. ಕನಿಷ್ಠ ಮೂವರಿಗಾದರೂ ಸ್ಥಾನ ಸಿಗಬೇಕಿತ್ತು. ‘ತಾಕತ್ತಿದ್ದವರು ಬದುಕುತ್ತಾರೆ’ ಎಂಬ ಡಾರ್ವಿನ್ ಸಿದ್ಧಾಂತ ಕರ್ನಾಟಕ ಅದರಲ್ಲೂ ಕಾಂಗ್ರೆಸ್ ರಾಜಕಾರಣದ ಸಂದರ್ಭದಲ್ಲಿ ನಿಜವಾಗಿದೆ.

ಸಂಪುಟ ರಚನೆ, ವಿಸ್ತರಣೆ, ಪುನರ್‌ರಚನೆ ಮುಖ್ಯಮಂತ್ರಿ ಪರಮಾಧಿಕಾರ. ಸಂವಿಧಾನದ ಕಲಂ 164 ಈ ಬಗ್ಗೆ ಹೇಳುತ್ತದೆ. ಮುಖ್ಯಮಂತ್ರಿ ಸಲಹೆ ಮೇಲೆ ರಾಜ್ಯಪಾಲರು ಸಚಿವರನ್ನು ನೇಮಿಸುತ್ತಾರೆ. ಇದು ಸಂವಿಧಾನಕ್ಕಷ್ಟೇ ಸೀಮಿತ. ಎಲ್ಲ ಕಾಲಕ್ಕೂ ಎಲ್ಲ ಪಕ್ಷಗಳಿಗೂ ಇದು ಅನ್ವಯ. ರಾಷ್ಟ್ರೀಯ ಪಕ್ಷಗಳಲ್ಲಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರುವುದೇ ಇಲ್ಲ. ಈಗಲೂ ಶಿವಕುಮಾರ್ ಹೇಳಿದ್ದು ಎಲ್ಲವೂ ನಡೆದಿಲ್ಲ. ಇಡೀ ಸಂಪುಟ ಶಿವಕುಮಾರ್ ಅವರೊಬ್ಬರ ಆಯ್ಕೆ ಅಲ್ಲ.

ಸಂಪುಟ ವಿಸ್ತರಣೆ ಬಳಿಕ ಭಿನ್ನಮತ ಭುಗಿಲೆದ್ದಿದೆ. ಎರಡು ಡಝನ್‌ಗೂ ಹೆಚ್ಚಿನವರು ಸಚಿವ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡಿದ್ದಾರೆ. ರಹಸ್ಯ ಸಭೆ, ಚರ್ಚೆಗಳು ನಡೆದಿವೆ. ಅದು ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು. 2023ರ ವಿಧಾನಸಭೆ ಚುನಾವಣೆಯಲ್ಲಿ 136 ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಮೂವರು ಸಹ ಸದಸ್ಯರು. ವಿಧಾನಸಭೆಯ ಒಟ್ಟು ಸಂಖ್ಯೆಯಲ್ಲಿ ಶೇ. 15ರಷ್ಟು ಸದಸ್ಯರನ್ನು ಮಾತ್ರ ಮಂತ್ರಿ ಮಾಡಲು ಸಾಧ್ಯ. ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲು ಆಗುವುದಿಲ್ಲ. ಅದಕ್ಕೆ ಏನಾದರೊಂದು ಮಾನದಂಡ ನಿಗದಿಪಡಿಸಿದ್ದರೆ ಯಾರೂ ಅಸಮಾಧಾನ ಹೊರ ಹಾಕುತ್ತಿರಲಿಲ್ಲ.

ಕಾಂಗ್ರೆಸ್ ನಾಯಕರು ಎರಡು ರೀತಿ ಆಲೋಚಿಸಬಹುದಿತ್ತು. ಒಂದು, ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವರಾಗಿದ್ದವರ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚಿ ದಕ್ಷರನ್ನು ನೇಮಿಸಬಹುದಿತ್ತು. ಇನ್ನೊಂದು, ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ನಡುವೆ ಅಧಿಕಾರ ಹಂಚಿಕೆ ಆದಂತೆ ಸಚಿವರ ವಿಷಯದಲ್ಲೂ ಮಾಡಬಹುದಿತ್ತು. ಸಂಪುಟಕ್ಕೆ ಸಂಪೂರ್ಣ ಹೊಸಬರನ್ನೇ ಪರಿಗಣಿಸಬಹುದಿತ್ತು. ಹೀಗೆ ಮಾಡಿದ್ದರೆ ಭಿನ್ನಮತಕ್ಕೆ ಅವಕಾಶ ಇರುತ್ತಿರಲಿಲ್ಲ.

ಡಿಕೆಶಿ ಸಂಪುಟ ಅತ್ಯುತ್ತಮ ಎಂದು ಹೇಳಲಾಗದು. ಕಾಂಗ್ರೆಸ್‌ನಲ್ಲಿ ಸಮರ್ಥರಿಗೆ ಕೊರತೆಯಿಲ್ಲ. ಮೊದಲ ಕಂತಿನಲ್ಲಿ ಸಮರ್ಥರಿಗೆ ಅವಕಾಶ ಲಭಿಸಿದೆ. ಎರಡನೇ ಹಂತದ ವಿಸ್ತರಣೆಯಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು ದಕ್ಷರಿದ್ದಾರೆ. ವಿಧಾನಸಭೆ ಚುನಾವಣೆಗೆ ಉಳಿದಿರುವುದು ಸರಿಯಾಗಿ ಒಂದೂವರೆ ವರ್ಷ. ಅಷ್ಟರೊಳಗೆ ಮುಖ್ಯಮಂತ್ರಿ ಆಡಳಿತ ಚುರುಕುಗೊಳಿಸಬೇಕು. ಜನರ ಕಣ್ಣಿಗೆ ಕಾಣುವಂಥ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಜನಪರ ಕೆಲಸಗಳನ್ನು ಮುಂದುವರಿಸಬೇಕು.

ಈಗ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ. ಕಾವೇರಿ ನದಿ ನೀರಿನ ವಿವಾದ ಬೇರೆ. ಇನ್ನೊಂದೆಡೆ ಎಸ್‌ಐಆರ್ ಭೂತ. ಲಭ್ಯವಿರುವ ಅಲ್ಪ ಸಮಯವನ್ನು ಪರಿಣಾಮಕಾರಿಯಾಗಿ ಬಳಸುವ ಮೂಲಕ ಪಕ್ಷವನ್ನು ಚುನಾವಣೆಗೆ ಅಣಿಗೊಳಿಸಬೇಕಾದ ದೊಡ್ಡ ಜವಾಬ್ದಾರಿ ಶಿವಕುಮಾರ್ ಮತ್ತು ಹರಿಪ್ರಸಾದ್ ಅವರ ಮೇಲಿದೆ.

Tags

D. K. Shivakumar
share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X